Search
  • Follow NativePlanet
Share
» »ಅಚ್ಚರಿಗೊಳಿಸುವ ಭಾರತದ ಚೈನಾಟೌನ್!

ಅಚ್ಚರಿಗೊಳಿಸುವ ಭಾರತದ ಚೈನಾಟೌನ್!

By Vijay

ಭಾರತದ ನೆರೆ ಹೊರೆಯ ರಾಷ್ಟ್ರಗಳಲ್ಲೊಂದಾಗಿದೆ ಚೀನಾ ದೇಶ. ಭಾರತ ಹೇಗೆ ತನ್ನದೆ ಆದ ಪುರಾತನ ಸಂಸ್ಕೃತಿ-ಸಂಪ್ರದಾಯಗಳಿಂದ ಶ್ರೀಮಂತವಾಗಿದೆಯೊ ಅದೆ ರೀತಿಯಾಗಿ ಚೀನಾ ದೇಶವು ತನ್ನ ವಿಶಿಷ್ಟ ಸಂಸ್ಕೃತಿ-ಸಂಪ್ರದಾಯ ಹಾಗೂ ಆಚರಣೆಗಳಿಂದ ಸಾಕಷ್ಟು ಹೆಸರುವಾಸಿಯಾಗಿದೆ.

ನಮ್ಮಲ್ಲಿ ಬಹುತೇಕರಿಗೆ ಚೀನಿಯರ ಹಾಗೂ ಅವರ ವೇಷ-ಭೂಷಣ, ಆಚರಣೆಗಳ ಕುರಿತು ಸಾಕಷ್ಟು ಕುತೂಹಲವಿದೆ. ಇವುಗಳನ್ನು ಹತ್ತಿರದಿಂದ ನೋಡಬೇಕೆಂದರೆ ಚೀನಾ ದೇಶಕ್ಕೊಮ್ಮೆಯಾದರೂ ಭೇಟಿ ನೀಡಲೇಬೇಕು. ಆದರೆ ಎಲ್ಲರಿಗೂ ಚೀನಾ ದೇಶಕ್ಕೆ ಭೇಟಿ ನೀಡಲು ಸಾಧ್ಯವೆ? ಎಂಬ ಪ್ರಶ್ನೆ ತಲೆದೋರಬಹುದು. ಆದರೆ ಬೇಸರಿಸಿಕೊಳ್ಳದಿರಿ. ಭಾರತದಲ್ಲೆ ಚೀನಾ ದೇಶವನ್ನು ಕಾಣಬಹುದು.

ಕೊಲ್ಕತ್ತಾ ಜನಜೀವನ ಹೇಗಿದೆ ನೋಡಿ!

ಅಂದರೆ ಸಾಮಾನ್ಯವಾಗಿ ಚೀನಿಯರು ಆಚರಿಸುವ ಹಬ್ಬ ಹರಿ ದಿನಗಳು, ಅವರು ಭೇಟಿ ನೀಡುವ ದೇವಾಲಯಗಳು ಹೇಗಿರುತ್ತವೆ ಎಂಬುದನ್ನು ಭಾರತದಲ್ಲೆ ಕಾಣಬಹುದು. ಅಂತಹ ಒಂದು ಸ್ಥಳದ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ಇಲ್ಲಿ ತಲೆತಲಾಂತರದಿಂದ ಚೀನಾ ಮೂಲದ ಜನರು ವಾಸಿಸಿಕೊಂಡು ಬಂದಿದ್ದು ತಮ್ಮ ಸಂಸ್ಕೃತಿ-ಸಂಪ್ರದಾಯಗಳನ್ನು ಇನ್ನೂ ಜೀವಂತವಾಗಿಟ್ಟಿದ್ದಾರೆ.

ಹಾಗಾಗಿಯೆ ಈ ಸ್ಥಳವನ್ನು ಭಾವನಾತ್ಮಕವಾಗಿ "ಭಾರತದಲ್ಲಿರುವ ಚೀನಾ" ಎಂದು ಪ್ರೀತಿಯಿಂದ ಸಂಬೋಧಿಸಬಹುದಾಗಿದೆ. ಹಾಗಾದರೆ ಈ ಸ್ಥಳ ಯಾವುದು? ಇದು ಇರುವುದಾದರೂ ಎಲ್ಲಿ? ಎಂಬ ಪ್ರಶ್ನೆಗಳು ನಿಮಗೆ ಮೂಡಿದ್ದರೆ ಕೆಳಗಿನ ಸ್ಲೈಡುಗಳ ಮೂಲಕ ಉತ್ತರ ಕಂಡುಕೊಳ್ಳಿ.

ಕೊಲ್ಕತ್ತಾ

ಕೊಲ್ಕತ್ತಾ

ಇದು ಭಾರತದಲ್ಲಿರುವ ಏಕೈಕ ಚೀನಾ ಪಟ್ಟಣ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹಾಗಾಗಿ ಇದನ್ನು ಚೈನಾಟೌನ್ ಎಂದೆ ಕರೆಯುತ್ತಾರೆ. ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಚೀನಾ ಮೂಲಕ ವಲಸಿಗರು ವಾಸವಾಗಿರುವುದನ್ನು ಕಾಣಬಹುದು. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: GoShows

ನೀವೂ ನೋಡಿ

ನೀವೂ ನೋಡಿ

ಈ ಚೈನಾಟೌನ್ ಇರುವುದು ಭಾರತದ ಮಹಾನಗರಗಳಲ್ಲೊಂದಾದ ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾ ನಗರದಲ್ಲಿ. ನಗರದ ಪೂರ್ವ ಭಾಗದಲ್ಲಿ ಚೈನಾಟೌನ್ ಪ್ರದೇಶವಿದ್ದು, ಪ್ರವಾಸಿಗರು ಇಲ್ಲಿ ಚೀನಿ ಸಂಸ್ಕೃತಿಯನ್ನು ಚೀನಾ ದೇಶಕ್ಕೆ ತೆರಳದೆಯೆ ಬಹು ಹತ್ತಿರದಿಂದ ಕಾಣಬಹುದಾಗಿದೆ. ಹಾಗಾಗಿ ಸಾಕಷ್ಟು ವಿದೇಶಿ ಪ್ರವಾಸಿಗರನ್ನು ಚೈನಾಟೌನ್ ಆಕರ್ಷಿಸುತ್ತದೆ.

ಚಿತ್ರಕೃಪೆ: Indrajit Das

ಹೇಗೆ ಬಂದರು?

ಹೇಗೆ ಬಂದರು?

ಇತಿಹಾಸವನ್ನು ಕೆದುಕುವುದಾದರೆ, ಬ್ರಿಟೀಷ್ ವಸಾಹತು ಸಮಯದಲ್ಲಿ ಅಂದರೆ 19 ನೇಯ ಶತಮಾನದ ಮೊದಲಾರ್ಧದಲ್ಲಿ ಸಾಕಷ್ಟು ಕೈಗಾರಿಕೆಗಳು ಹುಟ್ಟಿಕೊಂಡಿದ್ದವು. ಕೊಲ್ಕತ್ತಾ ಹಾಗೂ ಚೆನ್ನೈ ಬಂದರು ಪ್ರದೇಶಗಳಲ್ಲಿ ಕಾರ್ಮಿಕರಿಗೆ ಬಲು ಬೇಡಿಕೆಯಿತ್ತು. ಅದರಲ್ಲೂ ವಿಶೇಷವಾಗಿ ಚರ್ಮೋದ್ಯಮದಲ್ಲಿ ಕೆಲಸ ಮಾಡಲು ಕಾರ್ಮಿಕರ ಅವಶ್ಯಕತೆಯಿತ್ತು.

ಚಿತ್ರಕೃಪೆ: Rangan Datta Wiki

ಇಲ್ಲೆ ವಾಸ್ತವ್ಯ

ಇಲ್ಲೆ ವಾಸ್ತವ್ಯ

ಈ ಸಂದರ್ಭದಲ್ಲಿ ಭಾರತದ ಹಿಂದೂಗಳು ಚರ್ಮಾಧಾರಿತ ಕೆಲಸಗಳಲ್ಲಿ ಧಾರ್ಮಿಕ ದೃಷ್ಟಿಯಿಂದ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಂತೆಯೆ ಕಾರ್ಮಿಕರ ಬೇಡಿಕೆ ಹೆಚ್ಚಾಗಿ ಕೆಲವು ಉದ್ಯಮಿಗಳು ಚೀನಾ ದೇಶದಿಂದ ಕಾರ್ಮಿಕರನ್ನು ಭಾರತಕ್ಕೆ ಕರೆ ತಂದಿದ್ದರು. ಹೀಗೆ ಚೀನಾ ದೇಶದಿಂದ ಬಂದ ಜನರು ಇಲ್ಲಿ ನೆಲೆಸಿ ವಾಸಿಸತೊಡಗಿದರು. ಇವರು ಇಂದು ಚೀನಾ ಮೂಲದ ಭಾರತೀಯ ನಾಗರಿಕರಾಗಿದ್ದಾರೆ.

ಚಿತ್ರಕೃಪೆ: Indrajit Das

ಸಂಸ್ಕೃತಿ ಜೀವಂತ

ಸಂಸ್ಕೃತಿ ಜೀವಂತ

ಒಂದೊಮ್ಮೆ 20,000 ದಿಂದ ಹಿಡಿದು 200000 ದವರೆಗಿದ್ದ ಈ ಜನರು ಇಂದು ಅಧಿಕೃತ ಅಂಕಿ ಅಂಶಗಳ ಪ್ರಕಾರ ಎರಡು ಸಾವಿರದ ಆಸು ಪಾಸಿನಲ್ಲಿದ್ದಾರೆಂದು ಹೇಳಲಾಗಿದೆ. ಆದರೂ ಇವರು ತಮ್ಮ ಮೂಲದ ಸಂಸ್ಕೃತಿಯನ್ನು ಸಂಪ್ರದಾಯ-ಆಚರಣೆಗಳನ್ನು ಇಂದಿಗೂ ಜೀವಂತವಾಗಿಟ್ಟಿದ್ದಾರೆ.

ಚಿತ್ರಕೃಪೆ: Rangan Datta Wiki

ಮೊದಲು ಬಂದವರು

ಮೊದಲು ಬಂದವರು

ಕೆಲವು ಮೂಲಗಳ ಪ್ರಕಾರ, ಹಕ್ಕಾ ಭಾಷೆ ಮಾತನಾಡುವವರು ಮೊದಲ ಬಾರಿಗೆ ಭಾರತಕ್ಕೆ ಬಂದರೆಂದು ಹೇಳಲಾಗಿದೆ. ಇವರನ್ನು ಟೊಂಗ್ ಅಚಿ ಎಂಬ ವ್ಯಾಪಾರಿಯು ಕೊಲ್ಕತ್ತಾದಿಂದ 33 ಕಿ.ಮೀ ದೂರದಲ್ಲಿರುವ ಅಚಿಪುರ್ ಎಂಬಲ್ಲಿ ತಾನು ಸ್ಥಾಪಿಸಿದ್ದ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ಕರೆತಂದಿದ್ದ. ಇಂದಿಗೂ ಇಲ್ಲಿ ದೇವಾಲಯ ಹಾಗೂ ಅವನ ಸಮಾಧಿಯಿದ್ದು, ಚೀನಾ ಹೊಸ ವರ್ಷದ ಸಂದರ್ಭದಂದು ಚೀನಿ ಮೂಲದ ಭಾರತೀಯರು ಇಲ್ಲಿಗೆ ಭೇಟಿ ನೀಡಿ ಸಂಭ್ರಮಿಸುತ್ತಾರೆ. ಸಮಾಧಿ ಸ್ಮಾರಕ.

ಚಿತ್ರಕೃಪೆ: Rangan Datta Wiki

ಹೀಗಿರುತ್ತವೆ ನೋಡಿ

ಹೀಗಿರುತ್ತವೆ ನೋಡಿ

ಅಷ್ಟೆ ಅಲ್ಲ, ಚೈನಾಟೌನ್ ನಲ್ಲಿ ಚೀನಿಯರ ಸಾಂಪ್ರದಾಯಿಕ ದೇವಾಲಯಗಳನ್ನೂ ಸಹ ಕಾಣಬಹುದು. ಅವುಗಳನ್ನು ಚೈನೀಸ್ ಚರ್ಚುಗಳೆಂದೆ ಕರೆಯಲಾಗುತ್ತವೆ ಹಾಗೂ ಕ್ರೈಸ್ತ ಧರ್ಮದೊಂದಿಗೆ ಯಾವುದೆ ರೀತಿಯ ಸಂಬಂಧ ಇವು ಹೊಂದಿಲ್ಲ.

ಚಿತ್ರಕೃಪೆ: Iampinaki

ಎಲ್ಲವೂ ವಿಧಿವತ್ತಾಗಿ

ಎಲ್ಲವೂ ವಿಧಿವತ್ತಾಗಿ

ಚೀನಿಯರ ದೇವಾಲಯಗಳಂತೆಯೆ ಈ ದೇವಾಲಯಗಳಲ್ಲಿ ಅವರದೆ ಆದ ಸಂಸ್ಕೃತಿಯಂತೆ ದೇವರುಗಳಿದ್ದು ಸಾಂಪ್ರದಾಯಿಕವಾಗಿಯೆ ಇಲ್ಲಿ ಪೂಜಾ ವಿಧಿ ವಿಧಾನಗಳು ಜರುಗುತ್ತವೆ.

ಚಿತ್ರಕೃಪೆ: Iampinaki

ದೇವಾಲಯದಿಂದ ಪ್ರಾರಂಭ

ದೇವಾಲಯದಿಂದ ಪ್ರಾರಂಭ

ಚೈನಾ ದೇಶದಲ್ಲಿ ಆಚರಿಸಲಾಗುವ ಹೊಸ ವರ್ಷದ ಸಂಭ್ರಮಾಚರಣೆಯನ್ನು ಚೈನಾಟೌನ್ ನಲ್ಲಿಯೂ ಬಲು ಅದ್ದೂರಿ ಹಾಗೂ ಸಡಗರಗಳಿಂದ ಆಚರಿಸಲಾಗುತ್ತದೆ. ಈ ರೀತಿಯ ಆಚರಣೆಗಳು ಸಾಕಷ್ಟು ಕುತೂಹಲ ಕೆರಳಿಸುತ್ತವಲ್ಲದೆ ವೈವಿಧ್ಯತೆಯಲ್ಲಿ ಏಕತೆ ಸಾರುವ ಭಾರತದ ವೈಭವತೆಗೆ ಸಾಕ್ಷಿಯೂ ಆಗುತ್ತದೆ.

ಚಿತ್ರಕೃಪೆ: jliptoid

ವಿವಿಧ ಖಾದ್ಯಗಳು

ವಿವಿಧ ಖಾದ್ಯಗಳು

ಇನ್ನೂ ಇಲ್ಲಿರುವ ಚೈನಾಬಜಾರ್ ವೈವಿಧ್ಯಮಯ ತಿಂಡಿ ತಿನಿಸುಗಳಿಗೆ, ಆಹಾರ ಸಾಮಗ್ರಿಗಳಿಗೆ ಪ್ರಖ್ಯಾತವಾಗಿದೆ. ಚೀನಾದಂತೆ ಹುಳು ಹುಪ್ಪಡಿಗಳ ಭಕ್ಷ್ಯಗಳು ಸಿಗುವುದಿಲ್ಲವಾದರೂ ರಸ್ತೆ ಬದಿಯ ಬೀದಿ ಬೀದಿಗಳಲ್ಲಿ ಮಾಂಸಾಹಾರಿ ಖಾದ್ಯಗಳು ಹಾಗೂ ಇತರೆ ಆಕರ್ಷಕ ಚಿಕ ಪುಟ್ಟ ವಸ್ತುಗಳು ದೊರೆಯುತ್ತವೆ.

ಚಿತ್ರಕೃಪೆ: Iampinaki

ಚೈನಾ ಬಜಾರ್

ಚೈನಾ ಬಜಾರ್

ನಿಮಗೆ ನೈಜವಾದ ಚೀನಾ ಆಹಾರ ಹಾಗೂ ಭಾರತೀಯ ಚೈನಾ ಪದ್ಧತಿಯ ಆಹಾರ ತಿನುವ ಬಯಕೆಯಿದ್ದಲ್ಲಿ ಚೈನಾಟೌನ್ ಒಂದು ಉತ್ತಮ ಆಯ್ಕೆ. ಇಲ್ಲಿರುವ ಚೀನಾ ಮೂಲದ ಭಾರತೀಯರು ಇಂತಹ ಹೋಟೆಲುಗಳಲ್ಲಿ ಕೆಲಸ ಮಾಡುತ್ತಿದ್ದು ಸಾಂಪ್ರದಾಯಿಕ ಚೀನಾ ಆಹಾರ ರುಚಿ ನಿಮಗೆ ಗರಿಷ್ಠ ಮಟ್ಟಕ್ಕೆ ಸಿಗಬಹುದೆಂದರೂ ತಪ್ಪಾಗಲಾರದು.

ಚಿತ್ರಕೃಪೆ: Hoitintungs

ನಾಮ್ ಸೂನ್ ಚರ್ಚ್

ನಾಮ್ ಸೂನ್ ಚರ್ಚ್

ಕೊಲ್ಕತ್ತಾ ನಗರದಲ್ಲಿರುವ ಈ ಪ್ರಸಿದ್ಧ ಚೈನಾಟೌನ್ ಪ್ರದೇಶವು ಇಂದು ಎರಡು ಭಾಗಗಳಲ್ಲಿ ವಿಂಗಡನೆಯಾಗಿದ್ದು ಒಲ್ಡ್ ಚೈನಾಟೌನ್ ಹಾಗೂ ನಿವ್ ಚೈನಾಟೌನ್ ಎಂದು ಕರೆಯಲ್ಪಡುತ್ತವೆ. ನಾಮ್ ಸೂನ್ ಚೈನೀಸ್ ಚರ್ಚ್.

ಚಿತ್ರಕೃಪೆ: Biswarup Ganguly

ತಂಗ್ರಾ ಬಡಾವಣೆ

ತಂಗ್ರಾ ಬಡಾವಣೆ

ಒಲ್ಡ್ ಚೈನಾಟೌನ್ ಕೊಲ್ಕತ್ತಾ ನಗರದ ಕೇಂದ್ರ ಭಾಗದಲ್ಲಿರುವ ತಿರೆಟ್ಟಾ ಮಾರುಕಟ್ಟೆ ಪ್ರದೇಶವಾಗಿದ್ದು ಇಲ್ಲಿ ಬೆಳಗಿನ ಸಮಯದಲ್ಲಿ ಸಾಂಪ್ರದಾಯಿಕ ರೀತಿಯ ಚೀನಾ ಉಪಹಾರಗಳು ದೊರೆಯುತ್ತವೆ. ಹೊಸ ಚೈನಾಟೌನ್ ಪ್ರದೇಶವು ತಂಗ್ರಾ ಎಂಬ ಬಡಾವಣೆಯಲ್ಲಿದೆ.

ಚಿತ್ರಕೃಪೆ: Biswarup Ganguly

ಚೀನಾನುಭವ

ಚೀನಾನುಭವ

ನಿಮಗೆ ಚೀನಿಯರ ಆಚರಣೆಗಳನ್ನು ಹತ್ತಿರದಿಂದ ನೋಡಬೇಕೆಂದಿದ್ದರೆ, ಚೀನಾ ಆಹಾರ ಖಾದ್ಯಗಳನ್ನು ಸವಿಯಲು ಬಯಕೆಯಿದ್ದರೆ, ಕೊಲ್ಕತ್ತಾದ ಈ ಚೈನಾಟೌನ್ ಗೊಮ್ಮೆ ಖಂಡಿತವಾಗಿಯೂ ಭೇಟಿ ನೀಡಿ.

ಚಿತ್ರಕೃಪೆ: Indrajit Das

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more