Search
  • Follow NativePlanet
Share
» »ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಮಾನಸಿಕ ರೋಗ ಗುಣವಾಗುತ್ತಂತೆ !

ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಮಾನಸಿಕ ರೋಗ ಗುಣವಾಗುತ್ತಂತೆ !

ಗುಣಶೀಲಂ ವಿಷ್ಣು ದೇವಾಲಯದ ಬಗ್ಗೆ ಕೇಳಿದ್ದೀರಾ? ಈ ದೇವಸ್ಥಾನದ ವಿಶೇಷತೆ ಎಂದರೆ ಇದು ಮಾನಸಿಕ ಕಾಯಿಲೆಯನ್ನು ಗುಣಪಡಿಸುತ್ತದಂತೆ. ಹಾಗಾಗಿ ಸಾಕಷ್ಟು ಜನರು ಇಲ್ಲಿಗೆ ಬರುತ್ತಾರೆ. ಹಾಗಾಗಿ ಈ ವಿಶಿಷ್ಠ ದೇವಸ್ಥಾನ ಎಲ್ಲಿದೆ? ಇದರ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಎಲ್ಲಿದೆ ಈ ದೇವಾಲಯ?

ಎಲ್ಲಿದೆ ಈ ದೇವಾಲಯ?

PC: Ssriram mt

ಗುಣಶೀಲಂ ವಿಷ್ಣು ದೇವಾಲಯವು ದಕ್ಷಿಣ ಭಾರತದ ತಮಿಳುನಾಡಿನ ತಿರುಚ್ಚಿಯಿಂದ 20 ಕಿ.ಮೀ ದೂರದಲ್ಲಿರುವ ವಿಷ್ಣು ದೇವಸ್ಥಾನಕ್ಕೆ ಅರ್ಪಿತವಾದ ಒಂದು ಹಿಂದೂ ದೇವಾಲಯವಾಗಿದೆ. ಇದು ಕೊಲ್ಲಿಡಮ್ ನದಿಯ ದಡದಲ್ಲಿದೆ.

ತುಮಕೂರಿನ ದೇವರಾಯನ ಬೆಟ್ಟದಲ್ಲಿರುವ ನರಸಿಂಹನ ದರ್ಶನ ಪಡೆದಿದ್ದೀರಾ?<br /> ತುಮಕೂರಿನ ದೇವರಾಯನ ಬೆಟ್ಟದಲ್ಲಿರುವ ನರಸಿಂಹನ ದರ್ಶನ ಪಡೆದಿದ್ದೀರಾ?

ಪವಿತ್ರ ನೀರು

ಪವಿತ್ರ ನೀರು

PC: Ssriram mt
ಮುಖ್ಯ ದೇವಾಲಯ ಪುರೋಹಿತರು ನಿರ್ದಿಷ್ಟ ಸಮಯದಲ್ಲಿ ಪವಿತ್ರ ನೀರನ್ನು ಮುಖದ ಮೇಲೆ ಚಿಮುಕಿಸುತ್ತಾರೆ. ಅದಕ್ಕಾಗಿ ಸಾಕಷ್ಟು ಜನ ಭಕ್ತರು ದೇವಸ್ಥಾನದ ಒಳಗೆ ಸರದಿಯಲ್ಲಿ ನಿಂತಿರುತ್ತಾರೆ. ತಮ್ಮ ಕುಟುಂಬದ ಜೊತೆಗೆ ಸರದಿಯಲ್ಲಿ ನಿಂತು ಪವಿತ್ರ ನೀರನ್ನು ತಮ್ಮ ಮುಖಕ್ಕೂ ಚಿಮುಕಿಸಿಕೊಳ್ಳುತ್ತಾರೆ.

ಶಿಲ್ಪಕಲಾಕೃತಿ

ಶಿಲ್ಪಕಲಾಕೃತಿ

PC:Thiagupillai

ಕೇಂದ್ರ ದೇವಾಲಯದ ಮೇಲಿರುವ ಶಂಕುವಿನಾಕಾರದ ವಿಮಾನದಲ್ಲಿ 3 ಶ್ರೇಣಿಗಳಿರುವುದರಿಂದ ಇದನ್ನು ಟ್ರಿನಿತ್ರಾ ವಿಮಾನಾ ಎಂದು ಕರೆಯಲಾಗುತ್ತದೆ. ವಿಮಾನದ ಮೇಲೆ ಗಾರೆ ಶಿಲ್ಪಗಳು ಹದ್ದು ವಾಹನ ಗರುಡದಲ್ಲಿ ನರಸಿಂಹವನ್ನು ಚಿತ್ರಿಸಲಾಗಿದೆ. ಶಂಖ ಮತ್ತು ಚಕ್ರದೊಂದಿಗೆ ವಿಷ್ಣುವಿನ ಒಂದು ಚಿತ್ರಣವನ್ನು ಚಿತ್ರಿಸಲಾಗಿದೆ.

ಹಂಪಿಯಲ್ಲಿರುವ ಈ ಬಡವಿಲಿಂಗ ದೇವಸ್ಥಾನ ನೋಡಿದ್ದೀರಾ?ಹಂಪಿಯಲ್ಲಿರುವ ಈ ಬಡವಿಲಿಂಗ ದೇವಸ್ಥಾನ ನೋಡಿದ್ದೀರಾ?

ಪ್ರಸನ್ನ ವೆಂಕಟಾಚಲಪತಿ

ಪ್ರಸನ್ನ ವೆಂಕಟಾಚಲಪತಿ

PC: Ssriram mt

ದೇವಸ್ಥಾನದ ಒಳಗೆ ಇರುವ ದೇವತೆಯ ವಿಗ್ರಹವೆಂದರೆ ಪ್ರಸನ್ನ ವೆಂಕಟಾಚಲಪತಿ. ಆದ್ದರಿಂದ ಈ ದೇವಾಲಯವನ್ನು ಪ್ರಸನ್ನ ವೆಂಕಟಾಚಲಪತಿ ದೇವಸ್ಥಾನ ಎಂದೂ ಕರೆಯುತ್ತಾರೆ. ಇಲ್ಲಿ ಭಗವಂತನು ನಿಂತಿರುವ ಭಂಗಿಯಲ್ಲಿದ್ದಾನೆ. ನಾಲ್ಕು ಕೈಗಳಿವೆ. ಬಲಗೈ ಅಭಯ ಮುದ್ರೆಯನ್ನು ತೋರಿಸುತ್ತಿದೆ. ಇನ್ನೊಂದು ಕೈಯಲ್ಲಿ ಗದೆ ಇದೆ. ಎಡಗೈ ಕೈಗಳು ಶಂಖ ಮತ್ತು ಚಕ್ರವಿದೆ.

ಯಾವೆಲ್ಲಾ ಗುಡಿಗಳಿವೆ

ಯಾವೆಲ್ಲಾ ಗುಡಿಗಳಿವೆ

PC:Ssriram mt

ಗರ್ಭಗುಡಿ ಸುತ್ತ ನರಸಿಂಹ, ನವನೀತಾ ಕೃಷ್ಣ, ವರಾಹ, ಶ್ರೀದೇವಿ ಮತ್ತು ಭೂದೇವಿಯಂತಹ ವಿವಿಧ ದೇವತೆಗಳ ವಿಗ್ರಹಗಳಿವೆ.ಇವುಗಳು ಹಲವು ದಶಕಗಳ ಹಿಂದಿನದ್ದಾಗಿವೆ.

ಇಲ್ಲಿ ಜಾತ್ರೆ ದಿನ ಬೆತ್ತಲಾಗಿ ಹೋದ್ರೇನೆ ಉತ್ಸವ ಸಂಪೂರ್ಣವಾಗೋದಂತೆ ! ಇಲ್ಲಿ ಜಾತ್ರೆ ದಿನ ಬೆತ್ತಲಾಗಿ ಹೋದ್ರೇನೆ ಉತ್ಸವ ಸಂಪೂರ್ಣವಾಗೋದಂತೆ !

ಮಾನಸಿಕ ರೋಗ ಗುಣವಾಗುವುದು

ಮಾನಸಿಕ ರೋಗ ಗುಣವಾಗುವುದು

PC: Ssriram mt

ಮಾನಸಿಕ ರೋಗ ಇರುವವರನ್ನು ಅವರ ಸಂಬಂಧಿಕರು ಈ ದೇವಸ್ಥಾನಕ್ಕೆ ತಂದು 48 ದಿನಗಳ ಕಾಲ ದೇವಸ್ಥಾನದಲ್ಲೇ ಬಿಡುತ್ತಾರೆ. ಅವರು ದೈನಂದಿನ ಪ್ರಾರ್ಥನೆ ಮತ್ತು ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ. 48 ದಿನಗಳ ಕೊನೆಯಲ್ಲಿ ಅವರ ರೋಗವು ಪ್ರಸನ್ನ ವೆಂಕಟಚಲಪತಿಯವರ ಅನುಗ್ರಹದಿಂದ ಮತ್ತು ಆಶೀರ್ವಾದದಿಂದ ಗುಣಮುಖವಾಗುತ್ತದೆ ಎಂದು ನಂಬಲಾಗುತ್ತದೆ.

ದೈನಂದಿನ ಪೂಜೆಗಳು

ದೈನಂದಿನ ಪೂಜೆಗಳು

ಪ್ರತಿದಿನ ಬೆಳಗ್ಗೆ6.30 ರಿಂದ ರಾತ್ರಿ 8.30 ರವರೆಗೆ ವಿವಿಧ ಸಮಯಗಳಲ್ಲಿ ಆರು ದೈನಂದಿನ ಪೂಜೆಗಳು ನಡೆಯುತ್ತವೆ. ಗುಣಶೀಲಂ ದೇವಾಲಯವು ಮೂರು ವರ್ಷದ ಉತ್ಸವಗಳನ್ನು ಆಚರಿಸುತ್ತದೆ. ವಾರ್ಷಿಕ ಬ್ರಹ್ಮೋತ್ಸವಂ, ಇಲ್ಲಿ ಪ್ರಮುಖ ಉತ್ಸವವಾಗಿದೆ. ಇದು ಸೆಪ್ಟೆಂಬರ್ ನಿಂದ ಅಕ್ಟೋಬರ್ ತಿಂಗಳಿನಲ್ಲಿ ಆಚರಿಸಲಾಗುವ ಹನ್ನೊಂದು ದಿನಗಳ ಉತ್ಸವವಾಗಿದೆ. ಈ ಸಮಯದಲ್ಲಿ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X