Search
  • Follow NativePlanet
Share
» »ನೀವು ಕರ್ಕಾಟಕ ರಾಶಿಯ ವ್ಯಕ್ತಿಗಳಾ.. ಹಾಗಾದ್ರೆ ಯಾವ ಸ್ಥಳಕ್ಕೆ ಸುತ್ತಾಡೋದು ಬೆಸ್ಟ್ ನೋಡಿ

ನೀವು ಕರ್ಕಾಟಕ ರಾಶಿಯ ವ್ಯಕ್ತಿಗಳಾ.. ಹಾಗಾದ್ರೆ ಯಾವ ಸ್ಥಳಕ್ಕೆ ಸುತ್ತಾಡೋದು ಬೆಸ್ಟ್ ನೋಡಿ

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜೂನ್ 21ರಿಂದ ಜುಲೈ 22ರ ವರೆಗೆ ಜನಿಸಿದವರು ಕರ್ಕಾಟಕ ರಾಶಿಯವರು. ಕರ್ಕಾಟಕ ರಾಶಿವರು ಮೂಡಿ, ಸೂಕ್ಷ್ಮ ಹಾಗೂ ಸೃಜನಶೀಲ ಸ್ವಭಾವದವರು. ಪ್ರೀತಿ ಮಾಡುವವರು ಹಾಗು ಪ್ರೀತಿ ಕೊಡುವ ವ್ಯಕ್ತಿಗಳಾಗಿದ್ದಾರೆ. ಪ್ರತಿ ಮೂಲೆಯಲ್ಲೂ ಪ್ರೀತಿ ಉಸಿರಾಡುವಂತಹ ಸ್ಥಳವನ್ನು ಅವರು ಬಯಸುತ್ತಾರೆ. ಹಾಗಾಗಿ 2018ರಲ್ಲಿ ಕರ್ಕಾಟಕ ರಾಶಿಯವರಿಗೆ ಸುತ್ತಾಡಲು ಸೂಕ್ತವಾದ ಸ್ಥಳವೆಂದರೆ ಅಂಡಮಾನ್, ನಿಕೋಬಾರ್.

ಅಂಡಮಾನ್ ದ್ವೀಪಗಳು

ಅಂಡಮಾನ್ ದ್ವೀಪಗಳು

PC: SURESH KUMAR SAINI EAR

ದಕ್ಷಿಣ ಭಾರತದ ಎರಡು ಬದಿಗಳಲ್ಲಿರುವ ಅಂಡಮಾನ್ ದ್ವೀಪಗಳು ಹಾಗು ಲಕ್ಷದ್ವೀಪಗಳು ಭಾರತದ ಪ್ರಮುಖ ಪ್ರವಾಸಿ ತಾಣ ಮತ್ತು ರಜಾ ದಿನಗಳನ್ನು ಕಳೆಯಲು ಇರುವ ಅತ್ಯಂತ ಸೂಕ್ತ ಸ್ಥಳವಾಗಿದೆ. ಅಂಡಮಾನ್ ಹಾಗು ನಿಕೋಬಾರ್ ಎರಡು ಪ್ರತ್ಯೇಕವಾದ ದ್ವೀಪ ಸಮೂಹಗಳಾಗಿದ್ದು ಕ್ರಮವಾಗಿ ಉತ್ತರಕ್ಕೂ ಹಾಗು ದಕ್ಷಿಣಕ್ಕೂ ಸ್ಥಿತವಾಗಿವೆ. ಈ ದ್ವೀಪ ಸಮೂಹವನ್ನು ಹಡುಗು ಅಥವಾ ವಿಮಾನದ ಮೂಲಕ ತಲುಪಬಹುದು.

ಜಲಕ್ರೀಡೆಗೆ ಸೂಕ್ತವಾಗಿದೆ

ಜಲಕ್ರೀಡೆಗೆ ಸೂಕ್ತವಾಗಿದೆ

PC: Govi.k3

ಪ್ರಸ್ತುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು ಭಾರತದ ಮಹತ್ತರ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ. ಸುತ್ತಲೂ ಸಾಗರದ ಅಗರ್ಭ ಜಲಜೀವರಾಶಿಗಳಿಂದ ತುಂಬಿ ಹೋಗಿರುವ ಈ ಪ್ರದೇಶವು ಪ್ರವಾಸಿಗರಿಗೆ ರೋಮಾಂಚನವನ್ನುಂಟು ಮಾಡುತ್ತದೆ. ಸಾಹಸ ಪ್ರೀಯರಿಗೆ, ಜಲಕ್ರೀಡೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಈ ತಾಣವು ಸೂಕ್ತವಾಗಿದೆ. ಸ್ಕೂಬಾ ಡೈವಿಂಗ್ ಹಾಗೂ ಸಾಗರದ ಆಳದಲ್ಲಿ ಅನ್ವೇಷಣೆ ನಡೆಸುವುದು ಮುಂತಾದ ರೋಮಾಂಚನಕಾರಿ ಚಟುವಟಿಕೆಗಳಿಗೆ ಇಲ್ಲಿ ಅವಕಾಶವಿದೆ. ವಿವಿಧ ಪಕ್ಷಿ ಹಾಗೂ ಪ್ರಾಣಿ ಸಂಕುಲಗಳನ್ನೊಳಂಗೊಂಡ ಇಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯವು ಪ್ರವಾಸಿಗರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ.

572 ದ್ವೀಪಗಳಿವೆ

572 ದ್ವೀಪಗಳಿವೆ

PC:Vanparia.pradip

ದಕ್ಷಿಣ ಅಂಡಮಾನ್ ನಲ್ಲಿ ಎಲೆ ಉದುರುವ ಕಾಡುಗಳು ಕಂಡುಬಂದರೆ ಉತ್ತರ ಅಂಡಮಾನ್‌ನಲ್ಲಿ ನಿತ್ಯ ಹರಿದ್ವರ್ಣದ ಕಾಡುಗಳು ಕಂಡುಬರುತ್ತವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಒಟ್ಟಾರೆಯಾಗಿ 572 ದ್ವೀಪಗಳಿವೆ. ಇದರ ಒಟ್ಟಾರೆ ವಿಸ್ತೀರ್ಣ 7,950 ಚ.ಕಿ.ಮೀ. ಅಂಡಮಾನ್ ಸಮೂಹದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದ್ವೀಪಗಳಿವಡ ಆದರೆ ನಿಕೋಬಾರ್ ಸಮೂಹದಲ್ಲಿ ಕಡಿಮೆ ಸಂಖ್ಯೆಯ ದ್ವೀಪಗಳಿವೆ.

ಹಾವ್ಲೋಕ್ ಕಡಲ ತೀರ

ಹಾವ್ಲೋಕ್ ಕಡಲ ತೀರ

PC: Mukherjeesaikat

ಹಾವ್ಲೋಕ್ ನ ರಾಧಾನಗರ ಕಡಲ ಕಿನಾರೆ ಹೊರತುಪಡಿಸಿ ಹಾವ್ಲೋಕ್ ಕಡಲ ತೀರವೂ ನೀಲಿಯಾಗಿ ಕಾಣುವ ನೀರಿನಿಂದ ಕೂಡಿದ ಅತ್ಯಂತ ರಮಣೀಯವಾದ ಕಡಲ ಕಿನಾರೆಯಾಗಿದೆ. ಇನ್ನು ಅಂಡಮಾನ್ ಪ್ರವಾಸ ಎಂದ ಕೂಡಲೇ ಜಾಲಿ ಬಾಯ್ ಗೆ ಹೋಗಲೇ ಬೇಕು. ಅಂಡಮಾನ್‌ನಲ್ಲಿ ಸುಮಾರು 200ಕ್ಕೂ ಹೆಚ್ಚಿನ ಸಸ್ಯ ಪ್ರಭೇದಗಳು ಕಂಡು ಬರುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more