Search
  • Follow NativePlanet
Share
» »ಬೆಳಗ್ಗಿನ ಜಾವ ಹೊರಟ್ರೆ ರಾತ್ರಿ ಮನೆ ಸೇರಬಹುದಾದಂತಹ ತಾಣಗಳಿವು

ಬೆಳಗ್ಗಿನ ಜಾವ ಹೊರಟ್ರೆ ರಾತ್ರಿ ಮನೆ ಸೇರಬಹುದಾದಂತಹ ತಾಣಗಳಿವು

ಸಾಮಾನ್ಯವಾಗಿ ಈಗಿನ ಜನರಿಗಂತೂ ತಮ್ಮ ಕೆಲಸದಿಂದ ಬಿಡುವೇ ಸಿಗೋದಿಲ್ಲ. ಸಿಗೋದು ಬರೀ ವಿಕೇಂಡ್ ಅಷ್ಟೆ. ಆ ವೀಕೆಂಡ್‌ನಲ್ಲಿ ಹೋಗೋದಾದ್ರು ಎಲ್ಲಿಗೆ. ಫ್ಯಾಮಿಲಿ ಜೊತೆ ಕಾಲ ಕಳೆಯೋದರಲ್ಲೇ ಮುಗಿದೋಗುತ್ತೆ ವೀಕೆಂಡ್. ಇನ್ನು ಹೊರಗಡೆ ಸುತ್ತಾಡೋಕ್ಕೆ ಹೋಗೊಕ್ಕೆ ಆಗೋತ್ತಾ ನೀವೇ ಹೇಳಿ.

ಈಗ ಅಮರನಾಥ ಯಾತ್ರೆ ಇನ್ನೂ ಸುಲಭ, ಹೋಗೋಕ್ಕೂ ಬರೋಕ್ಕೂ ಹೆಲಿಕಾಫ್ಟರ್ ಪ್ಯಾಕೇಜ್ಈಗ ಅಮರನಾಥ ಯಾತ್ರೆ ಇನ್ನೂ ಸುಲಭ, ಹೋಗೋಕ್ಕೂ ಬರೋಕ್ಕೂ ಹೆಲಿಕಾಫ್ಟರ್ ಪ್ಯಾಕೇಜ್

ನಿಮಗೆ ವೀಕೇಂಡ್‌ನಲ್ಲಿ ಫ್ರೆಂಡ್ಸ್ ಜೊತೆ ಅಥವಾ ಫ್ಯಾಮಿಲಿ ಜೊತೆ ಸುತ್ತಾಡಬೇಕೆಂದಿದ್ದರೆ ಅಂತಹ ಇಂಟ್ರಸ್ಟಿಂಗ್ ಸ್ಥಳಗಳು ಇಲ್ಲಿವೆ. ಈ ಸ್ಥಳಗಳಿಗೆ ಹೋಗಬೇಕಾದರೆ ನೀವು ಬೆಳ್ಳಂಬೆಳಗ್ಗೆ ಹೊರಡಬೇಕು. ಹಾಗಾದ್ರೆ ಮಾತ್ರ ರಾತ್ರಿಯೊಳಗೆ ಮನೆ ಸೇರಬಹುದು. ಹಾಗಾದ್ರೆ ಬನ್ನಿ ಅಂತಹ ತಾಣಗಳು ಯಾವುವು ಅನ್ನೋದನ್ನು ನೋಡೋಣ.

ನಂದಿ ಬೆಟ್ಟ

ನಂದಿ ಬೆಟ್ಟ

PC: Viswasagar27

ನಂದಿ ಬೆಟ್ಟಕ್ಕೆ ಪರಿಚಯವಿಲ್ಲ. ಇದು ಬೆಂಗಳೂರಿನ ಜನರಿಗೆ ಹೆಚ್ಚು ಜನಪ್ರಿಯ ತಾಣವಾಗಿದೆ. ನಗರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟಗಳು ಬೆಳಗ್ಗೆ6 ಗಂಟೆಗೆ ಪ್ರವಾಸಿಗರಿಗೆ ತೆರೆದಿರುತ್ತವೆ. ವಾರಾಂತ್ಯದಲ್ಲಿ ಜನಜಂಗುಳಿಯಿಂದ ತುಂಬಿರುತ್ತವೆ. ಆದರೆ ಒಂದು ವಾರದ ದಿನದಲ್ಲಿ, ನಿಮಗಾಗಿ ಸಂಪೂರ್ಣ ಬೆಟ್ಟದ ತುದಿಯನ್ನು ನೀವು ಹೊಂದಬಹುದು.

ಹನಿಮೂನ್‌ಗೆ ಹೋಗುವವರಿಗೆ ಇಲ್ಲಿದೆ ಹಾಫ್‌ ಮೂನ್ ಬೀಚ್ಹನಿಮೂನ್‌ಗೆ ಹೋಗುವವರಿಗೆ ಇಲ್ಲಿದೆ ಹಾಫ್‌ ಮೂನ್ ಬೀಚ್

ನಂದಿ ಬೆಟ್ಟಗಳು ಸುಂದರವಾದ ವೀಕ್ಷಣಾ ಸ್ಥಳವಾಗಿದ್ದು ಇಲ್ಲಿ ಒಂದು ದೇವಾಲಯವಿದೆ.ಇದನ್ನು ಟಿಪ್ಪು ಡ್ರಾಪ್ ಎಂದು ಕರೆಯಲಾಗುತ್ತದೆ. ಟಿಪ್ಪುವಿನ ಕಾಲದಲ್ಲಿ ರಾಜದ್ರೋಹ ಮಾಡಿದವರನ್ನು ಈ ಬೆಟ್ಟದ ಮೇಲಿನಿಂದ ಕೆಳಕ್ಕೆ ಎಸೆಯಲಾಗುತ್ತಿತ್ತಂತೆ.

ತ್ರಿಮೂರ್ತಿ ದೇವಾಲಯ

ತ್ರಿಮೂರ್ತಿ ದೇವಾಲಯ

PC: youtube

ತ್ರಿಮೂರ್ತಿ ದೇವಾಲಯ ಮತ್ತು ಪಿರಮಿಡ್ ವ್ಯಾಲಿ ಕನಾಕಪುರ ರಸ್ತೆಯಲ್ಲಿರುವ ಎರಡು ಆಕರ್ಷಣೀಯ ಸ್ಥಳಗಳಾಗಿವೆ. ಎಡಭಾಗದಲ್ಲಿರುವ ಆರ್ಟ್ ಆಫ್ ಲಿವಿಂಗ್ ಕ್ಯಾಂಪಸ್‌ನ ಬಳಿಕ ತ್ರಿಮೂರ್ತಿ ದೇವಾಲಯ ಇದೆ. ಇದು ಮೂರು ದೈತ್ಯ ವಿಗ್ರಹಗಳುಳ್ಳ ಒಂದು ಸಣ್ಣ ದೇವಸ್ಥಾನವಾಗಿದ್ದು, ಗಣಪತಿ, ಭಗವಾನ್ ಹನುಮಾನ್ ಮತ್ತು ಕೃಷ್ಣ ಪರಮಾತ್ಮನ ದರ್ಶನ ಪಡೆಯಬಹುದು. ದೇವಾಲಯದ ಆವರಣದಲ್ಲಿರುವ ಸಣ್ಣ ಉದ್ಯಾನವಿದೆ. ಈ ದೇವಾಲಯವನ್ನು ಇತ್ತೀಚೆಗೆ ನಿರ್ಮಿಸಲಾಗಿದ್ದು, ಇದಕ್ಕೆ ಅಷ್ಟೇನು ಐತಿಹಾಸಿಕ ಹಿನ್ನೆಲೆಗಳಿಲ್ಲ.

ಪಿರಮಿಡ್ ವ್ಯಾಲಿ

ಪಿರಮಿಡ್ ವ್ಯಾಲಿ

PC:Pranabandhu Nayak

ಪಿರಮಿಡ್ ವ್ಯಾಲಿ ಕನಕಪುರ ರಸ್ತೆಯ ಅಂತಾರಾಷ್ಟ್ರೀಯ ಧ್ಯಾನ ಕೇಂದ್ರವಾಗಿದೆ. ಈ ಸ್ಥಳದ ಮುಖ್ಯ ಆಕರ್ಷಣೆಯೆಂದರೆ ಮೈತ್ರೇಯ ಅಥವಾ ಬುದ್ಧ ಪಿರಮಿಡ್. ಇದು ಪಿರಮಿಡ್ ಆಕಾರದ ಧ್ಯಾನ ಕೇಂದ್ರವಾಗಿದ್ದು ಪ್ರಪಂಚದಲ್ಲೇ ಅತಿ ದೊಡ್ಡದಾಗಿದೆ ಎನ್ನಲಾಗಿದೆ. ಇದು 100 ಅಡಿ ಎತ್ತರದಲ್ಲಿದೆ ಮತ್ತು ಉತ್ತರ-ದಕ್ಷಿಣದ ದಿಕ್ಕಿನಲ್ಲಿ ಆಧಾರಿತವಾಗಿರುವ ಒಂದು ಸುಂದರವಾದ ರಚನೆಯಾಗಿದೆ.

ದೊಡ್ಡ ಆಲದ ಮರ

ದೊಡ್ಡ ಆಲದ ಮರ

PC: Nymishanandini

ಕನ್ನಡ ಭಾಷೆಯಲ್ಲಿ ದೊಡ್ಡ ಆಲದ ಮರ ಎಂದು ಕರೆಯಲ್ಪಡುವ ಬಿಗ್ ಬ್ಯಾನಿಯನ್ ಟ್ರೀ ಸುಮಾರು 4 ಸಾವಿರ ಹಳೆಯ ಆಲದ ಮರವಾಗಿದೆ. ಇದು ಸುಮಾರು 3 ಎಕರೆ ಪ್ರದೇಶದಲ್ಲಿ ಇದೆ. ದೊಡ್ಡ ಆಲದ ಮರ ಕ್ಯಾಂಪಸ್ ಅನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ ಇದು ಬೆಂಗಳೂರಿಗರ ಜನಪ್ರಿಯ ಪಿಕ್ನಿಕ್ ತಾಣಗಳಲ್ಲಿ ಒಂದಾಗಿದೆ. ಇದು ಬೆಂಗಳೂರು ಸಿಟಿಸೆಂಟರ್‌ನಿಂದ 30 ಕಿ.ಮೀ ದೂರದಲ್ಲಿದೆ.

ಕಣ್ವಾ ಅಣೆಕಟ್ಟು

ಕಣ್ವಾ ಅಣೆಕಟ್ಟು

PC:RamBiswal

ರಾಮನಗರದಲ್ಲಿರುವ ಕಣ್ವಾ ಅಣೆಕಟ್ಟು ಬೆಂಗಳೂರಿನ ಪಟ್ಟಣದಿಂದ 70 ಕಿ.ಮೀ. ಇದು ಬೆಂಗಳೂರು-ಮೈಸೂರು ಹೆದ್ದಾರಿಯಿಂದ 8 ಕಿ.ಮೀ ದೂರದಲ್ಲಿದೆ. ಕಣ್ವಾ ಅಣೆಕಟ್ಟು ನೀರಾವರಿ ಉದ್ದೇಶಕ್ಕಾಗಿ ನಿರ್ಮಿಸಲಾದ ಒಂದು ಸಣ್ಣ ಗಾತ್ರದ ಅಣೆಕಟ್ಟು. ಆದರೆ ಕಣ್ವಾ ಜಲಾಶಯವು ಅಪರೂಪವಾಗಿ ತನ್ನ ಸಾಮರ್ಥ್ಯಕ್ಕೆ ನೀರು ಸಂಗ್ರಹಿಸುತ್ತದೆ ಇದು ಬೈಕರ್ಸ್‌ಗಳು ಮತ್ತು ಪ್ರವಾಸಿಗರ ನಡುವೆ ಜನಪ್ರಿಯ ತಾಣವಾಗಿದೆ.

ಬಿಳಿಕಲ್ ರಂಗಸ್ವಾಮಿ ಬೆಟ್ಟ

ಬಿಳಿಕಲ್ ರಂಗಸ್ವಾಮಿ ಬೆಟ್ಟ

PC:Sibi_antony

ಬಿಳಿಕಲ್ ರಂಗಸ್ವಾಮಿ ಬೆಟ್ಟವು ಬೆಂಗಳೂರಿನಿಂದ ದಕ್ಷಿಣಕ್ಕೆ ಸುಮಾರು 75 ಕಿ.ಮೀ ದೂರದಲ್ಲಿದೆ. ಕನಕಪುರ ರಸ್ತೆಯಲ್ಲಿ ಮುಂದೆ ಸಾಗಿ ಬಿಲಿಕಾಲ್ ರಂಗಸ್ವಾಮಿ ಬೆಟ್ಟಕ್ಕೆ ಗೂಗಲ್ ಮ್ಯಾಪ್ ಅನುಸರಿಸಿ. ಬಿಳಿಕಲ್ ರಂಗಸ್ವಾಮಿ ಬೆಟ್ಟದ ಮೇಲೆ ರಂಗನಾಥ ಸ್ವಾಮಿಯವರ ದೇವಸ್ಥಾನವಿದೆ. ಈ ದೇವಸ್ಥಾನದಿಂದಾಗಿಯೇ ಈ ಬೆಟ್ಟಕ್ಕೆ ಬಿಳಿಕಲ್ ರಂಗಸ್ವಾಮಿ ಬೆಟ್ಟ ಎಂದು ಹೆಸರಿಸಲಾಗಿದೆ. ಈ ದೇವಾಲಯವು ಬೃಹತ್, ಬಿಳಿ ಬಣ್ಣದ ಕಲ್ಲಿನ ಕೆಳಗೆ ಇದೆ.

ತುರಾಹಲ್ಲಿ ಅರಣ್ಯ ಪ್ರದೇಶ

ತುರಾಹಲ್ಲಿ ಅರಣ್ಯ ಪ್ರದೇಶ

PC: youtube

ತುರಾಹಲ್ಲಿ ಅರಣ್ಯ ಪ್ರದೇಶವು ಕನಕಪುರ ರಸ್ತೆಯಲ್ಲಿರುವ ಬಂಡೆಗಳಿಂದ ಆವೃತವಾದ ಒಂದು ಸಣ್ಣ ಪ್ರದೇಶವಾಗಿದೆ. ಈ ಪ್ರದೇಶವು ನೈಸ್ ರೋಡ್ ಬಳಿ ಇದೆ. ಇದು ಬನಶಂಕರಿಯಿಂದ ಸುಮಾರು 13 ಕಿ.ಮೀ. ದೂರದಲ್ಲಿದೆ. ಒಮ್ಮೆ ಕನಕಪುರ ರಸ್ತೆಯಲ್ಲಿ ನೈಸ್‌ರೋಡ್ ಅಂಡರ್ಪಾಸ್ ದಾಟಿದ ನಂತರ, ವಜರಾಹಳ್ಳಿ ರಸ್ತೆಯಲ್ಲಿ ಬಲ ತಿರುವು ತೆಗೆದುಕೊಳ್ಳಬೇಕು. ಕೆಲವು ಕಿಮೀ ಪ್ರಯಾಣಿಸಿದ ನಂತರ, ಅರಣ್ಯ ಪ್ರದೇಶದಂತಹ ಸ್ಥಳ ಸಿಗುತ್ತದೆ.

ವ್ಯೂಪಾಯಿಂಟ್ ಬಳಿ ಒಂದು ಸಣ್ಣ ದೇವಾಲಯ ಮತ್ತು ಕೆಲವು ಬಂಡೆಕಲ್ಲುಗಳನ್ನು ಕಾಣಬಹುದು. ಇಲ್ಲಿಂದ ನೀವು ಸೂರ್ಯಾಸ್ತದ ವಿಹಂಗಮ ನೋಟವನ್ನು ನೋಡಬಹುದು. ಈ ಸ್ಥಳಕ್ಕೆ ಹೋಗಬೇಕಾದರೆ ಸರಿಯಾದ ರಸ್ತೆ ತಿಳಿದಿರಬೇಕು. ಗೂಗಲ್ ಮ್ಯಾಫ್‌ನಲ್ಲಿ ಈ ಸ್ಥಳವನ್ನು ತಿಳಿಸಲಾಗಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X