Search
  • Follow NativePlanet
Share
» »ಬಿಜಾಪುರದಲ್ಲಿರುವ ಇಷ್ಟೆಲ್ಲಾ ಫೇಮಸ್ ತಾಣಗಳನ್ನು ನೀವು ನೋಡಿದ್ದೀರಾ?

ಬಿಜಾಪುರದಲ್ಲಿರುವ ಇಷ್ಟೆಲ್ಲಾ ಫೇಮಸ್ ತಾಣಗಳನ್ನು ನೀವು ನೋಡಿದ್ದೀರಾ?

ಕರ್ನಾಟಕದಲ್ಲಿನ ಐತಿಹಾಸಿಕ ಸ್ಥಳಗಳಲ್ಲಿ ಬಿಜಾಪುರವೂ ಒಂದು. ಹೆಚ್ಚಿನವರಿಗೆ ಬಿಜಾಪುರದಲ್ಲಿನ ಗೋಲ್‌ಗುಂಬಜ್ ಒಂದೇ ತಿಳಿದಿದೆ. ಆದರೆ ಬಿಜಾಪುರದಲ್ಲಿ ನಿಮಗೆ ತಿಳಿಯದೇ ಇರುವಂತಹ ಸಾಕಷ್ಟು ಸ್ಥಳಗಳು ಇವೆ. ಬಿಜಾಪುರವು ಅನೇಕ ಸ್ಮಾರಕಗಳನ್ನು ತನ್ನೊಳಗೆ ಬಚ್ಚಿಟ್ಟಿದೆ. ಹಾಗಾದರೆ ಬನ್ನಿ ಬಿಜಾಪುರದಲ್ಲಿರುವ ಐತಿಹಾಸಿಕ ಸ್ಮಾರಕಗಳು ಯಾವುದು ಅನ್ನೋದನ್ನು ತಿಳಿಯೋಣ.

ಬಿಜಾಪುರದಲ್ಲಿ ಮಸೀದಿಗಳು, ಮಹಲ್‌ಗಳು ಮತ್ತು ಭವ್ಯ ಸಮಾಧಿಗಳು ತುಂಬಿವೆ, ಹಿಂದಿನ ಅವಶೇಷಗಳು ಕಾಣಸಿಗುತ್ತವೆ. ಎಲ್ಲೆಡೆ ಟ್ಯಾಂಕ್‌ಗಳು ಮತ್ತು ಜಲಾಶಯಗಳು ಇದ್ದವು. ಸಿಟಡೆಲ್‌ಗಳು ಮತ್ತು ಅರಮನೆಗಳ ಅವಶೇಷಗಳು ಕಾಣಸಿಗುತ್ತವೆ. ಆದರೆ ಬಿಜಾಪುರದ ಪ್ರತಿ ಮೂಲೆಗಳಲ್ಲಿ ಸ್ಮಾರಕಗಳನ್ನು ಕಾಣಬಹುದು.

ಬಿಜಾಪುರದ ಕೋಟೆ

ಬಿಜಾಪುರದ ಕೋಟೆ

PC: Hinton, Henry

ಬಿಜಾಪುರದ ಕೋಟೆಯನ್ನು 15 ನೇ ಶತಮಾನದಲ್ಲಿ ಆದಿಲ್ ಷಾ ರಾಜವಂಶದ ಸಂಸ್ಥಾಪಕರಾದ ಯೂಸುಫ್ ಆದಿಲ್ ಷಾ ನಿರ್ಮಿಸಿದನು. ಸಿರಾಡೆಲ್ ಅಥವಾ ಅರಕೆಲ್ಲ ಫಾರೂಕ್ ಮಹಲ್ ಜೊತೆಯಲ್ಲಿ ಆತ ನಿರ್ಮಿಸಿದನು, ಅವರು ರಾಜಕುಮಾರನಾಗಿದ್ದರಿಂದ ಟರ್ಕಿಷ್ ಮೂಲದವರು ಎಂದು ನಂಬಲಾಗಿತ್ತು. ಈ ಕೋಟೆಯು ಇಂದು ಅವಶೇಷ ಸ್ಥಿತಿಯಲ್ಲಿದೆ.

ಇಲ್ಲಿ ಕಾಗೆಗಳು ತಿಂದ ಆಹಾರವೇ ಭಕ್ತರಿಗೆ ಪ್ರಸಾದ!ಇಲ್ಲಿ ಕಾಗೆಗಳು ತಿಂದ ಆಹಾರವೇ ಭಕ್ತರಿಗೆ ಪ್ರಸಾದ!

 ಗೋಲ್ ಗುಂಬಜ್

ಗೋಲ್ ಗುಂಬಜ್

PC: Ashwatham

ಬಿಜಾಪುರದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಸ್ಮಾರಕವೆಂದರೆ ಅದು ಗೋಲ್ ಗುಂಬಜ್. ಇದನ್ನು ಗೋಪುರ ರೂಪದಲ್ಲಿ ನಿರ್ಮಿಸಲಾಗಿದೆ. ಈ ಸ್ಮಾರಕವು ಬಿಜಾಪುರ ಸುಲ್ತಾನ್, ಮೊಹಮ್ಮದ್ ಆದಿಲ್ ಷಾಗಾಗಿ 17 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಸಮಾಧಿಯಾಗಿದ್ದು, ಇದನ್ನು "ಡೆಕ್ಕನ್ ವಾಸ್ತುಶಿಲ್ಪದ ರಚನಾತ್ಮಕ ವಿಜಯ" ಎಂದು ಹೆಮ್ಮೆಯಿಂದ ಉಲ್ಲೇಖಿಸಲಾಗಿದೆ.

 ಜಮಿಯಾ ಮಸೀದಿ

ಜಮಿಯಾ ಮಸೀದಿ

PC:Akshatha Inamdar

ಜಾಮಿ ಅಥವಾ ಜಮಿಯಾ ಮಸೀದಿ ಎಂದೂ ಕರೆಯಲ್ಪಡುತ್ತದೆ. ಒಂಬತ್ತು ಕೊಲ್ಲಿಗಳನ್ನು ಹೊಂದಿರುವ ದೊಡ್ಡ ಗುಮ್ಮಟವನ್ನು ಹೊಂದಿದ್ದು, ಇದು ಸುಮಾರು 11,000 ಚದರ ಕಿ.ಮೀ. ವಿಸ್ತೀರ್ಣದಲ್ಲಿದೆ. ಇದು ಬಿಜಾಪುರದಲ್ಲಿರುವ ಅತಿದೊಡ್ಡ ಮಸೀದಿಯಾಗಿದೆ.

ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್<br /> ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್

ಇಬ್ರಾಹಿಂ ರೋಜಾ

ಇಬ್ರಾಹಿಂ ರೋಜಾ

PC:Vivek B Govindaraju

ಇದು ಇಬ್ರಾಹಿಂ ಆದಿಲ್ ಷಾ 11 ಹಾಗೂ ಆತನ ಪತ್ನಿಯ ಸಮಾಧಿ. ಇದು 17 ನೇ ಶತಮಾನದಲ್ಲಿ ನಿರ್ಮಾಣಗೊಂಡಿತು ಮತ್ತು ಗೋಲ್ ಗುಂಬಜ್ ಜೊತೆಗೆ ಬಿಜಾಪುರದಲ್ಲಿನ ಈ ಅದ್ಭುತ ಸ್ಮಾರಕಗಳನ್ನು ನೋಡಲೇಬೇಕು. ಒಂದು ಮಸೀದಿ ಮತ್ತು ಭವ್ಯ ಸಮಾಧಿಯೊಂದಿಗೆ ಅವಳಿ ಸ್ಮಾರಕವಾಗಿದೆ. ಇದು ಒಂದು ಸುಂದರವಾದ ರಚನೆಯಾಗಿದ್ದು, ಕೆಲವು ಸುಂದರವಾದ ಕೆತ್ತನೆಯ ಲಕ್ಷಣಗಳಿಂದ ಕೂಡಿದೆ. ಆಗ್ರಾದಲ್ಲಿ ತಾಜ್ ಮಹಲ್‌ಗೆ ಈ ಸಮಾಧಿಯು ಸ್ಫೂರ್ತಿಯಾಗಿದೆ ಎನ್ನಲಾಗುತ್ತದೆ.

ಬಾರಾ ಕಮಾನ್

ಬಾರಾ ಕಮಾನ್

PC: Ashwin Kumar

ಇದೊಂದು ಸಮಾಧಿ, ಈ ಅಪೂರ್ಣ ಸ್ಮಾರಕವು ಗೋಲ್ ಗುಂಬಜ್‌ನ್ನು ಮರೆಮಾಚಲು ಯೋಜಿಸಲಾಗಿತ್ತು ಆದರೆ ಇದನ್ನು ಪೂರ್ಣಗೊಳಿಸಲಾಗಿಲ್ಲ. ಅಲಿ ಆದಿಲ್ ಷಾ 11 ಮತ್ತು ಅವನ ಕುಟುಂಬದ ಸಮಾಧಿಯಾಗಿ ಕಟ್ಟಲ್ಪಟ್ಟ ಗೋಥಿಕ್ ಶೈಲಿಯಲ್ಲಿ ನಿರ್ಮಿಸಲಾದ ಈ ಕಟ್ಟಡವನ್ನು ಅರ್ಧದಲ್ಲೇ ನಿಲ್ಲಿಸಲಾಯಿತು. ಬಾಸಾಲಿಕ್ ಕಲ್ಲಿನಿಂದ ನಿರ್ಮಿಸಲಾದ ಕಮಾನುಗಳು ಅರ್ಧದಷ್ಟು ಪೂರ್ಣವಾಗಿವೆ.

ಹಂಪಿಯಲ್ಲಿ ಭೂಗರ್ಭದಲ್ಲಿರುವ ಶಿವ ದೇವಾಲಯ ನೋಡಿದ್ದೀರಾ?ಹಂಪಿಯಲ್ಲಿ ಭೂಗರ್ಭದಲ್ಲಿರುವ ಶಿವ ದೇವಾಲಯ ನೋಡಿದ್ದೀರಾ?

ಅಪ್ಲಿ ಬುರ್ಜ್

ಅಪ್ಲಿ ಬುರ್ಜ್

ಎತ್ತರದ ಗೋಪುರವು ರಸ್ತೆಯ ಮಧ್ಯದಲ್ಲಿ ನಿಮ್ಮನ್ನು ಸ್ವಾಗತಿಸುತ್ತದೆ. ಇದು 16 ನೇ ಶತಮಾನದಲ್ಲಿ ಹೈದರ್ ಖಾನ್ ನಿರ್ಮಿಸಿದ ಅಪ್ಲಿ ಬುರ್ಜ್ ಆಗಿದೆ. ಗೋಪುರದಲ್ಲಿ ಕೆತ್ತಲಾದ ಮೆಟ್ಟಿಲುಗಳು ನಿಮ್ಮನ್ನು ಆ ಸ್ಮಾರಕದ ಮೇಲ್ಭಾಗಕ್ಕೆ ಕೊಂಡೊಯ್ಯತ್ತದೆ. ಇಲ್ಲಿ ನೀವು ಇಡೀ ಪಟ್ಟಣದ ಸೌಂದರ್ಯವನ್ನು ನೋಡಬಹುದು.

ಮಲೀಕ್ ಈ ಮೈದಾನ್

ಮಲೀಕ್ ಈ ಮೈದಾನ್

PC: IndianCow

ಇದು ಮಧ್ಯಕಾಲೀನ ಯುಗದ ದೊಡ್ಡ ಕ್ಯಾನನ್‌ಗಳಲ್ಲಿ ಒಂದಾಗಿದೆ. ಸುಮಾರು 15 ಅಡಿ ಉದ್ದದ, ಸುಮಾರು 5 ಅಡಿ ವ್ಯಾಸವನ್ನು ಹೊಂದಿರುವ ಕ್ಯಾನನ್ 55 ಟನ್ ತೂಗುತ್ತದೆ. ವಿಜಯನಗರ ಸಾಮ್ರಾಜ್ಯವು 16 ನೇ ಶತಮಾನದಲ್ಲಿ ತಾಳಿಕೋಟ ಕದನದಲ್ಲಿ ಸೋತ ನಂತರ ಇಬ್ರಾಹಿಂ ರೌಝಾ ನಿರ್ಮಿಸಿದ ಯುದ್ಧದ ಟ್ರೋಫಿಯಾಗಿತ್ತು.

ಗಗನ್ ಮಹಲ್

ಗಗನ್ ಮಹಲ್

PC:Henry

16 ನೇ ಶತಮಾನದಲ್ಲಿ ರಾಜ ಮನೆತನದ ಖಾಸಗಿ ನಿವಾಸವಾಗಿದ್ದ ಗಗನ್ ಮಹಲ್ ಅನ್ನು ಅಲಿ ಆದಿಲ್ ಷಾ 1 ನಿರ್ಮಿಸಿದನು. ಇದನ್ನು ಹೆವೆನ್ಲಿ ಅಥವಾ ಸ್ಕೈ ಅರಮನೆ ಎಂದೂ ಕರೆಯುತ್ತಾರೆ, ಅರಮನೆಯು ದುರ್ಬಾರ್ ಹಾಲ್ ಮತ್ತು ಕೆಲವು ಖಾಸಗಿ ಕೊಠಡಿಗಳನ್ನು ಹೊಂದಿದೆ. ಸುಂದರವಾದ ಕಮಾನುಗಳೊಂದಿಗೆ 21 ಮೀಟರ್ ಮುಂಭಾಗವನ್ನು ಹೊಂದಿರುವ ಈ ಅರಮನೆಯು ಇಂದು ಅವಶೇಷವಾಗಿದೆ.

ಇಲ್ಲಿಗೆ ಹೋದರೆ ಖಂಡಿತಾ ನಿಮ್ಮ ಗುರುಬಲ ಬದಲಾಗುತ್ತಂತೆ !ಇಲ್ಲಿಗೆ ಹೋದರೆ ಖಂಡಿತಾ ನಿಮ್ಮ ಗುರುಬಲ ಬದಲಾಗುತ್ತಂತೆ !

 ಮೆಹತರ್ ಮಹಲ್

ಮೆಹತರ್ ಮಹಲ್

PC:Aravind parvatikar

ಮಸೀದಿಗೆ ಬೇಕಾಗಿರುವಮತೆ ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಲಾದ ಗೇಟ್ವೇಗಳಲ್ಲಿ ಮೆಹತರ್ ಮಹಲ್ ಒಂದಾಗಿದೆ. 17 ನೇ ಶತಮಾನದಲ್ಲಿ ಇಂಡೋ ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ, ಪಕ್ಷಿಗಳ ಕೆತ್ತನೆಗಳು ಅಂದವಾದವು, ಆದರೆ ರಚನೆಯು ಕಲ್ಲಿನ ಹಂದರದ ಕೆಲಸದೊಂದಿಗೆ ಬಾಲ್ಕನಿಯನ್ನು ಹೊಂದಿದೆ .

ಟಿಪ್ಪುವಿಗಿತ್ತಂತೆ ಇಲ್ಲಿಯ ಶ್ರೀಕಂಠನ ಮೇಲೆ ಅಪಾರ ನಂಬಿಕೆ !ಟಿಪ್ಪುವಿಗಿತ್ತಂತೆ ಇಲ್ಲಿಯ ಶ್ರೀಕಂಠನ ಮೇಲೆ ಅಪಾರ ನಂಬಿಕೆ !

ಸಾತ್ ಮನ್ಜಿಲ್

ಸಾತ್ ಮನ್ಜಿಲ್

PC:Sychonet

ಏಳು ಅಂತಸ್ತಿನ ಮಹಲು, ಇದನ್ನು ಒಮ್ಮೆ ಬಿಜಾಪುರದಲ್ಲಿನ ಎತ್ತರದ ಕಟ್ಟಡಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಇಂದು ಅವುಗಳಲ್ಲಿ ಕೇವಲ ಐದು ಮಾತ್ರ ಉಳಿದಿವೆ ಹೆಚ್ಚಿನವು ಅವಶೇಷದ ಸ್ಥಿತಿಯಲ್ಲಿದೆ. ಇದು ಗಾರೆ ಕೆಲಸ ಮತ್ತು ವರ್ಣಚಿತ್ರಗಳಿಗೆ ಹೆಸರುವಾಸಿಯಾಗಿದ್ದು, 16 ನೇ ಶತಮಾನದಲ್ಲಿ ನಿರ್ಮಿಸಲಾದ ಸಾತ್ ಮನ್ಜಿಲ್ ಬಹುಶಃ ಆಕಾಲದಲ್ಲಿ ಸಂತೋಷದ ಪೆವಿಲಿಯನ್ ಆಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X