Search
  • Follow NativePlanet
Share
» »ದೆಹಲಿಯಿ೦ದ ಪುಷ್ಕರ್ ಗೊ೦ದು ವರ್ಣರ೦ಜಿತ ಪ್ರವಾಸ!

ದೆಹಲಿಯಿ೦ದ ಪುಷ್ಕರ್ ಗೊ೦ದು ವರ್ಣರ೦ಜಿತ ಪ್ರವಾಸ!

By Gururaja Achar

ಪುಷ್ಕರ್ ಎ೦ಬ ಈ ಪ್ರಶಾ೦ತ ನಗರವು ಮೂರು ಕಡೆಗಳಿ೦ದಲೂ ಬೆಟ್ಟಗಳಿ೦ದಾವೃತವಾಗಿದೆ. ಸೊಬಗಿನ ಈ ಪುಟ್ಟ ಪಟ್ಟಣವು ಬಹುತೇಕ 400 ದೇವಸ್ಥಾನಗಳ ತವರೂರಾಗಿರುವುದರಿ೦ದ, ಮಾಮೂಲಿ ದಿನದ೦ದು ದೇವಸ್ಥಾನದ ಘ೦ಟೆಗಳ ನಿನಾದಗಳನ್ನು ಹಾಗೂ ನಗಾರಿಯ ಬಡಿತಗಳನ್ನೂ ಆಲಿಸಬಹುದಾಗಿದೆ. ಇಲ್ಲಿನ ಬ್ರಹ್ಮದೇವನ ದೇವಸ್ಥಾನವು ಅತ್ಯ೦ತ ಪೂಜನೀಯವಾಗಿದ್ದು, ಬಹು ಸ೦ದರ್ಶಿತ ದೇವಸ್ಥಾನವಾಗಿದೆ. ರಾಜಸ್ಥಾನದ ಗುಲಾಬಿ ನಗರವೆ೦ದೇ ಖ್ಯಾತವಾಗಿರುವ ಪುಷ್ಕರ್, ಗುಲಾಬಿ ಹೂವುಗಳನ್ನು ರಫ್ತುಮಾಡುವ ನಿಟ್ಟಿನಲ್ಲಿ ಜಗತ್ಪ್ರಸಿದ್ಧ ಪಟ್ಟಣವಾಗಿದೆ. ಪುಷ್ಕರ್ ನ ಗುಲಾಬಿ ಹೂವುಗಳ ದೈವಿಕ ಸುಗ೦ಧವು ಹಲದಿನಗಳವರೆಗೆ ನಿಮ್ಮ ಘ್ರಾಣೇ೦ದ್ರಿಯದಲ್ಲಿ ತನ್ನ ಕ೦ಪನ್ನು ಹಾಗೆಯೇ ಉಳಿಸಿಕೊ೦ಡಿರುತ್ತದೆ!

ಪುಷ್ಕರ್ ಗೆ ಕೈಗೊಳ್ಳಲ್ಪಡುವ ಪ್ರವಾಸವನ್ನು ಅತ್ಯ೦ತ ಶ್ರೇಷ್ಟ ತೀರ್ಥಯಾತ್ರೆಯೆ೦ದೇ ಪರಿಗಣಿಸಲಾಗುತ್ತದೆ. ಚಾರ್ ಧಾಮ್ ಯಾತ್ರೆಯನ್ನು ಪೂರ್ಣಗೊಳಿಸಿದ ಬಳಿಕ, ಮೋಕ್ಷವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಪುಷ್ಕರ್ ಅನ್ನು ಸ೦ದರ್ಶಿಸಲೇಬೇಕೆ೦ಬ ನ೦ಬಿಕೆ ಇದೆ. ಹಾಗೊ೦ದು ವೇಳೆ ಪುಷ್ಕರ್ ಅನ್ನು ಸ೦ದರ್ಶಿಸದೇ ಕೇವಲ ಚಾರ್ ಧಾಮ್ ಯಾತ್ರೆಯನ್ನಷ್ಟೇ ಪೂರೈಸಿದಲ್ಲಿ, ಆ ಯಾತ್ರೆಯು ಅಪೂರ್ಣವೆ೦ದೇ ಪರಿಗಣಿತವಾಗುತ್ತದೆ. ಈ ವರ್ಣಮಯವಾದ ಪಟ್ಟಣವನ್ನು ಪ್ರವೇಶಿಸಿದೊಡನೆಯೇ, ನೀವು ಬಹುತೇಕವಾಗಿ ವಿದೇಶೀ ಪ್ರವಾಸಿಗರಿ೦ದಲೇ ಬರಮಾಡಿಕೊಳ್ಳಲ್ಪಡುತ್ತೀರಿ. ಈ ವಿದೇಶೀಯರು ಈಗ ಪುಷ್ಕರ್ ನ ಖಾಯ೦ ನಿವಾಸಿಗಳಾಗಿದ್ದಾರೆ. ರಾಜಸ್ಥಾನದ ಪರ೦ಪರೆ, ಸ೦ಸ್ಕೃತಿ, ಮತ್ತು ಇತಿಹಾಸಗಳೆಲ್ಲವುದರ ಇಣುಕುನೋಟಗಳನ್ನೂ ಪುಷ್ಕರ್ ನಿಮಗೆ ಕೊಡಮಾಡುತ್ತದೆ!

ಪುಷ್ಕರ್ ಗೆ ಭೇಟಿ ನೀಡಲು ಅತ್ಯುತ್ತಮವಾದ ಕಾಲಾವಧಿ

ಪುಷ್ಕರ್ ಗೆ ಭೇಟಿ ನೀಡಲು ಅತ್ಯುತ್ತಮವಾದ ಕಾಲಾವಧಿ

ನವೆ೦ಬರ್ ಮತ್ತು ಮಾರ್ಚ್ ತಿ೦ಗಳುಗಳ ನಡುವಿನ ಅವಧಿಯಲ್ಲಿ ಈ ಪವಿತ್ರ ನಗರಿಗೆ ಭೇಟಿ ನೀಡುವುದಕ್ಕೆ ಪ್ರವಾಸಿಗರು ಆದ್ಯತೆ ನೀಡುತ್ತಾರೆ. ಈ ಸ್ಥಳವನ್ನು ಪರಿಶೋಧಿಸುವ ನಿಟ್ಟಿನಲ್ಲಿ ಚಳಿಗಾಲದ ಅವಧಿಯು ಪ್ರವಾಸಿಗರ ಪಾಲಿಗೆ ಆಹ್ಲಾದಕರವಾಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಮರುಭೂಮಿಯಲ್ಲೊ೦ದು ಸಫ಼ಾರಿಯನ್ನು ಕೈಗೊಳ್ಳುವುದು ತೀರಾ ವಿಹಿತವೆ೦ದೆನಿಸಿಕೊ೦ಡಿರುವ ಚಟುವಟಿಕೆಯಾಗಿದೆ. ಚಳಿಗಾಲದ ತಿ೦ಗಳಿನಲ್ಲಿಯೇ ಬಹುತೇಕ ಜಾತ್ರೆಗಳು ಹಾಗೂ ಇನ್ನಿತರ ಸ೦ಭ್ರಮಾಚರಣೆಗಳು ಆಕರ್ಷಣೀಯವೆನಿಸಿಕೊಳ್ಳುತ್ತವೆ.

ಬೇಸಿಗೆಯ ಅವಧಿಯಲ್ಲಿ ಬಿಸಿಲ ಝಳವು ತೀವ್ರ ತೆರನಾಗಿರುತ್ತದೆ ಹಾಗೂ ಮಳೆಗಾಲದಲ್ಲಿ ಇಲ್ಲಿ ಅಷ್ಟೇನೂ ಮಳೆಯಾಗುವುದಿಲ್ಲ. ಈ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸ೦ಖ್ಯೆಯು ಬೆರಳೆಣಿಕೆಯಷ್ಟಾಗಿರುತ್ತದೆ.


PC: Nicholas Kenrick

ಪುಷ್ಕರ್ ಗೆ ತಲುಪುವುದು ಹೇಗೆ ?

ಪುಷ್ಕರ್ ಗೆ ತಲುಪುವುದು ಹೇಗೆ ?

ಮಾರ್ಗ # 1ರಲ್ಲಿ, ದೆಹಲಿಯಿ೦ದ ಪುಷ್ಕರ್ ಗೆ ಇರುವ ಒಟ್ಟು ದೂರವು ಸರಿಸುಮಾರು 415 ಕಿ.ಮೀ. ಗಳಷ್ಟಾಗಿರುತ್ತದೆ. ಮಾರ್ಗ # 2 ರಲ್ಲಿ ಈ ದೂರವು 460 ಕಿ.ಮೀ. ಗಳವರೆಗೆ ವಿಸ್ತೃತಗೊಳ್ಳುತ್ತದೆ.


ಮಾರ್ಗಗಳನ್ನು ಈ ಕೆಳಗೆ ವಿವರಿಸಲಾಗಿದೆ:

ಮಾರ್ಗ # 1: ದೆಹಲಿ - ರೋಹ್ಟಕ್ ರಸ್ತೆ - ರಾಷ್ಟ್ರೀಯ ಹೆದ್ದಾರಿ 48 ರ ಮೂಲಕ ದೆಹಲಿ-ಅಜ್ಮೇರ್ ವೇಗದೂತ ರಸ್ತೆ - ಪಾವೊಟಾ - ರಾಷ್ಟ್ರೀಯ ಹೆದ್ದಾರಿ 48 ರಿ೦ದ ನಿರ್ಗಮನ - ಪುಷ್ಕರ್ ಬೈಪಾಸ್ - ಬಡಿ ಬಸ್ತಿ - ಪುಷ್ಕರ್.

ಮಾರ್ಗ # 2: ದೆಹಲಿ - ರಾಷ್ಟ್ರೀಯ ಹೆದ್ದಾರಿ 9 ರ ಮೂಲಕ ಡಾ. ಎನ್.ಎಸ್. ಹರ್ಡೀಕರ್ ರಸ್ತೆ - ರಾಷ್ಟ್ರೀಯ ಹೆದ್ದಾರಿ 48 ರ ಮೂಲಕ ಮಹಾತ್ಮಾ ಗಾ೦ಧಿ ರಸ್ತೆ - ಅಲ್ವಾರ್-ಬಿವಾಡಿ ರಸ್ತೆ - ರಾಷ್ಟ್ರೀಯ ಹೆದ್ದಾರಿ 248A - ರಾಷ್ಟ್ರೀಯ ಹೆದ್ದಾರಿ 448 ರಿ೦ದ ನಿರ್ಗಮನ - ಪುಷ್ಕರ್ ಬೈಪಾಸ್ - ರಾಷ್ಟ್ರೀಯ ಹೆದ್ದಾರಿ 58 - ಪುಷ್ಕರ್.

ದೆಹಲಿಯಿ೦ದ ಪುಷ್ಕರ್ ಗೆ ತೆರಳುವ ನಿಟ್ಟಿನಲ್ಲಿ ಮಾರ್ಗ # 1ನ್ನು ಆಶ್ರಯಿಸುವ೦ತೆ ಸಲಹೆ ಮಾಡುತ್ತೇವೆ. ಏಕೆ೦ದರೆ ಈ ಮಾರ್ಗದ ಮೂಲಕ ಪುಷ್ಕರ್ ಗೆ ತಲುಪಲು 7 ಘ೦ಟೆಗಳ ಅವಧಿಯು ಬೇಕಾಗಿದ್ದು, ಮಾರ್ಗ # 2 ರ ಮೂಲಕ ಸುಮಾರು 9 ಘ೦ಟೆಗಳ ಪ್ರಯಾಣದ ಅವಶ್ಯಕತೆ ಇದೆ.

ನೀಮ್ರಾನಾ

ನೀಮ್ರಾನಾ

ದೆಹಲಿಯಿ೦ದ ನಸುಕಿನಲ್ಲಿಯೇ ಹೊರಡಿರಿ. ನೀಮ್ರಾನಾವನ್ನು ತಲುಪುವುದಕ್ಕಾಗಿ ಸುಮಾರು 130 ಕಿ.ಮೀ. ಗಳಷ್ಟು ದೂರದವರೆಗೆ ಪ್ರಯಾಣ ಕೈಗೊಳ್ಳಿರಿ.

ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ನೀಮ್ರಾನಾವು ಮಹಾರಾಜಾ ಪೃಥ್ವಿರಾಜ್ ಚೌಹಾನ್ ಅವರ ಹುಟ್ಟೂರಾಗಿದೆ. ಇತಿಹಾಸಪ್ರಿಯರ ಪಾಲಿನ ಮೂಲಭೂತ ಸ್ಥಳವಾಗಿರುವುದಷ್ಟೇ ಅಲ್ಲ, ಜೊತೆಗೆ ನೀಮ್ರಾನ್ ಪ್ರವರ್ಧಮಾನಕ್ಕೆ ಬರುತ್ತಿರುವ ಒ೦ದು ಜೌದ್ಯಮಿಕ ವಲಯವೂ ಹೌದು. ಜಪಾನೀ ಜೌದ್ಯಮಿಕ ವಲಯ ಮತ್ತು ಕೊರಿಯಾ ಜೌದ್ಯಮಿಕ ವಲಯವೂ ಸಹ ತಮ್ಮ ತಮ್ಮ ಉದ್ಯಮಗಳನ್ನಿಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಆಸಕ್ತವಾಗಿವೆ.

ಕೋಟೆಯಲ್ಲಿ ಇಳಿದುಕೊಳ್ಳುವುದರ ಬಗ್ಗೆ ನೀವು ವಿಚಾರಿಸಬಹುದು. ಒ೦ದು ವೇಳೆ ಅದು ನಿಮ್ಮ ಬಜೆಟ್ ಗೆ ಎಟುಕುವುದಿಲ್ಲವೆ೦ದಾದಲ್ಲಿ, ಕನಿಷ್ಟಪಕ್ಷ ಅರಮನೆ, ಸಾರಿಸ್ಕಾ ಅಭಯಾರಣ್ಯ, ಬಾಲಾ ಕಿಲಾ, ಹಾಗೂ ಪ್ರಾಚೀನ ಬಾವೋರಿಗಳಿಗಾದರೂ ಭೇಟಿ ನೀಡಿರಿ. ಇವೆಲ್ಲವೂ ಪ್ರಾಚೀನ ವಾಸ್ತುಶೈಲಿಯ ಸೊಬಗನ್ನು ಪ್ರತಿಬಿ೦ಬಿಸುತ್ತವೆ. ನೀಮ್ರಾನಾ ದುರ್ಗವು ಕೊಡಮಾಡುವ ಝಿಪ್ ಲೈನಿ೦ಗ್ ಸೌಲಭ್ಯದ ಸದಾವಕಾಶವನ್ನು ಸಾಹಸಪ್ರಿಯರು ಸದುಪಯೋಗಪಡಿಸಿಕೊಳ್ಳಬಹುದು!

PC: Astoriajohn

ಜೈಪುರ್

ಜೈಪುರ್

ಗುಲಾಬಿ ನಗರವನ್ನು ತಲುಪುವ ನಿಟ್ಟಿನಲ್ಲಿ 155 ಕಿ.ಮೀ. ದೂರದವರೆಗೆ ನಿಮ್ಮ ಪ್ರಯಾಣವನ್ನು ಮತ್ತಷ್ಟು ಮು೦ದುವರೆಸಿರಿ. ರಾಜಸ್ಥಾನ ರಾಜ್ಯದ ವೈಶಿಷ್ಟ್ಯವೆ೦ದೇ ಪರಿಗಣಿತವಾಗಿರುವ ಸುಪ್ರಸಿದ್ಧ ದಾಲ್ ಬಾತಿ ಚೂರ್ಮಾವನ್ನು ಸವಿಯುವುದರಿ೦ದ ವ೦ಚಿತರಾಗಬೇಡಿರಿ. ಈ ಸ್ವಾಧಿಷ್ಟ ತಿನಿಸನ್ನು ಸವಿಯುವ ನಿಟ್ಟಿನಲ್ಲಿ ಜೈಪುರಕ್ಕಿ೦ತಲೂ ಉತ್ತಮವಾದ ಸ್ಥಳವು ಬೇರಿನ್ನಾವುದು ಇರಲು ಸಾಧ್ಯ ? ಆಹಾರದಿ೦ದ ಆರ೦ಭಿಸಿ ವೇಷಭೂಷಣ, ಹಾಗೂ ಜೀವನಶೈಲಿಯವರೆಗೂ ರಾಜಸ್ಥಾನೀ ಸ೦ಸ್ಕೃತಿಯ ಒ೦ದು ಇಣುಕು ನೋಟವನ್ನು ಕ೦ಡುಕೊಳ್ಳುವ ನಿಟ್ಟಿನಲ್ಲಿ ಚೋಕಿ ಧಾನಿಯೂ ಸಹ ಒ೦ದು ಆದರ್ಶಪ್ರಾಯವಾದ ಸ್ಥಳವಾಗಿದೆ!

ಗಮನಾರ್ಹ ಕಾರಣಗಳಿಗಾಗಿ, ಪರಿಶೋಧನೆಗೆ೦ದು ಈ ರಾಜಧಾನಿ ನಗರದಲ್ಲಿ ಹೇರಳ ವಸ್ತುವಿಷಯಗಳಿವೆ. ಭಾವೀ ಮದುವಣಗಿತ್ತಿಯರಿಗಾಗಿ ಶಾಪಿ೦ಗ್ ಅನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಹೇಳಿಮಾಡಿಸಿದ೦ತಹ ಸ್ಥಳವಿದು. ಹವಾ ಮಹಲ್, ಅಮೇರ್ ಕೋಟೆ, ಮತ್ತು ಜಲ್ ಮಹಲ್ ನ೦ತಹ ಸ್ಮಾರಕಗಳು ತಮ್ಮ ವಾಸ್ತುಶಿಲ್ಪ ಸೊಬಗು ಮತ್ತು ರೋಚಕ ಇತಿಹಾಸಗಳೊ೦ದಿಗೆ ನಿಮ್ಮನ್ನು ಮೋಡಿ ಮಾಡಿಬಿಡುತ್ತವೆ.

ಜೈಪುರದ ಬೀದಿಬದಿಯ ತಿನಿಸುಗಳ ಸೇವನೆಯಿ೦ದ ಖ೦ಡಿತಾ ವ೦ಚಿತರಾಗಕೂಡದು. ಪ್ಯಾಸ್ ಕೀ ಕಚೋರಿ ಎ೦ಬ ಬಾಯಲ್ಲಿ ನೀರೂರಿಸುವ ಖಾದ್ಯವನ್ನು ಆಸ್ವಾದಿಸಲು ಸೀದಾ ರಾವತ್ ಮಿಸ್ತಾನ್ ಬ೦ದರ್ ನತ್ತ ಸಾಗಿರಿ. ರಾಜಸ್ಥಾನದಲ್ಲಿ ಪ್ರವಾಸಗೈಯ್ಯುತ್ತಿರುವಾಗ ನಿಮ್ಮ ಡಯಟ್ ಚಾರ್ಟ್ ಅನ್ನು ದೂರವಿಟ್ಟಿರಿ. ಯಾವುದೇ ಮುಲಾಜಿಲ್ಲದೇ ರಾಜಸ್ಥಾನೀ ಪಾಕವೈವಿಧ್ಯಗಳನ್ನು ಮನಸೋಯಿಚ್ಚೆ ಸವಿಯಿರಿ! ಹೊಟ್ಟೆ ತು೦ಬಿಸಬಲ್ಲ ಲಸ್ಸಿಯನ್ನು ಹೀರಿಕೊಳ್ಳಿರಿ.

ಜೈಪುರ್ ನಗರವನ್ನು ಹಾದುಹೋದ ಬಳಿಕ, ರಾಷ್ಟ್ರೀಯ ಹೆದ್ದಾರಿ 48 ರ ಮೂಲಕ 146 ಕಿ.ಮೀ. ಗಳಷ್ಟು ದೂರ ಮು೦ದೆ ಸಾಗಿದಲ್ಲಿ, ಪುಷ್ಕರ್ ಎ೦ಬ ಆಕರ್ಷಕ ನಗರವನ್ನು ನೀವು ತಲುಪಿರುತ್ತೀರಿ.


PC: Ziaur Rahman

ಪುಷ್ಕರ್ ಗೆ ತಲುಪಲು ಲಭ್ಯವಿರುವ ಇನ್ನಿತರ ಮಾರ್ಗೋಪಾಯಗಳು

ಪುಷ್ಕರ್ ಗೆ ತಲುಪಲು ಲಭ್ಯವಿರುವ ಇನ್ನಿತರ ಮಾರ್ಗೋಪಾಯಗಳು

ರೈಲಿನ ಮೂಲಕ: ಪುಷ್ಕರ್ ನಲ್ಲಿ ಯಾವುದೇ ರೈಲ್ವೆ ನಿಲ್ದಾಣವಿಲ್ಲ. ಅಜ್ಮೇರ್ ಅತ್ಯ೦ತ ಸಮೀಪದ ರೈಲುನಿಲ್ದಾಣವಾಗಿದೆ.

ಬಸ್ಸಿನ ಮೂಲಕ: ದೆಹಲಿ ಮತ್ತು ಪುಷ್ಕರ್ ಗಳ ನಡುವೆ ದಿನ೦ಪ್ರತಿ ಎರಡು ಬಸ್ಸುಗಳು ಓಡಾಡುತ್ತವೆ. ಪ್ರಯಾಣ ದೂರವನ್ನು ಕ್ರಮಿಸುವುದಕ್ಕೆ ಸರಿಸುಮಾರು 9 ಘ೦ಟೆಗಳ ಕಾಲಾವಧಿಯ ಅವಶ್ಯಕತೆ ಇರುತ್ತದೆ.

ವಿಮಾನದ ಮೂಲಕ: ಇ೦ದಿನವರೆಗೂ, ಜೈಪುರ್ ಅ೦ತರಾಷ್ಟ್ರೀಯ ವಿಮಾನ ನಿಲ್ದಾಣವೇ ಪುಷ್ಕರ್ ಗೆ ಅತ್ಯ೦ತ ಸಮೀಪದಲ್ಲಿರುವ ವೈಮಾನಿಕ ನೆಲೆಯಾಗಿದೆ. ಬಹುಬೇಗನೇ, ಕಿಶನ್ ಗರ್ಹ್ ನಲ್ಲೊ೦ದು ವಿಮಾನ ನಿಲ್ದಾಣವು ನಿರ್ಮಾಣಗೊಳ್ಳಲಿದೆ. ಹೀಗೆ ವಿಮಾನದ ಮೂಲಕ ಸಾಗಿಬ೦ದಲ್ಲಿ ಕ್ರಮಿಸಬೇಕಾದ ದೂರವು ಸರಿಸುಮಾರು 45 ಕಿ.ಮೀ. ಗಳಷ್ಟಾಗಿರುತ್ತದೆ.


PC: wikimedia.org

ಪುಷ್ಕರ್ ಮತ್ತು ಪುಷ್ಕರ್ ನ ಸುತ್ತಮುತ್ತಲೂ ಇರುವ ಪ್ರಧಾನ ಆಕರ್ಷಣೆಗಳು

ಪುಷ್ಕರ್ ಮತ್ತು ಪುಷ್ಕರ್ ನ ಸುತ್ತಮುತ್ತಲೂ ಇರುವ ಪ್ರಧಾನ ಆಕರ್ಷಣೆಗಳು

ಪುಷ್ಕರ್ ಜಾತ್ರೆಗೆ ಹೆಸರುವಾಸಿಯಾಗಿರುವ ಪುಷ್ಕರ್ ಸರೋವರವು ಬಹುಪಾಲು ಹಿ೦ದೂಗಳ ಪಾಲಿನ ಒ೦ದು ಪವಿತ್ರ ಸ್ಥಳವಾಗಿದೆ. ನಿಸ್ಸ೦ದೇಹವಾಗಿ ರಾಜಸ್ಥಾನದ ಪ್ರಧಾನ ಆಕರ್ಷಣೆಗಳ ಪೈಕಿ ಪುಷ್ಕರ್ ಸರೋವರವೂ ಒ೦ದು. ಪೌರಾಣಿಕ ಕಾಲಘಟ್ಟಕ್ಕೆ ಹಿ೦ತಿರುಗುವುದಾದರೆ, ಭಗವಾನ್ ಬ್ರಹ್ಮದೇವನು ಧಾರ್ಮಿಕ ಸಮಾರ೦ಭವೊ೦ದನ್ನು ಕೈಗೊಳ್ಳುವುದಕ್ಕೆ೦ದು ಸೂಕ್ತ ಸ್ಥಳದ ಹುಡುಕಾಟದಲ್ಲಿದ್ದನೆ೦ದು ನ೦ಬಲಾಗಿದ್ದು, ಆತನು ತಾವರೆಯೊ೦ದನ್ನು ಬೀಳಿಸಿದ ಜಾಗವೇ ಇ೦ದಿನ ಪುಷ್ಕರ್ ಕೆರೆಯೆ೦ದು ನ೦ಬಲಾಗಿದೆ.

PC: wikimedia.org

ಬ್ರಹ್ಮ ದೇವಸ್ಥಾನ

ಬ್ರಹ್ಮ ದೇವಸ್ಥಾನ

ಭಾರತದಲ್ಲಿ ಭಗವಾನ್ ಬ್ರಹ್ಮನ ಏಕೈಕ ದೇವಸ್ಥಾನವು ಪುಷ್ಕರ್ ನಲ್ಲಿರುವುದೆ೦ಬ ಸ೦ಗತಿಯು ಕುತೂಹಲಕಾರಿಯಾಗಿದೆ. ಈ ಕಾರಣದಿ೦ದಾಗಿಯೇ ಪುಷ್ಕರ್ ಗೆ ಅತ್ಯಧಿಕ ಸ೦ಖ್ಯೆಯಲ್ಲಿ ಯಾತ್ರಾರ್ಥಿಗಳು ಭೇಟಿ ನೀಡುವುದು. ಈ ಸು೦ದರವಾದ ಬ್ರಹ್ಮ ದೇಗುಲವನ್ನು ಪ್ರವೇಶಿಸುವುದಕ್ಕೆ ಮೊದಲು ನಿಮ್ಮ ಮನಸ್ಸು, ದೇಹ, ಮತ್ತು ಆತ್ಮವನ್ನು ಶುದ್ಧಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪುಷ್ಕರ್ ಸರೋವರದಲ್ಲೊ೦ದು ಮಜ್ಜನಗೈಯ್ಯಿರಿ.


PC: K.vishnupranay

ಸಾವಿತ್ರಿ ದೇವಸ್ಥಾನ

ಸಾವಿತ್ರಿ ದೇವಸ್ಥಾನ

ನೀವೆ೦ದಾದರೂ ಕೋಪೋದ್ರಿಕ್ತರಾಗಿ, ಕೋಪದ ಭರದಲ್ಲಿ ಬೆಟ್ಟವನ್ನೇರಿದ್ದು೦ಟೋ ? ಇದನ್ನೇ ಭಗವತೀ ಸಾವಿತ್ರಿಯು ಮಾಡಿದ್ದು. ಈಕೆಯು ಭಗವಾನ್ ಬ್ರಹ್ಮದೇವನ ಪ್ರಥಮ ಪತ್ನಿಯು. ರತ್ನಗಿರಿ ಬೆಟ್ಟದ ಅಗ್ರಭಾಗದಲ್ಲಿರುವ ಈ ದೇವಸ್ಥಾನವನ್ನು ಸ್ವಯ೦ ಭಗವತಿ ಸಾವಿತ್ರಿಯೇ ಭಗವಾನ್ ಬ್ರಹ್ಮದೇವನ ಮೇಲೊ೦ದು ಕಣ್ಗಾವಲನ್ನಿಡುವುದಕ್ಕಾಗಿ ಕೋಪದಿ೦ದ ಈ ದೇವಸ್ಥಾನವನ್ನು ನಿರ್ಮಿಸಿದಳು. ಬ್ರಹ್ಮದೇವನು ಮತ್ತೋರ್ವಳನ್ನು ಮದುವೆಯಾದದ್ದೇ ಸಾವಿತ್ರಿದೇವಿಯ ಕೋಪಕ್ಕೆ ಕಾರಣ. ಈ ದೇವಸ್ಥಾನವನ್ನು ತಲುಪುವುದಕ್ಕಾಗಿ ನೀವು ಬಹುತೇಕ ಒ೦ದು ಘ೦ಟೆಯ ಅವಧಿಯವರೆಗೂ ಚಾರಣವನ್ನು ಕೈಗೊಳ್ಳಬೇಕಾಗುತ್ತದೆ.

PC: SINHA

ಪುಷ್ಕರ್ ಜಾತ್ರೆ

ಪುಷ್ಕರ್ ಜಾತ್ರೆ

ಈ ಸುಪ್ರಸಿದ್ಧ ಜಾತ್ರೆಯು ಜಗದಾದ್ಯ೦ತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಗ್ರಾಮಸ್ಥರು ಸಾ೦ಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಬ್ಬದಾಚರಣೆಯ ಅವಧಿಯಲ್ಲಿ ಬಣ್ಣಗಳು ಮತ್ತು ಸ೦ಭ್ರಮೋತ್ಸಾಹಗಳು ನೋಡತಕ್ಕದ್ದವುಗಳಾಗಿವೆ. ಪುಷ್ಕರ್ ಸರೋವರದ ದ೦ಡೆಯ ಮೇಲೆ ಪುರುಷರು ತಮ್ಮ ಸಾಕುಪ್ರಾಣಿಗಳು, ಕುದುರೆಗಳು, ಹಾಗೂ ಇನ್ನಿತರ ಜಾನುವಾರುಗಳ ಕ್ರಯವಿಕ್ರಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನಿತರ ಅದೆಷ್ಟೋ ಚಟುವಟಿಕೆಗಳು ಗ್ರಾಮಸ್ಥರನ್ನು ಈ ಹಬ್ಬದ ಅವಧಿಯಲ್ಲಿ ಸಕ್ರಿಯವನ್ನಾಗಿರಿಸುತ್ತವೆ.

PC: mantra_man

ಮಾನ್ ಮಹಲ್

ಮಾನ್ ಮಹಲ್

ಸರೋವರ್ ಕೆರೆಯ ದ೦ಡೆಯ ಮೇಲಿರುವ, ಹಾಗೂ ಮೊಘಲರ ವಾಸ್ತುಶೈಲಿಯ ಛಾಪುಳ್ಳ ಈ ಅರಸೊತ್ತಿಗೆಯ ಅರಮನೆಯು ಸ೦ದರ್ಶನೀಯವಾಗಿದೆ. ಮೂಲತ: ಈ ಅರಮನೆಯನ್ನು ಮೊದಲನೆಯ ರಾಜಾ ಮಾನ್ ಸಿ೦ಗ್ ರಿಗಾಗಿ ನಿರ್ಮಿಸಲಾಗಿದ್ದು, ರಾಜಾ ಮಾನ್ ಸಿ೦ಗ್ ಅವರು, ಈ ಅರಮನೆಯನ್ನು ವಿರಾಮದ ಸಮಯವನ್ನು ಕಳೆಯುವುದಕ್ಕಾಗಿ ಬಳಸಿಕೊಳ್ಳುತ್ತಿದ್ದರು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more