Search
  • Follow NativePlanet
Share
» »ಧನುರಾಶಿಯವರು ಸುತ್ತಾಡಲು ಬೆಸ್ಟ್ ತಾಣಗಳಿವು

ಧನುರಾಶಿಯವರು ಸುತ್ತಾಡಲು ಬೆಸ್ಟ್ ತಾಣಗಳಿವು

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ನವಂಬರ್‌ 22ರಿಂದ ಡಿಸೆಂಬರ್ 21ರ ವರೆಗೆ ಜನಿಸಿದವರು ಧನುರಾಶಿಯ ವ್ಯಕ್ತಿಗಳಾಗಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ಸಾಹಸಪ್ರೀಯರಾಗಿರುತ್ತಾರೆ. ಸ್ವತಂತ್ರ್ಯ ಪ್ರೀಯರಾಗಿರುತ್ತಾರೆ. ಯಾವಾಗಲೂ ಸ್ವತಂತ್ರವಾಗಿರುವುದನ್ನು ಇಷ್ಟಪಡುವವರಾಗಿರುತ್ತಾರೆ. ಈ ವ್ಯಕ್ತಿಗಳು 2018ರಲ್ಲಿ ಸುತ್ತಾಡಲು ಸೂಕ್ತವಾದ ಸ್ಥಳವೆಂದರೆ ಶಿಲ್ಲಾಂಗ್, ತವಾಂಗ್ .

ವೃಶ್ಚಿಕ ರಾಶಿಯವರ ವ್ಯಕ್ತಿತ್ವಕ್ಕೆ ಹೊಂದುವ ಪ್ರವಾಸಿ ತಾಣ ಇದು

ಶಿಲ್ಲಾಂಗ್

ಶಿಲ್ಲಾಂಗ್

PC: Gunjang123

ಪೂರ್ವಭಾರತದ ಸ್ಕಾಟ್ಲೆಂಡ್ ಎಂದೇ ಜನಜನಿತವಾಗಿರುವ ಶಿಲ್ಲಾಂಗ್, ಈಶಾನ್ಯ ಭಾರತದ ಅತಿ ಪ್ರಸಿದ್ಧವಾದ ಪ್ರವಾಸಿ ತಾಣಗಳಲ್ಲೊಂದಾಗಿದೆ. ಹಚ್ಚ ಹಸಿರಾದ ಸಾಗುವಳಿ ಭೂಮಿ, ನಯನ ಮನೋಹರವಾದ ಪ್ರಾಕೃತಿಕ ಪ್ರದೇಶಗಳು, ಅತ್ಯುನ್ನತ ಪರ್ವತಶ್ರೇಣಿಗಳನ್ನು ಮುತ್ತಿಕೊಂಡಿರುವ ಮೋಡಗಳು, ಸ್ನೇಹಪರ ಜನರು, ಆತ್ಮೀಯವಾದ ಆತಿಥ್ಯ ನೀಡುವ ವಸತಿಗೃಹಗಳು, ಇವೆಲ್ಲವೂ ಶಿಲ್ಲಾಂಗ್ ನ ವೈಶಿಷ್ಟ್ಯಗಳು.

ಎಲಿಫೆಂಟ್ ಜಲಪಾತ

ಎಲಿಫೆಂಟ್ ಜಲಪಾತ

PC: Bito4

ಶಿಲ್ಲಾಂಗ್ ನ ಪರ್ವತ, ಎಲಿಫೆಂಟ್ ಜಲಪಾತ, ಸ್ವೀಟ್ ಜಲಪಾತ, ಲೇಡಿ ಹೈದರಿ ಉದ್ಯಾನ, ವಾರ್ಡ್ಸ್ ಸರೋವರ, ಮತ್ತು ಪೋಲಿಸ್ ಬಜಾರ್ ಗಳಿಗೆ ಭೇಟಿ ನೀಡದೇ ಹೋದರೆ, ಶಿಲ್ಲಾಂಗ್ ನ ಪ್ರವಾಸವು ಅಪೂರ್ಣವಾಗುತ್ತದೆ. ಶಿಲ್ಲಾಂಗ್ ನ ಸ್ಥಳೀಯ ಸಂಸ್ಕೃತಿಗಳ ಡಾನ್ ಬಾಸ್ಕೋ ಕೇಂದ್ರವು ಒಂದು ಆಸಕ್ತಿದಾಯಕ ವಸ್ತುಸಂಗ್ರಹಾಲಯವಾಗಿದೆ..

ಮೇಘಾಲಯ

ಮೇಘಾಲಯ

PC:Sankarshan Mukhopadhyay

ಮೇಘಾಲಯವು ಬುಡಕಟ್ಟು ಜನಾಂಗದ ರಾಜ್ಯವಾಗಿದ್ದು, ಖಸಿಸ್, ಜೈನ್ತಾಯಿಸ್, ಮತ್ತು ಗರೋಸ್ ಇವು ರಾಜ್ಯದ ಮೂರು ಪ್ರಮುಖ ಬುಡಕಟ್ಟು ಜನಾಂಗಗಳಾಗಿವೆ. ಖಸಿಸ್ ಪರ್ವತ ಪ್ರದೇಶಕ್ಕೆ ಸೇರಿರುವ ಶಿಲ್ಲಾಂಗ್ ನ ಭಾಗದಲ್ಲಿ ಖಸಿಸ್ ಜನಾಂಗದವರ ಸಂಖ್ಯೆಯು ಅಧಿಕವಾಗಿದೆ.

ಭೇಟಿ ನೀಡಲು ಸೂಕ್ತ ಸಮಯ

ಭೇಟಿ ನೀಡಲು ಸೂಕ್ತ ಸಮಯ

PC: sangeeta1975

ಚಳಿಗಾಲ ಮತ್ತು ಮಳೆಗಾಲಗಳು ಕಳೆದ ನಂತರದ ಅವಧಿಯು ಶಿಲ್ಲಾಂಗ್ ಗೆ ಭೇಟಿ ನೀಡಲು ಅತಿ ಸೂಕ್ತ ಕಾಲವಾಗಿದೆ. ಅರ್ಥಾತ್, ಮಾರ್ಚ್-ಏಪ್ರಿಲ್ ಮತ್ತು ಸೆಪ್ಟೆಂಬರ್-ಅಕ್ಟೋಬರ್ ಗಳ ನಡುವಿನ ಕಾಲಾವಧಿ. ರಾಷ್ಟ್ರೀಯ ಹೆದ್ದಾರಿ 40 ಶಿಲ್ಲಾಂಗ್ ಪಟ್ಟಣವನ್ನು ದೇಶದ ಇತರ ಭಾಗಗಳೊಡನೆ ಅತ್ಯುತ್ತಮವಾಗಿ ಸಂಪರ್ಕಿಸುತ್ತದೆ. ರಾಷ್ಟ್ರೀಯ ಹೆದ್ದಾರಿ 40, ಶಿಲ್ಲಾಂಗ್ ಮತ್ತು ಗುವಹಾಟಿಗಳನ್ನು ಸಂಪರ್ಕಿಸುತ್ತದೆ.

ತವಾಂಗ್

ತವಾಂಗ್

PC:Dhrubazaanphotography

ಹಿಮಾಲಯ ಪರ್ವತಗಳ ನಡುವೆ, ಚೀನಾ ಗಡಿಯಲ್ಲಿರುವ ತವಾಂಗ್ ಪುರಾತನ ಮತ್ತು ವಿಶೇಷ ಬೌದ್ಧಾಶ್ರಮಗಳ ಸುಂದರ ನಗರ. ತವಾಂಗ್ ಪಟ್ಟಣದ ಹಿಂದೆಯೂ ಎತ್ತರವಾದ ಪರ್ವತ ಶ್ರೇಣಿಗಳು, ಮಧ್ಯದ ಪ್ರದೇಶ ಹತ್ತಾರು ತಪ್ಪಲುಗಳಿಂದ ವಿಶಾಲ ಬೋಗುಣಿಯಂತೆ ರೂಪುಗೊಂಡಿತ್ತು. ತವಾಂಗ್‌ನಲ್ಲಿ ಇರುವ ಬೌದ್ಧಧಾಮ ವಿಶ್ವದಲ್ಲೇ ಅತ್ಯಂತ ಚೆಲುವಾದ ಬೌದ್ಧನೆಲೆಗಳಲ್ಲೊಂದು. ಗಗನಚುಂಬಿತ ಗಿರಿಶಿಖರ ಹಾಗೂ ಹಸುರು ಕಾಡುಗಳಿಂದಲೂ ತವಾಂಗ್ ಗಮನಸೆಳೆಯುತ್ತದೆ.

ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶ

PC:Nazmul Ahmed

ಅರುಣಾಚಲ ಪ್ರದೇಶದ ಭೂಪ್ರದೇಶದ ಲಕ್ಷಣಗಳೇ ಇಲ್ಲಿನ ಪ್ರವಾಸೋದ್ಯಮದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಇಲ್ಲಿನ ಪ್ರವಾಸಿಗರಿಗೆ ವಿವಿಧ ತರವಾದ ಪ್ರಾಕೃತಿಕ ಸೊಬಗನ್ನು ಪರಿಚಯಿಸುತ್ತದೆ. ಭಾರತದ ಪೂರ್ವ ಭಾಗದಲ್ಲಿರುವ ಅರುಣಾಚಲ ಪ್ರದೇಶವು ಸೂರ್ಯ ಉದಯಿಸುವ ನಾಡು ಎಂದೂ ಕರೆಯಲ್ಪಡುತ್ತದೆ.

Read more about: india travel shillong
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more