• Follow NativePlanet
Share
» »ಈ ಸ್ಥಂಭ ಯಾರ ತೋಳಲ್ಲಿ ಫಿಟ್ ಆಗುತ್ತದೆಯೋ ಅವರ ಆಸೆ ಈಡೇರುತ್ತದಂತೆ!

ಈ ಸ್ಥಂಭ ಯಾರ ತೋಳಲ್ಲಿ ಫಿಟ್ ಆಗುತ್ತದೆಯೋ ಅವರ ಆಸೆ ಈಡೇರುತ್ತದಂತೆ!

Written By: Rajatha

ಚತ್ತೀಸ್‌ಗಡ್‌ನಲ್ಲಿ ದೇವಿಯ ಒಂದು ವಿಶಿಷ್ಠವಾದ ಮಂದಿರವಿದೆ. ಅದನ್ನು ಧಂತೇಶ್ವರಿ ಮಾತಾ ಮಂದಿರ ಎನ್ನಲಾಗುತ್ತದೆ. ಈ ದೇವಾಲಯವನ್ನು 14ನೇ ಶತಮಾನದಲ್ಲಿ ಚಾಲುಕ್ಯ ರಾಜರುಗಳು ದಕ್ಷಿಣ ಭಾರತೀಯ ವಾಸ್ತುಶೈಲಿಯಿಂದ ಇದನ್ನು ನಿರ್ಮಿಸಿದ್ದಾರೆ. ಇಲ್ಲಿ ದೇವಿ ಸತಿಯ ಹಲ್ಲು ಬಿದ್ದಿತ್ತು ಎನ್ನಲಾಗಿದೆ. ದೇವಿಯ ಶಕ್ತಿಪೀಠವಾಗಿರುವುದರ ಜೊತೆಗೆ ಇಲ್ಲಿನ ಗರುಡ ಸ್ಥಂಭ ಈ ದೇವಾಲಯ ಇನ್ನೋಂದು ವಿಶೇಷತೆ.

ಶಿವನು ಪಾರ್ವತಿ ಮಡಿಲಲ್ಲಿ ಮಲಗಿರುವ ಏಕೈಕ ಕ್ಷೇತ್ರ ಇದು

ಬಯಕೆ ಈಡೇರುತ್ತದೆ ಎನ್ನುವ ನಂಬಿಕೆ

ಬಯಕೆ ಈಡೇರುತ್ತದೆ ಎನ್ನುವ ನಂಬಿಕೆ

PC:Ratnesh1948
ಮಂದಿರದ ಪ್ರವೇಶ ದ್ವಾರದ ಬಳಿ ಒಂದು ಗರುಡ ಸ್ಥಂಭವಿದೆ. ಯಾವ ಭಕ್ತನ ತೋಳಲ್ಲಿ ಆ ಸ್ಥಂಭ ಫಿಟ್ ಆಗುತ್ತದೋ ಆ ಭಕ್ತನ ಆಸೆ ಈಡೇರುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಹಾಗಾಗಿ ಇಲ್ಲಿಗೆ ಬರುವ ಭಕ್ತರು ಆ ಕಂಬವನ್ನು ಹಿಡಿಯುವ ಪ್ರಯತ್ನ ಮಾಡುತ್ತಾರೆ.

ದೇವಿ ಸತಿಯ ಹಲ್ಲು ಬಿದ್ದಿರುವ ಜಾಗ

ದೇವಿ ಸತಿಯ ಹಲ್ಲು ಬಿದ್ದಿರುವ ಜಾಗ

ದಂತೇವಾಡ ದೇವಿ ದಂತೇಶ್ವರಿಗೆ ಸಮರ್ಪಿತವಾದದ್ದು. ವಿಶ್ವದ 52 ಶಕ್ತಿಪೀಠಗಳಲ್ಲಿ ಇದೂ ಒಂದು. ಇದು ಸ್ಥಳೀಯ ಜನರ ಆರಾಧ್ಯ ದೈವ. ಧಾರ್ಮಿಕ ಕಥೆಗಳ ಪ್ರಕಾರ ದೇವಿ ಸತಿಯ ಹಲ್ಲು ಇಲ್ಲಿ ಬಿದ್ದಿರುವುದರಿಂದ ಧಂತೇಶ್ವರಿ ಶಕ್ತಿ ಪೀಠ ಎನ್ನಲಾಗಿದೆ.

ದೆವ್ವ ಬಿಡಿಸೋಕೆ ಇಲ್ಲೂ ಇದೆಯಂತೆ ದೇವಸ್ಥಾನ, ಇಲ್ಲಿಗೆ ಹೋಗ್ಲಿಕ್ಕೆ ಗುಂಡಿಗೆ ಗಟ್ಟಿ ಬೇಕು

ಮಂದಿರದ ಸ್ಥಾಪನೆಯಾದದ್ದು ಹೇಗೆ?

ಮಂದಿರದ ಸ್ಥಾಪನೆಯಾದದ್ದು ಹೇಗೆ?

PC:Ratnesh1948
ಪೌರಾಣಿಕ ಕಥೆಗಳ ಪ್ರಕಾರ, ದಂತೇಶ್ವರಿ ಕಾಕತೀಯ ವಂಶದ ರಾಜಾ ಅಮ್ನ ದೇವ್ ಹಾಗೂ ಬಸ್ತರ್‌ ರಾಜ ಪರಿವಾರದ ಕುಲದೇವಿ. ಅಮ್ನ್ ದೇವ್ ಎನ್ನುವ ರಾಜ ಈ ದೇವಿಯ ದರ್ಶನ ಪಡೆಯಲು ಹೋಗಿದ್ದಾಗ ದೇವಿ ಈತನಿಗೆ ದರ್ಶನ ನೀಡಿ ಆತನು ಎಲ್ಲಿಯ ವರೆಗೆ ಹೋಗುತ್ತಾನೋ ಅಲ್ಲಿಯವರೆಗೆ ದೇವಿ ಅವನ ಜೊತೆ ಹೋಗುವುದಾಗಿ, ಅಲ್ಲಿಯ ವರೆಗೆ ಆತನ ಸಾಮ್ರಾಜ್ಯವಿರುವುದಾಗಿ ವರದಾನವನ್ನೂ ನೀಡಿದ್ದಳು. ಜೊತೆಗೆ ಹಿಂದಿರುಗಿ ನೋಡದಂತೆ ಹೇಳಿದ್ದಳು.

ಹಿಂತಿರುಗಿದ ರಾಜ

ಹಿಂತಿರುಗಿದ ರಾಜ

PC:Ratnesh1948
ರಾಜ ಹಲವು ದಿನಗಳವರೆಗೆ ಬಸ್ತರ ಕ್ಷೇತ್ರದ ವರೆಗೆ ನಡೆಯುತ್ತಾ ಹೋದ ದೇವಿ ಆತನ ಹಿಂದೆಯೇ ಹೋಗುತ್ತಿದ್ದಳು. ಶಂಕನಿ-ಡಂಕನಿ ನದಿ ಪಾರು ಮಾಡುವಾಗ ರಾಜನಿಗೆ ದೇವಿಯ ಗೆಜ್ಜೆಯ ಸದ್ದು ಕೇಳಿಸಲಿಲ್ಲ. ಆಗ ರಾಜ ಹಿಂತಿರುಗಿ ನೋಡಿದ. ದೇವಿ ಅಲ್ಲಿಯೇ ನಿಂತುಬಿಟ್ಟಳು. ಆ ನಂತರ ರಾಜಾ ಅಲ್ಲಿಯೇ ದೇವಿಗೆ ಮಂದಿರವನ್ನು ನಿರ್ಮಾಣ ಮಾಡಿದ.

ಇಲ್ಲಿಯ ಮೂರ್ತಿ ಹೇಗಿದೆ?

ಇಲ್ಲಿಯ ಮೂರ್ತಿ ಹೇಗಿದೆ?

ದೇವಿ ಆರುಭುಜ ಕಪ್ಪು ಬಣ್ಣದ ಮೂರ್ತಿ ಇಲ್ಲಿದೆ. ಆರುಭುಜವುಳ್ಳ ದೇವಿ ಬಲಗೈಯಲ್ಲಿ ಶಂಖ, ಖಡ್ಗ, ತ್ರಿಶೂಲ ಹಾಗೂ ಎಡಗೈಯಲ್ಲಿ ಪದ್ಮ, ರಾಕ್ಷಸನ ಜುಟ್ಟು ಹಿಡಿದಿದ್ದಾಳೆ. ಈ ಮಂದಿರದಲ್ಲಿ ದೇವಿಯ ಪಾದದ ಗುರುತು ಕೂಡಾ ಇದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube
ದಂತೇವಾಡಕ್ಕೆ ಯಾವುದೇ ರೈಲ್ವೆ ಸ್ಟೇಶನ್ ಇಲ್ಲ. ಸಮೀಪದ ರೈಲ್ವೆ ಸ್ಟೇಶ್ ಎಂದರೆ ಜಗದಲ್‌ಪುರ. ಇದು ದಂತೇವಾಡದಿಂದ 84 ಕಿ.ಮೀ ದೂರದಲ್ಲಿದೆ. ಇನ್ನೂ ಸಮೀಪದ ಏರ್‌ಪೋರ್ಟ್ ಎಂದರೆ ರಾಯ್‌ಪುರ್. ಇದು 280 ಕಿ.ಮೀ ದೂರದಲ್ಲಿದೆ. ನೀವು ಖಾಸಗಿ ಬಸ್ ಅಥವಾ ವಾಹನದಿಂದಲೇ ಹೋಗಬೇಕು.

Read more about: chhattisgarh temple

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ