Search
  • Follow NativePlanet
Share
ಮುಖಪುಟ » ಸ್ಥಳಗಳು» ಚಿರಾಪುಂಜಿ

ಚಿರಾಪುಂಜಿ: ಮಳೆಯೇ ಮನಮೋಹಕವೆನ್ನುವ ಅಪರಂಜಿ

29

ನಯನ ಮನೋಹರವಾದ ಪ್ರಾಕೃತಿಕ ಸೌಂದರ್ಯಕ್ಕೆ ಹಾಗು ಮಳೆಗೆ ಪ್ರಸಿದ್ಧಿ ಪಡೆದಿರುವ ತಾಣ. ಚಿರಾಪುಂಜಿ ಅಥವಾ ಸ್ಥಳೀಯರ ವಲಯದಲ್ಲಿ ಸೊಹ್ರಾ ಎಂದು ಕರೆಯಲ್ಪಡುವ ಈ ಊರು ಮೇಘಾಲಯದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಮೇಘಾಲಯ ರಾಜ್ಯವನ್ನು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಒಂದು ಕಾಲದಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚಿನ ಮಳೆ ಬೀಳುವ ಪ್ರದೇಶವಾಗಿ ಗುರುತಿಸಲ್ಪಟ್ಟಿದ್ದ ಚಿರಾಪುಂಜಿಯ ಸೌಂದರ್ಯವು ಮನಮೋಹಕವಾಗಿರುತ್ತದೆ. ನಿರ್ಮಲವಾದ ಬೆಟ್ಟ ಗುಡ್ಡಗಳು, ಅಸಂಖ್ಯಾತ ಜಲಪಾತಗಳು, ಬಾಂಗ್ಲದೇಶ ಭೂಭಾಗದ ವಿಹಂಗಮ ನೋಟ ಮತ್ತು ಸ್ಥಳೀಯ ಬುಡಕಟ್ಟು ಜನರ ಜೀವನ ಶೈಲಿಯ ಸೊಗಡುಗಳೆಲ್ಲವು ಸೇರಿ ನಿಮ್ಮ ಚಿರಾಪುಂಜಿಯ ಪ್ರವಾಸವನ್ನು ಸ್ಮರಣೀಯಗೊಳಿಸುತ್ತವೆ.

ಚಿರಾದ ಜೌಗು ಪ್ರದೇಶ - ಚಿರಾಪುಂಜಿಯ ಸುತ್ತ - ಮುತ್ತ ಇರುವ ಪ್ರವಾಸಿ ತಾಣಗಳು

ಚಿರಾಪುಂಜಿ (ಎಂದರೆ "ಕಿತ್ತಳೆಗಳ ನಾಡು" ಎಂದರ್ಥ) ವರ್ಷಪೂರ್ತಿ ಅತಿ ಹೆಚ್ಚು ಮಳೆಯನ್ನು ಪಡೆಯುವ ಪ್ರದೇಶವಾಗಿದೆ. ಸದಾ ಜೌಗಿನಿಂದ ಕೂಡಿರುವ ಇಲ್ಲಿನ ವಿರಳವಾದ ಭೂಭಾಗದಲ್ಲಿ ಬೇಸಾಯ ಮಾಡುವುದು ಅಸಾಧ್ಯ. ಯಾವಾಗಲು ಬೀಳುವ ಮಳೆ ಹಾಗು ನಿರಂತರ ಅರಣ್ಯ ನಾಶವು ಇಲ್ಲಿನ ಭೂಮಿಯ ಫಲವತ್ತತೆಯನ್ನು ನಾಶಗೊಳಿಸಿದೆ.

ಹಾಗೆಂದು ಇಲ್ಲಿನವರು ಬದುಕಿಗೆ ಏನು ಮಾಡುತ್ತಾರೆ, ನಾವು ಅಲ್ಲಿ ಹೋಗಿ ಏನು ನೋಡಬೇಕು? ಎಂದು ಭಾವಿಸಬೇಡಿ. ಇಲ್ಲಿ ಬೀಳುವ ನಿರಂತರ ಮಳೆಗೆ ಧನ್ಯವಾದ ಹೇಳಿ. ಈ ಮಳೆಯೇ ಇಲ್ಲಿ ಹಲವಾರು ಮಂತ್ರ ಮುಗ್ದಗೊಳಿಸುವಂತಹ ಪ್ರವಾಸಿ ತಾಣಗಳನ್ನು ಸೃಷ್ಟಿಸಿದೆ. ಮವ್‍ಸ್ಮೈ ಜಲಪಾತ, ನೊಹ್ಕಲಿಕೈ ಜಲಪಾತ, ಜೆಟ್ ವಿಮಾನದಷ್ಟು ವೇಗವಾಗಿ ಪ್ರಪಾತಕ್ಕೆ ಧುಮ್ಮಿಕ್ಕುತ್ತ ನಯನ ಮನೋಹರವಾಗಿ ಕಾಣುವ ಡೈನ್- ಥ್ಲೆನ್ ಜಲಪಾತಗಳು ಇಲ್ಲಿನ ಪ್ರವಾಸಿ ಆಕರ್ಷಣೆಗಳಲ್ಲಿ ಸೇರಿವೆ. ಅದರಲ್ಲೂ ಭಾರತದ ಅತ್ಯಂತ ಎತ್ತರದಿಂದ ಧುಮ್ಮಿಕ್ಕುವ ಜಲಪಾತವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೊಹ್ಕಲಿಕೈ ಜಲಪಾತದ ಬಗ್ಗೆ ಹೇಳಲೆಬೇಕು. ಜೊತೆಗೆ ಸ-ಇ-ಮಿಕ ಉದ್ಯಾನವನ ಮತ್ತು ರೆಸಾರ್ಟುಗಳು ಚಿರಾಪುಂಜಿಯಲ್ಲಿ ಮನೋರಂಜನೆಯನ್ನು ಒದಗಿಸುವಲ್ಲಿ ಮುಂದಿವೆ.

ಚಿರಾಪುಂಜಿ - ನಯನ ಮನೋಹರ ತಾಣಗಳ ನಡುವಿನ ಅಪರಂಜಿ

ಶಿಲ್ಲಾಂಗ್‍ನಿಂದ ಹೊರಟು ಆಳವಾದ ಕಮರಿಗಳ ನಡುವೆ ಸಾಗುವ, ಗಾಳಿ ವಿಪರೀತವಾಗಿ ಬೀಸುವ ರಸ್ತೆಯಲ್ಲಿ ಮಂಜು ಮುಚ್ಚಿದ ಹಾದಿಯಲ್ಲಿ, ಮಂಜು ಯಾವುದೋ,ಮೋಡ ಯಾವುದೋ ಎಂದು ಒಂದು ತಿಳಿಯದೆ ನೇರವಾಗಿ ಹೊರಟಿರೆಂದರೆ ನಿಮಗೆ ಎದುರಾಗುವುದೇ ಚಿರಾಪುಂಜಿಯೆಂಬ ಪ್ರಕೃತಿಯ ಅಪರಂಜಿ. ಇಲ್ಲಿನ ಪ್ರಕೃತಿಯು ನಿಜಕ್ಕು ಅಪರಂಜಿಯೇ, ಯಾವುದೇ ಪರಿಸರ ಮಾಲಿನ್ಯದಿಂದ ಮೈಲಿಗೆಯಾಗದೆ ತನ್ನ ಪರಿಶುಭ್ರತೆಯನ್ನು ಉಳಿಸಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಚಿರಾಪುಂಜಿಯಲ್ಲಿ ಪ್ರವಾಸ ಮಾಡುವುದು ಕೇವಲ ಸುತ್ತಾಡುವುದಷ್ಟೇ ಅಲ್ಲ. ಬದಲಿಗೆ ಅದೊಂದು ಅದ್ಭುತವಾದ ಸಾಹಸ ಯಾತ್ರೆಯಾಗಿರುತ್ತದೆ. ಎಂದಿನ ತೀರ್ಥ ಯಾತ್ರೆ, ವಿಹಾರ ಮತ್ತು ವಾರಾಂತ್ಯದ ಪ್ರವಾಸಗಳ ಏಕತಾನತೆಯಿಂದ ಬೇಸತ್ತಿದ್ದೀರಾ? ಹಾಗಾದರೆ ಒಮ್ಮೆ ಚಿರಾಪುಂಜಿಗೆ ಭೇಟಿ ನೀಡಿ, ನಿಮ್ಮ ಮನಸ್ಸು ಏನು ಕೋರುತ್ತದೆಯೋ? ಅದನ್ನು ನಿಮ್ಮ ಕಣ್ಣಿಂದ ನೋಡಿ ತಣಿಯಿರಿ!. ಇನ್ನೇಕೆ ತಡ ನಡೆಯಿರಿ, ನಿಮ್ಮ ಪಯಣ ಚಿರಾಪುಂಜಿ ಕಡೆಗೆ ಸಾಗಲಿ.

ಚಿರಾಪುಂಜಿಯು ಮೇಘಾಲಯದ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಬರುವ ಒಂದು ಉಪ-ವಿಭಾಗವಾದ ಪಟ್ಟಣವಾಗಿದೆ. ಸೊಹ್ರಾವು ಸಮುದ್ರ ಮಟ್ಟದಿಂದ 1484 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇದು ಅನಂತವಾಗಿ ಚಾಚಿಕೊಂಡಿರುವ ಬಾಂಗ್ಲಾದೇಶ್ ಭೂಭಾಗವನ್ನು ನೋಡುತ್ತ ನಿಂತಂತೆ ಭಾಸವಾಗುತ್ತದೆ. ಚಿರಾಪುಂಜಿಯು ವಾರ್ಷಿಕ 463.66 ಇಂಚಿನಷ್ಟು ಮಳೆಯನ್ನು ಪಡೆಯುತ್ತದೆ. ಹಾಗಾಗಿ ಇದು ಪ್ರಪಂಚದಲ್ಲಿಯೇ ಅತ್ಯಂತ ಜೌಗಿನಿಂದ ಕೂಡಿದ ಸ್ಥಳಗಳಲ್ಲಿ ಒಂದಾಗಿದೆ.

ಚಿರಾಪುಂಜಿಯ ಇತಿಹಾಸ - ಬ್ರಿಟೀಷರ ಆಗಮನ ಮತ್ತು ಸಮುದಾಯದ ಪರಿವರ್ತನೆ

ಖಾಸಿ ಬೆಟ್ಟಗಳಿಗೆ ಬ್ರಿಟೀಷರ ಆಗಮನವು ಇಲ್ಲಿನ ಪರಿಸರದಲ್ಲಿ ಭಾರೀ ಬದಲಾವಣೆಯನ್ನು ತಂದಿತು. ಅದನ್ನು ನಾವು ಇಂದಿಗು ಇಲ್ಲಿ ನೋಡಬಹುದು. ಡೇವಿಡ್ ಸ್ಕಾಟ್ ಎಂಬ ಈಸ್ಟ್ ಇಂಡಿಯಾ ಕಂಪೆನಿಯ ರಾಜಕೀಯ ಪ್ರತಿನಿಧಿಯು ಚಿರಾಪುಂಜಿಗೆ ನಿಕಟ ಪೂರ್ವ ಪಶ್ಚಿಮ ಬಂಗಾಲದ ಮೂಲಕ ಸೈಹ್ಲೆಟ್ ಜಿಲ್ಲೆಯ ಮಾರ್ಗವಾಗಿ ಬಂದನಂತೆ. ಸ್ಕಾಟ್‍ನ ಅಡಿಯಲ್ಲಿ ಚಿರಾಪುಂಜಿಯು " ಚಿರಾ ಸ್ಟೇಶನ್" ಎಂಬ ಹೆಸರನ್ನು ಪಡೆಯಿತು. ಈತನು ಇದನ್ನು ಖಾಸಿ ಮತ್ತು ಜೈನ್ಟಿಯ ಬೆಟ್ಟಗಳ ಅಧಿಕೃತ ಆಡಳಿತ ಕೇಂದ್ರವನ್ನಾಗಿ ಬಳಸಲು ಆರಂಭಿಸಿದ.

ಬ್ರಿಟೀಷರು ಅಸ್ಸಾಂನ ರಾಜಧಾನಿಯನ್ನು ಶಿಲ್ಲಾಂಗ್‍ಗೆ ವರ್ಗಾಯಿಸುವುದಕ್ಕಿಂತ ಮೊದಲು ಚಿರಾಪುಂಜಿಯು ಅಸ್ಸಾಂನ ರಾಜಧಾನಿಯಾಗಿ ಕಾರ್ಯ ನಿರ್ವಹಿಸಿತ್ತು. ವೆಲ್ಷ್ ಮಿಷನ್ ಇಲ್ಲಿಗೆ ಆಗಮಿಸಿದ ನಂತರ ಸೊಹ್ರಾವು ಅನೇಕ ಬದಲಾವಣೆಗಳನ್ನು ಕಂಡಿತು. ನಂತರ ಚಿರಾಪುಂಜಿಯು ವಿಲಿಯಂ ಕ್ಯಾರಿಯವರ ನೇತೃತ್ವದಲ್ಲಿ ಕ್ರೈಸ್ತ ಮತವನ್ನು ಅರಿತುಕೊಳ್ಳುವುದರ ಜೊತೆಗೆ ಆಧುನಿಕತೆಯನ್ನು ಸಹ ಅರಿತುಕೊಂಡಿತು. ಥಾಮಸ್ ಜಾನ್ ಎಂಬ ಮತ್ತೊಬ್ಬ ಮಿಷನರಿಯು ಖಾಸಿ ಮತ್ತು ಜೈನ್ಷಿಯ ಬೆಟ್ಟಗಳಲ್ಲಿ ನೆಲೆಸಿದ್ದ ಬುಡಕಟ್ಟು ಜನರಿಗೆ ಆಧುನಿಕ ಕೃಷಿ ಪದ್ಧತಿಯನ್ನು ತಿಳಿಸಿಕೊಟ್ಟನು. ಇದೆಲ್ಲಕ್ಕಿಂತ ಮುಖ್ಯವಾಗಿ ಆಗ್ನೇಯ ಭಾರತದಲ್ಲಿ ಮೊಟ್ಟ ಮೊದಲ ಚರ್ಚನ್ನು 1820ರಲ್ಲಿ ಚಿರಾಪುಂಜಿಯಲ್ಲಿ ನಿರ್ಮಾಣ ಮಾಡಲಾಯಿತು.

ಬುಡಕಟ್ಟು ಜನರ ಏಳಿಗೆಗಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಿಷನರಿಗಳು ಸೇವೆ ಸಲ್ಲಿಸುತ್ತಿದ್ದರೆ, ಬ್ರಿಟೀಷರು ಚಿರಾಪುಂಜಿಯ ಭೌಗೋಳಿಕ ಅನುಕೂಲತೆಗಳನ್ನು ಗಮನಿಸಿ ಕಾರ್ಯೋನ್ಮುಖರಾದರು. ಸಿಹ್ಲೆಟ್ ಭೂಭಾಗಕ್ಕು ಮತ್ತು ಅಸ್ಸಾಂ ಬೆಟ್ಟಗಳಿಗು ಸಮೀಪವಾಗಿರುವ ಚಿರಾಪುಂಜಿಯು ಒಂದು ಪ್ರಮುಖ ಆಡಳಿತ ಕೇಂದ್ರವಾಗಿ ಬೆಳೆಯಿತು. ಜೊತೆಗೆ ಇಲ್ಲಿನ ಅನುಕೂಲಕರವಾದ ವಾತಾವರಣವು ಸಹ ಇದಕ್ಕೆ ಕೊಡುಗೆ ನೀಡಿತು.

ಚಿರಾಪುಂಜಿಗೆ ತಲುಪುವುದು ಹೇಗೆ

ಚಿರಾಪುಂಜಿಯು ಶಿಲ್ಲಾಂಗ್‍ನಿಂದ 55 ಕಿ.ಮೀ ನಷ್ಟು ದೂರದಲ್ಲಿದೆ. ಇಲ್ಲಿಗೆ ತಲುಪಲು ಪ್ರವಾಸಿಗರಿಗೆ 2 ಗಂಟೆಗಳ ಪ್ರಯಾಣಾವಧಿ ತಗುಲುತ್ತದೆ. ಶಿಲ್ಲಾಂಗ್ ಮತ್ತು ಚಿರಾಪುಂಜಿಯ ನಡುವೆ ರಸ್ತೆ ಸಾರಿಗೆಯು ಅನುಕೂಲಕರವಾಗಿದೆ. ಖಾಸಗಿ ಮತ್ತು ಸರ್ಕಾರಿ ಸಾರಿಗೆ ಬಸ್ಸುಗಳು ಇಲ್ಲಿ ಅನಿಯಮಿತವಾಗಿ ದೊರೆಯುತ್ತವೆ.

ಚಿರಾಪುಂಜಿ ಹವಾಮಾನ

ಚಿರಾಪುಂಜಿಯಲ್ಲಿ ವಾರ್ಷಿಕವಾಗಿ 11931.7 ಮಿ.ಮೀ.ನಷ್ಟು ಮಳೆಯಾಗುತ್ತದೆ. ಸೊಹ್ರಾಗೆ ಭೇಟಿ ನೀಡುವ ಪ್ರವಾಸಿಗರು ಯಾವುದೇ ಮುನ್ಸೂಚನೆ ಕೊಡದೆ ಬೀಳುವ ಮಳೆಯಿಂದ ಹಿಡಿದು ಕುಂಭದ್ರೋಣ ಮಳೆಯವರೆಗಿನ ಎಲ್ಲಾ ಪ್ರಕಾರದ ಮಳೆಯನ್ನು ಇಲ್ಲಿ ಕಾಣಬಹುದು. ಇಲ್ಲಿ ಮಳೆ ಬೀಳುವುದಕ್ಕೆ ಗೊತ್ತು ಮತ್ತು ಗುರಿಯೆಂಬುದು ಇರುವುದಿಲ್ಲ. ಆದರೆ ಬೇಸಿಗೆಯಲ್ಲಿ ಇಲ್ಲಿ ಅಷ್ಟೇನು ಮಳೆ ಸುರಿಯುವುದಿಲ್ಲ. ಆದರೂ ಆರ್ದ್ರತೆ ಮತ್ತು ಸೆಖೆ ಈ ಸಮಯದಲ್ಲಿ ಹೆಚ್ಚಾಗುತ್ತದೆ.

ಚಿರಾಪುಂಜಿ ಪ್ರಸಿದ್ಧವಾಗಿದೆ

ಚಿರಾಪುಂಜಿ ಹವಾಮಾನ

ಉತ್ತಮ ಸಮಯ ಚಿರಾಪುಂಜಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಚಿರಾಪುಂಜಿ

  • ರಸ್ತೆಯ ಮೂಲಕ
    ಚಿರಾಪುಂಜಿ ತಲುಪಲು ಅತ್ಯಂತ ಸೂಕ್ತವಾದ ಮತ್ತು ಪ್ರಧಾನವಾದ ಸಂಪರ್ಕವೆಂದರೆ ಅದು ರಸ್ತೆ ಮಾರ್ಗ. ಶಿಲ್ಲಾಂಗ್ ಮತ್ತು ಚಿರಾಪುಂಜಿಯ ನಡುವಿನ ಅಂತರ 55 ಕಿ.ಮೀ.ಗಳು. ಇಲ್ಲಿಗೆ ತಲುಪಲು 2 ಗಂಟೆಗಳ ಕಾಲಾವಧಿ ಸಾಕು. ಮೇಘಾಲಯ ಪ್ರವಾಸೋದ್ಯಮ ಇಲಾಖೆಯು ಚಿರಾಪುಂಜಿಗೆ ಪ್ರತಿದಿನ ಒಂದು ಬಸ್ ವ್ಯವಸ್ಥೆಯನ್ನು ಮಾಡಿದೆ. ಈ ಬಸ್ ಪ್ರವಾಸಿಗರಿಗೆ ಚಿರಾಪುಂಜಿಯಲ್ಲಿರುವ ನೋಡಲೆ ಬೇಕಾದ ಸ್ಥಳಗಳನ್ನೆಲ್ಲ ತೋರಿಸುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗುವಹಾಟಿ ರೈಲು ನಿಲ್ದಾಣವು ಚಿರಾಪುಂಜಿಗೆ ಸಮೀಪದ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ಚಿರಾಪುಂಜಿಯಿಂದ 150 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ರೈಲು ನಿಲ್ದಾಣವು ಭಾರತದಲ್ಲಿಯೇ ಅತ್ಯಂತ ಚಟುವಟಿಕೆಯಿಂದ ಕೂಡಿದ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಇಲ್ಲಿಂದ ದೇಶದ ಇತರ ಮೂಲೆಗಳಿಗೆ ಉತ್ತಮ ರೈಲು ಸಂಪರ್ಕವಿದೆ. ಪ್ರವಾಸಿಗರು ಈ ನಿಲ್ದಾಣದಿಂದ ಸೊಹ್ರಾಗೆ ಸಾರಿಗೆ ಸೌಕರ್ಯವನ್ನು ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಶಿಲ್ಲಾಂಗ್ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದ್ದು, ಕೊಲ್ಕಟಾವನ್ನು ಸಂಪರ್ಕಿಸುತ್ತದೆ. ಪ್ರಸ್ತುತ ಈ ವಿಮಾನ ನಿಲ್ದಾಣವು ಕಾರ್ಯ ನಿರ್ವಹಿಸುತ್ತಿಲ್ಲ. ಹಾಗಾಗಿ ಗುವಹಾಟಿ ವಿಮಾನ ನಿಲ್ದಾಣವು ಇಲ್ಲಿಗೆ ಬಂದು ಹೋಗುವವರಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ಇಲ್ಲಿಂದ 170 ಕಿ.ಮೀ ದೂರದಲ್ಲಿದೆ. ಗುವಹಾಟಿ ವಿಮಾನ ನಿಲ್ದಾಣದಿಂದ ಚಿರಾಪುಂಜಿಗೆ ನಾಲ್ಕೂವರೆ ಗಂಟೆಗಳ ಪ್ರಯಾಣಾವಧಿ ತಗುಲುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat