• Follow NativePlanet
Share
» »ಗಂಡಿ ಕೋಟೆಯ ರಹಸ್ಯ

ಗಂಡಿ ಕೋಟೆಯ ರಹಸ್ಯ

Written By:

ಇಲ್ಲಿನ ಪ್ರದೇಶದಲ್ಲಿ ಚಿಕ್ಕ ಕಳ್ಳತನ ಮಾಡಿದರೂ ಕೂಡ ಕೈ ಅಥವಾ ಕಾಲು ಕತ್ತರಿಸುತ್ತಿದ್ದರಂತೆ.

ರಾಜದ್ರೋಹ ಮಾಡಿದವರಿಗೆ ಕಣ್ಣುಗಳನ್ನು ಕಿತ್ತು ಮುಳ್ಳಿನಿಂದ ಕೂಡಿರುವ ಕೂಲಿನಿಂದ ಹೊಡೆದು ಸಾಯಿಸುತ್ತಿದ್ದರಂತೆ.

ಅಸಲಿಗೆ ಇಂಥಹ ಕ್ರೂರವಾದ ಶಿಕ್ಷೆಗಳನ್ನು ವಿಧಿಸುತ್ತಿದ್ದ ಆಳ್ವಿಕೆ ಯಾರದು?

ಅಂಥಹ ಆಳ್ವಿಕೆ ಎಲ್ಲಿ ನಡೆಯುತ್ತಿತ್ತು?

ಅದೇ ಗಂಡಿ ಕೋಟೆ, ಇಂದು ನಮ್ಮ ಲೇಖನದ ಮೂಲಕ ತಿಳಿಯೋಣ.

ಅಸಲು ಗಂಡಿಕೋಟೆಯ ರಹಸ್ಯವೇನು? ಏಕೆ ಎಲ್ಲರೂ ರಹಸ್ಯ ತಾಣಗಳನ್ನು ಹೊಂದಿರುವ ತಾಣ ಎಂದು ಹೇಳುತ್ತಾರೆ?

ಗಂಡಿ ಕೋಟೆ ರಹಸ್ಯ ಏನು ಎಂದು ಗೊತ್ತಾದರೆ ಷಾಕ್ ಆಗದೇ ಇರದು....

ಎಲ್ಲಿದೆ?

ಎಲ್ಲಿದೆ?

ಗಂಡಿಕೋಟೆಯು ಆಂಧ್ರ ಪ್ರದೇಶ ರಾಜ್ಯದ ವೈ.ಎಸ್,ಆರ್ ಜಿಲ್ಲೆಯ ಜಮ್ಮಲಮಡುಗು ತಾಲ್ಲೂಕಿನಲ್ಲಿ ಪೆನ್ನಾ ನದಿಗೆ ಅಡ್ಡಲಾಗಿ ಒಂದು ಚಿಕ್ಕ ಗ್ರಾಮ. ಇಲ್ಲಿನ ಕೆಂಪು ಪರ್ವತ (ಎರ್ರಮಲ ಪರ್ವತ) ಶ್ರೇಣಿಯನ್ನು ಗಂಡಿಕೋಟೆ ಇದೆ.

ಗಂಡಿ ಕೋಟೆ ಎಂಬ ಹೆಸರು ಹೇಗೆ ಬಂದಿತು?

ಗಂಡಿ ಕೋಟೆ ಎಂಬ ಹೆಸರು ಹೇಗೆ ಬಂದಿತು?

ಎರ್ರಮಲ ಪರ್ವತ ಶ್ರೇಣಿಯ ಪರ್ವತದ ಕೆಳಭಾಗದಲ್ಲಿ ಪ್ರವಹಿಸುವ ಪೆನ್ನಾ ನದಿಯ ಮಧ್ಯದಲ್ಲಿ ಏರ್ಪಟ್ಟ ಗಂಡಿ ಮೂಲವಾಗಿ ಈ ಕೋಟೆಯನ್ನು ಗಂಡಿ ಕೋಟೆ ಎಂದು ಕರೆಯುತ್ತಾರೆ.

ಬಣ್ಣಿಸಲಾಗದ ಸುಂದರವಾದ ದೃಶ್ಯಗಳು

ಬಣ್ಣಿಸಲಾಗದ ಸುಂದರವಾದ ದೃಶ್ಯಗಳು

ಇಲ್ಲಿನ ಸುಂದರವಾದ ದೃಶ್ಯವು ಬಣ್ಣಿಸಲಾಗದಂತಹ ಸೌಂದರ್ಯವನ್ನು ಹೊಂದಿರುತ್ತದೆ. ದಟ್ಟವಾದ ಅಡವಿ, ಮನೋಹರವಾಗಿ ಕಾಣಿಸುವ ಪ್ರಕೃತಿಯ ಸೊಬಗು, ಶತ್ರು ಸೈನವು ದಾಟಲಾಗದ ಎತ್ತರವಾದ ಗೋಡೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಅತ್ಯಂತ ಸುಂದರ

ಅತ್ಯಂತ ಸುಂದರ

ಸುತ್ತಲೂ ಆಳವಾದ ಪರ್ವತದಲ್ಲಿ, ಕೆಂಪು ಬಣ್ಣದ ಗ್ರಾನೈಟ್ ಶಿಲೆಗಳಿಂದ ಏರ್ಪಟ್ಟ ಅತ್ಯಂತ ಸುಂದರವಾದ ಬೆಟ್ಟಗಳು ಇಲ್ಲಿ ಇವೆ. ಸುಮಾರು 300 ಅಡಿ ಇರುವ ಶಕ್ತಿಶಾಲಿ ರಕ್ಷಣಾ ಕವಚವಾಗಿದೆ.

ಚರಿತ್ರೆ

ಚರಿತ್ರೆ

ಗಂಡಿಕೋಟೆ ಭಾರತದ ದೀಪಕಲ್ಪಗಳಲ್ಲಿ ಒಂದು ಪ್ರಮುಖವಾದ ಗಿರಿದುರ್ಗ ಎಂಬ ಪ್ರಖ್ಯಾತಿಯನ್ನು ಪಡೆದಿದೆ. ಇದರ ಚರಿತ್ರೆ 13 ನೇ ಶತಮಾನದಲ್ಲಿನ 2 ನೇ ಅರ್ಥಭಾಗದಿಂದ ಮೊದಲಾಗುತ್ತದೆ. ಈ ಕೋಟೆಯನ್ನು ಕಾಕರಾಜ 1044 ರಲ್ಲಿ ನಿರ್ಮಾಣ ಮಾಡಿದರು ಎನ್ನಲಾಗಿದೆ.

ಚಾರಿತ್ರಿಕ ಆಧಾರ

ಚಾರಿತ್ರಿಕ ಆಧಾರ

ಆದರೆ ಆತನೆ ಈ ಕೋಟೆಯನ್ನು ನಿರ್ಮಾಣ ಮಾಡಿದನು ಎಂಬುದಕ್ಕೆ ಯಾವುದೇ ಆಧಾರಗಳು ಇಲ್ಲ. 1290ದ ವರ್ಷದ ಒಂದು ಶಾಸನದ ಪ್ರಕಾರ, ಅಂಬದೇವ ಎಂಬ ಒಬ್ಬ ಕಾಯಸ್ತ ನಾಯಕನು ತನ್ನ ರಾಜಧಾನಿಯನ್ನು ವೆಲ್ಲೂರುನಿಂದ ಗಂಡಿಕೋಟೆಗೆ ಮಾರ್ಪಾಟು ಮಾಡಿದನು.

ಶಾಸನ

ಶಾಸನ

1236ರಕ್ಕೆ ಸೇರಿದ ಒಂದು ಶಾಸನದ ಪ್ರಕಾರ ಪ್ರತಾಪರುದ್ರನ ರಾಜರಲ್ಲಿ ಒಬ್ಬರು ಈ ಕೋಟೆಯನ್ನು ನಿರ್ಮಾಣ ಮಾಡಿರಬಹುದು ಎಂದು ಕೆಲವರು ಹೇಳುತ್ತಾರೆ.

ವಿಜಯ ನಗರ ಸಾಮ್ರಾಜ್ಯ

ವಿಜಯ ನಗರ ಸಾಮ್ರಾಜ್ಯ

ಗಂಡಿಕೋಟೆಯನ್ನು ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಉದಯಗಿರಿ ಪ್ರದೇಶದಲ್ಲಿನ ಒಂದು ಸ್ಥಳಕ್ಕೆ ರಾಜಧಾನಿಯಾಗಿತ್ತು.

ವಿಜಯ ನಗರದ ರಾಜರ ಸಾಮಂತರು

ವಿಜಯ ನಗರದ ರಾಜರ ಸಾಮಂತರು

16 ನೇ ಶತಮಾನದಲ್ಲಿ 2 ನೇ ಅರ್ಧಭಾಗದಲ್ಲಿ ಗಂಡಿಕೋಟೆಯನ್ನು ಪೆಮ್ಮಸಾನಿಯ ನಾಯಕರುಗಳಾದ ತಿಮ್ಮನಾಯಕ ಮತ್ತು ರಾಮಲಿಂಗನಾಯಕ ವಿಜಯ ನಗರ ರಾಜರ ಸಾಮಂತರರಾಗಿ ಆಳ್ವಿಕೆ ನಡೆಸಿದರು ಎನ್ನಲಾಗಿದೆ.

ಘನ ಚರಿತ್ರೆ

ಘನ ಚರಿತ್ರೆ

ಎಷ್ಟೊ ಘನ ಚರಿತ್ರೆ ಈ ಗಂಡಿ ಕೋಟೆಯು ಹೊಂದಿದೆ. ಹಲವಾರು ರಾಜರು, ರಾಜವಂಶರ ಪರಾಕ್ರಮಕ್ಕೆ ಪ್ರಸಿದ್ಧಿಯನ್ನು ಹೊಂದಿರುವ ಕೋಟೆ ಇದಾಗಿದೆ.

ಗಿರಿ ದುರ್ಗ

ಗಿರಿ ದುರ್ಗ

ಈ ಕೋಟೆಗೆ ಭೇಟಿ ನೀಡಿದರೆ ಆ ಕಾಲದ ರಾಜರು, ಅವರ ಯುದ್ಧಗಳು, ಅವರು ಪರಿಪಾಲನೆ ಮಾಡಿದ ರೀತಿ ಇವೆಲ್ಲಾವು ನೆನಪಾಗುತ್ತದೆ. ಜಮ್ಮಲಮಡುಗುವಿನಿಂದ ಸುಮಾರು 14 ಕಿ.ಮೀ ದೂರದಲ್ಲಿ ಇರುವ ಪೆನ್ನಾ ಎಂಬ ನದಿ ತೀರದ ಅಡ್ಡಲಾಗಿರುವ ಗಂಡಿಕೋಟೆಯನ್ನು ಗಿರಿ ದುರ್ಗ ಎಂದು ಸಹ ಕರೆಯುತ್ತಿದ್ದರು.

21 ದೇವಾಲಯಗಳು

21 ದೇವಾಲಯಗಳು

ಇದರ ಪರಿಸರ ಪ್ರಾಂತ್ಯದಲ್ಲಿ ಒಟ್ಟು 21 ದೇವಾಲಯಗಳನ್ನು ಕಾಣಬಹುದಾಗಿದೆ. ಈ ಕೋಟೆಗೆ ಭೇಟಿ ನೀಡುವವರು ಇಲ್ಲಿರುವ ಪವಿತ್ರವಾದ 21 ದೇವಾಲಯಗಳನ್ನು ಕೂಡ ಕಾಣಬಹುದಾಗಿದೆ.

ಗಂಡಿ ಕೋಟೆಯ ಶಿಕ್ಷೆಗಳು

ಗಂಡಿ ಕೋಟೆಯ ಶಿಕ್ಷೆಗಳು

ಗಂಡಿ ಕೋಟೆಯ ಚರಿತ್ರೆಗೆ ಹೋದರೆ ಯಾವುದೇ ಸಣ್ಣ ತಪ್ಪಿಗೂ ಕೂಡ ಕ್ರೂರವಾದ ಶಿಕ್ಷೆಗಳನ್ನು ನೀಡುತ್ತಿದ್ದರಂತೆ. ಚಿಕ್ಕ ದರೋಡೆಗೂ ಕೂಡ ಕೈ-ಕಾಲುಗಳು ಮತ್ತು ಕಣ್ಣುಗಳನ್ನು ತೆಗೆದು ಬಿಡುತ್ತಿದ್ದರಂತೆ. ಇಂಥಹ ಘೋರವಾದ ಶಿಕ್ಷೆಗಳನ್ನು ಗಂಡಿಕೋಟೆ ರಾಜ್ಯದಲ್ಲಿ ನೀಡುತ್ತಿದ್ದರಂತೆ.

ಕೋಟೆಯಲ್ಲಿನ ಇತರ ಆರ್ಕಷಣೆಗಳು

ಕೋಟೆಯಲ್ಲಿನ ಇತರ ಆರ್ಕಷಣೆಗಳು

ಕೋಟೆಯಲ್ಲಿನ ಸುಂದರವಾದ ಸ್ವಾಗತ ದ್ವಾರಗಳು, ಯುದ್ಧಗಳಲ್ಲಿ ಉಪಯೋಗಿಸುವ ಆಯುದ್ಧಗಳು, ಆಕಾಶದೆತ್ತರದ ಗೋಪುರಗಳು, ಜೈಲು, ರಂಗ ಮಹಾಲ್ ಇನ್ನೂ ಹಲವಾರು ಆಕರ್ಷಣಿಗಳನ್ನು ಕಾಣಬಹುದಾಗಿದೆ.

ಕತ್ತಿಯ ಕೊಳ

ಕತ್ತಿಯ ಕೊಳ

ಗಂಡಿ ಕೋಟೆಯಲ್ಲಿ ಕತ್ತಿಯ ಕೊಳವನ್ನು ಪ್ರವಾಸಿಗರು ತಪ್ಪದೇ ವೀಕ್ಷಿಸಲೇ ಬೇಕು. ಏಕೆಂದರೆ ಪೂರ್ವದಲ್ಲಿ ಯುದ್ಧ ಅಂತ್ಯವಾದ ನಂತರ ರಕ್ತಸಕ್ತವಾದ ಕತ್ತಿಗಳನ್ನು ಈ ಕೊಳದಲ್ಲಿಯೇ ತೊಳೆಯುತ್ತಿದ್ದರಂತೆ. ಹಾಗಾಗಿಯೇ ಈ ಕೊಳಕ್ಕೆ ಕತ್ತಿಯ ಕೊಳ ಎಂದು ಕರೆಯುತ್ತಾರೆ. ವಿಶೇಷವೆನೆಂದರೆ ಈ ಕೊಳವು ಕೆಂಪು ಬಣ್ಣದಾಗಿರುವುದು ವಿಶೇಷವಾಗಿದೆ.

ರೈಲು ಮಾರ್ಗ

ರೈಲು ಮಾರ್ಗ

ಗಂಡಿಕೋಟೆಗೆ ಸುಮಾರು 15 ಕಿ.ಮೀ ದೂರದಲ್ಲಿ ಜಮ್ಮಲ ಮಡಗು ರೈಲ್ವೆ ನಿಲ್ದಾಣವಿದೆ. ಇದು ಗಂಡಿಕೋಟೆಗೆ ಅತ್ಯಂತ ಸಮೀಪವಾದ ರೈಲು ಮಾರ್ಗವಾಗಿದೆ.

ರಸ್ತೆ ಮಾರ್ಗವಾಗಿ

ರಸ್ತೆ ಮಾರ್ಗವಾಗಿ

ಬೆಂಗಳೂರಿನಿಂದ ಮೊದಲು ಹೈದ್ರಾಬಾದ್‍ಗೆ ತಲುಪಬೇಕು. ಅಲ್ಲಿಂದ ತಮ್ಮ ಸ್ವಂತ ವಾಹನದ ಮೂಲಕ ತೆರಳುವವರು ಎನ್.ಎಚ್ 7 ಯಿಂದ ಕರ್ನೂಲ್‍ಗೆ ಸೇರಿಕೊಂಡು, ಅಲ್ಲಿಂದ ಬನಗಾಪಲ್ಲಿ>ಜಮ್ಮಲಮಡುಗು>ಗಂಡಿಕೋಟೆಗೆ ಸೇರಿಕೊಳ್ಳಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ