ತಂಡುಲಾ ಹಾಗು ಸುಖ ನಾಲಾ ನದಿಗಳ ಸಂಗಮದಲ್ಲಿ ನಿರ್ಮಿಸಲಾದ ಈ ಜಲಾಶಯವು ದುರ್ಗ್ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದೆ. ಇದರ ಕಾಮಗಾರಿಯನ್ನು 1912 ರಲ್ಲಿ ಪೂರ್ಣಗೊಳಿಸಲಾಯಿತು. ಬಲೋಡಾ ದಿಂದ 5 ಕಿ.ಮೀ ದೂರದಲ್ಲಿರುವ ಈ ಆಣೆಕಟ್ಟು ಜಲಾಶಯವು 827.2 ಚ.ಕಿ.ಮೀ ವ್ಯಾಪ್ತಿಯಲ್ಲಿ ಹರಡಿದೆ. ಇದರ ಒಟ್ಟು ನೀರಿನ ಸಾಮರ್ಥ್ಯ ಸುಮಾರು 312.25 ಮಿಲ್ಲಿಯನ್ ಕ್ಯೂಬಿಕ್ ಮೀಟರ್.