Search
  • Follow NativePlanet
Share
» »ಬೆಂಗಳೂರಿಗೆ ಬಂದಿದೆ ಹಾರುವ ರೆಸ್ಟೋರೆಂಟ್ : ಒಂದು ಊಟದ ಬೆಲೆ ಎಷ್ಟು ಗೊತ್ತಾ?

ಬೆಂಗಳೂರಿಗೆ ಬಂದಿದೆ ಹಾರುವ ರೆಸ್ಟೋರೆಂಟ್ : ಒಂದು ಊಟದ ಬೆಲೆ ಎಷ್ಟು ಗೊತ್ತಾ?

ವಿಶ್ವದ ಅತ್ಯಂತ ಸಾಹಸಮಯ ಡಿನ್ನರ್‌ ಅನುಭವವನ್ನು ಪಡೆಯಬೇಕೆಂದಿದ್ದರೆ ನೀವು ಬೆಂಗಳೂರಿಗೆ ಬನ್ನಿ. ಯಾಕೆಂದರೆ ಫ್ಲೈ ಡೈನಿಂಗ್ ರೆಸ್ಟೋರೆಂಟ್ ಇದೀಗ ಬೆಂಗಳೂರಿಗೆ ಬಂದಿದೆ. ಈ ಆಕಾಶದಲ್ಲಿ ತೇಲುತ್ತಾ ಊಟ ಮಾಡೋದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.

ಫ್ಲೈ ಡೈನಿಂಗ್ ಎಂದರೆ ಏನು?

ಫ್ಲೈ ಡೈನಿಂಗ್ ಎಂದರೆ ಏನು?

ಫ್ಲೈ ಡೈನಿಂಗ್ ಎಂದರೆ ನೆಲದಿಂದ ಮೇಲಕ್ಕೆ ಗಾಳಿಯಲ್ಲಿ ತೇಲುತ್ತಾ ರುಚಿಕರ ಭೋಜನವನ್ನು ಸವಿಯೋದು. ಇದೊಂದು ರೀತಿಯ ಸಾಹಸಮಯ ಚಟುವಟಿಕೆಯಾಗಿದೆ.

ಮಹಾಗೌರಿ ದೇವಸ್ಥಾನ ವಾರಣಾಸಿ: ಈ ದೇವಿಯನ್ನು ಪೂಜಿಸುವವರಿಗೆ ದರಿದ್ರ ಬರೋದಿಲ್ಲಮಹಾಗೌರಿ ದೇವಸ್ಥಾನ ವಾರಣಾಸಿ: ಈ ದೇವಿಯನ್ನು ಪೂಜಿಸುವವರಿಗೆ ದರಿದ್ರ ಬರೋದಿಲ್ಲ

22ಜನರ ಟೇಬಲ್

22ಜನರ ಟೇಬಲ್

ಫ್ಲೈಯಿಂಗ್ ರೆಸ್ಟೋರೆಂಟ್ ಅನುಭವವನ್ನು ಪಡೆಯಲು ನೆಲದಿಂದ ನಿ 120 ಅಡಿಗಳಷ್ಟು ಮೇಲಕ್ಕೆ ಹಾರಿಸುತ್ತಾರೆ. ಒಂದು ಕ್ರೇನ್ ಸಹಾಯದಿಂದ ಹ್ಯಾಂಗಿಂಗ್ ರೆಸ್ಟಾರೆಂಟ್‌ ನಿರ್ಮಿಸಲಾಗಿರುತ್ತದೆ. ಈ ಟೇಬಲ್‌ನಲ್ಲಿ ಸುತ್ತ 22 ಜನರು ಒಟ್ಟಿಗೆ ಕುಳಿತುಕೊಳ್ಳಬಹುದು. ಜೊತೆಗೆ 4 ಜನ ಸಿಬ್ಬಂದಿಗಳು ಇರುತ್ತಾರೆ.

ಪ್ರಪಂಚದ ಅಸಾಧಾರಣ ರೆಸ್ಟೋರೇಂಟ್‌

ಪ್ರಪಂಚದ ಅಸಾಧಾರಣ ರೆಸ್ಟೋರೇಂಟ್‌

ಸಾಹಸವನ್ನು ಇಷ್ಟಪಡುವವ ರಿಗೆ ಇದೊಂದು ಅದ್ಭುತ ಅವಕಾಶವಾಗಿದೆ. ಆಕಾಶದಲ್ಲಿ ಹಾರುತ್ತಾ, ಗಾಳಿಯಲ್ಲಿ ತೇಲುತ್ತಾ ರುಚಿಕರ ಭೋಜನ ಸವಿಯೋದು ಎಷ್ಟೊಂದು ಮಜಾ ನೀಡುತ್ತದೆ ಅಲ್ವಾ? ಫೋರ್ಬ್ಸ್ ನಿಯತಕಾಲಿಕದ ಪ್ರಕಾರ ಪ್ರಪಂಚದ ಅಗ್ರ 10 ಅಸಾಧಾರಣ ರೆಸ್ಟೋರೇಂಟ್‌ಗಳಲ್ಲಿ ಇದೂ ಒಂದಾಗಿದೆ.

ಪ್ರಪಂಚದ ಅಸಾಧಾರಣ ರೆಸ್ಟೋರೇಂಟ್‌

ಪ್ರಪಂಚದ ಅಸಾಧಾರಣ ರೆಸ್ಟೋರೇಂಟ್‌

ಇಲ್ಲಿ ನೀವು ಕೇವಲ ಡಿನ್ನರ್ ಮಾತ್ರವಲ್ಲ, ನಿಮಗೆ ಇಷ್ಟಬಂದಂತೆ ಮಾಡಬಹುದು. ಪತ್ರಿಕಾ ಸಮಾವೇಶಗಳು , ಬರ್ತ್‌ಡೇ ಪಾರ್ಟಿಯನ್ನೂ ಆಯೋಜಿಸಬಹುದು. ಡಿನ್ನರ್, ಲಂಚ್, ಬ್ರೇಕ್ಫಾಸ್ಟ್, ಮೀಟಿಂಗ್ ವಿತ್ ಕ್ಲೈಂಟ್ಸ್, ವಿಐಪಿ ಸೀಟ್ಸ್ ಫಾರ್ ಎ ಗೇಮ್ ಶೋ, ವೆಡ್ಡಿಂಗ್ ಸೆಲೆಬ್ರೇಷನ್, ನ್ಯೂ ಇಯರ್ಸ್ ಈವ್ ಡಿನ್ನರ್ ಹೀಗೆ ಸಣ್ಣ ಪುಟ್ಟ ಕಾರ್ಯಕ್ರಮವನ್ನೂ ಆಯೋಜಿಸಬಹುದು.

ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?

 ಫ್ಲೈಯಿಂಗ್ ಡಿನ್ನರ್‌

ಫ್ಲೈಯಿಂಗ್ ಡಿನ್ನರ್‌

ಫ್ರೆಂಡ್ಸ್‌ ಜೊತೆ, ಫ್ಯಾಮಿಲಿ ಜೊತೆ ಸಣ್ಣ ಔತಣಕೂಟವನ್ನು ಆಯೋಜಿಸಬಹುದು. ಈ ಫ್ಲೈಯಿಂಗ್ ಡಿನ್ನರ್‌ನಲ್ಲಿ ಯಾರೂ ಬೇಕಾದರೂ ಪಾಲ್ಗೊಳ್ಳಬಹುದು. ಅದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಆದರೆ ಆ ಟೇಬಲ್‌ನ್ನು ಇಂತಿಷ್ಟೇ ಎತ್ತರಕ್ಕೆ ಹಾರಿಸಬೇಕು ಎನ್ನುವುದರಲ್ಲಿ ಮಿತಿ ಇದೆ.

ಎತ್ತರಕ್ಕೆ ಮಿತಿ ಇದೆ

ಎತ್ತರಕ್ಕೆ ಮಿತಿ ಇದೆ

ಎಲ್ಲರ ಸುರಕ್ಷತೆಯ ದೃಷ್ಠಿಯಿಂದ , ಎಲ್ಲರೂ ತಮ್ಮ ಆಸನದಲ್ಲಿ ಭದ್ರವಾಗಿ ಕುಳಿತುಕೊಳ್ಳುವ ದೃಷ್ಠಿಯಿಂದ ಇದನ್ನು ಕನಿಷ್ಠ 135 ಸೆಂ.ಮೀ.ನಷ್ಟು ಹಾರಿಸಲಾಗುತ್ತದೆ.

ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?

ಬೆಲೆ ಎಷ್ಟು?

ಬೆಲೆ ಎಷ್ಟು?

ವಾರದ ದಿನಗಳಲ್ಲಿ

• ಮಧ್ಯಾಹ್ನದ ಊಟಕ್ಕೆ ಪ್ರತಿ ಒಬ್ಬ ವ್ಯಕ್ತಿಗೆ: ₹ 8,756

• ಚಹಾ ಪ್ರತಿ ವ್ಯಕ್ತಿಗೆ: ₹ 8,020

• ಡಿನ್ನರ್ ಪ್ರತಿ ವ್ಯಕ್ತಿಗೆ: ₹ 10,228

ವಾರಾಂತ್ಯಗಳಲ್ಲಿ

ವಾರಾಂತ್ಯಗಳಲ್ಲಿ

ವಾರಾಂತ್ಯಗಳಲ್ಲಿ ಉಳಿದ ದಿನಗಳಿಗಿಂತಲೂ ಸ್ವಲ್ಪ ಜಾಸ್ತಿಯೇ ಇರುತ್ತದೆ.
• ಮಧ್ಯಾಹ್ನದ ಊಟ ಪ್ರತಿ ವ್ಯಕ್ತಿಗೆ: ₹ 10,228

• ಚಹಾ ಪ್ರತಿ ವ್ಯಕ್ತಿಗೆ: ₹ 8,761

• ರಾತ್ರಿ ಊಟ ಪ್ರತಿ ವ್ಯಕ್ತಿಗೆ: ₹ 11,707

ಧೋನಿಯ ಹುಟ್ಟೂರು ರಾಂಚಿಯಲ್ಲಿ ಏನೆಲ್ಲಾ ವಿಶೇಷತೆ ಇದೆ ನೋಡಿದ್ದೀರಾ?ಧೋನಿಯ ಹುಟ್ಟೂರು ರಾಂಚಿಯಲ್ಲಿ ಏನೆಲ್ಲಾ ವಿಶೇಷತೆ ಇದೆ ನೋಡಿದ್ದೀರಾ?

ಎಲ್ಲಿದೆ ಈ ಫ್ಲೈ ಡೈನಿಂಗ್

ಎಲ್ಲಿದೆ ಈ ಫ್ಲೈ ಡೈನಿಂಗ್

ಇಷ್ಟಕ್ಕೂ ಈ ಫ್ಲೈ ಡೈನಿಂಗ್ ಎಲ್ಲಿದೆ ಎಂದರೆ ಹೌಸ್ ಆಫ್ ಲೈಫ್, ನಾಗವಾರ, ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಸಮೀಪದಲ್ಲಿದೆ. ನೀವು ಬೆಂಗಳೂರಿನಲ್ಲಿದ್ದರೆ ಅಥವಾ ಬೆಂಗಳೂರಿಗೆ ಬಂದರೆ ಈ ಫ್ಲೈ ಡೈನಿಂಗ್ ಅನುಭವವನ್ನು ಪಡೆಯ ಬಯಸಿದ್ದಲ್ಲಿ ಇಲ್ಲಿಗೆ ಭೇಟಿ ನೀಡೋದನ್ನು ಮರೆಯದಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X