Search
  • Follow NativePlanet
Share
» »ಹುಬ್ಬೇರಿಸುವಂತೆ ಮಾಡುವ ಇಂಜಿನಿಯರಿಂಗ್ ಅದ್ಭುತಗಳು!

ಹುಬ್ಬೇರಿಸುವಂತೆ ಮಾಡುವ ಇಂಜಿನಿಯರಿಂಗ್ ಅದ್ಭುತಗಳು!

By Vijay

ಪ್ರಾಣಿ ಸಂಕುಲದಲ್ಲೆ ಹೆಚ್ಚಿನ ಜ್ಞಾನ ಹಾಗೂ ಬುದ್ಧಿಯುಳ್ಳ ಮಾನವನು ವಿಕಸನಗೊಂಡಂತೆಲ್ಲ ತನಗೆ ಅನುಕೂಲವಾಗುವಂತೆ ಎಲ್ಲ ಸೌಕರ್ಯಗಳನ್ನು ಮಾಡಿಕೊಂಡನು. ಹಿಂದೊಮ್ಮೆ ಗುಹೆಗಳಲ್ಲಿ, ಗಿಡ-ಮರಗಳ ಪೊಟರೆಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ಕ್ರಮೇಣವಾಗಿ ತನ್ನ ಬುದ್ಧಿ ಕೌಶಲ್ಯಗಳಿಂದ ವಾಸಿಸಲು ಯೋಗ್ಯವಾದಂತಹ ರಚನೆಗಳನ್ನು ನಿರ್ಮಿಸಿಕೊಂಡ.

ಹೀಗೆ ಮುಂದುವರೆದ ಮನುಷ್ಯನ ಜಾಣ್ಮೆ, ನಿಪುಣತೆಗಳು ಇಂದು ನಂಬಲೂ ಸಹ ಅಸಾಧ್ಯವೆನ್ನುವಷ್ಟರ ಮಟ್ಟಿಗೆ ಅದ್ಭುತವಾದ ಕಟ್ಟಡ ರಚನೆಗಳನ್ನು ನಿರ್ಮಿಸುವಷ್ಟು ಪಕ್ವಗೊಂಡಿದೆ. ಈ ರೀತಿಯ ರಚನೆಗಳಿಗೆ ತಾಂತ್ರಿಕ ನಿಪುಣತೆ ಅವಶ್ಯಕವಾಗಿದ್ದು ಅದನ್ನೆ ನಾವು ಇಂದು "ಇಂಜಿನಿಯರಿಂಗ್" ಎಂದು ಸಾಮಾನ್ಯವಾಗಿ ಕರೆಯುತ್ತೇವೆ ಹಾಗೂ ಜಗತ್ತಿನ ಬಹುತೇಕ ದೇಶಗಳು ಈ ತಾಂತ್ರಿಕ ಕುಶಲತೆಗೆ ಒಂದು ದಿನ ಮುಡಿಪಾಗಿಟ್ಟಿವೆ.

ಅದರಂತೆ ಭಾರತದಲ್ಲಿ ಸೆಪ್ಟಂಬರ್ 15 ಅನ್ನು "ಇಂಜಿನಿಯರುಗಳ ದಿನ" ವನ್ನಾಗಿ ಆಚರಿಸಲಾಗುತ್ತದೆ. ಮೂಲತಃ ಈ ದಿನ ಭಾರತ ಕಂಡ ಅತ್ಯದ್ಭುತ ಇಂಜಿನಿಯರ್ ಆದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಗೌರವಾರ್ಥವಾಗಿ ಈ ದಿನವನ್ನಾಚರಿಸಲಾಗುತ್ತದೆ. ಹಾಗಾದರೆ ಬನ್ನಿ ಭಾರತದಲ್ಲಿರುವ ಇಂಜಿನಿಯರಿಂಗ್ ಕೌಶಲ್ಯತೆಗೆ ಸಾಕ್ಷಿಯಾಗಿರುವ ಕೆಲವು ಅದ್ಭುತ ರಚೆನೆಗಳ ಕುರಿತು ತಿಳಿಯೋಣ. ಇವು ಪ್ರವಾಸ ದೃಷ್ಟಿಯಿಂದಲೂ ಸಹ ಸಾಕಷ್ಟು ಗಮನಸೆಳೆವ ಆಕರ್ಷಣೆಗಳಾಗಿರುವುದು ವಿಶೇಷ.

ಬಾಂದ್ರಾ-ವರ್ಲಿ ಸಮುದ್ರ ಸೇತುವೆ:

ಬಾಂದ್ರಾ-ವರ್ಲಿ ಸಮುದ್ರ ಸೇತುವೆ:

ಬಾಂದ್ರಾ-ವರ್ಲಿ ಸಮುದ್ರ ಸೇತುವೆ: ಇಂಜಿನಿಯರಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಗಿ ನಿಂತಿರುವ ಈ ಅದ್ಭುತ ಸೇತುವೆ ಮಹಾರಾಷ್ಟ್ರದ ರಾಜಧಾನಿ ಮುಂಬೈ ನಗರದಲ್ಲಿದೆ. ಇದನ್ನು ಅಧಿಕೃತವಾಗಿ ರಾಜೀವ್ ಗಾಂಧಿ ಸೀ ಲಿಂಕ್ ಎಂದು ಕರೆಯುತ್ತಾರೆ.

ಚಿತ್ರಕೃಪೆ: Amit Kulkarni

ಸಮುದ್ರ ಸೇತುವೆ:

ಸಮುದ್ರ ಸೇತುವೆ:

ಅಗಾಧವಾಗಿ ಬೆಳೆದಿರುವ ಮುಂಬೈ ಮಹಾನಗರದ ಎರಡು ಪ್ರಮುಖ ವಾಣಿಜ್ಯ ಪ್ರದೇಶಗಳಾದ ಬಾಂದ್ರಾ ಹಾಗೂ ವರ್ಲಿಗಳನ್ನು ಬೆಸೆಯುವ ಈ ಸೇತುವೆಯು ಎಂಟು ಪಥಗಳನ್ನು ಹೊಂದಿದ್ದು 5.6 ಕಿ.ಮೀ ಗಳಷ್ಟು ಉದ್ದವನ್ನು ಹೊಂದಿದೆ. ಮೊದಲಿಗೆ ಈ ಎರಡು ಪ್ರದೇಶಗಳನ್ನು ತಲುಪಲು ಒಂದುವರೆ ಘಂಟೆಗಳು ಬೇಕಾಗಿತ್ತು ಆದರೆ ಈ ಸೇತುವೆಯಿಂದ ಕೇವಲ ಅರ್ಧ ಘಂಟೆಯಲ್ಲಿ ಪ್ರಯಾಣಿಸಬಹುದಾಗಿದೆ.

ಚಿತ್ರಕೃಪೆ: Gladson Machado

ಸೇತುವೆ

ಸೇತುವೆ

ಅದ್ಭುತ ತಾಂತ್ರಿಕ ಕುಶಲತೆ ಹಾಗೂ ನೈಪುಣ್ಯಕ್ಕೆ ಸಾಕ್ಷಿಯಾಗಿರುವ ಈ ಸುಂದರ ಸೇತುವೆ ನಗರದ ಒಂದು ಆಕರ್ಷಕ ಕೇಮ್ದ್ರಬಿಂದುವಾಗಿದ್ದು ರಾತ್ರಿಯ ಸಮಯದಲ್ಲಿ ಅದ್ಭುತವಾಗಿ ಗೋಚರಿಸುತ್ತದೆ.

ಚಿತ್ರಕೃಪೆ: Ameya charankar

ಬಾಗ್ಮನೆ ಟೆಕ್ ಪಾರ್ಕ್ :

ಬಾಗ್ಮನೆ ಟೆಕ್ ಪಾರ್ಕ್ :

ಬಾಗ್ಮನೆ ಟೆಕ್ ಪಾರ್ಕ್ : ಐಟಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಗತ್ತಿನಲ್ಲೆ ಸಾಕಷ್ಟು ಸದ್ದು ಮಾಡಿರುವ ಭಾರತದ ಸಿಲಿಕಾನ್ ಕಣಿವೆ ಎಂದೆ ಕರೆಯಲ್ಪಡುವ ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿರುವ ಐಟಿ ಕಚೇರಿಗಳಿರುವ ಬಾಗ್ಮನೆ ಟೆಕ್ ಪಾರ್ಕ್ ಕಟ್ಟಡ.

ಚಿತ್ರಕೃಪೆ: Ajith Kumar

ಬಾಗ್ಮನೆ

ಬಾಗ್ಮನೆ

ಸಾಕಷ್ಟು ತಾಂತ್ರಿಕ ಕೌಶಲ್ಯತೆಗಳನ್ನು ಬಳಸಿ, ಯೋಜನಾಬದ್ಧವಾಗಿ ನಿರ್ಮಿಸಲಾಗಿರುವ ಈ ಕಟ್ಟಡ ಸಾಕಷ್ಟು ಆಧುನಿಕವಾಗಿ ವಿನ್ಯಾಸಗೊಳಿಸಲ್ಪಟ್ಟಿರುವುದಲ್ಲದೆ ನೋಡುಗರನ್ನು ಕ್ಷಣ ಮಾತ್ರದಲ್ಲೆ ಆಕರ್ಷಿಸಬಲ್ಲುದು.

ಚಿತ್ರಕೃಪೆ: Prathapwagle

ವಿಧಾನ ಸೌಧ :

ವಿಧಾನ ಸೌಧ :

ವಿಧಾನ ಸೌಧ : ಮೊದ ಮೊದಲು ಅಂದರೆ 70-80 ರ ದಶಕಗಳಲ್ಲಿ ಬೆಂಗಳೂರು ಅಂದರೆ ಸಾಕು ಒಂದು ಭವ್ಯವಾದ ರಚನೆಯು ಎಲ್ಲಾ ಟಿವಿ, ಸಿನೆಮಾ ಪರದೆಗಳ ಮೇಲೆ ಬರುತ್ತಿತ್ತು. ಅದೆ ಬೆಂಗಳೂರಿನ ವಿಧಾನ ಸೌಧ. ಅದ್ಭುತ ತಾಂತ್ರಿಕ ಕೌಶಲ್ಯಕ್ಕೆ ಸಾಕ್ಷಿಯಾಗಿ ನಿಂತಿರುವ ವೈಭವದ ಕಟ್ಟಡ. ಮೊದಲು ಜನರು ಬೆಂಗಳೂರಿಗೆ ವಿಧಾನ ಸೌಧ ನೋಡಲೆಂದೆ ಪ್ರವಾಸ ಬರುತ್ತಿದ್ದರು ಎಂದರೂ ತಪ್ಪಾಗಲಾರದು.

ಚಿತ್ರಕೃಪೆ: Bikashrd

ವಿಧಾನ ಸೌಧ :

ವಿಧಾನ ಸೌಧ :

ಅಂತಹ ಕುಶಲ ವಿನ್ಯಾಸಗಾರಿಕೆಗೆ ಸಾಕ್ಷಿಯಾಗಿದೆ ಈ ನಮ್ಮ ಸೌಧ. ಮೂಲತಃ ಈ ಅದ್ಭುತ ರಚನೆಯ ನಿರ್ಮಾಣಕ್ಕೆ ಪ್ರಮುಖ ಕಾರಣ ಕರ್ತರಾದವರು ಕೆಂಗಲ್ ಹನುಮಂತಯ್ಯನವರು. ಈ ರಚನೆಗೆ ಅಡಿಪಾಯವನ್ನು ಅಥವಾ ಶಂಖು ಸ್ಥಾಪನೆಯನ್ನು ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂರವರು ನೆರವೇರಿಸಿದ್ದರು ಹಾಗೂ ಅದು ಬೇಗನೆ ಪೂರ್ಣಗೊಳ್ಳುವಂತೆ ಶ್ರಮ ಪಟ್ಟವರು ಹನುಮಂತಯ್ಯನವರು.

ಚಿತ್ರಕೃಪೆ: Muhammad Mahdi Karim

ಕೃಷ್ಣರಾಜ ಸಾಗರ

ಕೃಷ್ಣರಾಜ ಸಾಗರ

ಕೃಷ್ಣರಾಜ ಸಾಗರ ಆಣೆಕಟ್ಟು : ಕೆಆರೆಸ್ಸ್ ಅಥವಾ ಕೆ ಆರ್ ಎಸ್ ಎಂತಲೂ ಕರೆಯಲ್ಪಡುವ ಕೃಷ್ಣರಾಜ ಸಾಗರ ಆಣೆಕಟ್ಟು/ಜಲಾಶಯ ಒಂದು ಅದ್ಭುತ ತಾಂತ್ರಿಕ ಕೌಶಲ್ಯತೆಯಿಂದ ಕೂಡಿರುವ ಸುಂದರ ಆಣೆಕಟ್ಟಾಗಿದೆ. ಇದರ ವಿನ್ಯಾಸ ಹಾಗೂ ನಿರ್ಮಾಣ ಜವಾಬ್ದಾರಿಯನ್ನು ಹೊತ್ತವರು ಭಾರತದ ಅತಿ ಪ್ರತಿಭಾನ್ವಿತ ಸಿವಿಲ್ ಇಂಜಿನಿಯರ್ ಆದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರು.

ಚಿತ್ರಕೃಪೆ: Ashwin Kumar

ಸುಂದರ ಉದ್ಯಾನ

ಸುಂದರ ಉದ್ಯಾನ

ಕೊಡಗಿನಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿಯುತ್ತ ತಮಿಳುನಾಡಿನ ಮೂಲಕ ಬಂಗಾಳ ಕೊಲ್ಲಿಗೆ ಸೇರುವ ಕಾವೇರಿಯ ನೀರನ್ನು ಮೈಸೂರು, ಮಂಡ್ಯ ಭಾಗದ ರೈತಾಪಿ ಜನರ ಕೃಷಿಗೆ ಅನುಕೂಲಕರವಾಗುವ ಸದುದ್ದೇಶದಿಂದ ಈ ಆಣೆಕಟ್ಟೆಯ ನಿರ್ಮಾಣವಾಗಿದ್ದು ಇದರ ಜೊತೆಯಾಗಿಯೆ ನಿರ್ಮಿಸಲಾದ ಬೃಂದಾವನ ಉದ್ಯಾನವೂ ಸಹ ಸಾಕಷ್ಟು ಆಕರ್ಷಿಸುತ್ತದೆ.

ಚಿತ್ರಕೃಪೆ: Ashwin Kumar

ಬಹಾಯಿ ಮಂದಿರ

ಬಹಾಯಿ ಮಂದಿರ

ಲೋಟಸ್ ಟೆಂಪಲ್ : ಇಂಜಿನಿಯರಿಂಗ್ ನಿರ್ಮಾಣ ಕುಶಲತೆಗೆ ಅದ್ಭುತ ಹಾಗೂ ಮನಮೋಹಕ ಸಾಕ್ಷಿಯಾಗಿದೆ ಬಹಾಯಿ ಮಂದಿರ ಅಥವಾ ಲೋಟಸ್ ಟೆಂಪಲ್. ಕಮಲದ ಪಕುಳಿಯ ಹಾಗೆ ಅದ್ಭುತವಾಗಿ ವಾಸ್ತು ವಿನ್ಯಾಸದ ಕಾಮಗಾರಿ ಹೊಂದಿರುವ ಈ ಮಂದಿರವು ಭಾರತದ ರಾಜಧಾನಿ ನಗರ ದೆಹಲಿಯಲ್ಲಿದೆ.

ಚಿತ್ರಕೃಪೆ: A.Savin

ಆಕರ್ಷಕ ರಚನೆ

ಆಕರ್ಷಕ ರಚನೆ

ಇದರ ವಿನ್ಯಾಸ ಹಾಗೂ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಶಸ್ತಿ /ಪ್ರಮಾಣ ಪತ್ರಗಳನ್ನು ಪಡೆದಿರುವ ಈ ದೇವಾಲಯ ದೆಹಲಿಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲೊಂದಾಗಿದೆ. ಇದೊಂದು ಸರ್ವಧರ್ಮಪ್ರಿಯ ದೇವಾಲಯವಾಗಿದೆ. ಇಲ್ಲಿ ಜನರು ಯಾವುದೆ ಜಾತಿ-ಧರ್ಮಗಳ ಅನುಬಂಧವಿಲ್ಲದೆ ಪ್ರವೇಶಿಸಬಹುದು ಹಾಗೂ ಧ್ಯಾನಗೈಯ್ಯಬಹುದು.

ಚಿತ್ರಕೃಪೆ: Rumpelstiltskin223

ಇಡುಕ್ಕಿ ಡ್ಯಾಂ

ಇಡುಕ್ಕಿ ಡ್ಯಾಂ

ಇಡುಕ್ಕಿ ಆರ್ಚ್ ಡ್ಯಾಮ್ : ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಚಿರುತೋಣಿ ಎಂಬಲ್ಲಿ ನೆಲೆಸಿದೆ ಏಷಿಯಾದ ಮೂರನೆಯ ಅತಿ ಎತ್ತರದ ಈ ಆರ್ಚ್ ಡ್ಯಾಮ್. ಅದ್ಭುತ ತಾಂತ್ರಿಕ ಕೌಶಲ್ಯ ಅಡಕವಾಗಿರುವ ಈ ಆಣಕಟ್ಟನ್ನು ಕುರುವಾನ್ಮಲ ಹಾಗು ಕುರಾತಿಮಲ ಎಂಬ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಲಾಗಿದೆ.

ಚಿತ್ರಕೃಪೆ: india-wris.nrsc.gov.in

ಅಗಾಧ ಎತ್ತರದ ಆಣೆಕಟ್ಟು

ಅಗಾಧ ಎತ್ತರದ ಆಣೆಕಟ್ಟು

ಈ ಡ್ಯಾಮ್ ಸುಮಾರು 554 ಅಡಿಗಳಷ್ಟು ಎತ್ತರವಾಗಿದ್ದು ನೋಡಲು ಬಲು ಆಕರ್ಷಕವಾಗಿದೆ. ಇದರಲ್ಲಿ ನೀರು ಹೆಚ್ಚಾಗಿ ಅಲ್ಲಲ್ಲಿ ಚದುರಿ ಹೋಗುವ ನೀರನ್ನು ಸಾಮಾನ್ಯವಾಗಿ ಜಲಾಶಯದ ಸುತ್ತಮುತ್ತಲಿನ ಹೊಲ ಗದ್ದೆಗಳಿಗೆ ನೀರುಣಿಸಲು ಉಪಯೋಗಿಸಲಾಗುತ್ತದೆ. ಓಣಂ ಹಾಗೂ ಕ್ರಿಸ್ಮಸ್ ಸಂದರ್ಭದಲ್ಲಿ ಪ್ರವಾಸಿಗರಿಗೆ ಈ ಆಣೆಕಟ್ಟೆಯನ್ನು ನೋಡಲು ಅವಕಾಶ ಒದಗಿಸಲಾಗುತ್ತದೆ.

ಚಿತ್ರಕೃಪೆ: Sreejithk2000

ಮೈಸೂರು ಅರಮನೆ

ಮೈಸೂರು ಅರಮನೆ

ಮೈಸೂರು ಅರಮನೆ : ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ನಗರವಾದ ಮೈಸೂರಿನಲ್ಲಿರುವ ಮೈಸೂರು ಅರಮನೆಯೂ ಸಹ ಒಂದು ಅದ್ಭುತ ಇಂಜಿನಿಯರಿಂಗ್ ಕೌಶಲ್ಯತೆಗೆ ಸಾಕ್ಷಿಯಾಗಿರುವ ಸ್ಮಾರಕ ರಚನೆಯಾಗಿದೆ. ಮೈಸೂರು ನಗರದ ಪ್ರಮುಖ ಹಾಗೂ ಗುರುತರವಾದ ಆಕರ್ಷಣೆಯಾದ ಈ ಅರಮನೆಯು ದಸರಾ ಸಂದರ್ಭದಲ್ಲಿ ಸಹಸ್ರ ಸಹಸ್ರ ದಿಪಗಳಿಂದ ಪ್ರಕಾಶಮಾನವಾಗಿ ಬೆಳಗುವ ದೃಶ್ಯವಂತೂ ಎಲ್ಲರಿಗೂ ಅಚ್ಚರಿ ಪಡಿಸುವಂತಿರುತ್ತದೆ.

ಚಿತ್ರಕೃಪೆ: Ashwin Kumar

ಪಂಬನ್

ಪಂಬನ್

ಪಂಬನ್ ಸೇತುವೆ : ತಮಿಳುನಾಡನ್ನು ರಾಮೇಶ್ವರದೊಂದಿಗೆ ಬೆಸೆಯುವ ಪಂಬನ್ ಸೇತುವೆಯು ಒಂದು ಅದ್ಭುತ ತಾಂತ್ರಿಕ ಕೌಶಲ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಸಮುದ್ರದಲ್ಲಿ ಎದೆಯುಬ್ಬಿಸಿ ನಿಂತಿರುವ ಈ ಸೇತುವೆಯು ಸಾಕಷ್ಟು ಹಳೆಯದಾಗಿದ್ದು ಇಂದಿಗೂ ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿ ಕೊಳ್ಳಲಾಗಿದೆ. ಉಕ್ಕಿನ ದ್ವಾರಗಳಿದ್ದು ಹಡುಗು ಸಾಗುವಾಗ ತೆರೆದು ಕೊಳ್ಳುವಂತಿದೆ.

ಚಿತ್ರಕೃಪೆ: ASIM CHAUDHURI

ತೆಹರಿ ಆಣೆಕಟ್ಟು

ತೆಹರಿ ಆಣೆಕಟ್ಟು

ತೆಹರಿ ಆಣೆಕಟ್ಟು : ಉತ್ತರಾಖಂಡ ರಾಜ್ಯದ ತೆಹರಿ ಎಂಬಲ್ಲಿ ಭಾಗೀರತಿ ನದಿಗೆ ಅಡ್ಡಲಾಗಿ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಭಾರತದ ಅತ್ಯಂತ ಎತ್ತರದ ಆಣೆಕಟ್ಟಾಗಿರುವ ಇದು 855 ಅಡಿಗಳ ಎತ್ತರವನ್ನು ಹೊಂದಿದೆ ಹಾಗು 1886 ಅಡಿಗಳಷ್ಟು ಅಗಲವಾಗಿದೆ. 2.6 ಕ್ಯೂ.ಕಿ.ಮೀ ಗಳಷ್ಟು ನೀರನ್ನು ಹಿಡಿದಿಡುವ ಸಾಮರ್ಥ್ಯ ಇದಕ್ಕಿದೆ.

ಚಿತ್ರಕೃಪೆ: india-wris.nrsc.gov.in

ಭಾಕ್ರಾ

ಭಾಕ್ರಾ

ಭಾಕ್ರಾ ಆಣೆಕಟ್ಟು : ಇದೊಂದು "ಕಾಂಕ್ರೀಟ್ ಗ್ರ್ಯಾವಿಟಿ" ಶೈಲಿಯ ಆಣೆಕಟ್ಟಾಗಿದ್ದು ಇದನ್ನು ಹಿಮಾಚಲ ಪ್ರದೇಶ ರಾಜ್ಯದ ಬಿಲಾಸಪುರದಲ್ಲಿ ಸಟ್ಲೆಜ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಭಾಕ್ರಾ ಹಳ್ಳಿಯ ಬಳಿಯಿರುವ ಒಂದು ಕಂದಕಮಯ ಪ್ರದೇಶದಲ್ಲಿ ಈ ಆಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ಈ ಅದ್ಭುತ ವಿವಿಧೋದ್ದೇಶಗಳ ಆಣೆಕಟ್ಟು 226 ಮೀ. ಗಳಷ್ಟು ಎತ್ತರವನ್ನು ಹೊಂದಿದೆ. ಈ ಆಣೆಕಟ್ಟೆಯ ಕೆಳ ಮುಖದಲ್ಲಿ ಸುಮಾರು 15 ಕಿ.ಮೀ ಬಳಿಕ ನಾಂಗಲ್ ಎಂಬ ಸ್ಥಳವಿದ್ದು ಅಲ್ಲಿಯೂ ಸಹ ಒಂದು ಆಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ಈ ಎರಡು ಆಣೆಕಟ್ಟುಗಳನ್ನು ಒಟ್ಟಾರೆಯಾಗಿ ಭಾಕ್ರಾ-ನಾಂಗಲ್ ಆಣೆಕಟ್ಟು ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: india-wris.nrsc.gov.in

ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯ

ತುಂಗ ಭದ್ರಾ ಆಣೆಕಟ್ಟು : ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದ ಬಳಿ ಹರಿದಿರುವ ಕೃಷ್ಣಾ ನದಿಯ ಉಪನದಿಯಾದ ತುಂಗಭದ್ರಾ ನದಿಗೆ ಅಡ್ಡಲಾಗಿ ಈ ಬೃಹತ್ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅಡಿಪಾಯವನ್ನು ಹೊರತುಪಡಿಸಿ ಭೂಮಟ್ಟದಿಂದ 49 ಮೀ ಗಳಷ್ಟು ಎತ್ತರವಿರುವ ಈ ಅಣೆಕಟ್ಟು ಬಹುಪಯೋಗಿ ಜಲಾಶಯವಾಗಿದೆ.

ಚಿತ್ರಕೃಪೆ: Haxplorer

ರಾಮ ಸೇತು

ರಾಮ ಸೇತು

ತಾಳಿ...ಇದು ಸೇತುವೆಯ ಪಾಕ್ಷಿಕ ನೋಟ. ನಿರ್ಮಾಣ ಹೊಂದುತ್ತಿರುವಾಗ ದೇಶದಲ್ಲೆ ಅತಿ ಉದ್ದದ ಸೇತುವೆ ಎಂಬ ಕೀರ್ತಿಗೆ ಇದು ಭಾಜನವಾಗಿತ್ತು. 1982 ಮೇ ತಿಂಗಳಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರಿಂದ ಉದ್ಘಾಟಿಸಲ್ಪಟ್ಟಿದ್ದ ಈ ಸೇತುವೆ ಇರುವುದು ಬಿಹಾರ್ ರಾಜ್ಯದಲ್ಲಿ. ಪವನ್ ಸೇತು ಎಂದೂ ಕರೆಯಲ್ಪಡುವ 5,575 ಮೀಟರ್ ಉದ್ದದ ಈ ಸೇತುವೆಯು ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು ಪಾಟ್ನಾದ ದಕ್ಷಿಣ ಭಾಗವನ್ನು ಹಾಜೀಪುರದ ಉತ್ತರ ಭಾಗಕ್ಕೆ ಇದು ಸಂಪರ್ಕಿಸುತ್ತದೆ.

ಇಂಪೆರಿಯಲ್ ಕಟ್ಟಡಗಳು

ಇಂಪೆರಿಯಲ್ ಕಟ್ಟಡಗಳು

ಇಂಪೇರಿಯಲ್ ಟವರ್, ಮುಂಬೈ ದಕ್ಷಿಣ ಮುಂಬೈನ ತಾರ್ದೇವ್ ನಲ್ಲಿರುವ ಈ ವಸತಿ ಸಮುಚ್ಚಯ ಕಟ್ಟಡವು ಇಲ್ಲಿವರೆಗಿನ ಪೂರ್ಣಗೊಂಡ ಭಾರತದ ಅತಿ ಎತ್ತರದ ಕಟ್ಟಡವಾಗಿದೆ. ಇದರ ಎತ್ತರ 833 ಅಡಿಗಳು. ಉತ್ತಮ ಇಂಜಿನಿಯರಿಂಗ್ ಕೌಶಲ್ಯತೆಗೆ ಸಾಕ್ಷಿಯಾಗಿದೆ ಈ ಬೃಹತ್ ಅವಳಿ ಕಟ್ಟಡಗಳು.

ಚಿತ್ರಕೃಪೆ: KuwarOnline

ವಿಸ್ಮಯಕರ ರಚನೆ

ವಿಸ್ಮಯಕರ ರಚನೆ

ಇನ್ನೂ, ತಾಂತ್ರಿಕ ಕೌಶಲ್ಯತೆಯಿಂದ ನಿರ್ಮಿಸಲಾದ ಕೆಲವೆ ಕೆಲವು ಆಯ್ದ ಹಾಗೂ ಅತಿ ಪ್ರಖ್ಯಾತ ಪುರಾತನ ರಚನೆಗಳು. ಮೊದಲಿಗೆ ತಾಜ್ ಮಹಲ್. ಈ ಸುಂದರ ಅಮೃತ ಶಿಲೆಯಿಂದ ನಿರ್ಮಿಸಲ್ಪಟ್ಟ ಜಗತ್ತಿನ ಏಳು ವಿಸ್ಮಯಗಳಲ್ಲೊಂದಾದ ಈ ರಚನೆಯ ಕುರ್ತು ಎಷ್ಟು ಹೇಳಿದರೂ ಕಡಿಮೆಯೆ. ಚಾಣಾಕ್ಷ ನಿರ್ಮಾಣ ಹಾಗೂ ಅದ್ಭುತ ತಾಂತ್ರಿಕ ಕೌಶಲ್ಯತೆಯಿಂದ ಕೂಡಿರುವ ಈ ರಚನೆ ಸಾಕಷ್ಟು ಪುರಾತನವಾಗಿದ್ದು ಇಂದಿನ ಆಧುನಿಕ ಕಟ್ಟಡಗಳೂ ಸಹ ನಾಚಿಕೊಳ್ಳುವಂತೆ ಇನ್ನೂ ಸದೃಢವಾಗಿ ನಿಂತಿದೆ.

ಚಿತ್ರಕೃಪೆ: Yann

ವಿಜಯಪುರದ ಗೋಲ್ ಗುಮ್ಮಟ

ವಿಜಯಪುರದ ಗೋಲ್ ಗುಮ್ಮಟ

ಈ ಸರಣಿಯಲ್ಲಿ ಹೆಸರಿಸಬಹುದಾದ ಮತ್ತೊಂದು ಅದ್ಭುತ ರಚನೆಯೆಂದರೆ ಗೋಲ ಗುಮ್ಮಟ ಅಥವಾ ಗೋಲ ಗುಂಬಜ್. ಕರ್ನಾಟಕದ ಐತಿಹಾಸಿಕ ನಗರವಾದ ವಿಅಜಯಪುರದಲ್ಲಿರುವ ಈ ಅದ್ಭುತ ತಾಂತ್ರಿಕ ಕೌಶಲ್ಯತೆಯುಳ್ಳ ರಚನೆಯು ಆದಿಲ್ ಶಾಹಿ ಸುಲ್ತಾನರಿಂದ ನಿರ್ಮಿಸಲ್ಪಟ್ಟಿದ್ದು ಇಂದು ನಗರದ ಅತಿ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಕೆಂಪು ಕೋಟೆ

ಕೆಂಪು ಕೋಟೆ

ದೆಹಲಿಯ ಕೆಂಪು ಕೋಟೆ : ಮುಘಲ್ ಸಮಯದಲ್ಲಿ ಮುಘಲ್ ಅರಸರ ವಾಸಗೃಹವಾಗಿದ್ದ ದೆಹಲಿಯ ಕೆಂಪು ಕೋಟೆಯು ಇಂದು ದೆಹಲಿಯ ಹಲವು ಸಂಗ್ರಹಾಲಯಗಳುಳ್ಳ ಅದ್ಭುತ ರಚನೆಯಾಗಿದೆ. ತಾಂತ್ರಿಕ ನಿಪುಣತೆ ಎದ್ದು ಕಾಣುವಂತಹ ಕಾಮಗಾರಿ ಹಾಗೂ ವಿನ್ಯಾಸ ಹೊಂದಿರುವ ಈ ಕೋಟೆಯು ಪ್ರಧಾನವಾಗಿ ಕೆಂಪು ಬಣ್ಣದ ಸ್ಯಾಂಡ್ ಸ್ಟೋನ್ ಅಂದರೆ ಕೆಂಪು ಬಣ್ಣದ ಶಿಲೆಗಳಿಂದ ರಚಿತವಾಗಿರುವುದರಿಂದ ಕೆಂಪು ಕೋಟೆ ಎಂದು ಕರೆಯಲ್ಪಡುತ್ತದೆ.

ಚಿತ್ರಕೃಪೆ: Hornplease~commonswiki

ಮುರುದ್

ಮುರುದ್

ಮುರುದ್ ಜಂಜೀರಾ : ಮುರುದ್ ಜಂಜೀರಾ ಎಂಬುದು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿರುವ ಮುರುದ್ ಎಂಬ ಕರಾವಳಿ ಹಳ್ಳಿಯಲ್ಲಿರುವ ಒಂದು ಪ್ರಸಿದ್ಧ ಕೋಟೆಯಾಗಿದೆ. ಸಮುದ್ರದಲ್ಲಿ ನಿರ್ಮಾಣವಾಗಿರುವ ಈ ಕೋಟೆಯು ಅದ್ಭುತ ತಾಂತ್ರಿಕ ವಿನ್ಯಾಸ ಹಾಗೂ ಭದ್ರವಾದ ವಸ್ತುಗಳಿಂದ ಉತ್ತಮವಾಗಿ ನಿರ್ಮಿಸಲ್ಪಟ್ಟಿದ್ದು ಇಂದಿಗೂ ಕಾಲಕ್ಕೆ ಸೆಡ್ಡು ಹೊಡೆದು ನಿಂತಿದೆ.

ಚಿತ್ರಕೃಪೆ: Ishan Manjrekar

ಗ್ವಾಲಿಯರ್

ಗ್ವಾಲಿಯರ್

ಗ್ವಾಲಿಯರ್ ಕೋಟೆ : ಗ್ವಾಲಿಯರ್, ಮಧ್ಯ ಪ್ರದೇಶದ ನಾಲ್ಕನೇಯ ಅತಿ ದೊಡ್ಡ ನಗರವಾಗಿದ್ದು, ರಾಜ್ಯದ ಪ್ರವಾಸಿ ರಾಜಧಾನಿ ಎಂದೇ ಜನಮನ್ನಣೆ ಗಳಿಸಿದೆ. ಗ್ವಾಲಿಯರ್ ಮುಖ್ಯವಾಗಿ ತನ್ನಲ್ಲಿರುವ ಅದ್ಭುತವಾದ ಕೋಟೆಯಿಂದ ಪ್ರಖ್ಯಾತಿ ಪಡೆದಿದ್ದು ಜನಪ್ರೀಯ ಪ್ರವಾಸಿ ಕೇಂದ್ರವಾಗಿದೆ.

ಚಿತ್ರಕೃಪೆ: Noeljoe85

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X