Search
  • Follow NativePlanet
Share
» »500ರೂ. ನೋಟಿನ ಹಿಂಬದಿ ಇರುವ ಸ್ಥಳದ ಪರಿಚಯ ಇದ್ಯಾ?

500ರೂ. ನೋಟಿನ ಹಿಂಬದಿ ಇರುವ ಸ್ಥಳದ ಪರಿಚಯ ಇದ್ಯಾ?

ಈ ಹಿಂದಿನ ಲೇಖನದಲ್ಲಿ ನಾವು ನಿಮಗೆ 10 ರೂ. ನೋಟು ಹಾಗೂ 200 ರೂ. ನೋಟಿನ ಹಿಂಬದಿ ಇರುವ ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದೇವು. ಇಂದು ನಾವು 500ರೂ. ಹಿಂಬದಿ ಇರುವ ಸ್ಥಳದ ಚಿತ್ರದ ಬಗ್ಗೆ ಹೇಳಲಿದ್ದೇವೆ. ಹಳೆ ನೋಟು ಅಮಾನ್ಯೀಕರಣವಾದ ನಂತರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ನೋಟಿನಲ್ಲಿರುವ 500ರೂ. ನೋಟಿನ ಹಿಂಬದಿ ಇರುವ ಚಿತ್ರ ಯಾವ ಸ್ಥಳದ್ದು ಅನ್ನೋದು ಗೊತ್ತಾ? ಬಹುತೇಕ ಮಂದಿಗೆ ಈ ಸ್ಥಳದ ಪರಿಚಯವಿರಬಹುದು. ವರ್ಷದಲ್ಲಿ ಎರಡು ಬಾರೀಯಾದರೂ ಈ ಸ್ಥಳವನ್ನು ಪ್ರತಿಯೊಬ್ಬರೂ ನೆನೆಯುತ್ತಾರೆ.

ವೀರ ಮದಕರಿ, ಭರ್ಜರಿ ಶೂಟಿಂಗ್ ನಡೆದದ್ದು ಇಲ್ಲೇ..ಸಿನಿಮಾದಲ್ಲಿ ನೋಡಿರೋ ನೆನಪಿದೆಯಾ...

ಕೆಂಪು ಕಲ್ಲಿನಿಂದ ನಿರ್ಮಿತವಾದ ಕೋಟೆ

ಕೆಂಪು ಕಲ್ಲಿನಿಂದ ನಿರ್ಮಿತವಾದ ಕೋಟೆ

PC: A.Savin

ಅಕ್ಬರ್ ಸಾಮಾನ್ಯವಾಗಿ ಕೋಟೆ-ಕಟ್ಟಡಗಳನ್ನು ಕಟ್ಟಿಸುತ್ತಿದ್ದದ್ದು ಕೆಂಬಣ್ಣದ ಕಲ್ಲಿನಿಂದ ಹಾಗಾಗಿ ಕೆಂಪು ಕೋಟೆಯಲ್ಲಿಯೂ ಇದೇ ಪ್ರಭಾವವನ್ನು ಕಾಣಬಹುದು. ಕೆಂಪು ಕೋಟೆ ಕೇವಲ ಕೋಟೆಯಾಗಿ ಉಳಿಯದೆ ರಾಜ-ರಾಣಿಯರ ನಿವಾಸವಾಗಿಯೂ ಉಪಯೋಗಗೊಳ್ಳಲಾರಂಭಿಸಿತು. ಕೆಂಪು ಕೋಟೆಯಲ್ಲಿರುವ ರಾಗ ಮಹಲ್‌ನ್ನು ಬೇಗಂ ಮಹಲ್ ಎಂದೂ ಕರೆಯುತ್ತಾರೆ. ಇಲ್ಲಿ ಷಾಜಹಾನನ ಪತ್ನಿ ಹಾಗೂ ಉಪ ಪತ್ನಿಯರು ವಾಸವಾಗಿದ್ದರು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಯುದ್ಧ ನಡೆದದ್ದೂ ಇಲ್ಲೆ

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಯುದ್ಧ ನಡೆದದ್ದೂ ಇಲ್ಲೆ

PC: Anjisnu Raha

ಇಡೀ ಕೋಟೆ ಅರ್ಧಚಂದ್ರಾಕಾರವಾಗಿದ್ದು, ಕೋಟೆ ಗೋಡೆಗಳು 21 ಮೀ ಎತ್ತರವಿದ್ದು ಈ ಕೋಟೆಯು ಸುಮಾರು 2.41ಕಿಮೀ.ವಿಸ್ತೀರ್ಣ ಹೊಂದಿದೆ. ಕೋಟೆಯ ಸುತ್ತಲೂ ಒಂದು ಕಾಲುವೆ ಹರಿಯುತ್ತದೆ. ಮುಖ್ಯ ದ್ವಾರ (ದೆಹಲಿ ದ್ವಾರ) ಯಮುನಾ ನದಿಯ ಕಡೆಗಿದೆ. 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಒಂದು ಯುದ್ಧ ನಡೆದಿದ್ದು ಇದೇ ಸ್ಥಳದಲ್ಲಿ .

ಕೋಟೆಯಲ್ಲಿ ಎರಡು ದ್ವಾರಗಳಿವೆ

ಕೋಟೆಯಲ್ಲಿ ಎರಡು ದ್ವಾರಗಳಿವೆ

PC: A.Savin

ದೆಹಲಿ ದ್ವಾರ ಮತ್ತು ಲಾಹೋರ್ ದ್ವಾರ . ದೆಹಲಿ ದ್ವಾರ ಹೆಚ್ಚು ವೈಭವದಿಂದ ಕೂಡಿದೆ. ಇಂದಿಗೂ ಭಾರತೀಯ ಭೂಸೈನ್ಯ ಕೋಟೆಯ ಈ ಭಾಗವನ್ನು ಉಪಯೋಗಿಸುವುದರಿಂದ ಈ ದ್ವಾರ ಸಾರ್ವಜನಿಕರಿಗೆ ತೆರೆದಿರುವುದಿಲ್ಲ. ಪ್ರವಾಸಿಗಳು ಸಾಮಾನ್ಯವಾಗಿ ಉಪಯೋಗಿಸುವುದು ಲಾಹೋರ್ ದ್ವಾರವನ್ನು. ಸೋಮವಾರ ಹೊರತು ಪಡಿಸಿ ವಾರದ ಉಳಿದೆಲ್ಲಾ ದಿನವೂ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ಪ್ರವಾಸಿಗರಿಗೆ ಈ ಕೋಟೆ ತೆರೆದಿರುತ್ತದೆ.

ಷಹಜಾನ್ ನಿರ್ಮಿಸಿದ ಕೋಟೆ

ಷಹಜಾನ್ ನಿರ್ಮಿಸಿದ ಕೋಟೆ

PC: Vssun

ಐದನೇ ಮೊಘಲ್ ಸಾಮ್ರಾಜ್ಯ ಷಹಜಾನ್ ನಿಂದ 17ನೇ ಶತಮಾನದ ಮಧ್ಯಭಾಗದಲ್ಲಿ ಈ ಕೋಟೆಯನ್ನು ನಿರ್ಮಿಸಲಾಯಿತು. ಉಸ್ತಾದ್ ಅಹಮ್ಮದ್ ಎಂಬುವರು ಈ ಕೋಟೆಯ ವಿನ್ಯಾಸಕಾರರು. 1639 ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿ 1648 ರಲ್ಲಿ ಪೂರ್ಣಗೊಂಡಿತು. ಕೋಟೆಯ ಸಾರ್ವಜನಿಕ ಹಜಾರದಲ್ಲಿ ರಾಜ ಷಾಜಹಾನ್ ತನ್ನ ಪ್ರಜೆಗಳ ಕಷ್ಟ-ಸುಖಗಳ ಬಗ್ಗೆ ಇಲ್ಲಿ ವಿಚಾರಣೆ ಮಾಡುತ್ತಿದ್ದನು. ಹಜಾರದ ಮೇಲ್ಭಾಗದ (ಝಾರೋಕ)ಲ್ಲಿ ಕುಳಿತು ಪ್ರಜೆಗಳ ಅಹವಾಲುಗಳನ್ನು ಅವನು ಆಲಿಸುತ್ತಿದ್ದನು.

ಮುಮ್ತಾಜ್ ಮಹಲ್

ಮುಮ್ತಾಜ್ ಮಹಲ್

PC: Nishant88dp

ಕೆಂಪು ಕೋಟೆಯಲ್ಲಿರುವ ಮುಮ್ತಾಜ್ ಮಹಲ್, ಅದು ಮಹಿಳೆಯರ ಸಭಾಂಗಣವಾಗಿದ್ದು ಇಂದು ವಸ್ತುಸಂಗ್ರಹಾಲಯವಾಗಿದೆ. ಅರಮನೆಯ ದಕ್ಷಿಣ ಭಾಗದ ಕೊನೆಯ ಸಾಲಿನಲ್ಲಿ ಇದನ್ನು ನಿರ್ಮಿಸಲಾಗಿದೆ. ಕೆಂಪು ಕೋಟೆಯ ಒಳಭಾಗದಲ್ಲಿ ಷಾಜಹಾನ್ ನಿರ್ಮಿಸಿದ ಭವ್ಯ ಅರಮನೆಗಳಲ್ಲಿ ಮುಮ್ತಾಜ್ ಮಹಲ್ ಕೂಡ ಅದ್ಭುತವಾದದ್ದಾಗಿದೆ. ರೆಡ್ ಫೋರ್ಟ್ ನಲ್ಲಿರುವ ರಂಗ್ ಮಹಲಿಗೆ ನಖಾರ್ ಖಾನ ಎಂಬ ಅದ್ಭುತ ದ್ವಾರವಿದೆ. ಈ ಮೂರು ಅಂತಸ್ತಿನ ಕಟ್ಟಡದಲ್ಲಿ ಪ್ರತಿನಿತ್ಯ ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ವಾದ್ಯ ಸಂಗೀತಗಳು ಮೊಳಗುತ್ತಿದ್ದವು. ಈ ಕಟ್ಟಡದ ವಿನ್ಯಾಸವೂ ಆನೆಯ ಆಕಾರದಲ್ಲಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

Read more about: india note delhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X