Search
  • Follow NativePlanet
Share
» »ನಿಬ್ಬೆರಗಾಗಿಸುವ ಗೋವಾದ ಚಪೋರಾ!

ನಿಬ್ಬೆರಗಾಗಿಸುವ ಗೋವಾದ ಚಪೋರಾ!

By Vijay

ಪ್ರವಾಸೋದ್ಯಮಕ್ಕೆ ತನ್ನದೆ ಆದ ಮಹತ್ತರ ಕಾಣಿಕೆ ನೀಡುವ ರಾಜ್ಯ ಗೋವಾ. ಗೋವಾ ಪ್ರಮುಖವಾಗಿ ಬಲು ಅಂದ ಚೆಂದದ ಕಡಲ ತೀರಗಳಿಗಾಗಿ ದೇಶದಲ್ಲಿ ಮಾತ್ರವೆ ಅಲ್ಲ ವಿಶ್ವದಲ್ಲೂ ತನ್ನ ಗಮನ ಸೆಳೆದಿದೆ. ಅಂತೆಯೆ ಗೋವಾಗೆ ಬರುವ ಪ್ರವಾಸಿಗರಲ್ಲಿ ವಿದೇಶಿಯರೂ ಸಹ ಹೆಚ್ಚಾಗಿ ಕಂಡುಬರುತ್ತಾರೆ.

ಗೋವಾ ಪೋರ್ಚುಗೀಸರ ಹಿಡಿತದಲ್ಲಿದ್ದಾಗ ಅವರು ಸಾಕಷ್ಟು ಚರ್ಚು ಹಾಗೂ ಇತರೆ ಸ್ಮಾರಕ ರಚನೆಗಳನ್ನು ಗೋವಾದಲ್ಲಿ ನಿರ್ಮಿಸಿದ್ದಾರೆ. ಅಂದು ನಿರ್ಮಿಸಲಾದ ವೈಭವಯುತ ಸ್ಮಾರಕಗಳು ಇಂದಿನ ಗೋವಾದ ಗತ ವೈಭವದ ಸಂಸ್ಕೃತಿಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ತಮ್ಮದೆ ಮಹತ್ತರ ಕಾಣಿಕೆ ನೀಡುತ್ತವೆ.

ಗೋವಾದ ಅಗೋಚರ ಮುಖವಿದು!

ಕೇವಲ ಕಡಲ ತೀರಗಳಿಂದಾಗಿ ಮಾತ್ರವಲ್ಲದೆ ಗೋವಾ ಅದ್ಭುತವಾದ ಕೋಟೆಗಳಿಗೂ ಸಹ ಹೆಸರುವಾಸಿಯಾಗಿದೆ. ಇಲ್ಲಿನ ಒಂದೊಂದು ಚಿಕ್ಕ ಚಿಕ್ಕ ಹಳ್ಳಿಯೂ ಸಹ ಸಾಕಷ್ಟು ವಿಶೇಷತೆಯನ್ನು ಹೊಂದಿವೆ ಎಂದರೆ ತಪ್ಪಾಗಲಾರದು. ಅಂತಹ ಒಂದು ವಿಶಿಷ್ಟ ಸ್ಥಳದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಅದೆ ಚಪೋರಾ.

ಆಕರ್ಷಕ

ಆಕರ್ಷಕ

ಚಪೋರಾ, ಒಂದು ಹಳ್ಳಿಯಾಗಿಯೂ, ಚಿಕ್ಕ ನದಿಯಾಗಿಯೂ, ಸುಂದರ ಕಡಲ ತೀರವಾಗಿಯೂ ಹಾಗೂ ಕೋಟೆ ತಾಣವಾಗಿಯೂ ಪ್ರಸಿದ್ಧಿ ಪಡೆದ ಸ್ಥಳವಾಗಿದೆ. ಗೋವಾಗೆ ಭೇಟಿ ನೀಡಿದರೆ ಚಪೋರಾ ಭೇಟಿ ನೀಡಲೇಬೇಕು ಎನ್ನುವಂತಿದೆ ಇದು.

ಚಿತ್ರಕೃಪೆ: Nikhilb239

ಉತ್ತರ ಗೋವಾ

ಉತ್ತರ ಗೋವಾ

ಚಪೋರಾ ನದಿಯು ಉತ್ತರ ಗೋವಾದಲ್ಲಿ ಹರಿಯುವ ಒಂದು ಚಿಕ್ಕ ನದಿಯಾಗಿದ್ದು ಪಶ್ಚಿಮ ಮುಖವಾಗಿ ಹರಿದು ಕೊನೆಗೆ ಅರಬ್ಬಿ ಸಮುದ್ರದಲ್ಲಿ ಸೇರ್ಪಡೆಗೊಳ್ಳುತ್ತದೆ.

ಚಿತ್ರಕೃಪೆ: Nichalp

ಎರಡು ತಾಲೂಕುಗಳು

ಎರಡು ತಾಲೂಕುಗಳು

ಉತ್ತರ ಗೋವಾದಲ್ಲಿ ಬರುವ ಎರಡು ತಾಲೂಕು ಪ್ರದೇಶಗಳಾದ ಪೆರ್ನೆಮ್ ಹಾಗೂ ಬಾರ್ಡೆಜ್ ಗಳ ಗಡಿಯಾಗಿ ಕಾರ್ಯ ನಿರ್ವಹಿಸುತ್ತದೆ ಚಪೋರಾ ನದಿ. ಹದಿನೆಂಟನೇಯ ಶತಮಾನದಲ್ಲಿ ಚಪೋರಾ ನದಿ ಪೋರ್ಚುಗೀಸ್ ಗೋವಾ ಹಾಗೂ ಭಾರತ ಮಧ್ಯದಲ್ಲಿರುವ ಗಡಿಯಾಗಿ ಗುರುತಿಸಲ್ಪಡುತ್ತಿತ್ತು.

ಚಿತ್ರಕೃಪೆ: Nichalp

ರಾಮ್ಘಾಟ್

ರಾಮ್ಘಾಟ್

ಮೂಲತಃ ಚಪೋರಾ, ಕರ್ನಾಟಕದ ಬೆಳಗಾವಿ ನಗರಕ್ಕೆ ಹತ್ತಿರದಲ್ಲಿರುವ ಮಹಾರಾಷ್ಟ್ರದ ಹಜಗೋಲಿಯ ರಾಮ್ಘಾಟ್ ಎಂಬಲ್ಲಿ ಉಗಮಗೊಳ್ಳುವ ಈ ನದಿಯು ತಿಲಾರಿ ಘಾಟ್ ಮುಲಕ ಹರಿಯುತ್ತ ಗೋವಾದ ಪ್ರಸಿದ್ಧ ಕಡಲ ತೀರವಾದ ವಾಗಾಟೋರ್ ಎಂಬಲ್ಲಿ ಇದು ಅರಬ್ಬಿ ಸಮುದ್ರದೊಳಗೆ ಸಮಾಗಮಗೊಳ್ಳುತ್ತದೆ.

ಚಿತ್ರಕೃಪೆ: Zerohund

ಗೋವಾದ ಜೀವನಾಡಿ

ಗೋವಾದ ಜೀವನಾಡಿ

ಮಹಾರಾಷ್ಟ್ರದಲ್ಲಿ ಹುಟ್ಟುವ ನದಿ ಇದಾಗಿದ್ದರೂ ಪ್ರಸ್ತುತ ಗೋವಾದ ಅದರಲ್ಲೂ ವಿಶೇಷವಾಗಿ ಉತ್ತರ ಗೋವಾದ ಕೃಷಿ ಭೂಮಿ ಚಟುವಟಿಕೆಗಳ ಜೀವ ನಾಡಿಯಾಗಿದೆ ಚಪೋರಾ ನದಿ. ಅದಿರು ಸರಕು ಸಾಗಣೆಗಳಿಗೆ ಸಂಚಾರಿ ಮಾಧ್ಯಮವಾಗಿಯೂ ಚಪೋರಾ ನದಿ ಬಳಸಲ್ಪಡುತ್ತದೆ.

ಚಿತ್ರಕೃಪೆ: Zerohund

ದೋಣಿಮನೆ!

ದೋಣಿಮನೆ!

ಆಯ್ದ ಋತುಮಾನಗಳಲ್ಲಿ ಪ್ರವಾಸೋದ್ಯಮವನ್ನು ದೃಷ್ಟಿಯಲ್ಲಿಟ್ಟುಕೊಂಡು ದೋಣಿ ಮನೆಗಳ ವ್ಯವಸ್ಥೆಯನ್ನೂ ಸಹ ಹಲವಾರು ಪ್ರವಾಸಿ ಸಂಸ್ಥೆಗಳಿಂದ ಪ್ರವಾಸಿಗರಿಗಾಗಿ ಚಪೋರಾ ನದಿಯಲ್ಲಿ ಆಯೋಜಿಸಲ್ಪಡುತ್ತವೆ.

ಚಿತ್ರಕೃಪೆ: Zerohund

ಹೆಸರು ಅದೆ

ಹೆಸರು ಅದೆ

ಇನ್ನೂ ಚಪೋರಾ ನದಿಯು ಅರಬ್ಬಿ ಸಮುದ್ರದೊಳಗೆ ಸೇರುವಂತಹ ಸ್ಥಳದ ಹತ್ತಿರ ಅದರ ತಟದಲ್ಲಿ ನೆಲೆಸಿರುವ ಪುಟ್ಟ ಹಳ್ಳಿ ಚಪೋರಾ. ನದಿಯಿಂದಾಗಿಯೆ ಆ ಹಳ್ಳಿಗೆ ಚಪೋರಾ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Goaholidayhomes

ಮಾಪುಸಾ

ಮಾಪುಸಾ

ಚಪೋರಾ ಹಳ್ಳಿಯಲ್ಲಿ ಇನ್ನೊಂದೆಡೆ ಸುಂದರವಾದ ಕಡಲ ತೀರವಿದ್ದು ಅದನ್ನು ಚಪೋರಾ ಕಡಲ ತೀರ ಎಂದೆ ಕರೆಯಲಾಗುತ್ತದೆ. ಚಪೋರಾ ಉತ್ತರ ಗೋವಾದ ಮಾಪುಸಾ ಪಟ್ಟಣದಿಂದ ಹತ್ತು ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬಾಡಿಗೆ ಕಾರು ಹಾಗೂ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Dominik Hundhammer

ವಸತಿಗೃಹಗಳು

ವಸತಿಗೃಹಗಳು

ಉತ್ತರ ಗೋವಾದಲ್ಲೆ ಬಲು ಕಡಿಮೆ ದರಗಳಲ್ಲಿ ನೀವು ತಾತ್ಕಾಲಿಕವಾಗಿ ಪ್ರವಾಸದ ಸಂದರ್ಭದಲ್ಲಿ ತಂಗಲು ಬಯಸಿದರೆ ಚಪೋರಾಗಿಂತ ಉತ್ತಮವಾದ ತಾಣ ಮತ್ತೊಂದು ಸಿಗುವುದು ಕಷ್ಟ. ಕಡಿಮೆ ಬಾಡಿಗೆಯಲ್ಲಿ ಸಾಕಷ್ಟು ವಸತಿ ಗೃಹಗಳು ಇಲ್ಲಿ ನಿಮಗೆ ಸಿಗುತ್ತವೆ.

ಚಿತ್ರಕೃಪೆ: Dominik Hundhammer

ರೋಮಾಂಚನ ನೋಟ

ರೋಮಾಂಚನ ನೋಟ

ಇನ್ನೂ ಈ ಕಡಲ ತೀರದ ಬಳಿಯಲ್ಲೆ ಸ್ಥಿತವಿದೆ ಚಪೋರಾ ಕೋಟೆ. ಇದೊಂದು ಚಪೋರಾದ ಅದ್ಭುತ ಪ್ರವಾಸಿ ಆಕರ್ಷಣೆಯಾಗಿಯೂ ಗಮನಸೆಳೆಯುತ್ತದೆ. ಅಧಿಕೃತವಾಗಿ ಈ ಕೋಟೆಯು ಬಾರ್ಡೆಜ್ ವ್ಯಾಪ್ತಿಯಲ್ಲಿದ್ದು ಸುಂದರವಾದ ದೃಶ್ಯಾವಳಿಗಳನ್ನು ನೀಡುತ್ತದೆ.

ಚಿತ್ರಕೃಪೆ: wikimedia

ಭಾರತಕ್ಕೆ ಬಂದಾಗ

ಭಾರತಕ್ಕೆ ಬಂದಾಗ

ಪೋರ್ಚುಗೀಸರು ಭಾರತಕ್ಕೆ ಮೊದಲ ಬಾರಿಗೆ 1510 ರಲ್ಲಿ ಬರುವುದಕ್ಕೂ ಮುಂಚೆಯೆ ಈ ಕೋಟೆ ಇಲ್ಲಿತ್ತು ಹಾಗೂ ನಂತರದಲ್ಲಿ ಅನೇಕ ಸಾಮ್ರಾಜ್ಯಗಳ ಒಡೆತನವನ್ನು ಈ ಕೋಟೆ ಕಂಡಿದೆ. ಹಾಗಾಗಿ ಐತಿಹಾಸಿಕವಾಗಿಯೂ ಸಾಕಷ್ಟು ಶ್ರೀಮಂತಿಕೆಯನ್ನು ಉಳಿಸಿಕೊಂಡಿದೆ ಚಪೋರಾ ಕೋಟೆ.

ಚಿತ್ರಕೃಪೆ: Vatsal Parekh

ಎಲ್ಲೆಡೆ ಹುಲ್ಲು ಕಲ್ಲುಗಳು

ಎಲ್ಲೆಡೆ ಹುಲ್ಲು ಕಲ್ಲುಗಳು

ಇಂದು ಚಪೋರಾ ಬೆಟ್ಟ ಕೋಟೆಯು ಕೇವಲ ಒಂದು ಪ್ರವಾಸಿ ಆಕರ್ಷಣೆಯಾಗಿ ಉಳಿದುಕೊಂಡಿದೆ. ಎತ್ತರವಾದ ಗುಡ್ಡದ ಮೇಲೆ ಕೇವಲ ಅಳಿದುಳಿದ ರಚನೆಗಳಿದ್ದು ಎಲ್ಲೆಡೆ ಹುಲ್ಲು ಹಾಗೂ ಗೋಡಂಬಿ ಗಿಡಗಳ ರಾಶಿಯನ್ನು ಕಾಣಬಹುದು.

ಚಿತ್ರಕೃಪೆ: Os Rúpias

ಅರಬ್ಬಿ ಸಮುದ್ರವೂ ಕಾಣುತ್ತದೆ

ಅರಬ್ಬಿ ಸಮುದ್ರವೂ ಕಾಣುತ್ತದೆ

ಬೆಟ್ಟ ಕೋಟೆಯಿಂದ ಸುತ್ತಲೂ ಕಂಡುಬರುವ ದೃಶ್ಯಾವಳಿಗಳು ಮಾತ್ರ ಅಮೋಘ. ಒಂದೆಡೆ ಪೆರ್ನೆಮ್, ಬಾರ್ಡೆಜ್ ನಗರಗಳ ನೋಟ ಕಂಡರೆ, ಇನ್ನೊಂದೆಡೆ ಚಪೋರಾ ನದಿಯ ನೋಟ ಮೂಕವಿಸ್ಮಿತಗೊಳಿಸುತ್ತದೆ. ಮಗದೊಂದೆಡೆ ಅರಬ್ಬಿ ಸಮುದ್ರ ಹಾಗೂ ವಾಗಾಟೋರ್‍ ಕಡಲ ತೀರದ ನೋಟಗಳು ರೋಮಾಂಚನವನ್ನುಂಟು ಮಾಡುತ್ತವೆ.

ಚಿತ್ರಕೃಪೆ: Jaakko Hakulinen

ಕೇವಲ 14 ಕಿ.ಮೀ

ಕೇವಲ 14 ಕಿ.ಮೀ

ಗೋವಾ ರಾಜಧಾನಿ ಪಣಜಿಯಿಂದ ಕೇವಲ 14 ಕಿ.ಮೀ ಗಳಷ್ಟು ದೂರವಿರುವ ಚಪೋರಾವನ್ನು ಸುಲಭವಾಗಿ ತಲುಪಬಹುದಾಗಿದೆ. ಬಾಡಿಗೆ ಕಾರುಗಳು ಲಭ್ಯ. ಅಲ್ಲದೆ ಚಪೋರಾದಲ್ಲಿ ಹಿನ್ನೀರು ಪ್ವಿಹಾರ, ದೋಣಿಮನೆ ಹಾಗೂ ಡಾಲ್ಫಿನ್ ಟ್ರಿಪ್ ಗಳಂತಹ ರೋಮಾಂಚನಕಾರಿ ಪ್ರವಾಸಿ ಚಟುವಟಿಕೆಗಳನ್ನು ಆಸ್ವಾದಿಸಬಹುದಾಗಿದೆ.

ಚಿತ್ರಕೃಪೆ: Extempore

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more