Search
  • Follow NativePlanet
Share
» »ಬಂಗಾಳ ಕೊಲ್ಲಿಯ ಆಕರ್ಷಕ ಬೀಚುಗಳು!

ಬಂಗಾಳ ಕೊಲ್ಲಿಯ ಆಕರ್ಷಕ ಬೀಚುಗಳು!

By Vijay

ಸಾಮಾನ್ಯವಾಗಿ "ಬೇ" ಅಥವಾ ಕನ್ನಡದಲ್ಲಿ ಕರೆಯಬಹುದಾದ ಕೊಲ್ಲಿ ಪ್ರದೇಶವೆಂದರೆ ತೀರಗಳಿಂದ ಉಂಟಾಗುವ ನೀರಿನಿಂದ ಕೂಡಿದ ಜೌಗು ಪ್ರದೇಶ. ಇದು ಮುಖ್ಯವಾದ ಸಮುದ್ರ ಅಥವಾ ಸಾಗರದೊಂದಿಗೆ ಸಂಪರ್ಕ ಹೊಂದಿರುತ್ತದೆ. ಇಂತಹ ಕೊಲ್ಲಿಗಳನ್ನು ಜಗತ್ತಿನಾದ್ಯಂತೆ ಸಮುದ್ರ ತೀರಗಳಿರುವ ದೇಶಗಳಲ್ಲಿ ಸಾಮಾನ್ಯವಾಗಿ ಕಾಣಬಹುದು.

ಅದರಂತೆ ಭಾರತದಲ್ಲೂ ಒಂದು ಅದ್ಭುತವಾದ ಕೊಲ್ಲಿ ಪ್ರದೇಶವಿದೆ. ಅದನ್ನೆ ನಾವು ಬಂಗಾಳಕೊಲ್ಲಿ ಅಥವಾ "ಬೇ ಆಫ್ ಬೆಂಗಾಲ್" ಎಂದು ಕರೆಯುತ್ತೇವೆ. ನಿಮಗಿದು ಗೊತ್ತೆ, ಬಂಗಾಳ ಕೊಲ್ಲಿಯು ಜಗತ್ತಿನಲ್ಲೆ ಅತಿ ದೊಡ್ಡದಾದ ಕೊಲ್ಲಿ ಪ್ರದೇಶವಾಗಿದೆ ಎಂಬುದು. ಹೌದು, ವಿಸ್ತಾರದಲ್ಲಿ ಬಂಗಾಳಕೊಲ್ಲಿ ಜಗತ್ತಿನಲ್ಲೆ ಮೊದಲನೇಯ ಅತಿ ದೊಡ್ಡ ಕೊಲ್ಲಿ ಎಂಬ ಹಿರಿಮೆಗೆ ಪಾತ್ರವಾಗಿದೆ.

ಹಿಂದೂ ಮಹಾಸಾಗರದ ಈಶಾನ್ಯ ಭಾಗದೊಂದಿಗೆ ನಂಟು ಹೊಂದಿರುವ ಬಂಗಾಳಕೊಲ್ಲಿಯು ಹೆಚ್ಚುಕಡಿಮೆ ತ್ರಿಕೋನಾಕಾರದಲ್ಲಿದ್ದು ಪಶ್ಚಿಮಕ್ಕೆ ಭಾರತ ಹಾಗೂ ಶ್ರೀಲಂಕಾ, ಉತ್ತರಕ್ಕೆ ಬಂಗ್ಲಾದೇಶ ಹಾಗೂ ಪೂರ್ವಕ್ಕೆ ಬರ್ಮಾ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಗಳನ್ನು ಹೊಂದಿದೆ.

ಭಾರತಕ್ಕೆ ಸಂಬಂಧಿಸಿದಂತೆ ಬಂಗಾಳಕೊಲ್ಲಿಯೊಂದಿಗೆ ನಂಟು ಹಾಕಿಕೊಂಡಿರುವ ವಿವಿಧ ರಾಜ್ಯಗಳ ಅನೇಕ ಸ್ಥಳಗಳನ್ನು ಗಮನಿಸಿದಾಗ ಕೆಲವು ಆಕರ್ಷಕ ಕಡಲ ತೀರಗಳು ಕಂಡುಬರುತ್ತವೆ. ಈ ಕಡಲ ತೀರಗಳು ಪ್ರವಾಸಿ ದೃಷ್ಟಿಯಿಂದಲೂ ಸಹ ಮಹತ್ವ ಪಡೆದಿದ್ದು ಸಹಸ್ರಾರು ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತವೆ. ಹಾಗಾದರೆ, ಪ್ರಸ್ತುತ ಲೇಖನದ ಮೂಲಕ ಬಂಗಾಳಕೊಲ್ಲಿಯ ಕೆಲವು ಆಯ್ದ ಮೋಡಿ ಮಾಡುವ ಕಡಲ ತೀರಗಳು ಯಾವುವು ಎಂಬುದರ ಕುರಿತು ತಿಳಿಯಿರಿ.

ದಿಘಾ

ದಿಘಾ

ದಿಘಾ ಕಡಲತೀರ : ಪಶ್ಚಿಮ ಬಂಗಾಳ ರಾಜ್ಯದ ಪೂರ್ವ ಮಿಡ್ನಾಪೂರ್ ನಲ್ಲಿರುವ ಕಡಲ ತೀರವಾಗಿದೆ ಇದು. ಬಂಗಾಳ ಕೊಲ್ಲಿಯ ಭಾರತಕ್ಕೆ ಸಂಬಂಧಿಸಿದಂತೆ ಉತ್ತರ ದಿಕ್ಕಿನಲ್ಲಿ ಸ್ಥಿತವಿರುವ ಈ ತೀರ ಸಾಕಷ್ಟು ಸೊಗಸಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಲವಾರು ಜಲಕ್ರೀಡೆಗಳು ಈ ಕಡಲ ತೀರದಲ್ಲಿ ಲಭ್ಯವಿದೆ.

ಚಿತ್ರಕೃಪೆ: Awankanch

ಮಂದಾರಮಣಿ

ಮಂದಾರಮಣಿ

ಕೊಲ್ಕತ್ತಾದಿಂದ 180 ಕಿ.ಮೀ ದೂರವಿರುವ ಪೂರ್ವ ಮಿಡ್ನಾಪೂರದಲ್ಲೆ ಇರುವ ಮಂದಾರಮಣಿ ಕಡಲ ತೀರವಿದು. ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿರುವ ಈ ಕಡಲ ತೀರ ಪ್ರಶಾಂತತೆಯಿಂದ ಕೂಡಿದ್ದು ಹಾಯಾಗಿ ಸಮಯ ಕಳೆಯ ಬಯಸುವವರಿಗೆ ಆದರ್ಶಮಯವಾದ ಕಡಲ ತಡಿಯಾಗಿದೆ.

ಚಿತ್ರಕೃಪೆ: Mum321

ಶಂಕರಪುರ ತೀರ

ಶಂಕರಪುರ ತೀರ

ದಿಘಾದಿಂದ ಪೂರ್ವಕ್ಕೆ ಹದಿನಾಲ್ಕು ಕಿ.ಮೀ ದೂರದಲ್ಲಿದೆ ಈ ಅದ್ಭುತ ಕಡಲ ತೀರ. ಬೆಳಿಗ್ಗೆಯ ಸಮಯದಲ್ಲಿ ಸೂರ್ಯೋದಯವಾಗುವ ಸಂದರ್ಭದಲ್ಲಿ ಅದ್ಭುತವಾಗಿ ಕಂಗೊಳಿಸುವ ಈ ಸುಂದರ ಕಡಲ ತೀರವು ಛಾಯಾಗ್ರಾಹಕರಿಗೆ ಅದ್ಭುತ ಅವಕಾಶಗಲನ್ನು ಕರುಣಿಸುತ್ತದೆ.

ಚಿತ್ರಕೃಪೆ: Biswarup Ganguly

ತಜ್ಪುರ್ ತೀರ

ತಜ್ಪುರ್ ತೀರ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರದಲ್ಲಿರುವ ಈ ಕಡಲ ತೀರವು ಸಾಕಷ್ಟು ಪ್ರಶಾಂತವಾಗಿದೆ ಹಾಗೂ ಪ್ರವಸಿಗರನ್ನು ಆಕರ್ಷಿಸುತ್ತದೆ. ಹಿಂದಿನ ಸ್ಲೈಡುಗಳಲ್ಲಿ ಹೇಳಲಾದ ಕಡಲ ತೀರಗಳಷ್ಟು ಹೆಸರುವಾಸಿಯಾಗಿರದ ಕಡಲ ತೀರವಾದರೂ ಇತ್ತೀಚಿನ ಕೆಲ ಸಮಯದಿಂದ ಪ್ರವಾಸಿಗರನ್ನು ಪಡೆಯುತ್ತಿದೆ.

ಚಿತ್ರಕೃಪೆ: Biswarup Ganguly

ಚಂಡೀಪುರ

ಚಂಡೀಪುರ

ಒಡಿಶಾ ರಾಜ್ಯದ ಬಾಲೇಶ್ವರ ಜಿಲ್ಲೆಯಲ್ಲಿರುವ ಚಂಡೀಪುರವು ತನ್ನಲ್ಲಿರುವ ಚಂಡೀಪುರ ಭಾರತೀಯ ಸೈನ್ಯದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ಹಾಗೂ ಕ್ಷಿಪಣಿ ಪರೀಕ್ಷಾ ಕೇಂದ್ರಕ್ಕೆ ಹೆಸರುವಾಸಿಯಾಗಿದೆಯಾದರೂ ಇದರ ಕಡಲ ತೀರವೂ ಸಹ ಅಷ್ಟೆ ವಿಶಿಷ್ಟವಾಗಿದೆ. ಅಲೆಗಳಿಲ್ಲದ ಸಮಯದಲ್ಲಿ ಸುಮಾರು ಐದು ಕಿ.ಮೀ ಗಳಷ್ಟು ಸಮುದ್ರದೊಳಗೆ ಅತಿ ಕಡಿಮೆ ನೀರಿನ ಆಳವಿರುತ್ತದೆ.

ಚಿತ್ರಕೃಪೆ: Sankara Subramanian

ಗಟ್ಟಿ ಕವಚ

ಗಟ್ಟಿ ಕವಚ

ಈ ತೀರದಲ್ಲಿ ಒಂದು ವಿಶಿಷ್ಟ ಬಗೆಯ ಕಶೇರುಕ ಜೀವಿಗಳನ್ನು ಕಾಣಬಹುದು. ಅದುವೆ ಹಾರ್ಸ್ ಶೂ ಕ್ರ್ಯಾಬ್. ಒಂದು ಬಗೆಯ ವೈವಿಧ್ಯಮಯ ಕವಚವುಳ್ಳ ಏಡಿ. ಇದರ ರಕ್ತದ ಬಣ್ಣ ನೀಲಿಯಾಗಿದ್ದು ಅದನ್ನು ವೈದ್ಯಕೀಯ ವಿಜ್ಞಾನದಲ್ಲಿ ಬಳಸಲಾಗುತ್ತದೆ.

ಚಿತ್ರಕೃಪೆ: Chosovi

ಸೂರ್ಯ ದೇವಾಲಯದ ಬಳಿ

ಸೂರ್ಯ ದೇವಾಲಯದ ಬಳಿ

ಒಡಿಶಾದ ಪ್ರಸಿದ್ಧ ಪುರಿ ಜಿಲ್ಲೆಯ ಕೋನಾರ್ಕ್ ಸೂರ್ಯ ದೇವಾಲಯದಿಂದ ಕೇವಲ ಮೂರು ಕಿ.ಮೀ ಗಳಷ್ಟು ದೂರದಲ್ಲಿದೆ ಚಂದ್ರಭಾಗ ಕಡಲ ತೀರ. ಸೂರ್ಯ ದೇವಾಲಯಕ್ಕೆ ಭೇಟಿ ನೀಡುವವರು ಸಾಮಾನ್ಯವಾಗಿ ಭೇಟಿಯ ನಂತರ ಈ ಕಡಲ ತೀರಕ್ಕೆ ತೆರಳಿ ಹಾಯಾಗಿ ಸಮಯ ಕಳೆಯುತ್ತಾರೆ.

ಚಿತ್ರಕೃಪೆ: Mike Prince

ಹೇಗಿದೆ ನೋಡಿ

ಹೇಗಿದೆ ನೋಡಿ

ಒಡಿಶಾದ ಪ್ರಖ್ಯಾತ ಧಾರ್ಮಿಕ ತಾಣ ಹಾಗೂ ಜಗನ್ನಾಥ ಮಂದಿರಕ್ಕೆ ಹೆಸರುವಾಸಿಯಾದ ಪುರಿಯಲ್ಲೂ ಸಹ ಬಂಗಾಳ ಕೊಲ್ಲಿಯ ಅದ್ಭುತ ಕಡಲ ತೀರವಿದ್ದು ಅದನ್ನು ಪುರಿ ಕಡಲ ತೀರ ಎಂದೆ ಕರೆಯಲಾಗುತ್ತದೆ.

ಚಿತ್ರಕೃಪೆ: draskd

ತಲಸಾರಿ

ತಲಸಾರಿ

ಒಡಿಶಾದ ಬಾಲೇಶ್ವರದಲ್ಲಿದೆ ತಲಸಾರಿ ಕಡಲ ತೀರ. ತಿರದ ಬದಿಯಲ್ಲಿ ಇರುವ ಪಾಮ್ ಗಿಡಗಳು ಕಡಲ ತಡಿಯ ಸೌಂದರ್ಯಕ್ಕೆ ಸಾಕಷ್ಟು ಇಂಬನ್ನು ನೀಡಿವೆ. ಅಲ್ಲದೆ ಇಲ್ಲಿ ಕೆಂಪು ಏಡಿಗಳು ಸಾಕಷ್ಟು ಪ್ರಖ್ಯಾತವಾಗಿವೆ.

ಚಿತ್ರಕೃಪೆ: Tuli 100986

ಕೆಂಪು ಏಡಿಗಳು

ಕೆಂಪು ಏಡಿಗಳು

ತೀರದಲ್ಲಿ ಕಂಡುಬರುವ ಕೆಂಪು ಬಣ್ಣದ ಏಡಿಗಳು.

ಚಿತ್ರಕೃಪೆ: SupernovaExplosion

ಆಂಧ್ರಪ್ರದೇಶ

ಆಂಧ್ರಪ್ರದೇಶ

ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಸಖಿನೇತಿಪಲ್ಲಿಯಲ್ಲಿರುವ ಅಂತರ್ವೇದಿ ಕರಾವಳಿ ಗ್ರಾಮವು ತನ್ನಲ್ಲಿರುವ ದೇವಾಲಯ ಹಾಗೂ ಕಡಲ ತೀರದಿಂದಾಗಿ ಸಾಕಷ್ಟು ಜನಮನ್ನಣೆ ಗಳಿಸಿದೆ.

ಚಿತ್ರಕೃಪೆ: Rajib Ghosh

ಕಾಕಿನಾಡ

ಕಾಕಿನಾಡ

ಆಂಧ್ರಪ್ರದೇಶ ರಾಜ್ಯದ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಕಾಕಿನಾಡ ಒಂದು ನಗರ ಪ್ರದೇಶವಾಗಿದ್ದು ತನ್ನಲ್ಲಿರುವ ಅದೆ ಹೆಸರಿನ ಅಂದರೆ ಕಾಕಿನಾಡ ಕಡಲ ತೀರದಿಂದ ಹೆಸರುವಾಸಿಯಾಗಿದೆ. ವಾರ್ಷಿಕವಾಗಿ ಆಚರಿಸಲಾಗುವ ಕಾಕಿನಾಡ ಕಡಲ ಉತ್ಸವಕ್ಕೆ ಕಾಕಿನಾಡವು ಹೆಸರುವಾಸಿಯಾಗಿದೆ.

ಚಿತ್ರಕೃಪೆ: u2_cruz

ರಿಷಿಕೊಂಡ

ರಿಷಿಕೊಂಡ

ಆಂಧ್ರದ ವೈಜಾಗ್ ಅಥವಾ ವಿಶಾಖಾಪಟ್ಟಣದಲ್ಲಿರುವ ಪ್ರಖ್ಯಾತ ಕಡಲ ತೀರ ಇದಾಗಿದೆ. ಉತ್ತಮ ಛಾಯಾಗ್ರಹಣಕ್ಕೆ ಅದ್ಭುತ ಅವಕಾಶ ನೀಡುವ ಈ ಕಡಲ ತೀರವು ನೋಡಲು ಆಕರ್ಷಕವಾಗಿದ್ದು ಪ್ರವಾಸಿಗರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Amit Chattopadhyay

ರಾಮಕೃಷ್ಣ

ರಾಮಕೃಷ್ಣ

ವೈಜಾಗ್ ನಲ್ಲಿರುವ ರಾಮಕೃಷ್ಣ ಕಡಲ ತೀರವೂ ಸಹ ಸಾಕಷ್ಟು ಪ್ರಸಿದ್ಧಿ ಪಡೆದ ಕಡಲ ತಡಿಯಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Adityamadhav83

ತೂತುಕುಡಿ

ತೂತುಕುಡಿ

ಟ್ಯೂಟಿಕಾರಿನ್ ಎಂತಲೂ ಕರೆಯಲ್ಪಡುವ ತಮಿಳುನಾಡಿನ ತೂತುಕುಡಿ ಕಡಲ ತೀರವು ಸಾಕಷ್ಟು ನಯನ ಮನೋಹರವಾದ ತಾಣವಾಗಿದ್ದು ಸೂರ್ಯಾಸ್ತ ನೋಟಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Ramkumar

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more