» »ಈ ದೇವಾಲಯದಲ್ಲಿ ದೇವರಿಗೆ ವಿಸ್ಕೀ ಅರ್ಪಿಸ್ತಾರೆ ಜನ

ಈ ದೇವಾಲಯದಲ್ಲಿ ದೇವರಿಗೆ ವಿಸ್ಕೀ ಅರ್ಪಿಸ್ತಾರೆ ಜನ

Written By: Rajatha

ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಒಂದು ಪುರಾತನ ವಿಶೇಷ ಹಿಂದೂ ದೇವಸ್ಥಾನವಿದೆ. ಈ ದೇವಾಲಯವೇ ಕಾಲ ಬೈರವ ದೇವಾಲಯ. ಈ ದೇವಸ್ಥಾನದ ವಿಶೇಷತೆಯೆಂದರೆ, ಇಲ್ಲಿ ಬರುವ ಭಕ್ತರು ದೇವರಿಗೆ ಸಾರಾಯಿಯನ್ನು ಅರ್ಪಿಸುತ್ತಾರೆ. ಮತ್ತೆ ಅದೇ ಸಾರಾಯಿಯನ್ನು ಬಂದಿರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಉಜ್ಜೈನಿಯನ್ನು ಕಾಲ ಬೈರವ ಕಾಯುತ್ತಾನೆ ಎನ್ನಲಾಗುತ್ತಿದೆ. ಈ ಪುರಾತನ ದೇವಾಲಯವನ್ನು ರಾಜ ಭದ್ರಸೇನ ನಿರ್ಮಿಸಿದ್ದಾನೆ ಎನ್ನಲಾಗುತ್ತಿದೆ.

ಜಾತಕದಲ್ಲಿನ ದೋಷಗಳಿಗೆ ಈ ದೇವಸ್ಥಾನಗಳಲ್ಲಿ ಪರಿಹಾರ ಪೂಜೆ ಮಾಡಿಸ್ತಾರೆ

 ದೇವಸ್ಥಾನದಲ್ಲಿ ವಿಸ್ಕೀ ಅಂಗಡಿ

ದೇವಸ್ಥಾನದಲ್ಲಿ ವಿಸ್ಕೀ ಅಂಗಡಿ

PC:Utcursch
ಬೈರವ ಎಂದರೆ ಶಿವನ ಉಗ್ರರೂಪ ಎನ್ನಲಾಗುತ್ತದೆ. ಕಾಲ ಬೈರವ ಅಷ್ಟ ಬೈರವಗಳಲ್ಲಿ ಮುಖ್ಯಸ್ಥ. ತಾಂತ್ರಿಕ ಸಂಸ್ಕೃತಿ ಮೂಲಕ ಇದನ್ನು ಪೂಜಿಸಲಾಗುತ್ತದೆ. ನೀವು ಪಾರ್ಕಿಂಗ್ ಸ್ಥಳದಿಂದ ದೇವಾಲಯದತ್ತ ಹೋಗುವಾಗ ನಿಮಗೆ ಆಶ್ಚರ್ಯ ಕಾದಿದೆ. ಅದೇನೆಂದರೆ ದೆವಾಲಯದ ಬಳಿಯ ಅಂಗಡಿಗಳಲ್ಲಿ ಸಾರ್ವಜನಿಕವಾಗಿ ಸಾರಾಯಿಯನ್ನು ಮಾರಾಟ ಮಾಡುತ್ತಿದ್ದಾರೆ.

ಎಲ್ಲಾ ಬ್ರಾಂಡ್ ಲಭ್ಯ

ಎಲ್ಲಾ ಬ್ರಾಂಡ್ ಲಭ್ಯ

PC:Utcursch
ಈ ಅಂಗಡಿಗಳಲ್ಲಿ ಎಲ್ಲಾ ಬ್ರಾಂಡ್‌ನ ಸಾರಾಯಿ ಲಭ್ಯವಿದೆ. ಜನರಿಗೆ ಬೇಕಾದಂತಹ ಲೋಕಲ್‌ನಿಂದ ಹಿಡಿದು ಇಂಗ್ಲಿಷ್ ವರೆಗೂ ಎಲ್ಲಾ ರೀತಿಯ ಸಾರಾಯಿಯನ್ನು ಮಾರಾಟ ಮಾಡುತ್ತಾರೆ.

ಪೂಜಾ ಸಮಾಗ್ರಿ ಜೊತೆ ಸಾರಾಯಿ ಬಾಟಲ್

ಪೂಜಾ ಸಮಾಗ್ರಿ ಜೊತೆ ಸಾರಾಯಿ ಬಾಟಲ್

PC:Utcursch
ಇತರ ದೇವಸ್ಥಾನದಲ್ಲಿ ಹೇಗೆ ಪೂಜಾ ಸಾಮಾಗ್ರಿಗಳನ್ನು ದೇವಸ್ಥಾನದ ಅರ್ಚಕರ ಕೈಯಲ್ಲಿ ಕೊಡುತ್ತೇವೆಯೋ ಹಾಗೆಯೇ ಇಲ್ಲಿ ಈ ಸಾರಾಯಿ ಬಾಟಲ್‌ನ್ನು ಇನ್ನಿತರ ಪೂಜಾ ಸಮಾಗ್ರಿಗಳ ಜೊತೆ ಪೂಜಾರಿ ಕೈಯಲ್ಲಿ ನೀಡಲಾಗುತ್ತದೆ.

ಸಾರಾಯಿ ಪ್ಲೇಟ್‌ನಲ್ಲಿ ಹಾಕಿ ಬೈರವನ ಬಾಯಿಗೆ ಇಡಲಾಗುತ್ತದೆ

ಸಾರಾಯಿ ಪ್ಲೇಟ್‌ನಲ್ಲಿ ಹಾಕಿ ಬೈರವನ ಬಾಯಿಗೆ ಇಡಲಾಗುತ್ತದೆ

PC: K.vishnupranay
ಆ ಬಾಟಲಿಯಲ್ಲಿ ಅರ್ಧವನ್ನು ಒಂದು ಪ್ಲೇಟ್‌ಗೆ ಸುರಿದು ಅದನ್ನು ಕಾಲಬೈರವನ ಮೂರ್ತಿಯ ಬಾಯಿಯ ಹತ್ತಿರ ಇಡಲಾಗುತ್ತದೆ. ಕ್ರಮೇಣ ಪ್ಲೇಟ್‌ನಲ್ಲಿದ್ದ ಸಾರಾಯಿ ಕಡಿಮೆಯಾಗುತ್ತಾ ಹೋಗುತ್ತದಂತೆ. ಪ್ಲೇಟ್‌ನಲ್ಲಿದ್ದೆಲ್ಲಾ ಮುಗಿದ ನಂತರ ಪೂಜಾರಿ ಆ ಪ್ಲೇಟ್‌ನ್ನು ಹಿಂದಕ್ಕೆ ತೆಗೆಯುತ್ತಾರೆ.

ವಿಸ್ಕೀ ಎಲ್ಲಿ ಹೋಗುತ್ತೊ ಯಾರಿಗೂ ಗೊತ್ತಿಲ್ಲ

ವಿಸ್ಕೀ ಎಲ್ಲಿ ಹೋಗುತ್ತೊ ಯಾರಿಗೂ ಗೊತ್ತಿಲ್ಲ

PC: LRBurdak
ಕೆಲವರಿಗೆ ದೇವರು ವಿಸ್ಕೀ ಕುಡಿಯುತ್ತಾನಾ ಎನ್ನುವ ಸಂದೇಹ ಇರುತ್ತದೆ. ಅಂತಹವರು ಬೇಕಾದರೆ ಮೂರ್ತಿಯ ಹತ್ತಿರ ಹೋಗಿ ಗಮನಿಸಬಹುದು. ನಿಮ್ಮ ಕಣ್ಣ ಮುಂದೆಯೇ ವಿಸ್ಕಿ ಕಾಲಿಯಾಗುವುದು ಕಾಣಿಸುತ್ತದಂತೆ. ನೂರಾರು ಬಾಟಲ್ ಸಾರಾಯಿ ಎಲ್ಲಿ ಹೋಗುತ್ತದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ ಇದು ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದು ನಂಬಲು ಕಷ್ಟವಾದರೂ ಸತ್ಯ.

ಸಂಶೋಧನೆ ನಡೆದರೂ ಉತ್ತರ ಸಿಕ್ಕಿಲ್ಲ

ಸಂಶೋಧನೆ ನಡೆದರೂ ಉತ್ತರ ಸಿಕ್ಕಿಲ್ಲ

PC: Utcursch
ಹಲವಾರು ಸಂಘಟನೆಗಳು ಈ ವಿಸ್ಮಯದ ಬಗ್ಗೆ ಹಲವು ಸಂಶೋಧನೆಗಳನ್ನು ನಡೆಸಿದ್ದಾರಂತೆ ಆದರೆ ಯಾರಿಗೂ ಸರಿಯಾದ ಉತ್ತರ ದೊರಕಿಲ್ಲ ಎನ್ನುತ್ತಾರೆ ಇಲ್ಲಿಯ ಪಂಡಿತರು. ಆದರೆ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಕ್ಯಾಪಿಲರಿ ಪ್ರಕ್ರಿಯೆಯ ಮೂಲಕ ಮೂರ್ತಿ ಸಾರಾಯಿಯನ್ನು ಎಳೆಯುವ ಸಾಧ್ಯತೆ ಇದೆ. ಆ ಬಾಟಲಿಯಲ್ಲಿ ಉಳಿದಿದ್ದನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತಿದೆ.