Search
  • Follow NativePlanet
Share
» »ಇವು ತಮಿಳುನಾಡಿನ ಚಾರಿತ್ರಿಕವಾದ ಕಟ್ಟಡಗಳು..!

ಇವು ತಮಿಳುನಾಡಿನ ಚಾರಿತ್ರಿಕವಾದ ಕಟ್ಟಡಗಳು..!

By Sowmyabhai

ತಮಿಳುನಾಡಿನಲ್ಲಿ ಗತ ವೈಭವ ನಿರ್ಮಾಣಗಳು ಅನೇಕವಿವೆ. ಇದುವರೆವಿಗೂ ನಾವು ಹಲವಾರು ದೇವಾಲಯಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಪ್ರಸ್ತುತ ಇಲ್ಲಿನ ಪ್ರಸಿದ್ಧವಾದ ರಾಜಭವನಗಳನ್ನು ಹೇಗೆ ನಿರ್ಮಾಣ ಮಾಡಿದರು, ಅವುಗಳು ಎಲ್ಲೆಲ್ಲಿವೆ? ಎಂಬ ವಿಷಯದ ಬಗ್ಗೆ ಲೇಖನದ ಮೂಲಕ ತಿಳಿದುಕೊಳ್ಳೋಣ. ಪ್ರಸ್ತುತ ಕೆಲವು ರಾಜಭವನಗಳು, ಚಾರಿತ್ರಿಕ ಕಟ್ಟಗಳು ಮಾತ್ರವೇ ನೋಡಲು ಅನುಕೂಲಕರವಾಗಿ ಇವೆ. ಅವುಗಳೇ ಇಂದು ತಮಿಳುನಾಡಿನ ಪ್ರವಾಸಿ ಪ್ರಸಿದ್ಧ ಚಾರಿತ್ರಿಕ ಕಟ್ಟಡಗಳಾಗಿವೆ.

ಚರಿತ್ರೆಯ ಪ್ರಕಾರ ಗಮನಿಸಿದರೆ, ತಮಿಳುನಾಡು ರಾಜ್ಯವು ಪೂರ್ವದಲ್ಲಿ ಎಷ್ಟೋ ರಾಜವಂಶಗಳನ್ನು ಕಂಡಿದೆ. ಅವುಗಳಲ್ಲಿ ಚೋಳ, ಪಾಂಡ್ಯ, ಪಲ್ಲವ ಇನ್ನು ಅನೇಕ ರಾಜವಂಶಗಳು ಮುಖ್ಯವಾದುದು ಹಾಗು ಪ್ರಧಾನವಾದುದು.

1.ತಿರುಮಲೈ ನಾಯಕರ್ ಮಹಲ್

1.ತಿರುಮಲೈ ನಾಯಕರ್ ಮಹಲ್

PC:Srikant Kuanar

ತಿರುಮಲೈ ನಾಯಕರ್ ಮಹಲ್ ಮಧುರೈ ನಗರದಲ್ಲಿದೆ. ಇದನ್ನು 16 ನೇ ಶತಮಾನದಲ್ಲಿ ಇಂಡೋ ಸಾರ್ಸರನಿಕ್ ನಿರ್ಮಾಣ ಶೈಲಿಯಲ್ಲಿ ನಿರ್ಮಾಣ ಮಾಡಿದರು. ಪ್ಯಾಲೆಸ್‍ನ ಸಿಲಿಂಗ್‍ನ ಮೇಲೆ ವಿಷ್ಣು ಮತ್ತು ಶಿವನ ಜೀವನ ಕಥೆಯನ್ನು ಕೆತ್ತನೆ ಮಾಡಿದ್ದಾರೆ. ಇದರಲ್ಲಿ 58 ಅಡಿ ಎತ್ತರದ 248 ಸ್ತಂಭಗಳು ಕೂಡ ಇವೆ. ಒಟ್ಟು ಈ ಪ್ಯಾಲೆಸ್ ಒಂದು ಅದ್ಭುತವಾದ ಪ್ರವಾಸಿ ತಾಣವೇ ಸರಿ. ಹೀಗಾಗಿಯೇ ಅನೇಕ ಮಂದಿ ಪ್ರವಾಸಿಗರು ಈ ಮಹಲ್‍ಗೆ ಭೇಟಿ ನೀಡುತ್ತಿರುತ್ತಾರೆ.

2.ಪದ್ಮನಾಭಪುರಂ ಪ್ಯಾಲೆಸ್

2.ಪದ್ಮನಾಭಪುರಂ ಪ್ಯಾಲೆಸ್

PC: Aviatorjk

ಕ್ರಿ,ಶ 1601ರಲ್ಲಿ ನಿರ್ಮಾಣ ಮಾಡಿದ ಪದ್ಮನಾಭಪುರಂ ಪ್ಯಾಲೆಸ್ ಒಂದು ಸುಂದರವಾದ ಪ್ರವಾಸಿ ತಾಣವಾಗಿದೆ. ಈ ಪ್ಯಾಲೆಸ್ ತಮಿಳುನಾಡಿನ ಕನ್ಯಾಕುಮಾರಿ ಪಟ್ಟಣದಲ್ಲಿದೆ. ಈ ಪ್ರದೇಶವನ್ನು ಟ್ರಾವೆನ್ಕೋರ್ ವಂಶಿಕರು ಆಳ್ವಿಕೆ ಮಾಡಿದ್ದರಿಂದ ಈ ಪ್ಯಾಲೆಸ್ ಕೇರಳದ ವಾಸ್ತುಶಿಲ್ಪ ಶೈಲಿಯಲ್ಲಿ ಕಾಣಿಸುತ್ತದೆ. ಈ ಪ್ಯಾಲೆಸ್‍ನ ವಿಭಾಗಗಳೆಂದರೆ ರಾಣಿ ಮಾತ ಪ್ಯಾಲೆಸ್, ಕೌನ್ಸಿಲ್ ಚಾಂಬರ್ ಮೊದಲಾದವು.

3.ಚೆಟ್ಟಿನಾಡು ಮಾನ್ಷನ್

3.ಚೆಟ್ಟಿನಾಡು ಮಾನ್ಷನ್

PC:Jean-Pierre Dalbéra

ಚೆಟ್ಟಿನಾಡು ಮಾನ್ಷನ್ ಒಂದು ವಿಶ್ವ ಪಾರಂಪರಿಕ ಭವನವಾಗಿದೆ. ಇದನ್ನು ಕರೈಕುಡಿಯಲ್ಲಿ ಚೆಟ್ಟಿನಾರ್‍ಗಳು ಕ್ರಿ. ಶ 1902 ರಲ್ಲಿ ನಿರ್ಮಾಣ ಮಾಡಿದರು. ಈ ಮಾನ್ಷನ್ ಪ್ರಸ್ತುತ ಅಂತರಾಷ್ಟ್ರೀಯ ಪ್ರವಾಸಿಗಳಿಗೆ ಅತಿಥಿ ಗೃಹವಾಗಿ ಸೇವೆಯನ್ನು ಮಾಡುತ್ತಿದೆ. ಇಲ್ಲಿ ಈಜಾಡಲು ಸ್ವಿಮ್ಮಿಂಗ್ ಪೂಲ್ ಮತ್ತು ಪುಸ್ತಕಗಳ ಜೊತೆ ಕಾಲಕ್ಷೇಪ ಮಾಡಲು ಲೈಬ್ರರಿಯಂತಹ ಸೌಕರ್ಯಗಳು ಕೂಡ ಇವೆ.

4.ಫರ್ನಾ ಹಿಲ್ಸ್ ಪ್ಯಾಲೆಸ್

4.ಫರ್ನಾ ಹಿಲ್ಸ್ ಪ್ಯಾಲೆಸ್

PC:Ascidian

ಊಟಿಯಲ್ಲಿನ ಫರ್ನಾ ಹಿಲ್ಸ್ ಪ್ಯಾಲೆಸ್ ಮೈಸೂರು ಮಹಾರಾಜರ ಬೇಸಿಗೆ ಅರಮನೆಯಾಗಿತ್ತು. ಕ್ರಿ.ಶ 1844 ರಲ್ಲಿ ಸ್ವಿಸ್ ಛಲೆಟ್ ನಿರ್ಮಾಣ ಶೈಲಿಯಲ್ಲಿ ಇದನ್ನು ಕೂಡ ನಿರ್ಮಾಣ ಮಾಡಿದರು. ಹಚ್ಚ ಹಸಿರಿನಿಂದ ಕೂಡಿದ ಪರ್ವತದ ಮೇಲೆ ನಿರ್ಮಾಣ ಮಾಡಿದ್ದಾರೆ. ಇದು ನೋಡಲು ಅತ್ಯಂತ ಸುಂದರವಾದ ರಾಜಭವನವಾಗಿ ಕಂಗೊಳಿಸುತ್ತಿದೆ. ಈ ಭವನವನ್ನು ಪರೀಶಿಲಿಸಿದರೆ ಅಂದಿನ ರಾಜರು ನೆನಪಿಗೆ ಬರುತ್ತದೆ.

5.ತಮ್ಮಕ್ಕುಂ ಪ್ಯಾಲೆಸ್

5.ತಮ್ಮಕ್ಕುಂ ಪ್ಯಾಲೆಸ್

PC:Avionsuresh

ತಮ್ಮಕ್ಕುಂ ಪ್ಯಾಲೆಸ್ ಮಧುರೈ ಜಿಲ್ಲೆಯಲ್ಲಿದೆ. ನಾಯಕ್ ವಂಶಕ್ಕೆ ಸೇರಿದ ರಾಣಿ ಮಂಗಮ್ಮಾಳ್‍ಗೆ ಈ ಭವನವು ಬೇಸಿಗೆಯ ಅರಮನೆಯಾಗಿತ್ತು. ಕೊಲೊನಿಯಲ್ ಆಳ್ವಿಕೆ ಮಾಡುತ್ತಿದ್ದ ಸಮಯದಲ್ಲಿ ಇದನ್ನು ಪರಿಪಾಲನ ಭವನವಾಗಿ ಉಪಯೋಗಿಸುತ್ತಿದ್ದರು. ಪ್ರಸ್ತುತ ಈ ಭವನವನ್ನು ಮಹಾತ್ಮ ಗಾಂಧಿ ಮ್ಯೂಸಿಯಂ ಆಗಿ ಮಾರ್ಪಾಟು ಮಾಡಿದ್ದಾರೆ.

6.ತಂಜಾವೂರ್ ಪ್ಯಾಲೆಸ್

6.ತಂಜಾವೂರ್ ಪ್ಯಾಲೆಸ್

PC: Melanie M

ತಂಜಾವೂರ್ ಮರಾಠ ಪ್ಯಾಲೆಸ್ ಕ್ರಿ.ಶ 1674- 1855 ರವರೆಗೆ ಆಳ್ವಿಕೆ ಮಾಡಿದ ಭೋಂಸ್ಲೆ ವಂಶಕ್ಕೆ ಸೇರಿದೆ. ಆದರೆ ಅದಕ್ಕಿಂತ ಮುಂಚೆಯೇ ಇದನ್ನು ನಾಯಕ್ ವಂಶಕ್ಕೆ ಸೇರಿದವರು ನಿರ್ಮಾಣ ಮಾಡಿದ ಹಾಗೆ ಆಧಾರಗಳು ಲಭಿಸಿವೆ. ಈ ಪ್ಯಾಲೆಸ್ ಅನ್ನು "ಅರಂಮನೈ" ಎಂದು ಕೂಡ ಕರೆಯುತ್ತಾರೆ. ಇದು ತಂಜಾವೂರ್‍ನಲ್ಲಿನ ಪ್ರಮುಖವಾದ ಪ್ರವಾಸಿ ಆಕರ್ಷಣೆಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X