Search
  • Follow NativePlanet
Share
» »ಅತಿ ಮಳೆಯ ಚಿರಾಪುಂಜಿ ಹಾಗು ರಾಜಧಾನಿ ನಗರ ಶಿಲ್ಲಾಂಗ್

ಅತಿ ಮಳೆಯ ಚಿರಾಪುಂಜಿ ಹಾಗು ರಾಜಧಾನಿ ನಗರ ಶಿಲ್ಲಾಂಗ್

By Vijay

ಈಶಾನ್ಯ ಭಾರತದ ಮೇಘಾಲಯ ರಾಜ್ಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ನೆಲೆಸಿದೆ ಜಗತ್ತಿನಲ್ಲೆ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಚಿರಾಪುಂಜಿ. ಹಿಂದೆ ಹಲವು ಬಾರಿ ಅತಿ ಹೆಚ್ಚು ಮಳೆಯನ್ನು ಪಡೆದು ಜಗತ್ತಿನ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂಬ ಕೀರ್ತಿಗೂ ಸಹ ಪಾತ್ರವಾಗಿದೆ ಈ ಸೊಹ್ರಾ ಎಂಬ ಐತಿಹಾಸಿಕ ನಾಮ ಹೊಂದಿರುವ ಚಿರಾಪುಂಜಿ. ಹಿಂದೆ ಜುಲೈ 1861 ರಲ್ಲಿ 9,300 ಎಂ.ಎಂ ಹಾಗು 1 ನೆಯ ಅಗಸ್ಟ್ 1860 ರಿಂದ 31 ಜುಲೈ 1861 ರ ಮಧ್ಯದಲ್ಲಿ 26,461 ಎಂ.ಎಂ ಪ್ರಮಾಣದಷ್ಟು ಮಳೆಯನ್ನು ಪಡೆದಿತ್ತು.

ಸಮುದ್ರ ಮಟ್ಟದಿಂದ 1,484 ಮೀ. ಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಪ್ರದೇಶವು ಒಷಿಯನಿಕ್ ಕ್ಲೈಮೇಟ್ (ಕರಾವಳಿ ವಾತಾವರಣ) ಹೊಂದಿದ್ದು, ಬೇಸಿಗೆಯ ಸಮಯದಲ್ಲಿ ಬೆಚ್ಚನೆಯ ಹಾಗು ಚಳಿಗಾಲದ ಸಮಯದಲ್ಲಿ ಅತಿಯಾದ ಚಳಿ ಇಲ್ಲದ ತಂಪನ್ನು ಅನುಭವಿಸುತ್ತದೆ. ಇನ್ನು ಭೌತಿಕ ದೃಷ್ಟಿಯಿಂದ ಚಿರಾಪುಂಜಿಯು ಅನೇಕ ಗಿರಿ ಶಿಖರಗಳು, ಅರಣ್ಯ ಪ್ರದೇಶಗಳು ಹಾಗು ಜಲಪಾತಗಳನ್ನೊಳಗೊಂಡು ತಾಜಾತನದ ಅನುಭವವನ್ನು ಭೇಟಿ ನೀಡಿದವರಿಗೆ ನೀಡುತ್ತದೆ.

ಚಿರಾಪುಂಜಿಯಿಂದ ಸುಮಾರು 55 ಕಿ.ಮೀ ದೂರದಲ್ಲಿ ನೆಲೆಸಿದೆ ಮೇಘಾಲಯದ ರಾಜಧಾನಿ ಶಿಲ್ಲಾಂಗ್. ಕಲುಶಿತಗೊಳ್ಳದ ಪರಿಸರ, ಕಣ್ಣಿಗೆ ತಂಪನ್ನೆರೆಯುವ ವಾತಾವರಣ, ಒತ್ತಡಗಳಿಂದ ದಣಿದ ಮನಕೆ ನೀರುಣಿಸುವ ಇಲ್ಲಿನ ಆಕರ್ಷಣೆಗಳು ನಿಮಗೊಂದು ವಿಶೇಷವಾದ ಜೀವನೋತ್ಸಾಹದ ಅನುಭೂತಿಯನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಲೇಖನದ ಮೂಲಕ ಚಿರಾಪುಂಜಿ ಹಾಗು ಶಿಲ್ಲಾಂಗ್ ಗಳ ಪರಿಚಯವನ್ನು ಚಿತ್ರಗಳ ಮುಖೇನ ಮಾಡಿರಿ. ಶಿಲ್ಲಾಂಗ್ ಗೆ ತೆರಳುವ ಬಗೆಯನ್ನು ತಿಳಿಯಲು ಈ ಕೊಂಡಿಯನ್ನು ಉಪಯೋಗಿಸಿ.

ಚಿರಾಪುಂಜಿ:

ಚಿರಾಪುಂಜಿ:

ಭೂಗೃಹದಲ್ಲೆ ಅತಿ ಹೆಚ್ಚು ಮಳೆಯನ್ನು ಪಡೆಯುವ ಪ್ರದೇಶ ಎಂಬ ವಿಷಯ ತಿಳಿಸುವ ಚಿರಾಪುಂಜಿಯಲ್ಲಿರುವ ಒಂದು ಮಾಹಿತಿ ಫಲಕ.

ಚಿತ್ರಕೃಪೆ: RMehra

ಏಳು ಸಹೋದರಿಯರ ಜಲಪಾತ:

ಏಳು ಸಹೋದರಿಯರ ಜಲಪಾತ:

ಮಾವ್ಸ್ ಮೈ ಹಳ್ಳಿಯಲ್ಲಿರುವ ಈ ಸುಂದರ ಜಲಪಾತವು ಖಾಸಿ ಪರ್ವತದ ಏಳು ಕಡೆಗಳಲ್ಲಿ ಕವಲೊಡೆದು ಧುಮ್ಮಿಕ್ಕುತ್ತವೆ.

ಚಿತ್ರ ಕೃಪೆ: Kunal Dalui

ನೊಹ್ಕಾಲಿಕಾಯ್ ಜಲಪಾತ:

ನೊಹ್ಕಾಲಿಕಾಯ್ ಜಲಪಾತ:

ಚಿರಾಪುಂಜಿ ಬಳಿಯಿರುವ ಈ ಜಲಪಾತವು 1,100 ಅಡಿಗಳಷ್ಟು ಎತ್ತರದಿಂದು ಧುಮ್ಮಿಕ್ಕುತ್ತದೆ. ನೋಡಲು ರುದ್ರ ರಮಣೀಯವಾದ ನೋಟವನ್ನು ಜಲಪಾತ ತಾಣವು ಒದಗಿಸುತ್ತದೆ.

ಚಿತ್ರಕೃಪೆ: Rishav999

ವೀಕ್ಷಣಾ ಸ್ಥಳ:

ವೀಕ್ಷಣಾ ಸ್ಥಳ:

ದುವಾನ್ ಸಿಂಗ್ ಸೀಯ್ಮ್ ಚಿರಾಪುಂಜಿಯ ದಿಂಪೇಪ್ ನಲ್ಲಿರುವ ಒಂದು ವೀಕ್ಷಣಾ ಸ್ಥಳ. ಸುತ್ತಮುತ್ತಲಿನ ವಾತಾವರಣದ ವಿಹಂಗಮ ನೋಟವನ್ನು ಇದು ಒದಗಿಸುತ್ತದೆ.

ಆನಂದಮಯ ಪರಿಸರ:

ಆನಂದಮಯ ಪರಿಸರ:

ಚಿರಾಪುಂಜಿಯಿಂದ ಗುವಾಹಟಿಗೆ ತೆರಳುವ ಹಾದಿಯಲ್ಲಿ ಕಂಡುಬರುವ ಸುಂದರ ದೃಶ್ಯವಿದು. ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದಂತಹ ಪ್ರಕೃತಿ ನೋಟವನ್ನು ಇದು ಒದಗಿಸುತ್ತದೆ.

ಚಿತ್ರಕೃಪೆ: Arup malakar

ಚಿರಾಪುಂಜಿಯೆಡೆ:

ಚಿರಾಪುಂಜಿಯೆಡೆ:

ಶಿಲ್ಲಾಂಗ್ ನಗರದಿಂದ ಚಿರಾಪುಂಜಿಯೆಡೆಗೆ ಹೋಗುವ ಹಾದಿಯು ಸುಂದರ ಭೂ ಪರ್ವತ ಪ್ರದೇಶಗಳ ಸ್ವಾಭಾವಿಕ ನೋಟದಿಂದ ಕಂಗೊಳಿಸುತ್ತ ಪ್ರವಾಸಿಗರನ್ನು ಆದರದಿಂದ ಸ್ವಾಗತಿಸುತ್ತಿರುವಂತೆ ತೋರುತ್ತವೆ.

ಭೂದೃಶ್ಯಾವಳಿ:

ಭೂದೃಶ್ಯಾವಳಿ:

ಚಿರಾಪುಂಜಿಯ ಮನಮೋಹಕ ಹಾಗು ಅಷ್ಟೆ ರುದ್ರ ರಮಣೀಯವಾದ ಭೂದೃಶ್ಯಾವಳಿಯ ಒಂದು ನೋಟ.

ಪ್ರಾಕೃತಿಕ ವಿಸ್ಮಯ:

ಪ್ರಾಕೃತಿಕ ವಿಸ್ಮಯ:

ಚಿರಾಪುಂಜಿ ಬಳಿಯಿರುವ ಮರದ ಬೇರುಗಳಿಂದ ನೈಸರ್ಗಿಕವಾಗಿ ಉದ್ಭವಗೊಂಡ ಪುರಾತನ ತೂಗು ಸೇತುವೆ. ಇಂದಿಗೂ ಕೂಡ ನಿರ್ಭಯವಾಗಿ ಸ್ಥಳೀಯರಿಂದ ಇದು ಬಳಸಲ್ಪಡುತ್ತದೆ. ಈ ತರಹದ ಕೆಲವು ಸೇತುವೆಗಳನ್ನು ಈ ಪ್ರದೇಶದಲ್ಲಿ ಕಾಣಬಹುದಾಗಿದೆ. ಇವು ಸುಮಾರು 500 ವರ್ಷಗಳಷ್ಟು ಪುರಾತನವಾಗಿವೆ.

ಶಿಲ್ಲಾಂಗ್ ನಗರ:

ಶಿಲ್ಲಾಂಗ್ ನಗರ:

ಭಾರತದ ಇತರೆ ರಾಜಧಾನಿಗಳಲ್ಲಿರುವಂತೆ ಅಷ್ಟೊಂದು ಜನದಟ್ಟಣೆಯಿಲ್ಲದ ಸುಂದರ ಶಿಲ್ಲಾಂಗ್ ನಗರ.

ಎಲಿಫಂಟ್ ಫಾಲ್ಸ್, ಶಿಲ್ಲಾಂಗ್:

ಎಲಿಫಂಟ್ ಫಾಲ್ಸ್, ಶಿಲ್ಲಾಂಗ್:

ಶಿಲ್ಲಾಂಗ್ ನಗರದಿಂದ 12 ಕಿ.ಮೀ ದೂರದಲ್ಲಿ ನೆಲೆಸಿದೆ ಈ ಜಲಪಾತ ತಾಣ.

ವಾರ್ಡ್ಸ್ ಕೆರೆ:

ವಾರ್ಡ್ಸ್ ಕೆರೆ:

ವಾರಾಂತ್ಯದ ರಜಾ ಸಮಯವನ್ನು ಕಳೆಯಲು ಈ ತಾಣವು ಅತ್ಯಂತ ಆದರ್ಶಪ್ರಾಯವಾಗಿದೆ. ಬೋಟಿಂಗ್ ಸೌಲಭ್ಯವೂ ಇರುವ ಈ ಸುಂದರ ಕೃತಕ ಕೆರೆಯು ಸ್ಥಳೀಯವಾಗಿ ನಾನ್-ಪೊಲೊಕ್ ಎಂದು ಕರೆಯಲ್ಪಡುತ್ತದೆ.

ಶಿಲ್ಲಾಂಗ್ ಗಾಲ್ಫ್ ಮೈದಾನ:

ಶಿಲ್ಲಾಂಗ್ ಗಾಲ್ಫ್ ಮೈದಾನ:

ಶಿಲ್ಲಾಂಗ್ ಗಾಲ್ಫ್ ಮೈದಾನವು ಏಷಿಯಾ ಖಂಡದಲ್ಲಿ ಕಂಡುಬರುವ ಬೃಹತ್ ಗಾಲ್ಫ್ ಮೈದಾನಗಳಲ್ಲೊಂದಾಗಿದೆ. ಏಷಿಯಾ ಖಂಡದಲ್ಲೆ ಕಂಡುಬರುವ ಕೆಲವೆ ಕೆಲವು ಸ್ವಾಭಾವಿಕ ಗಾಲ್ಫ್ ಮೈದಾನಗಳಲ್ಲಿ ಒಂದು ಇದು. 18 ರಂಧ್ರಗಳುಳ್ಳ ಈ ಮೈದಾನವು ಉದ್ಘಾಟನೆಗೊಂಡಿದ್ದು 1924 ರಲ್ಲಿ.

ಚಿತ್ರಕೃಪೆ: babul gogoi

ಶಿಲ್ಲಾಂಗ್ ಪೀಕ್:

ಶಿಲ್ಲಾಂಗ್ ಪೀಕ್:

ಶಿಲ್ಲಾಂಗ್ ನಗರದಿಂದ 10 ಕಿ.ಮೀ ದೂರದಲ್ಲಿರುವ ಈ ಶಿಖರ ತಾಣವು ನಗರದ ಅದ್ಭುತ ಪಾಕ್ಷಿಕ ನೋಟವನ್ನು ಒದಗಿಸುತ್ತದೆ. ಸಮುದ್ರ ಮಟ್ಟದಿಂದ 1965 ಮೀ. ಎತ್ತರವಿರುವ ಈ ತಾಣ ವಾರಾಂತ್ಯದ ರಜೆ ಕಳೆಯಲು ಅನುಕೂಲವಾಗಿರುವುದಲ್ಲದೆ ಪಿಕ್ನಿಕ್ ತಾಣವಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Windrider 24584

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X