Search
  • Follow NativePlanet
Share
» »ಗಾಳಿಯಲ್ಲಿ ತೇಲುವ ಈ ಕಂಬದಲ್ಲಿದೆ ರಹಸ್ಯ... ಬೇಡಿಕೆ ಈಡೇರಲು ಇಲ್ಲಿಗೆ ಹೋಗ್ತಾರಂತೆ ಜನ

ಗಾಳಿಯಲ್ಲಿ ತೇಲುವ ಈ ಕಂಬದಲ್ಲಿದೆ ರಹಸ್ಯ... ಬೇಡಿಕೆ ಈಡೇರಲು ಇಲ್ಲಿಗೆ ಹೋಗ್ತಾರಂತೆ ಜನ

ಯಾವುದೇ ಒಂದು ವಿಷಯವನ್ನು ತಿಳಿಯಬೇಕಾದರೆ ಅದರ ವೈಜ್ಞಾನಿಕತೆಯನ್ನು ತಿಳಿಯಬೇಕಾಗುತ್ತದೆ. ಹಾಗೆಯೇ ಯಾವುದೇ ಒಂದು ರಹಸ್ಯಗಳನ್ನು ತಿಳಿಯಬೇಕಾದರೂ ಅದರ ವೈಜ್ಞಾನಿಕ ಕಾರಣಗಳನ್ನು ತಿಳಿಯಬೇಕಾಗುತ್ತದೆ.ಇಂದಿಗೂ ವಿಶ್ವದಲ್ಲಿ ಅಂತಹ ಸಂಗತಿಗಳಿವೆ ಅವುಗಳನ್ನು ತಿಳಿದರೆ ವಿಜ್ಞಾನವೂ ಬೆರಗಾಗುವುದು. ಅದರ ರಹಸ್ಯಗಳನ್ನು ಈವರೆಗೂ ಯಾರೂ ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಪದೇ ಪದೇ ಕೆಟ್ಟ ಕನಸು ಬೀಳುತ್ತಾ... ಈ ದೇವಾಸ್ಥಾನಕ್ಕೆ ಹೋದ್ರೆ ಪರಿಹಾರವಾಗುತ್ತಂತೆ !ಪದೇ ಪದೇ ಕೆಟ್ಟ ಕನಸು ಬೀಳುತ್ತಾ... ಈ ದೇವಾಸ್ಥಾನಕ್ಕೆ ಹೋದ್ರೆ ಪರಿಹಾರವಾಗುತ್ತಂತೆ !

ಭೇಧಿಸಲಾಗದ ರಹಸ್ಯ

ಭೇಧಿಸಲಾಗದ ರಹಸ್ಯ

Vinu raj

ಆಂಧ್ರಪ್ರದೇಶದಲ್ಲಿರುವ ಲೇ ಪಾಕ್ಷಿ ದೇವಾಸ್ಥಾನದ ಬಗ್ಗೆ ನೀವು ಕೇಳಿರಲೇ ಬಹುದು. ತನ್ನ ತೇಲುವ ಕಂಬದಿಂದಾಗಿ ಬಹಳ ಹೆಸರುವಾಸಿಯಾಗಿದೆ. ಇಲ್ಲಿನ ವೀರಭದ್ರಸ್ವಾಮಿ ಭಕ್ತರ ಬೇಡಿಕೆಯನ್ನು ಈಡೇರಿಸುತ್ತದೆ ಎನ್ನುವ ನಂಬಿಕೆ ಭಕ್ತರದ್ದು.

 ರಹಸ್ಯ ಮಂದಿರ

ರಹಸ್ಯ ಮಂದಿರ

Lucky1841999


ಭಾರತದಲ್ಲಿ ಪೌರಾಣಿಕ, ಐತಿಹಾಸಿಕ ಸ್ಥಳಗಳಿವೆ ಅದನ್ನು ವೈಜ್ಞಾನಿಕ ಶೋಧದ ವಿಷಯವಾಗಿಯೇ ಉಳಿದಿದೆ. ಇಂದು ನಾವು ನಿಮಗೆ ತಿಳಿಸುತ್ತಿರುವ ವಿಷಯ ಬಹಳ ವರ್ಷಗಳಿಂದ ಪ್ರಶ್ನೆಯಾಗಿಯೇ ಉಳಿದಿರುವ ಮಂದಿರವೊಂದರ ರಹಸ್ಯ.

 ವೀರಭದ್ರನ ಮೂರ್ತಿ

ವೀರಭದ್ರನ ಮೂರ್ತಿ

Mahesh Telkar


ಈ ದೇವಸ್ಥಾನದಲ್ಲಿ ಶಿವನನ್ನು ವೀರಭದ್ರನ ರೂಪದಲ್ಲಿ ಪೂಜಿಸಲಾಗುತ್ತದೆ. ಗರ್ಭಗೃಹದಲ್ಲಿ ಮನುಷ್ಯನಾಕಾರದ ವೀರಭದ್ರನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಐದು ಹೆಡೆಯ ನಾಗಲಿಂಗಂ

ಐದು ಹೆಡೆಯ ನಾಗಲಿಂಗಂ

Narasimha Prakash

ದೇವಾಲಯದ ಪೂರ್ವ ದಿಕ್ಕಿನಲ್ಲಿ ಒಂದು ದೊಡ್ಡ ಬಂಡೆಯನ್ನು ಶಿವಲಿಂಗವನ್ನು ಕಾಯುತ್ತಿರುವ ಉದ್ದೇಶದಿಂದ ಅದನ್ನು ಸುತ್ತಿಕೊಂಡು ಕುಳಿತಿರುವ ಐದು ಹೆಡೆಯ ಸರ್ಪವನ್ನು ಆಕರ್ಷಕವಾಗಿ ಕೆತ್ತಲಾಗಿದೆ. ಇದನ್ನು ನಾಗಲಿಂಗಂ ಎಂದು ಕರೆಯುತ್ತಾರೆ.

70 ಕಂಬಗಳಿವೆ

70 ಕಂಬಗಳಿವೆ

Somasakshini


ವಿಜಯನಗರ ಶೈಲಿಯಲ್ಲಿರುವ ಈ ದೇವಾಸ್ಥಾನದಲ್ಲಿ ಸುಮಾರು 70 ಕಂಬಗಳಿವೆ. 1583 ರಲ್ಲ ವಿರುಪಣ್ಣ ಹಾಗೂ ವೀರಣ್ಣ ಸಹೋದರರು ನಿರ್ಮಿಸಿದ್ದಾರೆ.

ತೇಲುವ ಕಂಬ

ತೇಲುವ ಕಂಬ

Mahesh Telkar


ಈ ದೇವಾಲಯದಲ್ಲಿರುವ ತೇಲುವ ಕಂಬದ ಕೆಳಗಿನಿಂದ ಬಟ್ಟೆಯನ್ನು ತೆಗೆದರೆ ನಿಮ್ಮ ಆಸೆ ಈಡೇರುತ್ತದೆ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದು. ಇಲ್ಲಿನ ತೇಲುವ ಕಂಬವನ್ನು ನೋಡಲು ಸಾವಿರಾರು ಭಕ್ತರು ಆಗಮಿಸುತ್ತಾರೆ.

ಬೃಹತ್ ನಂದಿ ವಿಗ್ರಹ

ಬೃಹತ್ ನಂದಿ ವಿಗ್ರಹ

Vinay332211
ತೇಲುವ ಕಂಬದ ಬಳಿ ಬೃಹತ್ ಗಾತ್ರದ ನಂದಿಯ ವಿಗ್ರಹವಿದೆ. ಸುಮಾರು 27 ಫೀಟ್ ಎತ್ತರ ಹಾಗೂ 15 ಫೀಟ್ ಅಗಲವಿರುವ ಈ ನಂದಿಯ ವಿಗ್ರಹವು ಭಾರತದಲ್ಲಿರುವ ಅತೀ ದೊಡ್ಡ ನಂದಿಯ ವಿಗ್ರಹವಾಗಿದೆ.

ಲೇ.. ಪಾಕ್ಷಿ..

ಲೇ.. ಪಾಕ್ಷಿ..

Pavithrah
ಈ ಸ್ಥಳಕ್ಕೆ ಇನ್ನೊಂದು ಪೌರಾಣಿಕ ಕಥೆ ಇದೆ. ಅದೇನೆಂದರೆ ರಾವಣ ಸೀತಾಳನ್ನು ಅಪಹರಣ ಮಾಡಿ ಹೋಗುವಾಗ ಜಟಾಯು ರಾವಣನೊಂದಿಗೆ ಯುದ್ಧ ಮಾಡಿ ಬಿದ್ದಿರುವ ಸ್ಥಳ ಅದು ಎನ್ನಲಾಗುತ್ತದೆ. 'ಲೇ.. ಪಾಕ್ಷಿ' ಅಂದರೆ 'ಏದ್ದೇಳು ಪಕ್ಷಿ' ಎಂದು ತೆಲುಗಿನಲ್ಲಿ ಅರ್ಥ.

ವಿಶ್ವಕರ್ಮ ಬ್ರಾಹ್ಮಣರ ವಾಸ್ತುಶಿಲ್ಪ

ವಿಶ್ವಕರ್ಮ ಬ್ರಾಹ್ಮಣರ ವಾಸ್ತುಶಿಲ್ಪ

PC:pd


ದೇವಾಲಯದ ಪ್ರತಿ ಕಂಬಗಳ ಮೇಲೆ ಪೌರಾಣಿಕ ಪ್ರಸಂಗಗಳು, ದೇವ ದೇವತೆಯರ, ಸಂತರ, ಸಂಗೀತಗಾರರ, ನೃತ್ಯಗಾರರ ಶಿಲ್ಪಗಳನ್ನು ಕೆತ್ತಲಾಗಿದೆ. ವಿಶ್ವಕರ್ಮ ಬ್ರಾಹ್ಮಣರ ವಾಸ್ತುಶಿಲ್ಪ ಮಾದರಿಯನ್ನು ಹೆಚ್ಚಾಗಿ ಇಲ್ಲಿ ಕಾಣಬಹುದು.

Read more about: temple andhra pradesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X