Search
  • Follow NativePlanet
Share
» » ಗುರು ದತ್ತಾತ್ರೇಯನ ಪಾದದ ಗುರುತನ್ನು ನೋಡಲು ಇಲ್ಲಿಗೆ ಟ್ರಕ್ಕಿಂಗ್ ಹೋಗ್ಲೇ ಬೇಕು

ಗುರು ದತ್ತಾತ್ರೇಯನ ಪಾದದ ಗುರುತನ್ನು ನೋಡಲು ಇಲ್ಲಿಗೆ ಟ್ರಕ್ಕಿಂಗ್ ಹೋಗ್ಲೇ ಬೇಕು

ಗುರು ಶಿಖರ ಶೃಂಗವು ಅರಾವಳಿ ಪ್ರಾಂತ್ಯದಲ್ಲಿರುವ ಉನ್ನತ ಶೃಂಗವಾಗಿದೆ. ಮೌಂಟ್ ಅಬುವಿನಿಂದ 15 ಕಿ.ಮೀ ದೂರದಲ್ಲಿರುವ ಈ ಶೃಂಗವು, 1722 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಶೃಂಗವು ಚಾರಣಕ್ಕಾಗಿ ಪ್ರಸಿದ್ಧಿ ಪಡೆದಿದ್ದು, ಪ್ರವಾಸಿಗರು ಇಲ್ಲಿಗೆ ಆ ಕಾರಣವಾಗಿಯೆ ಆಗಮಿಸುತ್ತಿರುತ್ತಾರೆ. ಇದಲ್ಲದೆ ಪ್ರವಾಸಿಗರು ಈ ಬೆಟ್ಟದ ತುದಿಯಿಂದ ಸಂಪೂರ್ಣವಾದ ಅರಾವಳಿ ಪ್ರಾಂತ್ಯದ ಪಕ್ಷಿನೋಟವನ್ನು ಕಾಣಬಹುದಾಗಿದೆ.

ಇತಿಹಾಸದ ಪ್ರಕಾರ

ಇತಿಹಾಸದ ಪ್ರಕಾರ

PC:Raveesh Vyas

ಇತಿಹಾಸದ ಪ್ರಕಾರ, ರಾಜ ಪೃಥ್ವಿರಾಜ್ ಚೌಹಾಣ್ ತನ್ನ ವಧುವನ್ನು ಭೇಟಿ ಮಾಡಲು ಮತ್ತು ಅವಳೊಂದಿಗೆ ತನ್ನ ಮದುವೆಯನ್ನು ಪೂರ್ಣಗೊಳಿಸಲು ಈ ಶಿಖರದ ಉದ್ದಕ್ಕೂ ಪ್ರಯಾಣಿಸುತ್ತಿದ್ದನೆಂದು ನಂಬಲಾಗಿದೆ. ಈ ವಧು ಪ್ರಹಲದಾನ್ಪುರದ ರಾಜಕುಮಾರಿಯಾಗಿದ್ದು, ಇದನ್ನು ಈಗ ಪಾಲನ್ಪುರ್ ಎಂದು ಕರೆಯಲಾಗುತ್ತದೆ.

ಗುರು ಶಿಖರ

ಗುರು ಶಿಖರ

PC: youtube

ಈ ಶಿಖರವು ಗುರು ಶಿಖರ ಅಥವಾ ದತ್ತಾತ್ರೇಯ ಶಿಖರವನ್ನು ನಂತರ 'ಗುರುವಿನ ಬೆಟ್ಟ ಎಂದೂ ' ಎಂದು ಕರೆಯಲಾಗುತ್ತದೆ. ದತ್ತಾತ್ರೇಯ ದೇವಾಲಯವು ಗುರು ಶಿಖರದಲ್ಲಿರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಭಗವಾನ್ ದತ್ತಾತ್ರೇಯನು ವಿಷ್ಣು ಅವತಾರವೆಂದು ನಂಬಲಾಗಿದೆ. ಅತ್ರಿ ಹಾಗೂ ಅನುಸೂಯ ದಂಪತಿಗಳಿಗೆ ಜನಿಸಿದ ಮಗನೇ ದತ್ತಾತ್ರೇಯ. 'ದತ್ತ' ಎಂದರೆ ನೀಡಿದ ಹಾಗೂ ಅತ್ರಿಯ ಮಗನಾದರಿಂದ ದತ್ತಾತ್ರೇಯ ಎಂಬ ಹೆಸರು ಬಂದಿದೆ. ಈತ ದೈವಿಕ ಶಕ್ತಿಯಿಂದ ಹುಟ್ಟಿದನೆಂದು ಹೇಳಲಾಗುತ್ತದೆ.

ಬೆಟ್ಟದಲ್ಲಿದೆ ಗುರುವಿನ ಪಾದ

ಬೆಟ್ಟದಲ್ಲಿದೆ ಗುರುವಿನ ಪಾದ

PC: Andreas Kleemann

ಈ ಪವಿತ್ರ ಸ್ಥಳದಲ್ಲಿಗುರುವು ತನ್ನ ಪಾದವನ್ನು ಇಟ್ಟೊದ್ದಾನೆಂದು ನಂಬಲಾಗಿದೆ. ನೀವು ಇಲ್ಲಿಗೆ ಭೇಟಿ ನೀಡಿದಾಗ, ಈ ಕಲ್ಲಿನ ಗುಹೆಗಳಲ್ಲಿ ಗುರುವಿನ ಹೆಜ್ಜೆಗುರುತುಗಳನ್ನು ನೋಡಬಹುದು. ಸಾವಿರಾರು ವರ್ಷಗಳಿಂದ ಅನೇಕ ಜನರು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ದೇವಾಲಯದ ಪ್ರವೇಶದ್ವಾರದಲ್ಲಿ ಕ್ರಿ.ಶ1411 ಕ್ಕೆ ಸಂಬಂಧಿಸಿದ ಶಾಸನವನ್ನು ಹೊಂದಿರುವ ಮರದ ಚೌಕಟ್ಟಿನ ದೊಡ್ಡ ಗಂಟೆಯನ್ನು ಕಾಣಬಹುದು.

ಇತರ ಪ್ರೇಕ್ಷಣೀಯ ತಾಣಗಳು

ಇತರ ಪ್ರೇಕ್ಷಣೀಯ ತಾಣಗಳು

PC:Pratyk321

ರಘುನಾಥ್‌ಜೀ ದೇವಸ್ಥಾನ ಇಲ್ಲಿ ನೀವು ನೋಡಲೇ ಬೇಕಾದ ಸ್ಥಳವಾಗಿದೆ. ಈ ದೇವಸ್ಥಾನದಲ್ಲಿ ಸ್ವಾಮಿ ರಾಮನಾಥ್ ಅವರ ಕಾಲಸೂಚಿಯನ್ನು ಕಾಣಬಹುದು. ಇವರು ತಮ್ಮ ಕಾಲದಲ್ಲಿನ ಪ್ರಸಿದ್ಧ ಋಷಿಯಾಗಿದ್ದರು. ದತ್ತಾತ್ರೇಯರ ತಾಯಿ ಮಾತಾ ಅನಸೂಯರ ದೇವಸ್ಥಾನ ಕೂಡ ಭಕ್ತರಿಗೆ ಪ್ರಮುಖ ಆಕರ್ಷಣೆಯಾಗಿದೆ. ಭೌಗೋಳಿಕ ಸಂಶೋಧನಾ ಪ್ರಯೋಗಾಲಯವು ನಿರ್ವಹಿಸುತ್ತಿರುವ ಮೌಂಟ್ ಅಬು ವೀಕ್ಷಣಾಲಯವು ದೇವಾಲಯದ ಪಕ್ಕದಲ್ಲಿದೆ. ಈ ವೀಕ್ಷಣಾಲಯವು 1.2m ಅತಿಗೆಂಪು ದೂರದರ್ಶಕವನ್ನು ಮತ್ತು ಹಲವಾರು ಖಗೋಳ ವಿಜ್ಞಾನದ ಪ್ರಯೋಗಗಳನ್ನು ನಡೆಸುತ್ತದೆ.

ಇದನ್ನು ಗಮನದಲ್ಲಿಟ್ಟುಕೊಳ್ಳಿ

ಇದನ್ನು ಗಮನದಲ್ಲಿಟ್ಟುಕೊಳ್ಳಿ

ಗುರು ಶಿಖರಕ್ಕೆ ಸಣ್ಣ ಮಕ್ಕಳನ್ನು ಕರೆದೊಯ್ಯುವಾಗ ಬಹಳ ಜಾಗರೂಕರಾಗಿರಬೇಕು. ಮಣ್ಣಿನ ರಸ್ತೆ ಮುಗಿದ ಮೇಲೆ,ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಇದು ಬಹಳ ಕಠಿಣವಾಗಿದ್ದು, ಜಾರುವ ಸಾಧ್ಯತೆ ಇದೆ. ಹಾಗಾಗಿ ನೀವು ಮಕ್ಕಳ ಬಗ್ಗೆ ಹೆಚ್ಚು ಜಾಗರೂಕರಾಗಿಬೇಕು.

ಇನ್ನು ಟ್ರಕ್ಕಿಂಗ್‌ಗೆ ಸೂಕ್ತವಾದ ಪಾದರಕ್ಷೆಯನ್ನು ಹಾಕುವುದು ಉತ್ತಮ. ಇಲ್ಲವಾದಲ್ಲಿ ಜಾರುವ ಸಾಧ್ಯತೆಗಳಿರುತ್ತವೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube

ಮೌಂಟ್ ಅಬುವಿನಿಂದ 15 ಕಿಲೋಮೀಟರ್ ದೂರದಲ್ಲಿರುವ ಗುರು ಶಿಖರವನ್ನು ಕ್ಯಾಬ್ ಮೂಲಕ ಸುಲಭವಾಗಿ ತಲುಪಬಹುದು. ಇಲ್ಲಿ ಸಾಕಷ್ಟು ಬಾಡಿಗೆ ದ್ವಿಚಕ್ರ ವಾಹನಗಳು ಲಭ್ಯವಿದೆ. ದಿಲ್ವಾರಾ-ಅಚಲ್‌ಘಢ ರಸ್ತೆಯ ಮೂಲಕ ಪರ್ವತದ ಬುಡಕ್ಕೆ ತಲುಪಬಹುದು. ಇಲ್ಲಿಂದ, ಶಿಖರವನ್ನು ತಲುಪಲು ಸುಮಾರು 300 ಮೆಟ್ಟಿಲುಗಳನ್ನು ಏರುವ ಅಗತ್ಯವಿದೆ. ಇದು ಕಡಿದಾದ ಆರೋಹಣವಾಗಿದ್ದರೂ ಸಹ, ಮೆಟ್ಟಿಲುಗಳು ಒಳ್ಳೆಯ ಸ್ಥಿತಿಯಲ್ಲಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X