ಪುರಾತನ ಶಿವ ದೇವಾಲಯಕ್ಕೆ ಹೆಸರುವಾಸಿಯಾಗಿರುವ ದೇವ್ಬಲೊಡಾ, ಚರೋಡಾನಲ್ಲಿರುವ ಒಂದು ಸಣ್ಣ ಪಟ್ಟಣವಾಗಿದ್ದು, ಭಿಲಾಯಿಯಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಇಲ್ಲಿರುವ ಈ ಶಿವ ದೇಗುಲವು ಐದನೇಯ ಶತಮಾನದ್ದಾಗಿದೆ. ಈ ದೇಗುಲದ ಬಳಿಯಿರುವ ಕೊಳವು ವಿಶೇಷವಾಗಿದ್ದು, ಆಂತರಿಕವಾಗಿ ಛತ್ತೀಸಗಡ್ ನ ಮತ್ತೊಂದು ನಗರವಾದ ಅರಂಗ್ ಗೆ ಸಂಪರ್ಕ ಹೊಂದಿದೆ ಎಂದು ಹೇಳಲಾಗುತ್ತದೆ.
ಕ್ರಿಯಾತ್ಮಕವಾಗಿ ನಿರ್ಮಿಸಲಾದ ಈ ದೇವಾಲಯದಲ್ಲಿ ಶಿವ, ಗಣೇಶನಂತಹ ದೇವರುಗಳಲ್ಲದೆ, ನರ್ತಿಸುತ್ತಿರುವ ಜನರು, ಯೋಧರು, ಪ್ರಾಣಿಗಳುಹೀಗೆ ವಿವಿಧ ವಿನ್ಯಾಸಗಳನ್ನು ಕೆತ್ತಲಾಗಿದೆ. ಇವುಗಳಲ್ಲದೆ ನಂದಿಯ ವಿಗ್ರಹ ಹಾಗು ಕಾಮಪ್ರಚೋದನೆಯ ಕೆತ್ತನೆಗಳನ್ನು ಇಲ್ಲಿ ಕಾಣಬಹುದು.