» »ದೆಹಲಿಯ ರಕ್ತಸಿಕ್ತವಾದ ದ್ವಾರವಾದ ಖೂನೀ ದರ್ವಾಜಕ್ಕೆ ಎಂದಾದರೂ ಭೇಟಿ ಕೊಟ್ಟಿರುವಿರಾ?

ದೆಹಲಿಯ ರಕ್ತಸಿಕ್ತವಾದ ದ್ವಾರವಾದ ಖೂನೀ ದರ್ವಾಜಕ್ಕೆ ಎಂದಾದರೂ ಭೇಟಿ ಕೊಟ್ಟಿರುವಿರಾ?

Posted By: Manjula Balaraj Tantry

ಎಂದಾದರೂ ವಿಚಿತ್ರ ಹೆಸರಿರುವ ಮತ್ತು ವಿಚಿತ್ರ ಜಾಗಕ್ಕೆ ಭೇಟಿ ಕೊಟ್ಟಿರುವಿರಾ? ಹಾಗಿದ್ದಲ್ಲಿ ಇಲ್ಲಿದೆ ಖೂನೀ ದರ್ವಾಜಾ , ದೆಹಲಿಯ ರಕ್ತಸಿಕ್ತವಾದ ದ್ವಾರ ಇದು ಇದರ ಪ್ರೇತಕಳೆಯ ನೋಟ ಮತ್ತು ವಿಲಕ್ಷಣ ದಂತಕತೆಗೆ ಹೆಸರುವಾಸಿಯಾಗಿದೆ. ನೀವು ಸವಾಲುಗಳನ್ನು ಎದುರಿಸುವ ಎದೆಗಾರಿಕೆ ಇರುವವರಾಗಿದ್ದಲ್ಲಿ ಈ ಗೊಂದಲಗಳನ್ನೊಳಗೊಂಡ ಸ್ಥಳವು ನಿಮಗಾಗಿಯೇ ಆಗಿದೆ.

ಭಾರತವು ಇತಿಹಾಸ ಮತ್ತು ರಹಸ್ಯಗಳನ್ನೊಳಗೊಂಡ ಭೂಮಿಯಾಗಿದೆ. ಒಂದು ಕಡೆ ನೀವು ಅನೇಕ ದಂತಕಥೆಗಳು ಆ ಸ್ಥಳದ ವೈಭವದ ಹಾಗೂ ಹಿಂದಿನ ಪುರಾಣಗಳ ಬಗ್ಗೆ ಹೇಳಿದರೆ ಇನ್ನೊಂದು ಕಡೆ ಅದೇ ಸ್ಥಳದ ಮಹತ್ವವನ್ನು ಪ್ರಶ್ನಿಸುವ ಹಲವಾರು ಪುರಾಣ ಮತ್ತು ರಹಸ್ಯಗಳನ್ನು ಕಾಣಬಹುದಾಗಿದೆ. ಭಾರತದಲ್ಲಿನ ಪ್ರತಿಯೊಂದು ಸ್ಥಳವೂ ಇತಿಹಾಸ ಮತ್ತು ನಿಗೂಢತೆಯ ಈ ದುರಂತಕ್ಕೆ ಬಲಿಪಶುವಾದುದನ್ನು ಕಾಣಬಹುದಾಗಿದೆ.

ಅಂತಹ ಒಂದು ಸ್ಥಳಗಳಲ್ಲಿ ಖೂನೀ ದರ್ವಾಜಾವೂ ಒಂದು, ಅಂದರೆ ರಕ್ತಸಿಕ್ತವಾದ ದ್ವಾರವೆಂದು ಅರ್ಥೈಸುತ್ತದೆ. ಕಠಿಣವಾದ ಕಾಲದಿಂದ ಇಂದಿನ ಆಧುನಿಕಯುಗದವರೆಗೂ ಈ ಸ್ಥಳವು ತನ್ನ ಸುತ್ತಮುತ್ತಲ ಮತ್ತು ಅದರ ಸುತ್ತಲೂ ನಡೆಯುತ್ತಿರುವ ಎಲ್ಲವನ್ನೂ ನೋಡಿದೆ. ಆದುದರಿಂದ ಈ ಖೂನೀ ದರ್ವಾಜದ ಕಡೆಗೆ ಒಂದು ಪ್ರವಾಸ ಯೋಜನೆ ಮಾಡಿ ಅದರ ನಿಜವಾದ ಕಥೆಯನ್ನು ಏಕೆ ತಿಳಿಯಬಾರದು?

ಇದರ ಇತಿಹಾಸದ ಕಡೆಗೆ ಸ್ವಲ್ಪ ನೋಡೋಣ

ಇದರ ಇತಿಹಾಸದ ಕಡೆಗೆ ಸ್ವಲ್ಪ ನೋಡೋಣ

PC- Varun Shiv Kapur

ಮೊಘಲ್ ಸಾಮ್ರಾಜ್ಯದ ಆಳ್ವಿಕೆಯ ಅವಧಿಯಲ್ಲಿ ಶೇರ್‍ ಷಹಾ ಸೂರಿ ಅವರಿಂದ ನಿರ್ಮಿಸಲ್ಪಟ್ಟ ಖೂನೀ ದರ್ವಾಜಾವು ಮೊಘಲ್ ಮತ್ತು ಅಫ್ಗಾನ್ ಶೈಲಿಯಲ್ಲಿ ನಿರ್ಮಿಸಲಾದ ಭಾರತದ ಕೆಲವೇ ಕೆಲವು ದ್ವಾರಗಳಲ್ಲಿ ಒಂದಾಗಿದೆ. ಇದು ಹಲವಾರು ಶತಮಾನಗಳಿಂದಲೂ ಬಲಶಾಲಿಯಾಗಿ ನಿಂತಿದೆ.

ಅಲ್ಲದೆ ಇದರ ಅಸ್ತಿತ್ವವು ಮೊಘಲರ ಮತ್ತು ಬ್ರಿಟಿಷರ ಕಠಿಣ ಅವಧಿಯಿಂದ ಸಂತೋಷಕರ ಯುಗಗಳವರೆಗೆ ಎಲ್ಲವನ್ನೂ ಪ್ರತಿಬಿಂಬಿಸುತ್ತದೆ. ಮೊಘಲ್ ಸಾಮ್ರಾಜ್ಯದ ಮೂವರು ರಾಜಕುಮಾರರನ್ನು ಬ್ರಿಟಿಷ್ ಸೇನೆ ಈ ಕಟ್ಟಡದಲ್ಲಿ ಕೊಂದ ಕಾರಣದಿಂದ ಸಾಮಾನ್ಯ ಜನರು ಈ ಕಟ್ಟಡಕ್ಕೆ ಖೂನೀ ದರ್ವಾಜವೆಂಬ ಹೆಸರಿನಿಂದ ಕರೆಯಲಾರಂಭಿಸಿದರು ಎಂದು ನಂಬಲಾಗುತ್ತದೆ.

ಇಂದು, ಒಂದು ಜಾಗದ ಇತಿಹಾಸವನ್ನು ಅನ್ವೇಷಿಸುವುದನ್ನು ಇಷ್ಟ ಪಡುವ ಜನರಿಗೆ ಇದೊಂದು ಪ್ರಮುಖ ಕೇಂದ್ರವಾಗಿದೆ. ಈ ಕಟ್ಟಡದ ಒಳಗೆ ಒಂದು ಅತ್ಯಾಚಾರದ ಘಟನೆ ನಡೆದ ಕಾರಣದಿಂದಾಗಿ ಜನರಿಗೆ ಇದರೊಳಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೂ ನೀವು ವಿಶೇಷ ಅನುಮತಿಯನ್ನು ಪಡೆದು ಈ ಕಟ್ಟಡಗಳ ಒಳಗೆ ಪ್ರವೇಶಿಸಿ ಇಲ್ಲಿಯ ಮೂಲೆ ಮೂಲೆಯಲ್ಲಿರುವ ಮತ್ತು ಸುತ್ತಲಿರುವ ಇತಿಹಾಸವನ್ನು ಹುಡುಕಬಹುದಾಗಿದೆ.

ಈ ರಕ್ತ ಸಿಕ್ತವಾದ ದ್ವಾರದ ಬಗ್ಗೆ ಇರುವ ದಂತಕಥೆಗಳು

ಈ ರಕ್ತ ಸಿಕ್ತವಾದ ದ್ವಾರದ ಬಗ್ಗೆ ಇರುವ ದಂತಕಥೆಗಳು

PC- Varun Shiv Kapur

ಈ ಆತ್ಮಗಳಿರುವ ಭಯಾನಕ ಸ್ಥಳ ಮತ್ತು ಒಂದು ನಿರ್ದಿಷ್ಟವಾದ ಐತಿಹಾಸಿಕ ಕಟ್ಟಡವಾದ ಇದರ ಸುತ್ತ ಅನೇಕ ಕಥೆಗಳು ಮತ್ತು ದಂತಕಥೆಗಳನ್ನು ಒಳಗೊಂಡಿದೆ. ಮೊಘಲ್ ಸಾಮ್ರಾಜ್ಯದ ಮೂವರು ರಾಜಕುಮಾರರ ಹತ್ಯೆ ಮಾತ್ರವಲ್ಲದೆ ಸಿಂಹಾಸನಕ್ಕಾಗಿ ನಡೆದ ಹೋರಾಟದಲ್ಲಿ ಔರಂಗಜೇಬನು ತನ್ನ ಅಣ್ಣನ ಕೊಂದು ಅವನ ತಲೆಯನ್ನು ಈ ಕಟ್ಟಡದಲ್ಲಿ ತೂಗು ಹಾಕಿದ್ದನು ಎಂದು ಹೇಳಲಾಗುತ್ತದೆ.

ಕೆಲವು ಕಥೆಗಳ ಪ್ರಕಾರ , ಅಕ್ಬರನ ಮಗನಾದ ಜಹಾಂಗೀರನು ಸಿಂಹಾಸನವನ್ನು ವಶಪಡಿಸಿಕೊಂಡ ನಂತರ ತನ್ನ ಜನರಿಗೆ ಹೇಳಿ ಅಕ್ಬರನ ಆಸ್ಥಾನದ ನವರತ್ನಗಳಲ್ಲಿ ಒಬ್ಬರಾಗಿದ್ದ ಅಬ್ದುಲ್ ರಹೀಮ್ ಖಾನ್-ಐ-ಖಾನಾ ಅವರು ಜಹಾಂಗೀರನು ಮೊಘಲ್ ಸಾಮ್ರಾಜ್ಯದ ಅಧಿಪತಿಯಾಗಲು ವಿರೋಧ ವ್ಯಕ್ತ ಪಡಿಸುದುದಕ್ಕಾಗಿ ಅವರ ಮಕ್ಕಳನ್ನು ಕೊಲ್ಲಲು ಆದೇಶಿಸಿದ್ದನು ಎಂದು ಹೇಳಲಾಗುತ್ತದೆ.

ಈ ಜಾಗವು ಭಾರತದ ಸ್ವಾತಂತ್ರಕ್ಕಾಗಿ ಹೋರಾಟದ ಸಂದರ್ಭದಲ್ಲಿ ಅನೇಕ ಹೋರಾಟಗಳು ನಡೆದ ಸ್ಥಳವೂ ಆಗಿದೆ. ಈ ಎಲ್ಲಾ ರಕ್ತದ ಹೊಳೆಯು ಹರಿದ ಕಾರಣದಿಂದಾಗಿ ಈ ಕಟ್ಟಡಕ್ಕೆ ಖೂನೀ ದರ್ವಾಜಾ ಎಂದು ಹೆಸರಿಡಲಾಗಿದೆ.

ಖೂನೀ ದರ್ವಾಜಕ್ಕೆ ನೀವು ಏಕೆ ಭೇಟಿ ನೀಡಬೇಕು

ಖೂನೀ ದರ್ವಾಜಕ್ಕೆ ನೀವು ಏಕೆ ಭೇಟಿ ನೀಡಬೇಕು

ನೀವು ನಿಗೂಡಗಳನ್ನು ಬಿಡಿಸುವಂತಹ ಸವಾಲುಗಳನ್ನು ಇಷ್ಟ ಪಡುವವರಲ್ಲೊಬ್ಬರಾಗಿದ್ದಲ್ಲಿ ಈ ಖೂನೀ ದರ್ವಾಜವು ನಿಮಗೆ ಒಂದು ಸೂಕ್ತವಾದ ಗಮ್ಯಸ್ಥಾನವಾಗಿದೆ. ಮೊಘಲರ ಕಾಲಕ್ಕೆ ಹಿಂದಕ್ಕೆ ಹೋಗಿ ಅವರ ಇತಿಹಾಸ ಮತ್ತು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅನ್ವೇಷಣೆ ನಡೆಸಿದರೆ ಹೇಗಿರಬಹುದು?

ಖೂನೀ ದರ್ವಾಜದ ಪಾಳು ಬಿದ್ದ ಕಟ್ಟಡದ ಆಳದಲ್ಲಿ ಹುದುಗಿರುವ ಎಲ್ಲ ವಿಷಯಗಳನ್ನೂ ನೀವು ಇಲ್ಲಿ ಕಾಣಬಹುದಾಗಿದೆ. ಭಾರತದ ಇತಿಹಾಸದ ಪುಟದಲ್ಲಿ ಹರಡಿರುವ ಈ ರಕ್ತಸಿಕ್ತ ದ್ವಾರದ ರಹಸ್ಯಗಳ ಬಗ್ಗೆ ನೀವು ಪುನ: ತಿಳಿಯಬಯಸಿದಲ್ಲಿ ಈ ಖೂನೀ ದರ್ವಾಜಕ್ಕೆ ಭೇಟಿ ಕೊಡಿ.

ಇಲ್ಲಿಗೆ ತಲುಪುವುದು ಹೇಗೆ

ಇಲ್ಲಿಗೆ ತಲುಪುವುದು ಹೇಗೆ

PC- Varun Shiv Kapur

ಇದು ದೆಹಲಿಯಲ್ಲಿರುವುದರಿಂದ ರಸ್ತೆ ಮೂಲಕ ಸುಲಭವಾಗಿ ಸಂಪರ್ಕಿಸಬಹುದಾಗಿದೆ. ನೀವು ವಾಯುಮಾರ್ಗ ಮೂಲಕ ಪ್ರಯಾಣ ಮಾಡಬೇಕೆಂದಿದ್ದಲ್ಲಿ, ದೆಹಲಿ ವಿಮಾನ ನಿಲ್ದಾಣಕ್ಕೆ ವಿಮಾನ ಮೂಲಕ ಪ್ರಯಾಣ ಮಾಡಿ ನಂತರ ಅಲ್ಲಿಂದ ಬಸ್ಸಿನ ಮೂಲಕ ಖೂನೀ ದರ್ವಾಜಕ್ಕೆ ಹೋಗಬಹುದು. ನೀವು ರೈಲಿನ ಮೂಲಕ ಪ್ರಯಾಣಿಸಲು ಇಚ್ಚಿಸಿದಲ್ಲಿ, ದೆಹಲಿ ರೈಲ್ವೇ ನಿಲ್ದಾಣಕ್ಕೆ ರೈಲು ಮೂಲಕ ಪ್ರಯಾಣಿಸಬಹುದು ಮತ್ತು ಅಲ್ಲಿಂದ ಕ್ಯಾಬ್ ಮೂಲಕ ಖೂನೀ ದರ್ವಾಜ ಕ್ಕೆ ಹೋಗಬಹುದು.