Search
  • Follow NativePlanet
Share
» »2022 ರ ಗಣೇಶ ಚತುರ್ಥಿಯ ಅಂಗವಾಗಿ: ಮುಂಬೈಯಲ್ಲಿ ಗಣೇಶ ವಿಸರ್ಜನೆ ನಡೆಯುವ ಅಗ್ರ 3 ಸ್ಥಳಗಳು

2022 ರ ಗಣೇಶ ಚತುರ್ಥಿಯ ಅಂಗವಾಗಿ: ಮುಂಬೈಯಲ್ಲಿ ಗಣೇಶ ವಿಸರ್ಜನೆ ನಡೆಯುವ ಅಗ್ರ 3 ಸ್ಥಳಗಳು

ಗಣೇಶ ಚತುರ್ಥಿಯು ಹಿಂದುಗಳಿಗೆ ಅತ್ಯಂತ ಮಹತ್ವವಾದ ಧಾರ್ಮಿಕ ಹಬ್ಬಗಳಲ್ಲೊಂದಾಗಿದ್ದು ಈ ಹಬ್ಬವನ್ನು ವಿನಾಯಕ ಚತುರ್ಥಿ ಎಂದೂ ಕರೆಯಲಾಗುತ್ತದೆ. ಗಣೇಶನನ್ನು ಪೂಜಿಸುವ ಈ ಹಬ್ಬವನ್ನು ನಾನಾ ಕಡೆಗಳಲ್ಲಿ ವಿವಿಧ ರೀತಿಗಳಿಂದ ಆಚರಿಸಲಾಗುತ್ತಿದ್ದು, ಗಣೇಶನನ್ನು ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳನ್ನು ನಿವಾರಿಸುವ ವಿಘ್ನವಿನಾಶಕ ಎಂದು ನಂಬುತ್ತಾರೆ.

ಗಣೇಶ ಚತುರ್ಥಿಯ ಆಚರಣೆಯು ಭಾದ್ರಪದ ಮಾಸದಲ್ಲಿ (ಆಗಸ್ಟ್-ಸೆಪ್ಟೆಂಬರ್) ಶುಕ್ಲ ಚತುರ್ಥಿಯ ಶುಭ ದಿನದಂದು ಪ್ರಾರಂಭವಾಗುತ್ತದೆ, ಇದು ಭಾದ್ರಪದ ಶುಕ್ಲ ಪಕ್ಷದನ ನಾಲ್ಕನೆ ದಿನ ಆಚರಿಸುವ ಹಬ್ಬವಾಗಿದ್ದು ಈ ಹಬ್ಬಕ್ಕೆ ಸಂಬಂಧಿಸಿದ ಹಲವಾರು ಪೂಜೆಗಳು ಮತ್ತು ಪದ್ದತಿಗಳನ್ನು ಕಾಣಬಹುದಾಗಿದೆ. ಆಚರಣೆಗಳು ಶುಕ್ಲಪಕ್ಷದ ಅವಧಿಯ 14 ನೇ ದಿನದಂದು ಕೊನೆಗೊಳ್ಳುತ್ತವೆ.

ಭಕ್ತರು ಮಣ್ಣಿನಿಂದ ಮಾಡಿದ ಗಣೇಶನನ್ನು ಖರೀದಿಸಿ ತಮ್ಮ ಮನೆಗಳಲ್ಲಿ ಅಥವಾ ಸಾರ್ವಜನಿಕ ಪೆಂಡಾಲ್ ಗಳಲ್ಲಿ ಪೂಜೆ ಮಾಡುತ್ತಾರೆ. ಅನಂತ ಚತುರ್ದಶಿಯ ದಿನದಂದು ವಿಗ್ರಹಗಳನ್ನು ಸರೋವರ ಅಥವಾ ಕೊಳದಲ್ಲಿ ಮುಳುಗಿಸುವ ಮೂಲಕ 10 ದಿನಗಳ ಪೂಜೆ ಕೊನೆಗೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ಗಣೇಶ ವಿಸರ್ಜನೆ ಎಂದು ಕರೆಯಲಾಗುತ್ತದೆ.

ಮುಂಬೈ ನಲ್ಲಿ ಗಣೇಶ ವಿಸರ್ಜನೆ ನಡೆಸಲಾಗುವ ಪ್ರಮುಖ 3 ಸ್ಥಳಗಳನ್ನು ನೋಡೋಣ

ಗಿರ್ಗಾಂವ್ ಚೌಪಟಿಯಿಂದ ಒಂದು ದೃಶ್ಯ

ಗಿರ್ಗಾಂವ್ ಚೌಪಾಟಿ

ಗಿರ್ಗಾಂವ್ ಚೌಪಾಟಿ

ಗಿರ್ಗಾಂವ್ ಚೌಪಾಟಿಯು ದಕ್ಷಿಣ ಮುಂಬೈನ್ ಒಂದು ಜನಪ್ರಿಯ ಬೀಚ್ ಆಗಿದ್ದು, ಮೆರೈನ್ ಡ್ರೈವ್ ಗೆ ಹತ್ತಿರದಲ್ಲಿದೆ. ಗಣೇಶ ವಿಸರ್ಜನೆಗೆ ಅತ್ಯಂತ ಪ್ರಮುಖ ಸ್ಥಳವಾಗಿರುವ ಇಲ್ಲಿಗೆ ಭಕ್ತರು ಮುಂಬೈ ಮತ್ತು ಪೂನಾದಿಂದ ಗಣೇಶನ ಪ್ರತಿಮೆಯನ್ನು ಅರಬ್ಬೀ ಸಮುದ್ರದಲ್ಲಿ ವಿಸರ್ಜನೆ ಮಾಡಲು ಬರುತ್ತಾರೆ.

ಗಿರ್ಗಾಂವ್ ಚೌಪಾಟಿಯಲ್ಲಿ ಗಣೇಶ ವಿಸರ್ಜನೆ

ಗಿರ್ಗಾಂವ್ ಚೌಪಾಟಿಯಲ್ಲಿ ಗಣೇಶ ವಿಸರ್ಜನೆ

ಬೀಚ್ ಕಡೆಗೆ ಮೆರವಣಿಗೆಗಳು ಮುಂಜಾನೆಯಿಂದಲೇ ಪ್ರಾರಂಭವಾಗುತ್ತವೆ. ಸಮುದ್ರದ ನೀರಿನಲ್ಲಿ ವಿಗ್ರಹಗಳನ್ನು ವಿಸರ್ಜನೆ ಮಾಡಲು ತಮ್ಮ ಸರದಿಯಲ್ಲಿ ಹಿಡಿದು ನಿಂತಿರುವ ಭಕ್ತರಿಂದ ಬೀದಿಗಳು ತುಂಬಿ ತುಳುಕುತ್ತಿರುತ್ತವೆ. ಮೆರವಣಿಗೆಯ ಭಾಗವಾಗಿ ನೀವು ನೃತ್ಯ, ಪಟಾಕಿ ಸಿಡಿಸುವಿಕೆ ಮತ್ತು ಸಂಗೀತವನ್ನು ವೀಕ್ಷಿಸಬಹುದು.

ಪೋವೈ ಸರೋವರ

ಪೋವೈ ಸರೋವರ

ಮುಂಬೈನ ಉಪನಗರದಲ್ಲಿರುವ ಪೊವೈ ಸರೋವರವು ಗಣೇಶ ವಿಸರ್ಜನೆ ನಡೆಯುವ ಮತ್ತೊಂದು ಪ್ರಸಿದ್ಧ ಸ್ಥಳವಾಗಿದೆ. ಗಿರ್ಗಾಂವ್ ಚೌಪಟಿಗೆ ಹೋಲಿಸಿದರೆ ಈ ಸ್ಥಳವು ಕಡಿಮೆ ಜನಸಂದಣಿಯನ್ನು ಹೊಂದಿದೆ, ಆದರೆ ಇಲ್ಲಿ ನಡೆಯುವ ಹಬ್ಬಗಳು ನಗರದ ಯಾವುದೇ ಸ್ಥಳಕ್ಕಿಂತಲೂ ಕಡಿಮೆಯಿಲ್ಲ. ಭಕ್ತರು ಕೆರೆಯ ಜೇಡಿಮಣ್ಣಿನಿಂದ ವಿಗ್ರಹಗಳನ್ನು ತಯಾರಿಸಿ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸುತ್ತಾರೆ.

ಜುಹು ಬೀಚ್

ಜುಹು ಬೀಚ್

ಈ ಸ್ಥಳವು ಹಬ್ಬಗಳ ಆಚರಣೆಗಳಿಗಾಗಿ ಜನಪ್ರಿಯವಾಗಿದೆ. ಮುಂಬೈನ ಜುಹು ಬೀಚ್ ಇಲ್ಲಿ ನಡೆಯುವ ಗಣೇಶ ಚತುರ್ಥಿ 2022 ರಲ್ಲಿಯೂ ಕೂಡಾ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೊಡ್ಡ ವರ್ಣರಂಜಿತ ಗಣೇಶನ ಮೂರ್ತಿಗಳನ್ನು ಭಕ್ತರು ಕಡಲತೀರಕ್ಕೆ ತರುತ್ತಾರೆ, ನಂತರ ಇಡೀ ಮೆರವಣಿಗೆಯನ್ನು ವೀಕ್ಷಿಸಲು ಜನಸಮೂಹವು ಕಿಕ್ಕಿರಿದು ಸೇರುತ್ತದೆ. ಈ ದೃಶ್ಯಗಳು ಸಂಗೀತ ಮತ್ತು ಇತರ ಹಬ್ಬಗಳು ಈ ಸ್ಥಳಕ್ಕೆ ರೋಮಾಂಚಕ ಸೆಳವು ನೀಡುತ್ತವೆ.

ಎಲ್ಲರಿಗೂ ಗಣೇಶ ಹಬ್ಬದ ಶುಭಾಷಯಗಳು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X