• Follow NativePlanet
Share
Menu
» »ಈ ರಾಜ್ಯದಲ್ಲಿ ದೀಪಾವಳಿ ಹಬ್ಬ ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗುತ್ತದೆ

ಈ ರಾಜ್ಯದಲ್ಲಿ ದೀಪಾವಳಿ ಹಬ್ಬ ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗುತ್ತದೆ

Written By:

ದೇವದೀಪಾವಳಿ ಎಂಬುದು ದೇವತೆಗಳು ಕಾರ್ತಿಕ ಪೂರ್ಣಿಮೆ ಅಥವಾ ಕಾರ್ತಿಕ ತಿಂಗಳ ಹುಣ್ಣಿಮೆಯಂದು ಆಚರಿಸುವ ಹಬ್ಬವಾಗಿದೆ. ಈ ರಾಜ್ಯದಲ್ಲಿ ದೀಪಾವಳಿಯನ್ನು ಅತ್ಯಂತ ವಿಜೃಂಬಣೆಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಅದು ಯಾವ ರಾಜ್ಯವೆಂದರೆ ವಾರಾಣಾಸಿ. ಪವಿತ್ರವಾದ ನಗರದಲ್ಲಿ ಗಂಗ ಮಾತೆ ಮತ್ತು ಕಾಶಿ ವಿಶ್ವನಾಥನು ನೆಲೆಸಿದ್ದಾರೆ. ದೀಪಾವಳಿಯಂದು ಇಲ್ಲಿ ಅತ್ಯಂತ ವೈಭವವಾಗಿ ಆಚರಿಸುತ್ತಾರೆ. ಇಲ್ಲಿ ಗಂಗ ಮಹೋತ್ಸವದ ಕೊನೆಯ ದಿನದಂದು ದೇವ ದೀಪಾವಳಿಯನ್ನು ಆಚರಿಸಲಾಗುತ್ತದೆ.

ಸುಮಾರು 10 ಲಕ್ಷ ಮಣ್ಣಿನ ದೀಪಗಳನ್ನು ಗಂಗಾ ನದಿಯ ದಂಡೆಯ ನೀರಿನಲ್ಲಿ ತೇಲಿಸುತ್ತಾರೆ. ವಾರಾಣಾಸಿ ನಗರವು ಭಾರತದಲ್ಲಿ ಅದ್ಭುತವಾದ ಆಧ್ಯಾತ್ಮಿಕ ಸ್ಥಳವಾಗಿದೆ. ಪ್ರಾಚೀನ ಕಾಲದಲ್ಲಿ ಈ ಪಟ್ಟಣವನ್ನು ಬನಾರಸ್ ಅಥವಾ ಕಾಶಿ ಎಂದು ಕರೆಯುತ್ತಿದ್ದರು. ಇಲ್ಲಿ ಆನೇಕ ದೇವಾಲಯಗಳು, ಘಾಟ್‍ಗಳು, ಗಂಗಾ ನದಿ ಮುಖ್ಯವಾದ ಆಕರ್ಷಣೆಯಾಗಿದೆ. ಹಾಗಾಗಿಯೇ ಇಲ್ಲಿ ವಿದೇಶಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗಿದೆ.

ಈ ವಾರಾಣಾಸಿಯಲ್ಲಿ ಹೇಗೆ ದೀಪಾವಳಿಯನ್ನು ಆಚರಿಸುತ್ತಾರೆ ಎಂಬುದನ್ನು ಲೇಖನದ ಮೂಲಕ ತಿಳಿಯೋಣ.

ವಾರಾಣಾಸಿಯಲ್ಲಿ ದೀಪಾವಳಿ

ವಾರಾಣಾಸಿಯಲ್ಲಿ ದೀಪಾವಳಿ

ದೇವ್ ದೀಪಾವಳಿ ಹಬ್ಬವನ್ನು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ನಡೆಸುತ್ತದೆ. ಈ ಸುಂದರವಾದ ಹಬ್ಬ ಎಲ್ಲರಲ್ಲಿಯೂ ಆನಂದವನ್ನು ಉಂಟು ಮಾಡುತ್ತದೆ. ಇಲ್ಲಿ ಮಾಡುವ ಉತ್ಸವಕ್ಕೆ ದೇಶ, ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಆ ಸಮಯದಲ್ಲಿ ಇಲಾಖೆಯವರು ಹಲವಾರು ಸೌಲಭ್ಯಗಳನ್ನು ಆಯೋಜಿಸುತ್ತಾರೆ.

ವಾರಾಣಾಸಿಯಲ್ಲಿ ದೀಪಾವಳಿ

ವಾರಾಣಾಸಿಯಲ್ಲಿ ದೀಪಾವಳಿ

ಇಲ್ಲಿನ ದೀಪಾವಳಿ ಹಬ್ಬದ ದಿನ ಲಕ್ಷಾಂತರ ದೀಪಗಳನ್ನು ಬೆಳಗಿಸಲಾಗುತ್ತದೆ. ವಾರಾಣಾಸಿಯ ಇತಿಹಾಸದಲ್ಲಿ ದೀಪಗಳ ಸಂಖ್ಯೆ ಬೆಳೆಯುತ್ತಲೇ ಇದೆ. ದೀಪಗಳ ಜೊತೆ ಜೊತೆಗೆ ಭಕ್ತರು ಕೂಡ ಹೆಚ್ಚಾಗುತ್ತಲೇ ಇದ್ದಾರೆ. ಭಕ್ತರು ಮಣ್ಣಿನ ದೀಪಗಳನ್ನು ತಮ್ಮ ಇಚ್ಛೆಯನ್ನು ಮನದಲ್ಲಿ ಪಾರ್ಥಿಸಿಕೊಂಡು ಗಂಗಾ ಮಾತೆಯ ಮಡಿಲಲ್ಲಿ ತೇಲಲು ಬೀಡುತ್ತಾರೆ.

ವಾರಾಣಾಸಿಯಲ್ಲಿ ದೀಪಾವಳಿ

ವಾರಾಣಾಸಿಯಲ್ಲಿ ದೀಪಾವಳಿ

ವಾರಾಣಾಸಿಯಲ್ಲಿ ಈ ಉತ್ಸವಗಳ ನಿರ್ವಹಣೆಯಲ್ಲಿ ಅತ್ಯಂತ ವೈಭವವಾಗಿ ಗಂಗಾ ಹಾರತಿ ಕಾರ್ಯಕ್ರಮ ನಡೆಯುತ್ತದೆ. ವಾರಾಣಾಸಿಯಲ್ಲಿ ಇವು ಪ್ರಮುಖವಾದ ಘಟನೆಗಳು. ಇಲ್ಲಿನ ಗಂಗಾ ಹಾರತಿ ಉತ್ಸವವು 5 ದಿನಗಳ ಕಾಲ ನಡೆಯುತ್ತವೆ.

ವಾರಾಣಾಸಿಯಲ್ಲಿ ದೀಪಾವಳಿ

ವಾರಾಣಾಸಿಯಲ್ಲಿ ದೀಪಾವಳಿ

ದಶಾಶ್ವಮೇದ ಘಾಟ್‍ನಲ್ಲಿರುವ ಗಂಗಾ ಹಾರತಿ ಉತ್ಸವದಲ್ಲಿ, ಪೊಲೀಸ್ ಸಿಬ್ಬಂದಿ ಮತ್ತು ಮಿಲಿಟರಿ ಅಧಿಕಾರಿಗಳು ಅಮರ್ ಜವಾನ್ ಜ್ಯೋತಿಯಲ್ಲಿ ಮೃತರಾದ ವೀರರಿಗೆ ಗೌರವ ಸಲ್ಲಿಸುತ್ತಾರೆ. ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದವರಿಗೆ ಮಿಲಿಟರಿವತಿಯಿಂದ ವಂದಿಸುತ್ತಾರೆ.

ವಾರಾಣಾಸಿಯಲ್ಲಿ ದೀಪಾವಳಿ

ವಾರಾಣಾಸಿಯಲ್ಲಿ ದೀಪಾವಳಿ

ಕಾರ್ಪೆಟ್‍ಗಳು, ಪರದೆಗಳು, ದೀಪಗಳು ಇತ್ಯಾದಿಗಳಿಂದ ನಿರ್ವಹಿಸುವ ಮಂತ್ರ ಪಾರ್ಥನೆಗಳು ಅಲ್ಲಿನ 84 ಘಾಟ್‍ಗಳಿಗೂ ಪ್ರತಿಧ್ವನಿಸುತ್ತದೆ. ಈ ಸಮಯದಲ್ಲಿ ಪ್ರತಿಯೊಬ್ಬರಿಗೂ ಆನಂದದಾಯಕವಾದ ಆಧ್ಯಾತ್ಮಿಕತೆ ಅವರಿಸುತ್ತದೆ.

ವಾರಾಣಾಸಿಯಲ್ಲಿ ದೀಪಾವಳಿ

ವಾರಾಣಾಸಿಯಲ್ಲಿ ದೀಪಾವಳಿ

ಕಾರ್ತಿಕ ದಿನದಂದು ಗಂಗಾ ನದಿಯಲ್ಲಿ ಸ್ನಾನವನ್ನು ಮಾಡಿದರೆ ಜೀವನದಲ್ಲಿ ಮಾಡಿದ ಎಲ್ಲಾ ಪಾಪಗಳು ತೊಲಗಿ ಹೋಗುತ್ತದೆ ಎಂದು ನಂಬಲಾಗಿದೆ. ಹಾಗೆಯೇ ಸ್ನಾನದ ನಂತರ ಪವಿತ್ರವಾದೆವು ಎಂದು ಭಾವಿಸುತ್ತಾರೆ. ಇದೇ ವಿಶ್ವಾಸದಿಂದ ಹಿಂದೂಗಳು ಕಾರ್ತಿಕ ಪೂರ್ಣಿಮೆಯಂದು ಸಮೀಪದ ನದಿಯಲ್ಲಿ ಸ್ನಾನಗಳು ಮಾಡುತ್ತಾರೆ.

ವಾರಾಣಾಸಿಯಲ್ಲಿ ದೀಪಾವಳಿ

ವಾರಾಣಾಸಿಯಲ್ಲಿ ದೀಪಾವಳಿ

ದೀಪಾವಳಿ ಉತ್ಸವದ ಸಂದರ್ಭದಲ್ಲಿ ಭಾರತೀಯ ಸಂಸ್ಕøತಿಯನ್ನು ಪ್ರತಿಬಿಂಬಿಸುವ ವಿಧವಾಗಿ ಆನೇಕ ಕಲೆಗಳನ್ನು ಪ್ರದರ್ಶಿಸುತ್ತಾರೆ. ವಿವಿಧ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲಾಗುತ್ತದೆ. ಸಾಂಪ್ರದಾಯಿಕ ನೃತ್ಯಗಳು, ಹಾಡುಗಳು ಮತ್ತು ಗೀತೆಗಳಿಂದ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಆ ಸಮಯದಲ್ಲಿ ಹಲವಾರು ಪ್ರಸಿದ್ಧವಾದ ಕಲಾವಿದರು ಕೂಡ ಭಾಗವಹಿಸುತ್ತಾರೆ.

ವಾರಾಣಾಸಿಗೆ ಭೇಟಿ ನೀಡಲು ಅತ್ಯುತ್ತಮವಾದ ಸಮಯ

ವಾರಾಣಾಸಿಗೆ ಭೇಟಿ ನೀಡಲು ಅತ್ಯುತ್ತಮವಾದ ಸಮಯ

ವಾರಾಣಾಸಿಗೆ ಭೇಟಿ ನೀಡಲು ಅತ್ಯುತ್ತಮವಾದ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳ ನಡುವೆ.

ವಾರಾಣಾಸಿಗೆ ತಲುಪುವ ಬಗೆ?

ವಾರಾಣಾಸಿಗೆ ತಲುಪುವ ಬಗೆ?

ರಸ್ತೆ ಮಾರ್ಗ
ವಾರಾಣಾಸಿಗೆ ವಿಮಾನ, ರೈಲು ಮತ್ತು ರಸ್ತೆ ಮೂಲಕ ಕೂಡ ತಲುಪಬಹುದಾಗಿದೆ. ಇದು ತನ್ನದೇ ಆದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿದೆ. ಲಕ್ನೋ(5 ಗಂಟೆಗಳ ಕಾಲ), ಕಾನ್ಪುರ್(5 ಗಂಟೆಗಳ ಕಾಲ), ಮತ್ತು ಅಲಹಾಬಾದ್(2 ಗಂಟೆಗಳ ಕಾಲ) ಬಸ್ಸುಗಳ ಮೂಲಕ ತೆರಳಬಹುದಾಗಿದೆ.

ವಾರಾಣಾಸಿಗೆ ತಲುಪುವ ಬಗೆ?

ವಾರಾಣಾಸಿಗೆ ತಲುಪುವ ಬಗೆ?

ರೈಲ್ವೆ ಮಾರ್ಗ
ವಾರಾಣಾಸಿಯು 2 ಮುಖ್ಯ ರೈಲ್ವೆ ನಿಲ್ದಾಣಗಳನ್ನು ಹೊಂದಿದೆ. ಅವುಗಳು ಯಾವುವೆಂದರೆ ವಾರಾಣಾಸಿ ಜಂಕ್ಷನ್ ಮತ್ತು ಮೊಗಲ್ ಸಾರಾಯ್ ಜಂಕ್ಷನ್. ಇವುಗಳು ನಗರದ ಪೂರ್ವಕ್ಕೆ ಸುಮಾರು 20 ಕಿ.ಮೀ ದೂರದಲ್ಲಿದೆ. ದೆಹಲಿ, ಆಗ್ರಾ, ಮುಂಬೈ ಮತ್ತು ಕೋಲ್ಕತ್ತಾಗಳಿಂದ ದಿನನಿತ್ಯದ ವಿಮಾನಯಾನಗಳನ್ನು ಹೊಂದಿದೆ.

ವಾರಾಣಾಸಿಗೆ ತಲುಪುವ ಬಗೆ?

ವಾರಾಣಾಸಿಗೆ ತಲುಪುವ ಬಗೆ?

ವಿಮಾನ ಮಾರ್ಗ
ವಾರಾಣಾಸಿ ತನ್ನದೇ ಆದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿದೆ. ಅದೇ ರೀತಿ ದೆಹಲಿ, ಲಖನೌ, ಮುಂಬೈ, ಖಜರಾಹೋ ಮತ್ತು ಕೊಲ್ಕತ್ತಾ ಸೇರಿದಂತೆ ಭಾರತದ ನಗರಗಳಿಗೆ ನೇರವಾಗಿ ವಿಮಾನ ಸಂಪರ್ಕವಿದೆ.

ಈ 5 ಸ್ಥಳಗಳಲ್ಲಿ ನಡೆಯುತ್ತದೆ ಅದ್ಭುತವಾದ ದೀಪಾವಳಿ ಸಂಭ್ರಮ..

ದೀಪಾವಳಿ ಹಬ್ಬಕ್ಕೆ ಮಾತ್ರ ತೆರೆಯುವ ಮಾಹಿಮಾನ್ವಿತ ದೇವಾಲಯ ಯಾವುದು ಗೊತ್ತ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ