Search
  • Follow NativePlanet
Share
» »ಭಾರತೀಯ ಭೂಸೇನೆ ನಡೆಸುತ್ತಿರುವ ಇಎಮ್‌ಇ ಮಂದಿರವಿದು

ಭಾರತೀಯ ಭೂಸೇನೆ ನಡೆಸುತ್ತಿರುವ ಇಎಮ್‌ಇ ಮಂದಿರವಿದು

ಸುಮಾರು 2000 ವರ್ಷಗಳಿಗಿಂತಲೂ ಹಳೆಯ ನಗರವಾಗಿರುವ ವಡೋದರ, ಗುಜರಾತ್‌ನ ಒಂದು ಪ್ರಮುಖ ನಗರವಾಗಿದೆ. ಈ ನಗರವು ವಿಶ್ವಾಮಿತ್ರ ನದಿಯ ತೀರದಲ್ಲಿದೆ. ಈ ನದಿಗೆ ಮಹರ್ಷಿ ವಿಶ್ವಮಿತ್ರದ ಹೆಸರನ್ನು ಇಡಲಾಗಿದೆ. ಇದೊಂದು ಐತಿಹಾಸಿಕ ಸ್ಥಳವಾಗಿದೆ. ಮಧ್ಯಕಾಲಿನ ಸಂದರ್ಭದಲ್ಲಿ ಇದೊಂದು ಔದ್ಯೋಗಿಕ ಕೇಂದ್ರವಾಗಿತ್ತು.

ಈ ಪ್ರಾಚೀನ ನಗರವು 1297ರವರೆಗೆ ಹಿಂದೂ ರಾಜರಿಂದ ಆಳಲ್ಪಡುತ್ತಿತ್ತು. ಆರಂಭದಲ್ಲಿ ಗುಪ್ತ ಸಾಮ್ರಾಜ್ಯದವರು ಆಳ್ವಿಕೆ ನಡೆಸಿದರು ಆ ನಂತರ ಚಾಲುಕ್ಯ ಸಾಮ್ರಾಜ್ಯದವರು ಆಳ್ವಿಕೆ ನಡೆಸಿದರು. ಹಿಂದೂ ರಾಜರುಗಳನ್ನು ಹೊರತುಪಡಿಸಿ ಇಲ್ಲಿ ಅನೇಕ ಮುಸ್ಲೀಂ ರಾಜರುಗಳು ಆಳ್ವಿಕೆ ನಡೆಸಿದ್ದಾರೆ.

ಪ್ರವಾದ ದೃಷ್ಠಿಯಲ್ಲಿ ಈ ನಗರವು ಬಹಳ ಮುಖ್ಯವಾಗಿದೆ. ಇಲ್ಲಿ ಪ್ರಾಕೃತಿಕ ಸ್ಥಳಗಳನ್ನು ಹೊರತುಪಡಿಸಿ ಅನೇಕ ಧಾರ್ಮಿಕ ಸ್ಥಳಗಳನ್ನೂ ಇಲ್ಲಿ ಕಾಣಬಹುದು. ಇಂದು ನಾವು ವಡೋದರದ ಒಂದು ಪ್ರಸಿದ್ಧ ಶಿವ ಮಂದಿರದ ಬಗ್ಗೆ ತಿಳಿಸಲಿದ್ದೇವೆ.

ನಿಮ್ಮ ಆಸೆ ಈಡೇರಿದ್ರೆ ಇಲ್ಲಿನ ಮರಕ್ಕೆ ವಾಚ್‌ ಕಟ್ಟಬೇಕಂತೆನಿಮ್ಮ ಆಸೆ ಈಡೇರಿದ್ರೆ ಇಲ್ಲಿನ ಮರಕ್ಕೆ ವಾಚ್‌ ಕಟ್ಟಬೇಕಂತೆ

 ಶಿವನ ಇಎಮ್‌ಇ ಮಂದಿರ

ಶಿವನ ಇಎಮ್‌ಇ ಮಂದಿರ

ವಡೋದರದ ಈ ಅದ್ಭುತ ಶಿವಲಿಂಗದ ಹೆಸರು ಇಎಮ್‌ಐ ಮಂದಿರ. ಇದನ್ನು ದಕ್ಷಿಣ ಮೂರ್ತಿ ಮಂದಿರ ಎಂದೂ ಕರೆಯಲಾಗುತ್ತದೆ. ಈ ಮಂದಿರವನ್ನು ಭಾರತೀಯ ಸೇನೆಯ ಎಲೆಕ್ಟ್ರೀಕಲ್ ಹಾಗು ಮೆಕ್ಯಾನಿಕಲ್ ಇಂಜಿನಿಯರ್‌ ಮೂಲಕ ನಿರ್ಮಿಸಲಾಗಿದೆ. ಆಧುನಿಕ ವಾಸ್ತುಕಲೆಯಿಂದ ನಿರ್ಮಿಸಲಾಗಿರುವ ಈ ಮಂದಿರವು ಶಿವನ ದಕ್ಷಿಣಮೂರ್ತಿ ರೂಪಕ್ಕೆ ಸಮರ್ಪಿತವಾಗಿದೆ. ಇದು ಎಲ್ಲಾ ಧರ್ಮದ ಪವಿತ್ರ ಸ್ಥಳವಾಗಿದೆ. ಇಲ್ಲಿ ಪ್ರತಿಯೊಂದು ಧರ್ಮದ ಮೂರ್ತಿಯನ್ನು ಅಳವಡಿಸಲಾಗಿದೆ. ಯಾಕೆಂದರೆ ಭಾರತೀಯ ಸೇನೆಯಲ್ಲಿ ಪ್ರತಿಯೊಂದು ಧರ್ಮಕ್ಕೂ ಒಂದೊಂದು ಪೂಜಾ ಸ್ಥಳಗಳಿಲ್ಲ.

 106ಪ್ರಾಚೀನ ಮೂರ್ತಿಗಳ ಸಂಗ್ರಹವಿದೆ

106ಪ್ರಾಚೀನ ಮೂರ್ತಿಗಳ ಸಂಗ್ರಹವಿದೆ

ಅಲ್ಯೂಮಿನಿಯಂನಿಂದ ಮಾಡಲಾಗಿರುವ ಈ ಮಂದಿರವು ಸುಂದರವಾದ ಗಾರ್ಡನ್‌ನಿಂದ ಕೂಡಿದೆ. ಅಲ್ಲಿ 6 ರಿಂದ 16ನೇ ಶತಮಾನಕ್ಕೆ ಸಂಬಂಧಿಸಿದ 106ಪ್ರಾಚೀನ ಮೂರ್ತಿಗಳ ಸಂಗ್ರಹವಿದೆ. ಇಲ್ಲಿ ಭಕ್ತರು ಮಂದಿರದ ದರ್ಶನಕ್ಕೆ ಆಗಮಿಸುತ್ತಾರೆ. ಆದರೆ ಮಂದಿರದ ಪರಿಸರದಲ್ಲಿ ಫೋಟೋಗ್ರಫಿ ನಿಷೇಧಿಸಲಾಗಿದೆ.

ಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿ

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ನೀವು ಈ ಇಎಮ್‌ಇ ಮಂದಿರಕ್ಕೆ ಭೇಟಿ ನೀಡಬೇಕಾದರೆ ಬೇಸಿಗೆಯಲ್ಲಿ ಭೇಟಿ ನೀಡುವುದು ಉತ್ತಮ. ನೀವು ಸಂಪೂರ್ಣವಾಗಿ ಆರಾಮವಾಗಿ ಮಂದಿರದ ದರ್ಶನ ಮಾಡಬೇಕೆಂದಿದ್ದರೆ ಬೇಸಿಗೆಯನ್ನು ಹೊರತುಪಡಿಸಿ ಬೇರೆ ಯಾವ ಸಮಯದಲ್ಲಾದರೂ ಹೋಗಬಹುದು. ಡಿಸೆಂಬರ್‌ನಿಂದ ಫೆಬ್ರವರಿ ತಿಂಗಳಲ್ಲಿ ಹೋಗಬಹುದು. ಬೆಳಗ್ಗೆ 6.30 ರಿಂದ ರಾತ್ರಿ 8.30 ರವರೆಗೆ ಭಕ್ತರಿಗೆ ಭೇಟಿಗೆ ಅವಕಾಶವಿದೆ.

 ಇಎಮ್‌ಇ ಮಂದಿರಕ್ಕೆ ಯಾಕೆ ಭೇಟಿ ನೀಡಬೇಕು?

ಇಎಮ್‌ಇ ಮಂದಿರಕ್ಕೆ ಯಾಕೆ ಭೇಟಿ ನೀಡಬೇಕು?

ಇಎಮ್‌ಇ ಮಂದಿರವು ಶಿವನಿಗೆ ಸಮರ್ಪಿತವಾದ ಒಂದು ಅದ್ಭುತ ಮಂದಿರವಾಗಿದೆ. ಭಾರತೀಯ ಸೇನೆ ನಿರ್ಮಿಸಿದಂತಹ ಮಂದಿರ ಇದಾಗಿದೆ. ಈ ಮಂದಿರವು ಹಿಂದೂ ಮಾತ್ರವಲ್ಲ ಅನ್ಯ ಧರ್ಮೀಯರ ಪ್ರತೀಕವೂ ಆಗಿದೆ. ಈ ಮಂದಿರದ ಗುಂಬಜ್ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಈ ಮಂದಿರವು ಗುಜರಾತ್‌ನ ವಡೋದರಾದಲ್ಲಿದೆ. ವಿಮಾನದ ಮೂಲಕ ಬರುವುದಾದರೆ ನೀವು ವಡೋದರಾ ವಿಮಾನ ನಿಲ್ದಾಣದ ಮೂಲಕ ಬರಬಹುದು. ರೈಲಿನಲ್ಲಾದರೆ ವಡೋದರಾ ರೈಲ್ವೇ ಸ್ಟೇಶನ್‌ ಮೂಲಕ ನಂತರ ಕ್ಯಾಬ್‌ನಲ್ಲಿ ಇಎಮ್‌ಐ ಮಂದಿರಕ್ಕೆ ತಲುಪಬಹುದು. ಬಸ್‌ನಲ್ಲಾದರೆ ವಡೋದರಾಕ್ಕೆ ಬೇಕಾದಷ್ಟು ಬಸ್‌ಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X