Search
  • Follow NativePlanet
Share
» »ಧನುಷ್ಕೋಡಿ ನಾಶವಾಗುತ್ತದೆಯೇ? ವಿಜ್ಞಾನದ ಮಾತಿದು............

ಧನುಷ್ಕೋಡಿ ನಾಶವಾಗುತ್ತದೆಯೇ? ವಿಜ್ಞಾನದ ಮಾತಿದು............

ಇಂದಿನ ಪೀಳಿಗೆಯ ಜನರಿಗೆ ಸಾಮಾನ್ಯವಾಗಿ ಧನುಷ್ಕೋಡಿ ತಮಿಳುನಾಡಿನಲ್ಲಿದೆ ಎಂದು ಗೊತ್ತು. ಪ್ರವಾಸಿಗರು ಧನುಷ್ಕೋಡಿಗೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಸ್ವಲ್ಪ ಹಳೆಯ ವ್ಯಕ್ತಿಗಳನ್ನು ನೀವು ಭೇಟಿ ಮಾಡಿ ಕೇಳಿದರೆ ಧನುಷ್ಕೋಡಿ ಹಿಂದಿನ ಸೌಂದರ್ಯ ಹೇ

ಇಂದಿನ ಪೀಳಿಗೆಯ ಜನರಿಗೆ ಸಾಮಾನ್ಯವಾಗಿ ಧನುಷ್ಕೋಡಿ ತಮಿಳುನಾಡಿನಲ್ಲಿದೆ ಎಂದು ಗೊತ್ತು. ಪ್ರವಾಸಿಗರು ಧನುಷ್ಕೋಡಿಗೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಸ್ವಲ್ಪ ಹಳೆಯ ವ್ಯಕ್ತಿಗಳನ್ನು ನೀವು ಭೇಟಿ ಮಾಡಿ ಕೇಳಿದರೆ ಧನುಷ್ಕೋಡಿ ಹಿಂದಿನ ಸೌಂದರ್ಯ ಹೇಗಿತ್ತು ಎಂಬುದನ್ನು ವಿವರವಾಗಿ ವಿವರಿಸುತ್ತಾರೆ.

ಯಾವುದೇ ಒಂದು ಜೀವಿಯಾಗಲೀ ಅಂತ್ಯ ಸಮೀಪಿಸಿದಾಗ ಅದರ ನಾಶವಾಗುವುದು ಖಚಿತ. ಅದು ಯಾವುದೇ ಸೂಕ್ಷ್ಮ ಜೀವಿಯಿಂದ ಹಿಡಿದು ಮಾನುಷ್ಯರವರೆವಿಗೂ ಕೂಡ ಅದು ನಿಜ. ನಾಶದ ವಿಚಾರಕ್ಕೆ ಬಂದರೆ ತಮಿಳುನಾಡಿನ ಧನುಷ್ಕೋಡಿ ನಾಶವಾಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಹೇಗೆ ನಾಶವಾಗಲಿದೆ? ಏಕೆ ನಾಶವಾಗಲಿದೆ? ಇದಕ್ಕೆ ಕಾರಣವಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಲೇಖನದ ಮೂಲಕ ಪಡೆಯಿರಿ....

ಸುನಾಮಿ 2004

ಸುನಾಮಿ 2004

2004ರಲ್ಲಿ ಸುನಾಮಿ ಬಂದ ಪರಿಣಾಮ ತಮಿಳುನಾಡು ಸೇರಿದಂತೆ ವಿಶ್ವದ ಹಲವಾರು ಸ್ಥಳಗಳು ನಾಶವಾದವು. ಅವುಗಳಲ್ಲಿ ತಮಿಳುನಾಡಿನ ಧನುಷ್ಕೋಡಿ ಕೂಡ ಒಂದಾಗಿದೆ.

ಯುವ ಜನರಿಗೆ ತಿಳಿದಿದೆ

ಯುವ ಜನರಿಗೆ ತಿಳಿದಿದೆ

ಇಂದಿನ ಯುವ ಜನತೆಗೆ ಸಾಮಾನ್ಯವಾಗಿ 2004 ರಲ್ಲಿ ನಡೆದ ಘಟನೆಯ ಬಗ್ಗೆ ಮಾತ್ರ ತಿಳಿದಿದೆ. ಆದರೆ 1964 ರಲ್ಲಿ ಚಂಡ ಮಾರುತವಾಗಿ ಅಪಾರವಾಗಿ ನಷ್ಟವಾದ ಸಂಗತಿ ಯಾರಿಗೂ ತಿಳಿದಿಲ್ಲ.


PC:Nsmohan

ಧನುಷ್ಕೋಡಿ ನಾಶವಾಯಿತು

ಧನುಷ್ಕೋಡಿ ನಾಶವಾಯಿತು

1964, ಡಿಸೆಂಬರ್ 23 ರಲ್ಲಿ ಸುನಾಮಿ ಬಂದು ಧನುಷ್ಕೋಡಿ ಪಟ್ಟಣವನ್ನು ಸಂಪೂರ್ಣವಾಗಿ ಮುಳುಗಿಸಿತು. ಇದರಿಂದಾಗಿ ತಮಿಳುನಾಡು ಸರ್ಕಾರಕ್ಕೆ ಅಪಾರ ನಷ್ಟ ಉಂಟಾಯಿತು.

PC:rajaraman sundaram

ರೈಲು ಮಾರ್ಗ

ರೈಲು ಮಾರ್ಗ

ಈ ಸುನಾಮಿಯಿಂದಾಗಿ ರೈಲು ಮಾರ್ಗ ಕೂಡ ನಾಶ ಹೊಂದಿತಂತೆ. ಇದರಿಂದಾಗಿ ಹಲವಾರು ಅಮಾಯಕ ಪ್ರಜೆಗಳು ತಮ್ಮ ಪ್ರಾಣವನ್ನು ಸುನಾಮಿಗೆ ಅರ್ಪಣೆ ಮಾಡಿದರಂತೆ. ಆ ರೈಲು ಪವಿತ್ರ ಪುಣ್ಯ ಕ್ಷೇತ್ರವಾದ ರಾಮೇಶ್ವರದಿಂದ ಚೆನ್ನೈಗೆ ಕರೆದೊಯ್ಯಲಾಗುತ್ತಿತ್ತಂತೆ.

PC:ShakthiSritharan

ಅಮಾಯಕರು ಮರಣ ಹೊಂದಿದರು

ಅಮಾಯಕರು ಮರಣ ಹೊಂದಿದರು

ಆ ಸಮಯದಲ್ಲಿ ಉಂಟಾದ ಸುನಾಮಿಯಿಂದಾಗಿ ಸಾವಿರಾರು ಮಂದಿ ಮರಣ ಹೊಂದಿದರು. ಈ ಘಟನೆಯ ಪರಿಣಾಮದಿಂದಾಗಿ ಸುಮಾರು 2,000 ಕ್ಕಿಂತ ಹೆಚ್ಚಾಗಿ ಸಾವನ್ನಪ್ಪಿ, ಇನ್ನು ಉಳಿದ ಕೆಲವು ಜನರು ಗಾಯದಿಂದ ಬಳಲುತ್ತಿದ್ದರು. ಇದೊಂದು ಭಾರತದ ಅಘಾತಕಾರಿ ಘಟನೆಯಾಗಿತ್ತು.

PC:Achuudayasanan

ಧನುಷ್ಕೋಡಿಯಲ್ಲಿ ವಾಸಿಸಲು ಯೋಗ್ಯವಲ್ಲ

ಧನುಷ್ಕೋಡಿಯಲ್ಲಿ ವಾಸಿಸಲು ಯೋಗ್ಯವಲ್ಲ

ಈ ಘಟನೆ ನಡೆದ ನಂತರ ತಮಿಳು ನಾಡು ಸರ್ಕಾರವು ಧನುಷ್ಕೋಡಿಯಲ್ಲಿ ವಾಸಿಸಲು ಯೋಗ್ಯವಲ್ಲದ ಸ್ಥಳವಾಗಿದೆ ಎಂದು ತೀರ್ಮಾನಕ್ಕೆ ಬಂದಿತು. ಹೀಗಾಗಿ ಸಾವಿರಾರು ಜನರು ತಮ್ಮ ಮನೆ, ಮಠ, ಆಸ್ತಿ, ಪಾಸ್ತಿಗಳನ್ನು ಬಿಟ್ಟು ರಾಮೇಶ್ವರಕ್ಕೆ ಸ್ಥಳಾಂತರಗೊಂಡರು.

PC:Drajay1976

ಮೂಕ ಸಾಕ್ಷಿ

ಮೂಕ ಸಾಕ್ಷಿ

ಸುನಾಮಿ ಬಂದ ನಂತರ ಅಲ್ಲಿನ ಸಾವಿರಾರು ನಿವಾಸಿಗಳು ರಾಮೇಶ್ವರಕ್ಕೆ ಸ್ಥಳಾಂತರವಾದ ನಂತರ ಧನುಷ್ಕೋಡಿ ಒಂದು ಮ್ಯೂಸಿಯಂನಂತೆ ಆಯಿತು. ಇಲ್ಲಿ ಕೇವಲ ಪಾಳುಬಿದ್ದ ಚರ್ಚ್‍ಗಳು ಮತ್ತು ಕೆಲವು ಕಟ್ಟಡಗಳಿಗೆ ಮಾತ್ರ ಉಳಿದವು. ಇದೊಂದು ದುರಂತಕ್ಕೆ ಮೂಕ ಸಾಕ್ಷಿಯಾಯಿತು.

PC:Soorajna

ಮೀನುಗಾರರು

ಮೀನುಗಾರರು

ಆದರೆ ಧನುಷ್ಕೋಡಿಯಲ್ಲಿ ಕೆಲವು ಮೀನುಗಾರರು ಮಾತ್ರ ಅಲ್ಲಿಯೇ ಉಳಿದುಕೊಂಡಿದ್ದಾರೆ. ಅವರು ಧನುಷ್ಕೋಡಿ ಬಿಟ್ಟು ಬೇರೆಲ್ಲೂ ಸ್ಥಳಾಂತರಗೊಳ್ಳಲು ಇಷ್ಟ ಪಡುವುದಿಲ್ಲ. ಧನುಷ್ಕೋಡಿಗೆ ಭೇಟಿ ನೀಡುವ ಪ್ರವಾಸಿಗರನ್ನು ನಂಬಿ ಇಲ್ಲಿನ ಮೀನುಗಾರರು ಜೀವನವನ್ನು ಸಾಗಿಸುತ್ತಿದ್ದಾರೆ.


PC:Nsmohan

ಹಾಟ್ ಹೋಟೆಲ್

ಹಾಟ್ ಹೋಟೆಲ್

ಕಳೆದ 20 ವರ್ಷಗಳಿಂದಲೂ ಕ್ರಮೇಣ ಅಭಿವೃದ್ಧಿಗೊಂಡ ಧನುಷ್ಕೋಡಿಯಲ್ಲಿನ ಹಾಟ್ ಹೋಟೆಲ್ ಈಗ ತಮಿಳುನಾಡಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಧನುಷ್ಕೋಡಿಗೆ ಭೇಟಿ ನೀಡುವ ಸಾಕಷ್ಟು ಪ್ರವಾಸಿಗರು ಈ ಹೊಟೆಲ್‍ಗೆ ಭೇಟಿ ನೀಡೇ ನೀಡುತ್ತಾರೆ.

PC:Chandra

ಪ್ಲಾಸ್ಟಿಕ್

ಪ್ಲಾಸ್ಟಿಕ್

ಇಲ್ಲಿ ಹಲವಾರು ಪ್ರವಾಸಿಗರು ಭೇಟಿ ನೀಡುವುದರಿಂದ ದೈತ್ಯಾಕಾರವಾಗಿ ಪ್ಲಾಸ್ಟಿಕ್ ಧನುಷ್ಕೋಡಿಯಲ್ಲಿ ಹರಡಿದೆ. ಸಾಮಾನ್ಯವಾಗಿ ಇಲ್ಲಿನ ಶುದ್ಧತೆಯ ಬಗ್ಗೆ ಯಾರು ಕೂಡ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ.


PC:TNSE Arumbumozhi vlr

ಧನುಷ್ಕೋಡಿ

ಧನುಷ್ಕೋಡಿ

1964 ರಲ್ಲಿ ಸಂಭವಿಸಿದ ದುರಂತದ ಪರಿಣಾಮಕ್ಕೆ ಉದಾಹರಣೆ ಈ ಚರ್ಚ್.


PC:Chenthil

ನಂದಿ

ನಂದಿ

ಇಲ್ಲಿ ಚರ್ಚ್‍ನಂತೆ ನಾಶವಾದ ಒಂದು ಶಿವಾಲಯ ಕೂಡ ನಾಶವಾಗಿದೆ. ಆ ಶಿವಾಲಯದ ನಂದಿಯು ಭಗವಾನ್ ಶಿವನಿಗೆ ಕಾಯುತ್ತಾ ಕುಳಿತಿದೆ.

PC:Rohithriaz

ಬೀಚ್

ಬೀಚ್

ಧನುಷ್ಕೋಡಿಯಲ್ಲಿನ ಬೀಚ್ ರಾಮೇಶ್ವರದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ.


PC:Nsmohan

ಧನುಷ್ಕೋಡಿ

ಧನುಷ್ಕೋಡಿ

ಧನುಷ್ಕೋಡಿಯ ಬಳಿ ಧನುಷ್ಕೋಡಿ ಅರೈಚು ಬೀಚ್‍ಗೆ ಕೂಡ ಸುನಾಮಿಯಿಂದಾಗಿ ಹಾನಿಯಾಗಿದೆ.


PC:Nsmohan


ರಾಮೇಶ್ವರ

ರಾಮೇಶ್ವರ

ಧನುಷ್ಕೋಡಿಯಿಂದ ರಾಮೇಶ್ವರಕ್ಕೆ ಕೇವಲ 20 ಕಿ.ಮೀ ದೂರದಲ್ಲಿದೆ.


PC:Nsmohan

ಧನುಷ್ಕೋಡಿ ರೈಲ್ವೆ ಸ್ಟೇಷನ್

ಧನುಷ್ಕೋಡಿ ರೈಲ್ವೆ ಸ್ಟೇಷನ್

ಇದು ಒಂದು ಕಾಲದಲ್ಲಿ ಧನುಷ್ಕೋಡಿಯ ರೈಲ್ವೆ ಮಾರ್ಗವಾಗಿತ್ತು. ಆದರೆ ಈಗ ರೈಲ್ವೆ ನಿಲ್ದಾಣ ಇಲ್ಲಿ ಇತ್ತೇ ಎಂಬ ಪರಿಸ್ಥತಿಗೆ ಬಂದಿದೆ.

PC:Nsmohan

ವಿಜ್ಞಾನಿಗಳು

ವಿಜ್ಞಾನಿಗಳು

ಧನುಷ್ಕೋಡಿ ಒಂದು ಚಿಕ್ಕದಾದ ಪ್ರದೇಶ ಇಲ್ಲಿಗೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಆದರೆ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದರಿಂದ ಮತ್ತೊಮ್ಮೆ ಧನುಷ್ಕೋಡಿ ನಾಶವಾಗುವ ಸೂಚನೆ ಇದೆ ಎಂದು ವಾದಿಸುತ್ತಿದ್ದಾರೆ.


PC:M.Mutta

ವಿಮಾನ ನಿಲ್ದಾಣ

ವಿಮಾನ ನಿಲ್ದಾಣ

ಈ ಧನುಷ್ಕೋಡಿಗೆ ತಲುಪಲು ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮಧುರೈ. ಇಲ್ಲಿಂದ ಧನುಷ್ಕೋಡಿಗೆ ಸುಮಾರು 198 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X