Search
  • Follow NativePlanet
Share
» »ಜಿ ಆರ್ ಎಸ್ ಎಲ್ಲೋ ಮಜಾ ಅಲ್ಲೆ!

ಜಿ ಆರ್ ಎಸ್ ಎಲ್ಲೋ ಮಜಾ ಅಲ್ಲೆ!

By Vijay

ಇದು ನಾವು ಹೇಳುತ್ತಿರುವುದಲ್ಲ, ಜಿ ಆರ್ ಎಸ್ ಮನರಂಜನಾ ಉದ್ಯಾನದ ಧ್ಯೇಯ ವಾಕ್ಯವಿದು. ಖಂಡಿತವಾಗಿಯೂ ಆ ವಾಕ್ಯದಂತೆಯೆ ನೀವಿಲ್ಲಿ ಭೇಟಿ ನೀಡಿದರೆ ಮಜಾ ಮಾಡಬಹುದು. ಅಷ್ಟೊಂದು ಅದ್ಭುತವಾಗಿದೆ ಈ ಥೀಮ್ ಪಾರ್ಕ್. ವಾರಾಂತ್ಯವೆ ಇರಲಿ ಅಥವಾ ವಾರದಿನವೆ ಇರಲಿ ಒಂದಿನದ ಅನಂತ ಮಸ್ತಿಗೆ ಇದೊಂದು ಪ್ರಶಸ್ತ ತಾಣ.

ಮೈಸೂರು ನಗರದಲ್ಲಿರುವ ಜಿ ಆರ್ ಎಸ್ ಮನರಂಜನಾ ಉದ್ಯಾನವು ಎಲ್ಲ ವಯೋಮಾನದವರಿಗೂ ಅನುಕೂಲವಾಗುವಂತೆ, ಉತ್ಸಾಹ ಪಡುವಂತೆ, ಸಂತಸ ಸಿಗುವಂತೆ ವಿನ್ಯಾಸಗೊಳಿಸಲಾಗಿದ್ದು ಪಾಶ್ಚಿಮಾತ್ಯ ರೀತಿಯ ಸಾಹಸಮಯ ಚಟುವಟಿಕೆಗಳುಳ್ಳ ಅನೇಕ ರೋಮಾಂಚಕ ಆಟಗಳು ಅಥವಾ ರೈಡುಗಳಿಂದ ಸಂಪದ್ಭರಿತವಾಗಿದೆ.

ಕೃತಕ ಸಮುದ್ರದಲೆಗಳು, ನೀರಿನಲ್ಲಿ ಆಟ, ಎತ್ತರವಾದ ಚಕ್ರದಲ್ಲಿ ವಿಹಾರ, ಕೋಲಂಬಸ್ ಆಟ, ಥ್ರೀ ಡಿ ಪ್ರದರ್ಶನ, ಗುಹಾಂತರ ಹೀಗೆ ಅನೇಕ ರೀತಿಯ ವೈವಿಧ್ಯಮಯ ಆಟಗಳನ್ನು, ಮನರಂಜನೆಗಳನ್ನು ಇಲ್ಲಿ ಪಡೆಯಬಹುದು. ಕುಟುಂಬ ಸಮೇತರಾಗಿ ಇಲ್ಲವೆ ಸ್ನೇಹಿತರೊಡಗೂಡಿ ಒಂದು ದಿನದ ಮಟ್ಟಿಗೆ ಇಲ್ಲಿ ಪ್ರವಾಸ ಮಾಡಿ ಬರಲು ಬಲು ಯೋಗ್ಯವಾದ ಉದ್ಯಾನವಾಗಿದೆ ಇದು.

ಅಷ್ಟೆ ಏಕೆ, ತಿನ್ನಲು ಉಪಹಾರಗೃಹಗಳು, ಐಸ್ ಕ್ರೀಂ ಪಾರ್ಲರುಗಳು, ಬಟ್ಟೆ ಬದಲಾಯಿಸಲು ಪ್ರತ್ಯೇಕವಾದ ಕೋಣೆಗಳು ಇಲ್ಲಿ ಲಭ್ಯ. ಒತ್ತಡವನ್ನು ಹೊಡೆದೋಡಿಸಲು, ನವಚೈತನ್ಯ ಪಡೆಯಲು ತಕ್ಕುದಾದ ಉದ್ಯಾನ ಇದಾಗಿದ್ದು ಒಂದೊಮ್ಮೆಯಾದರೂ ಭೇಟಿ ನೀಡಲು ಹೇಳಿ ಮಾಡಿಸಿದಂತಿದೆ.

ಗಮನಿಸಬೇಕಾದ ಅಂಶವೆಂದರೆ ಈ ಉದ್ಯಾನದೊಳ ಪ್ರವೇಶಿಸಲು ಪ್ರತಿಯೊಬ್ಬರಿಗೂ ನಿರ್ದಿಷ್ಟವಾದ ಶುಲ್ಕವಿದೆ. ಈ ಶುಲ್ಕವು ವಾರದ ದಿನಗಳಲ್ಲಿ ಹಾಗೂ ವಾರಾಂತ್ಯದಂದು ಬೇರೆ ಬೇರೆಯಾಗಿರುತ್ತವೆ. ವಿದ್ಯಾರ್ಥಿಗಳಿಗೆ ವಿಶೇಷವಾದ ರಿಯಾಯಿತಿ ಶುಲ್ಕಗಳು ಲಭ್ಯ. ಮೈಸೂರು ನಗರಕೇಂದ್ರದಿಂದ ಎಂಟು ಕಿ.ಮೀ ದೂರದಲ್ಲಿರುವ ಮೆಟಗಳ್ಳಿ ಎಂಬಲ್ಲಿ ಈ ಉದ್ಯಾನ ಸ್ಥಿತವಿದೆ.

ಏನಪ್ಪಾ ಇದು

ಏನಪ್ಪಾ ಇದು

ವಿಶಾಲವಾದ ಕಾಯ, ಅದರೊಳಗಿಂದ ಹರಿಯುವ ನೀರಿನ ಪಥ. ಇದರಲ್ಲಿ ರೈಡ್ ಮಾಡಿದರೆ ರೋಮಾಂಚನ ಉಂಟಾಗದೆ ಇರಲಾದಿತೆ?

ಚಿತ್ರಕೃಪೆ: grsfantasypark.com

ಬಲು ಸೊಗಸು

ಬಲು ಸೊಗಸು

ಏನಿದು ಜಲಪಾತವೇ? ಹೌದು, ಆದರೆ ಕೃತಕವಾಗಿ ನಿರ್ಮಿಸಲಾದ ಜಲಪಾತ. ವಿಶೇಷವೆಂದರೆ ಇದರ ಕೆಳಗೆ ನಿಂತು ಹಾಯಾಗಿ ಜಲಪಾತಧಾರೆಯನ್ನು ಅನುಭವಿಸಬಹುದು.

ಚಿತ್ರಕೃಪೆ: grsfantasypark.com

ಅನುಭವ ಬೇಕೆ?

ಅನುಭವ ಬೇಕೆ?

ಸಮುದ್ರದಲೆಗಳ ಅನುಭವ ಬೇಕೆ? ಅದೂ ಸಹ ಇಲ್ಲಿ ಲಭ್ಯ. ಸಮುದ್ರದಲೆಗಳಂತೆಯೆ ಇಲ್ಲಿ ಅಲೆಗಳು ಕೃತಕವಾಗಿ ನಿಮ್ಮನ್ನು ಬಂದು ಅಪ್ಪಳಿಸುತ್ತವೆ!

ಚಿತ್ರಕೃಪೆ: grsfantasypark.com

ಆಟ

ಆಟ

ಮಕ್ಕಳು ಉದ್ಯಾನದಲ್ಲಿ ಜಾರು ಬಂಡಿ ಆಡುವುದನ್ನು ನೀವು ಗಮನಿಸಿರಬಹುದಲ್ಲವೆ? ಎಷ್ಟೊ ಸಲ ನಿಮಗೂ ಸಹ ಇದನ್ನಾಡಲು ಮನಸ್ಸಾದರೂ ಹಿರಿಯರೆಂದು ಸುಮ್ಮನೆ ಕುಳಿತು ಬಿಡುತ್ತೇವಲ್ಲವೆ? ಇನ್ನೂ ಚಿಂತೆ ಬಿಡಿ ಅದಕ್ಕಿಂತಲೂ ದೊಡ್ಡದಾದ ಹಾಗೂ ನೇರವಾಗಿ ನೀರಿಗೆ ಧುಮುಕಿಸುವಂತಹ ಅದ್ಭುತ ಜಾರುಬಂಡಿಯೂ ಇಲ್ಲಿ ಲಭ್ಯ.

ಚಿತ್ರಕೃಪೆ: grsfantasypark.com

ತಿರುಗುವ ಬಂಡಿ

ತಿರುಗುವ ಬಂಡಿ

ಜೋಕಾಲಿಯಲ್ಲಿ ಕುಳಿತುಕೊಳ್ಳುವ ರೀತಿಯಲ್ಲೆ ಕುಳಿತು ಆದರೆ ಮುಂದೆ-ಹಿಂದೆ ಹೋಗದೆ ವೃತ್ತದ ರೀತಿಯಲ್ಲಿ ಸುತ್ತುವ ರೋಮಾಂಚಕ ಆಟ. ಯಾರಿಗೆ ತಾನೆ ಆಡಲು ಇಷ್ಟವಿಲ್ಲ ಹೇಳಿ?

ಚಿತ್ರಕೃಪೆ: grsfantasypark.com

ಪಾನೀಯ

ಪಾನೀಯ

ಆಡಿ ಆಡಿ ಸುಸ್ತಾಯಿತೆ? ಸ್ವಲ್ಪ ವಿರಮಿಸುತ್ತ ಏನಾದರೂ ಲಘು ಉಪಹಾರ ಹಾಗೂ ತಂಪಾದ ಪಾನೀಯ ಬೇಕೆನಿಸುತ್ತಿದೆಯೆ? ಅದು ಲಭ್ಯವಿದೆ ಈ ಉದ್ಯಾನದಲ್ಲಿ!

ಚಿತ್ರಕೃಪೆ: grsfantasypark.com

ಇಗೋ ನಾ ಬಂದೆ

ಇಗೋ ನಾ ಬಂದೆ

ಕಾರಂಜಿಯ ಕೆಳಗೆ ನಿಂತು ಹಾಗೆ ಸಮಯ ಕಳೆಯುವಾಗ ಆಗುವ ಆನಂದ ಅಷ್ಟಿಷ್ಟಲ್ಲ. ಆ ಸಂತಸವೂ ನಿಮ್ಮದಾಗಿಸುತ್ತದೆ ಈ ಉದ್ಯಾನ.

ಚಿತ್ರಕೃಪೆ: grsfantasypark.com

ಕ್ಷಣಗಳು

ಕ್ಷಣಗಳು

ಇಲ್ಲಿ ಕಳೆಯುವ ಒಂದೊಂದೂ ಕ್ಷಣಗಳೂ ಸಹ ನಿಮ್ಮ ಸ್ಮೃತಿ ಪಟಲದಿಂದ ಬಹು ಬೇಗನೆ ಮರೆಯಲು ಸಾಧ್ಯವೆ ಇಲ್ಲ. ಸ್ನೇಹಿತರೊಂದಿಗಿದ್ದಾಗ ಈ ಅಮೂಲ್ಯ ಸಮಯವು ಎಂದೆಂದೂ ಹಾಗೆ ಇರಬೇಕೆಂದು ಅನಿಸಿದರೂ ತಪ್ಪಲ್ಲ.

ಕಲಾಕೃತಿಗಳು

ಕಲಾಕೃತಿಗಳು

ಉದ್ಯಾನದ ತುಂಬೆಲ್ಲ ಅಲ್ಲಲ್ಲಿ ಮನಸೂರೆಗೊಳ್ಳುವಂತಹ ಆಕರ್ಷಕ ಕಲಾಕೃತಿಗಳನ್ನು ನಿರ್ಮಿಸಲಾಗಿದ್ದು, ಅವುಗಳ ವಿಭಿನ್ನ ವಿನ್ಯಾಸ ಒಂದು ರೀತಿಯ ಆಕರ್ಷಣೆಯನ್ನುಂಟು ಮಾಡುತ್ತವೆ.

ಚಟುವಟಿಕೆಗಳು

ಚಟುವಟಿಕೆಗಳು

ನಿಮ್ಮ ಕೌಶಲ್ಯವನ್ನು ಒರೆಗೆ ಹಚ್ಚುವ ವಿವಿಧ, ಹತ್ತುವ, ಇಳಿಯುವ ಹಲವಾರು ಚಟುವಟಿಕೆಯುಕ್ತ ಆಟಗಳ ವ್ಯವಸ್ಥೆ ಇಲ್ಲಿದ್ದು ನಿಮಗೆ ಸಾಧ್ಯವಾದಷ್ಟು ಸಂತಸ ಕರುಣಿಸುತ್ತವೆ.

ಖಂಡಿತ ಇಲ್ಲ

ಖಂಡಿತ ಇಲ್ಲ

ಇಲ್ಲಿರುವ ಸಾಕಷ್ಟು ಆಟಗಳು ವಯಸ್ಕರು ಆನಂದಿಸುವಂತೆ ವಿನ್ಯಾಸಗೊಳಿಸಲಾಗಿದೆ. ಹಾಗಾದರೆ ಇವೆಲ್ಲವೂ ವಯಸ್ಕರಿಗೆ ಮಾತ್ರವೆ? ಖಂಡಿತ ಇಲ್ಲ. ಇತರೆ ಸಾಮಾನ್ಯ ಆಟದ ಉದ್ಯಾನಗಳಲ್ಲಿರುವಂತೆ ಮಕ್ಕಳೂ ಸಹ ಆನಂದಿಸಲು ಚಿಕ್ಕ ಪುಟ್ಟ ಜಾರುಬಂಡಿಯಂತಹ ಆಟಗಳು ಇಲ್ಲಿ ಲಭ್ಯ.

ಟುಕ್ ಟುಕ್ ಟುಕ್

ಟುಕ್ ಟುಕ್ ಟುಕ್

ಹೀಗೆ ಹಾಡುತ್ತ, ಕುದುರೆ ಸವಾರಿ ಮಾಡಿ! ಅದು ಆಟದ ಕುದುರೆ, ಆದರೆ ವಿಹಾರ ಮಾತ್ರ ಅದ್ಭುತ!

ರೋಮಾಂಚಕ

ರೋಮಾಂಚಕ

ರೈಡ್ ಎಂದರೆ ಬಹುತೇಕ ಎಲ್ಲರಿಗೂ ಇಷ್ಟ. ಅದರಲ್ಲೂ ಕೋಲಂಬಸ್ ನ ತುದಿಯಲ್ಲಿ ಆಸೀನರಾಗಿ ಆಟ ಆಡಿದರೆ ಸಾಕು, ಹೊಟ್ಟೆಯಲ್ಲೆಲ್ಲ ಒಂದು ರೀತಿಯ ಕಲರವ ಉಂಟಾಗುತ್ತದೆ.

ಚಿತ್ರಕೃಪೆ: grsfantasypark.com

ಪ್ರಶಸ್ತ?

ಪ್ರಶಸ್ತ?

ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ ಹಾಗೂ ರಜಾ ದಿನಗಳಲ್ಲಿ ಈ ಉದ್ಯಾನಕ್ಕೆ ಭೇಟಿ ನೀಡುವವರ ಸಂಖ್ಯೆ ತುಸು ಹೆಚ್ಚು. ನಿಮಗೆ ಸಾಕಷ್ಟು ಜನರಿರದ ಸಂದರ್ಭದಲ್ಲಿ ಭೇಟಿ ನೀಡಿ ಅನುಭವ ಪಡೆಯಬೇಕೆಂದಿದ್ದರೆ ವಾರದ ದಿನಗಳು ಉತ್ತಮ ಎಂದು ಹೇಳಬಹುದು. ಹಾಗಾಗಿ ನಿಮ್ಮ ಯೋಜನೆಯನ್ನು ಸಿದ್ಧಪಡಿಸಿಕೊಂಡು ಒಮ್ಮೆ ಭೇಟಿ ನೀಡಿ.

ಚಿತ್ರಕೃಪೆ: grsfantasypark.com

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more