Search
  • Follow NativePlanet
Share
» »ದಕ್ಷಿಣದ ದ್ವಾರಕೆಯು ಇದೆ! ಭೂಲೋಕದ ವೈಕುಂಠವೂ ಇದೆ!

ದಕ್ಷಿಣದ ದ್ವಾರಕೆಯು ಇದೆ! ಭೂಲೋಕದ ವೈಕುಂಠವೂ ಇದೆ!

By Vijay

ಹಿಂದುಗಳು ನಂಬುವಂತೆ ಶೇಷಶಯನನಾದ ಶ್ರೀಮನ್ನಾರಾಯಣನು ಅಂದರೆ ವಿಷ್ಣು ದೇವರು ನೆಲೆಸಿರುವ ಸ್ಥಳವನ್ನು ವೈಕುಂಠ ಎಂದು ಕರೆಯಲಾಗುತ್ತದೆ. ಸಾಕ್ಷಾತ್ ಸೃಷ್ಟಿ ಪರಿಪಾಲಕನ ನಿವಾಸ ಸ್ಥಳವೆ ಆಗಿರುವುದರಿಂದ ವೈಕುಂಠದ ಪಾವಿತ್ರ್ಯತೆಯ ಕುರಿತು ಹೇಳೆಲೇಬೇಕಾಗಿಲ್ಲ.

ಹೀಗೆ ಸಾಮಾನ್ಯವಾಗಿ ನಾರಾಯಣನಿಗೆ ಮುಡಿಪಾದ ದೇವಾಲಯಗಳನ್ನು ವೈಕುಂಠ ಕ್ಷೇತ್ರಗಳೆಂದೆ ಕರೆಯಲಾಗುತ್ತದೆ. ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿರುವ ಈ ಕ್ಷೇತ್ರವು ಅತ್ಯಂತ ಪವಿತ್ರವಾದ ಕ್ಷೇತ್ರವೆನ್ನಲಾಗುತ್ತದೆ. ಕೇರಳ ರಾಜ್ಯದ ಹಿಂದುಗಳಿಗಂತೂ ಇದು ಅತ್ಯಂತ ಪುಣ್ಯದಾಯಕ ಕ್ಷೇತ್ರವಾಗಿದೆ.

ಕೃಷ್ಣನಿಗೆ ಮುಡಿಪಾದ ಈ ಸುಂದರ ಹಾಗೂ ರಾಜ್ಯದ ಅತಿ ಪ್ರಖ್ಯಾತ ದೇವಾಲಯ ಹರಿಯ ನಿವಾಸವಿರುವ ನೆಲೆ ಎಂದೆ ಜನಜನಿತವಾಗಿದೆ. ಅಂತೆಯೆ ಇದನ್ನು ಭೂಲೋಕದ ವೈಕುಂಠ ಎಂದೆ ಕರೆಯಲಾಗುತ್ತದೆ. ಕೃಷ್ಣ ವಿಷ್ಣುವಿನ ಅವತಾರವೆ ಆಗಿರುವುದರಿಂದ ಇದಕ್ಕೆ ವೈಕುಂಠ ಕ್ಷೇತ್ರ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಹೌದು, ಇದೆ ಜನಪ್ರೀಯ ಹಾಗೂ ದೇಶದಲ್ಲೆ ಸಾಕಷ್ಟು ಹೆಸರುವಾಸಿಯಾಗಿರುವ ಶ್ರೀ ಗುರುವಾಯೂರು ದೇವಾಲಯ. ಕೃಷ್ಣನು ಗುರುವಾಯೂರಪ್ಪನಾಗಿ ನೆಲೆಸಿರುವ ಪುಣ್ಯ ಕ್ಷೇತ್ರ. ಈ ಕ್ಷೇತ್ರ ಮಹಿಮೆ ಹಾಗೂ ಇಲ್ಲಿರುವ ಅನೇಕ ವಿಚಾರಗಳ ಕುರಿತು ಈ ಲೇಖನದ ಮೂಲಕ ತಿಳಿಯಿರಿ. ಅಷ್ಟೆ ಅಲ್ಲ, ಪರಮ ಕೃಪಾಳುವಾದ ಆ ಗುರುವಾಯುರಪ್ಪನ ದರ್ಶನ ಪಡೆಯುವ ದೃಷ್ಟಿಯಿಂದ ನಿಮ್ಮ ಪ್ರವಾಸ ಇಂದೆ ಯೋಜಿಸಿ.

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಇಲ್ಲಿ ವಿಷ್ಣು ಭಗವಂತನನ್ನು ಕೃಷ್ಣನ ರುಪದಲ್ಲಿ ಅತ್ಯಂತ ವಿಧಿವತ್ತಾಗಿ ಪೂಜಿಸಲಾಗುತ್ತದೆ. ಇಲ್ಲಿರುವ ಕೃಷ್ಣನ ವಿಗ್ರಹವು ನಾಲ್ಕು ಕೈಗಳನ್ನು ಹೊಂದಿದ್ದು ಶಂಖ, ಚಕ್ರ, ರಾಜದಂಡ ಹಾಗೂ ಕಮಲವನ್ನು ಹಿಡಿದಿರುವ ಭಂಗಿಯಲ್ಲಿದ್ದು ಸಾಕಷ್ಟು ಆಕರ್ಷಕವಾಗಿದೆ.

ಚಿತ್ರಕೃಪೆ: Kish

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ವಿಶೇಷವೆಂದರೆ ಕೃಷ್ಣನು ತಾನು ಜನ್ಮ ಪಡೆಯುವ ಸಂದರ್ಭದಲ್ಲಿ ಇದೆ ಒಂದು ಭಂಗಿಯಲ್ಲಿ ತನ್ನ ತಂದೆ-ತಾಯಿಯರಾದ ವಾಸುದೇವ ಹಾಗೂ ದೇವಕಿಯರಿಗೆ ದರ್ಶನ ಕೊಟ್ಟಿದ್ದ. ಆ ಒಂದು ದೃಷ್ಟಿಯಿಂದ ಗುರುವಾಯೂರು ಕ್ಷೇತ್ರವನ್ನು ದಕ್ಷಿಣ ದ್ವಾರಕಾ ಎಂದೂ ಸಹ ಕರೆಯಲಾಗುತ್ತದೆ. 1730 ರ ಸಮ್ದರ್ಭದಲ್ಲಿ.

ಚಿತ್ರಕೃಪೆ: Jpullokaran

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಮೂಲವಾಗಿ ಇಲ್ಲಿರುವ ಗುರುವಾಯೂರಪ್ಪನನ್ನು ಆದಿ ಶಂಕರರು ಹೇಳಿದ ಅಥವಾ ಅನುಸರಿಸಿದ ಪೂಜೆಯ ವಿಧಿ ವಿಧಾನಗಳ ಮೂಲಕವೆ ಇಂದಿಗೂ ಪೂಜಿಸಲಾಗುತ್ತದೆ. ಕೃಷ್ಣನನ್ನು ಆರಾಧಿಸುವ ಇಲ್ಲಿನ ನಂಬೂದಿರಿ ಬ್ರಾಹ್ಮಣರನ್ನು ತಂತ್ರಿಗಳೆಂದು ಕರೆಯಲಾಗುತ್ತದೆ.

ಚಿತ್ರಕೃಪೆ: Vinayaraj

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಇಲ್ಲಿನ ಆಚರಣೆಗಳು ಶಿಸ್ತುಬದ್ಧವಾಗಿ ಯಾವುದೆ ಲೋಪದೋಷಗಳಿಲ್ಲದೆ ಬಲು ಕಟ್ಟು ನಿಟ್ಟಿನಿಂದ ಪರಿಪಾಲಿಸಲ್ಪಡುತ್ತವೆ. ದೇವಾಲಯದಲ್ಲಿ ಯಾವ ಸಮಯದಲ್ಲಾಗಲಿ ಅರ್ಚಕನಿದ್ದೆ ಇರುತ್ತಾನೆ. ಮುಖ್ಯ ಅರ್ಚಕನು ನಸುಕಿನ ವೇಳೆಯಲ್ಲಿ ಗರ್ಭಗುಡಿ ಪ್ರವೇಶಿಸಿದರೆ, ಮಧ್ಯಾಹ್ನದ ಪೂಜೆಯು ಸಂಪನ್ನಗೊಳ್ಳುವವರೆಗೂ ಒಂದು ಹನಿ ನೀರನ್ನೂ ಸಹ ಸೇವಿಸುವುದಿಲ್ಲ.

ಚಿತ್ರಕೃಪೆ: ARUNKUMAR P.R

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ದಂತಕಥೆಯ ಪ್ರಕಾರ, ಇಲ್ಲಿ ಪೂಜಿಸಲಾಗುವ ಕೃಷ್ಣನ ವಿಗ್ರಹವು ಸುಮಾರು 5000 ವರ್ಷಗಳಷ್ಟು ಪುರಾತನವಾದುದೆಂದು ಹೇಳಲಾದರೂ, ಅದನ್ನು ಪುಷ್ಟಿಗೊಳಿಸುವಂತಹ ನಿಖರವಾದ ಯಾವುದೆ ಪುರಾವೆಗಳಿಲ್ಲ. ಆದರೂ 14 ನೇಯ ಶತಮಾನದಲ್ಲಿ ರಚಿಸಲಾಗಿರುವ ಕೋಕಸಂದೇಸಂ ಎಂಬ ತಮಿಳು ಸಾಹಿತ್ಯ ಕೃತಿಯಲ್ಲಿ ಕುರುವಾಯೂರು ಎಂಬ ಇದಕ್ಕೆ ಸಮ್ಬಂಧಿಸಿದ ಉಲ್ಲೇಖಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Yahoorajeshon

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಆದರೂ ಗುರುವಾಯೂರು ದೇವಾಲಯ ಹಾಗೂ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಪಷ್ಟಕರವಾದ ದಾಖಲೆಗಳು 17 ನೇಯ ಶತಮಾನದ ಪ್ರಾರಂಭದ ಸಮಯಕ್ಕೆ ಕರೆದೊಯ್ಯುತ್ತದೆ. ಅಲ್ಲದೆ ಈ ದೇವಾಲಯ ಹಾಗೂ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾರದ ಪುರಾಣದಲ್ಲಿ ಅತಿ ರೋಚಕವಾದೆ ಹಿನ್ನಿಲೆಯ ಉಲ್ಲೇಖವಿದೆ, ಅದೇನೆಂದರೆ,

ಚಿತ್ರಕೃಪೆ: Rakesh

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಕುರು ವಂಶದ ರಾಜನಾದ ಹಾಗೂ ಅಭಿಮನ್ಯುವಿನ ಮಗನಾದ ಪರೀಕ್ಷಿತ ರಾಜನು ತಕ್ಷಕ ಎಂಬ ವಿಷ ಸರ್ಪದ ಕಡಿತಕ್ಕೆ ಒಳಗಾಗಿ ಪ್ರಾಣ ಬಿಟ್ಟನು. ಅವನ ಮಗನಾದ ಜನಮೇಜಯನಿಗೆ ಇದರಿಂದ ಕೋಪ ಉಂಟಾಗಿ ತಕ್ಷಕ ಸರ್ಪದ ಮೇಲೆ ಪ್ರತಿಕಾರ ತಿರಿಸಿಕೊಳ್ಳಲು ಸರ್ಪಸಾತ್ರ ಎಂಬ ಯಾಗ ಪ್ರಾರಂಭಿಸಿದ.

ಚಿತ್ರಕೃಪೆ: Kuttix

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಈ ಯಾಗದಲ್ಲಿ ಎಲ್ಲ ದಿಕ್ಕುಗಳಿಂದಲೂ ಸರ್ಪಗಳು ತಾವಾಗಿಯೆ ಬಂದು ಅಗ್ನಿಯಲ್ಲಿ ಬಿದ್ದು ಸಾಯಹತ್ತಿದವು. ತಕ್ಷಕ ಸರ್ಪನು ಬಂದನಾದರೂ ಸಾಯಲಿಲ್ಲ. ಕಾರಣ ಆತ ಅಮೃತ ಸೇವಿಸಿದ್ದ. ಆದರೆ ಮಿಕ್ಕ ಸರ್ಪಗಳು ಪ್ರಾಣತೆತ್ತಿದ್ದರ ಪರಿಣಾಮವಾಗಿ ಜನಮೇಜಯನಿಗೆ ಕುಷ್ಠ ರೋಗ ಬಂದು ನರಳಾಡತೊಡಗಿದ.

ಚಿತ್ರಕೃಪೆ: RanjithSiji

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಎಲ್ಲ ರೀತಿಯ ಉತ್ತಮ ಚಿಕಿತ್ಸೆಗಳನ್ನು ಪಡೆದನಾದರೂ ಗುಣಮುಖನಾಗಲಿಲ್ಲ. ಹೀಗಿರುವಾಗ ಒಮ್ಮೆ ಅವನ ಕನಸಿನಲ್ಲಿ ದತ್ತಾತ್ರೇಯರು ಸ್ವಾಮಿಗಳು ಬಂದು ಗುರುವಾಯುರಪ್ಪನನ್ನು ಕುರಿತು ಪೂಜಿಸುವಂತೆಯೂ ಅದರ ಮಹತ್ವವನ್ನು ಈ ರೀತಿಯಾಗಿ ವಿವರಿಸಿದರು.

ಚಿತ್ರಕೃಪೆ: Vinayaraj

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಬಹಳ ಹಿಂದೆ ಬ್ರಹ್ಮನು ಪದ್ಮ ಕಲ್ಪದಲ್ಲಿ ಸೃಷ್ಟಿ ಹಾಗೂ ಜೀವಿಗಳ ರಚ್ನೆಯ ಕಾರ್ಯದಲ್ಲಿ ತೊಡಗಿದ್ದಾಗ ವಿಷ್ಣು ಪ್ರತ್ಯಕ್ಷನಾದನು. ಇದರಿಂದ ಸಂತಸಗೊಂಡ ಬ್ರಹ್ಮ ಸೃಷ್ಟಿ ಪರಿಪಾಲಕನಾದ ವಿಷ್ಣುನನ್ನು ಕುರಿತು ತನ್ನನ್ನು ಹಾಗೂ ತನ್ನ ಜೀವಿಗಳನ್ನು ಸಂರಕ್ಷಿಸುತ್ತಿರಬೇಕೆಂದು ಕೇಳಿದನು. ಅದಕ್ಕೆ ವಿಷ್ಣು ತನ್ನ ಪ್ರತಿಮೆಯೊಂದನ್ನು ಮಾಡಿ ಅವನಿಗೆ ನೀಡಿದ.

ಚಿತ್ರಕೃಪೆ: Sreejithk2000

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ನಂತರ ವರಾಹ ಕಲ್ಪದಲ್ಲಿ ಬ್ರಹ್ಮನು ರಾಜನಾದ ಸುತಪಾಸ ಹಾಗೂ ಪ್ರಸ್ನಿ ದಂಪತಿಗಳಿಗೆ ಆ ವಿಷ್ಣುವಿನ ವಿಗ್ರಹ ನೀಡಿ ಪೂಜಿಸಲು ಹೇಳಿದ. ಹೀಗೆ ಅವರು ಅದನ್ನು ಭಕ್ತಿಯಿಂದ ಪೂಜಿಸ ಹತ್ತಿದಾಗ ವಿಷ್ಣು ಅವರಿಗೆ ದರ್ಶನ ನೀಡಿ ಮುಂದಿನ ನಾಲ್ಕು ಜನ್ಮಗಳಲ್ಲಿ ಅವರಿಗೆ ಪುತ್ರನಾಗಿಯೆ ತಾನು ಜನ್ಮ ಪಡೆಯುವುದಾಗಿ ಅಶ್ವಾಸನೆ ನೀಡಿದ.

ಚಿತ್ರಕೃಪೆ: Ramesh NG

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಹೀಗೆ ಸತ್ಯಯುಗದಲ್ಲಿ ವಿಷ್ಣು ಪ್ರಸ್ನಿಗರ್ಭನಾಗಿಯೂ, ತ್ರೇತಾ ಯುಗದಲ್ಲಿ ವಾಮನನಾಗಿಯೂ, ರಾಮನಾಗಿಯೂ ಜನ್ಮ ತಳೆದ. ನಂತರ ಕೊನೆಯದಾದಿ ದ್ವಾಪರ ಯುಗದಲ್ಲಿ ಕೃಷ್ಣನಾಗಿಯೂ ಜನ್ಮ ತಳೆದ. ಕೃಷ್ಣನಾಗಿದ್ದಾಗಲೂ ವಿಷ್ಣು ಮಾಡಿದ ಅವನದೆ ಆದ ಪ್ರತಿಮೆಯನ್ನು ಕೃಷ್ಣ ಪೂಜಿಸುತ್ತಿದ್ದ.

ಚಿತ್ರಕೃಪೆ: S Vivek

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ನಂತರ ಕೃಷ್ಣನು ಇಹ ಲೋಕ ತ್ಯಜಿಸುವ ಸಮಯ ಬಂದಾಗ ಉದ್ಧವನನ್ನು ಕರೆದು ದ್ವಾರಕೆಯು ಮುಳುಗುವುದಾಗಿಯೂ ತದನಂತರ ವಿಷ್ಣುವಿನ ವಿಗ್ರಹವನ್ನು ಬೃಹಸ್ಪತಿಯಾದ ಗುರು ಮತ್ತು ವಾಯು ದೇವರಿಗೆ ಕೊಡಬೇಕೆಂದು ಹೇಳಿದನು. ತರುವಾಯ ಅದೆ ರೀತಿಯಾಗಿ ಉದ್ಧವನು ಆ ವಿಗ್ರಹವನ್ನು ಗುರು ಮತ್ತು ವಾಯುವಿನ ಸುಪರ್ದಿಯಲ್ಲಿ ನೀಡಿ ತಪಸ್ಸಿಗೆಂದು ತೆರಳಿದ.

ಚಿತ್ರಕೃಪೆ: RanjithSiji

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಇತ್ತ ಗುರು ಮತ್ತು ವಾಯು ದಕ್ಷಿಣದೆಡೆ ತಮ್ಮ ಪ್ರಯಾಣ ಆರಂಭಿಸಿ ಇಂದಿನ ಗುರುವಾಯೂರಿನತ್ತ ಬಂದು ಇಲ್ಲಿನ ಪ್ರಕೃತಿ ಸೊಬಗಿನಿಂದ ಮೂಕವಿಸ್ಮಿತರಾದರು. ನಂತರ ಈ ಒಂದು ಸ್ಥಳದಲ್ಲಿಯೆ ಶಿವನು ವಿಷ್ಣುವಿನನ್ನು ಪೂಜಿಸಿದುದರ ಕುರಿತು ತಿಳಿದರು ಹಾಗೂ ಆ ವಿಗ್ರಹವನ್ನು ಇಲ್ಲಿಯೆ ಪ್ರತಿಷ್ಠಾಪಿಸಲು ತಿರ್ಮಾನಿಸಿದರು.

ಚಿತ್ರಕೃಪೆ: RanjithSiji

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಹಾಗಾಗಿ ವಿಶ್ವಕರ್ಮನನ್ನು ಕರೆಸಿ ಇಲ್ಲಿ ಒಂದು ದೇವಾಲಯ ನಿರ್ಮಾಣ ಮಾಡಲು ಸೂಚಿಸಿದರು. ಅದರಂತೆ ವಿಶ್ವಕರ್ಮನು ಕೆಲವೆ ನಿಮಿಷಗಳಲ್ಲಿ ಇಲ್ಲೊಂದು ಸುಂದರವಾದ ದೇವಾಲಯ ನಿರ್ಮಾಣ ಮಾಡಿದ. ಹೀಗೆ ಗುರು ಮತ್ತು ವಾಯುವಿನಿಂದ ಪ್ರತಿಷ್ಠಾಪಿಸಲಾದ ಇದು ಗುರುವಾಯೂರು ದೇವಾಲಯವಾಗಿ ಪ್ರಸಿದ್ಧವಾಯಿತು.

ಚಿತ್ರಕೃಪೆ: Ranjithsiji

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯೂರು ಪಟ್ಟಣವು ದೇವಾಲಯದಿಂದಾಗಿಯೆ ಜೀವಕಳೆ ಹೊಂದಿರುವ ಪಟ್ಟಣವಾಗಿ ಕಂಗೊಳಿಸುತ್ತದೆ. ಅಪ್ಪನ್ ಎಂದರೆ ತಂದೆ ಅಥವಾ ದೇವ ಎಂಬ ಭಾವಾರ್ಥ ಬರುವುದರಿಂದ ಈ ಊರಿಗೆ ಒಡೆಯನಾಗಿ, ಅಪ್ಪನಾಗಿ, ದೇವರಾಗಿ ಗುರುವಾಯೂರಪ್ಪನ್ ನೆಲೆಸಿದ್ದಾನೆ.

ಚಿತ್ರಕೃಪೆ: Ranjithsiji

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯೂರು ತ್ರಿಶ್ಶೂರ್ ನಗರ ಕೇಂದ್ರದಿಂದ 28 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ತ್ರಿಶ್ಶೂರ್ ನಿಂದ ಬಸ್ಸುಗಳು ಹಾಗೂ ರೈಲು ದೊರೆಯುತ್ತದೆ. ಗುರುವಾಯೂರು ತನ್ನದೆ ಆದ ರೈಲು ನಿಲ್ದಾಣವನ್ನೂ ಸಹ ಹೊಂದಿದೆ. ಅಲ್ಲದೆ ಕೊಚ್ಚಿ ಮಹಾನಗರವು ತ್ರಿಶ್ಶೂರ್ ಗೆ ಬಲು ಹತ್ತಿರದಲ್ಲಿರುವುದರಿಂದ ಗುರುವಾಯೂರನ್ನು ಭಾರತದ ಎಲ್ಲ ಪ್ರಮುಖ ನಗರ ಕೆಂದ್ರಗಳಿಂದ ಸುಲಭವಾಗಿ ತಲುಪಬಹುದು.

ಚಿತ್ರಕೃಪೆ: Ilya Mauter

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಇನ್ನೊಂದು ವಿಶೇಷವೆಂದರೆ ಇದು ವಿಷ್ಣುವಿನ ದೇವಾಲಯವಾಗಿದ್ದರೂ ಸಹ ಬಾಲ ಕೃಷ್ಣನ ರೂಪದಲ್ಲಿ ಪೂಜಿಸಲಾಗುತ್ತದೆ. ಹಾಗಾಗಿ ಇದನ್ನು ಭೂಲೋಕ ವೈಕುಂಠ ಎಂತಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Vinayaraj

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯೂರಪ್ಪನ ವಿಗ್ರಹವು ಚುಂಬಕಾಕರ್ಷಣೆಯಿರುವ ಕಪ್ಪು ಕಲ್ಲಿನಲ್ಲಿ ಅದ್ಭುತವಾಗಿ ಕೆತ್ತಲಾಗಿದೆ. ನಸುಕಿನ ಮೂರು ಘಂಟೆ ಸಮಯದಲ್ಲೆ ದೇವಾಲಯ ಆರಂಭಗೊಳ್ಳುತ್ತದೆ. ಎಳ್ಳೆಣ್ಣೆಯಿಂದ ಮೊದಲಿಗೆ ಅಭಿಷೇಕ ಮಾಡಿ ನಂತರ ಗಿಡಮೂಲಿಕೆಗಳಿಂದ ತಯಾರಿಸಲಾದ ಕಂದು ಬಣ್ಣದ ಲೇಪನವೊಂದನ್ನು ವಿಗ್ರಹಕ್ಕೆ ಹಚ್ಚಲಾಗುತ್ತದೆ. ಇದನ್ನು ವಕ ಎನ್ನುತ್ತಾರೆ.

ಚಿತ್ರಕೃಪೆ: Aruna

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಈ ಒಂದು ಅಲಂಕಾರಿಕ ದೃಶ್ಯವನ್ನು ನೊಡಲೆಂದೆ ಭಕ್ತಾದಿಗಳು ಸಾಲು ಸಾಲಾಗಿ ನಸುಕಿನ ವೇಳೆಯಲ್ಲೆ ನಿಂತು ಕಾಯುತ್ತಿರುತ್ತಾರೆ. ನಂತರ ವಿಗ್ರಹವನ್ನು ಗುರುವಾಯೂರು ದೇವಾಲಯದ ಕೊಳದ ನೀರಿನಿಂದ ಶುದ್ಧಿಕರಿಸಲಾಗುತ್ತದೆ ಹಾಗೂ ಆ ನೀರನ್ನೆ ತೀರ್ಥವಾಗಿ ಭಕ್ತರು ಪಡೆಯುತ್ತಾರೆ.

ಚಿತ್ರಕೃಪೆ: Arjun.theone

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಚುಂಬಕ ಶಕ್ತಿಯ ಕಲ್ಲಿನ ಮೇಲೆ ಹರಿದಾಡಿ ನಂತರ ಗಿಡ ಮೂಲಿಕೆಗಳ ಲೇಪನದ ಅಂಶಗಳನ್ನು ಹೊಂದಿರುವುದರಿಂದ ಆ ತೀರ್ಥ ಸಾಕಷ್ಟು ಒಷಧೀಯ ಗುಣಗಳನ್ನು ಹೊಂದಿರುತ್ತದೆ ಎನ್ನಲಾಗುತ್ತದೆ ಹಾಗೂ ಎಲ್ಲ ದೈಹಿಕ ಹೀನತೆಗಳನ್ನು ಹೋಗಲಾಡೈಸಬಲ್ಲುದು ಎಂದು ಬಕ್ತರು ನಂಬುತ್ತಾರೆ. ಗುರುವಾಯೂರು ರೈಲು ನಿಲ್ದಾಣ.

ಚಿತ್ರಕೃಪೆ: RanjithSiji

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯುರಪ್ಪನ ಕ್ಷೇತ್ರ:

ಗುರುವಾಯೂರು ದೇವಾಲಯ ಕಲ್ಯಾಣಿಯನ್ನು ರುದ್ರತೀರ್ಥಂ ಎಂದು ಕರೆಯುತ್ತಾರೆ. ಸ್ಥಳ ಪುರಾಣದಂತೆ ರುದ್ರ ದೇವರು ಅಂದರೆ ಶಿವನು ಈ ಕೊಳದ ದಕ್ಷಿಣ ತಟದಲ್ಲೆ ವಿಷ್ಣು ದೇವರನ್ನು ಸುಮಾರು ಸಾವಿರ ವರ್ಷಗಳ ಕಾಲ ಪೂಜಿಸಿದ್ದನಂತೆ! ಹೀಗಾಗಿ ಈ ಕೊಳವೂ ಸಾಕಷ್ಟು ಧಾರ್ಮಿಕ ಮಹತ್ವ ಪಡೆದಿದೆ. ರುದ್ರತೀರ್ಥ.

ಚಿತ್ರಕೃಪೆ: Arjun.theone

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X