Search
  • Follow NativePlanet
Share
» »ಶಿವನ ಎದೆ ಮೇಲೆ ನಿಂತಿರುವ ಕಾಳಿ ; ತಂತ್ರ ಮಂತ್ರಗಳಿಗೆ ಫೇಮಸ್ ಈ ಮಂದಿರ

ಶಿವನ ಎದೆ ಮೇಲೆ ನಿಂತಿರುವ ಕಾಳಿ ; ತಂತ್ರ ಮಂತ್ರಗಳಿಗೆ ಫೇಮಸ್ ಈ ಮಂದಿರ

ಇಡೀ ವಿಶ್ವದಲ್ಲಿ ಭಗವತಿ ದೇವಿಯನ್ನು ನಾನಾ ರೂಪದಲ್ಲಿ ಪೂಜಿಸುತ್ತಾರೆ. ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ಕಾಳಿ ದೇವಿಯನ್ನು ಆರಾಧಿಸಲಾಗುತ್ತದೆ. ಧಾರ್ಮಿಕ ಗ್ರಂಥ ಹಾಗೂ ಮಾನ್ಯತೆಯ ಪ್ರಕಾರ ಕೊಲ್ಕತ್ತಾದಲ್ಲಿ ಕಾಳಿದೇವಿಯು ನೆಲೆಸಿದ್ದಾಳೆ. ಹಾಗಾಗಿ ಇಲ್ಲಿಗೆ ಕೊಲ್ಕತ್ತಾ ಎಂದಾಗಿದೆ. ಗ್ರಂಥಗಳ ಪ್ರಕಾರ ಕೋಲ್ಕತ್ತಾದ ಪ್ರಸಿದ್ಧ ಮಂದಿರ ದಕ್ಷಿಣೇಶ್ವರದಿಂದ ಬಾಹುಲಾಪುರವರೆಗೆ ಭೂಮಿಯು ಬಾಣದ ಆಕಾರದಲ್ಲಿದೆ. ಇಂದು ನಾವು ಕೊಲ್ಕತ್ತಾದ ಎರಡು ಪ್ರಮುಖ ಪ್ರಸಿದ್ಧ ಮಂದಿರಗಳ ಬಗ್ಗೆ ತಿಳಿಸಲಿದ್ದೇವೆ.

ದಕ್ಷಿಣೇಶ್ವರ ಕಾಳಿ ಮಂದಿರ

ದಕ್ಷಿಣೇಶ್ವರ ಕಾಳಿ ಮಂದಿರ

PC:Knath

ಹೂಗ್ಲಿ ನದಿಯ ತಟದಲ್ಲಿರುವ ಕಾಳಿ ಮಂದಿರವು 51 ಶಕ್ತಿಪೀಠಗಲ್ಲಿ ಒಂದಾಗಿದೆ. ಈ ಸ್ಥಳದಲ್ಲಿ ದೇವಿ ಸತಿಯ ಬಲಗಾಲಿನ ನಾಲ್ಕು ಬೆರಳುಗಳು ಬಿದ್ದಿದ್ದವು ಎನ್ನಲಾಗುತ್ತದೆ. ದಕ್ಷಿಣೇಶ್ವರ ಮಂದಿರವನ್ನು ಕಾಳಿ ದೇವಿಯ ದಿವ್ಯ ಧಾಮ ಎಂದೂ ಕರೆಯಲಾಗುತ್ತದೆ. ಕಲಿಯುಗದಲ್ಲಿ ಭಕ್ತರಿಗೆ ಈ ಸ್ಥಳವು ಯಾವುದೇ ಪುಣ್ಯಕ್ಷೇತ್ರಕ್ಕಿಂತಲೂ ಕಡಿಮೆ ಇಲ್ಲ. ದಕ್ಷಿಣೇಶ್ವರ ಕಾಳಿ ಮಂದಿರವು ಕೇವಲ ಬಂಗಾಳದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಮಾನ್ಯತೆ ಪಡೆದಿದೆ.

ಕರ್ನಾಟಕವು ದೇಶದಲ್ಲೇ ಪ್ರಮುಖ ರಾಜ್ಯವೆನಿಸಲು ಕಾರಣಗಳೇನು ಗೊತ್ತಾ?

ಮಂದಿರ ನಿರ್ಮಾಣದ ಕಥೆ

ಮಂದಿರ ನಿರ್ಮಾಣದ ಕಥೆ

PC: Kinjal bose 78

ಒಂದು ಕಾಲದಲ್ಲಿ ಇಲ್ಲಿ ರಸಮಣಿ ಎನ್ನುವ ಹೆಸರಿನ ರಾಣಿ ಇದ್ದಳು. ಈ ರಾಣಿಯು ಕಾಳಿ ದೇವಿಯ ಭಕ್ತಳಾಗಿದ್ದಳು. ರಾಣಿಯು ಪ್ರತಿವರ್ಷ ಸಮುದ್ರ ರಸ್ತೆಯ ಮೂಲಕ ಕಾಶಿಯ ಕಾಲಿ ಮಂದಿರದಲ್ಲಿ ಪೂಜೆ ಅರ್ಚನೆ ಮಾಡಲು ಹೋಗುತ್ತಿದ್ದಳು. ಒಂದು ದಿನ ರಾಣಿಯು ತನ್ನ ಸಂಬಂಧಿಕರು ಹಾಗೂ ಕೆಲಸಗಾರರ ಜೊತೆಗೆ ಕಾಳಿಮಂದಿರಕ್ಕೆ ಹೋಗಲು ತಯಾರಾಗುತ್ತಿದ್ದಳು ಅಂದು ರಾತ್ರಿ ದೇವಿಯು ಕನಸಿನಲ್ಲಿ ಬಂದು ಇಲ್ಲೇ ಒಂದು ಮಂದಿರ ನಿರ್ಮಿಸುವಂತೆ ಹಾಗೂ ಅಲ್ಲೇ ಕಾಳಿ ದೇವಿಯ ಆರಾಧನೆ ಮಾಡುವಂತೆ ಆದೇಶಿಸಿದಳು. ದೇವಿಯ ಆದೇಶದ ಮೇರೆಗೆ ರಾಣಿಯು 1847ರಲ್ಲಿ ಈ ಮಂದಿರವನ್ನು ನಿರ್ಮಿಸುವ ಕಾರ್ಯ ಪ್ರಾರಂಭಿಸಿದಳು ಹಾಗೂ 1855ರಲ್ಲಿ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿತು.

ಭವತಾರಿನಿ ಎನ್ನಲಾಗುತ್ತದೆ

ಭವತಾರಿನಿ ಎನ್ನಲಾಗುತ್ತದೆ

PC:Jagadhatri

ಇಲ್ಲಿ ಕಾಳಿದೇವಿಯನ್ನು ಭವತಾರಿನಿ ಎನ್ನಲಾಗುತ್ತದೆ. ರಾಣಿಯ ಮೂಲಕ ನಿರ್ಮಿಸಲಾದ ಈ ದಕ್ಷಿಣೇಶ್ವರ ಮಂದಿರವು ಭವ್ಯವಾಗಿದ್ದು, ವಾಸ್ತುಕಲೆಯಿಂದ ಕೂಡಿದೆ. ಎರಡು ಮಹಡಿಯ ಮಂದಿರ ಇದಾಗಿದೆ. ನೂರು ಫೀಟ್‌ ಎತ್ತರದ ಮಂದಿರದ ಗರ್ಭಗುಡಿಯೊಳಗೆ ಕಾಳಿ ದೇವಿಯ ಸುಂದರವಾದ ಮೂರ್ತಿ ಇದೆ. ಇದನ್ನು ಭವತಾರಿನಿ ಎನ್ನುವ ಹೆಸರಿನಲ್ಲಿ ಕರೆಯಲಾಗುತ್ತದೆ. ಭವತಾರಿನಿ ಕಾಳಿದೇವಿಯ ಮೂರ್ತಿಯು ಮಲಗಿರುವ ಶಿವನ ಎದೆ ಮೇಲೆ ನಿಂತಿದೆ.

ಶ್ರೀ ರಾಮಕೃಷ್ಣ ಪರಮಹಂಸರು ಸಿದ್ಧಿ ಪಡೆದಿದ್ದು ಇಲ್ಲೇ

ಶ್ರೀ ರಾಮಕೃಷ್ಣ ಪರಮಹಂಸರು ಸಿದ್ಧಿ ಪಡೆದಿದ್ದು ಇಲ್ಲೇ

PC: Abinash Chandra

ದಕ್ಷಿಣೇಶ್ವರ ಕಾಳಿದೇವಿಯು ಶ್ರೀ ರಾಮಕೃಷ್ಣ ಪರಮಹಂಸರ ಇಷ್ಟದೇವಿಯಾಗಿದ್ದಳು. ಇದೇ ಮಂದಿರದಲ್ಲಿ ಕಾಳಿ ಮಾತೆಯ ಆರಾಧನೆ ಮಾಡುತ್ತಾ ಸಿದ್ಧಿ ಪಡೆದಿದ್ದು ಎನ್ನಲಾಗುತ್ತದೆ. ಮಂದಿರದ ಪರಿಸರದಲ್ಲೇ ಪರಮಹಂಸರ ಕೋಣೆಯು ಇದೆ. ಪರಮಹಂಸರ ಮಂಚವನ್ನು ಅವರ ನೆನಪಿನ ಗುರುತಿಗಾಗಿ ಸಂರಕ್ಷಿಸಿಡಲಾಗಿದೆ. ಮಂದಿರದ ಹೊರಗೆ ರಾಮಕೃಷ್ಣರ ಪತ್ನಿ ಶಾರದಾ ದೇವಿ ಹಾಗೂ ರಾಣಿ ರಸಮಣಿಯ ಸಮಾಧಿ ಕೂಡಾ ಇದೆ. ಅಲ್ಲೇ ಒಂದು ಆಲದ ಮರವೂ ಇದೆ. ಆ ಮರದ ಕೆಳಗೆ ಕುಳಿತು ಪರಮಹಂಸರು ಧ್ಯಾನಮಾಡುತ್ತಿದ್ದರು.

ಇಲ್ಲಿ ಸೂರ್ಯನ ಕಿರಣಗಳು ಮಹಾಲಕ್ಷ್ಮೀ ಪೂಜೆ ಮಾಡುತ್ತವಂತೆ!

ಕಾಳಿಘಾಟ್ ಮಂದಿರ

ಕಾಳಿಘಾಟ್ ಮಂದಿರ

PC:Hiroki Ogawa

ಕೊಲ್ಕತ್ತಾದಲ್ಲಿ ಕಾಳಿ ದೇವಿಗೆ ಸಮರ್ಪಿತವಾಗಿರುವ ಇನ್ನೊಂದು ವಿಶೇಷ ಮಂದಿರವಿದೆ. ಕೊಲ್ಕತ್ತಾದ ಗಾವು ಬಜಾರ್‌ನಲ್ಲಿ ನಿರ್ಮಿಸಲಾಗಿರುವ ಈ ಮಂದಿರವನ್ನು ಡೋಮ ಎನ್ನುವ ವ್ಯಕ್ತಿ ನಿರ್ಮಿಸಿದನು ಎನ್ನಲಾಗುತ್ತದೆ. ಈ ಮಂದಿರವನ್ನು ಸುಮಾರು 1498ರಲ್ಲಿ ನಿರ್ಮಿಸಲಾಗಿದೆ ಎನ್ನುವುದನ್ನು ಈ ಮಂದಿರದ ಶಿಲಾಶಾಸನಗಳನ್ನು ನೋಡಿ ಹೇಳಬಹುದು.

ಈ ಮಂದಿರದಲ್ಲಿ ಶಿವನ ಮೂರ್ತಿಯನ್ನು ಸ್ಥಾಪಿಸಲಾಗಿತ್ತು, ಅದರೆ 18 ನೇ ಶತಮಾನದಲ್ಲಿ ಆಂಟೋನಿ ಎನ್ನುವ ಬ್ರಿಟಿಷನು ಇಲ್ಲಿನ ಪಂಚಮುಖಿ ಆಸನದಲ್ಲಿ ಕಾಳಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದನು. ಆದರೆ ದೇವಸ್ಥಾನದ ಪ್ರಮುಖ ಸ್ಥಳದಲ್ಲಿ ಇಂದಿಗೂ ಶಿವನ ಮೂರ್ತಿಯೇ ಇದೆ. ಕಾಳಿದೇವಿಯ ಮೂರ್ತಿಯು ದೇವಸ್ಥಾನದ ಒಂದು ಮೂಲೆಯಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಕಾಳಿಯ ಮೂರ್ತಿಯುಉ ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದೆ.

ಕಾಲಿಘಾಟ್‌ನ ಸುತ್ತಮುತ್ತಲು ಪ್ರವಾಸಿ ತಾಣಗಳು

ಕಾಲಿಘಾಟ್‌ನ ಸುತ್ತಮುತ್ತಲು ಪ್ರವಾಸಿ ತಾಣಗಳು

PC:Sankarrukku

ಕಾಲಿಘಾಟ್‌ ಮಂದಿರದ ಸಮೀಪ ಶಿವ ಮಂದಿರವಿದೆ. ಅಲ್ಲಿ ಮಂದಿರ, ಸ್ನಾನ ಘಟ್ಟ ಕೂಡಾ ಸೇರಿದೆ. ಮಂದಿರದ ಸಮೀಪದಲ್ಲಿ ಇಲ್ಲಿನ ಪ್ರಸಿದ್ಧ ಹುಗಲಿ ನದಿ ಇದೆ. ಇಲ್ಲಿನ ಗಾರ್ಡನ್ ರಿಚ್‌ ಹೆಸರಿನಲ್ಲಿರುವ ಕಾಳಿ ಮಂದಿರದ ಮೂರ್ತಿಯು ಸುಮಾರು 800 ವರ್ಷ ಹಳೆಯದಾಗಿದೆ. ಈ ಮೂರ್ತಿಯು ನದಿಯಲ್ಲಿ ತೇಲುತ್ತಾ ಬಂದಿತ್ತು. ಕೋಲ್ಕತ್ತಾದಲ್ಲಿರುವ ಚೈನೀಸ್ ಕಾಳಿ ಮಂದಿರವೂ ಇಲ್ಲಿನ ಪ್ರಸಿದ್ಧ ಕಾಳಿಮಂದಿರಗಳಲ್ಲೊಂದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more