Search
  • Follow NativePlanet
Share
» »ಚೆನ್ನೈನಿಂದ ಕೂರ್ಗ್-ಭಾರತದ ಸ್ಕಾಟ್ ಲ್ಯಾಂಡ್ ನ ಅನ್ವೇಷಣೆ

ಚೆನ್ನೈನಿಂದ ಕೂರ್ಗ್-ಭಾರತದ ಸ್ಕಾಟ್ ಲ್ಯಾಂಡ್ ನ ಅನ್ವೇಷಣೆ

ನಿಮ್ಮನ್ನು ಪುನರ್ಯೌವ್ವನ ಗೊಳಿಸಿಕೊಳ್ಳಲು ಭಾರತದ ಸ್ಕಾಟ್ಲೆಂಡ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಕೂರ್ಗ್ ಗೆ ಪ್ರವಾಸವನ್ನು ಕೈಗೊಳ್ಳಿ. ಇದಕ್ಕಾಗಿ ನೀವು ಮಾಡಬೇಕಾದುದುದಿಷ್ಟೆ ಚೆನ್ನೈಯಿಂದ ಕೂರ್ಗ್ ಗೆ ವಾರಾಂತ್ಯದ ರಜಾದಿನಗಳನ್ನು ಕಳೆಯಲು ಯೋಜನ

By Manjula Balaraj Tantry

ಹಿಂದಿನ ಬ್ರಿಟಿಷ್ ಪ್ರಾಂತ್ಯದ ಕೂರ್ಗ್ ಎಂದು ಕರೆಲ್ಪಡುತ್ತಿದ್ದ ಈ ಸ್ಥಳವು ನಂತರ ಕೊಡಗು ಎಂದು ಕರೆಯಲ್ಪಟ್ಟಿತು. ಇದು ಕರ್ನಾಟಕದ ಒಂದು ಗ್ರಾಮೀಣ ಜಿಲ್ಲೆಯಾಗಿದೆ. ಉತ್ತರದಲ್ಲಿ ಮಾಂಡೇರಿ ಕೋಟೆಯು ಸುತ್ತುವರೆದಿದ್ದು ಇದರ ಪ್ರವೇಶ ದ್ವಾರವು ನಿಮ್ಮನ್ನು ಸ್ವಾಗತಿಸುತ್ತದೆ.

ಈ ಕೋಟೆಯನ್ನು ಎರಡು ದೊಡ್ಡ ಗಾತ್ರದ ಆನೆಗಳು ಕಾವಲು ಕಾಯುತ್ತಿರುವುದು ಕಂಡು ಬರುತ್ತದೆ. ಗೋತಿಕ್ ಶೈಲಿಯ ಚರ್ಚ್ ಮತ್ತು ಪವಿತ್ರ ಓಂಕಾರೇಶ್ವರ ದೇವಾಲಯವನ್ನು ಹೊಂದಿರುವ ಕೂರ್ಗ್ ನ ಭೇಟಿ ಯು ಮೌಲ್ಯಯುತವಾದುದಾಗಿದೆ.

ಧುಮ್ಮಿಕ್ಕಿ ಹರಿಯುವ ಅಬ್ಬೆ ಜಲಪಾತವು ನಿಮಗೆ ನಯನ ಮನೋಹರ ನೋಟವನ್ನು ಒದಗಿಸುತ್ತದೆ ಮತ್ತು ಈ ಸ್ಥಳದ ಅದ್ಬುತವನ್ನು ಪ್ರತಿಬಿಂಬಿಸುತದೆ ಅದರ ಜೊತೆಗೆ ಉತ್ತರದಲ್ಲಿ ರಾಜನ ಘೋರಿಯು ನಿಮ್ಮನ್ನು ಇತಿಹಾಸದ ಕಡೆಗೆ ಕೊಂಡೊಯ್ಯುತ್ತದೆ.

ಕೂರ್ಗ್ ಭೇಟಿ ಕೊಡಲು ಉತ್ತಮ ಸಮಯ

ಕೂರ್ಗ್ ಭೇಟಿ ಕೊಡಲು ಉತ್ತಮ ಸಮಯ

PC: Ashwinstein

ಮಳೆಗಾಲದ ಸಮಯದಲ್ಲಿ ಸಂಪೂರ್ಣ ಪಟ್ಟಣವು ಹೂವುಗಳಿಂದ ಮತ್ತು ಸುಂದರ ಹಸಿರಿನಿಂದ ಸುತ್ತುವರಿದಿರುತ್ತದೆ. ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುವುದರಿಂದ ಅದ್ಬುತವಾದ ಜಲಪಾತಗಳನ್ನು ಕಾಣಬಹುದಾಗಿದೆ. ಆದುದರಿಂಅ ಸಾಹಸಿ ಉತ್ಸಾಹಿಗಳಿಗೆ ಈ ಸಮಯವು ನದಿಯಲ್ಲಿ ರಾಫ್ಟಿಂಗ್ ಮಾಡಲು ಸೂಕ್ತ ಸಮಯವಾಗಿದೆ .

ಚೆನ್ನೈನಿಂದ ಕೂರ್ಗ್ ತಲುಪುವುದು ಹೇಗೆ?

ಚೆನ್ನೈನಿಂದ ಕೂರ್ಗ್ ತಲುಪುವುದು ಹೇಗೆ?

ಪಶ್ಚಿಮ ಘಟ್ಟದಲ್ಲಿಯ ಹಾಗೂ ಕರ್ನಾಟಕದ ನೈಋತ್ಯ ದಿಕ್ಕಿನಲ್ಲಿರುವ ಒಂದು ಬೆಟ್ಟದ ಜಿಲ್ಲೆ ಕೊಡಗು ಆಗಿದ್ದು ಇದು ಸಮುದ್ರ ಮಟ್ಟದಿಂದ 900 ಮೀ. ಎತ್ತರದಲ್ಲಿದೆ. ಚೆನ್ನೈ ನಿಂದ ಕೂರ್ಗ್ ಗೆ ಮೂರು ಮುಖ್ಯ ರಸ್ತೆಗಳ ಮಾರ್ಗವಿದೆ.

ಮಾರ್ಗ 1 - ಚೆನ್ನೈ- ವೆಲ್ಲೂರು- ಹೊಸೂರು - ಮೈಸೂರು ನಿಂದ ರಾ.ಹೆ 48 ಮತ್ತು ರಾ.ಹೆ275 ಮೂಲಕ

ಮಾರ್ಗ 2 - ಚೆನ್ನೈ- ಚಿತ್ತೂರು- ಬೆಂಗಳೂರು- ಕೊಡಗಿನಿಂದ ರಾ.ಹೆ 75 ರ ಮೂಲಕ

ಮಾರ್ಗ 3 - ಚೆನ್ನೈ - ವಿಲ್ಲುಪುರಂ - ತಿರುಚಿನಾಪಳ್ಳಿ- ಕನ್ಯಾಕುಮಾರಿ ಮಾರ್ಗ ದಿಂದ ಮೈಸೂರು

ಮಾರ್ಗ 1 ಹೆಚ್ಚು ಆದ್ಯತೆ ನೀಡಲಾಗುತ್ತದೆ ಈ ಮಾರ್ಗದಲ್ಲಿ ಸುಮಾರು 580 ಕಿಮೀ ಅಂತರದಲ್ಲಿ ಪ್ರಯಾಣಿಸಬೇಕಾಗಿದ್ದು ಇದು ಅನೇಕ ವಾಣಿಜ್ಯ ಮತ್ತು ಐತಿಹಾಸಿಕ ಸ್ಥಳಗಳನ್ನು ಭೇಟಿ ಮಾಡಿಸುತ್ತದೆ. ಈ ಮಾರ್ಗದಲ್ಲಿ ಪ್ರಯಾಣಿಸುವಾಗ ಅನೇಕ ಸುಂದರವಾಗಿ ಕೆತ್ತಲ್ಪಟ್ಟ ನಗರಗಳು, ಸುಸಜ್ಜಿತವಾದ ಹಳ್ಳಿಗಳು, ಉತ್ತಮ ಸ್ಥಿತಿಯಲ್ಲಿರುವ ಮಾರ್ಗಗಳು ನಿಮಗೆ ದಾರಿಯುದ್ದಕ್ಕೂ ಸೌಮ್ಯವಾದ ಪ್ರಯಾಣದ ಅನುಭವವನ್ನು ನೀಡುತ್ತದೆ.

ವೆಲ್ಲೂರು

ವೆಲ್ಲೂರು

PC: wikipedia.org

ಮೊದಲ ಗಮ್ಯಸ್ಥಾನ ಅದು ವೆಲ್ಲೂರು ಇದು ಚೆನ್ನೈನಿಂದ 140 ಕಿ.ಮೀ ದೂರದಲ್ಲಿದೆ. ಇಲ್ಲಿಯ ಶ್ರೀರಾಂಪುರದಲ್ಲಿಯ ಬಂಗಾರದ ಗೋಲ್ಡನ್(ಬಂಗಾರದ) ದೇವಾಲಯವು ಜಗತ್ತಿನ ಅತೀದೊಡ್ಡ ಬಂಗಾರದ ದೇವಾಲಯವೆನಿಸಿದೆ! ಈ ಅದ್ಬುತವಾದ ರಚನೆಯು ಬಂಗಾರದ ತಗಡುಗಳಿಂದ ಮುಚ್ಚಲ್ಪಟ್ಟಿದ್ದು, ಹಳೆಯ ಕಾಲದ ವಾಸ್ತುಶಿಲ್ಪ ಶೈಲಿಯನ್ನು ಪ್ರತಿಬಿಂಬಿಸುತ್ತದೆ.

ಇಲ್ಲಿ ವೆಲ್ಲೂರು ಕೋಟೆಯನ್ನೂ ಕೂಡಾ ನೀವು ಭೇಟಿ ನೀಡ ಬಹುದು ಇದು ನಿಮ್ಮನ್ನು 1857ರ ಬಂಡಾಯದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ ಮತ್ತು, ಸ್ವಾತಂತ್ರ್ಯದ ಮೊದಲ ಯುದ್ಧದ ಕೆಚ್ಚೆದೆಯ ವೀರರ ಹೃದಯ ವೈಶಾಲ್ಯತೆಯನ್ನು ಚಿತ್ರಿಸುತ್ತದೆ. ಇಲ್ಲಿ ಹೊರಗಿರುವ ಹುಲ್ಲುಗಾವಲು ಪ್ರದೇಶವು ನಿಮಗೆ ವಿಶ್ರಾಂತಿ ತೆಗೆದು ಕೊಳ್ಳಲು ಮತ್ತು ನಿಮ್ಮ ವಾಹನವನ್ನು ತಂಪಾಗಿಸಲು ಸೂಕ್ತವಾದ ಸ್ಥಳವಾಗಿದೆ.

ಹೊಸೂರು

ಹೊಸೂರು

PC: Wayoyo

ವೆಲ್ಲೂರಿನಿಂದ 174 ಕಿ.ಮೀ ಅಂತರದಲ್ಲಿರುವುದೇ ಕೈಗಾರಿಕಾ ನಗರ ಹೊಸೂರು. ಈ ವಾಣಿಜ್ಯ ಕೇಂದ್ರವು ಒಂದು ಸ್ಥಳೀಯ ಆಹಾರವನ್ನು ಸೇವಿಸಲು ಸೂಕ್ತವಾದ ಸ್ಥಳವಾಗಿದೆ. ಇಂಧನ ತುಂಬುವ ಕೇಂದ್ರಗಳು ಮತ್ತು ಇತರ ಎಲ್ಲ ಸರಬರಾಜುಗಳು ಇದರ ಮಧ್ಯದಲ್ಲಿದೆ. ಹೊಸೂರನ್ನು ಭಾರತದ ಸಣ್ಣ ಇಂಗ್ಲೆಂಡ್ ಎಂದು ಕರೆಯಲಾಗುತ್ತದೆ. ಇಲ್ಲಿ ಹತ್ತಿರದಲ್ಲಿ 500 ವರ್ಷ ಹಳೆಯ ಮುರುಗನ್ ದೇವಾಲಯವಿದೆ ಮತ್ತು ಇದು ಒಂದು ಭೇಟಿ ಮಾಡಲೇ ಬೇಕಾದ ಸ್ಥಳವಾಗಿದೆ.

ರಾಮ ನಗರ

ರಾಮ ನಗರ

PC: Navneeth KN

ಹೊಸೂರಿನಿಂದ 79 ಕಿ.ಮೀ ಅಂತರದಲ್ಲಿ ರಾಮನಗರವಿದೆ. ಇಲ್ಲಿರುವ ರಾಮದೇವರ ಬೆಟ್ಟವು ಹಳೆಯಯ ಕಲ್ಲು ಬಂಡೆ ಹತ್ತುವ ತಾಣವಾಗಿದೆ. ಪಕ್ಷಿವೀಕ್ಷಣೆ ಕೂಡ ಇಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಉದ್ದನೆಯ ಬಿಲ್ ಮತ್ತು ಈಜಿಪ್ಟಿನ ರಣಹದ್ದುಗಳು ಕಾಣಸಿಗುತ್ತವೆ. ವಿಶ್ವದ ಅತಿ ದೊಡ್ಡ ಏಕಶಿಲಾ ಬೆಟ್ಟಗಳಲ್ಲಿ ಒಂದಾದ ಸಾವನದುರ್ಗವು ಗ್ರಾನೈಟ್, ಲ್ಯಾಟೈಟ್ ಮತ್ತು ಜ್ನೈಸ್ ಬಂಡೆಗಳನ್ನು ಒಳಗೊಂಡ ಭವ್ಯವಾದ ನೋಟವನ್ನು ನೀಡುತ್ತದೆ.

ಮೈಸೂರು

ಮೈಸೂರು

PC: Amrita Kar

ನಿಮ್ಮ ಪ್ರಯಾಣವು ಮೈಸೂರಲ್ಲಿ ತಂಗದೇ ಪೂರ್ಣಗೊಳ್ಳಲಾರದು. ರಾಮನಗರದಿಂದ ಸುಮಾರು 98. ಕಿ.ಮೀ ಅಂತರದಲ್ಲಿರುವ ಮತ್ತು ಒಡೆಯರ್ ರಾಜವಂಶಕ್ಕೆ ಸಂಬಂಧಿಸಿದ ಹಳೆಯ ನಗರವೇ ಮೈಸೂರು. ಮೈಸೂರು ನಗರಕ್ಕೆ ಪೂರಕವೆನ್ನುವಂತೆ ಮೈಸೂರು ಅರಮನೆಯು ಮೈಸೂರಿನ ಒಂದು ಸಂಕ್ಷಿಪ್ತ ವಿವರವನ್ನು ನೀಡುತ್ತದೆ. ಮೈಸೂರಿನಲ್ಲಿ ಚಾಮುಂಡಿ ಬೆಟ್ಟಗಳಿವೆ ಇಲ್ಲಿ ಪ್ರಸಿದ್ದ ಚಾಮುಂಡೇಶ್ವರೀ ದೇವಾಲಯವಿದೆ.

ಚಾಮುಂಡಿ ಬೆಟ್ಟವು ಒಂದು ನಿಶ್ಯಬ್ದವಾದ ಸ್ಥಳವಾಗಿದ್ದು ಇದು ದಟ್ಟವಾದ ಹಸಿರಿನಿಂದ ಎಲ್ಲಾ ಕಡೆ ತುಂಬಿದೆ ಮತ್ತು ಸಣ್ಣ ವಿಶ್ರಾಂತಿ ಪಡೆಯಲು ಮತ್ತು ಇಲ್ಲಿಯ ದೇವಾಲಯದಲ್ಲಿ ಭಕ್ತಿ ಭಾವವನ್ನು ಹೊಂದಲು ಒಂದು ಸೂಕ್ತವಾದ ಸ್ಥಳವಾಗಿದೆ. ಅಲ್ಲದೆ ಅತ್ಯಂತ ಸುಂದರ ಸ್ಥಳವಾದ ಟಿಪ್ಪು ಸುಲ್ತಾನನು ಮೈಸೂರನ್ನು ಆಳುತ್ತಿದ್ದ ಸಮಯದಲ್ಲಿ ಇದ್ದ ಶ್ರೀರಂಗ ಪಟ್ಟಣದ ಕೋಟೆಗೆ ಭೇಟಿ ಕೊಡುವುದನ್ನು ಮರೆಯದಿರಿ.

ಅಂತಿಮ ಗಮ್ಯಸ್ಥಾನ - ಕೂರ್ಗ್

ಅಂತಿಮ ಗಮ್ಯಸ್ಥಾನ - ಕೂರ್ಗ್

PC: Kalidas Pavithran

ಮೈಸೂರಿನಿಂದ 107 ಕಿ.ಮೀ ದೂರದಲ್ಲಿ ಕೂರ್ಗ್ ಇದೆ. ಈ ಕಡೆಗೆ ಪ್ರಯಾಣ ಹೊರಟ ತಕ್ಷಣ ನಿಮ್ಮ ಇಂದ್ರಿಯಗಳಿಗೆ ತಂಪಾದ ಮಂಜು ತಾಕಿದ ಅನುಭವವಾಗುತ್ತದೆ ಮತ್ತು ನಿಮಗೆ ವಿಶೇಷವಾದ ತ್ರೃಪ್ತಿಯನ್ನುಂಟು ಮಾಡುತ್ತದೆ. ಪಶ್ಚಿಮ ಘಟ್ಟಗಳಲ್ಲಿರುವ ಕೂರ್ಗ್ ಸುಸಜ್ಜಿತವಾಗಿ ಸಂರಕ್ಷಿಸಲ್ಪಟ್ಟ ಪ್ರಕೃತಿಯನ್ನು ಹೊಂದಿದೆ.

ಸುತ್ತಲೂ ಹರಡಿರುವ ಸುವಾಸನಾಯುಕ್ತ ಹಸಿರು ಇದಕ್ಕೆ ಒಂದು ಉತ್ತಮವಾದ ಉದಾಹರಣೆಯಾಗಿದೆ. ಇಲ್ಲಿಗೆ ಬರುತ್ತಿದ್ದಂತೆಯೇ ಕದಂಬುಟ್ಟು ಮತ್ತು ಪಾಂಡಿ ಕರಿ, ಉಪ್ಪುಸಹಿತ ಅಕ್ಕಿ ಉಂಡೆಗಳು ಮತ್ತು ಹಂದಿ ಮಾಂಸದಿಂದ ತಯಾರಿಸಲಾದ ಇಲ್ಲಿಯ ಸ್ಥಳೀಯ ಆಹಾರವನ್ನು ಸವಿಯುವುದನ್ನು ಮರೆಯದಿರಿ..

ಕೂರ್ಗ್ ನಲ್ಲಿ ಭೇಟಿ ಕೊಡಬಹುದಾದ ಸ್ಥಳಗಳು

ರಾಜಾ ಸೀಟ್

ರಾಜಾ ಸೀಟ್

PC: Navin Sigamany

ರಾಜಾ ಸೀಟ್ ಮಡಿಕೇರಿಯ ಪಟ್ಟಣದಲ್ಲಿದ್ದು ಇಲ್ಲಿ ರಾಜರು ತಮ್ಮ ನೆಚ್ಚಿನ ಸಂಗಾತಿಗಳೊಂದಿಗೆ ಸೂರ್ಯಾಸ್ತಗಳನ್ನು ವೀಕ್ಷಿಸುತ್ತಿದ್ದ ಸ್ಥಳವಾಗಿದೆ. ಇದು ಎತ್ತರವಾದ ಬೆಟ್ಟಗಳು ಮತ್ತು ಹಸಿರು ಕಣಿವೆಗಳ ಉಜ್ವಲ ದೃಶ್ಯವನ್ನು ನಿಮಗೆ ಒದಗಿಸಿಕೊಡುತ್ತದೆ. ಅಲ್ಲದೆ ಈ ಸ್ಥಳವು ದಕ್ಷಿಣ ಭಾರತದ ಅತ್ಯಂತ ಸುಂದರವಾದ ದೃಶ್ಯಗಳ ನೋಟವನ್ನು ನೀಡುವ ಅದ್ಬುತವಾದ ಸ್ಥಳಗಳಲ್ಲಿ ಒಂದಾಗಿದೆ.

ಗದ್ದಿಗೆ

ಗದ್ದಿಗೆ

PC: Pranav Ashok

ದೊಡ್ಡ ವೀರ ರಾಜೇಂದ್ರ ಮತ್ತು ಲಿಂಗ ರಾಜೇಂದ್ರರ ಸಮಾಧಿಯನ್ನು ಹೊಂದಿರುವ ಈ ಐತಿಹಾಸಿಕ ಸ್ಮಾರಕವು ಗದ್ದಿಗೆಯಲ್ಲಿದೆ. ಈ ಪಟ್ಟಣದ ಪರಿಪೂರ್ಣ ನೋಟವನ್ನು ಈ ಸ್ಥಳದಿಂದ ನೋಡಬಹುದಾಗಿದೆ. ಈ ಸಮಾಧಿಗಳು ಮೊಹಮ್ಮದೀಯ ಶೈಲಿಯಲ್ಲಿ ಗೋಪುರಗಳು ಮತ್ತು ಕೇಂದ್ರ ಗುಮ್ಮಟಗಳನ್ನು ಮಾಡಲಾಗಿದೆ. ಕಿಟಕಿಯ ಸರಳುಗಳನ್ನು ಹಿತ್ತಾಳೆಗಳಿಂದ ಮಾಡಲಾಗಿದ್ದು ಸುಂದರವಾದ ಕೆತ್ತನೆಗಳನ್ನು ಹೊಂದಿದೆ.

ಓಂಕಾರೇಶ್ವರ ದೇವಾಲಯ

ಓಂಕಾರೇಶ್ವರ ದೇವಾಲಯ

PC: John

ಮಧ್ಯಯುಗದ ಶೈಲಿಯ ಈ ವಾಸ್ತುಶಿಲ್ಪದ ಕಟ್ಟಡವನ್ನು ಲಿಂಗ ರಾಜೇಂದ್ರ - 2ರಿಂದ ನಿರ್ಮಿಸಲ್ಪಟ್ಟಿದೆ. ಇದು ಕೇಂದ್ರ ಗುಮ್ಮಟ ಮತ್ತು ಗೋಪುರಗಳನ್ನು ಹೊಂದಿರುವ ಚತುರ್ಭುಜ ಮೂಲೆಗಳನ್ನು ಹೊಂದಿದೆ. ದಂತ ಕಥೆಗಳ ಪ್ರಕಾರ ಅರಸನು ಧಾರ್ಮಿಕ ಪೂಜಾರಿಯೊಬ್ಬರನ್ನು ಸಾಯುವಂತೆ ಮಾಡಿದನು ಮತ್ತು ಇದರಿಂದಾಗಿ ಬ್ರಾಹ್ಮಣನ ಆತ್ಮವು ಇವನನ್ನು ಕಾಡುತ್ತದೆ. ಅವನ ದಿವಾನನ ಸಲಹೆಯ ಮೇರೆಗೆ, ಬ್ರಾಹ್ಮಣನ ಆತ್ಮವನ್ನು ಸಮಾಧಾನಗೊಳಿಸಲು ರಾಜನು ದೇವಾಲಯವನ್ನು ನಿರ್ಮಿಸಿದನು. ದೇವಸ್ಥಾನದ ಪ್ರವೇಶದ್ವಾರವು ತಾಮ್ರದ ಕೆತ್ತನೆಯನ್ನು ಹೊಂದಿದ್ದು, ಇದು ದಂತಕಥೆಯನ್ನು ಚಿತ್ರಿಸುತ್ತದೆ.

ಅಬ್ಬೆ ಜಲಪಾತ

ಅಬ್ಬೆ ಜಲಪಾತ

PC: Anath BS

ಕೂರ್ಗ್ ನ ಅಬ್ಬೆ ಜಲಪಾತವು ಒಂದು ಅದ್ಬುತವಾದುದ ಮತ್ತು ದೊಡ್ಡ ಜಲಪಾತವಾಗಿದ್ದು ಇದು ಕಾವೇರಿ ನದಿಯ ನೀರನ್ನು ಹೊತ್ತುಕೊಂಡು ಬೆಟ್ಟಗಳ ಕಡಿದಾದ ಇಳಿಜಾರಿನಲ್ಲಿ ಇಳಿಯುತ್ತದೆ.

ತಲಕಾವೇರಿ ಮತ್ತು ಭಾಗಮಂಡಲ

ತಲಕಾವೇರಿ ಮತ್ತು ಭಾಗಮಂಡಲ

PC: Prasanna

ತಲಕಾವೇರಿ ಬ್ರಹ್ಮಗಿರಿ ಬೆಟ್ಟದ ಇಳಿಜಾರಿನ ಉದ್ದಕ್ಕೂ ಇದ್ದು ಇದು ಕಾವೇರಿಯ ಜನ್ಮ ಸ್ಥಾನವಾಗಿದೆ. ತಲಕಾವೇರಿಯು ನೈಸರ್ಗಿಕ ಸೌಂದರ್ಯ ಮತ್ತು ಯಾತ್ರಾ ಸ್ಥಳವನ್ನು ಹೊಂದಿದ್ದು ಹೆಸರುವಾಸಿಯಾದ ಸ್ಥಳವಾಗಿದೆ.

ಕಾವೇರಿ ನಿಸರ್ಗಧಾಮ

ಕಾವೇರಿ ನಿಸರ್ಗಧಾಮ

PC: Milind Ruparel

ನಿಸರ್ಗಧಾಮ ರಾಜ್ಯ ಹೆದ್ದಾರಿಯಿಂದ ಸ್ವಲ್ಪ ದೂರದಲ್ಲಿರುವ ಒಂದು ಸುಂದರವಾದ ದ್ವೀಪ . ಈ ದ್ವೀಪವು 64 ಎಕರೆಗಳಷ್ಟು ಜಾಗದಲ್ಲಿ ಹರಡಿದ್ದು ಕಾವೇರಿ ನದಿಯಿಂದ ಸುತ್ತುವರಿಯಲ್ಪಟ್ಟಿದೆ. ಮತ್ತು ಇಲ್ಲಿಗೆ ತೂಗು ಸೇತುವೆಯ ಮೂಲಕ ಸುಲಭವಾಗಿ ನಡೆದುಕೊಂಡು ಹೋಗಬಹುದಾಗಿದೆ.

ಈ ಜಾಗವು ಸುಂದರವಾದ ಸುತ್ತ ಮುತ್ತಲಿಂದ ಕೂಡಿದೆ ಮತ್ತು ದಟ್ಟವಾದ ಗಂಧದ ಮರಗಳು, ತೇಗ ಮತ್ತು ಬಿದಿರಿನ ಮರಗಳಿಂದ ತುಂಬಿಕೊಂಡಿದೆ. ಇಲ್ಲಿ ನದಿ ತೀರದಲ್ಲಿ ಕಾಟೇಜ್ ಗಳ ಸೌಕರ್ಯವು ಲಭ್ಯವಿದೆ ಮತ್ತು ಆಕರ್ಷಣೆಗಳಲ್ಲಿ ಮಕ್ಕಳ ಪಾರ್ಕ್, ಒಂದು ಆರ್ಕಿಡೇರಿಯಮ್ ಮತ್ತು ಆನೆ ಸವಾರಿಗಳು ಮುಂತಾದವುಗಳನ್ನು ಹೊಂದಿದೆ.

ಬೈಲಕುಪ್ಪೆ

ಬೈಲಕುಪ್ಪೆ

PC: Sakeeb Sabakka

ಬೈಲಕುಪ್ಪೆ ಯು ಟಿಬೇಟಿಯನ್ನರ ವಾಸಸ್ಥಳವಾಗಿದೆ. ಇದು ನಮ್ಡ್ರೊಲಿಂಗ್ ಜೊತೆಗೆ ಸೆರಾ ಮೆಯ್ ಮತ್ತು ಸೆರಾ ಜೀ ಗೊಂಪಾದಂತಹ ಹಲವಾರು ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಹೊಂದಿದೆ ತಶಿಲ್ ಹುನ್ಪೋ ಮಠವು ಪಂಚೆನ್ ಲಾಮಾರ ಪೀಠವಾಗಿದೆ. ಈ ಮಠಗಳು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಬುದ್ದನ ಪ್ರತಿಮೆ ಇರುವ ಸ್ಥಳಗಳು ಧ್ಯಾನ ಮಾಡಲು ಸೂಕ್ತವಾದುದಾಗಿದೆ ಮತ್ತು ಅವುಗಳ ಕಟ್ಟಡಗಳು ಒಂದು ವಿಭಿನ್ನತೆಯನ್ನು ಹೊಂದಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X