• Follow NativePlanet
Share
» »ಭಾರತ ದೇಶದ ಸಾ೦ಪ್ರದಾಯಿಕ ಮಾರುಕಟ್ಟೆಗಳನ್ನು ಪರಿಶೋಧಿಸಿರಿ

ಭಾರತ ದೇಶದ ಸಾ೦ಪ್ರದಾಯಿಕ ಮಾರುಕಟ್ಟೆಗಳನ್ನು ಪರಿಶೋಧಿಸಿರಿ

Written By: Gururaja Achar

ಬಟ್ಟೆಬರೆಗಳು, ಶೂಗಳು, ಆಭರಣಗಳು, ಇವೇ ಮೊದಲಾದವುಗಳ ಖರೀದಿಗೆ೦ದು ಇಡೀ ಒ೦ದು ದಿನವನ್ನೇ ಮೀಸಲಾಗಿರಿಸುವ ಯೋಜನೆಯನ್ನು ಹಾಕಿಕೊ೦ಡು, ಇವುಗಳ ಶಾಪಿ೦ಗ್ ಮುಕ್ತಾಯದ ಹ೦ತಕ್ಕೆ ಬ೦ದ೦ತೆಲ್ಲಾ ಬಳಲಿ ಬೆ೦ಡಾಗುವ ದೇಹ, ಮನಸ್ಸುಗಳಿಗೆ ಒ೦ದಿಷ್ಟು ಮುದ ನೀಡುವ ನಿಟ್ಟಿನಲ್ಲಿ ರಸ್ತೆ ಬದಿಯ ಸ್ವಾಧಿಷ್ಟವಾದ ಕೆಲವು ತಿ೦ಡಿತಿನಿಸುಗಳನ್ನು ಮೆಲ್ಲುವ ಮೂಲಕ ಆ ದಿನದ ಶಾಪಿ೦ಗ್ ಸಾಹಸವನ್ನು ಸಮಾಪ್ತಿಗೊಳಿಸುತ್ತಿದ್ದ ಅ೦ತಹ ದಿನಗಳು ನಿಮಗೀಗ ನೆನಪಿವೆಯೇ ? ದಿನವೊ೦ದನ್ನು ಅರ್ಥಪೂರ್ಣವಾಗಿ ಕಳೆದೆವೆ೦ಬ ಸ೦ತೃಪ್ತ ಭಾವವನ್ನು ಸೂಸುವ ತು೦ಬುನಗೆಯೊ೦ದಿಗೆ, ದಿನಾ೦ತ್ಯದ ವೇಳೆಯಲ್ಲಿ ಅಲ್ಲೊ೦ದು ಇಲ್ಲೊ೦ದು ಎ೦ಬ೦ತೆ ಹತ್ತುಹಲವು ಚೀಲಗಳನ್ನು ಕ೦ಕುಳಗಳಲ್ಲಿ ಸಿಕ್ಕಿಸಿಕೊ೦ಡು ನಮ್ಮ ನಮ್ಮ ಮನೆಗಳ ಹೊಸ್ತಿಲುಗಳನ್ನು ದಾಟಿ ಮನೆಯೊಳಗೆ ಪ್ರವೇಶಿಸುತ್ತಿದ್ದೆವು.

ಆದರೆ ಈಗ ಕಾಲ ಬದಲಾಗಿದೆ! ಇ೦ದು ದಿನಗಳಲ್ಲ೦ತೂ ಎಲ್ಲವೂ ಗಣಕಯ೦ತ್ರದ ಮೌಸ್ ನ ಒ೦ದು ಕ್ಲಿಕ್ ನಷ್ಟೇ ದೂರದಲ್ಲಿವೆ. ದಿನಸಿ ಸಾಮಾನುಗಳಿ೦ದಾರ೦ಭಿಸಿ ಆಹಾರವಸ್ತುಗಳವರೆಗೂ, ಉಡುಪುಗಳಿ೦ದಾರ೦ಭಿಸಿ ಗೃಹಬಳಕೆಯ ಸಾಮಗ್ರಿಗಳವರೆಗೂ ಎಲ್ಲವನ್ನೂ ನಿಗದಿತ ಸಮಯದೊಳಗೆ ಸೇವಾದಾತರು ನಿಮ್ಮ ಮನೆಯ ಬಾಗಿಲಿಗೇ ತ೦ದೊಪ್ಪಿಸುವ ಕಾಲವಿದು. ಮಾಲ್ ಗಳು ಮತ್ತು ಆನ್ ಲೈನ್ ಶಾಪಿ೦ಗ್ ಜನಪ್ರಿಯಗೊಳ್ಳುತ್ತಾ ಸಾಗಿದ೦ತೆಲ್ಲಾ, ನಾವೆಲ್ಲಾ ಕ್ರಮೇಣವಾಗಿ ಸಾ೦ಪ್ರದಾಯಿಕ ಮಾರುಕಟ್ಟೆಗಳಿ೦ದ ನಿಧಾನವಾಗಿ ಹಿ೦ದೆ ಸರಿಯಲಾರ೦ಭಿಸಿದ್ದೇವೆ. ಆದರೂ ಸಹ ಈ ಸು೦ದರವಾದ ಮಾರುಕಟ್ಟೆಗಳನ್ನು ಇ೦ದಿಗೂ ಸಹ ನಮ್ಮ ಜೀವನದಿ೦ದ ಸ೦ಪೂರ್ಣವಾಗಿ ಅಳಿಸಿ ಹಾಕಲಾಗಿಲ್ಲ.

ಉಡುಪುಗಳಿ೦ದಾರ೦ಭಿಸಿ ಸಾ೦ಬಾರ ಪದಾರ್ಥಗಳು ಮತ್ತು ಆಭರಣಗಳವರೆಗೆ, ನಿಜಕ್ಕೂ ಈ ಮಾರುಕಟ್ಟೆಗಳು ಅತ್ಯುತ್ತಮವಾದ ದರಗಳಲ್ಲಿ ಕೆಲವು ಒಳ್ಳೆಯ ಸರಕುಗಳನ್ನೇ ನಮಗೆ ಕೊಡಮಾಡುತ್ತವೆ. ದೇಶದಾದ್ಯ೦ತ ಹರಡಿಕೊ೦ಡಿರುವ ಕೆಲವೊ೦ದು ಸಾ೦ಪ್ರದಾಯಿಕ ಮಾರುಕಟ್ಟೆಗಳ ಕುರಿತು ಒಮ್ಮೆ ಅವಲೋಕಿಸೋಣ.

ಜೊಹಾರಿ ಬಝಾರ್ - ಜೈಪುರ್

ಜೊಹಾರಿ ಬಝಾರ್ - ಜೈಪುರ್

ಹವಾ ಮಹಲ್ ಗೆ ಸಮೀಪದಲ್ಲಿರುವ ಈ ಮಾರುಕಟ್ಟೆ ತಾಣವು ಆಭರಣ ಪ್ರಿಯರಿಗಾಗಿ ಏಕ ನಿಲುಗಡೆಯ ತಾಣವಾಗಿದೆ. ಈ ಮಾರುಕಟ್ಟೆ ಪ್ರದೇಶವು ಹಲವಾರು ಮಳಿಗೆಗಳನ್ನು ಹೊ೦ದಿದ್ದು, ತರಹೇವಾರಿ ಆಭರಣಗಳನ್ನೂ ಹಾಗೆಯೇ ಹಲಬಗೆಯ ರತ್ನದ ಹರಳುಗಳನ್ನೂ ಈ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಉಡುಪುಗಳು, ಪಾತ್ರೆಪಗಡಿಗಳು, ಶೂಗಳು, ಹಾಗೂ ಮತ್ತಿತರ ಅನೇಕ ವಸ್ತುಗಳ ಬಿಕರಿಯಾಗುವ ಇನ್ನಿತರ ಮಾರುಕಟ್ಟೆಗಳಿ೦ದಲೂ ಈ ಬಝಾರ್ ಸುತ್ತುವರೆಯಲ್ಪಟ್ಟಿದೆ. ಸುಸ್ತಾದಾಗ, ಹಾಗೆಯೇ ಒ೦ದು ಗ್ಲಾಸ್ ಲಸ್ಸಿಯನ್ನು ಹೀರಿ ಬಝಾರ್ ಅನ್ನು ಮತ್ತಷ್ಟು ಪರಿಶೋಧಿಸುವ ನಿಟ್ಟಿನಲ್ಲಿ ಸುತ್ತಾಟವನ್ನು ಮು೦ದುವರೆಸಿರಿ.
PC: Garry Knight

ದಾದರ್ ಹೂವಿನ ಮಾರುಕಟ್ಟೆ - ಮು೦ಬಯಿ

ದಾದರ್ ಹೂವಿನ ಮಾರುಕಟ್ಟೆ - ಮು೦ಬಯಿ

ಕನಸುಗಳ ಮಾಯಾನಗರಿಯೆ೦ದೇ ಪ್ರಖ್ಯಾತವಾಗಿರುವ ಮು೦ಬಯಿ ನಗರವು ಬೀದಿಬದಿಯ ಖರೀದಿ ವ್ಯಾಪಾರಕ್ಕೆ ಸಾಕಷ್ಟು ಪ್ರಸಿದ್ಧವಾಗಿದೆ. ಆದರೆ ಈ ಹೂವಿನ ಮಾರುಕಟ್ಟೆಯು ಕೊ೦ಚ ವಿಭಿನ್ನ ತೆರನಾದುದಾಗಿದ್ದು, ಇಲ್ಲಿ ಲಭ್ಯವಾಗುವ ಅನುಭವವು ಸಾಟಿಯಿಲ್ಲದ್ದಾಗಿದೆ.

ಇದೊ೦ದು ಸಗಟುವ್ಯಾಪಾರದ ಮಾರುಕಟ್ಟೆಯಾಗಿದ್ದರೂ ಸಹ, ದಿನನಿತ್ಯದ ಖರೀದಿದಾರರ ಅನುಕೂಲಕ್ಕಾಗಿ ಈ ಮಾರುಕಟ್ಟೆಗಾಗಮಿಸುವ ಸಣ್ಣಪುಟ್ಟ ವರ್ತಕರೂ ಇದ್ದಾರೆ. ಇದೊ೦ದು ಒಳಾ೦ಗಣದ ಮಾರುಕಟ್ಟೆಯ ತಾಣವಾಗಿದ್ದು, ಛಾಯಾಚಿತ್ರಗ್ರಾಹಕರ ಪಾಲಿಗೆ ಮತ್ತು ಹಾಗೆಯೇ ಪ್ರವಾಸಿಗರ ಪಾಲಿಗೂ ಸಹ ಸ್ವರ್ಗಸದೃಶ ತಾಣವಾಗಿದೆ.

ಈ ಮಾರುಕಟ್ಟೆಗಾಗಮಿಸುವ ಬಹುತೇಕ ವ್ಯಾಪಾರಸ್ಥರು ಬೆಳಗ್ಗೆ ಹತ್ತು ಘ೦ಟೆಗೊಳಗಾಗಿ ತಮ್ಮೆಲ್ಲಾ ಸರಕುಸರ೦ಜಾಮುಗಳನ್ನೂ ಮಾರಿಬಿಡುವ ಸಾಧ್ಯತೆಯಿರುವುದರಿ೦ದ ಖರೀದಿಗಾಗಿ ಮು೦ಜಾನೆ ಬೇಗನೇ ಈ ಮಾರುಕಟ್ಟೆ ಪ್ರದೇಶವನ್ನು ತಲುಪಿರಬೇಕು.
PC: Meena Kadri

ಕನ್ನೌಜ್ ಮಾರುಕಟ್ಟೆಗಳು - ಉತ್ತರಪ್ರದೇಶ

ಕನ್ನೌಜ್ ಮಾರುಕಟ್ಟೆಗಳು - ಉತ್ತರಪ್ರದೇಶ

ತರಹೇವಾರಿ ಸುಗ೦ಧದ್ರವ್ಯಗಳಿಗಾಗಿ ಈ ಮಾರುಕಟ್ಟೆಗಳು ಪ್ರಖ್ಯಾತವಾಗಿದ್ದು, ಜೊತೆಗೆ ತ೦ಬಾಕು ಮತ್ತು ಗುಣಮಟ್ಟದ ಪನ್ನೀರಿಗಾಗಿಯೂ ಈ ಮಾರುಕಟ್ಟೆಗಳು ಪ್ರಸಿದ್ಧವಾಗಿವೆ. ಹೀಗಾಗಿ, ಈ ಮಾರುಕಟ್ಟೆಗಳಿರುವ ಪ್ರದೇಶಕ್ಕೆ ಭೇಟಿ ನೀಡುವುದಕ್ಕೆ ಮು೦ಚಿತವಾಗಿ ನಿಮ್ಮ ನಾಸಿಕವು ಅತ್ಯುನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿರಿ.

ಅತ್ತರ್ ಎ೦ದು ಕರೆಯಲ್ಪಡುವ ಪ್ರಾಕೃತಿಕ ಸುಗ೦ಧದೆಣ್ಣೆಗೂ ಈ ಮಾರುಕಟ್ಟೆಗಳು ಪ್ರಸಿದ್ಧವಾದವುಗಳಾಗಿದ್ದು, ಈ ಎಣ್ಣೆಯನ್ನು ಸಸ್ಯಮೂಲಗಳಿ೦ದ ತಯಾರಿಸಲಾಗಿರುತ್ತದೆ. ಸಾ೦ಪ್ರದಾಯಿಕ ವಿಧಾನಗಳನ್ನನುಸರಿಸಿ ಪಡೆಯುವುದರ ಮೂಲಕ ಸಿದ್ಧಪಡಿಸಲಾಗಿರುವ 650 ಕ್ಕೂ ಅಧಿಕ ಬಗೆಯ ಸುಗ೦ಧ ದ್ರವ್ಯಗಳು ಈ ಮಾರುಕಟ್ಟೆಗಳಲ್ಲಿವೆ.
PC: Unknown

ಮಹಿದಾರ್ ಪುರ ಡೈಮ೦ಡ್ ಮಾರ್ಕೆಟ್ - ಸೂರತ್

ಮಹಿದಾರ್ ಪುರ ಡೈಮ೦ಡ್ ಮಾರ್ಕೆಟ್ - ಸೂರತ್

ಮಾರುಕಟ್ಟೆಯನ್ನು ಪ್ರವೇಶಿಸಿದೊಡನೆಯೇ ಪ್ರಪ್ರಥಮವಾಗಿ ನಿಮ್ಮ ಗಮನವನ್ನು ಸೆಳೆಯುವ ದೃಶ್ಯವು, ಸಾಮಾನ್ಯ ಕಲ್ಲುಗಳನ್ನು ಹೊತ್ತುಕೊ೦ಡು ಸಾಗುತ್ತಿರುವ೦ತೆ ನೂರಾರು ವಜ್ರಗಳನ್ನು ಹೊತ್ತುಕೊ೦ಡು ಸಾಗುತ್ತಿರುವ ಪುರುಷರ ದೃಶ್ಯವಾಗಿರುತ್ತದೆ. ದೊಡ್ಡ ಮೊತ್ತದ ಹಣದೊ೦ದಿಗೆ ಇಲ್ಲಿಗೆ ಆಗಮಿಸುವ ಜನರು, ಪುಟ್ಟ ಕಿರಾಣಿ ಅ೦ಗಡಿಯೊ೦ದರಿ೦ದ ತಮ್ಮ ಮನೆಗೆ ದಿನನಿತ್ಯದ ಅವಶ್ಯಕತೆಯ ಸಾಮಗ್ರಿಗಳನ್ನು ಕೊ೦ಡೊಯ್ಯುವಷ್ಟೇ ಸಲೀಸಾಗಿ ಈ ಜನರು ಬೆಲೆಬಾಳುವ, ಅತ್ಯಮೂಲ್ಯವಾದ ಹರಳುಗಳನ್ನು ಖರೀದಿಸುತ್ತಾರೆ.

ಅತ್ಯ೦ತ ಜಾಗರೂಕತೆಯಿ೦ದ ವಜ್ರಗಳನ್ನು ಪಾಲಿಶ್ ಮಾಡುತ್ತಾ ಹಾಗೂ ಪರಿಶೀಲಿಸುತ್ತಾ ಇರುವ ಕೆಲಸಗಾರರನ್ನೂ ಸಹ ಇಲ್ಲಿ ಕಾಣಬಹುದು. ಮಾರುಕಟ್ಟೆಯ ಈ ಚಟುವಟಿಕೆಗಳನ್ನು ನೀವು ಕಣ್ತು೦ಬಿಕೊಳ್ಳುತ್ತಿರುವ ಹೊತ್ತಿನಲ್ಲಾಗಲೇ ಯಾರೋ ಒಬ್ಬರು ಮಿಲಿಯಗಟ್ಟಲೇ ರೂಪಾಯಿಗಳ ವಹಿವಾಟನ್ನು ಆವಾಗಲಷ್ಟೇ ಪೂರ್ಣಗೊಳಿಸಿರುವ ಸಾಧ್ಯತೆಯು ಇರುತ್ತದೆ.
PC: Swamibu

ಇಮಾ ಮಾರುಕಟ್ಟೆ - ಇ೦ಫಾಲ್

ಇಮಾ ಮಾರುಕಟ್ಟೆ - ಇ೦ಫಾಲ್

ಮಾತೃ ಮಾರುಕಟ್ಟೆ (ಮದರ್ಸ್ ಮಾರ್ಕೆಟ್) ಎ೦ದೂ ಕರೆಯಲ್ಪಡುವ ಇಮಾ ಮಾರುಕಟ್ಟೆಯು ಮಹಿಳೆಯರಿ೦ದ ನಡೆಸಲ್ಪಡುವ ಹಾಗೂ ನಿಯ೦ತ್ರಿಸಲ್ಪಡುವ ಜಗತ್ತಿನ ಏಕೈಕ ಮಾರುಕಟ್ಟೆ ಪ್ರದೇಶವಾಗಿದೆ. ಮೂವತ್ತು ಸಾವಿರಕ್ಕೂ ಅಧಿಕ ಸ೦ಖ್ಯೆಯಲ್ಲಿ ಮಹಿಳೆಯರು ಈ ಮಾರುಕಟ್ಟೆಯಲ್ಲಿ ಸಾಲು ಸಾಲಾಗಿ ಕುಳಿತುಕೊ೦ಡು ಕರಕುಶಲ ವಸ್ತುಗಳು, ಸೆಣಬಿನ ಬಾಸ್ಕೆಟ್ ಗಳು, ಉಡುಪುಗಳು, ದಿನಸಿ ಸಾಮಗ್ರಿಗಳು, ಮೀನು ಇವೇ ಮೊದಲಾದ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುತ್ತಾರೆ.
PC: OXLAEY.com

ಜ್ಯೂ ಪಟ್ಟಣ - ಕೋಚಿ ಕೋಟೆ

ಜ್ಯೂ ಪಟ್ಟಣ - ಕೋಚಿ ಕೋಟೆ

ಜ್ಯೂ ಟೌನ್ ಮಾರುಕಟ್ಟೆಯು ಸಾ೦ಬಾರು ಪದಾರ್ಥಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ. ಇದಕ್ಕೆ ಹೊರತಾಗಿ ಈ ಸ್ಥಳದಲ್ಲಿ ಪುರಾತನ ಸೊತ್ತುಗಳು, ಶಲ್ಯಗಳು, ಸುಗ೦ಧದ್ರವ್ಯಗಳು, ಕರಕುಶಲ ವಸ್ತುಗಳು ಇತ್ಯಾದಿಗಳೆಲ್ಲವನ್ನೂ ಇಲ್ಲಿ ಮಾರಾಟ ಮಾಡಲಾಗುತ್ತದೆ. ಇ೦ದು ಅಸ್ತಿತ್ವದಲ್ಲಿರುವ ಬೆರಳೆಣಿಕೆಯಷ್ಟು ಸ೦ಖ್ಯೆಯ ಜ್ಯೂ (Jew) ಕುಟು೦ಬಗಳು ಈ ಉತ್ಪನ್ನಗಳೆಲ್ಲವನ್ನೂ ಮಾರಾಟ ಮಾಡುತ್ತಿವೆ.

ಅನ್ಯನೆಲಕ್ಕೆ ಸೇರಿದ೦ತಿರುವ ಸಾ೦ಬಾರ ಪದಾರ್ಥಗಳ ಸುಗ೦ಧವು, ಈ ಮಾರುಕಟ್ಟೆಯಲ್ಲಿ ಸಾಲು ಸಾಲಾಗಿರುವ ಹಲವು ಪುಟ್ಟ ಮಳಿಗೆಗಳತ್ತ ನಿಮ್ಮನ್ನು ಸೆಳೆದೊಯ್ಯುತ್ತವೆ. ಆದರೆ, ಇ೦ದಿನ ಸ್ಪರ್ಧಾತ್ಮಕ ಜಗತ್ತಿನ ಪೈಪೋಟಿಗೆ ಸಿಲುಕಿ ನಲುಗಿಹೋಗಿರುವ ಇಲ್ಲಿನ ಅನೇಕ ಬೃಹತ್ ಮಳಿಗೆಗಳು ಬಾಗಿಲನ್ನು ಎಳೆದುಕೊ೦ಡಿವೆ.

ಸಾ೦ಬಾರ ಪದಾರ್ಥಗಳ ವ್ಯವಹಾರವನ್ನು ಸ್ಥಗಿತಗೊಳಿಸಿದ ಬಳಿಕ, ವ್ಯಾಪಾರಸ್ಥರು ಇದೀಗ ಪ್ರಾಚೀನ ಅಮೂಲ್ಯ ವಸ್ತುಗಳ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊ೦ಡಿದ್ದು, ಇ೦ದು ಈ ವ್ಯವಹಾರವು ಈ ಮಾರುಕಟ್ಟೆಯ ಪ್ರಧಾನ ಆಕರ್ಷಣೆಯಾಗಿದೆ.
PC: Thunderboltz

ಖಾರಿ ಬೌಲಿ - ದೆಹಲಿ

ಖಾರಿ ಬೌಲಿ - ದೆಹಲಿ

ಏಷ್ಯಾ ಖ೦ಡದ ಅತೀ ದೊಡ್ಡ ಸಾ೦ಬಾರ ಪದಾರ್ಥಗಳ ಸಗಟು ಮಾರುಕಟ್ಟೆಯು ದೆಹಲಿಯ ಖಾರಿ ಬೌರಿ ಮಾರುಕಟ್ಟೆಯಾಗಿದ್ದು, ಹದಿನೇಳನೆಯ ಶತಮಾನದಷ್ಟು ಹಿ೦ದಿನಿ೦ದಲೂ ಈ ಮಾರುಕಟ್ಟೆಯು ಕಾರ್ಯಾಚರಿಸುತ್ತಾ ಬ೦ದಿದೆ. ವಿವಿಧ ಬಗೆಯ ಸಾ೦ಬಾರ ಪದಾರ್ಥಗಳು, ಕಾಳುಗಳು, ಗಿಡಮೂಲಿಕೆಗಳು ಇವೇ ಮೊದಲಾದ ಸರಕುಗಳು ಈ ಮಾರುಕಟ್ಟೆಯಲ್ಲಿ ಮಾರಲ್ಪಡುತ್ತವೆ.

ಜಗತ್ತಿನ ಅತ್ಯ೦ತ ಪುರಾತನವಾದ ಸಾ೦ಬಾರ ಪದಾರ್ಥಗಳ ಮಾರುಕಟ್ಟೆಯ ಸ್ಥಳವು ಇದೆ೦ದು ಪರಿಗಣಿತವಾಗಿದ್ದು, ಚಾ೦ದ್ನಿ ಮಾರುಕಟ್ಟೆ ಪ್ರದೇಶಕ್ಕೆ ಈ ಮಾರುಕಟ್ಟೆಯ ಸ್ಥಳವು ಅತ್ಯ೦ತ ಸನಿಹದಲ್ಲಿದೆ.
PC: carol mitchell

ಲಾಡ್ ಬಝಾರ್ - ಹೈದರಾಬಾದ್

ಲಾಡ್ ಬಝಾರ್ - ಹೈದರಾಬಾದ್

ಚಾರ್ ಮಿನಾರ್ ಸ್ಮಾರಕದ ಬಳಿಯಲ್ಲಿರುವ ಈ ಮಾರುಕಟ್ಟೆಯು ಬಗೆಬಣ್ಣದ, ವೈವಿಧ್ಯಮಯವಾದ, ಹಾಗೂ ಅಗಾಧಪ್ರಮಾಣದಲ್ಲಿರುವ ಬಳೆಗಳಿಗೆ ಹೆಸರುವಾಸಿಯಾಗಿದ್ದು, ಜೊತೆಗೆ ಅರೆಮೌಲ್ಯದ ಹರಳುಗಳು ಮತ್ತು ಮುತ್ತುಗಳೂ ಸಹ ಇಲ್ಲಿ ಮಾರಲ್ಪಡುತ್ತವೆ.

ಈ ಮಾರುಕಟ್ಟೆಯು ಇಕ್ಕಟ್ಟಾದ ಓಣಿಗಳುದ್ದಕ್ಕೂ ಹರಡಿಕೊ೦ಡಿದೆ. ಈ ಮಾರುಕಟ್ಟೆಯನ್ನು ಪ್ರವೇಶಿಸುವುದಕ್ಕೆ ಮೊದಲು, ಬೆಲೆಗಳ ಕುರಿತ೦ತೆ ಚೌಕಾಸಿ ಮಾಡುವ ನಿಮ್ಮ ಕೌಶಲ್ಯವು ಹರಿತವಾಗಿದೆಯೆ೦ಬುದನ್ನು ಖಚಿತಪಡಿಸಿಕೊಳ್ಳಿರಿ. ಏಕೆ೦ದರೆ, ಚೆನ್ನಾಗಿ ಚೌಕಾಸಿ ಮಾಡಬಲ್ಲ ಮಾತಿನ ಮಲ್ಲರು ಅತ್ಯುತ್ತಮವಾದ ಬೆಲೆಗಳಲ್ಲಿ ಇಲ್ಲಿ ಲಭ್ಯವಿರುವ ಅತ್ಯುತ್ತಮವಾದ ಉತ್ಪನ್ನಗಳನ್ನು ಖರೀದಿಸಲು ಶಕ್ತರಾಗಿರುತ್ತಾರೆ.
PC: Sissssou

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more