» »ದೂಧ್ ಸಾಗರ್ ಜಲಪಾತಕ್ಕೆ ಆಹ್ಲಾದಕರವಾದ ಭೇಟಿ!

ದೂಧ್ ಸಾಗರ್ ಜಲಪಾತಕ್ಕೆ ಆಹ್ಲಾದಕರವಾದ ಭೇಟಿ!

By: Manjula Balaraj

ತ್ವರಿತ ಗತಿಯಲ್ಲಿ ಮುನ್ನುಗ್ಗುತ್ತಿರುವ ನಗರ ಜೀವನದಿಂದ ವಿರಾಮ ಪಡೆಯಲು ಎಲ್ಲರೂ ಬಯಸುವುದು ಸಹಜವಾಗಿದೆ. ಯಾವಾಗಲೊಮ್ಮೆಯಾದರೂ ನಾವು ಸಾಹಸಿ ಯಾತ್ರೆಗೆ ಹೋಗಲು ಬಯಸುತ್ತೇವೆ. ಹೀಗೆ ಹೋಗುವುದರಿಂದ ನಮ್ಮ ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ರಿಫ್ರೆಶ್ ಮಾಡುತ್ತದೆ ಮತ್ತು ನಮ್ಮ ಜೀವನದಲ್ಲಿ ನಾವು ಹೊಸ ಉತ್ಸಾಹವನ್ನು ಪಡೆಯುತ್ತೇವೆ.ಬೆಂಗಳೂರಿನಿಂದ ಈ ರೀತಿಯ ವಿರಾಮವನ್ನು ಪಡೆಯುವುದು ಕೇವಲ 9 ಗಂಟೆಗಳಷ್ಟು ದೂರದಲ್ಲಿದೆ ಅದು ಯಾವುದೆಂದರೆ ದೂಧ್ ಸಾಗರ್. ನೀವು ಭೇಟಿ ಕೊಡಲೇ ಬೇಕಾದ ಸ್ಥಳವಾಗಿದೆ!

ಪಶ್ಚಿಮ ಘಟ್ಟಗಳಲ್ಲಿ ಕರ್ನಾಟಕ ಮತ್ತು ಗೋವಾ ಗಡಿಯಲ್ಲಿರುವ ದೂಧ್ ಸಾಗರ್ ಭಾರತದ ಅತ್ಯಂತ ಎತ್ತರವಾದ ಜಲಪಾತವಾಗಿದೆ. ಇದು ಮಾಂಡವಿ ನದಿಯಿಂದ ಹರಿಯುತ್ತದೆ.ಇದು ಬೆಂಗಳೂರಿನಿಂದ ಸುಮಾರು 560 ಕಿ.ಮೀ ದೂರದಲ್ಲಿದೆ ಮತ್ತು ಗೋವಾದಿಂದ ಕೇವಲ 29 ಕಿ.ಮೀ ಅಂತರದಲ್ಲಿದೆ. ಈ ನಾಲ್ಕು ಹಂತದಿಂದ ಬೀಳುವ ಜಲಪಾತವಾಗಿದ್ದು 1017 ಅಡಿ ಎತ್ತರದಿಂದ ಇಳಿಯುತ್ತದೆ! ದೂಧ್ ಸಾಗರ ಹೆಸರೇ ಸೂಚಿಸುವಂತೆ ಅಕ್ಷರಶಃ "ಹಾಲು ಸಮುದ್ರ" ಎಂದು ಅರ್ಥೈಸುತ್ತದೆ ಅಲ್ಲದೆ ಇದರ ನೋಟವು ಹಾಲಿನ ಸಮುದ್ರವನ್ನು ನೋಡಿದಂತೆ ಕಾಣುತ್ತದೆ.

ಭಗವಾನ್ ಮಹಾವೀರ್ ಅಭಯಾರಣ್ಯ ಮತ್ತು ಮೊಲೆಮ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಭವ್ಯವಾದ ಜಲಪಾತವು ಇದ್ದು ಸುತ್ತಲೂ ಶ್ರೀಮಂತವಾದ ಅರಣ್ಯ ಪೊದೆಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳಿಂದ ಆವೃತವಾಗಿದೆ. ಟ್ರಕ್ಕಿಂಗ್ ಮಾಡುವ ಸಾಹಸಿಗಳಿಗೆ ದೂದ್ ಸಾಗರ್ ಒಂದು ಕನಸಿನ ಸ್ಥಳವಾಗಿದೆ.

ದೂದ್ ಸಾಗರಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯ

ದೂದ್ ಸಾಗರಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯ

PC: Kumaresh Rajarajan

ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಮುಂಗಾರು ಮಳೆಗಾಲವು ದೂಧ್ ಸಾಗರ್ ಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ ಈ ಸಮಯದಲ್ಲಿ ಜಲಪಾತವು ನೀರಿನಿಂದ ತುಂಬಿರುತ್ತದೆ. ಆದರೆ ಜಲಪಾತವನ್ನು ವೀಕ್ಷಿಸಲು ನೀವು ಬಯಸಿದರೆ ಮಾತ್ರ ನೀವು ಈ ಸಮಯದಲ್ಲಿ ಹೋಗಬಹುದು. ನೀವು ಟ್ರಕ್ಕಿಂಗ್ ಮಾಡಲು ಇಲ್ಲಿಗೆ ಹೋಗಬಯಸುವಿರಾದರೆ, ಮಾನ್ಸೂನ್ ನಂತರ ಅಕ್ಟೋಬರ್ ನಿಂದ ಫೆಬ್ರುವರಿ ವರೆಗಿನ ತಿಂಗಳುಗಳು ಸೂಕ್ತವಾಗಿವೆ

ಬೆಂಗಳೂರಿನಿಂದ ದೂಧ್ ಸಾಗರ್ ಗೆ ಮಾರ್ಗ

ಬೆಂಗಳೂರಿನಿಂದ ದೂಧ್ ಸಾಗರ್ ಗೆ ಮಾರ್ಗ

ತುಮಕೂರು ಮುಖ್ಯ ರಸ್ತೆ. ರಾಜಾಜಿನಗರದಲ್ಲಿ - ಎನ್ ಹೆಚ್ 48 - ಎಸ್ ಹೆಚ್ 34 ಧಾರವಾಡದಲ್ಲಿ - ನಿರ್ಗಮನ ಎನ್ ಹೆಚ್ 48 - ಘರ್ಲಿಯಲ್ಲಿ ಎನ್ ಹೆಚ್ 748 - ಎನ್ ಹೆಚ್ 748 ಗೆ ವಿಲೀನಗೊಳ್ಳುವುದು - ದರ್ಬಂದೊರಾ-ಸಾನ್ಕಾರ್ಡೆಮ್-ಮೊಲೆಮ್-ಕೊಲೆಮ್ ರಸ್ತೆ. - ದೂಧಸಾಗರ್ ಜಲಪಾತ (547 ಕಿ.ಮೀ - 9 ಗಂ) ಇಲ್ಲಿ ಭೇಟಿ ನೀಡುವ ಇತರ ಸ್ಥಳಗಳು ಮತ್ತು ದೂಧ್ ಸಾಗರ್ ಗೆ ನಿಮ್ಮ ರಸ್ತೆ ಪ್ರಯಾಣದ ಬಗ್ಗೆ ತಿಳಿಯಬೇಕಾದ ಸಂಗತಿಗಳು.

ತುಮಕೂರಿನಲ್ಲಿ ಟ್ರಕ್ಕಿಂಗ್

ತುಮಕೂರಿನಲ್ಲಿ ಟ್ರಕ್ಕಿಂಗ್

PC: Sangrambiswas

ಮಧುಗಿರಿ ಮತ್ತು ದೇವರಾಯನದುರ್ಗ ಎಂಬುದು ಎರಡು ತುಮಕೂರಿನ ಪ್ರಖ್ಯಾತ ಬೆಟ್ಟಗಳು, ಈ ಬೆಟ್ಟಗಳು ಟ್ರಕ್ಕಿಂಗ್ ಮಾಡಲು ಹೇಳಿ ಮಾಡಿಸಿದಂತಿವೆ. ತುಮಕೂರು ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿದೆ. ದೇವರಾಯನ ದುರ್ಗ ಬೆಟ್ಟದ ಹತ್ತಿರದಲ್ಲಿ "ನಮದ ಚಿಲುಮೆ" ಎಂಬ ನೈಸರ್ಗಿಕ ಕಾರಂಜಿಯನ್ನು ಹೊಂದಿದೆ.

ಬೆಟ್ಟದ ಶೃಂಗವನ್ನು ತಲುಪಲು, ಉತ್ತಮವಾಗಿ ಕೆತ್ತಿರುವ ಮೆಟ್ಟಿಲುಗಳನ್ನು ಮಾಡಲಾಗಿದೆ. ಇಲ್ಲಿರುವ ಇರುವ 7 ಇತರ ದ್ವಾರಗಳು ಗಮನಾರ್ಹವಾಗಿವೆ ಆದರೆ ಅಕ್ಕ ಪಕ್ಕದಲ್ಲಿ ಪೊದೆಗಳು ಬೆಳೆಯುವುದರಿಂದ ಅದರ ಮಧ್ಯದಲ್ಲಿಯೇ ಬೆಟ್ಟದ ಶಿಖರಕ್ಕೆ ನಡೆದು ಹೋಗಬೇಕಾಗುತ್ತದೆ.

ಮಧುಗಿರಿ ಅಥವಾ "ಹನಿ ಬೆಟ್ಟಗಳು" ಇಲ್ಲಿಗೆ ಕೋಟೆಯ ಬಾಗಿಲುಗಳ ಮೂಲಕ ಕೂಡಾ ಪ್ರವೇಶಿಸಬಹುದಾಗಿದೆ.ಬೆಟ್ಟದ ಆರೋಹಣ ಮಾಡುವಾಗ ಕಡಿದಾದ ದಾರಿಯಿರುವುದರಿಂದ ಟ್ರಕ್ಕಿಂಗ್ ಮಾಡುವುದು ತುಂಬಾ ಸುಲಭವಲ್ಲ.ಇಡೀ ಟ್ರಕ್ಕಿಂಗ್ 3 ಗಂಟೆಗಳನ್ನು ತೆಗೆದುಕೊಳ್ಳಬಹುದು ಆದರೆ ಸಾಮಾನ್ಯವಾಗಿ, ಆದರೆ ಟ್ರಕ್ಕಿಂಗ್ ಮಾಡುವವರ ಪರಿಣತಿಯನ್ನು ಅವಲಂಬಿಸಿರುತ್ತದೆ.

ಚಿತ್ರದುರ್ಗ

ಚಿತ್ರದುರ್ಗ

PC: Nagarjun

ಮುಖ್ಯವಾಗಿ ಚೋಳ ರಾಜವಂಶದ ಪರಂಪರೆಯನ್ನು ಹೊಂದಿರುವ ಹೆಸರುವಾಸಿಯಾದ ಸ್ಥಳವಾಗಿದೆ. ಚಿತ್ರದುರ್ಗ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಚಿತ್ರದುರ್ಗ ಕೋಟೆ ಮತ್ತು ಚಂದ್ರವಲ್ಲಿ ಗುಹೆಗಳು ಅತಿ ಹೆಚ್ಚು ಭೇಟಿ ನೀಡಬಹುದಾದ ಸ್ಥಳಗಳಾಗಿವೆ.

17 ನೇ ಮತ್ತು 18 ನೇ ಶತಮಾನದ ನಡುವಿನ ಅನೇಕ ರಾಜವಂಶಗಳಿಂದ ಕಟ್ಟಲ್ಪಟ್ಟಿದೆ ಮತ್ತು ವಿಸ್ತರಿಸಲ್ಪಟ್ಟಿದೆ.ಇಲ್ಲಿ ಚಿತ್ರದುರ್ಗ ಕೋಟೆ ಸಿಟಡೆಲ್ ಗಳು, ಗೋದಾಮುಗಳು, ಮಸೀದಿಗಳು ಮತ್ತು ಭವ್ಯವಾದ ದೇವಾಲಯಗಳ ನಿರ್ಮಾಣವಿದೆ. ಮೇಲಿನ ಕೋಟೆ 18 ದೇವಾಲಯಗಳನ್ನು ಹೊಂದಿದೆ ಮತ್ತು ಕೆಳ ಕೋಟೆ ಒಂದು ದೊಡ್ಡ ದೇವಾಲಯವನ್ನು ಹೊಂದಿದೆ.

ಚಂದ್ರವಲ್ಲಿ ಗುಹೆಗಳು ಸಮುದ್ರ ಮಟ್ಟಕ್ಕಿಂತ 80 ಅಡಿಗಳಷ್ಟು ಕೆಳಗಿವೆ ಮತ್ತು ಇಲ್ಲಿ ಶಿವಲಿಂಗವನ್ನು ನಿರ್ಮಿಸಲಾಗಿದೆ. .ಚಂದ್ರವಲ್ಲಿ ಗುಹೆಗಳು ಕಿರುಬನಕಲ್ಲು, ಚಿತ್ರದುರ್ಗ ಮತ್ತು ಚೋಳಗುಡ್ಡ ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟಿದೆ.

ದಾವಣಗೆರೆ

ದಾವಣಗೆರೆ

PC: Srutiagarwal123

ದಾವಣಗೆರೆಯು ಚಿತ್ರದುರ್ಗದಿಂದ 60 ಕಿ.ಮೀ ದೂರದಲ್ಲಿದೆ. ಇಲ್ಲಿ ಹಲವಾರು ಹತ್ತಿ ಖಾರ್ಕಾನೆಗಳಿರುವುದರಿಂದ ದಾವಣಗೆರೆಯನ್ನು ಮೊದಲಿಗೆ " ಭಾರತದ ಮ್ಯಾಂಚೆಸ್ಟರ್" ಎಂದು ಹೇಳಲಾಗುತ್ತದೆ.ಇಲ್ಲಿ ಅನೇಕ ದೇವಾಲಯಗಳಿವೆ. 75 ಅಡಿ ಎತ್ತರದ ಗಡಿಯಾರ ಗೋಪುರವು ನಗರದ ಪ್ರಮುಖ ಹೆಗ್ಗುರುತಾಗಿದೆ.

ದಾವಣಗೆರೆಯು ತನ್ನ ಪಾಕ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ದಾವಣಗೆರೆ ಬೆಣ್ಣೆದೋಸೆ ಬಾಯಿ ನೀರೂರಿಸುತ್ತದೆ. ಬೆಂಗಳೂರಿನ ಹಲವು ಆಹಾರ ಮಳಿಗೆಗಳಲ್ಲೂ ದಾವಣಗೆರೆಯ ಕೆಲವು ಭಕ್ಷ್ಯವನ್ನು ಪ್ರಯತ್ನಿಸಬಹುದು! 'ಗುಲಾಡಿಕಿ ಉಂಡೆ' ಸಿಹಿ ತಿನಿಸು, ದಾವಣಗೆರೆಯಲ್ಲಿ ಪ್ರಸಿದ್ಧವಾಗಿದೆ.

ರಾಣಿಬೆನ್ನೂರ್ ಬ್ಲ್ಯಾಕ್ ಬಕ್ (ಕೃಷ್ಣ ಮೃಗ) ಅಭಯಾರಣ್ಯ

ರಾಣಿಬೆನ್ನೂರ್ ಬ್ಲ್ಯಾಕ್ ಬಕ್ (ಕೃಷ್ಣ ಮೃಗ) ಅಭಯಾರಣ್ಯ

PC: Tejas054

ರಾಣಿಬೆನ್ನೂರ್ ಬ್ಲ್ಯಾಕ್ಬಕ್ ಅಭಯಾರಣ್ಯವು ಭಾರತದ ಕೆಲವೇ ಅಭಯಾರಣ್ಯಗಳಲ್ಲಿ ಒಂದಾಗಿದೆ, ಅದು ಮುಖ್ಯವಾಗಿ ಬ್ಲ್ಯಾಕ್ಬಕ್ಸ್ ಅಥವಾ "ಕೃಷ್ಣ ಮೃಗ" ಅನ್ನು ರಕ್ಷಿಸುತ್ತದೆ.ಇದು ದಾವಣಗೆರೆಯಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ಕೃಷ್ಣ ಮೃಗ ಮಾತ್ರವಲ್ಲದೆ ಇಲ್ಲಿ ಬೇರೆ ಪ್ರಾಣಿಗಳೂ ಕೂಡ ವಾಸಿಸುತ್ತವೆ ಇವುಗಳಲ್ಲಿ ನರಿ, ಪಾಂಗೋಲಿನ್, ಮುಂಗುಸಿ, ಇತ್ಯಾದಿಗಳು. ಇದು ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಜಾತಿಗಳ ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ನೆಲೆಯಾಗಿದೆ.

ಹಾವೇರಿಯ ದೇವಾಲಯಗಳು

ಹಾವೇರಿಯ ದೇವಾಲಯಗಳು

PC: Dineshkannambadi

ಹಾವೇರಿ ಕರ್ನಾಟಕದ ಸಾಂಸ್ಕೃತಿಕವಾಗಿ ಶ್ರೀಮಂತ ದೇವಾಲಯಗಳ ಪಟ್ಟಣವಾಗಿದ್ದು, ರಾಣಿಬೆನ್ನೂರಿನಿಂದ 35 ಕಿ.ಮೀ ದೂರದಲ್ಲಿದೆ. ಇಲ್ಲಿಯ ದೇವಾಲಯಗಳ ವಾಸ್ತುಶೈಲಿಯು ಚೋಳ ಸಾಮ್ರಾಜ್ಯದ ಕಲಾಕೃತಿಗಳನ್ನು ಪ್ರತಿಬಿಂಬಿಸುತ್ತದೆ.

ಇಲ್ಲಿಯ ದೇವಾಲಯಗಳು ಸಮೃದ್ಧತೆಯಿಂದ ಕೂಡಿವೆ, 12 ನೇ ಶತಮಾನ ಬಿ.ಸಿ ಯಲ್ಲಿ ಕಟ್ಟಲಾದ ತಾರಕೇಶವರ ದೇವಸ್ಥಾನವು ಒಂದು ಅದ್ಭುತವಾದ ಕಟ್ಟಡವಾಗಿದ್ದು ಈ ದೇವಸ್ಥಾನವನ್ನು ಕದಂಬರು ನಿರ್ಮಿಸಿದರು ಮತ್ತು ನಂತರ ಚಾಲುಕ್ಯರು ಗಮನಾರ್ಹವಾದ ಬದಲಾವಣೆಗಳನ್ನು ಮಾಡಿದರು. ಭಗವಾನ್ ಶಿವನಿಗೆ ಸಮರ್ಪಿತವಾದ ಈ ದೇವಸ್ಥಾನವು ಹಾವೇರಿಯ ಹಾನಗಲ್ ಪಟ್ಟಣದಲ್ಲಿ ನಿರ್ಮಿಸಲಾಗಿದೆ. ಸಿದ್ದೇಶ್ವರ ದೇವಾಲಯ ಮತ್ತು ಗಲಗೇಶ್ವರ ದೇವಸ್ಥಾನಗಳು ಭೇಟಿ ನೀಡಬಹುದಾದ ಎರಡು ಸುಂದರ ದೇವಾಲಯಗಳಾಗಿವೆ.

ಬಂಕಾಪುರದ ನವಿಲು ವನ್ಯಧಾಮ

ಬಂಕಾಪುರದ ನವಿಲು ವನ್ಯಧಾಮ

PC: Kellie Hastings

ಬಂಕಾಪುರ ನವಿಲು ವನ್ಯಧಾಮವು ಹಾವೇರಿಯಿಂದ 21 ಕಿ.ಮೀ ದೂರದಲ್ಲಿದೆ.ಈ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ನವಿಲುಗಳು ಮತ್ತು ಪೀಹೆನ್ಸ್ ಗಳು ಕಂಡುಬಂದ ಕಾರಣ ಭಾರತ ಸರ್ಕಾರ 2006 ರಲ್ಲಿ ಈ ಪ್ರದೇಶವನ್ನು ಪೀಕಾಕ್(ನವಿಲು) ಅಭಯಾರಣ್ಯವೆಂದು ಘೋಷಿಸಿತು.

ಈ ಪ್ರದೇಶದಲ್ಲಿ ಮಾನವನ ಪ್ರವೇಶವು ಸೀಮಿತವಾದುದುರಿಂದ ನವಿಲುಗಳ ವಾಸ್ತವ್ಯ ಹೆಚ್ಚಾಗಿ ಕಂಡುಬರುತ್ತದೆ. ಹೆಚ್ಚು ಕಡಿಮೆ ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ನವಿಲುಗಳನ್ನು ಇಲ್ಲಿ ಕಾಣಬಹುದಾಗಿದೆ! ಆದುದರಿಂದ ಇಲ್ಲಿಗೆ ಬರುವ ಪ್ರವಾಸಿಗರು ಈ ಪ್ರದೇಶಕ್ಕೆ ಖಂಡಿತವಾಗಿಯೂ ಭೇಟಿ ಕೊಡುತ್ತಾರೆ.

ಶಿಗ್ಗಾಂವಿನ ಉತ್ಸವ್ ರಾಕ್ ಗಾರ್ಡನ್

ಶಿಗ್ಗಾಂವಿನ ಉತ್ಸವ್ ರಾಕ್ ಗಾರ್ಡನ್

PC: ShwetaW

ಇದು ಶಿಗ್ಗಾವಿನ ಗೊಟಗೋಡಿ ತಾಲೂಕಿನಲ್ಲಿದೆ. ಉತ್ಸವ್ ರಾಕ್ ಗಾರ್ಡನ್ ಒಂದು ಶಿಲ್ಪ ತೋಟವಾಗಿದ್ದು, ಇದು ಗ್ರಾಮೀಣ ಸಂಸ್ಕೃತಿಯ ಸಮಕಾಲೀನ ಕಲೆ ಮತ್ತು ಉತ್ತರ ಕರ್ನಾಟಕದ ಸಂಪ್ರದಾಯಗಳನ್ನು ಪ್ರದರ್ಶಿಸುತ್ತದೆ.

ಉದ್ಯಾನವನವು ಕಾರ್ಮಿಕರ ದೈನಂದಿನ ಜೀವನವನ್ನು ಚಿತ್ರಿಸುವ 2,000 ಕ್ಕೂ ಹೆಚ್ಚು ಶಿಲ್ಪಗಳನ್ನು ಹೊಂದಿದೆ, ಅವುಗಳು ತುಂಬಾ ಜೀವಂತವಿರುವಂತೆ ಕಾಣುತ್ತದೆ.

ಈ ಭವ್ಯವಾದ ಉದ್ಯಾನವನ್ನು ರೂಪಿಸುವ ಪರಿಕಲ್ಪನೆ, ವಿನ್ಯಾಸಗೊಳಿಸಿದ ರೀತಿ ಶ್ರೀ ಟಿ.ಬಿ ಸೋಲಬಕ್ಕನವರ್ ಅವರದ್ದು ಅವರ ಈ ಸುಂದರ ಪರಿಕಲ್ಪನೆಗೆ ಅನೇಕ ಪ್ರಶಸ್ಥಿ ಹಾಗೂ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಲ್ಲಿಯ ಕಲಾಪೂರಿತ ಕೆಲಸವು ಎಲ್ಲಾ ವರ್ಗದ ಜನರನ್ನು ಆಕರ್ಷಿಸುತ್ತದೆ.

ಹುಬ್ಬಳ್ಳಿ ಮತ್ತು ಧಾರವಾಡ

ಹುಬ್ಬಳ್ಳಿ ಮತ್ತು ಧಾರವಾಡ

PC: GuruAngadi

ಹುಬ್ಬಳ್ಳಿ ಎಂದು ಕರೆಯಲ್ಪಡುವ ಈ ನಗರವು ಹಿಂದೆ ಹಬ್ಬಲಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು ಹಬ್ಬಲಿ ಎಂದರೆ "ಹೂವಿನ ಬಳ್ಳಿ" ಎಂದು ಅರ್ಥೈಸುತ್ತದೆ. ಹುಬ್ಬಳ್ಳಿ ಮತ್ತು ಧಾರವಾಡ ಕರ್ನಾಟಕದ ಎರಡು ಅವಳಿ ನಗರಗಳಾಗಿವೆ. ಆದುದರಿಂದ ಅದನ್ನು ಒಟ್ಟಿಗೆ ಕರೆಯಲಾಗುತ್ತದೆ.

ಹುಬ್ಬಳ್ಳಿಯು ಧಾರವಾಡದ ಒಂದು ಭಾಗವಾಗಿತ್ತು ನಂತರದ ದಿನಗಳಲ್ಲಿ ಭಾಗವಾಗಿ ಒಂದು ಸ್ವತಂತ್ರ ಪಟ್ಟಣವಾಯಿತು. ಉನ್ಕಲ್ ಸರೋವರ, ಚಂದ್ರಮೌಳೇಶ್ವರ ದೇವಸ್ಥಾನ, ಇಂದಿರಾ ಗಾಂಧಿ ಗ್ಲಾಸ್ ಹೌಸ್ ಗಾರ್ಡನ್ ಮೊದಲಾದವುಗಳು ಇಲ್ಲಿ ನೋಡಬಹುದಾದಂತಹ ಸ್ಥಳಗಳು.

ಉನ್ಕಲ್ ಸರೋವರವು ಪ್ರಖ್ಯಾತವಾದ ಒಂದು ಪಿಕ್ ನಿಕ್ ತಾಣವಾಗಿದೆ. ಅದರ ಸುತ್ತಲೂ ಸೊಂಪಾದ ತೋಟಗಳಿವೆ. ಇಲ್ಲಿರುವ ಸರೋವರದಲ್ಲಿ ಬೋಟಿಂಗ್ ವಿಹಾರದ ವ್ಯವಸ್ಥೆ ಮಾಡಲಾಗಿದೆ. ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸರೋವರದ ಮಧ್ಯೆ ಸ್ಥಾಪಿಸಲಾಗಿದೆ.

ದಾಂಡೇಲಿಯಲ್ಲಿ ಮಾಡಬಹುದಾದ ಸಾಹಸಿ ಚಟುವಟಿಕೆಗಳು

ದಾಂಡೇಲಿಯಲ್ಲಿ ಮಾಡಬಹುದಾದ ಸಾಹಸಿ ಚಟುವಟಿಕೆಗಳು

PC: sarangib

ದಾಂಡೇಲಿ ತವಾರ್ಗಟ್ಟಿ ಹಳ್ಳಿಯಿಂದ 50 ಕಿ.ಮೀ ದೂರದಲ್ಲಿದೆ.ಈ ಪ್ರದೇಶದಲ್ಲಿ ನೈಸರ್ಗಿಕ ಭೂ ಪ್ರದೇಶವು ಹೆಚ್ಚಾಗಿ ಹರಡಿರುವ ಕಾರಣದಿಂದಾಗಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.ಈ ಪಟ್ಟಣದಾದ್ಯಂತ ಅರಣ್ಯ ಪ್ರದೇಶಗಳ ಪೊದೆಗಳು ಮತ್ತು ಕಾಳಿಯ ನದಿ ಪ್ರದೇಶವನ್ನು ಹೊಂದಿದೆ,

ಅದು ಹಲವಾರು ಜಲ ಕ್ರೀಡೆಗಳ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುತ್ತದೆ. ಇಲ್ಲಿಯ ಕೆಲವು ಸ್ಥಳೀಯ ಸಂಸ್ಥೆಗಳು ಸಾಹಸಿ ಚಟುವಟಿಕೆಗಳಾದ ಜಲ ಕ್ರೀಡೆಗಳು, ಪಕ್ಷಿಗಳ ವೀಕ್ಷಣೆಯ ಜೊತೆಗೆ ಕ್ಯಾಂಪಿಂಗ್ ವ್ಯವಸ್ಥೆಯನ್ನು ಆಯ್ದ ಪ್ಯಾಕೇಜ್ ಗಳ ಮೂಲಕ ಮಾಡಿಕೊಡುತ್ತವೆ.

ಕಾಳಿ ನದಿಯ ಮೇಲೆ ಬಿಳಿ ನೀರಿನ ರಾಫ್ಟಿಂಗ್ ಜನಪ್ರಿಯ ಕ್ರೀಡೆಯಾಗಿದ್ದು, ನೀರಿನ ಪ್ರವಾಹಗಳು ಅಧಿಕವಾಗಿದ್ದರೆ ಮಾತ್ರ ಇದು ನಡೆಯುತ್ತದೆ.ಅಕ್ಟೋಬರ್ ನಿಂದ ಮಾರ್ಚ್ ವರೆಗೆ ನೀರಿನಲ್ಲಿ ಹೆಚ್ಚಿನ ಪ್ರವಾಹಗಳನ್ನು ನಿರೀಕ್ಷಿಸ ಬಹುದಾದಂತಹ ತಿಂಗಳುಗಳು. ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ವರ್ಷದ ಯಾವುದೇ ಸಮಯದಲ್ಲಿ ಲಭ್ಯವಿರುವ ಎರಡು ಚಟುವಟಿಕೆಗಳಾಗಿವೆ.

ಭಗವಾನ್ ಮಹಾವೀರ್ ಅಭಯಾರಣ್ಯ ಮತ್ತು ಮೊಲೆಮ್ ನ್ಯಾಷನಲ್ ಪಾರ್ಕ್

ಭಗವಾನ್ ಮಹಾವೀರ್ ಅಭಯಾರಣ್ಯ ಮತ್ತು ಮೊಲೆಮ್ ನ್ಯಾಷನಲ್ ಪಾರ್ಕ್

PC: Shefali Kumar

ಭಗವಾನ್ ಮಹಾವೀರ್ ಅಭಯಾರಣ್ಯದ ಒಳಗಡೆ ದೂದ್ ಸಾಗರ್ ಜಲಪಾತವಿದೆ. ಆದ್ದರಿಂದ ನೀವು ದೂದ್ ಸಾಗರ್ ತಲುಪುವ ಮೊದಲು , ನೀವು ಈ ಅಭಯಾರಣ್ಯವನ್ನು ನೋಡುವ ಅವಕಾಶವನ್ನು ಪಡೆಯಬಹುದು.ಇದು ಬಾರ್ಕಿಂಗ್ ಜಿಂಕೆ, ಹಾರುವ ಅಳಿಲು, ಸ್ಲೆಂಡರ್ ಲೋರಿಸ್ ಮೊದಲಾದ ಹಲವು ಜಾತಿಗಳ ಪ್ರಾಣಿಗಳಿಗೆ ನೆಲೆಯಾಗಿದೆ.

ಈ ಪಕ್ಷಿಧಾಮವು ರೂಬಿ-ಥ್ರೋಟೆಡ್ ಹಳದಿ ಬುಲ್ಬುಲ್, ಮೂರು-ಬೆರಳಿನ ಕಿಂಫಿಷರ್, ಎಮೆರಾಲ್ಡ್ ಡೋವ್, ಗೋಲ್ಡನ್ ಒರಿಯೊಲ್ ಮತ್ತು ಇನ್ನೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಹೊಂದಿದೆ. ಇವೆಲ್ಲಾ ಸೇರಿ ಪ್ರಕೃತಿಯ ಮಡಿಲಲ್ಲಿ ಕಳೆದು ಹೋಗಲು ಇಚ್ಚಿಸುವವರಿಗೆ ಸ್ವರ್ಗವನ್ನು ಸೃಷ್ಟಿಸುತ್ತದೆ.

ದೂಧ್ ಸಾಗರ್ ನಲ್ಲಿ ಟ್ರೆಕಿಂಗ್ ಮತ್ತು ಕ್ಯಾಂಪಿಂಗ್

ದೂಧ್ ಸಾಗರ್ ನಲ್ಲಿ ಟ್ರೆಕಿಂಗ್ ಮತ್ತು ಕ್ಯಾಂಪಿಂಗ್

PC: editor CrazyYatra

ಸಾಮಾನ್ಯವಾಗಿ 14 ಕಿ.ಮೀ ದೂರದಲ್ಲಿರುವ ಕ್ಯಾಸಲ್ ರಾಕ್ ಹಳ್ಳಿಯಿಂದ ದೂಧ್ ಸಾಗರ್ ಗೆ ಚಾರಣ ಮಾಡಬೇಕು. ಇಡೀ ಚಾರಣದ ಅವಧಿಯು ಸುಮಾರು 6-7 ತಾಸು ಹಿಡಿಯುವುದರಿಂದ ಬೆಳಗ್ಗೆ ಬೇಗ ಟಕ್ಕಿಂಗ್ ಪ್ರಾರಂಭಿಸುವುದು ಉತ್ತಮ. ಒಮ್ಮೆ ನೀವು ಜಲಪಾತಗಳ ಉತ್ತುಂಗವನ್ನು ತಲುಪಿದರೆ, ರಾತ್ರಿಯಲ್ಲಿ ಅಲ್ಲಿಯೇ ಡೇರೆ ಹಾಕಲು ನೀವು ತಯಾರಾಗಬಹುದು.ಜಲಪಾತದ ಬಳಿ ಕ್ಯಾಂಪ್ಫೈರ್ ಮಾಡಿ ನಿಮ್ಮ ಜೀವಮಾನದ ಅಮೂಲ್ಯವಾದ ಅನುಭವವನ್ನು ಪಡೆಯಬಹುದು!

ದೂದ್ ಸಾಗರದಲ್ಲಿ ಟ್ರೆಕ್ಕಿಂಗ್ ಮತ್ತು ಕ್ಯಾಂಪಿಂಗಾಗಿ ಲಭ್ಯವಿರುವ ಅನೇಕ ಸ್ಥಳೀಯ ಪ್ಯಾಕೇಜ್ ಗಳ ಸೌಲಭ್ಯವನ್ನು ನೀವು ಪಡೆಯಬಹುದು.ಮಲಗುವ ಚೀಲಗಳು, ಡೇರೆಗಳು ಮುಂತಾದ ಟ್ರೆಕ್ ಮತ್ತು ಶಿಬಿರಕ್ಕೆ ಅಗತ್ಯವಿರುವ ಎಲ್ಲವನ್ನೂ ಈ ಪ್ಯಾಕೇಜ್ ಗಳು ಒದಗಿಸುತ್ತವೆ.

ನೀವು ಟ್ರಕ್ಕಿಂಗ್ ಮಾಡುವವರಲ್ಲದ್ದಿದ್ದಲ್ಲಿ ಜೀಪ್ ಸಫಾರಿಗಳ ಸೌಲಭ್ಯಗಳೂ ಇಲ್ಲಿವೆ. ಸಫಾರಿಯು ಕೊಲ್ಲೆಮ್ ನಿಂದ ಪ್ರಾರಂಭವಾಗುತ್ತದೆ. ಈ ಒಂದು ತಾಸಿನ ಪ್ರಯಾಣವು ನಿಮ್ಮನ್ನು ಭಗವಾನ್ ಮಹಾವೀರ ವನ್ಯಧಾಮದ ಮೂಲಕ ಕೊಂಡೊಯ್ಯುತ್ತದೆ ಇಲ್ಲಿ ನೀವು ವನ್ಯ ಜೀವಿಗಳ ವೀಕ್ಷಣೆ ಮಾಡಬಹುದು.

Please Wait while comments are loading...