Search
  • Follow NativePlanet
Share
» »ಬಾವಲಿಯಂತೆ ಆಕಾಶದಲ್ಲಿ ಹಾರಾಡಬೇಕಾದರೆ ಸಖತ್ ಧೈರ್ಯ ಬೇಕು

ಬಾವಲಿಯಂತೆ ಆಕಾಶದಲ್ಲಿ ಹಾರಾಡಬೇಕಾದರೆ ಸಖತ್ ಧೈರ್ಯ ಬೇಕು

ಬಹಳಷ್ಟು ಜನರು ಈ ಫ್ಲೈಯಿಂಗ್ ಫಾಕ್ಸ್ ಬಗ್ಗೆ ಕೇಳಿರಲಿಕ್ಕಿಲ್ಲ. ಹಾರುವ ಬಾವಲಿಗೆ ಫ್ಲೈಯಿಂಗ್ ಫಾಕ್ಸ್ ಎನ್ನುತ್ತಾರೆ.

ಸಾಹಸ ಕ್ರೀಡೆಗಳಲ್ಲಿ ಎಷ್ಟೆಲ್ಲಾ ವಿಧಗಳಿವೆ, ಈ ಸಾಹಸ ಕ್ರೀಡೆಯನ್ನು ಹೆಚ್ಚಾಗಿ ಯುವಕ, ಯುವತಿಯರು ಇಷ್ಟ ಪಡುತ್ತಾರೆ. ಮಕ್ಕಳೂ ಇಷ್ಟ ಪಡುತ್ತಾರೆ. ಪ್ಯಾರ ಸೈಕ್ಲಿಂಗ್, ಬಂಗೀ ಜಂಪಿಗ್‌ನಂತಹ ಅನೇಕ ಸಾಹಸ ಕ್ರೀಡೆಗಳಲ್ಲಿ ಫ್ಲೈಯಿಂಗ್ ಫಾಕ್ಸ್ ಕೂಡಾ ಒಂದು. ಬಹಳಷ್ಟು ಜನರು ಈ ಫ್ಲೈಯಿಂಗ್ ಫಾಕ್ಸ್ ಬಗ್ಗೆ ಕೇಳಿರಲಿಕ್ಕಿಲ್ಲ. ಹಾರುವ ಬಾವಲಿಗೆ ಫ್ಲೈಯಿಂಗ್ ಫಾಕ್ಸ್ ಎನ್ನುತ್ತಾರೆ. ಈ ಹಾರುವ ಬಾವಲಿ ಸವಾರಿ ಹೇಗಿರಬಹುದು ಅನ್ನೋದು ನಿಮಗೆ ಗೊತ್ತಾ? ಇಂದು ನಾವು ರಿಷಿಕೇಶ್‌ನಲ್ಲಿರುವ ಫ್ಲೈಯಿಂಗ್ ಫಾಕ್ಸ್ ಬಗ್ಗೆ ತಿಳಿಸಲಿದ್ದೇವೆ.

ಫ್ಲೈಯಿಂಗ್ ಫಾಕ್ಸ್

ಫ್ಲೈಯಿಂಗ್ ಫಾಕ್ಸ್

PC: youtube
ಫ್ಲೈಯಿಂಗ್ ಫಾಕ್ಸ್ ರಿಷಿಕೇಶದಲ್ಲಿನ ಒಂದು ಆಹ್ಲಾದಕರವಾದ ಸಾಹಸ ಕ್ರೀಡೆಯಾಗಿದೆ. ಈ ಸಾಹಸವು ಗುರುತ್ವವನ್ನು ಆನಂದಿಸುತ್ತದೆ, ಗಾಳಿಯ ಸಂಪೂರ್ಣ ವೇಗವು ನಿಮ್ಮನ್ನು ಸುರಕ್ಷಿತವಾಗಿ ಹಾರಾಡುವಂತೆ ಮಾಡುತ್ತದೆ. ಹಿಮಾಲಯ ಪರ್ವತ ಶ್ರೇಣಿ ಮತ್ತು ಪವಿತ್ರ ಗಂಗಾ ನದಿಯ ಮೇಲೆ ನೀವು ಉನ್ನತ ವೇಗದಲ್ಲಿ ಹಾರುತ್ತಾ ಮೇಲಿನಿಂದ ಕೆಳಗಿನ ಸ್ಥಳಗಳನ್ನು ವೀಕ್ಷಿಸಬಹುದು.

120 ಮೀಟರ್ ಎತ್ತರ

120 ಮೀಟರ್ ಎತ್ತರ

PC: youtube
ಗಂಗಾ ನದಿ ತೀರದಲ್ಲಿ 120 ಮೀಟರ್ ಎತ್ತರದ ಉಡಾವಣಾ ಪ್ಯಾಡ್‌ನಿಂದ ಹಾರುವ ಬಾವಲಿ ಸವಾರಿ ಪ್ರಾರಂಭವಾಗುತ್ತದೆ. ಇಡೀ ಕ್ರೀಡೆಯನ್ನು ಹೈಡ್ರಾಲಿಕ್ ಸುರಕ್ಷತಾ ಸಾಧನಗಳೊಂದಿಗೆ ತಜ್ಞರು ನಿರ್ವಹಿಸುತ್ತಾರೆ. ಒಂದು ಕೇಬಲ್‌ನಲ್ಲಿ, ಹಾರುವ ಬಾವಲಿ ಸಾಹಸದಲ್ಲಿ ಪಾಲ್ಗೊಳ್ಳುವವರನ್ನು ಸುರಕ್ಷಿತ ಗೇರ್‌ಗೆ ಸಿಕ್ಕಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಒಂದು ಕಿಲೋಮೀಟರ್ ವರೆಗೆ ಹಾರಾಟವನ್ನು ಆನಂದಿಸ ಬಹುದು.

ಗಂಟೆಗೆ 150 ಕಿಮೀ ವೇಗ

ಗಂಟೆಗೆ 150 ಕಿಮೀ ವೇಗ

PC: youtube
ವೇಗ, ಥ್ರಿಲ್ ಮತ್ತು ಗಾಳಿಯ ಹರಿವನ್ನು ಆನಂದಿಸ ಬಹುದು. ನಿಮ್ಮ ಸವಾರಿಯ ವೇಗವು ಗಂಟೆಗೆ 150 ಕಿಮೀ ವೇಗವಾಗಿ ಚಲಿಸುತ್ತದೆ. ನೋಟವು ಸಂಪೂರ್ಣವಾಗಿ ರೋಮಾಂಚನಗೊಳ್ಳುತ್ತದೆ. ಆಕಾಶದಲ್ಲಿ ಹಾರುತ್ತಿರುವಾಗ ಹಕ್ಕಿಯ ರೆಕ್ಕೆಗಳಂತೆ ಕೈಗಳನ್ನು ಅಗಲಿಸಿ ಸವಾರಿಯನ್ನು ಆನಂದಿಸಿ. ಈ ಸಾಹಸ ರಿಷಿಕೇಶ್‌ನ ಮೆಚ್ಚುಗೆಯ ನೆನಪುಗಳಲ್ಲಿ ಒಂದಾಗಿದೆ.

ಪರಿಪೂರ್ಣ ಅವಕಾಶ

ಪರಿಪೂರ್ಣ ಅವಕಾಶ

PC: youtube
ಫ್ಲೈಯಿಂಗ್ ಫಾಕ್ಸ್ ಒಂದು ಆನಂದಿಸಬಹುದಾದ ಅನುಭವವಾಗಿದೆ. ಫ್ಲೈಯಿಂಗ್ ಫಾಕ್ಸ್ ಕ್ರೀಡೆಗೆ ರಿಷಿಕೇಶದಲ್ಲಿ ಸುರಕ್ಷತಾ ಮಾನದಂಡಗಳು ಅತ್ಯುನ್ನತ ವಾಗಿವೆ ಸಾಹಸಮಯ ಕ್ರೀಡೆಗಳಲ್ಲಿ ತಜ್ಞರು ಹಲವಾರು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ನಿಮಗೆ ನೀವೇ ಸವಾಲು ಮಾಡುವ ಒಂದು ಪರಿಪೂರ್ಣ ಅವಕಾಶ ಇದಾಗಿದೆ. ರಿಷಿಕೇಶದಲ್ಲಿ ಫ್ಲೈಯಿಂಗ್ ಫಾಕ್ಸ್ ಸ್ಪೋರ್ಟ್ಸ್ ಸಾಹಸ ಕ್ರೀಡೆಗೆ ಸಿದ್ಧರಾಗಿ.

ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು

ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು

PC: youtube
ಹೊರಗಿನ ಆಹಾರವನ್ನು ನೀವು ಸ್ಥಳಕ್ಕೆ ತರಲು ಸಾಧ್ಯವಿಲ್ಲ. ಬೋಧಕರಿಂದ ನೀಡಲಾದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಳ್ಳಿ. ಆಲ್ಕೊಹಾಲ್ ಸೇವನೆ ಅಥವಾ ಇತರ ಸೇವಿಸುವ ಉತ್ಪನ್ನಗಳನ್ನು ಈ ಚಟುವಟಿಕೆಯ ಸಮಯದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹೃದ್ರೋಗ, ಹೆಚ್ಚಿನ ಅಥವಾ ಕಡಿಮೆ ರಕ್ತದೊತ್ತಡ, ಮಧುಮೇಹ, ವರ್ಟಿಗೊ, ಎಪಿಲೆಪಿಗೆ, ಆಸ್ತಮಾ ಅಥವಾ ಚಟುವಟಿಕೆಗಳಿಂದ ಉಲ್ಬಣಗೊಳ್ಳುವ ಯಾವುದೇ ಇತರ ವೈದ್ಯಕೀಯ ಸಮಸ್ಯೆಯನ್ನು ಹೊಂದಿರುವವರು ಈ ಕ್ರೀಡೆಯಲ್ಲಿ ಭಾಗವಹಿಸುವುದಾದರೆ ಮುಂಚಿತವಾಗಿ ತಮ್ಮ ವೈದ್ಯರನ್ನು ಭೇಟಿ ಮಾಡಲು ಸಲಹೆ ನೀಡುತ್ತಾರೆ.

ಬುಕಿಂಗ್ ಸಂಬಂಧಿಸಿದಂತೆ

ಬುಕಿಂಗ್ ಸಂಬಂಧಿಸಿದಂತೆ

PC: youtube
ಗ್ರಾಹಕಕರು ಬುಕಿಂಗ್ ಮಾಡಿದ 24 ಗಂಟೆಗಳ ಒಳಗೆ ಇಮೇಲ್ ಮೂಲಕ ದೃಢೀಕರಣ ಚೀಟಿ ಪಡೆಯುತ್ತಾರೆ. ನಿಮಗೆ ಅಗತ್ಯವಿರುವ ಸ್ಲಾಟ್‌ಗಳು ಲಭ್ಯವಿಲ್ಲದಿದ್ದರೆ, ಗ್ರಾಹಕರ ಆದ್ಯತೆಯ ಪರ್ಯಾಯ ವೇಳಾಪಟ್ಟಿಯನ್ನು ಜೋಡಿಸಲಾಗುತ್ತದೆ. ಇಮೇಲ್ ಮೂಲಕ ಹೊಸ ದೃಢೀಕರಣ ಚೀಟಿ ಕಳುಹಿಸಲಾಗುವುದು. ಪರ್ಯಾಯವಾಗಿ, ಗ್ರಾಹಕರು ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸಲು ಆಯ್ಕೆ ಮಾಡುತ್ತಾರೆ ಮತ್ತು ಪೂರ್ಣ ಮರುಪಾವತಿಯನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube
ವಿಮಾನದ ಮೂಲಕ: ಡೆಹ್ರಾಡೂನ್‌ನಲ್ಲಿರುವ ಜಾಲಿ ಗ್ರಾಂಟ್ ವಿಮಾನನಿಲ್ದಾಣವು ರಿಷಿಕೇಶದಿಂದ ಕೇವಲ 35 ಕಿಮೀ ದೂರದಲ್ಲಿದೆ. ಇಂಡಿಯನ್ ಏರ್‌ಲೈನ್ಸ್ ಮತ್ತು ಏರ್ ಡೆಕ್ಕನ್ ಡೆಹ್ರಾಡೂನ್‌ನಿಂದ ಮತ್ತು ದೆಹಲಿಯಂತಹ ಪ್ರಮುಖ ನಗರಗಳಿಗೆ ಸಾಮಾನ್ಯ ಹಾರಾಟವನ್ನು ನಿರ್ವಹಿಸುತ್ತವೆ.
ರೈಲಿನ ಮೂಲಕ: ರಿಷಿಕೇಶಕ್ಕೆ ಸಮೀಪದ ರೈಲ್ವೇ ನಿಲ್ದಾಣವು ಹಾರ್ಡ್ವಾರ್ ಆಗಿದೆ. ಹಾರ್ಡವಾರ್ ಪ್ರಮುಖ ರೈಲು ನಿಲ್ದಾಣವಾಗಿದೆ ಮತ್ತು ಅಲಹಾಬಾದ್, ಕೊಲ್ಕತ್ತಾ, ದೆಹಲಿ ಮತ್ತು ಹರಿದ್ವಾರದಲ್ಲಿ ನಿಲ್ಲಿಸುವ ರೈಲುಮಾರ್ಗಗಳನ್ನು ಹೊಂದಿದೆ.
ರಸ್ತೆ ಮೂಲಕ: ರಿಷಿಕೇಶನ್ನು ಉತ್ತರಾಂಚಲ್ ಮತ್ತು ಭಾರತದ ಇತರ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ವಿಸ್ತಾರವಾದ ಜಾಲವು ಹರಿದ್ವಾರ, ಆಗ್ರಾ, ಚಂಡೀಘಢ, ಡೆಹ್ರಾಡೂನ್, ದೆಹಲಿ ಮತ್ತು ನೈನಿತಾಲ್‌ಗಳನ್ನು ಸಂಪರ್ಕಿಸುತ್ತದೆ. ನಿಯಮಿತವಾದ ಬಸ್ ಸೇವೆಗಳು ಮತ್ತು ಬಾಡಿಗೆಗೆ ಟ್ಯಾಕ್ಸಿಗಳು ರಿಷಿಕೇಶದಿಂದ ಮತ್ತು ಈ ಸ್ಥಳಗಳಿಗೆ ಪ್ರಯಾಣಿಸಲು ಸುಲಭವಾಗಿ ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X