Search
  • Follow NativePlanet
Share
» »ಭಾರತದ ಅದ್ಭುತ ಮತ್ತೇರಿಸುವ ವೈನ್ ಯಾರ್ಡುಗಳು!

ಭಾರತದ ಅದ್ಭುತ ಮತ್ತೇರಿಸುವ ವೈನ್ ಯಾರ್ಡುಗಳು!

By Vijay

"ವೈನ್ ಟೂರಿಸಂ" ಅಥವಾ ವೈನ್ ಪ್ರವಾಸೋದ್ಯಮ ಒಂದು ಕುತೂಹಲಕಾರಿ ಪ್ರವಾಸಿ ಚಟುವಟಿಕೆಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಈ ಪ್ರವಾಸಿ ಚಟುವಟಿಕೆಯು ಭಾರತದಲ್ಲೂ ಸಹ ಹೆಚ್ಚಿನ ಗಮನ ಸೆಳೆಯುತ್ತಿದೆ.

ಮೂಲತಃ ಈ ರೀತಿಯ ಪ್ರವಾಸದಲ್ಲಿ ವೈನ್ ಅಥವಾ ದ್ರಾಕ್ಷಾ ರಸ ಪ್ರೀಯ ಪ್ರವಾಸಿಗರು ಸಾಮಾನ್ಯವಾಗಿ ಭಾಗವಹಿಸುತ್ತಾರೆ. ಇದರಲ್ಲಿ ಪ್ರವಾಸಿಗರು ಪ್ರಖ್ಯಾತಿಗಳಿಸಿದ ದ್ರಾಕ್ಷಿ ತೋಟಗಳು ಹಾಗೂ ಅದರಿಂದ ದ್ರಾಕ್ಷಾರಸ ಉತ್ಪಾದಿಸಲಾಗುವ ಕೈಗಾರಿಕಾ ಘಟಕಗಳಿಗೆ ಭೇಟಿ ನೀಡುತ್ತಾರೆ. ಆಂಗ್ಲದಲ್ಲಿ ಇವುಗಳನ್ನು ವೈನ್ ಯಾರ್ಡ್ ಗಳೆಂದು ಕರೆಯಲಾಗುತ್ತದೆ.

ವನ್ಯಜೀವಿ ಛಾಯಾಗ್ರಹಣ ಒಂದು ಅದ್ಭುತ ಕಲೆ!

ದ್ರಾಕ್ಷಾರಸ ಉತ್ಪಾದನೆಯು ಭಾರತದಲ್ಲಿ ಹೊಸ ವಿಷಯವೇನೂ ಅಲ್ಲ. ಇದಕ್ಕು ಸುಮಾರು 5000 ವರ್ಷಗಳ ಇತಿಹಾಸವಿದೆ. ವಿವಿಧ ತಳಿಯ ಅಥವಾ ಕೆಲವು ನಿರ್ದಿಷ್ಟ ತಳಿಯ ದ್ರಾಕ್ಷಿಗಳನ್ನು ವೈನ್ ತಯಾರಿಸಲು ಬೆಳೆಯಲಾಗುತ್ತದೆ. ಇವು ಹಳೆಯದಾದಷ್ಟು ಅದ್ಭುತ ರುಚಿ ಕೊಡುವುದಲ್ಲದೆ ಮತ್ತೇರುವಂತೆ ಮಾಡುವುದರಿಂದ ಸಾಕಷ್ಟು ಜನರು ವೈನ್ ಸವಿಯಲು ಇಚ್ಛಿಸುತ್ತಾರೆ.

ಪ್ರಸ್ತುತ ಲೇಖನದ ಮೂಲಕ ಭಾರತದ ಯಾವೆಲ್ಲ ವೈನ್ ಯಾರ್ಡುಗಳು ಅಥವಾ ದ್ರಾಕ್ಷಾರಸ ತೋಟಗಳು ಪ್ರಸಿದ್ಧಿಗಳಿಸಿವೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರವಾಸಿಗರನ್ನು ಸೆಳೆಯುತ್ತವೆ ಎಂಬುದರ ಕುರಿತು ತಿಳಿಯಿರಿ. ನಿಮಗೆ ವೈನ್ ತಯಾರಿಕೆ ಹಾಗೂ ವಿವಿಧ ರೀತಿಯ ವೈನ್ ರುಚಿ ಸವಿಯುವ ಅಭಿರುಚಿಯಿದ್ದಲ್ಲಿ ಇಲ್ಲಿಗೆ ಭೇಟಿ ನೀಡಿ ತೃಪ್ತರಾಗಬಹುದು.

ರುಚಿ ರುಚಿ ದ್ರಾಕ್ಷಾರಸ

ರುಚಿ ರುಚಿ ದ್ರಾಕ್ಷಾರಸ

ಸುಲಾ ವೈನ್ ಯಾರ್ಡ್ : ಸದ್ಯ ಭಾರತದಲ್ಲಿ ತಯಾರಾಗುವ ಅದ್ಭುತ ದ್ರಾಕ್ಷಾರಸಗಳಲ್ಲಿ ಸುಲಾ ವೈನ್ ಸಹ ಒಂದಾಗಿದೆ. ಸುಲಾ ದ್ರಾಕ್ಷಾ ತೋಟವು ಮಹಾರಾಷ್ಟ್ರದ ನಾಶಿಕ್ ಪಟ್ಟಣದಲ್ಲಿದೆ. ಮುಂಬೈ ನಗರದಿಂದ 180 ಕಿ.ಮೀ ದೂರವಿರುವ ಸುಲಾ ತೋಟ 2000 ರಲ್ಲಿ ಮೊದಲ ಬಾರಿಗೆ ಪ್ರಾರಂಭವಾಯಿತು. ಸಾಂದರ್ಭಿಕ.

ಚಿತ್ರಕೃಪೆ: UFA66

ಮೊದಲು ಚಿಕ್ಕದಾಗಿತ್ತು

ಮೊದಲು ಚಿಕ್ಕದಾಗಿತ್ತು

ಪ್ರಾರಂಭವಾದ ಸಂದರ್ಭದಲ್ಲಿ ಸುಮಾರು 30 ಎಕರೆಗಳಷ್ಟು ವಿಶಾಲವಾದ ಪ್ರದೇಶ ಹೊಂದಿದ್ದ ಈ ಯಾರ್ಡ್ ಅಲ್ಪ ಸಮಯದಲ್ಲೆ ಎಷ್ಟೊಂದು ಪ್ರಸಿದ್ಧಿ ಪಡೆಯಿತೆಂದರೆ ಪ್ರಸ್ತುತ 1800 ಕ್ಕೂ ಅಧಿಕ ಎಕರೆಗಳಷ್ಟು ಪ್ರದೇಶದಲ್ಲಿ ತನ್ನ ತೋಟ ಹೊಂದಿದೆ. ಅಷ್ಟೆ ಅಲ್ಲ ಪಕ್ಕದ ಕರ್ನಾಟಕದಲ್ಲೂ ಈ ಶಾಖೆಗಳು ಹರಡಿವೆ.

ಚಿತ್ರಕೃಪೆ: Multimotyl

ಎಲ್ಲವೂ ವಿಶೇಷ

ಎಲ್ಲವೂ ವಿಶೇಷ

2013 ರವರೆಗೆ ಸುಲಾ ಭಾರತದಲ್ಲಿ ಚೆನಿನ್ ಬ್ಲಾಂಕ್, ಸೌವಿಗ್ನಾನ್ ಬ್ಲಾಂಕ್, ರೈಸ್ಲಿಂಗ್ ಹಾಗೂ ಜಿನ್ಫಂಡೆಲ್ ಎಂಬ ದ್ರಾಕ್ಷಾರಸಗಳನ್ನು ಪರಿಚಯಿಸಿದ್ದು ಸಾಕಷ್ಟು ಬೇಡಿಕೆಯನ್ನು ಈ ದ್ರಾಕ್ಷಾರಸಗಳು ಹೊಂದಿವೆ. ಸುಲಾ ವೈನ್ ಯಾರ್ಡ್.

ಚಿತ್ರಕೃಪೆ: Sulawines1234

ವೈನ್ ಮಾರುಕಟ್ಟೆಯಲ್ಲಿ ರಾಜ

ವೈನ್ ಮಾರುಕಟ್ಟೆಯಲ್ಲಿ ರಾಜ

ಅಷ್ಟೆ ಅಲ್ಲ, ಭಾರತದ ವೈನ್ ಮಾರುಕಟ್ಟೆಯಲ್ಲಿ 70% ರಷ್ಟು ಪಾಲುದಾರಿಕೆಯನ್ನು ಸುಲಾ ವೈನ್ ಯಾರ್ಡ್ ಹೊಂದಿದೆ ಎಂದರೆ ನಿಮಗೆ ಅಚ್ಚರಿಯಾಗದೆ ಇರಲಾರದು. ದ್ರಾಕ್ಷಿ ಉತ್ಪಾದನೆ, ಪ್ರೊಸೆಸ್ಸಿಂಗ್, ಶೇಖರಣೆ ಹಾಗೂ ರುಚಿ ಅಧ್ಯನಗಳ ಘಟಕಗಳನ್ನು ಸುಲಾ ವೈನ್ ಯಾರ್ಡ್ ಹೊಂದಿದ್ದು ಪ್ರವಾಸಿಗರು ಈ ಎಲ್ಲ ವಿಧಾನಗಳನ್ನು ಕಣ್ಣಾರೆ ನೋಡಬಹುದಾಗಿದೆ.

ಚಿತ್ರಕೃಪೆ: DhanashriP26

ಹೆಸರು ಬರಲು ಕಾರಣ

ಹೆಸರು ಬರಲು ಕಾರಣ

ರಾಜೀವ್ ಸಾಮಂತ ಎಂಬುವವರಿಂದ ಸುಲಾ ವೈನ್ ತಯಾರಿಕೆಯ ಕೇಂದ್ರವನ್ನು 1998 ರಲ್ಲಿ ಸ್ಥಾಪಿಸಲಾಯಿತು. ಅವರು ತಮ್ಮ ತಾಯಿಯಾದ ಸುಲಭಾ ಅವರ ಗೌರವಾರ್ಥವಾಗಿ ಸುಲಾ ಎಂಬ ಹೆಸರನ್ನು ಇದಕ್ಕಿಟ್ಟರು. ನಾಶಿಕ್ ನಲ್ಲಿ ಪ್ರಾರಂಭವಾದ ಈ ಕೇಂದ್ರ ಅಲ್ಪ ಸಮಯದಲ್ಲೆ ಅಪಾರ ಜನಪ್ರೀಯತೆಗಳಿಸಿ ಇಂದು ಸಾಕಷ್ಟು ಪ್ರಸಿದ್ಧಿ ಪಡೆದು ನಾಶಿಕ್ ಪ್ರಸ್ತುತ, ವೈನ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದು ಕರೆಸಿಕೊಂಡಿದೆ. ಸುಲಾ ವೈನ್ ಯಾರ್ಡ್ ರುಚಿ ನೋಡುವ ಘಟಕ.

ಚಿತ್ರಕೃಪೆ: Sulawines1234

ಅದ್ಭುತ ರುಚಿ

ಅದ್ಭುತ ರುಚಿ

ವೈನ್ ಪ್ರವಾಸೋದ್ಯಮದ ಭಾಗವಾಗಿ ಸುಲಾ ವೈನ್ ಯಾರ್ಡ್ ನಲ್ಲಿ ದ್ರಾಕ್ಷಾರಸದ ರುಚಿ ಸವಿಯಲೆಂದು ಎರಡು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಅವುಗಳನ್ನು ಲಿಟಲ್ ಇಟಲಿ ಹಾಗೂ ಸೋಮ ಎಂದು ಕರೆಯುತ್ತಾರೆ. ಇಲ್ಲಿ ರಿಸಾರ್ಟ್ ಸಹ ಇದ್ದು ಅದ್ಭುತ ಪ್ರವಾಸಿ ಅನುಭವ ನೀಡುತ್ತದೆ.

ಚಿತ್ರಕೃಪೆ: Ry8999

ನೃತ್ಯ, ಸಂಗೀತ, ಕುಡಿತ!

ನೃತ್ಯ, ಸಂಗೀತ, ಕುಡಿತ!

ನಾಶಿಕ್ ನಲ್ಲಿರುವ ಸುಲಾ ಕೇಂದ್ರದಲ್ಲಿ ವಾರ್ಷಿಕವಾಗಿ ಎರಡು ದಿನಗಳ ಕಾಲ ಸುಲಾ ಉತ್ಸವವನ್ನೂ ಸಹ ಅದ್ದೂರಿಯಾಗಿ ಆಚರಿಸಲಾಗುತ್ತದೆ. ದೇಶ ವಿದೇಶಗಳಿಂದ ವೈನ್ ಪ್ರಿಯ ಪ್ರವಾಸಿಗರು ಈ ಉತ್ಸವದಲ್ಲಿ ಭಾಗಿಯಾಗುತ್ತಾರೆ. ನೃತ್ಯ, ಕುಡಿತ ಹಾಗೂ ಸಂಗೀತಗಳು ಈ ಉತ್ಸವದ ಪ್ರಮುಖ ಆಕರ್ಷಣೆಗಳು. ಸುಲಾ ಕೇಂದ್ರದಲ್ಲಿರುವ ಉತ್ಸವದ ಸಭಾಂಗಣ.

ಚಿತ್ರಕೃಪೆ: Sulawines1234

ನಂದಿ ಬೆಟ್ಟದ ಬಳಿ

ನಂದಿ ಬೆಟ್ಟದ ಬಳಿ

ಗ್ರೋವರ್ ವೈನ್ ಯಾರ್ಡ್ : ಬೆಂಗಳೂರು ಬಳಿಯಿರುವ ಅದ್ಭುತ ದ್ರಾಕ್ಷಾ ತೋಟ ಇದಾಗಿದೆ. ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿ ಪ್ರಖ್ಯಾತ ನಂದಿ ಬೆಟ್ಟದ ಹತ್ತಿರ ಈ ತೋಟವಿದೆ. ಈ ಭಾಗವು ದ್ರಾಕ್ಷಾರಸದ ದ್ರಾಕ್ಷಿ ಬೆಳೆಗೆ ಅನುಕೂಲಕರ ಸ್ಥಿತಿಗತಿಗಳನ್ನು ಹೊಂದಿರುವುದು ವಿಶೇಷವಾಗಿದೆ. ವೈನ್ ಯಾರ್ಡ್ ನೋಡಬಯಸುವ ಪ್ರವಾಸಿಗರು ಇಲ್ಲಿಗೊಮ್ಮೆ ಭೇಟಿ ನೀಡಬಹುದು. ಸಾಂದರ್ಭಿಕ.

ಚಿತ್ರಕೃಪೆ: Rosendahl

ಯಾರ್ಕ್ ವೈನರಿ

ಯಾರ್ಕ್ ವೈನರಿ

ಯಾರ್ಕ್ ವೈನರಿ ಹಾಗೂ ರುಚಿ ಕೇಂದ್ರ : ಮಹಾರಾಷ್ಟ್ರದ ನಾಶಿಕ್ ಬಳಿಯಲ್ಲೆ ಇರುವ ಗೋದಾವರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಗಂಗಾಪುರ ಆಣೆಕಟ್ಟೆಯ ಬಳಿಯಿರುವ ಸುಂದರ ಪ್ರಾಕೃತಿಕ ಭೂಮಿಯಲ್ಲಿರುವ ವೈನ್ ಯಾರ್ಡ್ ಇದಾಗಿದೆ.

ಚಿತ್ರಕೃಪೆ: Bernt Rostad

ಕ್ರಮಬದ್ಧ ಆಯೋಜನೆ

ಕ್ರಮಬದ್ಧ ಆಯೋಜನೆ

ಇಲ್ಲಿ ಅಂದರೆ ವೈನ್ ಯಾರ್ಡ್ ನಲ್ಲಿ ಪ್ರವಾಸಿ ಚಟುವಟಿಕೆಯನ್ನು ಆಯೋಜಿಸಲಾಗುತ್ತದೆ ಹಾಗೂ ದ್ರಾಕ್ಷಾ ರಸ ರುಚಿ ನೋಡುವ ಕೇಂದ್ರವೂ ಇದ್ದು ಮಧ್ಯಾಹ್ನದಿಂದ ರಾತ್ರಿ ಹತ್ತು ಘಂಟೆಯವರೆಗೆ ಅತಿಥಿಗಳಿಗಾಗಿ ತೆರೆದಿರುತ್ತದೆ. ವಿವಿಧ ಬಗೆಯ ದ್ರಾಕ್ಷಾರಸಗಳ ರುಚಿ ಇಲ್ಲಿ ನೋಡಬಹುದು.

ಚಿತ್ರಕೃಪೆ: Bernt Rostad

ಚಟು ಡಿ'ಓರಿ

ಚಟು ಡಿ'ಓರಿ

ಚಟು ಡಿ'ಓರಿ : ನಾಶಿಕ್-ದಿಂಡೋರಿ ಮಾರ್ಗದಲ್ಲಿ ನಾಶಿಕ್ ನಿಂದ 25 ಕಿ.ಮೀ ಗಳಷ್ಟು ದೂರದಲ್ಲಿ ಈ ಸುಂದರ ವೈನ್ ಯಾರ್ಡ್ ಇದೆ. ರುಚಿ ನೋಡುವ ಕೇಂದ್ರವೂ ಇರುವ ಈ ತೋಟಕ್ಕೆ ಭೇಟಿ ನೀಡಬಹುದಾಗಿದೆ. ಇದು ನಾಶಿಕ್ ನಲ್ಲಿ ಸುಲಾದ ನಂತರ ಅತಿ ದೊಡ್ಡದಾಗಿರುವ ವೈನ್ ಯಾರ್ಡ್ ಆಗಿದೆ.

ಚಿತ್ರಕೃಪೆ: Jon Sullivan

ಚರೋಸಾ ವೈನ್ ಯಾರ್ಡ್

ಚರೋಸಾ ವೈನ್ ಯಾರ್ಡ್

ಚರೋಸಾ ವೈನ್ ಯಾರ್ಡ್ : ಮಹಾರಾಷ್ಟ್ರದ ದಿಂಡೋರಿ ಜಿಲ್ಲೆಯಲ್ಲಿದೆ ಈ 230 ಎಕರೆಗಳಷ್ಟು ವಿಶಾಲವಾದ ದ್ರಾಕ್ಷಿ ತೋಟ. ಸ್ಪೈನ್ ಮೂಲದ ಅದ್ಭುತ ವೈನ್ ಸವಿಯುವ ಅವಕಾಶ ಪ್ರವಾಸಿಗರಿಗೆ ಈ ವೈನ್ ಯಾರ್ಡ್ ನಲ್ಲಿ ದೊರಕುತ್ತದೆ. ನಾಶಿಕ್ ಪಟ್ಟಣದಿಂದ ಸುಮಾರು 55 ಕಿ.ಮೀ ಗಳಷ್ಟು ದೂರದಲ್ಲಿದೆ ಈ ವೈನ್ ಯಾರ್ಡ್.

ಚಿತ್ರಕೃಪೆ: terence

ಫ್ರಟೆಲ್ಲಿ ವೈನ್ಸ್

ಫ್ರಟೆಲ್ಲಿ ವೈನ್ಸ್

ಫ್ರಟೆಲ್ಲಿ ವೈನ್ಸ್ : ಇಟಲಿ ಭಾಷೆಯಲ್ಲಿ ಫ್ರಟೆಲ್ಲಿ ಎಂದರೆ ಸಹೋದರರು ಎಂಬರ್ಥವಿದೆ. ಈ ಒಂದು ಅರ್ಥ ನೀಡುವ ಸುಂದರ ವೈನ್ ಯಾರ್ಡ್ ಇದಾಗಿದೆ. ಇಟಲಿ, ಮಹಾರಾಷ್ಟ್ರ ಹಾಗೂ ದೆಹಲಿ ಮೂಲದ ಮೂರು ಸ್ನೇಹಿತರಿಂದ ಈ ವೈನ್ ಯಾರ್ಡ್ 2007 ರಲ್ಲಿ ಆರಂಭವಾಯಿತು. ಇದು ಮಹಾರಾಷ್ಟ್ರ ಸೋಲಾಪುರ ಜಿಲ್ಲೆಯ ಅಕ್ಲುಜ್ ಎಂಬಲ್ಲಿದೆ.

ಚಿತ್ರಕೃಪೆ: Missvain

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X