Search
  • Follow NativePlanet
Share
» »ಚೋಳರ ವೈಭವ ಸಾರುವ ಗಂಗೈಕೊಂಡ ಚೋಳಪುರಂ

ಚೋಳರ ವೈಭವ ಸಾರುವ ಗಂಗೈಕೊಂಡ ಚೋಳಪುರಂ

By Vijay

ದಕ್ಷಿಣ ಭಾರತವನ್ನು ಅತಿ ದೀರ್ಘ ಕಾಲದವರೆಗೆ ಆಳಿದ ಸಾಮ್ರಾಜ್ಯಗಳು ಬಹಳ ವಿರಳ. ಅಂತಹ ವಿರಳ ಸಾಮ್ರಾಜ್ಯದಲ್ಲಿ ಒಂದಾಗಿದೆ. ಚೋಳ ಸಾಮ್ರಾಜ್ಯ. ಇತಿಹಾಸ ಓದಿದವರಿಗೆ ಖಂಡಿತವಾಗಿಯೂ ಚೋಳರು ಎಂಬ ಹೆಸರನ್ನು ಕೇಳಿರಲೇಬೇಕು. ಇವರು ಸುಮಾರು 250 ವರ್ಷಗಳ ಕಾಲ ಸುಸೂತ್ರವಾದ ರಾಜ್ಯಾಭಾರ ಮಾಡಿದವರು.

ತುಂಗಭದ್ರಾ ನದಿಯ ಕೆಳಗಿನಿಂದ ಹಿಡಿದು ಸಂಪೂರ್ಣ ಕೇರಳ, ತಮಿಳುನಾಡು, ಶ್ರೀಲಂಕಾ, ಅಂಡಮನ್, ಕಾಂಬೋಡಿಯಾ, ಮಲೇಶಿಯಾ ಹೀಗೆ ಬಹು ದೊಡ್ಡ ಸಾಮ್ರಾಜ್ಯವನ್ನು ಆಳಿ ಅಗಾಧ ಇತಿಹಾಸ ಬಿಟ್ಟು ಹೋದವರು ತಮಿಳಿನ ಚೊಳರು. ಇವರು ಆಳುತ್ತಿದ್ದ ಸಮಯದಲ್ಲಿ ಸಂಪೂರ್ಣ ದಕ್ಷಿಣ ಭಾರತವು ಒಂದು ಸಂಘಟಿತ ರಾಜ್ಯವಾಗಿತ್ತು.

ನಿಮಗಿಷ್ಟವಾಗಬಹುದಾದ : ರೋಮಾಂಚನಗೊಳಿಸುವ ಬೃಹದೇಶ್ವರ ದೇವಸ್ಥಾನ

ಚೋಳರು ಮೂಲತಃ ವೀರ ಯೋಧರಾಗಿದ್ದರೂ ಸಹ ಅತ್ಯುನ್ನತ ನಿರ್ಮಾಣಗಳ ನಿರ್ಮಾತೃಗಳು. ಶಿವನನ್ನು ಮುಖ್ಯವಾಗಿ ಆರಾಧಿಸುತ್ತಿದ್ದ ಇವರು ತಮ್ಮ ಗುರುತಿನ ಅಂಗವಾಗಿ ತಮ್ಮದೆ ಆದ ವಿಶಿಷ್ಟ ವಾಸ್ತುಶೈಲಿಯ ಶಿಲ್ಪ ಕಲೆಗಳಿಗಾಗಿ ಪ್ರಖ್ಯಾತರಾದವರು. ಇಂದಿಗೂ ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲೂ ಚೋಳರ ಕಾಲದಲ್ಲಿ ನಿರ್ಮಾಣವಾದ ದೇವಾಲಯ, ದೇಗುಲಗಳನ್ನು ಕಾನಬಹುದು.

ಇವರು ಕಾವೇರಿ ನದಿ ತಟದಲ್ಲಿ ನೆಲೆಸಿದ್ದ ಒಂದು ಫಲವತ್ತಾದ ನೆಲೆಯಲ್ಲಿ ವಾಸಿಸುತ್ತಿದ್ದರು. ಇದನ್ನು ತಮ್ಮ ರಾಜಧಾನಿಯನ್ನಾಗಿಸಿಕೊಂಡಿದ್ದರು. ಹೇಗೆ ಕರ್ನಾಟಕದ ಹಂಪಿಯಲ್ಲಿ ಕಂಡುಬರುವ ವಿಜಯನಗರ ಸಾಮ್ರಾಜ್ಯದ ವೈಭವತೆಯನ್ನು ಕಾಣಬಹುದೋ ಇಲ್ಲಿಯೂ ಸಹ ಚೋಳರ ವೈಭವವನ್ನು ನೋಡಬಹುದು. ಹೌದು, ಆ ತಾಣವೆ ಗಂಗೈಕೊಂಡ ಚೋಳಪುರಂ.

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ಈ ಅದ್ಭುತ ಸಾಮ್ರಾಜ್ಯವಾದ ಗಂಗೈಕೊಂಡ ಚೋಳಪುರಂ ಇಂದು ತಮಿಳುನಾಡಿನ ಅರಿಯಲೂರು ಜಿಲ್ಲೆಯಲ್ಲಿ ಬರುತ್ತದೆ. ಇಲ್ಲಿನ ಶಿವ ದೇವಾಲಯವು ಆಕಾರದಲ್ಲಿ ತಂಜಾವೂರಿನ ಬೃಹದೇಶ್ವರ ದೇವಾಲಯದ ನಂತದಲ್ಲಿದ್ದರೆ ಶಿಲ್ಪಕಲೆಯಲ್ಲಿ ಅದಕ್ಕಿಂತಲೂ ಮಂಚುಣಿಯಲ್ಲಿದೆ.

ಚಿತ್ರಕೃಪೆ: Nithi Anand

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ಪಾಲ ಸಾಮ್ರಾಜ್ಯವನ್ನು ಬಗ್ಗು ಬಡಿದ ರಾಜೇಂದ್ರ ಚೋಳನು ತನ್ನ ಗೆಲುವಿನ ನೆನಪಿನ ಗುರುತಾಗಿ ಈ ಅದ್ಭುತ ಸಾಮ್ರಾಜ್ಯವನ್ನು ಸ್ಥಾಪಿಸಿದನು.

ಚಿತ್ರಕೃಪೆ: Kasiarunachalam

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ಗಂಗೆಯನ್ನು ವಶಪಡಿಸಿಕೊಂಡ ಚೋಳರ ಪಟ್ಟಣ ಎಂಬರ್ಥ ನೀಡುವ ಗಂಗೈಕೊಂಡ ಚೋಳಪುರಂ ಅನ್ನು ಒಂದನೇಯ ರಾಜೇಂದ್ರ ಚೋಳ ಉತ್ತರ ಭಾರತದಲ್ಲಿ ಗಂಗಾ ನದಿ ತಟದ ರಾಜ್ಯವೊಂದನ್ನು ಗೆದ್ದ ತರುವಾಯ ಇದನ್ನು ನಿರ್ಮಿಸಿ ಆ ರೀತಿ ಹೆಸರಿಸಿದನು.

ಚಿತ್ರಕೃಪೆ: Simbubemba

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ಈ ವಿಜಯದಿಂದ ರಾಜೆಂದ್ರ ಚೋಳನು ಗಂಗೈಕೊಂಡ ಚೋಳನ್ ಎಂಬ ಬಿರುದನ್ನು ಪಡೆದನು ಹಾಗೂ ಅದರಿಂದ ಸಂತಸಗೊಂಡು ಈ ರಾಜ್ಯಕ್ಕೆ ಗಂಗೈಕೊಂಡ ಚೋಳಪುರಂ ಎಂಬ ಹೆಸರನ್ನಿಟ್ಟನು.

ಚಿತ್ರಕೃಪೆ: Nithi Anand

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ತಂಜಾವೂರಿನ ಪ್ರಖ್ಯಾತ ಬೃಹದೇಶ್ವರನ ದೇವಾಲಯ ನಿರ್ಮಿಸಿದ್ದ ರಾಜ ರಾಜ ಚೋಳನ ಮಗನಾದ ಒಂದನೇಯ ರಾಜೇಂದ್ರ ಚೋಳ ಗಂಗಾ ನದಿ ತಟದ ಪಾಲರನ್ನು ಗೆದ್ದ ನಂತರ ತಂದೆಯು ನಿರ್ಮಿಸಿದ ಹಾಗೆಯೆ ಈ ದೇವಾಲಯ ನಿರ್ಮಾಣ ಮಾಡಿದ ಹಾಗೂ ಈ ರಾಜ್ಯವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ.

ಚಿತ್ರಕೃಪೆ: KARTY JazZ

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ಇಂದು ಗಂಗೈಕೊಂಡ ಚೋಳಪುರಂ ಶಿವನ ಅದ್ಭುತ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ. ಮೂರಂತಸ್ತಿನ ಈ ದೇವಾಲಯವು ತಾಂತ್ರಿಕವಾಗಿ ಹಾಗೂ ಶಿಲ್ಪಕಲೆಯ ದೃಷ್ಟಿಯಿಂದ ಅತ್ಯಂತ ಉತ್ಕೃಷ್ಟವಾಗಿದ್ದು ಅಂತಾರಾಷ್ಟ್ರೀಯ ಮಟ್ಟದ ವಾಸ್ತುಶಿಲ್ಪಗಾರರನ್ನೂ ಸಹ ಆಕರ್ಷಿಸುತ್ತದೆ.

ಚಿತ್ರಕೃಪೆ: KARTY JazZ

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ತಂಜಾವೂರಿನಂತೆಯೆ ಇಲ್ಲಿರುವ ಬೃಹದೇಶ್ವರನ ಶಿವ ದೇವಾಲಯವು ಅತ್ಯದ್ಭುತ ದ್ರಾವಿಡ ಶೈಲಿಯ ಶಿಲ್ಪಕಲೆಯಿಂದ ಕೂಡಿದ್ದು, ಇದರ ನಿರ್ಮಾಣವನ್ನು ಕ್ರಿ.ಶ. 1035 ರಲ್ಲಿ ಪೂರ್ಣಗೊಳಿಸಲಾಯಿತು. ಇಂದು ಈ ದೇವಾಲಯವು ತಮಿಳುನಾಡಿನಲ್ಲಿ ಅತಿ ಹೆಚ್ಚು ಭೆಟಿ ನೀಡಲ್ಪಡುವ ತಾಣಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: KARTY JazZ

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ಪ್ರಸ್ತುತ ದೇವಾಲಯವು ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12:30 ರವರೆಗೆ ಹಾಗೂ ಸಂಜೆ 4:30 ರಿಂದ 8:00 ರವರೆಗೆ ತೆರೆದಿರುತ್ತದೆ ಹಾಗೂ ದಿನಕ್ಕೆ ನಾಲ್ಕು ಬಾರಿ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ.

ಚಿತ್ರಕೃಪೆ: Thamizhpparithi Maari

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ಅಲ್ಲದೆ ವಾರ್ಷಿಕವಾಗಿ ವಿವಿಧ ಉತ್ಸವಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ತಮಿಳು ತಿಂಗಳಾದ ಮಾಸಿ (ಫೆಬ್ರುವರಿ-ಮಾರ್ಚ್), ಐಪಾಸಿ (ಅಕ್ಟೋಬರ್-ನವಂಬರ್) ಹಾಗೂ ಮರ್ಗಾಳಿ (ಡಿಸೆಂಬರ್-ಜನವರಿ)ಗಳಲ್ಲಿ ನಡೆಯುವ ಶಿವರಾತ್ರಿ ಉತ್ಸವವು ಬಲು ಪ್ರಮುಖವಾಗಿ ಆಚರಿಸಲ್ಪಡುತ್ತವೆ.

ಚಿತ್ರಕೃಪೆ: Nagarjun Kandukuru

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ಇನ್ನೂ ದೇವಾಲಯದ ಶಿಲ್ಪಕಲೆಯ ಕುರಿತು ವರ್ಣಿಸುವುದು ತುಸು ಕಷ್ಟವೆ. ಎಕೆಂದರೆ ಅಷ್ಟೊಂದು ಅದ್ಭುತವಾಗಿ ಕೆತ್ತಲಾದ ಕಲೆಯನ್ನು ಇಲ್ಲಿ ಕಾಣಬಹುದು. 560 ಅಡಿ ಅಗಲ, 320 ಅಡಿ ಉದ್ದದ ಕಟ್ಟೆಯೊಂದರ ಮೇಲೆ ಶಿವಲಿಂಗವಿರುವ ಬೃಹದೇಶ್ವರನ ದೇವಾಲಯವನ್ನು ನಿರ್ಮಿಸಲಾಗಿದೆ. ಗೋಪುರವು 180 ಅಡಿಗಳಷ್ಟು ಎತ್ತರ ಹೊಂದಿದೆ.

ಚಿತ್ರಕೃಪೆ: simianwolverine

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ತಂಜಾವೂರಿನ ಬೃಹದೇಶ್ವರ ದೇವಾಲಯ ಗೋಪುರದ ಎತ್ತರಕ್ಕಿಂತ ಕೇವಲ ಮೂರು ಮೀ. ಗಳಷ್ಟು ಮಾತ್ರವೆ ಈ ಗೋಪುರ ಚಿಕ್ಕದಾಗಿದೆ. ತಜ್ಞರು ಹೇಳುವ ಪ್ರಕಾರ, ತಂದೆ ಹಾಗೂ ಮಗನ ಸ್ಥಾನಮಾನವನ್ನು ಸೂಚಿಸುವುದರ ಸಂಕೇತವಾಗಿ ಈ ಗೋಪುರದ ಎತ್ತರವನ್ನು ಏರಿಸಲಾಗಿಲ್ಲ. ಅಲ್ಲದೆ ತಂಜಾವೂರಿನ ದೇವಾಲಯ ಗಂಡು ಹಾಗೂ ಈ ದೇವಾಲಯ ಹೆಣ್ಣುತನವನ್ನು ಅಭಿವ್ಯಕ್ತಿಪಡಿಸುವಂತೆ ನಿರ್ಮಿಸಲಾಗಿದೆ.

ಚಿತ್ರಕೃಪೆ: Terry Presley

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ವಿವಿಧ ದೇವ ದೇವತೆಯರ ಅದ್ಭುತ ಶಿಲ್ಪ ಕಲೆಗಳನ್ನು ಬಲು ಸೂಕ್ಷ್ಮವಾಗಿ ಕೆತ್ತಲಾಗಿದ್ದು ಅಂದಿನ ಕುಶಲಕರ್ಮಿಗಳ ಜಾಣ್ಮೆ ಹಾಗೂ ನಿಪುಣತೆಯನ್ನು ಎತ್ತಿ ತೋರಿಸುತ್ತವೆ.

ಚಿತ್ರಕೃಪೆ: Ssriraman

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ಗರ್ಭಗುಡಿಯಲ್ಲಿ 13 ಅಡಿಗಳಷ್ಟು ಎತ್ತರದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದ್ದು ಇದು ಯಾವುದೆ ಶಿವ ದೇವಾಲಯದಲ್ಲಿ ಕಂಡುಬರುವ ಶಿವಲಿಂಗಕ್ಕಿಂತ ದೊಡ್ಡದೆನ್ನಲಾಗುತ್ತದೆ. ಅಲ್ಲದೆ, ಗರ್ಭಗುಡಿಯಲ್ಲಿ ವಿಶಿಷ್ಟ ಗುಣಶಕ್ತಿಯ ಚಂದ್ರಕಾಂತಾ ಎಂಬ ಶಿಲೆಯನ್ನು ಬಳಸಲಾಗಿದೆ. ಇದು ಬೇಸಿಗೆಯಲ್ಲಿ ತಮ್ಪಾಗಿಯೂ ಹಾಗೂ ಚಳಿಗಾಲದಲ್ಲಿ ಬೆಚ್ಚಗಾಗಿಯೂ ಇರುತ್ತದೆ.

ಚಿತ್ರಕೃಪೆ: Joelsuganth

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ಗರ್ಭಗುಡಿಯ ಎದುರಿಗೆ ಸುಮಾರು ಅರ್ಧಿ ಕಿ.ಮೀ ಗಿಂತಲೂ ದೂರದಲ್ಲಿ ಬೃಹತ್ ನಂದಿಯ ಪ್ರತಿಮೆಯನ್ನು ನಿರ್ಮಿಸಿ ನೆಡಲಾಗಿದೆ. ಇದನ್ನು ಯಾವ ರೀತಿ ನೆಡಲಾಗಿದೆ ಎಂದರೆ ಸೂರ್ಯ ರಷ್ಮಿಯು ಪ್ರತಿಫಲಿಸಿ ಶಿವಲಿಂಗದ ಮೇಲೆ ಬಿಳುವ ಹಾಗೆ ವಿನ್ಯಾಸಗೊಳಿಸಲಾಗಿದೆ.

ಚಿತ್ರಕೃಪೆ: KARTY JazZ

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ವೈಭವ:

ಗಂಗೈಕೊಂಡ ಚೋಳಪುರಂ ಬೆಂಗಳೂರಿನಿಂದ 385 ಕಿ.ಮೀ ದೂರವಿದ್ದು ಸೇಲಂ ಮಾರ್ಗವಾಗಿ ತೆರಳಬಹುದಾಗಿದೆ. ಸೇಲಂನಿಂದ ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಮೈಲಾಡುತುರೈಗೆ ಬೆಂಗಳೂರಿನಿಂದ ರೈಲು ಲಭ್ಯವಿದ್ದು ಅಲ್ಲಿಂದಲೂ ಸಹ ತೆರಳಬಹುದು. ಇನ್ನೂ ಚೆನ್ನೈ ಹಾಗೂ ಹತ್ತಿರದಲ್ಲಿರುವ ಕುಂಭಕೋಣಂ, ಚಿದಂಬರಂ ಹಾಗೂ ತಂಜಾವೂರಿನಿಂದಲೂ ಸಹ ಗಂಗೈಕೊಂಡಕ್ಕೆ ತೆರಳಬಹುದು.

ಚಿತ್ರಕೃಪೆ: Kasiarunachalam

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more