Search
  • Follow NativePlanet
Share
» »ಗಂಗೋತ್ರಿ ಪವಿತ್ರ ಯಾಕೈತ್ರಿ?

ಗಂಗೋತ್ರಿ ಪವಿತ್ರ ಯಾಕೈತ್ರಿ?

By Vijay

ಉತ್ತರಾಖಂಡ ರಾಜ್ಯದ ಉತ್ತರಕಾಶಿ ಎಂಬ ಜಿಲ್ಲೆಯಲ್ಲಿ ನೆಲೆಸಿರುವ ಗಂಗೋತ್ರಿ ಎಂಬ ಕ್ಷೇತ್ರವು ಹಿಂದೂ ಧರ್ಮದವರ ಪಾಲಿಗೆ ಅತಿ ಮಹತ್ವ ಪಡೆದಿರುವ ಸ್ಥಳವಾಗಿದೆ. "ಗಂಗಾ ಸ್ನಾನಂ ತುಂಗಾ ಪಾನಂ" ಎಂದು ಹೇಳುವಂತೆ ಮಿಂದಾಗ ಸರ್ವ ಪಾಪಗಳನ್ನು ನಾಶ ಮಾಡುವ ಗಂಗಾ ಮಹಾನದಿಯ ಉಗಮ ಸ್ಥಳ ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ ಗಂಗೋತ್ರಿ.

ಗಂಗಾ ದೇವಿಗೆ ಮುಡಿಪಾದ ಅತಿ ಪ್ರಸಿದ್ಧ ದೇವಾಲಯವಿರುವ ಗಂಗೋತ್ರಿ, ಹಿಂದೂಗಳ ಪಾಲಿಗೆ ಪವಿತ್ರವಾಗಿರುವ ಚಿಕ್ಕ ನಾಲ್ಕು ಯಾತ್ರಾ ಧಾಮಗಳ ಪೈಕಿ ಒಂದಾಗಿದೆ. ಸಮುದ್ರ ಮಟ್ಟದಿಂದ 3048 ಮೀ ಗಳಷ್ಟು ಎತ್ತರದಲ್ಲಿರುವ ಈ ಕ್ಷೇತ್ರವು ಭಾಗೀರಥಿ ನದಿಯ ದಂಡೆಯ ಮೇಲೆ ನೆಲೆಸಿದ್ದು ಗಂಗೆಯ ಉಗಮ ಸ್ಥಾನವಾಗಿದೆ.

ಪ್ರಸ್ತುತ ಲೇಖನದ ಮೂಲಕ, ಗಂಗೋತ್ರಿಯ ಪವಿತ್ರ ಪ್ರವಾಸ ನಾವು ಮಾಡೋಣವೆ?

ಗಂಗೋತ್ರಿ:

ಗಂಗೋತ್ರಿ:

ಭಾಗೀರಥಿ ನದಿಯ ಉಗಮ ಸ್ಥಾನವಾದ ಗೌಮುಖ (ಗೋಮುಖ) ಹಿಮನದಿಯು ಗಂಗೋತ್ರಿಯಿಂದ ಕೇವಲ 18 ಕಿ.ಮೀ ದೂರದಲ್ಲಿದ್ದು, ನಡಿಗೆಯಿಂದ ಮಾತ್ರವೆ ಇಲ್ಲಿ ತಲುಪಬಹುದಾಗಿದೆ.

ಚಿತ್ರಕೃಪೆ: envybalki

ಗಂಗೋತ್ರಿ:

ಗಂಗೋತ್ರಿ:

ಪ್ರಸ್ತುತ, ಗಂಗೋತ್ರಿಯಲ್ಲಿರುವ ಗಂಗೆಯ ಅತಿ ಪ್ರಸಿದ್ಧವಾದ ದೇವಾಲಯವನ್ನು ಮೂಲವಾಗಿ 18 ನೇಯ ಶತಮಾನದಲ್ಲಿ ಗೋರ್ಖಾ ಜನರಲ್ ಆಗಿದ್ದ ಅಮರ ಸಿಂಗ್ ಥಾಪಾ ಎಂಬುವವರು ಕಟ್ಟಿಸಿದ್ದಾರೆ.

ಚಿತ್ರಕೃಪೆ: Atarax42

ಗಂಗೋತ್ರಿ:

ಗಂಗೋತ್ರಿ:

ಗಂಗೋತ್ರಿಯ ಪರಿಸರವು ಸಾಕಷ್ಟು ತಂಪುಮಯವಾಗಿದ್ದು, ಮನಮೋಹಕವಾದ ವಾತಾವರಣದ ನೋಟವನ್ನು ಕಲ್ಪಿಸುತ್ತದೆ. ಅಲ್ಲದೆ ಭಾಗೀರಥಿ ನದಿಯ ರಭಸವಾದ ಹರಿವು ಮೈಮನಗಳಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ.

ಚಿತ್ರಕೃಪೆ: envybalki

ಗಂಗೋತ್ರಿ:

ಗಂಗೋತ್ರಿ:

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾಗೀರಥಿ ಹಾಗೂ ಗಂಗೆಯು ಒಂದೆ ನದಿಯಾಗಿದೆ. ಗೌಮುಖದಲ್ಲಿ ಉದ್ಭವಗೊಳ್ಳುವ ನದಿಯು ಭಾಗೀರಥಿ ಎಂಬ ಹೆಸರನ್ನು ಹೊಂದಿದ್ದು, ದೇವಪ್ರಯಾಗ್ ನಂತರದಿಂದ ಗಂಗೆಯಾಗಿ ಹರಿಯುತ್ತಾಳೆ.

ಚಿತ್ರಕೃಪೆ: Atarax42

ಗಂಗೋತ್ರಿ:

ಗಂಗೋತ್ರಿ:

ಗಂಗೋತ್ರಿಯಲ್ಲಿ ನೀರಿನಲ್ಲಿ ಮುಳುಗಿದ ಕಲ್ಲಿನ ಶಿವಲಿಂಗವೊಂದನ್ನು ಕಾಣಬಹುದಾಗಿದೆ (ಚಳಿಗಾಲ ಬರುವ ಸಂದರ್ಭದಲ್ಲಿ, ಏಕೆಂದರೆ ಈ ಸಮಯದಲ್ಲಿ ಅಷ್ಟೊಂದಾಗಿ ನೀರು ಇರುವುದಿಲ್ಲ). ದಂತ ಕಥೆಯ ಪ್ರಕಾರ, ಈ ಒಂದು ಸ್ಥಳದಲ್ಲೆ ಗಂಗೆಯು ಸ್ವರ್ಗ ಲೋಕದಿಂದ ಶಿವನ ಜಟೆಯ ಮೂಲಕ ಭೂಲೋಕಕ್ಕೆ ಪ್ರವೇಶಿಸಿದ್ದು. ಚಿತ್ರದಲ್ಲಿರುವುದು ಭಾಗೀರಥಿ ಹಾಗೂ ಅಲಕ್ನಂದಾ ನದಿಗಳ ಸಂಗಮ ದೇವಪ್ರಯಾಗ್ ನಲ್ಲಿ. ಇಲ್ಲಿಂದಲೆ ಮುಂದೆ ಗಂಗೆಯಾಗಿ ಈ ನದಿಯು ಹರಿಯುತ್ತದೆ.

ಚಿತ್ರಕೃಪೆ: Wilson44691

ಗಂಗೋತ್ರಿ:

ಗಂಗೋತ್ರಿ:

ಸಾಮಾನ್ಯವಾಗಿ ಗಂಗೋತ್ರಿಯು ಮೇ ತಿಂಗಳಿನಿಂದ ದೀಪಾವಳಿ ಹಬ್ಬದ ಸಂದರ್ಭದವರೆಗೆ ದರುಶನಾರ್ಥ ಮುಕ್ತವಾಗಿರುತ್ತದೆ. ನಂತರದಲ್ಲಿ ಈ ಪ್ರದೇಶದಲ್ಲಿ ಅತಿಯಾದ ಹಿಮಪಾತವಾಗುವುದರಿಂದ ಇದು ಮುಚ್ಚಲ್ಪಡುತ್ತದೆ.

ಚಿತ್ರಕೃಪೆ: envybalki

ಗಂಗೋತ್ರಿ:

ಗಂಗೋತ್ರಿ:

ಭಾಗೀರಥಿ ನದಿಯ ಉಗಮ ಸ್ಥಾನವಾದ ಗೌಮುಖ ಹಿಮನದಿ (ಗ್ಲೇಸಿಯರ್) ಯು ಗಂಗೋತ್ರಿಯಿಂದ 18 ಕಿ.ಮೀ ದೂರದಲ್ಲಿದೆ. ಗೋವು (ಆಕಳು) ಹಾಗೂ ಮುಖ ಎಂಬ್ ಪದಗಳ ಜೋಡಣೆಯಿಂದ ಇದಕ್ಕೆ ಗೋಮುಖ/ಗೌಮುಖ ಎಂಬ ಹೆಸರು ಬಂದಿದೆ. ಈ ಹಿಮನದಿಯನ್ನು ಅತಿ ಸೂಕ್ಷ್ಮವಾಗಿ ಗಮನಿಸಿದಾಗ ಇದು ಆಕಳು ಮುಖದ ಆಕಾರದಲ್ಲಿರುವುದು ಕಂಡುಬರುತ್ತದೆ. ಅಂತೆಯೆ ಇದಕ್ಕೆ ಈ ಹೆಸರು ಬಂದಿದೆ. ಚಿತ್ರದಲ್ಲಿರುವುದು ಗೋಮುಖ/ಗೌಮುಖ, ಭಾಗೀರಥಿಯ ಉಗಮ ಸ್ಥಾನ.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ಮತ್ತೊಂದು ಅಂಶವೆಂದರೆ ಗೌಮುಖ ಹಿಮ ನದಿಯು ಭಾರತದ ಎರಡನೇಯ ಅತಿ ದೊಡ್ಡ ಹಿಮನದಿಯಾಗಿದೆ. ಮೊದಲನೇಯದು ಸಿಯಾಚಿನ್. ಈ ಹಿಮನದಿಯ ಒಟ್ಟು ಉದ್ದ 30 ಕಿಮೀ ಆಗಿದ್ದು ಅಗಲವು 3 ರಿಂದ 4 ಕಿ.ಮೀ. ಗಳಷ್ಟು.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ಗಂಗೋತ್ರಿಯಿಂದ ಗೌಮುಖದವರೆಗೆ ಟ್ರೆಕ್ ಮಾಡಬೇಕಾಗಿದ್ದು, ಅತಿ ರೋಮಾಂಚಕರ ಎನ್ನಬಹುದಾದ ಅನುಭೂತಿ ಈ ಟ್ರೆಕ್ ಕಲ್ಪಿಸುತ್ತದೆ. ಆದರೆ ಗಮನದಲ್ಲಿರಲಿ ಈ ಟ್ರೆಕ್ ಕಲ್ಲು ಬಂಡೆಗಳ ಮೂಲಕ ಸಾಗಿ ಹೋಗುತ್ತದೆ ಅಲ್ಲದೆ ವಾತಾವರಣವೂ ತಂಪುಮಯವಾಗಿರುತ್ತದೆ. ಅಲ್ಲಲ್ಲಿ ನೀರಿನ ಹರಿವುಗಳಿದ್ದು ಚಿಕ್ಕ ಪುಟ್ಟ ಕಟ್ಟಿಗೆಯ ಸೇತುವೆಗಳ ಮೂಲಕ ಸಾಗಬೇಕಾಗುತ್ತದೆ.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ಟ್ರೆಕ್ ಭೋಜಬಾಸಾ ಎಂಬ್ ಸ್ಥಳದ ಮೂಲಕ ಸಾಗುತ್ತದೆ. ಇಲ್ಲಿ ಪ್ರಕೃತಿಯ ಅನಂತ ವೈಭವದ ನೋಟವನ್ನು ಸವಿಯಬಹುದು. ಅಲ್ಲದೆ ಇಲ್ಲಿ ಪ್ರವಾಸಿ ಗೃಹವೂ ಕೂಡ ದೊರೆಯುತ್ತದೆ.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ಗೌಮುಖ ಹಿಮನದಿಯು ಸಮುದ್ರ ಮಟ್ಟದಿಂದ ಸುಮಾರು 3848 ಮೀ ಗಳಷ್ಟು ಅಗಾಧವಾದ ಎತ್ತರದಲ್ಲಿ ನೆಲೆಸಿದ್ದು ಇಲ್ಲಿಗೆ ಸಾಗುವಾಗ ಹಿಮಾಲಯದ ಅತಿ ರೋಮಾಂಚನಕಾರಿ ಶಿಖರಗಳ ಸುಂದರ ದರುಶನ ಪಡೆಯುತ್ತ ಸಾಗಬಹುದು.

ಚಿತ್ರಕೃಪೆ: envybalki

ಗಂಗೋತ್ರಿ:

ಗಂಗೋತ್ರಿ:

ಶಿವಲಿಂಗ, ಥಲಯಸಾಗರ, ಮೇರು ಪರ್ವತ, ಭಾಗೀರಥಿ 3 ಮೂಮ್ತಾದ ಹಿಮಾಲಯ ಪರ್ವತ ಶ್ರೇಣಿಯ ಅದ್ಭುತ ಶೃಂಗಗಳನ್ನು ಗೌಮುಖಕ್ಕೆ ಟ್ರೆಕ್ ಮೂಲಕ ಸಾಗುವಾಗ ಕಾಣಬಹುದಾಗಿದೆ. ಪ್ರಸ್ತುತ ಗೌಮುಖ ಹಿಮನದಿಯ ಕರಗುವಿಕೆ ಶೀಘ್ರಗೊಳ್ಳುತ್ತಿದ್ದು ಉತ್ತರಾಖಂಡ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರತಿ ದಿನ ಕೇವಲ 100 ಜನರು ಮಾತ್ರ ಟ್ರೆಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ಇನ್ನು ಗೌಮುಖದ ಕುರಿತು ಹೇಳಬೇಕೆಂದರೆ ಇದರ ಹೆಸರನ್ನು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೆ ಹಿಂದೂಗಳ ಪಾಲಿಗೆ ಪವಿತ್ರವಾಗಿರುವ, ಕಾಮಧೇನು ಎಂದು ಕರೆಯಲಾಗುವ ಗೋವಿನ ಮುಖದ ಆಕಾರದಲ್ಲಿ ಈ ಹಿಮನದಿಯಿರುವುದರಿಂದ ವಿಶೇಷವಾದ ಮಹತ್ವವನ್ನು ಈ ಸ್ಥಳ ಪಡೆದಿದೆ.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ಗಂಗೋತ್ರಿಯಿಂದ 234 ಕಿ.ಮೀ ದೂರದಲ್ಲಿರುವ ರಿಶಿಕೇಶ್, ಗಂಗೋತ್ರಿಗೆ ತೆರಳಬೇಕೆಂದರೆ ಹತ್ತಿರದಲ್ಲಿರುವ ರೈಲು ನಿಲ್ದಾಣ. ರಿಶಿಕೇಶ್ ನಿಂದ ಬಸ್ಸುಗಳು, ಬಾಡಿಗೆ ಟ್ಯಾಕ್ಸಿಗಳು ಗಂಗೋತ್ರಿಗೆ ಲಭ್ಯವಿದೆ. ಅಲ್ಲದೆ ರಿಶಿಕೇಶ್ ಭಾರತದ ಹಲವು ಪ್ರಮುಖ ನಗರಗಳೊಂದಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ.

ಚಿತ್ರಕೃಪೆ: Amir Jacobi

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: yogasanft

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: Girish Sharma

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: Girish Sharma

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: Bappaditya Dasgupta

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು.

ಚಿತ್ರಕೃಪೆ: Barry Silver

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು. ಗಂಗೋತ್ರಿಯ ಹಿಮ ಬೆಟ್ಟಗಳು ಸಂಜೆಯ ವೇಳೆಯಲ್ಲಿ.

ಚಿತ್ರಕೃಪೆ: Debabrata Ghosh

ಗಂಗೋತ್ರಿ:

ಗಂಗೋತ್ರಿ:

ನಿಮ್ಮನ್ನು ಬೆರಗುಗೊಳಿಸುವಂತಹ ಗಂಗೋತ್ರಿಯ ಕೆಲವು ಚಿತ್ರಗಳು. ಗಂಗೋತ್ರಿ ದೇವಾಲಯ.

ಚಿತ್ರಕೃಪೆ: Vijayakumarblathur

ಗಂಗೋತ್ರಿ:

ಗಂಗೋತ್ರಿ:

ಗಂಗೋತ್ರಿಗೆ ಹೋಗುವ ದಾರಿಯಲ್ಲಿ ಸಿಗುವ ಹರ್ಸಿಲ್ ಎಂಬ ಮನಮೋಹಕ ಪ್ರಕೃತಿ ನೋಟವುಳ್ಳ ಹಳ್ಳಿ.

ಚಿತ್ರಕೃಪೆ: Debrupm

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X