Search
  • Follow NativePlanet
Share
» »ಧೋನಿ ಯಶಸ್ಸಿಗೆ ಈ ದೇವಿಯೇ ಕಾರಣವಂತೆ...ಪತ್ನಿ ಜೊತೆ ದೇವಿಯ ದರ್ಶನ ಮಾಡೋ ಕ್ಯಾಪ್ಟನ್ ಕೂಲ್

ಧೋನಿ ಯಶಸ್ಸಿಗೆ ಈ ದೇವಿಯೇ ಕಾರಣವಂತೆ...ಪತ್ನಿ ಜೊತೆ ದೇವಿಯ ದರ್ಶನ ಮಾಡೋ ಕ್ಯಾಪ್ಟನ್ ಕೂಲ್

ಭಾರತವನ್ನು ಮಂದಿರಗಳ ದೇಶ ಎನ್ನಲಾಗುತ್ತದೆ. ಇಲ್ಲಿ ನೀವು ಅಲ್ಲಲ್ಲಿ ಸಾಕಷ್ಟು ದೇವಸ್ಥಾನಗಳನ್ನು ಕಾಣಬಹುದು. ಇಲ್ಲಿನ ಪ್ರತಿಯೊಂದು ದೇವಸ್ಥಾನಕ್ಕೆ ತನ್ನದೇ ಆದ ಕಥೆ, ಇತಿಹಾಸ, ಪೌರಾಣಿಕ ಮಹತ್ವವಿದೆ. ಅದು ತನ್ನತ್ತ ಭಕ್ತರನ್ನು ಆಕರ್ಷಿಸುತ್ತದೆ. ಬಡವನಿರಲಿ, ಶ್ರೀಮಂತನಿರಲಿ ಪ್ರತಿಯೊಬ್ಬರೂ ಕೂಡಾ ದೇವರ ಮುಂದೆ ಶಿರಬಾಗಿ ನಮಿಸಿ ಆಶೀರ್ವಾದ ಪಡೆಯುತ್ತಾರೆ.

 ಪತ್ನಿ ಜೊತೆ ದೇವಿ ದರ್ಶನ

ಪತ್ನಿ ಜೊತೆ ದೇವಿ ದರ್ಶನ


ನಾವಿಂದು ನಿಮಗೆ ಒಂದು ವಿಶೇಷ ಮಂದಿರ ಬಗ್ಗೆ ತಿಳಿಸಲಿದ್ದೇವೆ. ಅಲ್ಲಿ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತವಾಗಿರುವ ಮಹೇಂದ್ರ ಸಿಂಗ್ ಧೋನಿ ಪೂಜೆಗೆ ಬರುತ್ತಾರೆ. ಇಂದು ತಾನು ಎಷ್ಟೇ ಯಶಸ್ಸು ಗಳಿಸಿ ಈ ಹಂತಕ್ಕೆ ತಲುಪಿರಬೇಕಾದರೆ ಅದಕ್ಕೆ ಕಾರಣ ಈ ದೇವಿಯೇ. ಈ ದೇವಿಯ ಆಶೀರ್ವಾದದಿಂದಲೇ ನಾನು ಈ ಮಟ್ಟದಲ್ಲಿದ್ದೇನೆ ಎನ್ನುತ್ತಾರೆ ಧೋನಿ. ಈ ದೇವಸ್ಥಾನಕ್ಕೆ ಕೇವಲ ಧೋನಿ ಹಾಗೂ ಅವರ ಪರಿವಾರ ಮಾತ್ರವಲ್ಲ, ಶಿಖರ್ ಧವನ್ ಕೂಡಾ ತನ್ನ ಪತ್ನಿಯೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ.

ಎಲ್ಲಿದೆ ಈ ದೇವ್ರಿ ಮಂದಿರ?

ಎಲ್ಲಿದೆ ಈ ದೇವ್ರಿ ಮಂದಿರ?

PC: TribhuwanKumar

ದೇವ್ರಿ ಮಂದಿರವು ರಾಂಚಿಯಿಂದ ಸುಮಾರು ೬೦ ಕಿ.ಮೀ ದೂರದಲ್ಲಿದೆ. ರಾಂಚಿ-ಟಾಟಾ ಹೈವೆಯ ಬದಿಯಲ್ಲಿದೆ. ಇಂದು ಈ ಮಂದಿರವು ದೇಶ, ವಿದೇಶಗಳಲ್ಲೂ ಪ್ರಸಿದ್ಧಿಯನ್ನು ಹೊಂದಿದೆ. ಇದಕ್ಕೂ ಮೊದಲು ಈ ಮಂದಿರ ಅಷ್ಟೊಂದು ಪ್ರಸಿದ್ಧಿ ಹೊಂದಿರಲಿಲ್ಲ. ಯಾವಾಗ ಕ್ಯಾಪ್ಟನ್ ಧೋನಿ ತನ್ನ ಪತ್ನಿಯೊಂದಿಗೆ ಆಗಾಗ ಈ ಮಂದಿರದ ದರ್ಶನ ಪಡೆಯಲು ಆರಂಭಿಸಿದರೋ ಅಂದಿನಿಂದ ಈ ಮಂದಿರವು ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಿದೆ.

 ವಲ್ಡ್‌ ಕಪ್‌ಗೂ ಮೊದಲು ಧೋನಿ ಪ್ರಾರ್ಥಿಸಿದ್ದರಂತೆ

ವಲ್ಡ್‌ ಕಪ್‌ಗೂ ಮೊದಲು ಧೋನಿ ಪ್ರಾರ್ಥಿಸಿದ್ದರಂತೆ

PC: youtube

ಮಹೇಂದ್ರ ಸಿಂಗ್ ಧೋನಿ ಯಾವುದೇ ಸೀರಿಸ್ ಆರಂಭವಾಗುವ ಮುನ್ನ ಈ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರಂತೆ. ಜೀವನದಲ್ಲಿ ಕಷ್ಟವೇ ಇರಲಿ ಅಥವಾ ಸುಖವೇ ಇರಲಿ ಧೋನಿ ಸೋಲಹ್ ಭುಜಿ ದೇವಿಯ ದರ್ಶನ ಮಾಡೋದನ್ನು ಯಾವತ್ತೂ ಮರೆಯೋದಿಲ್ಲ. 2011ರ ವಿಶ್ವಕಪ್ ಪಂದ್ಯದ ಮೊದಲು ಪಂದ್ಯದ ಯಶಸ್ಸಿಗಾಗಿ ಪ್ರಾರ್ಥಿಸಿದ್ದರಂತೆ. ಪಂದ್ಯ ಗೆದ್ದ ನಂತರ ಧೋನಿ ಪತ್ನಿ ಸಾಕ್ಷಿ ಜೊತೆ ಧನ್ಯವಾದ ತಿಳಿಸಲು ಆ ಮಂದಿರಕ್ಕೆ ತೆರಳಿದ್ದರಂತೆ. ಅಷ್ಟೇ ಅಲ್ಲದೆ 2009ರಲ್ಲಿ ತನ್ನ ಕೆರಿಯರ್‌ನ 5ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಧೋನಿ ದೇವ್ರಿ ಮಂದಿರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದರಂತೆ.

ದೇವ್ರಿ ಮಂದಿರ

ದೇವ್ರಿ ಮಂದಿರ

PC: TribhuwanKumar

ದೇವ್ರಿ ಮಂದಿರದಲ್ಲಿ ಕಾಳಿ ದೇವಿಯ ಮೂರ್ತಿ ಇದೆ. 3 1/2 ಫೀಟ್ ಎತ್ತರದ ಈ ಮೂರ್ತಿಗೆ 16 ಭುಜಗಳಿವೆ. ಈ ಮಂದಿರದಲ್ಲಿ ಸ್ಥಾಪಿಸಲಾಗಿರುವ ದೇವಿಯ ಮೂರ್ತಿಯು ಒಡಿಸಾದ ದೇವಿಯ ಮೂರ್ತಿಯಂತೆಯೇ ಇದೆ. ಈ ಮಂದಿರವನ್ನು ಪೂರ್ವ ಮಧ್ಯಕಾಲದಲ್ಲಿ1300 ಇಸವಿಯಲ್ಲಿ ಮುಂಡ ರಾಜ ಕೇರಾ ನಿರ್ಮೀಸಿದನು ಎನ್ನಲಾಗುತ್ತದೆ.

ಆದಿವಾಸಿ ಹಾಗೂ ಹಿಂದೂ ಸಂಸ್ಕೃತಿಯ ಸಂಗಮ

ಆದಿವಾಸಿ ಹಾಗೂ ಹಿಂದೂ ಸಂಸ್ಕೃತಿಯ ಸಂಗಮ

ಈ ಮಂದಿರವನ್ನು ಆದಿವಾಸಿ ಹಾಗೂ ಹಿಂದೂ ಸಂಸ್ಕೃತಿಯ ಸಂಗಮ ಎನ್ನಲಾಗುತ್ತದೆ. ಯಾಕೆಂದರೆ ಈ ಮಂದಿರದ ಫೂಜಾರಿ ಆದಿವಾಸಿಯಾಗಿರುತ್ತಾರೆ ಇವರು ವಾರದಲ್ಲಿ ಅರು ದಿನ ದೇವಿಯ ಪೂಜೆ ಮಾಡುತ್ತಾರೆ. ಕೇವಲ ಮಂಗಳವಾರದಂದು ಬ್ರಾಹ್ಮಣ ದೇವಿಯ ಪೂಜೆ ಮಾಡುತ್ತಾರೆ.

ದೇವಿಯ ಕ್ರೋದಕ್ಕೆ ಬಲಿಯಾಗಬೇಕು

ದೇವಿಯ ಕ್ರೋದಕ್ಕೆ ಬಲಿಯಾಗಬೇಕು

ದೇವ್ರಿ ದೇವಿಯ ಮಂದಿರವು ಸುಮಾರು 2 ಎಕರೆ ಜಮೀನಿನಲ್ಲಿ ಸ್ಥಾಪಿತವಾಗಿದೆ. ಇಲ್ಲಿ ದೇವ್ರಿಯನ್ನು ಹೊರತುಪಡಿಸಿ ಶಿವನ ಮೂರ್ತಿ ಕೂಡಾ ಇದೆ. ಈ ಮಂದಿರದ ಕಟ್ಟುಪಾಡುಗಳನ್ನು ಬದಲಿಸಲು ಪ್ರಯತ್ನಿಸಿದರೋ ಅವರಿಗೆ ದೇವಿಯ ಕ್ರೋದಕ್ಕೆ ಒಳಗಾಗಬೇಕಾಗುತ್ತದೆ. ಹಾಗೆಯೇ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ನವರಾತ್ರಿಯಂದು ಭಕ್ತರ ದಂಡೇ ಇರುತ್ತದೆ

ನವರಾತ್ರಿಯಂದು ಭಕ್ತರ ದಂಡೇ ಇರುತ್ತದೆ

PC: youtube

ನವರಾತ್ರಿಯಂದು ಬಹಳಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ನವರಾತ್ರಿ ಸಂದರ್ಭ ಇಲ್ಲಿ 20-30 ಸಾವಿರ ಭಕ್ತರು ದೇವಿಯ ಆಶೀರ್ವಾದ ಪಡೆಯಲು ಬರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X