Search
  • Follow NativePlanet
Share
» »ಆಂಧ್ರಪ್ರದೇಶದ ಗುಪ್ತ ಜಲಪಾತವೆನಿಸಿರುವ ಎಥಿಪೋತಲಾ ಜಲಪಾತಕ್ಕೆ ಭೇಟಿ ಕೊಡಲು ಮರೆಯದಿರಿ

ಆಂಧ್ರಪ್ರದೇಶದ ಗುಪ್ತ ಜಲಪಾತವೆನಿಸಿರುವ ಎಥಿಪೋತಲಾ ಜಲಪಾತಕ್ಕೆ ಭೇಟಿ ಕೊಡಲು ಮರೆಯದಿರಿ

ಎಥಿಪೋಥಲಾ ಜಲಪಾತಕ್ಕೆ ಭೇಟಿ ಕೊಟ್ಟು ವಿಶ್ರಾಂತಿ ಪಡೆಯಿರಿ ಮತ್ತು ಈ ಶಾಂತತೆಯ ಸಾರವನ್ನು ಹೊಂದಿರುವ ಇದರ ಪರಿಸರದಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳಿ.

By Manjula Balaraj Tantry

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಎಥಿಪೋತಲಾ ಜಲಪಾತವು ಕಡಿಮೆ ಪರಿಶೋಧಿಸಲ್ಪಟ್ಟ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಖಂಡಿತವಾಗಿಯೂ ಪಿಕ್ನಿಕ್ ಪ್ರಿಯರು ಮತ್ತು ಪ್ರಕೃತಿ ಪ್ರೇಮಿಗಳು ಭೇಟಿ ನೀಡಲೇ ಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ಶ್ರೀಮಂತ ಬಯಲು ಪ್ರದೇಶದಿಂದ ಆವರಿಸಲ್ಪಟ್ಟ ಈ ಅದ್ಬುತವಾದ ಜಲಪಾತವು 70 ಅಡಿ ಎತ್ತರದಿಂದ ಕೆಳಗೆ ಬೀಳುತ್ತದೆ ಮತ್ತು ನಯನ ಮನೋಹರ ದೃಶ್ಯವನ್ನು ಒದಗಿಸಿಕೊಡುತ್ತದೆ.

ಪ್ರಕೃತಿಯ ಒಂದು ಗುಪ್ತ ಸೌಂದರ್ಯಕ್ಕೆ ಎಂದಾದರೂ ಭೇಟಿ ನೀಡಿರುವಿರಾ? ಇಲ್ಲವಾದಲ್ಲಿ ಜಗತ್ತಿನಾದ್ಯಂತ ಹರಡಿರುವ ಅದರ ಮಾಂತ್ರಿಕ ಮೋಡಿಯನ್ನು ಪ್ರಶಂಸಿಸುವ ಅವಕಾಶವನ್ನು ನೀವೂ ಪಡೆಯಿರಿ. ಎಥಿಪೋತಲಾ ಜಲಪಾತವು ಅಂತಹ ಒಂದು ತಾಣವಾಗಿದ್ದು ನಿಮ್ಮ ಮೈ ಮನಸ್ಸು ಮತ್ತು ಆತ್ಮವನ್ನು ಇಲ್ಲಿಯ ಸೌಂದರ್ಯತೆಯಲ್ಲಿ ಪುನಶ್ಚೇತನಗೊಳಿಸಿಕೊಳ್ಳಬಹುದಾಗಿದೆ.

70 ಅಡಿ ಎತ್ತರದಿಂದ ಬೀಳುವ ಗುಂಟೂರಿನಲ್ಲಿರುವ ಈ ಜಲಪಾತವು ಕಲ್ಲು ಬಂಡೆಗಳ ನಡುವೆಯ ಇಳಿಜಾರಿನ ಕೆಳಗೆ ಹರಿಯುವ ಸುಂದರವಾದ ಜಲಪಾತವಾಗಿದೆ.ಈ ಋತುವಿನಲ್ಲಿ ಎಥಿಪೋತಲಾ ಜಲಪಾತಕ್ಕೆ ಭೇಟಿ ಕೊಡುವುದನ್ನು ನಿಮ್ಮ ಪ್ರಯಾಣದ ಪಟ್ಟಿಯಲ್ಲಿ ಸೇರಿಸಿದರೆ ಹೇಗೆ?

ಎಥಿಪೋತಲಾ ಜಲಪಾತದ ಸೌಂದರ್ಯತೆ

ಎಥಿಪೋತಲಾ ಜಲಪಾತದ ಸೌಂದರ್ಯತೆ

ಈ ಎಥಿಪೋತಲಾ ಜಲಪಾತದ ಸೌಂದರ್ಯತೆಯು ಇದರ ಸ್ಥಳ ಮತ್ತು ಪರಿಸರದಲ್ಲಿ ಅಡಗಿದೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಈ ಜಲಪಾತವು ಮೂರು ತೊರೆಗಳ ಸಮ್ಮಿಲನವಾಗಿದೆ ಅವು ಯಾವುವೆಂದರೆ ಚಂದ್ರವಾಂಕ ವಾಗು, ತುಮ್ಮಲವಾಗು ಅತ್ತು ನಕ್ಕಲ ವಾಗು ಎಂಬ ಹೆಸರಿನವಾಗಿದೆ.

ಕೃಷ್ಣ ನದಿಯ ಉಪನದಿಯಾಗಿ ಹರಿಯುವ ಎಥಿಪೋಥಲ ಜಲಪಾತವು ದಿನದಿಂದ ದಿನಕ್ಕೆ ಇದರ ಪಿಕ್ನಿಕ್ ತಾಣಗಳು ಮತ್ತು ಅದ್ಭುತ ದೃಶ್ಯಗಳಿಗಾಗಿ ಜನಪ್ರಿಯತೆ ಗಳಿಸುತ್ತಿದೆ. ಜಲಪಾತದ ಸುತ್ತ ಇನ್ನಷ್ಟು ಅನ್ವೇಷಿಸಲು ಬಯಸಿದಲ್ಲಿ ಇಲ್ಲಿಗೆ ಹತ್ತಿರವಿರುವ ವಿಷ್ಣುದೇವರು ಮತ್ತು ತ್ರಿಮೂರ್ತಿಗಳಿಗೆ ಅರ್ಪಿತವಾದ ದೇವಾಲಯಕ್ಕೆ ಭೇಟಿ ಕೊಡಬಹುದಾಗಿದೆ. ಆದುದರಿಂದ ನಿಮ್ಮ ಮುಂದಿನ ವಾರಾಂತ್ಯವನ್ನು ಈ ಹಸಿರುಮಯ ವಾತಾವರಣ ಮತ್ತು ಜಲಪಾತವಿರುವ ತಾಣದಲ್ಲಿ ಕಳೆಯಬಾರದು?

ಈ ನದಿ ಕಾಸ್ಕೇಡ್ (ಜಲಪಾತ)ನಿಮ್ಮ ಮುಂದಿನ ಭೇಟಿ ಕೊಡುವ ತಾಣವಾಗಿರಬೇಕು ಏಕೆ?

ಈ ನದಿ ಕಾಸ್ಕೇಡ್ (ಜಲಪಾತ)ನಿಮ್ಮ ಮುಂದಿನ ಭೇಟಿ ಕೊಡುವ ತಾಣವಾಗಿರಬೇಕು ಏಕೆ?

ಎಥಿಪೋತಲ ಜಲಪಾತವು ಹೊಸದಾಗಿ ಜನಪ್ರಿಯತೆ ಪಡೆದ ತಾಣವಾದುದರಿಂದ ಪಿಕ್ನಿಕ್ ಹೋಗುವವರಿಗೆ, ಛಾಯಗ್ರಾಹಕರಿಗೆ ಮತ್ತು ಪ್ರಕೃತಿ ಪ್ರೇಮಿಗಳಿಗೆ ಸೂಕ್ತವಾದ ಜಾಗವಾದುದರಿಂದ ಕೆಲವು ಸಮಯದಲ್ಲಿ ಇದು ಜನರಿಂದ ಕೂಡಿರುತ್ತದೆ.

ಗುಂಟೂರಿನ ಇಳಿಜಾರುಗಳಲ್ಲಿ ನೀರು ರಭಸವಾಗಿ ಹರಿಯುವುದನ್ನು ನೋಡಲು ಜನ ಬರುತ್ತಾರೆ. ನೀವು ನಿಮ್ಮ ಒತ್ತಡದ ಜೀವನದಿಂದ ಸುಸ್ತಾಗಿದ್ದು ಪ್ರಶಾಂತತೆಯಲ್ಲಿ ಮತ್ತು ಸೌಂದರ್ಯತೆಯಲ್ಲಿ ನಿಮ್ಮನ್ನು ನೀವು ಕಳೆಯಬಯಸಿದಲ್ಲಿ ಈ ನದಿ ಜಲಪಾತ ನಿಮ್ಮ ಮುಂದಿನ ನಿಲುಗಡೆಯಾಗಿರಬೇಕು.


PC- Abhinaba Basu

ಎಥಿಪೋಥಲಾ ಜಲಪಾತದ ಸುತ್ತಮುತ್ತಲೂ ಇರುವಾಗ ಮಾಡಬಹುದಾದ ವಿಷಯಗಳು

ಎಥಿಪೋಥಲಾ ಜಲಪಾತದ ಸುತ್ತಮುತ್ತಲೂ ಇರುವಾಗ ಮಾಡಬಹುದಾದ ವಿಷಯಗಳು

ಹಸಿರು ಪರಿಸರದ ಮಧ್ಯೆ ಅದರ ಮಾಂತ್ರಿಕ ಸೌಂದರ್ಯದ ಹೊರತಾಗಿಯೂ, ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ನೀವು ಕೆಲವು ಸುಂದರ ದೃಶ್ಯಗಳ ಸೆರೆಹಿಡಿಯಬಹುದು.ಎಥಿಪೋತಲಾ ಜಲಪಾತವು ಪ್ರವಾಸಿಗರಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿಲ್ಲವಾದರೂ ಇಲ್ಲಿಯ ಸ್ಥಳೀಯರಿಗೆ ಇದೊಂದು ಸೂಕ್ತವಾದ ಪಿಕ್ನಿಕ್ ತಾಣವಾಗಿದೆ.

ನೀವು ನಿಮ್ಮ ಕುಟುಂಬದವರ ಅಥವಾ ಸ್ನೇಹಿತರ ಜೊತೆ ಈ ಮಧುರವಾದ ಸ್ವರವಿರುವ ಪ್ರಕೃತಿಯ ಮಧ್ಯೆ ಕಳೆಯಬಯಸಿದರೆ ಎಥಿಪೋತಲಾ ಜಲಪಾತವು ನಿಮಗೆ ಸೂಕ್ತವಾದ ಸ್ಥಳವಾಗಿದೆ ಇಲ್ಲಿ ಕ್ಯಾಂಪಿಂಗ್ ಕೂಡಾ ಮಾಡಬಹುದಾಗಿದೆ.

ಈ ಜಲಪಾತದ ಕೆಳಭಾಗದಲ್ಲಿರುವ ಕೊಳವನ್ನು ಮೊಸಳೆಗಳ ಆಹಾರ ಕೇಂದ್ರವನ್ನು ಮಾಡಿರುವುದರಿಂದ ಈ ಜಲಪಾತದ ಅಡಿಯಲ್ಲಿ ಸ್ನಾನಮಾಡುವುದು ಸೂಕ್ತವಲ್ಲ. ನಿಮ್ಮ ಸುಂದರ ಸಮಯವನ್ನು ಈ ಎಥಿಪೋತಲ ಜಲಪಾತದಲ್ಲಿ ಕಳೆಯುವ ಸಮಯದಲ್ಲಿ ಯಾವುದೇ ಅಪಾಯವನ್ನು ಮಾಡಿಕೊಳ್ಳಬೇಡಿ.

PC- Praveen120

ಎಥಿಪೋತಲಗೆ ತಲುಪುವುದು ಹೇಗೆ

ಎಥಿಪೋತಲಗೆ ತಲುಪುವುದು ಹೇಗೆ

ಎಥಿಪೋಥಲ ಜಲಪಾತಕ್ಕೆ ನೇರವಾಗಿ ಸಂಪರ್ಕಿಸುವ ಮಾರ್ಗಗಳಿಲ್ಲ, ಆದುದರಿಂದ , ನೀವು ಗುಂಟೂರಿನ ಬಳಿಗೆ ಬಂದ ಬಳಿಕ ಅಲ್ಲಿಂದ ಎಥಿಪೋಥಲ ಜಲಪಾತಕ್ಕೆ ಕ್ಯಾಬ್ ಬಾಡಿಗೆಗೆ ತೆಗೆದುಕೊಳ್ಳಬಹುದು.ನೀವು ವಿಮಾನ ಮೂಲಕ ಪ್ರಯಾಣ ಮಾಡುವವರಾಗಿದ್ದಲ್ಲಿ ನೀವು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಹೋಗಬಹುದು ಮತ್ತು ಅಲ್ಲಿಂದ ಈ ಜಲಪಾತಕ್ಕೆ ಕ್ಯಾಬ್ ಮೂಲಕ ಹೋಗಬಹುದಾಗಿದೆ.

ಈ ಜಲಪಾತಕ್ಕೆ ಭೇಟಿ ಕೊಡಲು ಸೂಕ್ತ ಸಮಯ

ಈ ಜಲಪಾತಕ್ಕೆ ಭೇಟಿ ಕೊಡಲು ಸೂಕ್ತ ಸಮಯ

ಎಥಿಪೋತಲಾ ಜಲಪಾತದ ಸುತ್ತಲಿನ ಪ್ರದೇಶವು ಬಂಗಾಳ ಕೊಲ್ಲಿಯ ಸಮೀಪವಿರುವ ಸ್ಥಳದಿಂದ ಉಷ್ಣ ಮತ್ತು ಆರ್ದ್ರ ವಾತಾವರಣವನ್ನು ಅನುಭವಿಸುತ್ತದೆ; ಆದ್ದರಿಂದ, ಬೇಸಿಗೆ ಕಾಲದಲ್ಲಿ ಗುಂಟೂರಿನ ಎಥಿಪೋಥಲ ಜಲಪಾತವನ್ನು ಭೇಟಿ ಮಾಡುವುದನ್ನು ತಪ್ಪಿಸುವುದು ಸೂಕ್ತ.

ಇಳಿಜಾರುಗಳಿಂದ ಬೀಳುವ ಸಮೃದ್ಧ ನೀರನ್ನು ಸೌಂದರ್ಯವನ್ನು ಆನಂದಿಸಲು ನೀವು ಬಯಸಿದರೆ, ಇದು ಸೂಕ್ತವಾದ ಸ್ಥಳವಾಗಿದೆ ಎತಿಪೋಥಲ ಜಲಪಾತವನ್ನು ಭೇಟಿ ಮಾಡಲು ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ಅಂತ್ಯದವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X