Search
  • Follow NativePlanet
Share
» »ವಾರಣಾಸಿಯ ಈ ಪ್ರಸಿದ್ದ ದೆವಾಲಯಗಳು ಗೊತ್ತೆ?

ವಾರಣಾಸಿಯ ಈ ಪ್ರಸಿದ್ದ ದೆವಾಲಯಗಳು ಗೊತ್ತೆ?

By Vijay

ವಾರಣಾಸಿ ಅಥವಾ ವರಾಣಸಿ ಎಂದೆ ಕರೆಯಲ್ಪಡುವ ಈ ಸ್ಥಳದ ಕುರಿತು ಭಾರತದ ಯಾವ ಪ್ರಜೆಗೆ ಆಗಲಿ ತಿಳಿಯದಿರಲು ಸಾಧ್ಯವೆ ಇಲ್ಲ ಎನ್ನಬಹುದು. ಏಕೆಂದರೆ ಅಷ್ಟರಮಟ್ಟಿಗೆ ಈ ಸ್ಥಳವು ಜನಪ್ರೀಯತೆಗಳಿಸಿದೆ. ಹಿಂದುಗಳ ಪಾಲಿಗಂತೂ ಜೀವನದಲ್ಲೊಮ್ಮೆಯಾದರೂ ಭೇಟಿ ಮಾಡಲೇಬೇಕಾದ ಪುಣ್ಯ ಕ್ಷೇತ್ರವಾಗಿದೆ ಈ ಕಾಶಿ ಕ್ಷೇತ್ರ.

ಇದಕ್ಕೆ ಮುಖ್ಯ ಕಾರಣ ಸ್ವಯಂ ಶಿವನೆ ಈ ಸ್ಥಳದಲ್ಲಿ ಕಾಶಿ ವಿಶ್ವನಾಥನಾಗಿ ಸಕಲ ಭಕ್ತರನ್ನು ಹರಸುತ್ತ ಅವರವರ ಪಾಪ ಕರ್ಮಗಳನ್ನು ನಾಶ ಮಾಡುವಂತಹ ಪಾವಿತ್ರ್ಯತೆಯುಳ್ಳ ಗಂಗೆಯ ತಟದಲ್ಲಿ ನೆಲೆಸಿದ್ದಾನೆ. ಇದು ಜಗತ್ತಿನ ಅತಿ ಪ್ರಾಚೀನ ನಗರಗಳ ಪೈಕಿಯೂ ಸಹ ಒಂದಾಗಿದ್ದು ಹಿಂದು ಆಧ್ಯಾತ್ಮಿಕತೆಯ ಬಹು ದೊಡ್ಡ ಅಧ್ಯಯನಾ ಕ್ಷೇತ್ರವಾಗಿ ಗಮನ ಸೆಳೆದಿದೆ.

ಹರಿದ್ವಾರಕ್ಕೆ ಏಕೆ ಭೇಟಿ ನೀಡಬೇಕು?

ಕೇವಲ ಭಾರತದಲ್ಲಿರುವ ಜನರು ಮಾತ್ರವಲ್ಲದೆ ವಿದೇಶಗಳ ಆಧ್ಯಾತ್ಮಿಕತೆಯ ಸಂಶೋಧನಕಾರರಿಗೂ, ಹಿಂದು ಧರ್ಮದಲ್ಲಿ ಅಧ್ಯಯನ ಮಾಡಬಯಸುವವರಿಗೂ ಬಲು ನೆಚ್ಚಿನ ಕ್ಷೇತ್ರವಾಗಿದೆ ವಾರಣಾಸಿ. ಕೆಲವು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟ ವಿವರಣೆಗಳ ಪ್ರಕಾರ, ಈ ಕ್ಷೇತ್ರದ ಮಹತ್ವ ಎಷ್ಟಿದೆ ಎಂದರೆ ತಿರಿ ಹೋದ ಮನುಷ್ಯನ ಅಂತ್ಯಕ್ರಿಯೆ ಇಲ್ಲಿ ನಡೆದರೆ, ಆತ ಜೀವನ್ಮರಣಗಳ ಚಕ್ರದಿಂದ ಮುಕ್ತಿ ಹೊಂದುತ್ತಾನೆನ್ನಲಾಗಿದೆ.

ಧಾರ್ಮಿಕವಾಗಿಯೆ ಇಷ್ಟೊಂದು ಮಹತ್ವವಿರುವ ಈ ಸ್ಥಳದಲ್ಲಿ ದೇವಾಲಯಗಳಿಗೇನು ಕೊರತೆಯೆ? ಖಂಡಿತವಾಗಿಯೂ ಇಲ್ಲ, ಈ ಕ್ಷೇತ್ರದಲ್ಲಿ ಹಲವಾರು ಮಹತ್ವದ ದೇವಾಲಯಗಳು ಸ್ಥಿತವಿದ್ದು ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತ ಆ ದೇವಾಲಯಗಳಿಗೆ ಭೇಟಿ ನೀಡಲು ಬಯಸದೆ ಇರಲಾರ. ಹಾಗಾದರೆ ವಾರಣಾಸಿಯಲ್ಲಿ ಯಾವೆಲ್ಲ ದೇವಾಲಯಗಳಿವೆ, ಯಾವ್ಯಾವ ದೇವರುಗಳ ದೇವಾಲಯಗಳಿವೆ ಎಂದು ತಿಳಿಯಬೇಕೆ? ಹಾಗಿದ್ದಲ್ಲಿ ಈ ಲೇಖನ ಓದಿ. ವಾರಣಾಸಿಗೆ ಭೇಟಿ ನೀಡಿದರೆ ಖಂಡಿತವಾಗಿಯೂ ಈ ವಿಶಿಷ್ಟ ದೇವಾಲಯಗಳ ದರ್ಶನ ಮಾಡಿ.

ವಾರಣಾಸಿಗೆ ತಲುಪುವ ಬಗೆ

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ಬಾಬಾ ಕೀನಾರಾಮ್ ಸ್ಥಳ : ವಾರಣಾಸಿಯ ರವೀಂದ್ರಪುರಿಯಲ್ಲಿರುವ ಈ ಸ್ಥಳವು ಅಘೋರಿಗಳು ತೀರ್ಥಕ್ಷೇತ್ರ ಹಾಗೂ ಕೇಂದ್ರ ಸ್ಥಳವಾಗಿದೆ. ಇಲ್ಲಿರುವ ಕ್ರಿಮ್ ಕುಂಡ್ ಕೈಲಾಸಿ ಹಾಗೂ ಗಿರ್ನಾರಿ ಸಂಪ್ರದಾಯ ಗಳ ಏಕತೆ ಸೂಚಿಸುವ ಸ್ಥಳವಾಗಿದ್ದು ಶೈವ, ವೈಷ್ಣವ ಹಾಗೂ ಶಾಕ್ತ ಸಮುದಾಯದ ಏಕತೆಯನ್ನು ಬಿಂಬಿಸುತ್ತದೆ. ಹಿಂದುಗಳು ಸಹ ಭೇಟಿ ನೀಡುವ ಈ ಸ್ಥಳದಲ್ಲಿ ಅಘೋರಿ ಪಂಥದ ಮಂಚೂಣಿಯವರಾದ ಬಾಬಾ ಕೀನಾರಾಮರ ಸಮಾಧಿಯಿದೆ. ಹೀಗಾಗಿ ಭೈರವನಾಥನನ್ನು ಪೂಜಿಸುವ ಅಘೋರಿಗಳು ಸೇರಿದಂತೆ ವಿದೇಶಿ ಪ್ರವಾಸಿಗರು, ಅಧ್ಯನಕಾರರು, ಡಾಕ್ಯೂಮೆಂಟರಿ ಚಿತ್ರ ಮಾಡಬಯಸುವವರು ಇಲ್ಲಿಗೆ ಭೇಟಿ ನೀಡುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Subrata Roy

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ಭಾರತ ಮಾತಾ ಮಂದಿರ : ವಾರಣಾಸಿಯಲ್ಲಿರುವ ಒಂದು ವಿಶಿಷ್ಟ ದೇವಾಲಯ ಇದಾಗಿದೆ. ಈ ರೀತಿಯ ಜಗತ್ತಿನಲ್ಲಿರುವ ಏಕೈಕ ದೇವಾಲಯ ಇದಾಗಿದೆ ಎಂದು ನಂಬಲಾಗಿದೆ. ವಿಶೇಷವೆಂದರೆ ಅವಿಭಜಿತ ಭಾರತವನ್ನು ಮಾರ್ಬಲ್ ಕಲ್ಲಿನಲ್ಲಿ ಕೆತ್ತಲಾಗಿದ್ದು ಇದುವೆ ದೇವಾಲಯದ ಮುಖ್ಯ ವಿಗ್ರಹವಾಗಿದೆ. ತಾಯಿ ಭಾರತ ಮಾತೆಗೆ ಈ ದೇವಾಲಯ ಮುಡಿಪಾಗಿದ್ದು ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ ಆವರಣದಲ್ಲಿ ಇದು ಸ್ಥಿತವಿದೆ.

ಚಿತ್ರಕೃಪೆ: Ranveig

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ದುರ್ಗಾ ಮಂದಿರ : ನಗರ ವಾಸ್ತುಶೈಲಿಯಲ್ಲಿ ನಿರ್ಮಿತವಾದ ಆಕರ್ಷಕ ದೇವಾಲಯ ಇದಾಗಿದ್ದು ದುರ್ಗಾ ದೇವಿಗೆ ಮುಡಿಪಾಗಿದೆ. ವಾರಣಾಸಿಗೆ ಭೇಟಿ ನೀಡುವ ಅನೇಕ ಜನರು ಈ ಸುಂದರ ದೇವಾಲಯಕ್ಕೂ ಸಹ ಭೇಟಿ ನೀಡುತ್ತಾರೆ. ದೇವಾಲಯಕ್ಕೆ ಪುಷ್ಕರಿಣಿಯಿದ್ದು ಅದನ್ನು ದುರ್ಗಾಕುಂಡ ಎಂದು ಕರೆಯುತ್ತಾರೆ. ವಿಶೇಷವೆಂದರೆ ನಾಗರ ಪಂಚಮಿಯಂದು ವಿಷ್ಣು ಶೇಷನಾಗನ ಮೇಲೆ ಕುಳಿತಿರುವ ಕಲಾಕೃತಿಯನ್ನು ಈ ಕುಂಡದಲ್ಲಿ ನಿರ್ಮಿಸಲಾಗುತ್ತದೆ.

ಚಿತ್ರಕೃಪೆ: Indianhilbilly

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ಸಂಕಟಾ ದೇವಿ ದೇವಾಲಯ : ಸಂಕಟಾ ದೇವಿಗೆ ಮುಡಿಪಾದ ಜಗತ್ತಿನ ಏಕೈಕ ದೇವಾಲಯ ಇದಾಗಿದೆ. ಹಿಂದು ತತ್ವದಲ್ಲಿ ಸಾಕಷ್ಟು ಮಹತ್ವ ಪಡೆದಿರುವ ಸಂಕಟಾ ದೇವಿಯ ದರ್ಶನ ಕೋರಿ ಬಹಳಷ್ಟು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ನವ ದುರ್ಗೆಯರಲ್ಲಿ ಒಬ್ಬಳಾದ ಈ ದೇವಿಯನ್ನು ನವರಾತ್ರಿಅ ಸಂದರ್ಭದಲ್ಲಿ ಎಂಟನೇಯ ದಿನದಲ್ಲಿ ಪೂಜಿಸುತ್ತಾರೆ. ಈ ದೇವಿಯನ್ನು ಪರಿಹಾರ ದೇವಿ ಎಂದು ಕರೆಯಲಾಗುತ್ತದೆ. ಯಾವುದೆ ಅಪಾಯದ ಸುಳಿವು ದೊರೆತರೆ ಅಥವಾ ಸಂಭವಿಸಿದರೆ ಈ ದೇವಿಯನ್ನು ಭಕ್ತಿಯಿಂದ ಪೂಜಿಸುವುದರ ಮೂಲಕ ಅದರಿಂದ ಪರಿಹಾರ ಪಡೆದುಕೊಳ್ಳಬಹುದೆಂದು ಹೇಳಲಾಗಿದೆ. ವಾರಣಾಸಿಯ ಸಿಂಧೀಯಾ ಘಾಟ್ ಬಳಿ ಈ ದೇವಾಲಯ ಸ್ಥಿತವಿದೆ. ಸಾಂದರ್ಭಿಕ ದುರ್ಗೆಯ ಚಿತ್ರ.

ಚಿತ್ರಕೃಪೆ: AKS.9955

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ಸಂಕಟ ಮೋಚನ ಮಂದಿರ : ಹೆಸರೆ ಸೂಚಿಸುವ ಹಾಗೆ ಸಂಕಟಗಳನ್ನು ಹೋಗಲಾಡಿಸುವ ಆಂಜನೇಯನಿಗೆ ಮುಡಿಪಾದ ವಾರಣಾಸಿಯ ಪ್ರಸಿದ್ಧ ದೇವಾಲಯ ಇದಾಗಿದೆ. ಸ್ಥಳೀಯವಾಗಿ ಸಾಕಷ್ಟು ಜನಪ್ರೀಯತೆಗಳಿಸಿರುವ ಈ ದೇವಾಲಯಕ್ಕೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Balaji Photography

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ಅನ್ನಪೂರ್ಣಾ ಮಂದಿರ : ತಾಯಿ ಅನ್ನಪೂರ್ಣೆಗೆ ಮುಡಿಪಾದ ದೇವಾಲಯ ಇದಾಗಿದೆ. ಪ್ರಖ್ಯಾತ ಕಾಶಿ ವಿಶ್ವನಾಥನ ದೇವಾಲಯದಿಂದ ಕೇವಲ ಐವತ್ತು ಅಡಿಗಳಷ್ಟು ದೂರದಲ್ಲಿ ಈ ಮಂದಿರವಿದೆ ಹಾಗೂ ಸಾವಿರಾರು ಭಕ್ತಾದಿಗಳಿಂದ ಭೇಟಿ ನೀಡಲ್ಪಡುತ್ತದೆ. ದಂತಕಥೆಯಾನುಸಾರ, ಪಾರ್ವತಿಯು ಅನ್ನಪೂರ್ಣೆಯ ಅವತಾರ ಧರಿಸಿದಾಗ ಕಾಶಿಯಲ್ಲೆ ಅಡುಗೆಮನೆಯ ನಿರ್ಮಾಣ ಮಾಡಿ ಪ್ರತಿಯೊಬ್ಬರಿಗೂ ಆಹಾರ ನೀಡದಳಂತೆ. ಹಾಗಾಗಿ ಈ ದೇವಾಲಯಕ್ಕೆ ವಿಶೇಷವಾದ ಮಹತ್ವವಿದೆ.

ಚಿತ್ರಕೃಪೆ: Sssxccal

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ಲಲಿತಾ ಗೌರಿ ದೇವಾಲಯ : ವಾರಣಾಸಿಯಲ್ಲಿರುವ ಪಾರ್ವತಿಯ ಅವತಾರವೆನ್ನಲಾಗುವ ಲಲಿತಾ ಗೌರಿಗೆ ಮುಡಿಪಾದ ದೇವಾಲಯ ಇದಾಗಿದೆ. ವಾರಣಾಸಿಯ ಲಲಿತಾ ಘಾಟ್ ಬಳಿಯಿರುವ ಈ ದೇವಾಲಯಕ್ಕೆ ಸಾಕಷ್ಟು ಜನ ಭಕ್ತಾದಿಗಳು ಭೇಟಿ ನೀಡುತ್ತಾರೆ.

ಚಿತ್ರಕೃಪೆ: Lakhan saini luvi

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ವಿಶಾಲಾಕ್ಷಿ ದೇವಾಲಯ : ದೊಡ್ಡದಾದ ಕಣ್ಣುಗಳುಳ್ಳ ಪಾರ್ವತಿಯ ಅವತಾರವಾದ ವಿಶಾಲಾಕ್ಷಿ ದೇವಿಗೆ ಮುಡಿಪಾದ ದೇವಾಲಯ ಇದಾಗಿದೆ. ಗಂಗಾ ನದಿ ತಟದ ಮೀರ್ ಘಾಟ್ ಬಳಿಯಿರುವ ಈ ದೇವಾಲಯವನ್ನು ಸಾಮಾನ್ಯವಾಗಿ ಶಕ್ತಿಪೀಠ ಎಂದು ಪರಿಗಣಿಸಲಾಗಿದೆ. ಪ್ರತೀತಿಯಂತೆ ಸತಿ ದೇವಿಯ ಕಣ್ಣುಗಳು ಬಿದ್ದ ಸ್ಥಳ ಇದಾಗಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Xavier Caré

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಳ ಭೈರವ ಮಂದಿರ : ಶಿವನ ರುದ್ರ ಸ್ವರೂಪದ ಸಂಕೇತವಾದ ಕಾಳ ಭೈರವನನ್ನು "ಕಾಶಿಯ ಕೊತ್ವಾಲ" ಎಂದೆ ಕರೆಯಲಾಗುತ್ತದೆ. ಇವನಪ್ಪಣೆಯಿಲ್ಲದೆ ಕಾಶಿಯಲಿ ಯಾರಿಗೂ ತಂಗಲು ಸಾಧ್ಯವಿಲ್ಲವಂತೆ! ಇವನಿಗೆ ಮುಡಿಪಾದ ದೇವಾಲಯ ಇದಾಗಿದ್ದು ನಗರದ ಅಂಚೆ ಕಚೇರಿಯ ಬಳಿಯಿರುವ ವಿಶೇಷರ್ ಗಂಜ್ ನಲ್ಲಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Rabs003

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ಮೃತ್ಯುಂಜಯ ಮಹಾದೇವ ದೇವಾಲಯ : ಹೆಸರು ಸೂಚಿಸುವ ಹಾಗೆ ಅಕಾಲ ಮೃತ್ಯುಗಳಿಂದ, ರೋಗಗಳಿಂದ ರಕ್ಷಿಸುವ ಶಿವನಿಗೆ ಮುಡಿಪಾದ ದೇವಾಲಯ ಇದಾಗಿದೆ. ಈ ದೇವಾಲಯದ ಬಳಿ ಬಾವಿಯೊಂದಿದ್ದು ಅದರಲ್ಲಿನ ನೀರು ವಿವಿಧ ನೀರಿನ ಮೂಲಗಳ ಮಿಶ್ರಣವಾಗಿದ್ದು ಔಷಧೀಯ ಗುಣಗಳನ್ನು ಹೊಂದಿದೆ ಎನ್ನಲಾಗುತ್ತದೆ.

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ಶ್ರೀ ತಿಲ್ಭಾಂಡೇಶ್ವ ಮಹಾದೇವ ದೇವಾಲಯ : ಹೆಸರೆ ಹೇಳುವ ಹಾಗೆ ಶಿವನಿಗೆ ಮುಡಿಪಾದ ದೇವಾಲಯ ಇದಾಗಿದೆ. ವಾರಣಾಸಿಯಲ್ಲಿರುವ ಅತಿ ಹಳೆಯ ಹಾಗೂ ಜನಪ್ರೀಯ ದೇವಾಲಯಗಳ ಪೈಕಿ ಇದೂ ಸಹ ಒಂದು. ಇದೊಂದು 2500 ವರ್ಷಗಳ ಹಿಂದೆ ಪ್ರಕಟಗೊಂಡ ಉದ್ಭವ ಶಿವಲಿಂಗವಾಗಿದ್ದು ಪ್ರತಿ ವರ್ಷವೂ ಒಂದು ಎಳ್ಳಿನ ಗಾತ್ರದಷ್ಟು ಬೆಳೆಯುತ್ತಿದೆ ಎನ್ನಲಾಗಿದೆ. ಹಿಂದಿಯಲ್ಲಿ ಎಳ್ಳು ಎಂದರೆ ತಿಲ್ ಪದವನ್ನು ಬಳಸುವುದರಿಂದ ಇದಕ್ಕೆ ತಿಲ್ಭಾಂಡೇಶ್ವರ ಎಂಬ ಹೆಸರು ಬಂದಿದೆ. ಸಾಂದರ್ಭಿಕ ಶಿವಲಿಂಗ.

ಚಿತ್ರಕೃಪೆ: Manveechauhan

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ನೇಪಾಳಿ ದೇವಾಲಯ : ನೇಪಾಳಿ ಶೈಲಿಯಲ್ಲಿ ನಿರ್ಮಿತವಾದ ವಾರಣಾಸಿಯಲ್ಲಿರುವ ಜನಪ್ರೀಯ ದೇವಾಲಯಗಳ ಪೈಕಿ ಇದೂ ಸಹ ಒಂದಾಗಿದೆ. 19 ನೇಯ ಶತಮಾನದಲ್ಲಿ ನೇಪಾಳಿ ದೊರೆಯಿಂದ ನಿರ್ಮಿಸಲ್ಪಟ್ಟ ಈ ದೇವಾಲಯವು ನೇಪಾಳದ ಕಠ್ಮಂಡುವಿನ್ನಲ್ಲಿರುವ ಪ್ರಖ್ಯಾತ ಪಶುಪತಿನಾಥ ದೇವಾಲಯ ರೀತಿಯಲ್ಲೆ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Matt Stabile

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ತುಳಸಿ ಮಾನಸ ಮಂದಿರ : ವಾಲ್ಮಿಕಿಯು ಬರೆದ ರಾಮಾಯಣವು ಸಂಸ್ಕೃತ ಭಾಷೆಯಲ್ಲಿದ್ದುದರಿಂದ ಸಾಕಷ್ಟು ಜನರಿಗೆ ಅರ್ಥವಾಗಲು ಕಷ್ಟವಾಗಿದ್ದುದರಿಂದ ಹದಿನಾರನೇಯ ಶತಮಾನದಲ್ಲಿ ಪ್ರಖ್ಯಾತ ಗೋಸ್ವಾಮಿ ತುಳಸಿದಾಸರು ಹಿಂದಿಯ ಉಪಭಾಷೆಯಾದ ಅವಧಿ ಭಾಷೆಯಲ್ಲಿ ರಾಮಾಯಣವನ್ನು ಭಾಷಾಂತರಿಸಿದರು. ಇದು ರಾಮಚರಿತಮಾನಸ ಎಂದೆ ಪ್ರಸಿದ್ಧವಾಯಿತು. ಇವರಿಗೆ ಮುಡಿಪಾದ ವಾರಣಾಸಿಯಲ್ಲಿರುವ ದೇವಾಲಯ ಇದಾಗಿದ್ದು ಸಾಕಷ್ಟು ಜನರಿಂದ ಭೆಟಿ ನೀಡಲ್ಪಡುತ್ತದೆ. ತುಳಸಿದಾಸರು.

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ವ್ಯಾಸ ಮಂದಿರ : ವಾರಣಾಸಿಯ ರಾಮನಗರದಲ್ಲಿರುವ ವ್ಯಾಸ ಮಂದಿರವು ಮಹಾಭಾರತ ಬರೆದ ವ್ಯಾಸ ಮಹರ್ಷಿಗಳಿಗೆ ಮುಡಿಪಾದ ದೇವಾಲಯವಾಗಿದೆ. ಗುರು ಪೂರ್ಣಿಮೆಯ ಸಂದರ್ಭದಲ್ಲಿ ಸಾಕಷ್ಟು ಭಕ್ತಾದಿಗಳಿಂದ ಈ ದೇವಾಲಯ ತುಂಬಿರುತ್ತದೆ.

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿ ವಿಶ್ವನಾಥ ಮಂದಿರ : ವಾರಣಾಸಿಯ ಅತಿ ಪ್ರಮುಖ ಹಾಗೂ ಪ್ರಧಾನ ದೇವಾಲಯ ಇದೆ ಆಗಿದೆ. ಈ ದೇವಾಲಯದ ಕುರಿತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದ್ದು ಪವಿತ್ರ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಇದೂ ಸಹ ಒಂದಾಗಿದೆ. ಮೂಲ ದೇವಾಲಯ ರಚನೆಯು ಕುತ್ಬುದ್ದಿನ್ ಐಬಕ್ ಸೇನೆಯಿಂದ ನಾಶ ಪಡಿಸಲಾಗಿದೆ. ನಂತರ 800 ವರ್ಷಗಳ ಸಮಯದಲ್ಲಿ ಹಲವು ಬಾರಿ ಇದನ್ನು ನಾಶ ಪಡಿಸಿ ಮತ್ತೆ ಮರು ನಿರ್ಮಿಸಲಾಯಿತು. ಈಗಿರುವ ರಚನೆಯು 18 ನೇಯ ಶತಮಾನದಲ್ಲಿ ನಿರ್ಮಿಸಲಾಗಿರುವುದಾಗಿದೆ.

ಚಿತ್ರಕೃಪೆ: wikipedia

ಕಾಶಿಯ ಗಮನಸೆಳೆವ ದೇವಾಲಯಗಳು:

ಕಾಶಿಯ ಗಮನಸೆಳೆವ ದೇವಾಲಯಗಳು:

ಹೊಸ ವಿಶ್ವನಾಥ ಮಂದಿರ : ಇಂದು ಬಿರ್ಲಾ ಮಂದಿರ ಎಂತಲೂ ಕರೆಯಲ್ಪಡುವ ಹೊಸ ವಿಶ್ವನಾಥ ಮಂದಿರವು ವಾರಣಾಸಿಯ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾಗಿದೆ. ಬಿರ್ಲಾ ಕುಟುಂಬದವರಿಂದ ಹಳೆಯ ವಿಶ್ವನಾಥನ ದೇವಾಲಯದ ರೀತಿಯಲ್ಲಿ ಇನ್ನಷ್ಟು ವೈಭವಯುತವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿರುವುದರಿಂದ ಇದಕ್ಕೆ ಬಿರ್ಲಾ ಮಂದಿರ ಎಂತಲೂ ಸಹ ಕರೆಯಲಾಗುತ್ತದೆ. ಮದನ್ ಮೋಹನ್ ಮಾಲವಿಯಾ ಅವರಿಂದ ವಿನ್ಯಾಸ ಮಾಡಲಾದ ಈ ದೇವಾಲಯವು ಬನಾರಸ್ ಹಿಂದು ವಿಶ್ವವಿದ್ಯಾಲಯದ ಭಾಗವಾಗಿದೆ.

ಚಿತ್ರಕೃಪೆ: Kuber Patel, Rosehub

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more