Search
  • Follow NativePlanet
Share
» »ಎಲ್ಲೋರಾ ಗುಹೆ ಬಳಿ ಇರುವ 12 ನೇ ಜ್ಯೋತಿರ್ಲಿಂಗದ ದರ್ಶನ ಪಡೆದಿದ್ದೀರಾ?

ಎಲ್ಲೋರಾ ಗುಹೆ ಬಳಿ ಇರುವ 12 ನೇ ಜ್ಯೋತಿರ್ಲಿಂಗದ ದರ್ಶನ ಪಡೆದಿದ್ದೀರಾ?

ಶಿವನ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆ ಗೊತ್ತೇ ಇದೆ. ನಿಮ್ಮಲ್ಲಿ ಸಾಕಷ್ಟು ಜನರು ಈಗಾಗಲೇ ಕೆಲವು ಜ್ಯೋತಿರ್ಲಿಂಗದ ದರ್ಶನ ಮಾಡಿರುತ್ತೀರಾ. ನಾವಿಂದು ನಿಮಗೆ 12 ನೇ ಹಾಗೂ ಕೊನೆಯ ಜ್ಯೋತಿರ್ಲಿಂಗದ ಹಾಗೂ ಈ ಜ್ಯೋತಿರ್ಲಿಂಗ ಎಲ್ಲಿದೆ ಅನ್ನೋದನ್ನು ತಿಳಿಸಲಿದ್ದೇವೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

PC:Ms Sarah Welch

ಎಲ್ಲೋರಾ ಗುಹೆಗಳಿಂದ 1 ಕಿ.ಮೀ ದೂರದಲ್ಲಿ ಮತ್ತು ಔರಂಗಬಾದ್ ರೈಲ್ವೆ ನಿಲ್ದಾಣದಿಂದ 29 ಕಿ.ಮೀ ದೂರದಲ್ಲಿರುವ ಗ್ರಿಷ್ನೇಶ್ವರ್ ಅಥವಾ ಘ್ರಷ್ನೇಶ್ವರ್ ಜ್ಯೋತಿರ್ಲಿಂಗ ದೇವಾಲಯವು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ವೆರುಲ್ ಹಳ್ಳಿಯಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ.

ಈ ಗುಹೆಯೊಳಗಿನ ಶಿವಲಿಂಗದ ದರ್ಶನ ಪಡೆಯುವುದು ಒಂದು ಸಾಹಸವೇ ಸರಿಈ ಗುಹೆಯೊಳಗಿನ ಶಿವಲಿಂಗದ ದರ್ಶನ ಪಡೆಯುವುದು ಒಂದು ಸಾಹಸವೇ ಸರಿ

12 ಜ್ಯೋತಿರ್ಲಿಂಗ

12 ಜ್ಯೋತಿರ್ಲಿಂಗ

PC: Rashmi.parab

ಇದು ಶಿವ ಪುರಾಣದಲ್ಲಿ ಉಲ್ಲೇಖಿಸಲಾದ 12 ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಮಹಾರಾಷ್ಟ್ರದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದು ಔರಂಗಾಬಾದ್ ನಗರದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಎಲ್ಲೋರಾದಲ್ಲಿ ಭೇಟಿ ನೀಡುವ ಜನಪ್ರಿಯ ಸ್ಥಳವೂ ಆಗಿದೆ.

PC: Rashmi.parab

ಈ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. ಗ್ರಿಷ್ನೇಶ್ವರ ದೇವಾಲಯವು ಭೂಮಿಯ ಮೇಲಿನ ಕೊನೆಯ ಅಥವಾ 12 ನೇ ಜ್ಯೋತಿರ್ಲಿಂಗ ಎಂದು ನಂಬಲಾಗಿದೆ. ಜ್ಯೋತಿರ್ಲಿಂಗ ರೂಪದಲ್ಲಿ ಪ್ರಖ್ಯಾತ ದೇವತೆ ಕುಸುಮೇಶ್ವರರ್, ಘುಷ್ಮೇಶ್ವರ, ಘುಷ್ಮೇಶ್ವರ ಮತ್ತು ಗ್ರಿಶ್ನೇಶ್ವರ ಮುಂತಾದ ಹಲವು ಹೆಸರುಗಳಿಂದ ಪ್ರಸಿದ್ಧವಾಗಿದೆ.

ಚಿಕ್ಕಮಗಳೂರಿನಲ್ಲಿರುವ ಅಯ್ಯನ ಕೆರೆಯನ್ನು ನೋಡಿದ್ದೀರಾ?ಚಿಕ್ಕಮಗಳೂರಿನಲ್ಲಿರುವ ಅಯ್ಯನ ಕೆರೆಯನ್ನು ನೋಡಿದ್ದೀರಾ?

ದೇವಸ್ಥಾನದ ಪುನಃನಿರ್ಮಾಣ

16 ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‌ನ ಅಜ್ಜ, ಮಾಲೋಜಿ ರಾಜೇ ಭೋಸ್ಲೆ ಅವರು ಗ್ರಿಷ್ನೇಶ್ವರ ದೇವಸ್ಥಾನವನ್ನು ಪುನಃ ನಿರ್ಮಿಸಿದರು. ನಂತರ, 18 ನೇ ಶತಮಾನದಲ್ಲಿ 1765 ನಿಂದ 1795 ವರೆಗೆ ಇಂದೋರ್ ಅನ್ನು ಆಳಿದ ರಾಣಿ ಅಹಲ್ಯಾಬಾಯಿ ಹೊಲ್ಕರ್ ರಿಂದ ಮತ್ತೆ ಪುನರ್ನಿರ್ಮಾಣ ಮಾಡಲಾಯಿತು.

ದಂತಕಥೆ

ದಂತಕಥೆಯ ಪ್ರಕಾರ, ದೇವಗಿರಿ ಪರ್ವತದಲ್ಲಿ ಬ್ರಾಹ್ಮವೆಟ್ಟ ಸುಧಾರ್ಮ್ ಮತ್ತು ಸುಧೇಹ್ ಎಂಬ ಬ್ರಾಹ್ಮಣ ದಂಪತಿಗಳು ವಾಸಿಸುತ್ತಿದ್ದರು. ಅವರಿಗೆ ಮಕ್ಕಳಿಲ್ಲರಲಿಲ್ಲ ಹಾಗಾಗಿ ಸುಧೇಹಳ ಆಶಯದ ಮೇರೆಗೆ ಬ್ರಾಹ್ಮವೆಟ್ಟಾ ಅವಳ ಸಹೋದರಿ ಘುಷ್ಮಾಳನ್ನು ಮದುವೆಯಾಗುತ್ತಾನೆ.

ಈಗ ಬರೀ 400ರೂ.ಯಲ್ಲಿ ಗೋವಾ ಸುತ್ತಾಡಿಈಗ ಬರೀ 400ರೂ.ಯಲ್ಲಿ ಗೋವಾ ಸುತ್ತಾಡಿ

101 ಲಿಂಗಗಳು

ಸುಧೇಹಳ ಸಲಹೆಯ ಮೇರೆಗೆ, ಘುಷ್ಮಾ ಳನ್ನು ನಿರ್ಮಿಸಿ, ಅವನ್ನು ಆರಾಧಿಸಿ ಹತ್ತಿರದ ಸರೋವರದೊಳಗೆ ವಿಸರ್ಜಿಸುತ್ತಿದ್ದಳು. ಶಿವನ ಆಶೀರ್ವಾದದಿಂದ ಘುಷ್ಮಾಳಿಗೆ ಗಂಡು ಮಗುವಿನ ಜನನವಾಗುತ್ತದೆ. ಅಸೂಯೆಯಿಂದ ಸುಧೇಹಳು ಮಗುವನ್ನು ಕೊಲ್ಲುತ್ತಾಳೆ. ನಂತರ ಗುಷ್ಮಾ ಶಿವಲಿಂಗವನ್ನು ವಿಸರ್ಜಿಸುತ್ತಿದ್ದ ಕೆರೆಗೆ ಬಿಸಾಕುತ್ತಾಳೆ.

ಗುಷ್ಮೇಶ್ವರ

ಅದೇ ದುಃಖದಲ್ಲಿ ಘುಷ್ಮಾ ಮತ್ತೆ ಶಿವನನ್ನು ಪೂಜಿಸಲು ಪ್ರಾರಂಭಿಸುತ್ತಾಳೆ. ಆಕೆ ಶಿವಲಿಂಗವನ್ನು ಸರೋವರ ನೀರಿನಲ್ಲಿ ಮುಳುಗಿಸುವಾಗ ಶಿವನು ಪ್ರತ್ಯಕ್ಷನಾಗುತ್ತಾನೆ. ಮಗುವಿಗೆ ಮರುಜೀವ ನೀಡುತ್ತಾನೆ. ಅಂದಿನಿಂದ ಅಲ್ಲಿ ಶಿವನನ್ನು ಗುಷ್ಮೇಶ್ವರ ಎಂದು ಪೂಜಿಸಲಾಗುತ್ತದೆ.

ಐಶ್ವರ್ಯ ಡ್ಯಾನ್ಸ್ ಮಾಡಿದ್ದ ಈ ಜಲಪಾತ ಯಾವುದು ಗೊತ್ತಾ?ಐಶ್ವರ್ಯ ಡ್ಯಾನ್ಸ್ ಮಾಡಿದ್ದ ಈ ಜಲಪಾತ ಯಾವುದು ಗೊತ್ತಾ?

ಗುಮ್ಮಟ ಆಕಾರದ ದೇವಾಲಯ

240 x 185 ಅಡಿ ಎತ್ತರದ ಗುಮ್ಮಟ ಆಕಾರದ ಈ ದೇವಾಲಯವು ಕೆಂಪು ಜ್ವಾಲಾಮುಖಿ ಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಮಧ್ಯಕಾಲೀನ ವಾಸ್ತುಶೈಲಿಯ ಸುಂದರವಾದ ಕೆತ್ತನೆಗಳು, ಆಕರ್ಷಕ ಗಾಜುಗಳು ಮತ್ತು ಭಾರತೀಯ ದೇವತೆಗಳು ಮತ್ತು ದೇವತೆಗಳ ಶಿಲ್ಪಗಳನ್ನು ಇಲ್ಲಿ ಕಾಣಬಹುದು.

ಧಾರ್ಮಿಕ ಉತ್ಸವ

ಮಹಾ ಶಿವರಾತ್ರಿ ಇಲ್ಲಿ ನಡೆಯುವ ಪ್ರಮುಖ ಧಾರ್ಮಿಕ ಉತ್ಸವವಾಗಿದೆ. ಈ ದೇವಾಲಯಕ್ಕೆ ಭೇಟಿ ನೀಡಲು ಭೇಟಿ ನೀಡಲು ಇದು ಅತ್ಯುತ್ತಮ ಸಮಯವಾಗಿದೆ. ಬೆಳಗ್ಗೆ 5.30 ರಿಂದ ರಾತ್ರಿ 9.30 ರವರೆಗೆ ಇಲ್ಲಿಗೆ ಭೇಟಿ ನೀಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X