Search
  • Follow NativePlanet
Share
» »ಒಮ್ಮೆ ಭೇಟಿ ನೀಡಲೇಬೇಕಾದ ಕೃಷ್ಣನ ಸುಂದರ ದೇವಾಲಯಗಳು

ಒಮ್ಮೆ ಭೇಟಿ ನೀಡಲೇಬೇಕಾದ ಕೃಷ್ಣನ ಸುಂದರ ದೇವಾಲಯಗಳು

By Vijay

ಗೋವಿಂದ, ಮುಕುಂದ, ಮುರಳಿಧರ, ವಾಸುದೇವ ಎಂಬೆಲ್ಲ ಹಲವು ನಾಮಗಳಿಂದ ಹೆಸರುವಾಸಿಯಾದ, ತುಂಟಾಟಗಳಿಂದ ಎಲ್ಲರಿಗೂ ಮೆಚ್ಚುಗೆಯಾದ ಶ್ರೀಕೃಷ್ಣ ಹಿಂದುಗಳು ನಡೆದುಕೊಳ್ಳುವ ತೈ ಜನಪ್ರೀಯ ದೇವರುಗಳಲ್ಲಿ ಒಬ್ಬ. ಮಹಾಭಾರತದಲ್ಲಿ ಅರ್ಜುನನಿಗೆ ಸಾರಥಿಯಾಗಿ ಯುದ್ಧ ನಡೆಯುವ ಸಂದರ್ಭದಲ್ಲೆ ಗೀತೆಯನ್ನು ಬೋಧಿಸಿದ ಕೃಷ್ಣ ವಿಷ್ಣುವಿನ ದಶಾವತಾರಗಳಲ್ಲಿ ಒಬ್ಬ.

ಭಾರತದಾದ್ಯಂತ ಕೃಷ್ಣನಿಗೆ ಕೋಟ್ಯಾನುಗಟ್ಟಲೆ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಅದರಲ್ಲೂ ವಿಶೆಷವಾಗಿ ಉತ್ತರ ಭಾರತದಲ್ಲಿ ಕೃಷ್ಣ ಎಲ್ಲರೂ ನಡೆದುಕೊಳ್ಳುವ ಬಲು ನೆಚ್ಚಿನ ದೇವ. ಇಂತಹ ಕೃಷ್ಣನಿಗೆ ಮುಡಿಪಾದ ದೇವಾಲಯಗಳು ದೇಶಾದ್ಯಂತ ಎಲ್ಲೆಡೆ ಇರುವುದನ್ನು ಕಾಣಬಹುದು. ಆದರೆ ಪ್ರಸ್ತುತ ಲೇಖನದಲ್ಲಿ ದಕ್ಷಿಣ ಭಾರತದಲ್ಲಿರುವ ಕೃಷ್ಣನಿಗೆ ಮುಡಿಪಾದ ಕೆಲವು ಆಕರ್ಷಕ ಹಾಗೂ ಸುಂದರವಾದ ದೇವಾಲಯಗಳ ಕುರಿತು ತಿಳಿಸಲಾಗಿದೆ.

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ಹಿಮವದ್ ಗೋಪಾಲಸ್ವಾಮಿ : ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬರುವ ಗೋಪಾಲಸ್ವಾಮಿ ಬೆಟ್ಟವು ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ. ಈ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿನ ಅತಿ ಎತ್ತರದ ಪ್ರದೇಶವಾಗಿದ್ದು ಬೆಟ್ಟದ ತುದಿಯಲ್ಲಿರುವ ಕೃಷ್ಣನಿಗೆ ಮುಡಿಪಾದ ವೇಣುಗೋಪಾಲಸ್ವಾಮಿಯ ದೇವಸ್ಥಾನದಿಂದ ಪ್ರಖ್ಯಾತವಾಗಿದೆ.

ಚಿತ್ರಕೃಪೆ: Dhruvaraj S

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ಉಡುಪಿ ಕೃಷ್ಣ ಮಠ: ಪ್ರಾಯಶಃ ಉಡುಪಿಯ ಪ್ರಪ್ರಥಮ ಧಾರ್ಮಿಕ ಆಕರ್ಷಣೆಯಾಗಿ ಈ ಮಠವು ಜನರನ್ನು ಎಲ್ಲೆಡೆಯಿಂದ ಸೆಳೆಯುತ್ತದೆ. ಈ ಮಠದ ಸುತ್ತ ಮುತ್ತಲು ಇತರೆ ದೇವಾಲಯಗಳಿವೆ. ಈ ಮಠವನ್ನು ವೈಷ್ಣವ ಪಂಥದ ಶ್ರೀ ಮಾಧ್ವಾಚಾರ್ಯರು ಸ್ಥಾಪಿಸಿದರು ಎಂಬ ಪ್ರತೀತಿಯಿದೆ. ವೈಷ್ಣವ ಸಮುದಾಯದವರು ನಡೆದುಕೊಳ್ಳುವ ಈ ಮಠಕ್ಕೆ ಸಾಕಷ್ಟು ಜನ ಭಕ್ತಾದಿಗಳು ಪ್ರತಿ ನಿತ್ಯವು ಆಗಮಿಸುತ್ತಾರೆ.

ಚಿತ್ರಕೃಪೆ: Ashok Prabhakaran

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ಮೂಲವಾಗಿ ಸೋಮನಾಥಪುರ ಒಂದು ಗ್ರಾಮೀಣ ಪ್ರದೇಶವಾಗಿದ್ದು ಪ್ರಸಿದ್ಧ ಐತಿಹಾಸಿಕ ಹಾಗೂ ನಾಡಿನ ಸಾಂಸ್ಕೃತಿಕ ನಗರವಾದ ಮೈಸೂರಿನಿಂದ 35 ಕಿ.ಮೀ ಗಳಷ್ಟು ಅಂತರದಲ್ಲಿದೆ. ಸೋಮನಾಥಪುರವು ವಿಶೇಷವಾಗಿ ಕೃಷ್ಣನಿಗೆ ಮುಡಿಪಾದ ಚೆನ್ನಕೇಶವನ ದೇವಸ್ಥಾನದಿಂದಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Dineshkannambadi

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ಇಸ್ಕಾನ್ ಬೆಂಗಳೂರು : ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ ನೆಸ್ (ISKCON) ಎಂಬ ಸಂಸ್ಥೆಯಿಂದ ದೇಶದ ವಿವಿಧ ನಗರಗಳಲ್ಲಿ ನಿರ್ಮಿಸಲಾಗಿರುವ ವೈಭವಯುತ ಕೃಷ್ಣ ದೇವಾಲಯಗಳ ಪೈಕಿ ಬೆಂಗಳೂರಿನಲ್ಲಿರುವ ಕೃಷ್ಣನ ದೇವಾಲಯವೂ ಸಹ ಒಂದು. ಸಾಕಷ್ಟು ಅದ್ಭುತವಾಗಿ ನಿರ್ಮಿಸಲಾಗಿರುವ ಈ ದೇವಾಲಯವು ಬೆಂಗಳೂರಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ.

ಚಿತ್ರಕೃಪೆ: Svpdasa

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ಬಾಲಕೃಷ್ಣ ದೇವಾಲಯ : ಇದು ಅಷ್ಟೊಂದು ಹೆಸರುವಾಸಿಯಾದ ದೇವಾಲಯವಲ್ಲ. ಇಂದು ಅವಶೇಷವಾಗಿರುವ ಈ ದೇವಾಲಯದಲ್ಲಿ ವಿಶೇಷವಾಗಿ ಬಾಲ ಕೃಷ್ಣನ ಸನ್ನಿಧಿಯಿದೆ. ಇದು ಬಳ್ಳಾರಿ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣವಾದ ಹಂಪಿಯಲ್ಲಿದೆ.

ಚಿತ್ರಕೃಪೆ: Shakirmeah

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ಇಸ್ಕಾನ್ ಅನಂತಪುರ : ಆಂಧ್ರಪ್ರದೇಶ ರಾಜ್ಯದ ಅನಂತಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಏಳರ ಬಳಿ ಇರುವ ಹನುಮಾನ್ ಜಂಕ್ಷನ್ ಎಂಬಲ್ಲಿ ಕೃಷ್ಣನ ಈ ಆಕರ್ಷಕ ದೇವಾಲಯವಿದೆ. ಇದರ ವಾಸ್ತುವಿನ್ಯಾಸ ರಥವನ್ನು ಸೂಚಿಸುವ ಹಾಗಿದೆ.

ಚಿತ್ರಕೃಪೆ: Lakshminarasimha

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ದೇವಾಲಯ ರಚನೆ ರಥದ ಮುಖ್ಯ ಭಾಗವಾಗಿದ್ದು ಅದರ ಮುಂದೆ ದೈತ್ಯಾಕಾರದ ಕುದುರೆಗಳನ್ನು ಆ ರಥವನ್ನು ಏಳೆಯುತ್ತಿರುವ ಹಾಗೆ ನಿರ್ಮಿಸಲಾಗಿದೆ.

ಚಿತ್ರಕೃಪೆ: Dr Murali Mohan Gurram

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ಫಾರ್ಮಾಗುಡಿ ಕೃಷ್ಣ ಮಂದಿರ : ಗೋವಾದಲ್ಲಿರುವ ಕೃಷ್ಣನ ದೇವಾಲಯ ಇದಾಗಿದೆ. ಸ್ಥಳೀಯವಾಗಿ ಸಾಕಷ್ಟು ಜನರಿಂದ ಇದು ಭೇಟಿ ನೀಡಲ್ಪಡುತ್ತದೆ. ಪೊಂಡಾ ತಾಲೂನಲ್ಲಿರುವ ಫಾರ್ಮಾಗುಡಿ ಎಂಬ ಪಟ್ಟಣದಲ್ಲಿ ಈ ದೇವಾಲಯವಿದೆ. ಪೊಂಡಾದಿಂದ ಕೇವಲ ಮೂರು ಕಿ.ಮೀ ದೂರದಲ್ಲಿ ಪಣಜಿಗೆ ಹೋಗುವ ರಸ್ತೆಯಲ್ಲಿ ಈ ದೇವಾಲಯವಿದೆ.

ಚಿತ್ರಕೃಪೆ: Agawas

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ಗುರುವಾಯೂರಪ್ಪನ ದೇವಾಲಯ : ಇದೆ ಜನಪ್ರೀಯ ಹಾಗೂ ದೇಶದಲ್ಲೆ ಸಾಕಷ್ಟು ಹೆಸರುವಾಸಿಯಾಗಿರುವ ಶ್ರೀ ಗುರುವಾಯೂರು ದೇವಾಲಯ. ಕೃಷ್ಣನು ಗುರುವಾಯೂರಪ್ಪನಾಗಿ ನೆಲೆಸಿರುವ ಪುಣ್ಯ ಕ್ಷೇತ್ರ. ಈ ಸುಂದರ ಹಾಗೂ ಕೇರಳ ರಾಜ್ಯದ ಅತಿ ಪ್ರಖ್ಯಾತ ದೇವಾಲಯ, ಹರಿಯ ನಿವಾಸವಿರುವ ನೆಲೆ ಎಂದೆ ಜನಜನಿತವಾಗಿದೆ. ಅಂತೆಯೆ ಇದನ್ನು ಭೂಲೋಕದ ವೈಕುಂಠ ಎಂದೆ ಕರೆಯಲಾಗುತ್ತದೆ.

ಚಿತ್ರಕೃಪೆ: Vinayaraj

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ಅಂಬಲಪುಳ ಶ್ರೀಕೃಷ್ಣ ದೇವಾಲಯ : ಕೇರಳದ ಅಲಪುಳ (ಅಲೆಪ್ಪಿ) ಜಿಲ್ಲೆಯ ಅಂಬಲಪುಳ ಎಂಬ ದೇವಾಲಯ ಪಟ್ಟಣದಲ್ಲಿ ಈ ಆಕರ್ಷಕ ಕೃಷ್ಣನ ದೇವಾಲಯವಿದೆ. 15-16 ನೇಯ ಶತಮಾನದಲ್ಲಿ ನಿರ್ಮಿತವಾದ ಈ ಕೃಷ್ಣನ ದೇವಾಲಯವು ಪಾಲಪಾಯಸಂ ಎಂಬ ಅನ್ನ ಹಾಗೂ ಹಾಲಿನಿಂದ ಮಾಡಲಾದ ಪ್ರಸಾದಕ್ಕೆ ಅಪಾರ ಖ್ಯಾತಿಗಳಿಸಿದೆ. ಈ ದೇವಾಲಯ ಗುರುವಾಯುರಪ್ಪನ ದೇವಾಲಯದೊಂದಿಗೆ ನೇರವಾದ ನಂಟನ್ನು ಹೊಂದಿದೆ.

ಚಿತ್ರಕೃಪೆ: Pradeep717

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ಕೇರಳದ ಅಲಪುಳ ಜಿಲ್ಲೆಯ ಕಾರ್ತಿಕಪಲ್ಲಿಯಲ್ಲಿರುವ ಇವೂರು ಎಂಬ ಗ್ರಾಮದಲ್ಲಿರುವ ಕೃಷ್ಣನ ದೇವಾಲಯ ಇದಾಗಿದೆ. ಮಹಾಭಾರತದೊಂದಿಗೆ ನಂಟನ್ನು ಹೊಂದಿರುವ ಈ ದೇವಾಲಯವನ್ನು ಇವೂರು ಮೇಜರ್ ಕೃಷ್ಣಸ್ವಾಮಿ ದೇವಾಲಯ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Sivahari

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ಇಸ್ಕಾನ್ ಚೆನ್ನೈ : ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ ನೆಸ್ (ISKCON) ಎಂಬ ಸಂಸ್ಥೆಯಿಂದ ದೇಶದ ವಿವಿಧ ನಗರಗಳಲ್ಲಿ ನಿರ್ಮಿಸಲಾಗಿರುವ ವೈಭವಯುತ ಕೃಷ್ಣ ದೇವಾಲಯಗಳ ಪೈಕಿ ಚೆನ್ನೈನಲ್ಲಿರುವ ಕೃಷ್ಣನ ದೇವಾಲಯವೂ ಸಹ ಒಂದು. ಸಾಕಷ್ಟು ಅದ್ಭುತವಾಗಿ ನಿರ್ಮಿಸಲಾಗಿರುವ ಈ ದೇವಾಲಯವು ಚೆನ್ನೈ ನಗರದಲ್ಲಿ ಭೇಟಿ ನೀಡಬಹುದಾದ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ.

ಚಿತ್ರಕೃಪೆ: Destination8infinity

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ಮಟ್ಟಪಿಲ್ಲಿ ಕೃಷ್ಣ ದೇವಾಲಯ : ಮೂವತ್ತುಪುಳ ಎಂಬುದು ಎರ್ನಾಕುಲಂ ಜಿಲ್ಲೆಯಲ್ಲಿರುವ ತ್ರಿವೇಣಿ ಸಂಗಮ ಕ್ಷೇತ್ರವಾಗಿದೆ. ಇಲ್ಲಿರುವ ಕೃಷ್ಣನ ದೇವಾಲಯವು ಸಾಕಷ್ಟು ಸೊಗಸಾದ ಪರಿಸರದ ಹಿನ್ನಿಲೆಯಲ್ಲಿ ನೆಲೆಸಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Athul600

ಕೃಷ್ಣನ ಆಕರ್ಷಕ ದೇವಾಲಯಗಳು:

ಕೃಷ್ಣನ ಆಕರ್ಷಕ ದೇವಾಲಯಗಳು:

ನೆಯ್ಯಾಟ್ಟಿಂಕಾರಾ ಬಾಲ ಕೃಷ್ಣ ದೇವಾಲಯ : ಕೇರಳದ ತಿರುವನಂತಪುರಂನಿಂದ ಇಪ್ಪತ್ತು ಕಿ.ಮೀ ದೂರದಲ್ಲಿರುವ ನೆಯ್ಯಾಟ್ಟಿಂಕಾರಾದಲ್ಲಿರುವ ಸುಂದರ ಕೃಷ್ಣನ ದೇವಾಲಯ ಇದಾಗಿದೆ. ಬಾಲಾವಸ್ಥೆಯಲ್ಲಿರುವ ಕೃಷ್ಣ ಈ ದೇವಾಲಯದ ಪ್ರಧಾನ ದೇವನಾಗಿದ್ದು ಬೆಣ್ಣೆಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ.

ಚಿತ್ರಕೃಪೆ: Gsrajeev

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more