Search
  • Follow NativePlanet
Share
» » ಆಗಸ್ಟ್‌ ನಲ್ಲಿ ಸಿಗಲಿದೆ 5 ದಿನ ರಜೆ…ಇಲ್ಲಿಗೆ ವೀಕೆಂಡ್‌ ಟ್ರಿಪ್ ಪ್ಲಾನ್‌ ಮಾಡಿ…

ಆಗಸ್ಟ್‌ ನಲ್ಲಿ ಸಿಗಲಿದೆ 5 ದಿನ ರಜೆ…ಇಲ್ಲಿಗೆ ವೀಕೆಂಡ್‌ ಟ್ರಿಪ್ ಪ್ಲಾನ್‌ ಮಾಡಿ…

ರಜಾ ದಿನಗಳು ಹೆಚ್ಚಿಗೆ ಬಂದಾಗ ಜನರು ತಮ್ಮಿಷ್ಟದ ಸ್ಥಳಗಳಿಗೆ ಪ್ರಯಾಣಿಸಲು ಯೋಜಿಸುತ್ತಾರೆ. ಅಂತೆಯೇ ಈ ಬಾರಿ ಆಗಸ್ಟ್ ತಿಂಗಳಲ್ಲಿ ವೀಕೆಂಡ್‌ ಸಮಯದಲ್ಲಿಯೇ ದೀರ್ಘ ರಜಾದಿನಗಳು ಲಭಿಸುವುದರಿಂದ ಈ ಸಮಯದಲ್ಲಿ ನೀವು ನಿಮ್ಮ ಕುಟುಂಬ, ಸ್ನೇಹಿತರು ಅಥವಾ ಪಾರ್ಟ್‌ ನರ್‌ ಜೊತೆ ಪ್ರವಾಸಕ್ಕೆ ತೆರಳಬಹುದು. ಆಗಸ್ಟ್ ತಿಂಗಳಲ್ಲಿ ನೀವು ಕೇವಲ 1 ದಿನ ರಜೆ ತೆಗೆದುಕೊಂಡರೆ, ‌ ಹೆಚ್ಚು ಕಡಿಮೆ 5 ದಿನಗಳ ಪ್ರಯಾಣವನ್ನು ಅನಂದಿಸಬಹುದು. ಹೇಗೆ, ಎಲ್ಲಿಗೆ ಹೋದರೆ ಚೆನ್ನ? ಎಂಬಿತ್ಯಾದಿ ಮಾಹಿತಿಗಳಿಗೆ ಮುಂದೆ ಓದಿ...

ಹೀಗಿದೆ ರಜಾದಿನದ ಪಟ್ಟಿ

ಅಂದಹಾಗೆ ಆಗಸ್ಟ್ 15 ಗುರುವಾರ ಮತ್ತು ಈ ದಿನ ಸ್ವಾತಂತ್ರ್ಯ ದಿನದ ರಜಾದಿನವಾಗಿದೆ. ಇದಾದ ನಂತರ 16ರಂದು ರಜೆ ತೆಗೆದುಕೊಂಡರೆ 17ರಂದು ಶನಿವಾರ ಮತ್ತು 18ರಂದು ಭಾನುವಾರ ಹಾಗೂ 19ರಂದು ರಕ್ಷಾಬಂಧನ. ಒಟ್ಟಾರೆಯಾಗಿ, ನೀವು ಪೂರ್ಣ 5 ದಿನಗಳ ರಜೆಯನ್ನು ಪಡೆಯಬಹುದು. ಟ್ರಾವೆಲ್‌ ಪ್ಲಾನ್ ಮಾಡಬಹುದು. ಹಾಗಾದರೆ ಈ ಸಮಯದಲ್ಲಿ ನೀವು ಎಲ್ಲಿಗೆ ಭೇಟಿ ನೀಡಬಹುದು ಎಂಬುದನ್ನು ಇಲ್ಲಿ ನೋಡೋಣ...

ಕುದುರೆಮುಖ

ಈ ಸ್ಥಳವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ರಾಷ್ಟ್ರೀಯ ಉದ್ಯಾನವನವಾಗಿದೆ. ಬೃಹತ್ ಹಸಿರು ಮರಗಳಿಂದ ಕೂಡಿರುವ ಕುದುರೆಮುಖದಲ್ಲಿ ನೋಡಲು 10 ಕ್ಕೂ ಹೆಚ್ಚು ಸ್ಥಳಗಳಿವೆ. ಪಟ್ಟಣದಲ್ಲಿ ವರ್ಷವಿಡೀ ಆಹ್ಲಾದಕರ ವಾತಾವರಣ ಇರುತ್ತದೆಯಾದರೂ, ನೀವು ಟ್ರೆಕ್ಕಿಂಗ್ ಮಾಡಲು ಯೋಜಿಸುತ್ತಿದ್ದರೆ ಅಕ್ಟೋಬರ್ ನಿಂದ ಮೇ ವರೆಗೆ ಕುದುರೆಮುಖಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

ವಯನಾಡ್

ವಯನಾಡ್ ಅನ್ನು 'ಕೇರಳದ ಊಟಿ" ಎಂದು ಕರೆಯಲಾಗುತ್ತದೆ ವಯನಾಡ್ ವನ್ಯಜೀವಿ ಮೀಸಲು ಪ್ರದೇಶಗಳಿಗೆ ಹೆಸರುವಾಸಿಯಾಗಿದೆ. ಭಾರತೀಯ ಕಾಡೆಮ್ಮೆ, ಆನೆಗಳು ಮತ್ತು ಚಿರತೆಗಳಂತಹ ಅಪರೂಪದ ಜಾತಿಗಳನ್ನು ಒಳಗೊಂಡಂತೆ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ. ಈ ತಾಣವು ಪ್ರಕೃತಿ ಪ್ರಿಯರಿಗೆ ಮತ್ತು ಸಾಹಸ ಉತ್ಸಾಹಿಗಳಿಗೆ ಸ್ವರ್ಗವಾಗಿದೆ.

ಕನಾಟಾಲ್

ಕನಾಟಾಲ್ ಉತ್ತರಾಖಂಡದ ಒಂದು ಸಣ್ಣ ಹಳ್ಳಿ. ಶಾಂತಿ ಮತ್ತು ನೆಮ್ಮದಿಯನ್ನು ಬಯಸುವ ಜನರು ಇಲ್ಲಿಗೆ ಹೋಗಬಹುದು. ಇಲ್ಲಿ ಕ್ಯಾಂಪಿಂಗ್ ಮತ್ತು ಟ್ರಿಕ್ಕಿಂಗ್ ಸಹ ಆನಂದಿಸಬಹುದು. ಕನಾಟಾಲ್‌ಗೆ ಯಾವಾಗಲಾದರೂ ಭೇಟಿ ನೀಡಬಹುದಾದರೂ ಬೇಸಿಗೆಯಲ್ಲಿ (ಏಪ್ರಿಲ್ ನಿಂದ ಜೂನ್) ಮತ್ತು ಚಳಿಗಾಲದಲ್ಲಿ (ಅಕ್ಟೋಬರ್ ನಿಂದ ಮಾರ್ಚ್) ಖಂಡಿತವಾಗಿಯೂ ಭೇಟಿ ನೀಡಲು ಉತ್ತಮ ಸಮಯ.

ತೀರ್ಥನ್ ವ್ಯಾಲಿ

ಜನಪ್ರಿಯ ಗಿರಿಧಾಮ ಮನಾಲಿಯಿಂದ ಸರಿಸುಮಾರು 60 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಕುಲು ಜಿಲ್ಲೆಯಲ್ಲಿರುವ ತೀರ್ಥನ್ ವ್ಯಾಲಿ ನಗರದ ಜೀವನದ ಜಂಜಾಟದಿಂದ ಪಾರಾಗಲು ಅವಕಾಶ ನೀಡುತ್ತದೆ. ಈ ಪ್ರಶಾಂತ ವ್ಯಾಲಿಯಲ್ಲಿ ಟ್ರೆಕ್ಕಿಂಗ್, ಮೀನುಗಾರಿಕೆ, ವನ್ಯಜೀವಿ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು.

ಕಾಮತ್

ಮಹಾರಾಷ್ಟ್ರದ ಈ ಹಳ್ಳಿಯಲ್ಲಿ ನೀವು ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಅಷ್ಟೇ ಅಲ್ಲ, ನೀವು ಪ್ಯಾರಾಗ್ಲೆಡಿಂಗ್ ಅನ್ನು ಸಹ ಆನಂದಿಸಬಹುದು ಪ್ಯಾರಾಗ್ಲೆಡಿಂಗ್ ಪ್ರಿಯರಿಗೆ ಇದು ಉತ್ತಮ ಸ್ಥಳವಾಗಿದೆ, ಇದನ್ನು ಕಲಿಯಲು ಶಾಲೆಯೂ ಇದೆ.

ಕಸೋಲ್

ನೀವು ದೆಹಲಿಯ ಸಮೀಪವಿರುವ ಯಾವುದಾದರೂ ಸ್ಥಳಕ್ಕೆ ಹೋಗಲು ಬಯಸಿದರೆ ನೀವು ಕಸೋಲ್‌ಗೆ ಹೋಗಬಹುದು. ಪಾರ್ವತಿ ಕಣಿವೆಯಲ್ಲಿ ಚಾರಣ ಮಾಡಲು ಈ ಸ್ಥಳಕ್ಕೆ ಭೇಟಿ ನೀಡಿ. ಕಸೋಲ್‌ನಲ್ಲಿ ವರ್ಷವಿಡೀ ಹವಾಮಾನ ಉತ್ತಮವಾಗಿರುತ್ತದೆ.

ಲ್ಯಾನ್ಸ್ಡೌನ್

ಈ ಸ್ಥಳವನ್ನು ಬ್ರಿಟಿಷ್ ಕಂಟೋನ್ಸೆಂಟ್ ಆಗಿ ಸ್ಥಾಪಿಸಲಾಯಿತು ನಗರದ ಜಂಜಾಟದಿಂದ ತಪ್ಪಿಸಿಕೊಂಡು ಶಾಂತಿಯುತ ವಾತಾವರಣವನ್ನು ಆನಂದಿಸಲು ಬಯಸುತ್ತಿರುವವರಿಗೆ ಈ ಸ್ಥಳವು ಉತ್ತಮವಾಗಿದೆ. ಇದು ಕೂಡ ಉತ್ತರಾಖಂಡದಲ್ಲಿದೆ.

ಹೂಗಳ ಕಣಿವೆ

ಇದು ಬಹಳ ಸುಂದರವಾದ ಸ್ಥಳವಾಗಿದೆ. ನೀವು ಸ್ನೇಹಿತರು ಅಥವಾ ಪಾರ್ಟನರ್‌ ಜೊತೆ ಹೋದರೆ ಮಸ್ತ್‌ ಇರುತ್ತದೆ. ಟ್ರೆಕ್ಕಿಂಗ್ ಸಮಯದಲ್ಲಿ ನೀವು ಇಲ್ಲಿ ನೈಸರ್ಗಿಕ ಅದ್ಭುತಗಳನ್ನು ಸಹ ನೋಡಬಹುದು. ಇದು ಕೂಡ ಉತ್ತರಾಖಂಡದಲ್ಲಿದ್ದು, ಬದರಿನಾಥಕ್ಕೆ ಸಮೀಪದಲ್ಲಿದೆ.

ಸ್ಪಿಟಿ

ಸ್ಪಿಟಿ ಎಂಬ ಪದದ ಅರ್ಥ 'ಮಧ್ಯ ಭೂಮಿ'. ಏಕೆಂದರೆ ಸ್ಪಿಟಿ ಕಣಿವೆ ಭಾರತವನ್ನು ಟಿಬೆಟ್‌ನಿಂದ ಪ್ರತ್ಯೇಕಿಸುತ್ತದೆ. ಹೆಸರಿಗೆ ತಕ್ಕಂತೆ, ಸ್ಪಿಟಿ ಹಲವಾರು ಮಠಗಳಿಗೆ ನೆಲೆಯಾಗಿದೆ. ಇಲ್ಲಿನ ಪ್ರಾಕೃತಿಕ ಸೊಬಗನ್ನು ನೋಡಿದ ಮೇಲೆ ನಿಮ್ಮ ಮನಸ್ಸು ಖುಷಿಯಾಗುತ್ತದೆ. ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಾರ್ಚ್ ನಿಂದ ಜೂನ್.

ತವಾಂಗ್

ಅರುಣಾಚಲ ಪ್ರದೇಶದ ಭವ್ಯವಾದ ಹಿಮಾಲಯದ ನಡುವೆ ನೆಲೆಗೊಂಡಿರುವ ತವಾಂಗ್ ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಮುಳುಗಿರುವ ಆಕರ್ಷಕ ತಾಣವಾಗಿದೆ. ತವಾಂಗ್‌ನ ಬೌದ್ಧ ಮಠಗಳು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇಲ್ಲಿರುವ ತವಾಂಗ್ ಮಠವು ಏಷ್ಯಾದ ಅತಿದೊಡ್ಡ ಬೌದ್ಧ ಮಠವಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+