Search
 • Follow NativePlanet
Share
ಮುಖಪುಟ » ಸ್ಥಳಗಳು» ಛತ್ತೀಸಗಡ್

ಛತ್ತೀಸಗಡ್ : ಬುಡಕಟ್ಟು, ಪುರಾತತ್ವ ಶಾಸ್ತ್ರ ಮತ್ತು ಪ್ರಕೃತಿಯ ಸುಂದರ ಸಮ್ಮಿಲನ

ಛತ್ತೀಸಗಡ್ ಭಾರತದ 10 ನೇ ದೊಡ್ಡ ರಾಜ್ಯ ಮತ್ತು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 16 ನೇ ರಾಜ್ಯ. ಭಾರತದ ವಿದ್ಯುತ್ ಉತ್ಪಾದನೆಗೆ ಮತ್ತು ಉಕ್ಕಿಗೆ ಪ್ರಸಿದ್ಧಿ ಪಡೆದಿರುವ ರಾಜ್ಯಗಳಲ್ಲಿ ಒಂದಾದ ಛತ್ತೀಸಗಡ್ ನವೆಂಬರ್ 1, 2000 ರಲ್ಲಿ ಮಧ್ಯಪ್ರದೇಶದಿಂದ ವಿಭಜನೆಗೊಂಡು ಪ್ರತ್ಯೇಕ ರಾಜ್ಯವಾಯಿತು. ರಾಯಪುರ ಇದರ ರಾಜಧಾನಿ ಮತ್ತು ಇದು ಮಹಾರಾಷ್ಟ್ರ, ಆಂಧ್ರ ಪ್ರದೇಶ, ಒರಿಸ್ಸಾ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ.

ಛತ್ತೀಸಗಡ್ ಮೊದಲು ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ದಕ್ಷಿಣ ಕೋಸಲವಾಗಿತ್ತು. 36 ಖಂಬಗಳನ್ನು ಹೊಂದಿದ ಛತ್ತೀಸಗಡ್ ದೇವಿ ದೇವಾಲಯ ಈ ಹೆಸರು ಬರಲು ಕಾರಣ ಎನ್ನಬಹುದು.

ಹವಾಮಾನ ಮತ್ತು ಭೂಗೋಳ

ಛತ್ತೀಸಗಡ್ ದ ಉತ್ತರ ಮತ್ತು ದಕ್ಷಿಣ ಭಾಗಗಳು ಗುಡ್ಡಗಾಡು ಪ್ರದೇಶವಾಗಿದೆ. ರಾಜ್ಯದ ಅರ್ಧದಷ್ಟು ಭಾಗ ಪತನಶೀಲ ಕಾಡುಗಳಿಂದ ಕೂಡಿದೆ. ಗಂಗಾನದಿ ಮತ್ತು ಮಹಾನದಿ ಜಲಾಶಯಗಳು ಈ ಪ್ರದೇಶದಲ್ಲಿ ಹರಿದು ಭೂಮಿಯನ್ನು ಫಲವತ್ತಾಗಿಸುತ್ತದೆ.

ಉಷ್ಣವಲಯದ ಹವಾಗುಣ ಛತ್ತೀಸ್ಗಡದಲ್ಲಿ ಪ್ರಬಲವಾಗಿದೆ. ಚಳಿಗಾಲವು ಹಿತಕರವಾಗಿರುತ್ತದೆ, ಅದೇ ಬೇಸಿಗೆ ಋತುವಿನಲ್ಲಿ ಸಾಕಷ್ಟು ಬಿಸಿಯಾಗಿರುತ್ತದೆ.  ಮಳೆ ಸರಾಸರಿಯಾಗಿರುತ್ತದೆ. ನವೆಂಬರ್ ನಿಂದ ಜನವರಿ ಪ್ರವಾಸಿಗರಿಗೆ ಇಲ್ಲಿ ಭೇಟಿ ನೀಡಲು ಸೂಕ್ತ ಕಾಲವಾಗಿದೆ.

ಛತ್ತೀಸಗಡ್ ರೈಲು ಮಾರ್ಗ ಮತ್ತು ರಸ್ತೆ ಮಾರ್ಗದಲ್ಲಿ ಸರಿಯಾದ ಸಂಪರ್ಕ ಸೌಲಭ್ಯ ಹೊಂದಿದೆ. 11 ರಾಷ್ಟ್ರೀಯ ಹೆದ್ದಾರಿಗಳು ರಾಜ್ಯದ ಮೂಲಕ ಹಾದುಹೋದರೆ ರಾಜ್ಯ ಹೆದ್ದಾರಿಗಳು ಇತರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಮುಖ್ಯ ರೈಲ್ವೇ ಜಂಕ್ಷನ್ ಆದ ಬಿಲಾಸ್ಪುರದ ಜೊತೆಗೆ ದುರ್ಗಾ ಮತ್ತು ರಾಯ್ ಪುರದ ಮೇಲೆ ಹೋಗುವ ರೈಲುಗಳೂ ಕೂಡ ಭಾರತದ ಇತರ ನಗರಗಳ ಜೊತೆಗೆ ಸಂಪರ್ಕ ಕಲ್ಪಿಸುತ್ತವೆ. ರಾಯಪುರದಲ್ಲಿರುವ ಸ್ವಾಮೀ ವಿವೇಕಾನಂದ ವಿಮಾನ ನಿಲ್ದಾಣ ರಾಜ್ಯದಲ್ಲಿರುವ ಏಕೈಕ ವಿಮಾನ ನಿಲ್ದಾಣವಾಗಿದ್ದು ವಾಣಿಜ್ಯ ವಿಮಾನ ಸೌಲಭ್ಯ ಒದಗಿಸುತ್ತದೆ.

ಛತ್ತೀಸಗಡ್ ಪ್ರವಾಸೋದ್ಯಮದ ವಿವಿಧ ಉದ್ದೇಶಗಳು

ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಪುರಾತತ್ವ ಉತ್ಖನದ ಮೂಲಕ ಛತ್ತೀಸಗಡ್ ನಾಗರೀಕತೆ ಪುರಾತನ ಕಾಲದಿಂದಲೂ ಇದೆ ಎಂಬುದು ತಿಳಿದುಬಂದಿದೆ. ಜೊತೆಗೆ ನೈಸರ್ಗಿಕ ಸೌಂದರ್ಯವನ್ನು ಕೂಡ ಹೊಂದಿದ ಛತ್ತೀಸಗಡ್ ಕಾಡು, ಪರ್ವತ, ವನ್ಯಜೀವಿಗಳು ಮತ್ತು ಸಮ್ಮೋಹನಗೊಳಿಸುವ ಅಮೋಘ ಜಲಪಾತಗಳನ್ನು ಹೊಂದಿದೆ.

ಇಲ್ಲಿರುವ ಕೆಲವು ಜಲಪಾತಗಳೆಂದರೆ ಚಿತ್ರಕೋಟೆ ಫಾಲ್ಸ್, ತಿರತಗಡ ಫಾಲ್ಸ್, ಚಿತ್ರದಾರ ಜಲಪಾತ, ತಮರ ಘೋಮರ್ ಜಲಪಾತ, ಮಾಂಡವ ಫಾಲ್ಸ್, ಕಂಗೇರ್ ಧಾರಾ, ಅಕುರಿ ನಳ, ಗವರ್ ಘಾಟ್ ಫಾಲ್ಸ್ ಮತ್ತು ರಾಮದಾಹ ಜಲಪಾತ.  

ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿರುವ ಪ್ರಾಚೀನ ಸ್ಮಾರಕಗಳು ಮತ್ತು ದೇವಸ್ಥಾನಗಳು  ಛತ್ತೀಸ್ಗಢದ ಪ್ರವಾಸೋದ್ಯಮದ ಒಂದು ಭಾಗವಾಗಿದೆ. ಭಾರತದ ಹೃದಯವಾದ ಈ ದೇವಸ್ಥಾನಗಳು ಮತ್ತು ಸ್ಮಾರಕಗಳನ್ನು ಅನ್ವೇಷಿಸಲು ಪ್ರವಾಸಿಗರಿಗೆ ಅದ್ಬುತ ಅವಕಾಶಗಳನ್ನು ಇದು ಒದಗಿಸಿಕೊಡುತ್ತದೆ. ಪುರಾತತ್ವ ಪ್ರಾಮುಖ್ಯತೆಯನ್ನು ಹೊಂದಿರುವ ಮಲ್ಹಾರ, ರತನಪುರ, ಸಿರಪುರ ಮತ್ತು ಸರ್ಜಾಪುರ ಇವುಗಳನ್ನು ಭೇಟಿ ನೀಡುವುದು ಸೂಕ್ತ ಎಂದೆನಿಸುತ್ತದೆ.

ಪ್ರಕೃತಿ ಪ್ರಿಯರಿಗೆ ಬಸ್ತಾರ ಉತ್ತಮ ಸ್ಥಳ. ಇಲ್ಲಿರುವ ಬಿಸಿನೀರಿನ ಬುಗ್ಗೆಗಳು ಮತ್ತು ಗುಹೆಗಳು ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳವಾಗಿದೆ. ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಮತ್ತು ಜಗ್ದಾಲ್ಪುರ್ ನಲ್ಲಿರುವ ಕಂಗೆರ್ ಘಟಿ ರಾಷ್ಟ್ರೀಯ ಪಾರ್ಕ್, ರಾಜ್ ಘಡ್ ನ ಗೋಮರ್ದ ರಿಸರ್ವ್ ಫಾರೆಸ್ಟ್, ಬರ್ನವಪರ  ವನ್ಯಜೀವಿ ಅಭಯಾರಣ್ಯ, ಬಿಲಾಸ್ ಪುರದಲ್ಲಿರುವ ಅಚಾನಕ್ ಮಾರ್ ವನ್ಯಮೃಗ ಸಂರಕ್ಷಣಾ ಉದ್ಯಾನವನ ಮತ್ತು ಧಮ್ ತರಿಯಲ್ಲಿರುವ ಸಿತನಾಡಿ  ವನ್ಯಮೃಗ ರಾಜ್ಯದಲ್ಲಿ ಹೆಸರುವಾಸಿಯಾದ  ವನ್ಯಜೀವಿ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನಗಳಲ್ಲಿ ಕೆಲವು.

ಕೋತುಮಸರ ಗುಹೆಗಳು, ಗಡಿಯಾ ಬೆಟ್ಟಗಳು, ಕೈಲಾಶ ಗುಹೆಗಳು ಇನ್ನೂ ಕೆಲವು ಗುಹೆಗಳು ಪೂರ್ವ ಐತಿಹಾಸಿಕ ಸ್ಥಳಗಳು ಅಥವಾ ಯಾತ್ರಾ ಸ್ಥಳಗಳಾಗಿ ಹೆಸರುವಾಸಿಯಾಗಿವೆ. ಕವಾರ್ಧಾದ ಭೋರಾಮ್ ದೇವ ದೇವಸ್ಥಾನ, ರಾಯ್ ಪುರ್ ನ ಚಂಪಾರಣ್, ದಾಂತೇವಾಡಾದ ದಾಂತೇಶ್ವರಿ ದೇವಾಲಯ, ಜಂಜ್ ಗಿರ್-ಚಂಪಾದ  ದಾಮುದಾರ, ಮಹಾಮಾಯಾ ದೇವಾಲಯ ಇವುಗಳು ಭಕ್ತರು ವರ್ಷಪೂರ್ತಿ ಬರುವ ಯಾತ್ರಾ ಸ್ಥಳಗಳಾಗಿವೆ.

ಜಗ್ದಾಲ್ಪುರ್ ನಲ್ಲಿರುವ  ಮಾನವಶಾಸ್ತ್ರದ  ಮ್ಯೂಸಿಯಂ ಬಸ್ತಾರ್ ಬುಡಕಟ್ಟಿನ ಜೀವನಶೈಲಿ ಮತ್ತು ಸಂಸ್ಕೃತಿಯನ್ನು ತಿಳಿಸುವ ಸಂಗ್ರಹಾಲಯವಾಗಿದೆ. ಜಗ್ದಾಲ್ಪುರದಲ್ಲಿರುವ ಬಸ್ತಾರ್ ಅರಮನೆ ಇನ್ನೊಂದು ಐತಿಹಾಸಿಕ ಆಕರ್ಷಣೆಯಾಗಿದೆ. ಒಂದಾನೊಂದು ಕಾಲದಲ್ಲಿ ಈ ಅರಮನೆ ಬಸ್ತಾರ್ ರಾಜವಂಶದ ಕೇಂದ್ರವಾಗಿತ್ತು ಈಗ ಇದು ಸಂಪೂರ್ಣವಾಗಿ ಸರ್ಕಾರದ ಹಿಡಿತದಲ್ಲಿದೆ. ಇವೆಲ್ಲವುಗಳು ಮತ್ತು ಇನ್ನೂ ಹಲವು ಸೇರಿ ಛತ್ತೀಸಗಡ ದ ಪ್ರವಾಸೋದ್ಯಮವನ್ನು ಇನ್ನಷ್ಟು ಪ್ರಖ್ಯಾತವಾಗಿಸುತ್ತದೆ.

ಛತ್ತೀಸಗಡ್ - ಜನರು,ಸಂಸ್ಕೃತಿ ಮತ್ತು ಹಬ್ಬಗಳು

ಛತ್ತೀಸಗಡ್ ಪ್ರವಾಸೋದ್ಯಮ ಪ್ರದೇಶದ ನಿವಾಸಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಲ್ಲಿ ಪ್ರಮುಖವಾಗಿ ಗ್ರಾಮೀಣ ಜನಪದರನ್ನು ಕಾಣಬಹುದು. ಇಲ್ಲಿ ಹೆಚ್ಚಾಗಿ ಬುಡಕಟ್ಟು ಜನಾಂಗದವರಾದ ಗೊಂಡ, ಹಲ್ಬಿ, ಕಮಾರ್ ಮತ್ತು ಓರಾನ್ ಜನಾಂಗದವರು ನೆಲಸಿದ್ದಾರೆ. ಸ್ಥಳೀಯ ಜನರು ಹಿಂದಿ ಭಾಷೆಯನ್ನು ಮಾತನಾಡಿದರೆ, ಆಡುಭಾಷೆ ಹಿಂದಿಯನ್ನು ಗ್ರಾಮೀಣ ಜನಪದ ಜನರು ಮಾತನಾಡುತ್ತಾರೆ. ಕೆಲವು ಬುಡಕಟ್ಟು ಜನಾಂಗದವರು ಕೋಸಾಲಿ, ಒರಿಯ ಮತ್ತು ತೆಲುಗು ಭಾಷೆಯನ್ನು ಕೂಡ ಮಾತನಾಡುತ್ತಾರೆ.

ಇಲ್ಲಿ ಮಹಿಳೆಯರು ಗ್ರಾಮೀಣ ಪ್ರದೇಶದಿಂದ ಬಂದವರಾದರೂ ಸ್ವತಂತ್ರರಾಗಿದ್ದಾರೆ. ಇಲ್ಲಿನ ಹೆಚ್ಚಿನ ಪ್ರಾಚೀನ ದೇವಾಲಯಗಳು ದೇವತೆಗಳ ದೇಗುಲವಾಗಿದ್ದು ಮಹಿಳೆಯರಿಗೆ ಇಲ್ಲಿ ನೀಡುವ ಸ್ಥಾನಮಾನವನ್ನು ತೋರಿಸುತ್ತದೆ. ಇಲ್ಲಿನ ಗ್ರಾಮೀಣ ಜನರು ವಾಮಾಚಾರವನ್ನು ನಂಬುತ್ತಾರೆ.

ಈ ಸ್ಥಳದಲ್ಲಿ ವಿವಿಧ ಪಂಗಡದ ಜನರು ಜೀವಿಸುತ್ತಿದ್ದಾರೆ. ಸಂತ ವಲ್ಲಭಾಚಾರ್ಯ ಅವರ ಜನ್ಮಸ್ಥಳವಾದ ಚಂಪಾರಣ್ ನಿಧಾನವಾಗಿ ಗುಜರಾತಿ ಸಮುದಾಯದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಒರಿಸ್ಸಾವನ್ನು ಗಡಿಯಾಗಿ ಹಂಚಿಕೊಳ್ಳುವ ಪ್ರದೇಶಗಳಲ್ಲಿ ಒರಿಯಾ ಸಂಸ್ಕೃತಿ ಕೂಡ ಪ್ರಸಿದ್ಧತೆ ಪಡೆದಿದೆ.

ಕೋಸ ರೇಷ್ಮೆ ಸೀರೆ ಮತ್ತು ಸಲ್ವಾರ್ ಗಳು ಭಾರತದಾದ್ಯಂತ ಹೆಸರುವಾಸಿಯಾಗಿದೆ. ಪಂಥಿ, ರಾವತ್ ನಾಚಾ, ಕರ್ಮ, ಪಂದ್ವಾನಿ, ಚೈತ್ರ, ಕಕ್ಸಾರ್ ಇವುಗಳು ಛತ್ತೀಸಗಡಿನ ಕೆಲವು ಸ್ಥಳೀಯ ನೃತ್ಯಗಳು. ಇಲ್ಲಿನ ಜನರು ರಂಗಭೂಮಿ ಕಡೆಗೆ ಕೂಡ ಆಸಕ್ತಿ ಹೊಂದಿದವರು. ಜೊತೆಗೆ ಚತ್ತೀಸ್ ಘಡ ವನ್ನು 'ಮಧ್ಯಭಾರತದ ಅನ್ನದ ಪಾತ್ರೆ'ಎಂದು ಕೂಡ ಕರೆಯಲಾಗುತ್ತದೆ. ಬಹುತೇಕ ಸಾಂಪ್ರದಾಯಿಕ ಮತ್ತು ಬುಡಕಟ್ಟು ಜನಾಂಗದವರು ಅಕ್ಕಿ ಮತ್ತು ಅಕ್ಕಿ ಹಿಟ್ಟನ್ನು ಬಳಸಿ ಆಹಾರ ತಯಾರಿಸುತ್ತಾರೆ. ಈ ಸ್ಥಳದ ಸ್ಥಳೀಯ ಸಿಹಿ ತಿಂಡಿಗಳು ಕೂಡ ಜನರ ಚಿರಪರಿಚಿತ ತಿಂಡಿಯಾಗಿದೆ.

ಛತ್ತೀಸಗಡ್  ನಗರದ ಜನರು ಅರಣ್ಯಗಳು ಮತ್ತು ಖನಿಜಗಳ ರೀತಿಯ ನೈಸರ್ಗಿಕ ಸಂಪನ್ಮೂಲಗಳಿಂದ ವಿದ್ಯುತ್, ಉಕ್ಕು, ಅಲ್ಯುಮೀನಿಯಂ ಮತ್ತು ಕೃಷಿ ಇನ್ನಿತರ ಹಲವಾರು ಕೈಗಾರಿಕಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ರಾಜ್ಯವು ಶೈಕ್ಷಣಿಕವಾಗಿ ಕೂಡ ಮುಂದುವರೆದಿದೆ ಮತ್ತು ರಾಜ್ಯದಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು ತಲೆಯೆತ್ತುತ್ತಿವೆ. 

ಛತ್ತೀಸಗಡ್ ಸ್ಥಳಗಳು

 • ಕೋರಿಯ 16
 • ಬಿಲಾಸಪುರ್ 33
 • ಸುರ್ಗುಜಾ 26
 • ಕೊರ್ಬಾ 7
 • ಜಶ್ಪುರ್ 19
One Way
Return
From (Departure City)
To (Destination City)
Depart On
29 Nov,Sun
Return On
30 Nov,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Nov,Sun
Check Out
30 Nov,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Nov,Sun
Return On
30 Nov,Mon