Search
  • Follow NativePlanet
Share
» »ಸಂಪತ್ತು ಕರುಣಿಸುವ ಲಕ್ಷ್ಮಿಯ ಪ್ರಸಿದ್ಧ ದೇವಾಲಯಗಳು

ಸಂಪತ್ತು ಕರುಣಿಸುವ ಲಕ್ಷ್ಮಿಯ ಪ್ರಸಿದ್ಧ ದೇವಾಲಯಗಳು

By Vijay

ಸಂಸ್ಕೃತದ ಪದವಾದ ಲಕ್ಷ್ಯದಿಂದ ಉತ್ಪತ್ತಿಯಾದ ಪದವೆ ಲಕ್ಷ್ಮಿ. ಹೀಗಾಗಿ ಲಕ್ಷ್ಮಿ ಎಂಬ ಹೆಸರು ಮೂಲ ಪದವಾದ ಲಕ್ಷ್ಯದಿಂದ ರೂಪಗೊಂಡಿದೆ. ಲಕ್ಷ್ಯ ಎಂದರೆ ಸಾಮಾನ್ಯವಾಗಿ ಗುರಿ, ಉದ್ದೇಶ ಎಂಬೆಲ್ಲ ಅರ್ಥ ಬರುತ್ತದೆ. ಹಾಗಾಗಿ ಲಕ್ಷ್ಮಿ ದೇವಿಯು, ನಾಲ್ಕು ಕೈಗಳ ಮೂಲಕ ಮನುಷ್ಯನ ಜೀವನದ ನಾಲ್ಕು ಪರಮೋದ್ದೇಶಗಳನ್ನು ಸಾರುವ ಪ್ರತೀಕವಾಗಿದ್ದಾಳೆ.

ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳೆ ಮನುಷ್ಯ ಜೀವನದ ನಾಲ್ಕು ಪರಮೋದ್ದೇಶಗಳಾಗಿವೆ. ಹಿಂದು ವೇದ, ಪುರಾಣಗಳಲ್ಲಿ ಲಕ್ಷ್ಮಿ ದೇವಿಯನ್ನು ಅದೃಷ್ಟ, ಸಂಪತ್ತು ಹಾಗೂ ಐಶ್ವರ್ಯಗಳ ಅಧಿ ದೇವಿಯೆಂದು ವರ್ಣಿಸಲಾಗಿದೆ. ವೇದ-ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ಸಮುದ್ರ ಮಂಥನದ ಸಂದರ್ಭದಲ್ಲಿ ಉತ್ಪತ್ತಿಯಾಗುತ್ತಿದ್ದ ಉತ್ಪನ್ನಗಳಲ್ಲಿ ಲಕ್ಷ್ಮಿಯೂ ಸಹ ಒಬ್ಬಳು.

ಹೀಗೆ ಉತ್ಪತ್ತಿಗೊಂಡ ಲಕ್ಷ್ಮಿಯು ದೇವತೆಗಳನ್ನು ಬೆಂಬಲಿಸಿ ವಿಷ್ಣುವಿನೊಡನೆ ಸೇರಲು ಇಚ್ಛಿಸಿದಳು. ಆ ರೀತಿಯಾಗಿ ರೂಪಗೊಂಡ, ಐಶ್ವರ್ಯ, ಸಂಪತ್ತುಗಳನ್ನು ಕರುಣಿಸುವ ಲಕ್ಷ್ಮಿ ದೇವಿಯನ್ನು ಹಿಂದುಗಳೆಲ್ಲರೂ ಭಕ್ತಿಯಿಂದ ಆರಾಧಿಸುತ್ತಾರೆ. ಲಕ್ಷ್ಮಿ ದೇವಿಯನ್ನು ಶಕ್ತಿ ಸ್ವರೂಪಿಣಿಯಾಗಿಯೂ ಆರಾಧಿಸಲಾಗುತ್ತದೆ ಹಾಗೂ ಲಕ್ಷ್ಮಿಗೆ ಮುಡಿಪಾದ ಸಾಕಷ್ಟು ದೇವಾಲಯಗಳು ಭಾರತದೆಲ್ಲೆಡೆ ಕಾಣಬಹುದು.

ಪ್ರಸ್ತುತ ಲೇಖನದಲ್ಲಿ ಸಾಕಷ್ಟು ಪ್ರಭಾವಶಾಲಿಯಾಗಿರುವ, ಬೇಡಿಕೊಂಡು ಬರುವ ಭಕ್ತರ ಎಲ್ಲ ದುರಾದೃಷ್ಟಗಳನ್ನು ದೂರ ಮಾಡುವ ದಾರಿದ್ರವನ್ನು ನಿವಾರಿಸುವ ಕೆಲವು ಪ್ರಮುಖವಾದ ಲಕ್ಷಿದೇವಿಯ ದೇವಾಲಯಗಳ ಕುರಿತು ತಿಳಿಸಲಾಗಿದೆ. ಧಾರ್ಮಿಕ ಪ್ರವಾಸಿ ದೃಷ್ಟಿಯಿಂದ ಪವಿತ್ರವಾಗಿರುವ ಈ ದೇವಾಲಯಗಳಿಗೆ ನೀವು ಒಮ್ಮೆ ಭೇಟಿ ನೀಡಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ.

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಕೊಲ್ಹಾಪುರ ಮಹಾಲಕ್ಷ್ಮಿ : ಮಹಾಲಕ್ಷ್ಮಿ ನೆಲೆಸಿರುವ ಮಹಾರಾಷ್ಟ್ರದ ಕೊಲ್ಹಾಪುರ ಲಕ್ಷ್ಮಿ ದೇವಾಲಯವು ಒಂದು ಮಹತ್ವದ ಶಕ್ತಿಪೀಠವಾಗಿದೆ. ತಮ್ಮೆಲ್ಲ ಆಸೆಗಳು ಈಡೇರುವಂತೆ ಹರಸುವ ಇಲ್ಲವೆ ಆಸೆಗಳೆ ಕೊನೆಗೊಳ್ಳುವಂತೆ ಮಾಡಿ ಮೋಕ್ಷ ನೀಡುವ ವಿಶೇಷವಾದ ಆರು ಶಕ್ತಿಪೀಠಗಳ ಪೈಕಿ ಕೊಲ್ಹಾಪುರ ಮಹಾಲಕ್ಷ್ಮಿ ಪೀಠವೂ ಸಹ ಒಂದು.

ಚಿತ್ರಕೃಪೆ: tanny

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಚಾಲುಕ್ಯ ವಾಸ್ತುಶೈಲಿಯಲ್ಲಿ ನಿರ್ಮಿತವಾದ ಈ ದೇವಾಲಯ ಏಳನೇಯ ಶತಮಾನದಲ್ಲಿ ನಿರ್ಮಿತವಾದ ಪುರಾತನ ದೇವಾಲಯವಾಗಿದ್ದು ಕೊಲ್ಹಾಪುರ ನಗರದ ಹೃದಯ ಭಾಗದಲ್ಲಿ ನೆಲೆಸಿದೆ. ಗರ್ಭಗೃಹದಲ್ಲಿ ಮಹಾಲಕ್ಷ್ಮಿಯು 40 ಕೆ.ಜಿ ಭಾರದಷ್ಟಿರುವ ರತ್ನಗಲ್ಲಿನಲ್ಲಿ ಕೆತ್ತಲಾದ ನಾಲ್ಕು ಕೈಗಳಿರುವ ಸುಂದರ ಮೂರ್ತಿಯ ರೂಪದಲ್ಲಿ ಕಲ್ಲಿನ ಹಾಸಿನ ಮೇಲೆ ವಿರಾಜಿಸಿದ್ದಾಳೆ.

ಚಿತ್ರಕೃಪೆ: Ankur P

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಲಕ್ಷ್ಮಿಯ ವಿಗ್ರಹವು ಮೂರು ಅಡಿಗಳಷ್ಟು ಎತ್ತರವಿದ್ದು ನೋಡಲು ಆಕರ್ಷಕವಾಗಿದೆ. ಶ್ರೀ ಚಕ್ರವನ್ನು ದೇವಾಲಯದ ಗೋಡೆಯ ಮೇಲೆ ಕೆತ್ತಲಾಗಿದ್ದು ಕಲ್ಲಿನಲ್ಲಿ ಕೆತ್ತಲಾದ ಸಿಂಹವು ದೇವಿಯ ಪಕ್ಕದಲ್ಲಿದೆ. ಇದೊಂದು ಕರವೀರ ಕ್ಷೇತ್ರವಾಗಿದ್ದು ಸಾಕಷ್ಟು ಪಾವಿತ್ರ್ಯತೆ ಪಡೆದಿದೆ.

ಚಿತ್ರಕೃಪೆ: jalinder jag

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಕರವೀರ ಕ್ಷೇತ್ರವು ಸ್ವತಃ ಜಗದಂಬೆಯೆ ತನ್ನ ಬಲಗೈಯಲ್ಲಿ ಹಿಡಿದಿರುವ ಕ್ಷೇತ್ರವಾಗಿದೆ. ಅಂತೆಯೆ ಈ ಕ್ಷೇತ್ರವನ್ನು ನಾರಾಯಣನೂ ಸಹ ಆರಾಧಿಸುತ್ತಾನೆ ಹಾಗೂ ಲಕ್ಷ್ಮಿಯೊಂದಿಗೆ ನೆಲೆಸಿರುವ ನಾರಾಯಣ ಇಲ್ಲಿ ಶಾಶ್ವತವಾಗಿ ನೆಲೆಸಿರುವನೆಂದು ಹೇಳಲಾಗಿದೆ. ಈ ಮಹಾಲಕ್ಷ್ಮಿಯನ್ನು ಕರವೀರವಾಸಿನಿ ಎಂತಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ:Dharmadhyaksha

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಮಹಾಲಕ್ಷ್ಮಿ ದೇವಾಲಯ : ಮುಂಬೈನ ಮಹಾಲಕ್ಷ್ಮಿ ಬಡಾವಣೆಯ ಭುಲಾಭಾಯ್ ದೇಸಾಯಿ ರಸ್ತೆಯಲ್ಲಿರುವ ಮಹಾಲಕ್ಷ್ಮಿಯ ದೇವಾಲಯವು ಸಾಕಷ್ಟು ಪ್ರಸಿದ್ಧಿ ಪಡೆದ ಲಕ್ಷ್ಮಿ ದೇವಾಲಯವಾಗಿದೆ. ಪ್ರತಿ ಶುಕ್ರವಾರಗಳಂದು ಇಲ್ಲಿ ವಿಶೇಷ ಪೂಜಾರ್ಚನೆಗಳು ನಡೆಯುತ್ತವೆ ಹಾಗೂ ಸಂದರ್ಭದಲ್ಲಿ ಸಾಕಷ್ಟು ಜನ ಭಕ್ತಾದಿಗಳು ಈ ದೇವಾಲಯಕ್ಕೆ ಭೆಟಿ ನೀಡುತ್ತಾರೆ. 1855 ರ ಸಂದರ್ಭದಲ್ಲಿ.

ಚಿತ್ರಕೃಪೆ: Co9man

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

1831 ರಲ್ಲಿ ನಿರ್ಮಿತವಾದ ಈ ದೇವಾಲಯಕ್ಕೆ ರೋಚಕವಾದ ಹಿನ್ನಿಲೆಯಿದೆ. ಮುಂಬೈನ ಏಳು ದ್ವೀಪಗಳನ್ನು ಒಡ್ಡುಗಳ ಮೂಲಕ ಒಂದಕ್ಕೊಂದು ಸೇರಿಸಿ ಏಕ ಭೂಮಿಯನ್ನಾಗಿ ಮಾಡುವ ಯೋಜನೆಯಾದ ಹಾರ್ನ್ ಬಿ ವೆಲ್ಲಾರ್ಡ್ ನಡೆಯುತ್ತಿದ್ದ ದಂದರ್ಭದಲ್ಲಿ ಈ ಪ್ರದೇಶದಲ್ಲಿ ಸಮುದ್ರದಲ್ಲಿ ನಿರ್ಮಿಸಲಾಗಿದ್ದ ಗೋಡೆಯ ಕೆಲ ಭಾಗಗಳು ಆಗಾಗ ಬೀಳುತ್ತಿದ್ದವು. ಈ ಯೋಜನೆಯ ಇಂಜಿನೀಯರ್ ಇದರಿಂದ ಬೇಸರಗೊಂಡು ಚಿಂತಿತರಾಗಿದ್ದರು. ಪ್ರವೇಶ ದ್ವಾರ.

ಚಿತ್ರಕೃಪೆ: Karthik Nadar

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಅಪಾರ ದೈವ ಭಕ್ತರಾಗಿದ್ದ ಅವರಿಗೆ ಕನಸಿನಲ್ಲೊಮ್ಮೆ ಸಮುದ್ರದಲ್ಲಿ ಲಕ್ಷ್ಮಿ ದೇವಿಯ ವಿಗ್ರಹದ ವಿಷಯ ಗೊತ್ತಾಗೆ ಅದನ್ನು ಹುಡುಕಲು ಪ್ರಾರಂಭಿಸಿದರು. ಪವಾಡವೆಂಬಂತೆ ಸಮುದ್ರ ಒಂದು ಸ್ಥಳದಲ್ಲಿ ಲಕ್ಷ್ಮಿಯ ವಿಗ್ರಹ ಪತ್ತೆಯಾಗಿ ನಂತರ ಅದನ್ನು ಪ್ರತಿಷ್ಠಾಪಿಸಲಾಯಿತು. ತರುವಾಯ ಆ ಯೋಜನೆ ಯಶಸ್ವಿಯಾಗಿ ನಡೆಯಿತು.

ಚಿತ್ರಕೃಪೆ: Suyogaerospace

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ನಾಮಕ್ಕಲ್ ಲಕ್ಷ್ಮಿ ದೇವಾಲಯ : ನಾಮಗಿರಿ ಲಕ್ಷ್ಮಿ ದೇವಾಲಯ ಎಂತಲೂ ಪ್ರಸಿದ್ಧವಾಗಿರುವ ಈ ದೇವಾಲಯವು ಗುಹೆಯೊಂದನ್ನು ಕಡಿದು ಕೆತ್ತಲಾದ ಸುಂದರ ದೇವಾಲಯವಾಗಿದೆ. ನಾಮಕ್ಕಲ್ ಆಂಜನೇಯನ ದೇವಸ್ಥಾನದ ಪಕ್ಕದಲ್ಲೆ ಲಕ್ಷ್ಮಿಯ ದೇವಿಯ ಈ ಸನ್ನಿಧಿಯಿದೆ. ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ನಾಮಕ್ಕಲ್ ಪಟ್ಟಣದಲ್ಲಿ ಈ ದೇವಾಲಯವಿದೆ.

ಚಿತ್ರಕೃಪೆ: Balajijagadesh

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಇದರ ಕುರಿತು ಇರುವ ಆಸಕ್ತಿಕರ ವಿಷಯವೆಂದರೆ ಭಾರತದ ಅತಿ ಶ್ರೇಷ್ಠ ಗಣಿತಜ್ಞರಾದ ಶ್ರೀ ರಾಮಾನುಜನ್ ಅವರ ಕುಟುಂಬದ ದೇವಿಯಾಗಿದ್ದಾಳೆ ನಾಮಕ್ಕಲ್ ಮಹಾಲಕ್ಷ್ಮಿ. ರಾಮಾನುಜನ್ ಸ್ವತಃ ಒಂದು ಕಡೆ ಹೇಳಿರುವಂತೆ ದೇವಿಯು ಅವರ ಕನಸಿನಲ್ಲೊಮ್ಮೆ ಬಂದು ಗಣಿತ ಶಾಸ್ತ್ರದ ಕೆಲ ಸೂತ್ರ ವಿಧಿ ವಿಧಾನಗಳ ಕುರಿತು ಅವರಿಗೆ ವಿವರಿಸಿದ್ದಳಂತೆ.

ಚಿತ್ರಕೃಪೆ: Ilasun

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುವರ್ಣ ಮಂದಿರ : ತಮಿಳುನಾಡಿನ ವೆಲ್ಲೂರು ಪಟ್ಟಣದಿಂದ ಎಂಟು ಕಿ.ಮೀ ದೂರದಲ್ಲಿರುವ ಮಲೈಕೊಡಿ ಎಂಬಲ್ಲಿರುವ ಸ್ರೀಪುರಂ ಎಂಬ ಆಧ್ಯಾತ್ಮಿಕ ಆಧುನಿಕ ಉದ್ಯಾನದಲ್ಲಿ ಲಕ್ಷ್ಮಿ ನಾರಾಯಣಿಯನ್ನು ಪ್ರಧಾನವಾಗಿ ಆರಾಧಿಸಲಾಗುವ ಈ ದೇವಾಲಯವಿದೆ.

ಚಿತ್ರಕೃಪೆ: Dsudhakar555

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಹೆಸರಿಗೆ ತಕ್ಕ ಹಾಗೆ ಸುವರ್ಣದ ಪ್ರಭಾವ ಈ ದೇವಾಲಯ ಪ್ರವೇಶಿಸುತ್ತಿದ್ದಂತೆಯೆ ಎದ್ದು ಕಾಣುತ್ತದೆ. ಲಕ್ಷ್ಮಿಯು ನೆಲೆಸಿರುವ ಗರ್ಭಗೃಹದಲ್ಲಿ ಆಕೆಯ ವಿಮಾನ ಹಾಗೂ ಅರ್ಧ ಮಂಟಪಗಳು ಶುದ್ಧ ಚಿನ್ನದಿಂದ ಮಾಡಲ್ಪಟ್ಟಿದೆ. ಬಂಗಾರದ ಕೆಲಸಗಳಲ್ಲಿ ನುರಿತ ಕಲಾಕಾರರಿಂದ ವಿನ್ಯಾಸ ಮಾಡಲ್ಪಟ್ಟಿದ್ದು ಅದ್ಭುತವಾಗಿ ಈ ದೇವಾಲಯ ಕಮ್ಡುಬರುತ್ತದೆ.

ಚಿತ್ರಕೃಪೆ: Ag1707

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ನೂರು ಎಕರೆಗಳಷ್ಟು ವಿಶಾಲವಾದ ಸ್ರೀಪುರಂ ಥೀಂ ಪಾರ್ಕ್ ನಲ್ಲಿರುವ ಈ ದೇವಾಲಯಕ್ಕೆ ಪ್ರವೇಶಿಸಿ ಲಕ್ಷ್ಮಿಯ ದರ್ಶನ ಪಡೆಯಲು ಎಲ್ಲ ಧರ್ಮದವರಿಗೂ ಅವಕಾಶ ಕಲ್ಪಿಸಲಾಗಿದೆ. ಇದೊಂದು ಸುಂದರ ಪ್ರವಾಸಿ ಆಕರ್ಷಣೆಯಾಗಿಯೂ ಜನರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Dsudhakar555

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಚೌರಾಸಿ ದೇವಾಲಯ : ಹಿಂದಿಯಲ್ಲಿ ಚೌರಾಸಿ ಅಂದರೆ 84. ಇಲ್ಲಿ ಒಟ್ಟು 84 ಸನ್ನಿಧಿಗಳಿದ್ದು ಇದಕ್ಕೆ ಚೌರಾಸಿ ದೇವಾಲಯ ಎನ್ನುತ್ತಾರೆ. ಮುಖ್ಯ ದೇವಾಲಯಗಳಲ್ಲಿ ಲಕ್ಷ್ಮಿಗೆ ಮುಡಿಪಾದ ದೇವಾಲಯವೂ ಸಹ ಇದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಲಕ್ಷ್ಮಿಯ ದರ್ಶನ ಕೋರಿ ಇಲ್ಲಿಗೆ ಬರುತ್ತಾರೆ. ಹಿಮಾಚಲದ ಚಂಬಾ ಜಿಲ್ಲೆಯ ಭರ್ಮೌರ್ ಎಂಬಲ್ಲಿ ಈ ದೇವಾಲಯವಿದೆ.

ಚಿತ್ರಕೃಪೆ: Jaryal007

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಪಟ್ಟಾಂಕುಡಿ ಲಕ್ಷ್ಮಿ ದೇವಾಲಯ : ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿರುವ ಪಟ್ಟಾಂಕುಡಿ ಎಂಬ ಹಳ್ಳಿಯಲ್ಲಿರುವ ಲಕ್ಷ್ಮಿ ದೇವಾಲಯ ಅಷ್ಟೊಂದು ಸುಪ್ರಸಿದ್ಧ ದೇವಾಲಯವಲ್ಲದಿದ್ದರೂ ಈ ಭಾಗದಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ಶಕ್ತಿಶಾಲಿಯಾದ ದೇವಾಲಯವಾಗಿದೆ. ಸುತ್ತಮುತ್ತಲಿನ ಪ್ರದೇಶಗಳಿಂದ ಲಕ್ಷ್ಮಿಯ ದರ್ಶನ ಕೋರಿ ಸಾಕಷ್ಟು ಜನ ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Sanjaysy

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಕಲ್ಲೂರು ಮಹಾಲಕ್ಷ್ಮಿ : ಇದು ಪ್ರಧಾನವಾಗಿ ಲಕ್ಷ್ಮಿ ದೇವಿಗೆ ಮುಡಿಪಾದ ದೇವಾಲಯವಾಗಿದ್ದರೂ ಸಹ ಲಕ್ಷ್ಮಿ ದೇವಿಯು ವೆಂಕಟೇಶ್ವರನ ಸಮೇತನಾಗಿ ನೆಲೆಸಿರುವ ಒಂದು ಅಪರೂಪದ ಸ್ಥಳವೆಂದೆ ಹೇಳಬಹುದು. ಇದು ನಮ್ಮ ಕರ್ನಾಟಕದಲ್ಲಿ ಕಂಡುಬರುತ್ತದೆ. ಅದೆ ಕಲ್ಲೂರು ಶ್ರೀಕ್ಷೇತ್ರ.

ಚಿತ್ರಕೃಪೆ: MadhwaYuvaParishat

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಕಲ್ಲೂರು, ಕಲ್ಲೂರು ಮಹಾಲಕ್ಷ್ಮಿಯಿಂದಾಗಿಯೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುವಾಸಿಯಾಗಿದೆ. ಈ ಲಕ್ಷ್ಮಿ ದೇವಿಯು ಕೊಲ್ಲಾಪುರ ಮಹಾಲಕ್ಷ್ಮಿಯ ಸಾಕ್ಷಾತ್ ಅವತಾರವೆ ಆಗಿದ್ದಾಳೆ. ಸಾಣೆ ಕಲ್ಲಿನಲ್ಲಿ ಒಡಮೂಡಿದ ಲಕ್ಷ್ಮಿ ದೇವಿಯ ವಿಗ್ರಹವು ನೋಡಲು ಆಕರ್ಷಕವಾಗಿರುವುದಷ್ಟೆ ಅಲ್ಲದೆ ಅತ್ಯಂತ ಶಕ್ತಿಶಾಲಿಯೂ ಕೂಡ ಆಗಿದೆ.

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಇಷ್ಟಾರ್ಥಗಳನ್ನು ಬೇಡಿ ಕೊಳ್ಳಲು ಅಥವಾ ಹರಕೆ ಹೊತ್ತಲು ಇಲ್ಲಿ ವಿಶೇಷವಾದ ವಿಧಾನವೊಂದನ್ನು ಅನುಸರಿಸಲಾಗುತ್ತದೆ. ಅದಕ್ಕೆ ಕಾಯಿ (ತೆಂಗಿನಕಾಯಿ) ಕಟ್ಟಿಸುವುದು ಎನ್ನಲಾಗುತ್ತದೆ. ಅಂದರೆ ನಿಮಗೆ ಬೇಕಾದ್ದನ್ನು ಬಯಸಿ ಸಂಕಲ್ಪ ಮಾಡಿ, ಅರ್ಚಕರ ಮುಂದೆ ಕುಳಿತು ಕಾಯಿಗಳನ್ನು ಒಪ್ಪಿಸುವುದು. ನಿಮ್ಮ ಪರವಾಗಿ ಕಾಯಿಗಳನ್ನು ದೇಗುಲದ ಛಾವಣಿಯಲ್ಲಿ ಅಲ್ಲಲ್ಲಿ ಜೋಡಿಸಲಾದ ಮೊಳೆಗಳಿಗೆ ದಾರದಿಂದ ಕಟ್ಟಿ ಹಾಕಲಾಗುತ್ತದೆ.

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಬಯಕೆ ಈಡೇರಿದ್ದಲ್ಲಿ ಖಂಡಿತವಾಗಿಯೂ ನಿಮ್ಮ ಅನುಕೂಲದ ಮೆರೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ಕಟ್ಟಿಸಿದ್ದ ಕಾಯಿಯನ್ನು ಇಳಿಸುವ ವಿಧಾನವನ್ನು ಪೂರ್ಣಗೊಳಿಸಬೇಕು. ಈ ಸಂದರ್ಭದಲ್ಲಿ ಮತ್ತೆ ಬಯಸಿದರೆ ಕಾಯಿಯನ್ನು ಇನ್ನೊಮ್ಮೆ ಸಹ ಕಟ್ಟಿಸಬಹುದು. ಮುಖ್ಯವಾಗಿ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಸಕಲ ಇಷ್ಟಾರ್ಥ ಸಿದ್ಧಿಗೊಸ್ಕರ ಕಲ್ಲೂರು ಕ್ಷೇತ್ರಕ್ಕೆ ಜನರು ಭೇಟಿ ನೀಡುತ್ತಾರೆ.

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಕಲ್ಲೂರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದೆ. ರಾಯಚೂರು ನಗರದಿಂದ ಕೇವಲ 25 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ ಕಲ್ಲೂರು. ರಾಯಚೂರಿನ ಮುಖ್ಯ ಬಸ್ಸು ನಿಲ್ದಾಣದಿಂದ ಕಲ್ಲೂರಿನ ಮೂಲಕವಾಗಿ ಸಾಗುವ ಅನೇಕ ಬಸ್ಸುಗಳು ಪ್ರತಿ 20 ನಿಮಿಷಕ್ಕೊಮ್ಮೆ ದೊರೆಯುತ್ತವೆ.

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಲಕ್ಷ್ಮಿ-ಕುಬೇರ ದೇವಾಲಯ : ಐಶ್ವರ್ಯ, ಸಂಪತ್ತುಗಳಿಗೆ ಅಧಿ ದೇವಿಯಾದ ಲಕ್ಷ್ಮಿ ಹಾಗೂ ಅತ್ಯಂತ ಶ್ರೀಮಂತ ದೇವನೆಂಬ ಹೆಗ್ಗಳಿಕೆ ಹೊತ್ತ ಕುಬೇರನಿಗೆ ಮುಡಿಪಾದ ದೇವಾಲಯ ಇದಾಗಿದೆ. ಈ ರೀತಿಯ ದೇಶದಲ್ಲೆ ಏಕೈಕ ದೇವಾಲಯ ಇದಾಗಿದೆ ಎಂದು ಹೇಳಲಾಗುತ್ತದೆ. ದೇವಾಲಯದ ವಿಶೇಷತೆ ಎಂದರೆ ಲಕ್ಷ್ಮಿ ದೇವಿಯ ಜೊತೆಗೆ ಕುಬೇರನು ಸಹ ಕಳಶ ಹಿಡಿದು ಮುಖ್ಯ ದೇವನಾಗಿ ಪೂಜಿಸಲ್ಪಡುತ್ತಾನೆ. ಚೆನ್ನೈನ ರತ್ನಮಂಗಲಂನ ವಂಡಲೂರಿನಲ್ಲಿ ಈ ದೇವಾಲಯವಿದೆ.

ಚಿತ್ರಕೃಪೆ: Braveman2

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಅಷ್ಟಲಕ್ಷ್ಮಿ ದೇವಾಲಯ : ಚೈನ್ನೈನ ಬೆಸಂಟ್ ನಗರದಲ್ಲಿರುವ ಅಷ್ಟಲಕ್ಷ್ಮಿಯ ಈ ದೇವಾಲಯವು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ವಿಶೇಷವೆಂದರೆ ಲಕ್ಷ್ಮಿಯ ಎಂಟು ರೂಪಗಳಾದ ಆದಿ ಲಕ್ಷ್ಮಿ, ಧಾನ್ಯ ಲಕ್ಷ್ಮಿ, ಧನ ಲಕ್ಷ್ಮಿ, ವಿದ್ಯಾ ಲಕ್ಷ್ಮಿ, ಗಜ ಲಕ್ಷ್ಮಿ, ವಿಜಯ ಲಕ್ಷ್ಮಿ, ಧೈರ್ಯ ಲಕ್ಷ್ಮಿ ಹಾಗೂ ಸಂತಾನ ಲಕ್ಷ್ಮಿಯರಿಗೆ ಮುಡಿಪಾದ ಪ್ರತ್ಯೇಕ ಸನ್ನಿಧಿಗಳು ಇಲ್ಲಿರುವುದನ್ನು ಕಾನಬಹುದು.

ಚಿತ್ರಕೃಪೆ: Summer yellow

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ದೊಡ್ಡಗದ್ದವಳ್ಳಿ ಲಕ್ಷ್ಮಿ ದೇವಾಲಯ : ಹಾಸನ ಜಿಲ್ಲೆಯ ಹಾಸನ ಪಟ್ಟಣ ಕೆಂದ್ರದಿಂದ ಹಾಸನ-ಬೇಲೂರು ರಸ್ತೆಯಲ್ಲಿ ಹಾಸನದಿಂದ ಸುಮಾರು ಹದಿನಾರು ಕಿ.ಮೀ ದೂರದಲ್ಲಿರುವ ದೊಡ್ಡಗದ್ದವಳ್ಳಿ ಹಳ್ಳಿಯು ತನ್ನಲ್ಲಿರುವ ಲಕ್ಷ್ಮಿ ದೇವಿಯ ಪುರಾತನ ದೇವಾಲಯದಿಂದಾಗಿ ಸಾಕಷ್ಟು ಹೆಸರುವಾಸಿಯಾಗಿದೆ. ಹೊಯ್ಸಳ ವಾಸ್ತು ಶೈಲಿಯ ಈ ದೇವಾಲಯವು ಲಕ್ಷ್ಮಿಗೆ ಮುಡಿಪಾದ ಅತಿ ಪುರಾತನ ದೇವಾಲಯಗಳ ಪೈಕಿ ಒಂದಾಗಿದ್ದು ತನ್ನ ಶಿಲ್ಪಕಲೆಗಳಿಂದ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Shriram Swaminathan

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಹೊಯ್ಸಳ ದೊರೆ ವಿಷ್ಣುವರ್ಧನನಿಂದ ಕ್ರಿ.ಶ. 1114 ರಲ್ಲಿ ನಿರ್ಮಿತವಾದ ಈ ದೇವಾಲಯದಲ್ಲಿ ಮೂರು ಅಡಿಗಳಷ್ಟು ಎತ್ತರದ ಲಕ್ಷ್ಮಿ ದೇವಿಯ ವಿಗ್ರಹವಿದ್ದು ದೇವಿಯು ಚತುರ್ಭುಜಳಾಗಿ ನೆಲೆಸಿದ್ದಾಳೆ. ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿರುವ ಈ ದೇವಾಲಯವಿ ಕರ್ನಾಟಕದಲ್ಲಿರುವ ಪ್ರಖ್ಯಾತ ಲಕ್ಷ್ಮಿ ದೇವಿ ದೇವಾಲಯಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Dineshkannambadi

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಸುಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯಗಳು

ಕೊಮ್ಮಾದಿ ಅಷ್ಟಲಕ್ಷ್ಮಿ ದೇವಾಲಯ : ವೈಜಾಗ್ ಅಥವಾ ವಿಶಾಖಪಟ್ಟಣಂನ ಮಧುರವಾಡಾದ ಕೊಮ್ಮಾದಿಯಲ್ಲಿರುವ ಅಷ್ಟ ಲಕ್ಷ್ಮಿಯ ದೇವಾಲಯವು ಸುಂದರವಾಗಿದ್ದು ಸಾಕಷ್ಟು ಜನರ/ಪ್ರವಾಸಿಗರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Srichakra Pranav

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X