Search
  • Follow NativePlanet
Share
» »ಚಿಕ್ಕಮಗಳೂರು ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಚಿಕ್ಕಮಗಳೂರು ಜಿಲ್ಲೆಯ ಸಮಗ್ರ ಆಕರ್ಷಣೆಗಳು

By Vijay

ಕರ್ನಾಟಕದ ಮಲೆನಾಡು ಪ್ರದೇಶವು ಮೊದಲಿನಿಂದಲೂ ಪ್ರವಾಸಿ ದೃಷ್ಟಿಯಿಂದ ಬಹು ಜನಪ್ರೀಯವಾಗಿರುವ ವಲಯವಾಗಿದೆ. ಹೆಸರೆ ಸೂಚಿಸುವಂತೆ "ಮಲೆ" ಅಂದರೆ ಬೆಟ್ಟ ಗುಡ್ಡಗಳು ಅವ್ಯಾಹತವಾಗಿ ಪಸರಿಸಿರುವ ನಾಡಾಗಿರುವ ಈ ಪ್ರದೇಶವು ದಟ್ಟವಾದ ಗಿಡ ಮರಗಳಿಂದಲೂ ಸಹ ಕೂಡಿದ್ದು ಒಂದು ಗಿರಿಧಾಮಗಳ ಪ್ರದೇಶವಾಗಿದೆ.

ವಾರಾಂತ್ಯ ಕೊಡುಗೆ ಕ್ಲಿಯರ್ ಟ್ರಿಪ್ ನಿಂದ ಹೋಟೆಲ್ ಬುಕ್ಕಿಂಗ್ ಮೇಲೆ 50% ಕಡಿತ

ಇಂತಹ ಮಲೆನಾಡಿನಲ್ಲಿ ಸುಂದರವಾಗಿ ಕನ್ಯೆಯಂತೆ ಕಂಗೊಳಿಸುತ್ತಿರುವ ಒಂದು ಸುಂದರ ಜಿಲ್ಲೆ ಚಿಕ್ಕಮಗಳೂರು. ಮಲೆನಾಡಿನ ಈ ಭಾಗವು ತನ್ನ ಒಡಲಿನಲ್ಲಿ ನಿಸ್ಸಂಶಯವಾಗಿ ಭೇಟಿ ನೀಡಲೇಬೇಕಾದಂತಹ ಸಾಕಷ್ಟು ಪ್ರವಸಿ ಆಕರ್ಷಣೆಗಳನ್ನು ಹುದುಗಿಸಿಟ್ಟುಕೊಂಡಿದೆ. ವರ್ಷದ ಎಲ್ಲ ಋತುಮಾನಗಳಲ್ಲೂ ಭೇಟಿ ನೀಡಲು ಯೋಗ್ಯವಾಗಿರುವ ಚಿಕ್ಕಮಗಳೂರು ಜಿಲ್ಲೆಯು ಬೇಸಿಗೆಯ ಸಮಯದಲ್ಲೂ ಸಹ ವಿಶೇಷವಾಗಿ ಭೇಟಿ ನೀಡಬಹುದಾಗಿದೆ.

ವಿಶೇಷ ಲೇಖನ : ಮುನ್ನಾರ್ ಭೇಟಿಯ ಹಿಂದಿರುವ ರಹಸ್ಯ

ಇದೊಂದು ಗಿರಿಧಾಮಗಳುಳ್ಳ ಜಿಲ್ಲೆಯಾಗಿರುವುದರಿಂದ ಬೇಸಿಗೆಯ ಸಮಯದಲ್ಲಿ ತಾಪಮಾನವು ಇತರೆ ಪ್ರದೇಶಗಳಿಗೆ ಹೋಲಿಸಿದಾಗ ಅಷ್ಟು ಹೆಚ್ಚಾಗಿರದೆ ಕೊಂಚ ತಂಪು ಹಾಗೂ ಹಿತಕರವಾಗಿರುತ್ತದೆ. ಇನ್ನೂ ಇಲ್ಲಿ ನಿಸರ್ಗದ ಸೊಬಗಿನ ಕುರಿತು ಸಂಶಯ ಪಡಲೇಬೇಕಾಗಿಲ್ಲ. ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನ ಮನಸೂರೆಗೊಳ್ಳುವಂತೆ ಮಾಡುತ್ತದೆ ಇಲ್ಲಿನ ಪ್ರಕೃತಿದತ್ತ ಸೌಂದರ್ಯ. ಚಿಕ್ಕಮಗಳೂರು ಬೆಂಗಳೂರಿನಿಂದ 240 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳೆರಡೂ ಲಭ್ಯವಿದೆ.

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಕರ್ನಾಟಕ ರಾಜ್ಯದ ಕೊಂಚ ನೈರುತ್ಯ ಭಾಗದಲ್ಲಿ ನೆಲೆಸಿರುವ ಈ ಮಲೆನಾಡು ಜಿಲ್ಲೆಯು ದಟ್ಟವಾದ ಅರಣ್ಯ ಪ್ರದೇಶ ಹಾಗೂ ಬೆಟ್ಟ ಗುಡ್ಡಗಳಿಂದ ಕೂಡಿದ್ದು ಹೆಚ್ಚಿನ ಪ್ರಮಾಣದ ಮಳೆಯನ್ನು ಪಡೆಯುತ್ತದೆ. "ಚಿಕ್ಕಮಗಳ ಊರು" ಎಂಬ ಪದದಿಂದ ಇದಕ್ಕೆ ಚಿಕ್ಕಮಗಳೂರು ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Vikram Vetrivel

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಸ್ಥಳ ಪುರಾಣದ ಪ್ರಕಾರ, ಹಿಂದೆ ಸಕ್ರೆಪಟ್ಟಣದ ಮುಖ್ಯಸ್ಥ ರುಕ್ಮಣಗಡ ಎಂಬಾತನು ತನ್ನ ಕೊನೆಯ ಪುತ್ರಿಯ ಮದುವೆಗೆಂದು ವರದಕ್ಷಿಣೆಯ ರೂಪದಲ್ಲಿ ಈ ತಾಣವನ್ನು ಕೊಟ್ಟಿದ್ದರಿಂದ ಇದಕ್ಕೆ ಚಿಕ್ಕಮಗಳೂರು ಎಂದು ಹೆಸರು ಬಂದಿತೆನ್ನಲಾಗಿದೆ.

ಚಿತ್ರಕೃಪೆ: Riju K

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅಲ್ಲದೆ ಈ ಪ್ರದೇಶದಲ್ಲಿ ಹಿರೆಮಗಳೂರು ಎಂಬ ಪಟ್ಟಣವೂ ಸಹ ಇದ್ದು ಇದು ಆ ಮುಖ್ಯಸ್ಥ ತನ್ನ ಮೊದಲನೆಯ ಅಂದರೆ ಹಿರಿಯ ಪುತ್ರಿಗೆ ಈ ಪ್ರದೇಶ ನೀಡಿದ್ದ ಎನ್ನಲಾಗುತ್ತದೆ. ಇಲ್ಲಿ ದೊರಕಿರುವ ಪುರಾತನ ಶಾಸನಗಳಲ್ಲಿ ಈ ಅವಳಿ ನಗರಗಳನ್ನು ಕಿರಿಯ ಮುಗುಳಿ ಹಾಗೂ ಹಿರಿಯ ಮುಗುಳಿ ಎಂದು ದಾಖಲಿಸಲಾಗಿದೆ.

ಚಿತ್ರಕೃಪೆ: Premnath Thirumalaisamy

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಚಿಕ್ಕಮಗಳೂರು ಪ್ರವಾಸದ ಸಮಯದಲ್ಲಿ, ಪಟ್ಟಣದಿಂದ ಕೇವಲ 20 ಕಿಮೀ ದೂರದಲ್ಲಿರುವ ಅಯ್ಯನಕೆರೆ ಸರೋವರಕ್ಕೂ ಭೇಟಿ ನೀಡಬಹುದಾಗಿದೆ. ಈ ಸರೋವರವು ಮಲೆನಾಡಿನ ಪ್ರಶಾಂತ ಮತ್ತು ಸುಂದರ ಪರಿಸರದ ಪ್ರದೇಶದಲ್ಲಿದ್ದು, ಕರ್ನಾಟಕ ಎರಡನೇ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚಿತ್ರಕೃಪೆ: Keshava Vitia

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರು 1915 ರಲ್ಲಿ ಸ್ಥಾಪಿಸಲಾದ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಬಹುದಾಗಿದೆ. ಕೊಪ್ಪ ಪ್ರಯೋಗಾಲಯದಲ್ಲಿ ನೆಲೆಗೊಂಡ CCRI, ಬಾಧಿತ ಕಾಫಿ ಗಿಡದ ಎಲೆ ರೋಗಗಳ ಸಮಸ್ಯೆಯನ್ನು ಪರಿಹರಿಸುವ ಕೆಲಸಮಾಡುತ್ತದೆ. ಸಂಸ್ಥೆಯು 130 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ, ಅದರಲ್ಲಿ 80,26 ಹೆಕ್ಟೇರ್ ಕೇವಲ ತೋಟಕ್ಕೇ ಬಳಸಿಕೊಳ್ಳಲಾಗಿದೆ. ಚಿಕ್ಕಮಗಳೂರಿನ ಒಂದು ಕಾಫಿ ತೋಟ.

ಚಿತ್ರಕೃಪೆ: prashantby

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಕೆಮ್ಮಣ್ಣುಗುಂಡಿ, ಚಿಕ್ಕಮಗಳೂರು ಪಟ್ಟಣದಿಂದ ಸುಮಾರು 55 ಕಿ.ಮೀ ಗಳಷ್ಟು ದೂರದಲ್ಲಿರುವ ಈ ತಾಣವು ಒಂದು ಸುಂದರ ಗಿರಿಧಾಮವಾಗಿದ್ದು ತರಿಕೆರೆ ತಾಲೂಕು ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿಗೆ ತೆರಳಲು ಬಾಡಿಗೆ ವಾಹನ ಹಾಗೂ ಬಸ್ಸುಗಳು ಚಿಕ್ಕಮಗಳೂರಿನಿಂದ ನಿರಾಯಾಸವಾಗಿ ದೊರೆಯುತ್ತವೆ.

ಚಿತ್ರಕೃಪೆ: Vijay Sawant

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಬಾಬಾ ಬುಡನ್ ಗಿರಿ ಬೆಟ್ಟ ಶ್ರೇಣಿಗಳಿಂದ ಸುತ್ತುಅವರೆದಿರುವ ಈ ಗಿರಿಧಾಮವು ಅತ್ಯದ್ಭುತವಾದ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಪ್ರದೇಶದಲ್ಲಿ ಮಣ್ಣಿನ ಬಣ್ಣ ಹೆಚ್ಚಾಗಿ ಕೆಂಪಾಗಿರುವುದರಿಂದ ಕೆಂಪು ಮಣ್ಣಿನ ಗುಂಡಿಯಿಂದ ಕ್ರಮೇಣವಾಗಿ ಇದಕ್ಕೆ ಕೆಮ್ಮಣ್ಣುಗುಂಡಿ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಚಿತ್ರಕೃಪೆ: Elroy Serrao

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಮೈಸೂರು ಪ್ರಾಂತ್ಯದ ಒಡೆಯರಾಗಿದ್ದ ನಾಲ್ಕನೆಯ ಕೃಷ್ಣರಾಜಾ ವಡೇಯರ್ ಅವರ ಬೇಸಿಗೆಯ ರಜಾ ಕಾಲದ ವಿಶ್ರಾಂತಿ ತಾಣವಾಗಿ ಕೆಮ್ಮಣ್ಣುಗುಂಡಿಯನ್ನು ಅಭಿವೃದ್ಧಿಪಡಿಸಲಾಯಿತು. ನಂತರ ವಡೇಯರ್ ಅವರು ಈ ಗಿರಿಧಾಮವನ್ನು ಕರ್ನಾಟಕ ಸರ್ಕಾರದ ಸುಪರ್ದಿಗೆ ಒಪ್ಪಿಸಿದರು. ಇಂದು ಕರ್ನಾಟಕ ತೋಟಗಾರಿಕೆ ಇಲಾಖೆಯು ಇಲ್ಲಿ ರಿಸಾರ್ಟ್ ಒಂದನ್ನು ನಡೆಸುತ್ತಿದ್ದು ಸುತ್ತಮುತ್ತಲಿನ ಪರಿಸರವನ್ನು ನೋಡಿಕೊಳ್ಳುತ್ತಿದೆ.

ಚಿತ್ರಕೃಪೆ: Elroy Serrao

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಕೆಮ್ಮಣ್ಣುಗುಂಡಿಯು ಕೆಲ ವಿಶೇಷ ಆಕರ್ಷಣೆಗಳಿಗಾಗಿ ಹೆಸರುವಾಸಿಯಾಗಿದೆ. ಅದರಲ್ಲೊಂದು ಝೆಡ್ (z) ಪಾಯಿಂಟ್. ಕೆಮ್ಮಣ್ಣುಗುಂಡಿಯ ರಾಜಭವವನದಿಂದ ಸುಮಾರು 45 ನಿಮಿಷಗಳ ಕಾಲ ಮೇಲೆರುತ್ತ ಈ ಸುಂದರ ತಾಣವನ್ನು ತಲುಪಬಹುದು. ಸೂರ್ಯೋದಯ ನೋಟಕ್ಕಾಗಿ ಇದು ಪ್ರಖ್ಯಾತವಾಗಿದೆ.

ಚಿತ್ರಕೃಪೆ: Pradeep Kumbhashi

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಗುಲಾಬಿ ಉದ್ಯಾನ, ಕೆಮ್ಮಣ್ಣುಗುಂಡಿಯಲ್ಲಿರುವ ಮತ್ತೊಂದು ಸುಂದರ ಆಕರ್ಷಣೆ. ಕರ್ನಾಟಕ ತೋಟಗಾರಿಕೆ ಇಲಾಖೆಯಿಂದ ಇದು ನಿರ್ವಹಿಸಲ್ಪಡುತ್ತಿದೆ. ಇಲ್ಲಿ ಅಂದ ಚೆಂದದ, ಬಣ್ಣ ಬಣ್ಣದ ಬಗೆ ಬಗೆಯ ಸುಂದರ ಗುಲಾಬಿ ಹೂವುಗಳನ್ನು ಕಾನಬಹುದು. ಕೆಮ್ಮಣ್ಣುಗುಂಡಿ ಕಣಿವೆ.

ಚಿತ್ರಕೃಪೆ: Elroy Serrao

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಹೆಬ್ಬೆ ಜಲಪಾತ, ಕೆಮ್ಮಣ್ಣುಗುಂಡಿಯ ಬಳಿ ಭೇಟಿ ನೀಡಬಹುದಾದ ಮತ್ತೊಂದು ಪ್ರವಾಸಿ ಆಕರ್ಷಣೆಯಿದು. ರಾಜಭವನದಿಂದ ಕೆಳಮುಖವಾಗಿ ಸುಮಾರು ಎಂಟು ಕಿ.ಮೀ ಚಾರಣ ಮಾಡಿ ಈ ಸುಂದರ ಜಲಪಾತ ತಾಣಕ್ಕೆ ತಲುಪಬಹುದು. ಜಲಪಾತವು 168 ಮೀ. ಎತ್ತರದಿಂದ ಎರಡು ಘಟ್ಟಗಳಲ್ಲಿ ಭೋರೆಗೆರೆಯುತ್ತ ಬೀಳುತ್ತದೆ. ಎರಡು ಘಟ್ಟಗಳನ್ನು ದೊಡ್ಡ ಹೆಬ್ಬೆ ಹಾಗೂ ಚಿಕ್ಕ ಹೆಬ್ಬೆ ಎಂದು ಕರೆಯುತ್ತಾರೆ.

ಚಿತ್ರಕೃಪೆ: Srinivasa83

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಕಲ್ಲತ್ತಿ ಜಲಪಾತವೂ ಕೂಡ ಕೆಮ್ಮಣ್ಣುಗುಂಡಿಯಿಂದ ಸುಮಾರು 10 ಕಿ.ಮೀ ಗಳಷ್ಟು ದೂರದಲ್ಲಿ ಕೆಮ್ಮಣ್ಣುಗುಂಡಿಯಿಂದ ತರಿಕೆರೆಗೆ ಹೋಗುವ ಮಾರ್ಗದಲ್ಲಿದೆ.

ಚಿತ್ರಕೃಪೆ: Vinayak Kulkarni

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಮುಳ್ಳಯ್ಯನಗಿರಿ, ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕರ್ನಾಟಕದಲ್ಲೆ ಅತಿ ಎತ್ತರದ ಶಿಖರ ಪ್ರದೇಶವಾಗಿದೆ. ಚಂದ್ರ ದ್ರೋಣ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಈ ಶಿಖರವು ಕರ್ನಾಟಕದ ಹಾಗೂ ದ.ಭಾರತದ ಅದ್ಭುತ ಚಾರಣ ಮಾರ್ಗಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: Riju K

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಕುದುರೆಮುಖ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮತ್ತೊಂದು ಸುಮಧುರವಾದ ಗಿರಿಧಾಮ. ಶೋಲಾ ಅರಣ್ಯಗಳಿಂದ ಆವರಿಸಿರುವ ಈ ಸುಂದರ ತಾಣವು ಭೇಟಿ ನೀಡುವವರನ್ನು ತನ್ನ ಅಂದ ಚೆಂದಗಳಿಂದ ಮಂತ್ರಮುಗ್ಧಗೊಳಿಸುತ್ತದೆ.

ಚಿತ್ರಕೃಪೆ: netlancer2006

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಒಂದು ನಿರ್ದಿಷ್ಟ ಕೋನದಿಂದ ನೋಡಿದಾಗ ಈ ತಾಣವು ಕುದುರೆಯ ಮುಖದಂತೆ ಗೊಂಚರಿಸುವುದರಿಂದ ಇದಕ್ಕೆ ಕುದುರೆಮುಖ ಎಂಬ ಹೆಸರು ಬಂದಿದ್ದು ಇದು ಚಿಕ್ಕಮಗಳೂರು ಪಟ್ಟಣದಿಂದ ಕಾರ್ಕಳದಿಂದ ಹಾಗೂ ಕಳಸದಿಂದ ಕ್ರಮವಾಗಿ 107, 48, 20 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Praveen

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಮನಮೋಹಕ ಬೆಟ್ಟ ಪ್ರದೇಶ, ತಂಪಾದ ವಾತಾವರಣ ಹಾಗೂ ಹಿತಕರವಾದ ಪರಿಸರದಿಂದ ಕೂಡಿರುವ ಕುದುರೆಮುಖವು ಹಿಂದೆ "ಸಮ್ಸೆಪರ್ವತ" ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಇಂದು ಕರ್ನಾಟಕದ ಮೊದಲ ಐದು ಎತ್ತರದ ಶಿಖರಗಳ ಪೈಕಿ ಕುದುರೆಮುಖವೂ ಸಹ ಒಂದಾಗಿದೆ.

ಚಿತ್ರಕೃಪೆ: Praveen

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಕುದುರೆಮುಖವು ಕೇವಲ ಗಿರಿಧಾಮಕ್ಕೆ ಮಾತ್ರ ಪ್ರಖ್ಯಾತವಾಗಿರದೆ ರಾಷ್ಟ್ರೀಯ ಉದ್ಯಾನಕ್ಕೂ ಸಹ ಹೆಸರುವಾಸಿಯಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವು ಕರ್ನಾಟಕದ ಎರಡನೆಯ ದೊಡ್ಡ ರಕ್ಷಿತ ಅರಣ್ಯ ಪ್ರದೇಶವಾಗಿದೆ. ಈ ರಾಷ್ಟ್ರೀಯ ಉದ್ಯಾನವು ಚಿಕ್ಕಮಗಳೂರು, ಉಡುಪಿ ಹಾಗೂ ದ.ಕನ್ನಡ ಜಿಲ್ಲೆಗಳಲ್ಲಿ ವ್ಯಾಪಿಸಿದೆ.

ಚಿತ್ರಕೃಪೆ: Naveen

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಕುದುರೆಮುಖವು ಚಾರಣಕ್ಕೂ ಸಹ ಬಹು ಪ್ರಖ್ಯಾತಿ ಪಡೆದಿದೆ. ಚಾರಣಕ್ಕೆ ಹೊರಡುವ ಮುಂಚೆ ಅರಣ್ಯ ಇಲಾಖೆಗೆ ಭೇಟಿ ನೀಡಿ ಅವಶ್ಯಕ ಸಲಹೆಗಳನ್ನು ಪಡೆಯುವುದು ಉತ್ತಮ. ಒಂದು ವೇಳೆ ಚಾರಣಕ್ಕೆ ಅವಕಾಶವಿದ್ದರೂ ಸಹ ಅದು ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆಯೊಳಗಷ್ಟೆ ಮಾಡಬೇಕು.

ಚಿತ್ರಕೃಪೆ: Praveen

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಚಾರಣದ ಸಮಯದಲ್ಲಿ ಇಷ್ಟವಿದ್ದಲ್ಲಿ ಲಕ್ಯಾ ಆಣೆಕಟ್ಟೆಗೆ ಭೇಟಿ ನೀಡಬಹುದು. ವರ್ಷದ ಬಹುತೇಕ ಸಮಯ ಇಲ್ಲಿ ನೀರು ಇರದೆ ಇರುವುದರಿಂದ ಸಾಕಷ್ಟು ಜನರಿಗೆ ಇಲ್ಲಿಗೆ ಭೇಟಿ ನೀಡಲು ಬೇಸರ. ಆದರೂ ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಈ ಆಣೆಕಟ್ಟೆಅಯ ಸುತ್ತಮುತ್ತಲಿನ ನೋಟವು ರೋಮಾಂಚನಗೊಳಿಸದೆ ಇರಲಾರದು. ಚಿತ್ರದಲ್ಲಿರುವುದು ಲಕ್ಯಾ ಡ್ಯಾಮ್.

ಚಿತ್ರಕೃಪೆ: Arun Keerthi K. Barboza

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಹನುಮಾನ್ ಗುಂಡಿ ಜಲಪಾತ, ಕುದುರೆಮುಖದಲ್ಲಿರುವ ಒಂದು ಪ್ರಮುಖ ಆಕರ್ಷಣೆ. ಕಳಸದಿಂದ ಸುಮಾರು 20 ಕಿ.ಮೀ ದೂರವಿದ್ದು ಕಾಲ್ನಡಿಗೆಯ ಮೂಲಕವೆ ಈ ತಾಣಕ್ಕೆ ತಲುಪಬೇಕು.

ಚಿತ್ರಕೃಪೆ: Arun Keerthi K. Barboza

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಕುದುರೆಮುಖದಲ್ಲಿ ಭೇಟಿ ನೀಡಬಹುದಾದ ಮತ್ತೊಂದು ಸುಂದರ ಜಲಪಾತ ತಾಣವೆಂದರೆ ಕಡಾಂಬಿ ಜಲಪಾತ ಕೇಂದ್ರ.

ಚಿತ್ರಕೃಪೆ: Nikhil Verma

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಬಾಬಾ ಬುಡನ್ ಗಿರಿ, ಚಿಕ್ಕಮಗಳೂರಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗನು ಇಲ್ಲಿರುವ ಹೆಸರುವಾಸಿಯಾದ ದತ್ತಾತ್ರೇಯ ಪೀಠ ಎಂದೂ ಕರೆಯಲ್ಪಡುವ ಬಾಬಾ ಬುಡನ್ ಗಿರಿ ಶ್ರೇಣಿಯನ್ನು ಭೇಟಿ ಮಾಡದೆ ಹೋಗಲಾರ. ಚಿಕ್ಕಮಗಳೂರು ಪಟ್ಟಣದಿಂದ 28 ಕಿಮೀ ದೂರದಲ್ಲಿರುವ ಈ ಶಿಖರ ತಾಣವು ಮುಸ್ಲಿಮರು ಮತ್ತು ಹಿಂದೂಗಳಿಗೆ ಒಂದು ತೀರ್ಥಯಾತ್ರಾ ಸ್ಥಳವಾಗಿದೆ. ಈ ಕಾರಣದಿಂದಾಗಿ, ಸ್ಥಳವನ್ನು ಹಿಂದೂ ದೇವರು ಗುರು ದತ್ತಾತ್ರೇಯ ಮತ್ತು ಮುಸ್ಲಿಂ ಸಂತ ಬಾಬಾಬುಡನ್ ರ ಹೆಸರಿನಿಂದ ಗುರುತಿಸಲಾಗುತ್ತದೆ.

ಚಿತ್ರಕೃಪೆ: Mithun P S

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಬಾಬಾ ಬುಡನ್ ಗಿರಿ ಬೆಟ್ಟಗಳ ಹತ್ತಿರದಲ್ಲಿರುವ ಮಾಣಿಕ್ಯಧಾರಾ ಜಲಪಾತವೂ ಕೂಡ ಭೇಟಿ ನೀಡಲು ಯೋಗ್ಯವಾದ ತಾಣವಾಗಿದೆ. ಶೋಲಾ ಅರಣ್ಯದ ಮಧ್ಯದಲ್ಲಿರುವ ಈ ಜಲಪಾತ ಮುಸ್ಲಿಮ್ ಮತ್ತು ಹಿಂದೂಗಳ ಪವಿತ್ರ ಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ. ಮಾಣಿಕ್ಯಧಾರಾ ಅಂದರೆ ಅಕ್ಷರಶಃ ಮಾಣಿಕ್ಯಗಳಿಂದ ಪೋಣಿಸಲ್ಪಟ್ಟ ಧಾರೆ ಎಂದರ್ಥ.

ಚಿತ್ರಕೃಪೆ: Sampigesrini

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಕಳಸ, ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಧಾರ್ಮಿಕ ಸ್ಥಳ. ಚಿಕ್ಕಮಗಳೂರಿನ ನೈರುತ್ಯಕ್ಕೆ ಸುಮಾರು 92 ಕಿ.ಮೀ ಗಳಷ್ಟು ದೂರವಿರುವ ಈ ಕ್ಷೇತ್ರವು ಶಿವನಿಗೆ ಮುಡಿಪಾಗಿದ್ದು ಮುಖ್ಯವಾಗಿ ಇಲ್ಲಿ ಕಳಸೇಶ್ವರ ದೇವಸ್ಥಾನವನ್ನು ಕಾಣಬಹುದು.

ಚಿತ್ರಕೃಪೆ: Wind4wings

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಹೊರನಾಡು, ಪಶ್ಚಿಮ ಘಟ್ಟಗಳ ಮಡಿಲಲ್ಲಿ, ತುಂಗೆಯ ಉಡಿಲಲ್ಲಿ ನೆಲೆಸಿರುವ ಹೊರನಾಡು ಒಂದು ಶ್ರೀಕ್ಷೇತ್ರವಾಗಿರುವುದೂ ಅಲ್ಲದೆ ಸುಂದರ ಸ್ಥಳವೂ ಸಹ ಆಗಿದೆ. ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಈ ಕ್ಷೇತ್ರವು ಮುಖ್ಯವಾಗಿ ತನ್ನಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯದಿಂದಾಗಿ ಹೆಸರುವಾಸಿಯಾಗಿದ್ದು ಒಂದು ಪ್ರೇಕ್ಷಣೀಯ ಸ್ಥಳವಾಗಿಯೂ ಬಹು ಜನ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Wind4wings

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಚಿಕ್ಕಮಗಳೂರಿನ ಉತ್ತರಕ್ಕೆ 67 ಕಿ.ಮೀ ಗಳಷ್ಟು ದೂರದಲ್ಲಿರುವ ಅಮೃತಪುರವು ತನ್ನಲ್ಲಿರುವ ಸುಂದರ ವಾಸ್ತುಶಿಲ್ಪ ಕಲೆಯಿಂದ ಮನಸೆಳೆವ ಅಮೃತೇಶ್ವರ ದೇವಸ್ಥಾನಕ್ಕಾಗಿ ಪ್ರಸಿದ್ಧಿಯಾಗಿದೆ. ಅಮೃತೇಶ್ವರ ದೇವಾಲಯದ ಮುಖ್ಯ ಆಕರ್ಷಣೆ ಮಂಟಪದ ಒಳಮಾಳಿಗೆಗೆ ಆಧಾರವಾಗಿರುವ ಲೇತ್ ನಿಂದ ಕೊರೆಯಲ್ಪಟ್ಟ ಹೊಳೆಯುವ ಸರಣಿ ಕಂಬಗಳು. ನಿಕಟವಾದ ಅವಲೋಕನ ಮಾಡಿದಲ್ಲಿ ಜನರು ಮಂಟಪ ಒಳ ಛಾವಣಿಯಲ್ಲಿ ಅಲಂಕರಿಸಲಾದ ಹೂವಿನ ನಮೂನೆಗಳ ಕೆತ್ತನೆಗಳನ್ನು ಕಾಣುತ್ತಾರೆ.

ಚಿತ್ರಕೃಪೆ: Dineshkannambadi

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಶೃಂಗೇರಿಯು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೆಲೆಸಿರುವ ಒಂದು ದಿವ್ಯ ಕ್ಷೇತ್ರ. ಸುಮಾರು 8 ನೇಯ ಶತಮಾನದಲ್ಲಿ ಜೀವಿಸಿದ್ದ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಗುರು ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದನ್ನು ಹೊಂದಿರುವ ಶ್ರೀಕ್ಷೇತ್ರವೆ ಶೃಂಗೇರಿ. ಶೃಂಗೇರಿಯಲ್ಲಿ ಹಲವಾರು ದೇವಸ್ಥಾನಗಳನ್ನು ಕಾಣಬಹುದಾಗಿದ್ದು ಅವುಗಳಲ್ಲಿ ಪ್ರಮುಖವಾದುದು ವಿದ್ಯಾಶಂಕರ ದೇವಸ್ಥಾನ.

ಚಿತ್ರಕೃಪೆ: Calvinkrishy

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ತುಂಗಾ ನದಿ ತೀರದಲ್ಲಿರುವ ಶಾರದಾಂಬೆಯ ಶ್ರೀ ಮಠದಿಂದ ಪ್ರಖ್ಯಾತವಾಗಿರುವ ಹರಿಹರಪುರವು ಶೃಂಗೇರಿಯಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ಚಿತ್ರದಲ್ಲಿ ಕಾಣುತ್ತಿರುವುದು ಶ್ರೀ ಸೋಮೇಶ್ವರ ದೇವಸ್ಥಾನ.

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಶೃಂಗೇರಿ ಪ್ರವಾಸಿಗರಿಗೆ ಶಿಫಾರಸು ಮಾಡಬಹುದಾದ ಇನ್ನೊಂದು ಸ್ಥಳವೆಂದರೆ 'ಸಿರಿಮನೆ ಜಲಪಾತ'. ಇದು ಪಟ್ಟಣದಿಂದ 20 ಕಿಲೋಮೀಟರು ದೂರದಲ್ಲಿದೆ. ಕರ್ನಾಟಕದ ಪಶ್ಚಿಮ ಗಟ್ಟದಲ್ಲಿ ಅನೇಕ ಜಲಪಾತಗಳಿವೆ. ಸಿರಿಮನೆ ಜಲಪಾತವನ್ನು ಒಂದು ಚಿಕ್ಕ ಆದರೆ ಸುಂದರವಾದ ಜಲಪಾತವೆಂದು ಗುರುತಿಸಲಾಗಿದೆ. ಮುಂಗಾರು ಕಳೆದ ಬಳಿಕ ಇಲ್ಲಿಗೆ ಭೇಟಿ ಕೊಡಲು ಪ್ರಶಸ್ತ ಸಮಯ.

ಚಿತ್ರಕೃಪೆ: Vaikoovery

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಚಿಕ್ಕಮಗಳೂರಿನಿಂದ 29 ಕಿ.ಮೀ ದೂರವಿರುವ ಬೆಳವಡಿಯು ಒಂದು ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿ ಮುಖ್ಯವಾಗಿ ವೀರನಾರಾಯಣ ದೇವಾಲಯವನ್ನು ಕಾಣಬಹುದು. ಈ ತಾಣದ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ಇಲ್ಲಿ ಇಂದಿಗೂ ವಾರ್ಷಿಕವಾಗಿ ಆಚರಿಸಲಾಗುವ ಬಂಡಿ-ಬನ ಉತ್ಸವ. ಭೀಮನು ಬಕಾಸುರನನ್ನು ವಧಿಸಿದ ಕುರುಹಾಗಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಈ ಸ್ಥಳವನ್ನು ಮಹಾಭಾರತದ ಏಕಚಕ್ರನಗರ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Dineshkannambadi

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಚಿಕ್ಕಮಗಳೂರು ಪಟ್ಟಣದಿಂದ 38 ಕಿ.ಮೀ ಗಳಷ್ಟು ದೂರದಲ್ಲಿರುವ ಭದ್ರಾ ನದಿ ಜಲಾಶಯ ತಾಣವು ಒಂದು ಅದ್ಭುತವಾದ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿ ತಂಗಲು ರಿಸಾರ್ಟುಗಳಿದ್ದು ಪ್ರಕೃತಿಯ ನೈಜತೆಯನ್ನು ಕಣ್ಣಾರೆ ಸವಿಯಬಹುದು. ಭದ್ರಾ ನದಿಯಿಂದ ರೂಪಿತವಾಗಿರುವ ಭದ್ರಾ ಜಲಾಶಯವು ಭೇಟಿ ನೀಡುವವರಿಗೆ ಅಪಾರ ರೋಮಾಂಚನವನ್ನುಂಟು ಮಾಡುತ್ತದೆ. ಇದಕ್ಕೆ ಹೊಂದಿಕೊಂಡಂತೆ ಇರುವ ಭದ್ರಾ ಅಭಯಾರಣ್ಯವೂ ಸಹ ವನ್ಯ ಸಂಪತ್ತಿನಿಂದ ಕಂಗೊಳಿಸುತ್ತ ಪ್ರವಾಸಿಗರನ್ನು ಚುಂಬಕದಂತೆ ತನ್ನೆಡೆ ಸೆಳೆಯುತ್ತದೆ.

ಚಿತ್ರಕೃಪೆ: Dineshkannambadi

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಅದ್ಭುತ ಆಕರ್ಷಣೆಗಳ ಚಿಕ್ಕಮಗಳೂರು:

ಭದ್ರಾ ವನ್ಯಜೀವಿ ಅಭಯಾರಣ್ಯದ ವಿಭಾಗವೆಂದು ಪರಿಗಣಿಸಲಾಗುವ ಮುತ್ತೊಡಿ ಅರಣ್ಯ ಶಿಬಿರವೂ ಸಹ ಭೇಟಿ ನೀಡಲು ಯೋಗ್ಯವಾದ ಚಿಕ್ಕಮಗಳೂರು ಜಿಲ್ಲೆಯ ಒಂದು ಸುಂದರ ಅರಣ್ಯ ಪ್ರದೇಶವಾಗಿದೆ. ಮುತ್ತೊಡಿ ಅರಣ್ಯ ಶಿಬಿರಕ್ಕೆ ತಲುಪಿದ ಮೇಲೆ, ಪ್ರವಾಸಿಗರಿಗೆ ಹುಲಿಗಳು, ಸಾಂಬಾರ, ಆನೆಗಳಂತಹ ವಿಭಿನ್ನ ಜಾತಿಯ ಪ್ರಾಣಿಗಳನ್ನು ವೀಕ್ಷಿಸುವ ಅವಕಾಶ ಲಭಿಸುತ್ತದೆ.

ಚಿತ್ರಕೃಪೆ: chickmagalur.nic.in

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X