Search
  • Follow NativePlanet
Share
» »ಯೆಲ್ಲಾಪುರದಲ್ಲಿರುವ ಘಂಟೆ ಗಣೇಶನಿಗೆ ಘಂಟೆ ಅರ್ಪಿಸಿದ್ರೆ ಸಕಲ ಕಷ್ಟ ದೂರವಾಗುತ್ತದಂತೆ!

ಯೆಲ್ಲಾಪುರದಲ್ಲಿರುವ ಘಂಟೆ ಗಣೇಶನಿಗೆ ಘಂಟೆ ಅರ್ಪಿಸಿದ್ರೆ ಸಕಲ ಕಷ್ಟ ದೂರವಾಗುತ್ತದಂತೆ!

ಈ ದೇವಾಲಯವನ್ನು "ಘಂಟೆ ಗಣೇಶ ದೇವಸ್ಥಾನ" ಎಂಬ ಹೆಸರಿನಿಂದ ಗುರುತಿಸಲಾಗಿದೆ. ಘಂಟೆ ಅಂದರೆ ಸ್ಥಳೀಯ ಭಾಷೆ ಕನ್ನಡದಲ್ಲಿ "ಗಂಟೆ" ಎಂದರ್ಥ.

ಇಲ್ಲಿನ ಗಣೇಶನಿಗೆ ಒಂದು ಘಂಟೆ ಅರ್ಪಿಸಿದರೆ ನಿಮ್ಮ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದಂತೆ. ಹಾಗಾಗಿ ಈತನನ್ನು "ಘಂಟೆ ಗಣೇಶ" ಎಂದು ಕರೆಯುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಭಕ್ತರು ಬಂದು ಗಂಟೆಯನ್ನು ಅರ್ಪಿಸುತ್ತಾರೆ. ಈ ದೇವಸ್ಥಾನವು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಅಂತಹ ವಿಶೇಷ ದೇವಸ್ಥಾನದ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

ಎಲ್ಲಿದೆ ಈ ಗಣೇಶನ ದೇವಸ್ಥಾನ?

ಎಲ್ಲಿದೆ ಈ ಗಣೇಶನ ದೇವಸ್ಥಾನ?

PC: FB
ಶ್ರೀ ಸಿದ್ದಿವಿನಾಯಕ ದೇವಸ್ಥಾನ ಎಂದು ಕರೆಯಲ್ಪಡುವ ಈ ಗಣೇಶನ ದೇವಾಲಯವು ಯೆಲ್ಲಾಪುರದಿಂದ 18 ಕಿ.ಮೀ ದೂರದಲ್ಲಿರುವ ಚಂದಗುಲಿ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. ಇದು ಭತ್ತದ ಕಣಿವೆಗಳು, ಅಡಕೆ ತೋಟ ಮತ್ತು ತೆಂಗಿನಕಾಯಿ ತೋಟಗಳಿಂದ ಸುತ್ತುವರೆದಿದೆ.

ಘಂಟೆ ಗಣೇಶ

ಘಂಟೆ ಗಣೇಶ

PC:FB
ಈ ದೇವಾಲಯವನ್ನು "ಘಂಟೆ ಗಣೇಶ ದೇವಸ್ಥಾನ" ಎಂಬ ಹೆಸರಿನಿಂದ ಗುರುತಿಸಲಾಗಿದೆ. ಘಂಟೆ ಅಂದರೆ ಸ್ಥಳೀಯ ಭಾಷೆ ಕನ್ನಡದಲ್ಲಿ "ಗಂಟೆ" ಎಂದರ್ಥ. ಜನರು ಗಣೇಶನಿಗೆ ಘಂಟೆ (ಬೆಲ್)ಯನ್ನು ನೀಡುತ್ತಾರೆ. ಈ ಮೂಲಕ ಆರೋಗ್ಯ ಸಮಸ್ಯೆಗಳು, ನ್ಯಾಯಾಲಯ ಪ್ರಕರಣಗಳು, ಮಕ್ಕಳ ಭಾಗ್ಯ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ.

ಎಲ್ಲಾ ಗಾತ್ರದ ಗಂಟೆಗಳಿವೆ

ಎಲ್ಲಾ ಗಾತ್ರದ ಗಂಟೆಗಳಿವೆ

PC:FB
ದೇವಸ್ಥಾನದ ಸುತ್ತಲೂ ಸಾಕಷ್ಟು ಘಂಟೆಗಳು ತೂಗಾಡುತ್ತಿರುವುದನ್ನು ನೀವು ನೋಡಬಹುದು. ಭಕ್ತಾದಿಗಳು ಸಲ್ಲಿಸಿ ಹೋದ ಘಂಟೆಗಳ ದೊಡ್ಡ ಸಾಲೇ ಇಲ್ಲಿದೆ. ಈ ದೇವಸ್ಥಾನದಲ್ಲಿ ಎತ್ತ ಕಣ್ಣು ಹಾಯಿಸಿದರೂ ಬರೀ ಘಂಟೆಗಳೇ, ಕಿರುಬೆರಳಿನಾಕಾರದ ಘಂಟೆಗಳಿಂದ ಹಿಡಿದು ದೊಡ್ಡ ದೊಡ್ಡ ಘಂಟೆಗಳು, ಪ್ರವೇಶ ದ್ವಾರದಲ್ಲೂ ಘಂಟೆ, ಕಿಟಕಿಗಳ ಮೇಲ್ಗಡೆಗೂ ಘಂಟೆ.ಅಷ್ಟೇ ಅಲ್ಲ,ದೇವಾಲಯದ ಛಾವಣಿಯ ತೊಲೆ, ಜಂತಿಗಳಲ್ಲೂ ಸಾಲುಸಾಲು ಗಂಟೆಗಳು, ಗೋಪುರದ ಸುತ್ತಲೂ ಘಂಟೆಗಳು ಕಾಣಸಿಗುತ್ತದೆ.

ಪ್ರಶ್ನೆ ಕೇಳುತ್ತಾರೆ

ಪ್ರಶ್ನೆ ಕೇಳುತ್ತಾರೆ

PC:FB
ಕೆಲವು ದೇವಸ್ಥಾನಗಳಲ್ಲಿ ಭಕ್ತರು ತಮ್ಮ ಸಮಸ್ಯೆಗಳಿಗೆ ನೇರವಾಗಿ ದೇವರಲ್ಲಿ ಪ್ರಶ್ನೆ ಕೇಳಿ ಅದಕ್ಕೆ ಉತ್ತರ ಪಡೆಯುವ ಸಂಪ್ರದಾಯದ ಬಗ್ಗೆ ನೀವು ಕೇಳಿರಬಹುದು. ಅಂತಹದ್ದೇ ಒಂದು ಆಚರಣೆ ಈ ದೇವಸ್ಥಾನದಲ್ಲೂ ಇದೆ. ಈ ರೀತಿ ದೇವರಿಗೆ ಅರ್ಪಿಸಬೇಕಾದ ವಿಷಯವನ್ನು ದೇವರ ಮುಂದಿಟ್ಟು ಭಕ್ತರು ದೇವರನ್ನು ಪ್ರಾರ್ಥಿಸಬೇಕು. ನಂತರ ಅವರು ಮನೆಗೆ ಹಿಂದಿರುಗಬಹುದು.

ನೆರೆ ರಾಜ್ಯದಿಂದಲೂ ಆಗಮಿಸುತ್ತಾರೆ

ನೆರೆ ರಾಜ್ಯದಿಂದಲೂ ಆಗಮಿಸುತ್ತಾರೆ

PC: FB

ಪ್ರತಿನಿತ್ಯವೂ ಇಲ್ಲಿಗೆ ಭಕ್ತಾದಿಗಳು ಬರುತ್ತಾರೆ. ನೆರೆ ರಾಜ್ಯದಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಸಂಕಷ್ಟಹರ ಚತುರ್ಥಿ, ಅಂಗಾರಕ ಚತುರ್ಥಿಗಳ ದಿನವಂತೂ ಇಲ್ಲಿ ಜಾತ್ರೆಯೇ ನೆರೆದಂತೆ ಭಾಸವಾಗುತ್ತದೆ.

ಪ್ರಾರ್ಥಿಸಿದಂತೆ ಸೇವೆ ನೀಡಬೇಕು

ಪ್ರಾರ್ಥಿಸಿದಂತೆ ಸೇವೆ ನೀಡಬೇಕು

PC: youtube

ಭಕ್ತರು ದೇವರಲ್ಲಿ ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ಪ್ರಾರ್ಥೀಸುವಾಗ ದೇವರಿಗೆ ಏನೆಲ್ಲಾ ಹರಕೆ ನೀಡುವುದಾಗಿ ಹೇಳಿಕೊಂಡಿರುತ್ತಾರೋ ಅದನ್ನು ಸಮಸ್ಯೆ ಪರಿಹಾರವಾದ ನಂತರ ತಪ್ಪದೇ ಅರ್ಪಿಸಬೇಕು. ಸಮಸ್ಯೆ ಪರಿಹಾರವಾದ ನಂತರ ಭಕ್ತರು ದೇವಸ್ಥಾನಕ್ಕೆ ಬಂದು ಪ್ರಾರ್ಥಿಸಿದಂತೆ ಸೇವೆಯನ್ನು ನೀಡಬೇಕು.

 ಇಲ್ಲಿನ ಸೇವೆಗಳು

ಇಲ್ಲಿನ ಸೇವೆಗಳು

PC: Youtube
ಸಂತಾನ ಭಾಗ್ಯಕ್ಕಾಗಿ -ಗಣಪತಿ ಹೋಮ / ಬೆಳ್ಳಿಯ ತೊಟ್ಟಿಲು ಮತ್ತು ಚಿನ್ನದ ಶಿಶು
ಘಂಟೆ ಹರಕೆ-ಪದಗಳನ್ನು ಸರಿಯಾಗಿ ಉಚ್ಚರಿಸಲು ಸಾಧ್ಯವಾಗದೇ ಇರುವುದಕ್ಕೆ
ಕೆಲಸ ಪಡೆಯಲು-ಗಣಪತಿ ಹವನ / ಮೊದಕ ಹವನ/ ಮೊದಕ ಅರ್ಚೆನೆ / ಲಾಜಾ ಹೋಮ
ಮದುವೆಗೆ-ವಿವಾಹಾಪ್ರದಾ ಬಾಲ ಗಣಪತಿ ಹೋಮ / ವಿನಾಯಕ ಶಾಂತಿ / ಘಂಟೆ ಹರಕೆ / ಲಾಜಾ ಹೋಮ ಅನ್ನು ಮಾಡಿಸಬೇಕು.
ಯಾವುದೇ ರೀತಿಯ ಅನಾರೋಗ್ಯಕ್ಕೆ - ತುಲಾಭಾರ (ತೆಂಗಿನಕಾಯಿ, ಅಕ್ಕಿ, ಬೆಲ್ಲ, ಇತ್ಯಾದಿ) ಮತ್ತು ಘಂಟೆ ಹರಕೆ .

ತಲುಪುವುದು ಹೇಗೆ?

ತಲುಪುವುದು ಹೇಗೆ?

ಯಲ್ಲಾಪುರವು ಹುಬ್ಬಳ್ಳಿ - ಕಾರವಾರ ಹೆದ್ದಾರಿಯಲ್ಲಿದೆ. ಇದನ್ನು ಹುಬ್ಬಳ್ಳಿ ಕಾರವಾರ ಕಡೆಗೆ (ಹುಬ್ಬಳ್ಳಿನಿಂದ ಸುಮಾರು 70 ಕಿಮೀ) ಹೋಗಬಹುದು ಅಥವಾ ಕುಮಟಾ - ಶಿರಸಿ ಮೂಲಕ ಯೆಲ್ಲಾಪುರ ತಲುಪಬಹುದು.

ಯೆಲ್ಲಾಪುರಕ್ಕೆ ತಲುಪಿದ ನಂತರ, ಮ್ಯಾಗೋಡ್‌ಗೆ ಹೋಗಬೇಕು. ಅಲ್ಲಿಂದ ಇನ್ನೊಂದು 2 ಕಿಮೀ. ಸಾಕಷ್ಟು ಕೆಎಸ್ಆರ್‌ಟಿಸಿ ಬಸ್ಸುಗಳು ಯೆಲ್ಲಾಪುರದಿಂದ ಮ್ಯಾಗೊಡ್ ವರೆಗೂ ಇವೆ ಮತ್ತು ನಂತರ ಮ್ಯಾಗೋಡ್‌ನಿಂದ ಚಂದಗುಲಿಗೆ ಸುಮಾರು 2 ಕಿ.ಮೀ. ಪ್ರಯಾಣಿಸಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X