Search
  • Follow NativePlanet
Share
» »ಈ ದೇವಾಲಯದಲ್ಲಿ ದೇವರಿಗೆ ರೂಪವೇ ಇಲ್ಲವಂತೆ..!

ಈ ದೇವಾಲಯದಲ್ಲಿ ದೇವರಿಗೆ ರೂಪವೇ ಇಲ್ಲವಂತೆ..!

By Sowmyabhai

ಚೆಟ್ಟಿನಾಡು ತಮಿಳುನಾಡು ರಾಜ್ಯದಲ್ಲಿ ಅತ್ಯಂತ ಪ್ರಸಿದ್ಧವಾದ ಒಂದು ಪ್ರದೇಶ. ಒಂದು ಕಾಲದಲ್ಲಿ 96 ಗ್ರಾಮಗಳ ಸಮೂಹವಿದ್ದ ಈ ಪ್ರದೇಶವು ಪ್ರಸ್ತುತ 74 ಗ್ರಾಮಗಳು, 2 ಪಟ್ಟಣಗಳನ್ನು ಹೊಂದಿದೆ. 19 ಹಾಗು 20 ನೇ ಶತಮಾನದಲ್ಲಿ ಇಲ್ಲಿನ ಪ್ರಜೆಗಳು ಬರ್ಮಾ, ಸಿಂಗಾಪುರ, ಮಲೇಷಿಯಾನಂತಹ ಪೂರ್ವ ಏಶಿಯಾ ಖಂಡಕ್ಕೆ ವಲಸೆ ಹೋದರು ಎಂದು ಹೇಳುತ್ತಾರೆ. ಅದಕ್ಕೆ ಇರಬಹುದು, ರಜನಿಕಾಂತ್ ಸಿನಿಮಾಗಳು ಅಲ್ಲಿಯೂ ಕೂಡ ಪ್ರಸಿದ್ಧಿ ಹೊಂದಿದೆ. ಇಲ್ಲಿನ ಆಹಾರ ರುಚಿಗಳು, ಕಟ್ಟಡಗಳು ಮತ್ತು ದೇವಾಲಯಗಳು ಅದ್ಭುತವಾದುದು.

ಚೆಟ್ಟಿನಾಡುವಿನಲ್ಲಿಯೂ ಕೂಡ ಅನೇಕ ಪ್ರವಾಸಿ ತಾಣಗಳಿವೆ. ಒಂದೊಂದು ತಾಣ ಅದರದೇ ಆದ ಮಹತ್ವವನ್ನು ಹೊಂದಿದೆ. ಅಷ್ಟೇ ಅಲ್ಲ, ಇಲ್ಲಿನ ಸ್ವಾಧಿಷ್ಟವಾದ ಅಡುಗೆ ಎಲ್ಲರಿಗೂ ಮತ್ತೊಮ್ಮೆ ಪ್ರೀತಿಯಿಂದ ಕರೆಯುತ್ತದೆ. ಈ ಸುಂದರವಾದ ನಗರದಲ್ಲಿ ದೇವರಿಗೆ ರೂಪವೇ ಇಲ್ಲದೇ ಇರುವ ಒಂದು ವಿಭಿನ್ನವಾದ ದೇವಾಲಯವಿದೆ. ಆದರ ಬಗ್ಗೆ ಸಂಪೂರ್ಣವಾದ ಮಾಹಿತಿ ಲೇಖನದ ಮೂಲಕ ಪಡೆಯಿರಿ.

1.ಚೆಟ್ಟಿನಾಡಿನ ಅಡುಗೆಗಳು

1.ಚೆಟ್ಟಿನಾಡಿನ ಅಡುಗೆಗಳು

PC: Maccess Corporation

ಚೆಟ್ಟಿನಾಡು ಕೋಳಿಯ ಸಾರು, ಗ್ರೇವಿಗೆ ಅತ್ಯಂತ ಪ್ರಸಿದ್ಧವಾದುದು. ಇಲ್ಲಿ ಅತ್ಯಂತ ಸ್ವಾಧಿಷ್ಟವಾಗಿ ಆಹಾರವನ್ನು ತಯಾರು ಮಾಡುವವರು ಇದ್ದಾರೆ. ಅವರು ರುಚಿಕರವಾದ ಹಾಗು ವಿಭಿನ್ನವಾದ ಆಹಾರಗಳನ್ನು ತಯಾರು ಮಾಡುತ್ತಾರೆ. ಬೇಯಿಸಿದ ಮೊಟ್ಟೆ, ಮಿಲ್ಸ್ ವಿಷಯಕ್ಕೆ ಬಂದರೆ ಅನ್ನ, ಸಾಂಬಾರು, ಬದನೆಕಾಯಿ ಸಾರು, ತುಪ್ಪ, ಪಾಯಸ, ಮೊಸರು ಇತ್ಯಾದಿ. ಇಲ್ಲಿನ ಅಡುಗೆಯು ಒಂದು ವಿಭಿನ್ನವಾದ ರುಚಿಯನ್ನು ನೀಡುತ್ತದೆ.

2.ಕಟ್ಟಡಗಳು

2.ಕಟ್ಟಡಗಳು

PC:Joelsuganth

18 ನೇ ಶತಮಾನದ ಭವನಗಳು, ಕಟ್ಟಡಗಳು ಚೆಟ್ಟಿನಾಡಿನಲ್ಲಿವೆ. ಒಳಭಾಗದಲ್ಲಿ ಇಂಟೆರಿಯರ್ ಮಾರ್ಬಲ್‍ಗಳು, ಟೆಕ್‍ನಂತಹ ಅತ್ಯಂತ ಬೆಲೆಬಾಳುವ ವಿನ್ಯಾಸ ಮಾಡಿರುತ್ತಾರೆ. ಪೂರ್ವ ಏಶಿಯಾ, ಯೂರೋಪ್ ಖಂಡಗಳಿಂದ ಆಮದು ಮಾಡಿಕೊಂಡ ಫರ್ನಿಚರ್‍ಗಳು, ಪಿಂಗಾಣಿ ವಸ್ತಗಳು ಮತ್ತಷ್ಟು ಆಕರ್ಷಿಸುತ್ತದೆ.

3.ಟ್ಯಾಂಕ್

3.ಟ್ಯಾಂಕ್

PC:Koshy Koshy

ಚೆಟ್ಟಿನಾಡಿನ ದೇವಾಲಯಗಳು ತಮಿಳುನಾಡು ರಾಜ್ಯವನ್ನು ಆಳ್ವಿಕೆ ಮಾಡಿದ ರಾಜವಂಶಿಕರು ನಿರ್ಮಾಣ ಮಾಡಿದರು. ಅವುಗಳೆಲ್ಲವನ್ನು ವಾಸ್ತು, ಆಗಮ ಶಾಸ್ತ್ರದ ಪ್ರಕಾರ ನಿರ್ಮಾಣ ಮಾಡಿದ್ದಾರೆ. ಪ್ರತಿ ದೇವಾಲಯದಲ್ಲಿಯೂ ಟ್ಯಾಂಕ್ ಅಥವಾ ಉರನಿ (ತಮಿಳು ಭಾಷೆಯಲ್ಲಿ) ಇರುತ್ತದೆ,

4.ದೇವಾಲಯಗಳು

4.ದೇವಾಲಯಗಳು

PC:Sundaram Ramaswamy

ಚೆಟ್ಟಿನಾಡು ಸುತ್ತಮುತ್ತ ಮತ್ತು ಚೆಟ್ಟಿನಾಡು ಪ್ರಸಿದ್ಧ ಹೊಂದಿರುವ ದೇವಾಲಯಗಳೆಂದರೆ ವೈರವಾನ್ ಕೋವಿಲ್, ಇರನಿಯುರ್, ಕರ್ಪಗಾ ವಿನಾಯಕರ್, ಕುಂದ್ರಕುಡಿ ಮುರುಗನ್, ಕೊಟ್ಟೈಯರ್ ಶಿವನ್ ಮತ್ತು ಕಂದನೂರ್ ಶಿವನ್ ದೇವಾಲಯಗಳು.

5.ಅವುದೈಯಾರ್ ದೇವಾಲಯ

5.ಅವುದೈಯಾರ್ ದೇವಾಲಯ

PC:Sabari Girisan M

ಅವುದೈಯಾರ್ ದೇವಾಲಯವು ಚೆಟ್ಟಿನಾಡಿಗೆ ಕೇವಲ 40 ಕಿ.ಮೀ ದೂರದಲ್ಲಿದೆ. ಮುನಿಕ್ಕವ್ವಸಕ್ಕರ್‍ನ ಕೈಯಲ್ಲಿ 9 ನೇ ಶತಮಾನದಲ್ಲಿ ನಿರ್ಮಾಣ ಮಾಡಲ್ಪಟ್ಟ ಈ ದೇವಾಲಯವು 15 ಶತಮಾನದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲ್ಪಟ್ಟಿತು. ಇದೊಂದು ಶಿವಾಲಯವಾಗಿದ್ದು, ಇಲ್ಲಿ ಶಿವನು ಇರುವುದಿಲ್ಲ. ನಂದಿ ಇರುವುದಿಲ್ಲ. ಬಿಸಿ ಅನ್ನವೇ ದೇವರಿಗೆ ನೈವೇದ್ಯವಂತೆ.

6.ಸೀರೆಗಳು

6.ಸೀರೆಗಳು

PC:Jean-Pierre Dalbéra

ಸ್ಥಳೀಯ ಕಾಟನ್ ಸೀರೆಗಳನ್ನು "ಕಂದಾಂಗಿ" ಎಂದು ಕರೆಯುತ್ತಾರೆ. ಇವುಗಳನ್ನು ಧರಿಸಿದರೆ ಅತ್ಯಂತ ಸುಂದರವಾಗಿ ಕಾಣುತ್ತಾರೆ. ಇಲ್ಲಿ ಮುಖ್ಯವಾಗಿ ಗ್ಲಾಸ್ ಪ್ಲೇಟ್‍ಗಳನ್ನು ಉಪಯೋಗಿಸಿ ಸ್ಥಳೀಯವಾಗಿ ತಯಾರು ಮಾಡುವ ಟೈಲ್ಸ್ ಚೆಟ್ಟಿನಾಡುವಿನಲ್ಲಿ ಬಿಟ್ಟು ಬೇರೆ ಎಲ್ಲಿಯೂ ದೊರೆಯುವುದಿಲ್ಲ. ಟೈಲ್ಸ್‍ಗಳನ್ನು ಕೈಯಲ್ಲಿಯೇ ತಯಾರು ಮಾಡುತ್ತಾರೆ.

7.ಪರಿಶ್ರಮ

7.ಪರಿಶ್ರಮ

PC:Balajijagadesh

ಚೆಟ್ಟಿನಾಡು ಸಿಮೆಂಟ್ ರಂಗಕ್ಕೆ ಪ್ರಸಿದ್ಧತೆ ಹೊಂದಿದೆ. ಇಲ್ಲಿ ಸೆಂಟ್ರಲ್ ಕೆಮಿಕಲ್ ರಿಸರ್ಚ್ ವಿಶ್ವವಿದ್ಯಾಲಯವನ್ನು ಸುಮಾರು 300 ಎಕರೆಗಳ ವಿಸ್ತೀರ್ಣದಲ್ಲಿ ಸ್ಥಾಪಿಸಿದ್ದಾರೆ. ಚೆಟ್ಟಿನಾಡಿನ ಹೆಸರಿನಲ್ಲಿ ಸಿಮೆಂಟ್ ಕೂಡ ತಯಾರಾಗುತ್ತದೆ.

8.ಕರೈಕುಡಿ ಮಧುರೈ ವಿಮಾನ ನಿಲ್ದಾಣ, ತಿರುಚಿರಾಪಲ್ಲಿ

8.ಕರೈಕುಡಿ ಮಧುರೈ ವಿಮಾನ ನಿಲ್ದಾಣ, ತಿರುಚಿರಾಪಲ್ಲಿ

PC: C / NN / G

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಚೆಟ್ಟಿನಾಡಿನ ಸಮೀಪದಲ್ಲಿಯೇ ಇದೆ. ಅಲ್ಲಿಂದ ಕರೈಕುಡಿ ಟ್ಯಾಕ್ಸಿ ಅಥವಾ ಕ್ಯಾಬ್‍ನಲ್ಲಿ ಪ್ರಯಾಣಿಸಬಹುದು. ಚೆನ್ನೈನಿಂದ ರಾಮೇಶ್ವರಂಗೆ ತೆರಳುವ ರೈಲುಗಳು, ಪುದುಕೊಟ್ಟೈ, ಕರೈಕುಡಿ, ಚೆಟ್ಟಿನಾಡ್ ಸ್ಟೇಷನ್. ಕರೈಕುಡಿಯಿಂದ ಸರ್ಕಾರಿ ಅಥವಾ ಖಾಸಗಿ ಬಸ್ಸುಗಳ ಮೂಲಕ ಸುಲಭವಾಗಿ ಸೇರಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more