Search
  • Follow NativePlanet
Share
» »ವಾರಣಾಸಿಯಲ್ಲಿನ ಮಹತ್ವಪೂರ್ಣ ದೇವಾಲಯಗಳಿವು

ವಾರಣಾಸಿಯಲ್ಲಿನ ಮಹತ್ವಪೂರ್ಣ ದೇವಾಲಯಗಳಿವು

By Manjula Balaraj Tantry

ಬನಾರಸ್ ಎಂದೂ ಕರೆಯಲ್ಪಡುವ ವಾರಣಾಸಿಯು ಹಿಂದೂ ಧರ್ಮದವರ ಅತ್ಯಂತ ಪವಿತ್ರವಾದ ಸ್ಥಳವಾಗಿದ್ದು, ಸಾವಿರಾರು ವರ್ಷಗಳಿಂದಲೂ ಅಸ್ತಿತ್ವದಲ್ಲಿರುವ ಇದೊಂದು ಧಾರ್ಮಿಕ ಕೇಂದ್ರವಾಗಿದೆ. ಆದುದರಿಂದ ಇದನ್ನು ಜಗತ್ತಿನ ಅತ್ಯಂತ ಪ್ರಾಚೀನ ಕಾಲದಿಂದಲೂ ವಾಸಮಾಡಲ್ಪಡುತ್ತಿದ್ದ ಅತ್ಯಂತ ಪ್ರಾಚೀನ ನಗರವೆಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಹಿಂದೂ, ಜೈನ, ಮತ್ತು ಬೌದ್ದ ಧರ್ಮಗಳು ಪ್ರವರ್ಧಮಾನಕ್ಕೆ ಬಂದಿವೆ. ಇದರ ಗಡಿಯೊಳಗೆ ನೀವು ಅಸಂಖ್ಯಾತ ದೇವಾಲಯಗಳನ್ನು ಕಾಣಬಹುದಾಗಿದೆ

ಸತ್ಯಾಂಶವೇನೆಂದರೆ ನೀವು ವಾರಣಾಸಿಯಲ್ಲಿ ಪ್ರತೀ 50ಮೀಟರ್ ಗಳಷ್ಟು ಅಂತರದಲ್ಲಿಯೂ ದೇವಾಲಯಗಳನ್ನು ನೋಡಬಹುದಾಗಿದೆ. ಗಂಗಾನದಿಯ ಮೇಲೆ ನೆಲೆಸಿರುವ ವಾರಣಾಸಿಯು ಶಿವದೇವರ ವಾಸಸ್ಥಾನವೆಂದು ಹೇಳಲಾಗುತ್ತದೆ ಮತ್ತು ಈ ಸ್ಥಳದಿಂದಲೇ ಇಡೀ ಜಗತ್ತಿನ ನಿರ್ಮಾಣವಾಯಿತು ಎಂದು ನಂಬಲಾಗುತ್ತದೆ. ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವುದಕ್ಕಾಗಿ ಲಕ್ಷಾಂತರ ಹಿಂದೂ ಭಕ್ತರು ಇಲ್ಲಿಗೆ ಪ್ರತೀವರ್ಷ ಬರುತ್ತಾರೆ ಮಾತ್ರವಲ್ಲದೆ ಶಿವದೇವರಿಗೆ ತಮ್ಮ ಪೂಜೆಯನ್ನು ಸಲ್ಲಿಸುತ್ತಾರೆ ಇದರಿಂದಾಗಿ ತಮ್ಮ ಪಾಪಗಳನ್ನು ಕಳೆದುಕೊಂಡು ವಾರಣಾಸಿಯ ಈ ದೈವಿಕ ಮತ್ತು ದೈವ ಭಕ್ತಿ ಇರುವ ಈ ಜಾಗದಲ್ಲಿ ತಮ್ಮ ಮೈ ಮನ್ಸಸ್ಸಿನ ಶುದ್ದೀಕರಣ ಮಾಡಿಕೊಳ್ಳುತ್ತಾರೆ.

ಆದುದರಿಂದ ಈ ಆಧ್ಯಾತ್ಮಿಕ ಪಟ್ಟಣಕ್ಕೆ ಪ್ರವಾಸ ಹೂಡುವ ಬಗ್ಗೆ ಯೋಚನೆ ಮಾಡಿದರೆ ಹೇಗೆ? ಈ ಕೆಳಗಿನ ವಾರಣಾಸಿಯ ಕೆಲವು ಪ್ರಮುಖ ದೇವಾಲಯಗಳು ನೀವು ಭೇಟಿ ಕೊಡಲೇಬೇಕಾದಂತವುಗಳು ಇದಕ್ಕೆ ಭೇಟಿ ಕೊಡದಿದಲ್ಲಿ ನಿಮ್ಮ ಈ ಪವಿತ್ರ ನಗರದ ಭೇಟಿ ಅಪೂರ್ಣವೇ ಸರಿ.

1. ಕಾಶೀ ವಿಶ್ವನಾಥ ದೇವಾಲಯ

1. ಕಾಶೀ ವಿಶ್ವನಾಥ ದೇವಾಲಯ

Ken Wieland

ನಿಸ್ಸಂದೇಹವಾಗಿಯೂ ಭಾರತದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಅತ್ಯಂತ ಪವಿತ್ರವಾದುದು ಕಾಶೀ ವಿಶ್ವನಾಥ ದೇವಾಲಯವಾಗಿದೆ. ಈ ದೇವಾಲಯದ ಜಾಗದಲ್ಲಿ ಶಿವ ದೇವರು ಬೆಳಕಿನ ರೂಪದಲ್ಲಿ ಕಾಣಿಸಿಕೊಂಡರು ನಂಬಲಾಗುತ್ತದೆ. ಆ ನಂತರದಿಂದ ಈ ದೇವಾಲಯವನ್ನು ಜಗತ್ತಿನ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಅತ್ಯಂತ ಪವಿತ್ರವಾದ ಸ್ಥಳವೆಂದು ಪರಿಗಣಿಸಲ್ಪಟ್ಟಿತು ಮತ್ತು ಈ ದೇವಾಲಯವು ಪ್ರತೀ ವರ್ಷ ಲಕ್ಷಾಂತರ ಯಾತ್ರಿಗಳಿಂದ ಭೇಟಿ ನೀಡಲ್ಪಡುತ್ತದೆ.

ಈ ದೇವಾಲಯದ ಮೂಲ ಕಟ್ಟಡವು ಅನೇಕ ಮುಸಲ್ಮಾನ ದಾಳಿಕೋರರಿಂದ ಆ ಕಾಲದಲ್ಲಿ ಈ ಕೆಡವಲ್ಪಟ್ಟಿದುದರಿಂದ, 18ನೇ ಶತಮಾನದಲ್ಲಿ ಹೋಳ್ಕರ್ ಸಾಮ್ರಾಜ್ಯದ ರಾಣಿಯಿಂದ ಈ ಕಟ್ಟಡವು ಪೂರ್ಣಗೊಳಿಸಲ್ಪಟ್ಟಿತು. ಕಾಶೀವಿಶ್ವನಾಥ ದೇವಾಲಯದ ಉಲ್ಲೇಖವು ಅನೇಕ ಪುಸ್ತಕಗಳು, ಪುರಾಣಗಳಲ್ಲಿಯೂ ಇವೆ ಆದುದರಿಂದ ಇಲ್ಲಿ ನೀವು ಮೋಕ್ಷವನ್ನು ಪಡೆಯಬಹುದು ಎಂಬುದು ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಆದುದರಿಂದ ನೀವು ಯಾವುದಾದರು ಪವಿತ್ರ ತಾಣಗಳಿಗೆ ಭೇಟಿ ಕೊಡುವ ಬಗ್ಗೆ ಯೋಚಿಸುತ್ತಿರುವಿರಾದಲ್ಲಿ ಮತ್ತು ಸೌಂದರ್ಯತೆ ಮತ್ತು ಭಕ್ತಿಪೂರ್ವ ಸೆಳವಿನಲ್ಲಿ ಕಳೆದುಹೋಗಬಯಸುವಿರಾ? ಹಾಗಿದ್ದಲ್ಲಿ ಈ ಪವಿತ್ರ ಸ್ಥಳಕ್ಕೆ ಭೇಟಿ ಕೊಡಿ.

2. ಕಾಲ ಭೈರವ ಮಂದಿರ Fæ

2. ಕಾಲ ಭೈರವ ಮಂದಿರ Fæ

ವಾರಣಾಸಿಯಲ್ಲಿರುವ ಅತ್ಯಂತ ಮಹತ್ವವುಳ್ಳ ದೇವಾಲಯಗಳಲ್ಲಿ ಕಾಲಭೈರವ್ ಮಂದಿರ್ ಕೂಡಾ ಒಂದಾಗಿದೆ. ಇದು 17ನೇ ಶತಮಾನದಲ್ಲಿ ನಿರ್ಮಿತವಾಗಿದ್ದು ತದನಂತರದಿಂದ ಅತ್ಯಂತ ಪ್ರಮುಖವಾದ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವುಳ್ಳ ದೇವಾಲಯವೆನಿಸಿದೆ

ಭೈರವ ರೂಪದಲ್ಲಿರುವ ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯವು ಅತ್ಯಂತ ಪ್ರಾಚೀನ ದೇವಾಲಯವಾಗಿದೆ ಇದನ್ನು ವಾರಣಾಸಿಯ ಕೋತ್ವಾಲ್ ಅಂದರೆ ರಕ್ಷಕ ಎಂದು ಕರೆಯಲಾಗುತ್ತದೆ. ಈ ಪ್ರಾಚೀನ ದೇವಾಲಯಕ್ಕೆ ಭೇಟಿ ಕೊಡದೆ ಮತ್ತು ಈ ಭೈರವ ದೇವನಿಗೆ ಗೌರವ ಅಥವಾ ಪೂಜೆಯನ್ನು ಅರ್ಪಿಸದೆ ಯಾರೂ ಗಡಿಯೊಳಗೆ ಉಳಿಯುವಂತಿಲ್ಲ ಎಂದು ನಂಬಲಾಗುತ್ತದೆ.

ಇದೊಂದು ಆಸಕ್ತಿದಾಯಕ ತಾಣವಲ್ಲವೆ? ಆದುದರಿಂದ ನೀವೇನಾದರೂ ಈ ದೇವಾಲಯದ ರಚನೆಯ ಬಗ್ಗೆ ಸ್ಥಳೀಯ ದಂತಕಥೆಗಳನ್ನು ತಿಳಿಯಲು ಕುತೂಹಲವುಳ್ಳವರಾಗಿದ್ದಲ್ಲಿ, ನೀವು ನಿಮ್ಮ ವಸ್ತುಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡು ವಾರಣಾಸಿಯ ಪ್ರವಾಸಕ್ಕೆ ಈ ಕೂಡಲೇ ತಯಾರಾಗಿ

3. ದುರ್ಗಾ ಕುಂಡ್ ಮಂದಿರ

3. ದುರ್ಗಾ ಕುಂಡ್ ಮಂದಿರ

Juan Antonio Segal

ವಾರಣಾಸಿಯ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ದುರ್ಗಾ ಕುಂಡ್ ದೇವಾಲಯವೂ ಒಂದು ಇದು ಇದರ ಶಾಂತಿಯುತ ಪರಿಸರ ಮತ್ತು ರೋಮಾಂಚಕ ಸುತ್ತಮುತ್ತಲಿಗಾಗಿ ಹೆಸರುವಾಸಿಯಾಗಿದೆ. ನೀವು ಭಕ್ತಿಪರವಶತೆ ಮತ್ತು ಅತ್ಯಂತ ಶಾಂತಿಯುತ ಸ್ಥಳವನ್ನು ಭೇಟಿಕೊಡಲು ಬಯಸಿದರೆ ವಾರಣಾಸಿಯ ದುರ್ಗಾ ಕುಂಡ್ ನಿಮಗೆ ಸೂಕ್ತವಾದಂತಹ ಸ್ಥಳವಾಗಿದೆ. ದುರ್ಗಾದೇವಿಗೆ ಅರ್ಪಿತವಾಗಿರುವ ಈ ಸಮ್ಮೋಹನಗೊಳಿಸುವಂತಹ ದೇವಾಲಯವನ್ನು 18ನೇ ಶತಮಾನದಲ್ಲಿ ಬಂಗಾಳದ ರಾಣಿಯವರಿಂದ ನಿರ್ಮಿಸಲ್ಪಟ್ಟಿತು. ದುರ್ಗಾ ಕೊಳವನ್ನು ದೇವಾಲಯದ ಪಕ್ಕದಲ್ಲಿರುವ ದುರ್ಗಾ ಕೊಳವು ತಂಪಾದ ಮತ್ತು ಆಹ್ಲಾದಕರ ವಾತಾವರಣವನ್ನು ನಿರ್ಮಿಸುತ್ತದೆ. ಹೀಗೆ ಸಾವಿರಾರು ಹಿಂದೂ ಭಕ್ತರನ್ನು ಮತ್ತು ಪ್ರವಾಸಿಗರನ್ನು ಪ್ರತೀ ವರ್ಷ ಆಕರ್ಷಿಸುತ್ತದೆ. ಇಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ದುರ್ಗಾಪೂಜೆ ಮತ್ತು ನವರಾತ್ರಿಯೂ ಸೇರಿದೆ.

4. ಸಂಕಟ ಮೋಚನ ಹನುಮಾನ್ ದೇವಾಲಯ

4. ಸಂಕಟ ಮೋಚನ ಹನುಮಾನ್ ದೇವಾಲಯ

Abhi9211

ಸಂಕಟ ಮೋಚನ ಹನುಮಾನ್ ದೇವಾಲಯವು ಪ್ರಾಚೀನ ದೇವಾಲಯವಾಗಿದ್ದು ಇದು ಭಗವಾನ್ ಶಿವನ ರೂಪ ಮತ್ತು ರಾಮದೇವರ ಪರಮಭಕ್ತ ಹನುಮಂತ ದೇವರಿಗೆ ಸಮರ್ಪಿತವಾದುದಾಗಿದೆ. ಈ ದೇವಾಲಯವನ್ನು ಸಂತ ತುಳಸೀ ದಾಸರಿಂದ ಅಸ್ಸಿ ನದೀ ದಡದಲ್ಲಿ 16ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿತು. ಆದರೂ ಇದರ ರಚನೆಯ ಬಗ್ಗೆ ಇಂದಿಗೂ ಯಾವುದೇ ಬಲವಾದ ಪುರಾವೆಗಳು ಇನ್ನೂ ದೊರೆತಿಲ್ಲ.

ಈ ದೇವಾಲಯಕ್ಕೆ ಸಾವಿರಾರು ರಾಮದೇವರ ಹಾಗೂ ಹನುಮಂತ ದೇವರ ಭಕ್ತರು ಪ್ರತೀ ಮಂಗಳವಾರ ಮತ್ತು ಶನಿವಾರ ಭೇಟಿಕೊಡುತ್ತಾರೆ . ಆದುದರಿಂದ ರಾಮಚರಿತ ಮಾನಸದಂತಹ ಪವಿತ್ರ ಗ್ರಂಥ ಬರೆದ ತುಳಸೀದಾಸರು ತಮ್ಮ ಹೆಚ್ಚಿನ ಸಮಯವನ್ನು ಕಳೆದ ಈ ಪ್ರಾಚೀನ ದೇವಾಲಯಕ್ಕೆ ಭೇಟಿ ಕೊಟ್ಟರೆ ಹೇಗಿರಬಹುದು ?

5. ಅನ್ನಪೂರ್ಣ ದೇವಿ ಮಂದಿರ

5. ಅನ್ನಪೂರ್ಣ ದೇವಿ ಮಂದಿರ

FlickreviewR

ಪಾರ್ವತಿ ದೇವಿಯ ಅವತಾರವಾದ ಆಹಾರದ ದೇವಿಯೆಂದು ಕರೆಯಲ್ಪಡುವ ದೇವಿ ಅನ್ನಪೂರ್ಣೆಗೆ ಈ ದೇವಾಲಯವು ಸಮರ್ಪಿತವಾದುದಾಗಿದೆ. ಮರಾಠ ಸಾಮ್ರಾಜ್ಯದ ಸೇನಾಪತಿಗಳಲ್ಲೊಬ್ಬರಾಗಿದ್ದ ಮಾರಾಠ ಪೇಶ್ವೆ ಬಾಜಿರಾವ್ ಅವರಿಂದ 18ನೇ ಶತಮಾನದಲ್ಲಿ ನಿರ್ಮಿತವಾಯಿತು. ಈ ದೇವಾಲಯಕ್ಕೆ ಬಂದು ನಿರ್ಮಲ ಮನಸ್ಸಿನಿಂದ ಹಾಗೂ ಭಕ್ತಿಯಿಂದ ದೇವಿಯನ್ನು ಪೂಜಿಸಿ ಆಶೀರ್ವಾದ ಪಡೆಯುವ ಯಾವುದೇ ಭಕ್ತರಿಗೂ ತಮ್ಮ ಜೀವಾವಧಿಯಲ್ಲಿ ಆಹಾರಕ್ಕೆ ಯಾವುದೇ ಕೊರತೆ ಉಂಟಾಗುವುದಿಲ್ಲವೆಂಬುದು ಈ ದೇವಾಲಯದ ಧಾರ್ಮಿಕ ನಂಬಿಕೆ.

ಆದುದರಿಂದ ಈ ದೇವಾಲಯವು ದೇಶದ ಎಲ್ಲಾ ರಾಜ್ಯದ ಸಾವಿರಾರು ಹಿಂದೂ ಯಾತ್ರಿಗಳಿಂದ ಭೇಟಿಕೊಡಲ್ಪಡುತ್ತದೆ. ವಾರಣಾಸಿಯ ಪ್ರಮುಖ ದೇವಾಲಯಗಳಲ್ಲೊಂದಾಗಿರುವ ಈ ದೇವಾಲಯವು ಪ್ರತೀವರ್ಷವೂ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಈ ದೇವಾಲಯವು ನಾಗರ ವಾಸ್ತುಶಿಲ್ಪ ಶೈಲಿಯಲ್ಲಿದ್ದು ಇದರ ರಚನೆಯು ನಿಜವಾಗಿಯೂ ಶ್ಲಾಘನೀಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more