Search
  • Follow NativePlanet
Share
» »ಪರಶುರಾಮ ಗಣೇಶನ ದಂತ ತುಂಡರಿಸಿ ಏಕದಂತನಾಗಿಸಿದ್ದು ಇಲ್ಲೇ

ಪರಶುರಾಮ ಗಣೇಶನ ದಂತ ತುಂಡರಿಸಿ ಏಕದಂತನಾಗಿಸಿದ್ದು ಇಲ್ಲೇ

ಗಣೇಶನನ್ನು ಏಕದಂತ ಎಂದು ಕರೆಯುತ್ತಾರೆ. ಆದರೆ ಗಣೇಶನನ್ನು ಏಕದಂತ ಎಂದು ಕರೆಯಲು ಕಾರಣ ಏನು? ಯಾಕಾಗಾಗಿ ಗಣೇಣನಿಗೆ ಒಂದೇ ದಂತ ಇದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಅದಕ್ಕೆ ಕಾರಣ ಪರಶುರಾಮನಂತೆ, ಅದಕ್ಕೆ ಸಂಬಂಧಿಸಿದ ಒಂದು ತಾಣ ಇಲ್ಲಿದೆ.

ಡೋಲ್‌ಕಲ್ ಗಣೇಶ

ಡೋಲ್‌ಕಲ್ ಗಣೇಶ

ಚತ್ತೀಸ್‌ಘಡ್‌ನ ದಾಂತೇವಾಡದಲ್ಲಿದೆ. ಗ್ರಾನೈಟ್‌ನಿಂದ ನಿರ್ಮಿಸಲಾಗಗಿರುವ ಮೂರು ಫೀಟ್ ಎತ್ತರದ ಗಣೇಶನ ವಿಗ್ರಹ,. ಫಾರಸ್ಪಲ್‌ನ ಬೆಟ್ಟದ ತುದಿಯಲ್ಲಿ ಡೋಲ್‌ಕಲ್ ಗಣೇಶ ಕಾಣಸಿಗುತ್ತದೆ. ಇಲ್ಲಿರುವಂತಹ ಗಣೇಶನ ಪ್ರತಿಮೆ ಬೇರೆಲ್ಲೂ ಕಾಣಸಿಗುವುದಿಲ್ಲ.

ಈ ಜಲಪಾತದ ನೀರು ಪಾಪಿಗಳ ಮೈ ಮೇಲೆ ಬೀಳೋದಿಲ್ಲವಂತೆ !ಈ ಜಲಪಾತದ ನೀರು ಪಾಪಿಗಳ ಮೈ ಮೇಲೆ ಬೀಳೋದಿಲ್ಲವಂತೆ !

ಏಕದಂತ ಎನ್ನುವುದಕ್ಕೆ ಉತ್ತರ ಇಲ್ಲಿದೆ

ಏಕದಂತ ಎನ್ನುವುದಕ್ಕೆ ಉತ್ತರ ಇಲ್ಲಿದೆ

ಏಕದಂತ ಎನ್ನುವುದಕ್ಕೆ ಉತ್ತರ ಇಲ್ಲಿದೆ. ಗಣೇಶನ ಆರತಿಯಲ್ಲಿ ಏಕದಂತ ಹೇಳುತ್ತಾರೆ. ಆದರೆ ಯಾಕೆ ಹೇಳ್ತಾರೆ ಅನ್ನೋದು ನಿಮಗೆ ಗೊತ್ತಾ? ಪರಶುರಾಮನ ಕೊಡಲಿಯಿಂದ ಗಣೇಶನ ದಂತ ತುಂಡಾದ ಸ್ಥಳ ಇದಾಗಿದೆ ಎನ್ನಲಾಗುತ್ತದೆ.

ಪುರಾಣದ ಕಥೆ

ಪುರಾಣದ ಕಥೆ

ಶಿವನನ್ನು ಭೇಟಿಯಾಗಲು ಕೈಲಾಶಕ್ಕೆ ಬಂದ ಪರಶುರಾಮನನ್ನು ಅಲ್ಲೇ ಕಾವಲು ಕಾಯುತ್ತಿದ್ದ ಗಣೇಶನು ತಡೆದು ತನ್ನ ಸೊಂಡಿಲಿನಿಂದ ಸುತ್ತಿ ಭೂಲೋಕಕ್ಕೆ ತಂದು ಈ ಬೆಟ್ಟದ ಮೇಲೆ ತಂದು ಹಾಕಿದನು ಎನ್ನಲಾಗುತ್ತದೆ. ಎಚ್ಚರ ಗೊಂಡ ಪರಶುರಾಮ ಕೋಪದಿಂದ ತನ್ನ ಕೊಡಲಿಯಿಂದ ಕೊಡಲಿಯಿಂದ ಗಣೇಶನ ಒಂದು ದಂತವನ್ನು ತುಂಡರಿಸಿದನು. ಆ ಸ್ಥಳ ಇದೇ ಆಗಿದೆ.

ಮಣಿ ಮಹೇಶ್‌ ಕೈಲಾಸ ಪರ್ವತದ ಮಣಿಯ ರಹಸ್ಯ ಗೊತ್ತಾ? ಮಣಿ ಮಹೇಶ್‌ ಕೈಲಾಸ ಪರ್ವತದ ಮಣಿಯ ರಹಸ್ಯ ಗೊತ್ತಾ?

 ಪಾರಸ್ಪಾಲ್

ಪಾರಸ್ಪಾಲ್

ಈ ಘಟನೆಯ ನೆನಪಿಗಾಗಿ ಇಲ್ಲಿನ ಚಿಂತಕ ನಾಗವಂಶಜರು ಗಣೇಶನ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ. ಅಲ್ಲದೆ ಈ ಪರ್ವತದ ಕೆಳಗಿನ ಊರಿನ ಹೆಸರನ್ನು ಪಾರಸ್ಪಾಲ್ ಎಂದು ಇಡಲಾಯಿತು.. ಇದರ ಪಕ್ಕದಲ್ಲಿ ಪಹರೇದಾರ್ ಎನ್ನುವ ಊರಿದೆ. ಇಲ್ಲಿ ಗಣೇಶನನ್ನು ಊರಿನ ರಕ್ಷಕ ಎಂದು ನಂಬಲಾಗಿದೆ.

5 ಕಿ.ಮೀ ಟ್ರಕ್ಕಿಂಗ್

5 ಕಿ.ಮೀ ಟ್ರಕ್ಕಿಂಗ್

ಪಾರಸ್ಪಾಲ್ ಬೆಟ್ಟದ ಮೇಲಿರುವ ಈ ಗಣೇಶನ ವಿಗ್ರಹವನ್ನು ನೋಡಲು 5 ಕಿ.ಮೀ ಟ್ರಕ್ಕಿಂಗ್ ಮಾಡಿಕೊಂಡು ಇಲ್ಲಿಗೆ ತಲುಪಬಹುದು. ಈ ಪ್ರತಿಮೆ ಇಲ್ಲಿಗೆ ಹೇಗೆ ಬಂತು ಎನ್ನುವುದು ಗೊತ್ತಿಲ್ಲ. 9ನೇ ಶತಮಾನದಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎನ್ನಲಾಗುತ್ತದೆ.

ಪ್ರತಿಯೊಬ್ಬ ಮೋಟರ್ ಬೈಕ್ ಸವಾರರು ಹೋಗಲೇಬೇಕಾದಂತಹ ರೋಡ್ ಟ್ರಿಪ್‌ಗಳಿವುಪ್ರತಿಯೊಬ್ಬ ಮೋಟರ್ ಬೈಕ್ ಸವಾರರು ಹೋಗಲೇಬೇಕಾದಂತಹ ರೋಡ್ ಟ್ರಿಪ್‌ಗಳಿವು

ನಾಗವಂಶಜರ ಕಾಲದ ಗಣೇಶನ ವಿಗ್ರಹ

ನಾಗವಂಶಜರ ಕಾಲದ ಗಣೇಶನ ವಿಗ್ರಹ

ಪರಶುರಾಮನ ಕೊಡಲಿಯಿಂದ ಒಂದು ದಂತ ತುಂಡಾದರಿಂದ ಈ ಬೆಟ್ಟದ ಕೆಳಗೆ ಗಣೇಶನ ಮೂರ್ತಿ ನೋಡುತ್ತಿದ್ದಂತೆ ಪ್ರವಾಸಿಗರ ಆಯಾಸವೆಲ್ಲಾ ದೂರವಾಗುತ್ತದೆ. ಗಣೇಶನ ಮೂರ್ತಿಯ ಹೊಟ್ಟೆಯ ಬಳಿ ಹಾವು ಇದೆ. ನಾಗವಂಶಜರು ತಮ್ಮ ಸಮುದಾಯದ ಗುರುತಿಗಾಗಿ ಗಣೇಶನ ಹೊಟ್ಟೆತಲ್ಲಿ ಹಾವನ್ನು ಕೆತ್ತಿದ್ದಾರೆ ಎನ್ನಲಾಗುತ್ತದೆ,.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X